Categories
e-ದಿನ

ಜುಲೈ-26

 

ಪ್ರಮುಖ ಘಟನಾವಳಿಗಳು:

1499: ಸ್ಪೇನಿನ ಆಲೋನ್ಸೊ ಡಿ ಒಜೆಡಾ ಕುರಾಕಾವ್ ದ್ವೀಪವನ್ನು ಕಂಡುಹಿಡಿದರು.

1775: ಅಮೇರಿಕಾ ಸಂಯುಕ್ತ ಸಂಸ್ಥಾನದ 2ನೇ ಕಾಂಟಿನೆಂಟಲ್ ಕಾಂಗ್ರೆಸ್ಸಿನಿಂದ ಅಂಚೆ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು.

1826: ಲುಧಿಯಾನ ಕೋಮುಗಲಭೆಯಲ್ಲಿ ಅನೇಕ ಯಹೂದಿಗಳು ಮೃತಪಟ್ಟರು.

1835: ಹವಾಯಿಯಲ್ಲಿ ಮೊದಲ ಕಬ್ಬಿನ ತೋಪು ಆರಂಭವಾಯಿತು.

1847: ಮೊಸೆಸ್ ಗಾರಿಶ್ ಫಾರ್ಮರ್ ಮಕ್ಕಳು ಸವಾರಿ ಮಾಡಲು ಮೊದಲ ಚಿಕಣಿ ರೈಲು ನಿರ್ಮಿಸಿದರು.

1887: ಮೊದಲ ಎಸ್ಪರಾಂಟೋ ಪುಸ್ತಕ ಪ್ರಕಟಿಸಲಾಯಿತು.

1893: ವಿಳಾಸ ಚಿತ್ರಣದ ವಾಣಿಜ್ಯ ಉತ್ಪಾದನೆ ಚಿಕಾಗೋದಲ್ಲಿ ಪ್ರಾರಂಭವಾಯಿತು.

1945: ವಿನ್ಟ್ಸನ್ ಚರ್ಚಿಲ್ ಬ್ರಿಟನ್ನಿನ ಅಧ್ಯಕ್ಷ ಸ್ಥಾನದಿಂದ ರಾಜಿನಾಮೆ ನೀಡಿದರು.

1945: ನಾಗಸಾಕಿಯ ಮೇಲೆ ಪರಮಾಣು ಬಾಂಬ್ ದಾಳಿ ನಡೆಯಿತು.

1953: ಆರಿಜೋನಾ ಗವರ್ನರ್ ಜಾನ್ ಹಾವರ್ಡ್ ಪೈಲ್ ಬಹುಪತ್ನಿತ್ವದ ವಿರುದ್ಧ ಕಾನೂನನ್ನು ಆದೇಶಿಸಿದರು.

1956: ಈಜಿಪ್ಟ್ ಸ್ಯೂಯೆಜ್ ಕಾಲುವೆಯನ್ನು ವಶಪಡಿಸಿಕೊಂಡಿತು.

1965: ಬ್ರಿಟಿಶರಿಂದ ಮಾಲ್ಡೀವ್ಸ್ ಸ್ವತಂತ್ರ ಪಡೆಯಿತು.

1974: ಮುರೋರ ದ್ವೀಪದ ಬಳಿ ಫ್ರಾನ್ಸ್ ಪರಮಾಣು ಪರೀಕ್ಷೆ ನಡೆಸಿತು.

1975: ಸರ್ಕಾರದ ವಿರುದ್ದ ಪ್ರದರ್ಶನಗಳನ್ನು ನಿಷೇಧಿಸುವ ತುರ್ತು ಕಾನೂನುಗಳನ್ನು ನಿರಾಕರಿಸಲು ಗುಜರಾತಿನಲ್ಲಿ ಪ್ರತಿಭಟನೆಗಳು ನಡೆಯಿತು.

1983: ಗುರು ಗ್ರಹದ ಚಂದ್ರನ ಮೇಲೆ ಬೆಳಕಿನ ಹೊಳಪು ಗೋಚರಿಸಿತು.

1991: ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕಾವೇರಿ ನದಿಯ ಗಲಾಟೆಯ ಕಾರಣ ಎರಡು ರಾಜ್ಯಗಳಲ್ಲಿ ಬಂದ್ ಆಚರಿಸಲಾಯಿತು.

1999: ಭಾರತ ಮತ್ತು ಪಾಕಿಸ್ಥಾನದ ನಡುವೆ ನಡೆದ ಕಾರ್ಗಿಲ್ ಯುದ್ಧ ಅಂತ್ಯಗೊಂಡಿತು.

2000: ಕೇಂದ್ರ ಸರ್ಕಾರವು 14 ವರ್ಷಕ್ಕೆ ಕೆಳಪಟ್ಟ ಮಕ್ಕಳನ್ನು ಕೆಲಸಕ್ಕೆ ತೆಗೆದುಕೊಳ್ಳದಂತೆ ನಿಷೇಧ ಮಾಡಲಾಯಿತು.

2005: ಭಾರತದ ಮುಂಬೈಯಲ್ಲಿ 24 ಗಂಟೆಯೊಳಗೆ 99.5 ಸೆ.ಮಿ. ಮಳೆಯಿಂದಾಗಿ ಪ್ರವಾಹ ಉಂಟಾಗಿ 5000 ಜನ ಮೃತರಾದರು.

2008: ಭಾರತದ ಅಹಮದಾಬಾದಿನಲ್ಲಿ 21 ಸರಣಿ ಬಾಂಬುಗಳು ಸ್ಫೋಟವಾಗಿ 56 ಜನ ಮೃತ ಪಟ್ಟು 200ಕ್ಕು ಹೆಚ್ಚು ಜನ ಗಾಯಗೊಂಡರು.

ಪ್ರಮುಖ ಜನನ/ಮರಣ:

1844: ಭಾರತದ ಮುಖ್ಯ ಶಿಕ್ಷಣ ತಜ್ಞ ಗುರುದಾಸ್ ಬ್ಯಾನರ್ಜಿ ಜನಿಸಿದರು.

1865: ಭಾರತೀಯ ಕವಿ ಮತ್ತು ಸಂಶೋಧಕ ರಜನಿಕಾಂತ ಸೆನ್ ಜನಿಸಿದರು.

1874: ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ ಮತ್ತು ಸಾಮಾಜಿಕ ಸುಧಾರಕ ರಾಜರ್ಷಿಷಾಹು ಛತ್ರಪತಿ ಜನಿಸಿದರು.

1891: ಪ್ರಸಿದ್ಧ ಬಂಗಾಲಿ ಪುರಾತನ ಸಂಶೋಧಕ ರಾಜೇಂದ್ರ ಲಾಲ್ ಮಿತ್ರ ನಿಧನರಾದರು.

1922: ಪ್ರಸಿದ್ಧ ಪತ್ರಕರ್ತ ಮತ್ತು ಸಂಪಾದಕ ಗಿರಿಲಾಲ್ ಜೈನ್ ಜನಿಸಿದರು.

1923: ಪ್ರಖ್ಯಾತ ಹಿನ್ನೆಲೆ ಗಾಯಕ ಮುಕೇಶ್ ಚಂದ್ರ ಮಾಥುರ್ ಜನಿಸಿದರು.

1927: ಭಾರತೀಯ ಕ್ರಿಕೆಟಿಗರಾದ ಗುಲಾಬ್ರೈ ರಾಮಚಂದ್ರ ಜನಿಸಿದರು.