Categories
e-ದಿನ

ಜುಲೈ-25

 

ಪ್ರಮುಖ ಘಟನಾವಳಿಗಳು:

1814: ಆಂಗ್ಲ ಇಂಜಿನಿಯರ್ ಜಾರ್ಜ್ ಸ್ಟೀಫನ್ ಸನ್ ಮೊದಲ ಉಗಿ ಲೋಕೋಮೋಟಿವ್ ಪರಿಚಯಿಸಿದರು.

1837: ವಿದ್ಯುತ್ ಟೆಲಿಗ್ರಾಫನ್ನು ಮೊದಲ ವಾಣಿಜ್ಯ ಬಳಕೆಗಾಗಿ ಯಶಸ್ವಿಯಾಗಿ ಪ್ರದರ್ಶಿಸಲಾಯಿತು.

1850: ರೋಗ್ ನದಿಯಲ್ಲಿ ಚಿನ್ನವನ್ನು ಪತ್ತೆಮಾಡಲಾಯಿತು.

1854: ಕಾಗದದ ಕಾಲರಿಗೆ ವಾಲ್ಟರ್ ಹಂಟ್ ಪೇಟೆಂಟ್ ಪಡೆದರು.

1871: ಸೇತ್ ವೀಲರ್ ರಂದ್ರ ಸುತ್ತುವ ಕಾಗದಕ್ಕೆ (ಪೆರಫೋರೇಟೆಡ್ ವ್ರಾಪಿಂಗ್ ಪೇಪರ್) ಪೇಟೆಂಟ್ ಪಡೆದರು.

1908: ಚೀನಿಯರು ತಮ್ಮ ಅಡುಗೆಗಳಲ್ಲಿ ಬಳಸುವ “ಅಜಿನೋಮೋಟೋ”ವನ್ನು ಪೇಟೆಂಟ್ ಮಾಡಲಾಯಿತು.

1917: ಸರ್ ಥಾಮಸ್ ವೈಟ್ ಮೊದಲ ಬಾರಿಗೆ ಕೆನೆಡಾದಲ್ಲಿ ವಾಣಿಜ್ಯ ತೆರೆಗೆಯನ್ನು ಪರಿಚಯಿಸಿದರು.

1947: ನಾರ್ವೇ ದೇಶದ ಫಾರ್ಚುನ್ ಗೋರ್ಡಿಯನ್ ಡಿಸ್ಕಸ್ ಎಸೆತದಲ್ಲಿ 178.47 ಅಡಿ ದೂರ ಎಸೆದು ವಿಶ್ವ ದಾಖಲೆ ಮಾಡಿದರು.

1958: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಾಂಬೆಯನ್ನು ಉದ್ಘಾಟಿಸಲಾಯಿತು.

1961: 1961ರ ತಾತ್ಕಾಲಿಕ ಜನಗಣತಿಯ ಅಂಕಿ ಅಂಶಗಳ ಆಧಾರದ ಮೇಲೆ ದೆಹೆಲಿಯನ್ನು ಏ-ವರ್ಗದ ನಗರವೆಂದು ಮುಂಬಡ್ತಿ ನೀಡಲಾಯಿತು.

1978: ಇಂಗ್ಲೆಂಡಿನಲ್ಲಿ “ಇನ್-ವಿಟ್ರೋ ಫರ್ಟಿಲೈಸೇಷನ್” ಮೂಲಕ ಮೊದಲ ಬಾರಿಗೆ ಲೂಯಿಸ್ ಜಾಯ್ ಬ್ರೌನ್ ಮಗು ಟೆಸ್ಟ್ ಟ್ಯೂಬ್ ಮೂಲಕ ಜನಿಸಿತು.

1995: ಭಾರತವು ಆಹಾರಧಾನ್ಯಗಳನ್ನು 189.77 ಮಿಲಿಯನ್ ಟನ್ ಗಳಷ್ಟು ಬೆಳೆದು ದಾಖಲೆ ನಿರ್ಮಿಸಿತು.

1997: ವಿಜ್ಞಾನಿಗಳು ಸ್ಥಗಿತಗೊಳಿಸಿದ ಮಾನವ ಭ್ರೂಣಗಳಿಂದ ತೆಗೆದುಕೊಂಡ ಅಂಗಾಂಶಗಳನ್ನು ಬಳಸಿಕೊಂಡು ಪ್ರಯೋಗಾಲಯದಲ್ಲಿ ಬೆಳೆಸಿದ ಮೊದಲ ಮಾನವ ಕಾಂಡಕೋಶಗಳನ್ನು ಪ್ರಕಟಿಸಿದರು.

1997: ಭಾರತದ 10ನೇ ರಾಷ್ಟ್ರಪತಿಯಾಗಿ ಕೆ.ಆರ್.ನಾರಾಯಣನ್ ಪ್ರಮಾಣ ವಚನ ಸ್ವೀಕರಿಸಿದರು.

1997: ಮೇವು ಹಗರಣ ಪ್ರಕರಣದಲ್ಲಿ ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್ ಅವರನ್ನು ಸಿ.ಬಿ.ಐ ನ್ಯಾಯಾಲಯವು ಬಂಧಿಸಿದ ಕಾರಣ, ಲಾಲೂ ಅವರ ಪತ್ನಿ ರಾಬ್ರಿ ದೇವಿಯವರನ್ನು ಮುಖ್ಯಮಂತ್ರಿಯಾಗಿ ಮಾಡಲಾಯಿತು. ಇವರು ಬಿಹಾರದ ಮೊದಲ ಮಹಿಳಾ ಮುಖ್ಯಮಂತ್ರಿಯಾದರು.

2000: ಭಾರತೀಯ ಕ್ರೀಡಾ ಪಟು ಪಿ.ಟಿ.ಉಷಾ ಅವರು ಅಂತರರಾಷ್ಟ್ರೀಯ ಕ್ರೀಡಾಸ್ಪರ್ಧೆಯಿಂದ ನಿವೃತ್ತಿ ಘೋಷಿಸಿದರು.

2000: ರಾಜಸ್ಥಾನದ ಅರುಣಾ ರಾಯ್ ಮತ್ತು ಭಾರತ ರಾಷ್ಟ್ರೀಯ ಸ್ಲಂ ಡ್ವೆಲ್ಲರ್ಸ್ ಅಸೋಸಿಯೇಷನ್ ಸಂಸ್ಥಾಪಕರಾದ ಜಾಕಿನ್ ಅರ್ಪುತಮ್ ಅವರನ್ನು ಸಾರ್ವಜನಿಕ ಸೇವೆಗಾಗಿ ರೇಮನ್ ಮೆಗಾಸೆಸೆ ಪ್ರಶಸ್ತಿಗಾಗಿ ಆಯ್ಕೆಯಾದ ಭಾರತೀಯರು.

2007: ಭಾರತದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಶ್ರೀಮತಿ ಪ್ರತಿಭಾ ಪಾಟಿಲ್ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮುಖ ಜನನ/ಮರಣ:

1875: ಭಾರತೀಯ ಬೇಟೆಗಾರ, ಪರಿಸರವಾದಿ ಮತ್ತು ಲೇಖಕ ಜಿಮ್ ಕಾರ್ಬೆಟ್ ಜನಿಸಿದರು,

1929: ಲೋಕಸಭೆಯ 14ನೇ ಸ್ಪೀಕರ್ ಸೋಮನಾಥ್ ಚಟರ್ಜಿ ಜನಿಸಿದರು.

1938: ಖ್ಯಾತ ಹಿಂದಿ ಕವಿ ಗೌತಮ್ ಕಾಳಿಚರಣ್ ಜನಿಸಿದರು.

1991: ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಕೇಂದ್ರ ಸಚಿವರಾಗಿದ್ದ ಡಾ.ವಿ.ಕೆ.ಆರ್.ವಿ.ರಾವ್ ನಿಧನರಾದರು.

2012: ಭಾರತೀಯ ಚಿತ್ರ ನಿರ್ದೇಶಕ ಮತ್ತು ಚಿತ್ರಕಥೆ ರಚನೆಕಾರ ಬಿ.ಆರ್.ಇಶಾರಾ ನಿಧನರಾದರು.