Categories
e-ದಿನ

ಜೂನ್-18

ಪ್ರಮುಖ ಘಟನಾವಳಿಗಳು:

1583: ಲಂಡನ್ನಿನ ರಿಚರ್ಡ್ ಮಾರ್ಟಿನ್ ಅವರು ವಿಲಿಯಂ ಗಿಬ್ಬನ್ಸ್ ಅವರ ಮೊದಲ ಜೀವವಿಮೆ ಪಾಲಿಸಿಯನ್ನು ಪಡೆದರು.

1658: ಔರಂಗಜೇಬ್ ಆಗ್ರಾ ಕೋಟೆಯನ್ನು ಮುತ್ತಿಗೆ ಹಾಕಿದರು.

1837: ಸ್ಪೇನ್ ನೂತನ ಸಂವಿಧಾನವನ್ನು ಅಂಗೀಕರಿಸಿತು.

1872: ಮಹಿಳಾ ಮತದಾನದ ಹಕ್ಕಿನ ಸಮಾವೇಶವನ್ನು ಮರ್ಕಂಟೈಲ್ ಲಿಬರ್ಟಿ ಹಾಲಿನಲ್ಲಿ ನಡೆಯಿತು.

1879: ಡಬ್ಲ್ಯೂ.ಹೆಚ್.ರಿಚರ್ಡ್ಸನ್ ಮಕ್ಕಳನ್ನು ಕೊಂಡೊಯ್ಯುವ ಸವಾರಿಬಂಡಿಗೆ ಪೇಟೆಂಟ್ ಪಡೆದರು.

1892: ಮೆಕಡಾಮಿಯ ಬೀಜಗಳನ್ನು ಮೊದಲದಾಗಿ ಹವಾಯಿನಲ್ಲಿ ನೆಡಲಾಯಿತು.

1909: ನ್ಯಾನಿ ಬರೋಸ್ ರಾಷ್ಟ್ರೀಯ ಮಹಿಳಾ ತರಬೇತಿ ಶಾಲೆಯನ್ನು ರೂಪಿಸಿದರು.

1934: ಅಮೇರಿಕಾದ ರಾಷ್ಟ್ರವ್ಯಾಪಿ ಹೆದ್ದಾರಿ ಯೋಜನಾ ಸಮೀಕ್ಷೆಗಳಿಗೆ ಅಧಿಕಾರ ನೀಡಲಾಯಿತು.

1940: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು “ಫಾರ್ವರ್ಡ್ ಬ್ಲಾಕ್” ಅನ್ನು ಸ್ಥಾಪಿಸಿದರು.

1942: ಫ್ರಾನ್ಸಿನ ಎರಿಕ್ ನೆಸ್ಲರ್ ಜಾರುಗದಲ್ಲಿ ಮೇಲ್ಕುಖವಾಗಿ ಸತತ 38ಗಂಟೆ 21 ನಿಮಿಷಗಳ ಕಾಲ ನಿಂತಿದ್ದರು.

1946: ಪೋರ್ಚುಗೀಸ್ ವಸಾಹತಿಗಳ ಆಳ್ವಿಕೆಯಿಂದ ಗೋವಾವನ್ನು ಮುಕ್ತಗೊಳಿಸಲು ಮೊದಲ ಸತ್ಯಾಗ್ರಹ ಚಳುವಳಿ ಆದ ಗೋವಾ ವಿಮೋಚನಾ ಚಳುವಳಿ ಆರಂಭವಾಯಿತು.

1948: ಅಮೇರಿಕನ್ ಲೈಬ್ರರಿ ಅಸೋಸಿಯೇಷನ್ ಗ್ರಂಥಾಲಯ ಹಕ್ಕುಗಳ ಮಸೂದೆಯನ್ನು ಅಳವಡಿಸಿತು.

1948: ರಾಷ್ಟ್ರೀಯ ಭದ್ರತಾ ಮಂಡಳಿಯು ಮೊದಲ ಬಾರಿಗೆ ಗುಪ್ತ ಕಾರ್ಯಾಚರಣೆಗಳಿಗೆ ಅನುಮೋದನೆ ನೀಡಿತು.

1948: ಮಾನವ ಹಕ್ಕುಗಳ ಕುರಿತಾದ ವಿಶ್ವಸಂಸ್ಥೆಯ ಆಯೋಗ ಮಾನವ ಹಕ್ಕುಗಳ ಅಂತರಾಷ್ಟ್ರೀಯ ಘೋಷಣೆಯನ್ನು ಅಂಗೀಕರಿಸಿತು.

1956: ಭಾರತದ ಸಂಸತ್ತಿನ ಹಿಂದೂ ಉತ್ತರಾಧಿಕಾರ ಕಾಯಿದೆ ಅಂಗೀಕರಿಸಲ್ಪಟ್ಟಿತು. ಈ ಕಾನೂನು ಏಕರೂಪದ ಅನುವಂಶಿಕ ವ್ಯವಸ್ಥೆಯ ಬಗ್ಗೆ ಇತ್ತು.

1959: ಇಂಗ್ಲೆಂಡಿನಿಂದ ಅಮೇರಿಕಾಗೆ ಪ್ರಸಾರವಾದ ಮೊದಲ ಪ್ರಸಾರ.

1968: ಸರ್ವೋಚ್ಚ ನ್ಯಾಯಾಲಯವು ವಸತಿ ಮಾರಾಟ ಮತ್ತು ಬಾಡಿಗೆಗೆ ಜನಾಂಗೀಯ ತಾರತಮ್ಯವನ್ನು ನಿಷೇಧಿಸಿತು.

1978: ಚೀನಾ ಮತ್ತು ಪಾಕಿಸ್ತಾನವನ್ನು ಸಂಪರ್ಕಿಸುವ 1300 ಕಿಲೋ ಮೀಟರಿನ ಕಾರಾಕೋರಂ ಹೆದ್ದಾರಿಯನ್ನು ತೆರೆಯಲಾಯಿತು.

1991: ಲೋಕಸಭೆಯಲ್ಲಿ ಕಾಂಗ್ರಸ್ ಪಕ್ಷವು ಸ್ಪಷ್ಟ ಬಹುಮತವಿಲ್ಲದಿದ್ದರು ಹೆಚ್ಚಿನ ಸ್ಥಾನ ಪಡೆದ ಅತಿ ದೊಡ್ಡ ಪಕ್ಷವೆನಿಸಿತು.

1997: ಇಂಡಿಯನ್ ಬ್ಯಾಟ್ಮಿಂಟನ್ ಕಾನ್ಫಿಡರೇಷನನ್ನು (IBC) ಪ್ರಕಾಶ್ ಪಡುಕೋಣೆ ಪ್ರಾರಂಭಿಸಿದರು.

ಪ್ರಮುಖ ಜನನ/ಮರಣ:

1928: ದಕ್ಷಿಣ ಧ್ರುವಕ್ಕೆ ಮೊದಲ ದಂಡಯಾತ್ರೆಯನ್ನು ನಡೆಸಿದ ಧ್ರುವ ಪರಿಶೋಧಕ ರೊವಾಲ್ಡ್ ಅಮುಂಡ್ಸೆನ್ ನಿಧನರಾದರು.

2005: ಮಾಜಿ ಭಾರತೀಯ ಕ್ರಿಕೆಟಿಗ ಮತ್ತು ಟೆಸ್ಟ್ ಆಟಗಾರ ಮುಶ್ತಾಖ್ ಅಲಿ ಅವರು ನಿಧನರಾದರು.