Categories
e-ದಿನ

ಜೂನ್-20

 

ಪ್ರಮುಖ ಘಟನಾವಳಿಗಳು:

1214: ಆಕ್ಸಫರ್ಡ್ ವಿಶ್ವವಿದ್ಯಾಲಯವು ತನ್ನ ಮಾನ್ಯತಾ ಸನ್ನದನ್ನು (ಹಕ್ಕುಪತ್ರವನ್ನು) ಪಡೆಯಿತು.

1756: ಸುಮಾರು 146 ಬ್ರಿಟಿಶ್ ಯೋಧರನ್ನು ಬಂಗಾಳದ ನವಾಬರ ಸೈನಿಕರು ವಶಪಡಿಸಿಕೊಂಡು ಅವರನ್ನು ಒಂದು ಸಣ್ಣ ಕತ್ತಲೆ ಕೋಣೆಯಲ್ಲಿ ಬಂಧಿಸಿದರು. ಶಾಖದ ಬಳಲಿಕೆಯಿಂದ ಉಸಿರುಗಟ್ಟಿ ಅವರೆಲ್ಲರು ಮರಣ ಹೊಂದಿದರು.

1782: ಅಮೇರಿಕಾದ ಕಾಂಗ್ರೆಸ್ ಅಮೇರಿಕ ಸಂಯುಕ್ತ ಸಂಸ್ಥಾನದ ಗ್ರೇಟ್ ಸೀಲ್ ಅನ್ನು ಅನುಮೋದಿಸಿ, ಬೋಳು ಹದ್ದನ್ನು ಸಂಕೇತವಾಗಿಟ್ಟುಕೊಂಡಿತು.

1793: ಎಲಿ ವೈಟ್ನಿ ಕಾಟನ್ ಜಿನ್ನಿಗೆ ಪೇಟೆಂಟ್ ಪಡೆಯಲು ಅರ್ಜಿ ಹಾಕಿದರು. ಕಾಟನ್ ಜಿನ್ ಅಮೇರಿಕಾದ ಸಾಮೂಹಿಕ ಉತ್ಪಾದನೆಯ ಪರಿಕಲ್ಪನೆಯನ್ನು ಆರಂಭಿಸಿತು.

1819: 320 ಟನ್ ತೂಕದ “ಸವನ್ನಾ” ಉಗಿ ಹಡಗು ಅಟ್ಲಾಂಟಿಕ್ ಸಮುದ್ರವನ್ನು ದಾಟಿದ ಮೊದಲ ಉಗಿ ಹಡಗು ಎಂದು ಮಾನ್ಯವಾಗಿದೆ.

1840: ಸಾಮ್ಯುಲ್ ಮಾರ್ಸ್ ಟೆಲಿಗ್ರಾಫ್ ಅನ್ನು ಪೇಟೆಂಟ್ ಪಡೆದರು.

1863: ನ್ಯಾಷನಲ್ ಬ್ಯಾಂಕ್ ಆಫ್ ಡ್ಯಾವೆನ್ ಪೋರ್ಟ್ ಅಮೇರಿಕಾದ ಮೊದಲ ಬ್ಯಾಂಕ್ ಆಗಿ ಸ್ಥಾಪಿತವಾಯಿತು.

1867: ಅಮೇರಿಕಾದ ಅಧ್ಯಕ್ಷ ಆಂಡ್ರ್ಯೂ ಜಾನ್ಸನ್ ಅಲಸ್ಕಾವನ್ನು ಕೊಂಡುಕೊಳ್ಳುವ ಬಗ್ಗೆ ಘೋಷಿಸಿದರು.

1874: ಮೊದಲ ಅಮೇರಿಕಾದ “ಲೈಫ್ ಸೇವಿಂಗ್ ಮೆಡಲ್” ಪ್ರಶಸ್ತಿಯನ್ನು ಲೂಸಿಯಾನ್ ಕ್ಲೆಮೆನ್ಸ್ ಅವರಿಗೆ ನೀಡಲಾಯಿತು.

1895: ಅಮೇರಿಕಾದ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ ಪಡೆದ ಮೊದಲ ಮಹಿಳೆ ಕಾರೋಲಿನ್ ವಿಲ್ಲರ್ಡ್ ಬಾಲ್ಡ್ವಿನ್ ಇವರು ವಿಜ್ಞಾನ ಕ್ಷೇತ್ರದಲ್ಲಿ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಪಡೆದರು.

1901: ಶಾರ್ಲೆಟ್ ಅವರು ಅಮೇರಿಕಾದ ಕಾಲೇಜಿನಿಂದ ಪದವಿ ಪಡೆದ ಮೊದಲ ಸ್ಥಳೀಯ ಆಫ್ರಿಕನ್ ಆಗಿದ್ದರು.

1921: ಕಡಿಮೆ ವೇತನ, ಕಾಮಗಾರಿ ಜಾಗದಲ್ಲಿ ಕಳಪೆ ಸ್ಥಿತಿಯನ್ನು ವಿರೋಧಿಸಿ ಚೆನ್ನೈನ  ಬಕಿಂಗ್ಹ್ಯಾಂ ಹಾಗೂ ಕಾರ್ನಾಟಿಕ್ ಮಿಲ್ಸಿನಲ್ಲಿ ನೂಲು ತಯಾರಿಕೆ ಇಲಾಖೆಯ ಕಾರ್ಮಿಕರು ನಾಲ್ಕು ತಿಂಗಳ ಮುಷ್ಕರ ಆರಂಭಿಸಿದರು.

1926: ಹಾವರ್ಡ್ ವಿಶ್ವವಿದ್ಯಾಲಯದ ಮೊದಲ ಕಪ್ಪು ಅಧ್ಯಕ್ಷ ಮೊರ್ಡೆಕೈ ಜಾನ್ಸನ್ ಆಯ್ಕೆಯಾದರು.

1966: ಮೊದಲ ಬಾರಿಗೆ ಗಾಲ್ಫ್ ಪಂದ್ಯಾವಳಿಯನ್ನು ಬಣ್ಣದಲ್ಲಿ ಪ್ರಸಾರ ಮಾಡಲಾಯಿತು.

1968: ಜಿಮ್ ಹೀನ್ಸ್ 10 ಸೆಕೆಂಡಿನಲ್ಲಿ 100 ಮೀಟರ್ ಓಡಿದ ಮೊದಲಿಗರು.

1983: ಅಮೇರಿಕಾದ ಸರ್ವೋಚ್ಛ ನ್ಯಾಯಾಲಯವು ಸಂಸ್ಥೆಗಳ ಮಾಲೀಕರು ತಮ್ಮ ಕೆಲಸಗಾರರಲ್ಲಿ ಸ್ತ್ರೀ ಮತ್ತು ಪುರುಷರಲ್ಲಿ ಯಾವುದೇ ಭೇದವನ್ನು ತೋರದೆ ಇಬ್ಬರಿಗೂ ಸಮಾನವಾಗಿ ತಮ್ಮ ಸಂಗಾತಿಗಳಿಗೆ ಆರೋಗ್ಯದ ಅನುಕೂಲಗಳನ್ನು ಒದಗಿಸಲು ಸೂಚಿಸಿತು.

1985: ಅಮೆರಿಕಾದ ಅಧ್ಯಕ್ಷ  ರೊನಾಲ್ಡ್ ರೇಗನ್ ಅವರು ಮದರ್ ತೆರೆಸಾ ಅವರಿಗೆ ಪ್ರೆಸಿಡೆನ್ಷಿಯಲ್ ಮೆಡಲ್ ಆಫ್ ಫ್ರೀಡಂ ಪ್ರಶಸ್ತಿ ನೀಡಿದರು.

1990: ಕ್ಷುದ್ರಗ್ರಹ ಯುರೇಕವನ್ನು ಪತ್ತೆ ಮಾಡಲಾಯಿತು.

1996: ಜೆನಿವಾ ಸಮ್ಮೇಳನದಲ್ಲಿ ಸಿಟಿಬಿಟಿಗೆ ಸಹಿ ಹಾಕಲು ಭಾರತವು ನಿರಾಕರಿಸಿತು. CTBT ಯಾವುದೇ ಪರಿಸ್ಥಿತಿಯಲ್ಲಿ, ಮಿಲಿಟರಿ ಅಥವಾ ನಾಗರೀಕ ಉದ್ದೇಶಗಳಿಗಾಗಲಿ ಪರಮಾಣು ಪರೀಕ್ಷೆಗಳನ್ನು ನಿಷೇಧಿಸುವ ಬಗ್ಗೆ ಸಮಾವೇಶಗೊಂಡಿತ್ತು.

ಪ್ರಮುಖ ಜನನ/ಮರಣ:

1869: ಕಿರ್ಲೋಸ್ಕರ್ ಸಂಸ್ಥೆಯ ಸಂಸ್ಥಾಪಕರಾದ ಲಕ್ಷ್ಮಣ್ ರಾವ್ ಕಾಶಿನಾಥ್ ಕಿರ್ಲೋಸ್ಕರ್ ಬೆಳಗಾಂನಲ್ಲಿ ಜನಿಸಿದರು.

1952: ಭಾರತೀಯ ಕಾದಂಬರಿಕಾರ ಮತ್ತು ಕವಿ ವಿಕ್ರಮ್ ಸೇಥ್ ಜನಿಸಿದರು.

1984: ಚಲನಚಿತ್ರ ನಟಿ, ಮಾಡೆಲ್ ಮತ್ತು ಸಮರ ಕಲಾವಿದೆ ನೀತು ಚಂದ್ರ ಬಿಹಾರದ ಪಟ್ನಾದಲ್ಲಿ ಜನಿಸಿದರು.