Categories
e-ದಿನ

ಜೂನ್-10

 

ಪ್ರಮುಖ ಘಟನೆಗಳು:

1652: ಅಮೇರಿಕಾದ ಬಾಸ್ಟನಲ್ಲಿ ಜಾನ್ ಹಲ್ ಮೊದಲ ನಾಣ್ಯ ಟಂಕಿಸುವ ಮುದ್ರಣಾಲಯ ತೆರೆದರು.

1720: ಇಂಗ್ಲೆಂಡಿನ ಶ್ರೀಮತಿ ಕ್ಲೆಮೆಂಟ್ಸ್  ಮೊದಲ ಪೇಸ್ಟ್ ಶೈಲಿಯ ಟೂತ್ ಪೇಸ್ಟ್ ಅನ್ನು ಮಾರುಕಟ್ಟೆಗೆ ತಂದರು.

1760: ಮಾದಕ ದ್ರವ್ಯ ಬಳಕೆ ನಿಯಂತ್ರಣಕ್ಕೆ ಪರಿಣಾಮಕಾರಿ ಕಾನೂನನ್ನು ನ್ಯೂಯಾರ್ಕಿನಲ್ಲಿ ಅಂಗೀಕರಿಸಲಾಯಿತು.

1776: ಕಾನ್ಟಿನೆಂಟಲ್ ಕಾಂಗ್ರೆಸ್ ಸ್ವಾತಂತ್ರ್ಯದ ಘೋಷಣೆಯನ್ನು ಬರೆಯಲು ಒಂದು ಸಮಿತಿಯನ್ನು ರೂಪಿಸಿತು.

1793: ಮೊದಲ ಸಾರ್ವಜನಿಕ ಪ್ರಾಣಿ ಸಂಗ್ರಹಾಲಯ ಪ್ಯಾರಿಸ್ ನಲ್ಲಿ ತೆರೆಯಿತು.

1809: ಅಮೇರಿಕಾದ ಮೊದಲ ಉಗಿ ದೋಣಿ ಸಮುದ್ರಯಾನ ಮಾಡಲು ನ್ಯೂಯಾರ್ಕಿನಿಂದ ಹೊರಟಿತು.

1829: ಮೊದಲ ಆಕ್ಸ್ ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ನಡುವೆ ದೋಣಿ ಓಟದ ಪಂದ್ಯ ನಡೆಯಿತು.

1846: ರಾಬರ್ಟ್ ಥಾಂಸನ್ ರಬ್ಬರ್ ಟೈಯರ್ ಮೇಲೆ ಇಂಗ್ಲೀಷ್ ಪೇಟೆಂಟ್ ಪಡೆದರು.

1848: ಮೊದಲ ಟೆಲಿಗ್ರಾಫ್ ಲಿಂಕನ್ನು ನ್ಯೂಯಾರ್ಕ್ ಸಿಟಿ ಮತ್ತು ಶಿಕಾಗೋ ನಡುವೆ ತೆರೆಯಲಾಯಿತು.

1854: ಜಾರ್ಜ್ ಎಫ್ ಬಿ ರೈಮನ್ ಬಾಹ್ಯಾಕಾಶ ಡೊಂಕಾಗಿದೆ ಎಂದು ಪ್ರಸ್ತಾಪಿಸಿದರು.

1854: ಯುನೈಟೆಡದ ಸ್ಟೇಟ್ಸಿನ ನೌಕಾ ಅಕಾಡೆಮಿಯ ಮೊದಲ ಗುಂಪಿನ ವಿಧ್ಯಾರ್ಥಿಗಳು ಪದವಿ ಹೊಂದಿದರು.

1857: ಕೆನೆಡಾದ ಕರೆನ್ಸಿಯನ್ನು ದಶಮಾಂಶ ಕರೆನ್ಸಿ ವ್ಯವಸ್ಥೆಯಲ್ಲಿ ಹಾಕುವ ಕ್ರಿಯೆಯನ್ನು ಬ್ರಿಟನ್ ಅಂಗೀಕರಿಸಿತು.

1908: ಮೊದಲ ಹಾರುವ ಕ್ಲಬ್ಬನ್ನು ಏರೋನಾಟಿಕಲ್ ಸೊಸೈಟಿ ಆಫ್ ನ್ಯೂಯಾರ್ಕಿನಲ್ಲಿ ತೆರೆಯಲಾಯಿತು.

1909: ತೊಂದರೆಗೀಡಾದಾಗ ಬಳಸುವ ಎಸ್.ಓ.ಎಸ್ ಸಂಕೇತವನ್ನು ಮೊದಲ ಬಾರಿಗೆ ಬಳಸಲಾಯಿತು.

1925: ಟೆನ್ನೆಸ್ಸೀಯ ರಾಜ್ಯ ವಿಕಾಸನ ಸಿದ್ಧಾಂತವನ್ನು ನಿರಾಕರಿಸಿದ ಹೊಸ ಜೀವವಿಜ್ಞಾನದ ಪಠ್ಯ ಪುಸ್ತಕವನ್ನು ಅಳವಡಿಸಿಕೊಂಡಿತು.

1932: ಕೃತಕ ಮಿಂಚಿನ ಮೊದಲ ಪ್ರದರ್ಶನ ಪಿಟ್ಸ್ ಫೀಲ್ಡ್ ಮಾಸಿನಲ್ಲಿ ನಡೆಯಿತು.

1939: ಎಂ.ಜಿ.ಎಂ ಕಾರ್ಟೂನಿನ ಬಾರ್ನೀ ಕರಡಿ ಮೊದಲ ಬಾರಿಗೆ ಪ್ರಸಾರ ಕಂಡಿತು.

1947: ಸಾಬ್ ತನ್ನ ಮೊದಲ ವಾಹನವನ್ನು ಉತ್ಪಾದಿಸಿತು.

1952: ಅಮೇರಿಕ ಅಧ್ಯಕ್ಷ ಹ್ಯಾರಿ ಟ್ರೂಮನ್ ಉಕ್ಕಿನ ಉದ್ಯಮವನ್ನು ರಾಷ್ಟ್ರೀಕರಿಸುವ ಬಯಕೆಯನ್ನು ವ್ಯಕ್ತಪಡಿಸಿದರು.

1955: ಮೊದಲ ಬಾರಿಗೆ ವೈರಸನ್ನು ಅಂಶಗಳ ಭಾಗವಾಗಿ ಭಾಗಮಾಡಿದ ವರದಿ ಮಾಡಲಾಯಿತು.

1963: ಅಮೇರಿಕ ಸಮಾನ ವೇತನ ಆಕ್ಟ್ ಅನ್ನು ಸಹಿ ಮಾಡಿ ಕಾನೂನಾಗಿ ತಂದವರು ಅಧ್ಯಕ್ಷ ಜಾನ್ ಎಫ್ ಕೆನ್ನೆಡಿ.

1973: ನಾಸಾ ರೇಡಿಯೋ ಆಸ್ಟ್ರಾನಮಿ ಎಕ್ಸ್ಪ್ಲೋರರ್ 49ಅನ್ನು ಚಂದ್ರನ ಕಕ್ಷೆಗೆ ಹಾರಿಸಿತು.

1977: ಆಪಲ್ ಸಂಸ್ಥೆ ತನ್ನ ಮೊದಲ ಆಪಲ್ ಕಂಪ್ಯೂಟರ್ II ಅನ್ನು ರವಾನಿಸಿತು.

1985: ಕೋಕ ಕೋಲಾ ಸಂಸ್ಥೆಯು ತನ್ನ 99 ವರ್ಷಗಳ ಹಳೆ ಸೂತ್ರವನ್ನು ಮತ್ತೆ ತರುವುದಾಗಿ ಘೋಷಿಸಿತು.

1992: ಉಪಗ್ರಹ ಇಂಟೆಲ್ ಕೆ-ಸಾಟ್ ಅನ್ನು ಹಾರಿಸಲಾಯಿತು.

ಪ್ರಮುಖ ಜನನ/ಮರಣ:

1735: ಅಮೇರಿಕದ ಕಾಂಟಿನೆಂಟಲ್ ಸೈನ್ಯದ ವೈದ್ಯ ಮುಖ್ಯಸ್ಥ ಜಾನ್ ಮೊರ್ಗನ್ ಜನಿಸಿದರು.

1832: ನಿಕೌಲಾಸ್ ಒಟ್ಟೊ ನಾಲ್ಕು ಸ್ಟ್ರೋಕ್ ಚಕ್ರವನ್ನು ಬಳಸಿದ ಮೊದಲ ಆಂತರಿಕ-ದಹನಕಾರಿ ಇಂಜಿನನ್ನು ರಚಿಸಿದ ವಿಜ್ಞಾನಿ ಜನಿಸಿದರು.

1929: ಸಾಮಾಜಿಕ ನಡವಳಿಕೆಯ ಆನುವಂಶಿಕ ಆಧಾರದ ಮೇಲೆ ಸಂಶೋಧನೆ ಮಾಡಿದ ಎಡ್ವರ್ಟ್ ಓ ವಿಲ್ಸನ್ ಜನಿಸಿದರು.

1955: ಭಾರತದ ಬ್ಯಾಡ್ಮಿಂಟನ್ ಕ್ರೀಡಾಪಟು ಪ್ರಕಾಶ್ ಪಡುಕೋಣೆ ಜನಿಸಿದರು.