Categories
e-ದಿನ

ಜುಲೈ-28

 

ಪ್ರಮುಖ ಘಟನಾವಳಿಗಳು:

1586: ಸರ್ ಥಾಮಸ್ ಹ್ಯಾರಿಯಟ್ ಮೊದಲ ಬಾರಿಗೆ ಆಲೂಗಡ್ಡೆಯನ್ನು ಯೂರೋಪಿನಲ್ಲಿ ಪರಿಚಯಿಸಿದರು.

1821: ಪೆರು ಸ್ಪೇನ್ ದೇಶದಿಂದ ಸ್ವಾತಂತ್ರ ಪಡೆಯಿತು.

1851: ಮೊದಲ ಬಾರಿಗೆ ಡಾಗೇರಿಯೋ ವಿಧದ ಛಾಯಾಚಿತ್ರದಲ್ಲಿ ಸಂಪೂರ್ಣ ಸೂರ್ಯಗ್ರಹಣವನ್ನು ಸೆರೆಹಿಡಿಯಲಾಯಿತು.

1858: ಗುರುತಿನ ಸಾಧನವಾಗಿ ಬೆರಳುಗುರುತುಗಳ ಮೊದಲ ಬಳಕೆಯನ್ನು ಸರ್ ವಿಲಿಯಂ ಜೇಮ್ಸ್ ಮಾಡಿದರು.

1858: ನಡಾರ್ ಮೊದಲ ವಾಯುಗಾಮಿ ಛಾಯಾಚಿತ್ರವನ್ನು ಬಲೂನಿನ ಮೂಲಕ ಸೆರೆಹಿಡಿದರು.

1865: ಅಮೇರಿಕನ್ ಡೆಂಟಲ್ ಅಸೋಸಿಯೇಷನ್ ತನ್ನ ಮೊದಲ ನೀತಿ ಸಂಕೇತವನ್ನು ಪ್ರಸ್ಥಾಪಿಸಿತು.

1866: ಅಮೇರಿಕ ಸಂಯುಕ್ತ ಸಂಸ್ಥಾನದುದ್ದಕ್ಕು ತೂಕ ಮತ್ತು ಮಾನದಂಡಗಳ ಪ್ರಮಾಣಿಕರಣಕ್ಕಾಗಿ ಮೆಟ್ರಿಕ್ ವ್ಯವಸ್ಥೆಯನ್ನು ಅಮೇರಿಕಾದ ಕಾಂಗ್ರೆಸ್ ಕಾನೂನುಬದ್ಧಗೊಳಿಸಿತು.

1900: ಲೂಯಿಸ್ ಲಾಸಿಂಗ್ “ಹ್ಯಾಂಬರ್ಗರ್” ತಿನಿಸನ್ನು ಸೃಷ್ಟಿಸಿದರು.

1914: ಆಸ್ಟ್ರಿಯ ಮತ್ತು ಹಂಗೇರಿ ಸೇರಿ ಸರ್ಬಿಯಾದ ಮೇಲೆ ದಾಳಿ ಮಾಡಿದಾಗ ಮೊದಲ ವಿಶ್ವ ಯುದ್ಧ ಆರಂಭವಾಯಿತು.

1921: ಅಸಹಕಾರ ಚಳುವಳಿಯ ಭಾಗವಾಗಿ ನವೆಂಬರಿನಲ್ಲಿ ವೇಲ್ಸ್ ಮಹಾರಾಜ ಮುಂಬರುವ ಭೇಟಿಯನ್ನು ಬಹಿಷ್ಕರಿಸಲು ಕಾಂಗ್ರೆಸ್ ನಿರ್ಧರಿಸಿತು.

1933: ಮೊದಲ ಹಾಡುವ ಟೆಲಿಗ್ರಾಮ್ ಅನ್ನು ರವಾನಿಸಲಾಯಿತು.

1942: ಎಲ್.ಎ.ಥ್ಯಾಚರ್ ನಾಣ್ಯ-ಚಾಲಿತ ಅಂಚೆಡಬ್ಬಕ್ಕಾಗಿ ಪೇಟೆಂಟ್ ಪಡೆದರು. ಹಣವನ್ನು ಹಾಕಿದರೆ ಲಕೋಟೆಯನ್ನು ಮುದ್ರಿಸಿ ಒದಗಿಸುವ ಸಾಧನತ್ತಿತ್ತು.

1945: ಭಾರೀ ಮಂಜಿನ ಕಾರಣದಿಂದಾಗಿ ವಿಮಾನವೊಂದು ದಿಕ್ಕು ಕಾಣದೆ ಎಂಪಯರ್ ಸ್ಟೇಟ್ ಬಿಲ್ಡಿಂಗಿನ 79ನೇ ಮಹಡಿಗೆ ಅಪ್ಪಳಿಸಿ 14 ಮಂದಿ ಮೃತರಾದರು.

1951: ವಾಲ್ಟ್ ಡಿಸ್ನಿಯ ಚಿತ್ರ “ಆಲಿಸ್ ಇನ್ ವಂಡರ್ ಲ್ಯಾಂಡ್” ಬಿಡುಗಡೆಯಾಯಿತು.

1959: ಬ್ರಿಟನ್ ಅಂಚೆ ಸಂಕೇತಗಳನ್ನು ಉಪಯೋಗಿಸಲು ಆರಂಭಿಸಿತು.

1972: ಗಡಿ ವಿವಾದವನ್ನು ಬಗೆಹರಿಸುವ ಸಲುವಾಗಿ ಭಾರತ ಮತ್ತು ಪಾಕಿಸ್ಥಾನ ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿತು.

1988: ಹಳೆಯ ಮಾದರಿಯ ಕಂಪ್ಯೂಟರ್ ಗಳ ಮೇಲೆ ಐ.ಬಿ.ಎಂ. ಬೆಲೆ ಏರಿಕೆ ಘೋಷಿಸಿತು.

1997: ನವದೆಹಲಿಗೆ ಹೋಗುತ್ತಿದ್ದ ಕರ್ನಾಟಕ ಎಕ್ಸ್ ಪ್ರೆಸ್ ರೈಲು ಹಿಮಸಾಗರ್ ಎಕ್ಸ್ ಪ್ರೆಸ್ ರೈಲಿಗೆ ಗುದ್ದಿದ ಕಾರಣ 12 ಮಂದಿ ಮೃತರಾಗಿ 69 ಮಂದಿ ಗಾಯಗೊಂಡರು.

2006: ಜುರಾಸಿಕ್ ಯುಗದ ಹರಿದಾಡುವ ಪ್ರಾಣಿ ಜಾತಿಯ ಎರಡು ಹಲ್ಲಿಯ ರೀತಿಯ ಪ್ರಾಣಿಗಳನ್ನು ಆಸ್ಟ್ರೇಲಿಯಾದಲ್ಲಿ ಪತ್ತೆಮಾಡಲಾಗಿದೆ ಎಂದು ಸಂಶೋಧಕರು ಘೋಷಿಸಿದರು.

2016: ಕ್ಯಾನ್ಸರಿನ ಆರಂಭಿಕ ಪುರಾವೆಗಳು 1.7 ಮಿಲಿಯನ್ ವರ್ಷ ವಯಸ್ಸಿನ ಕಾಲುಗಳ ಪಳೆಯುಳಿಕೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಯಿತು.

ಪ್ರಮುಖ ಜನನ/ಮರಣ:

1872: ಫ್ರೆಂಚ್ ಗವರ್ನರ್ ಜೆನರಲ್ ಆಫ್ ಇಂಡೋ-ಚೈನಾ ಆಗಿದ್ದ ಆಲ್ಬರ್ಟ್ ಪಿ ಸರಾವುಟ್ ಜನಿಸಿದರು.

1909: ರಾಜಕಾರಣಿ ಬ್ರಹ್ಮಾನಂದ ರೆಡ್ಡಿ ಮದರಾಸಿನಲ್ಲಿ ಜನಿಸಿದರು.

1912: ಖ್ಯಾತ ನರ ಶಸ್ತ್ರಚಿಕಿತ್ಸಕ ರಾಮಚಂದ್ರ ಗುಂಡೋ ಗಿಂಡೆ ಜನಿಸಿದರು.

1939: 1928ರಲ್ಲಿ ಅಸ್ಸಾಂ ಛತ್ರಾ ಸಮ್ಮೇಳನದ ಅಧ್ಯಕ್ಷರಾಗಿದ್ದ ತರುಣ್ ರಾಮ್ ಫೂಕನ್ ನಿಧನರಾದರು.

1946: ಸಮಾಜ ಸೇವಕಿ ಮತ್ತು ಶಿಕ್ಷಕಿ ಸಿಸ್ಟರ್ ಆಲ್ಫೋನ್ಸಾ ನಿಧನರಾದರು.