Categories
e-ದಿನ

ಜೂನ್-8

ಪ್ರಮುಖ ಘಟನೆಗಳು:

1786: ಮಾರಾಟಕ್ಕಾಗಿ ತಯಾರಿಸಿದ ಮೊದಲ ಐಸ್ಕ್ರೀಂ ಅನ್ನು ಜಾಹೀರಾತು ಮಾಡಲಾಯಿತು.

1789: ಅಮೇರಿಕಾದ ಪ್ರತಿನಿಧಿಗಳ ಮನೆ (ಹೌಸ್ ಆಫ್ ರೆಪ್ರೆಸೆಂಟೇಟಿವ್) ನಲ್ಲಿ ಹಕ್ಕುಗಳ ಬಿಲ್ಲನ್ನು ಜೇಮ್ಸ್ ಮೇಡಿಸನ್ ಮೊದಲ ಬಾರಿಗೆ ಪ್ರಸ್ತಾಪಿಸಿದರು.

1809: ವಿಲ್ಲಿಯಂ ಹೈಡ್ ವೊಲ್ಲಾಸ್ಟನ್ ಮೊದಲ ಪ್ರತಿಫಲಿತ ಕೋನಮಾಪಕ (ಗೊನಿಯೋಮೀಟರ್) ಕಂಡುಹಿಡಿದರು.

1824: ಕ್ಯೂಬೆಕ್ಕಿನ ನೋಆ ಕುಶಿಂಗ್ ಬಟ್ಟೆ ಒಗೆಯುವ ಯಂತ್ರ (ವಾಷಿಂಗ್ ಮಶೀನ್) ಗೆ ಪೇಟೆಂಟ್ ಪಡೆದರು.

1829: ಲಿವರ್ ಪೂಲಿನಲ್ಲಿ ಲಂಡನ್ನಿನ ಹೊರಗಿನ ಮೊದಲ ಯು.ಕೆ ಮುನಿಸಿಪಲ್ ಈಜುಕೊಳವು ತೆರೆಯಿತು.

1861: ಅಮೇರಿಕಾದ ನೈರ್ಮಲ್ಯ ಆಯೋಗಕ್ಕೆ ಕಾರ್ಯನಿರ್ವಾಹಕ ಅನುಮೋದನೆ ನೀಡಲಾಯಿತು.

1869: ಶಿಕಾಗೋದ ಈವ್ಸ್ ಡಬಲ್ಯೂ ಮೆಕ್ ಗೆಫೆ ಮೊದಲ ವ್ಯಾಕ್ಯೂಮ್ ಕ್ಲೀನರಿಗೆ ಪೇಟೆಂಟ್ ಪಡೆದರು.

1872: ಅಮೇರಿಕಾದ ಕಾಂಗ್ರೆಸ್ ಸರ್ಕಾರವು “ಪೆನ್ನಿ ಅಂಚೆ ಕಾರ್ಡನ್ನು” ಅನುಮೋದಿಸಿತು.

1887: ಹರಮನ್ ಹೋಲೆರಿತ್ ತನ್ನ “ಪಂಚ್ ಕಾರ್ಡ್ ಕ್ಯಾಲ್ಕುಲೇಟರ್”ಗೆ ಪೇಟೆಂಟ್ ಪಡೆದರು.

1889: ಲಾಸ್ ಏಂಜೆಲ್ಸ್ ನಲ್ಲಿ ಕೇಬಲ್ ಕಾರುಗಳ ಸೇವೆ ಆರಂಭವಾಯಿತು.

1896: ಬಾರೆನ್ ಡೆ ಜುಯ್ಲೆನ್ ಅವರ “ಪಿರ್ಜೊ” ಕಾರನ್ನು ಅವರ ಮೆಕ್ಯಾನಿಕ್ ಕಳ್ಳತನ ಮಾಡಿದ. ಇದು ಮೊದಲ ಕಾರುಗಳ ಕಳ್ಳತನವಾಗಿ ದಾಖಲಾಯಿತು.

1905: ಅಮೇರಿಕಾ ಅಧ್ಯಕ್ಷ ಥಿಯೋಡರ್ ರೂಸ್ವೆಲ್ಟ್ ಜಪಾನ್ ಮತ್ತು ರಷ್ಯಾ ದೇಶಗಳಿಗೆ ಸಮಾನವಾದ ಟಿಪ್ಪಣಿ ಕಳುಹಿಸಿ ತಮ್ಮ ನಡುವೆ ಇರುವ ಯುದ್ಧವನ್ನು ಸಮಾಲೋಚಿಸಲು ಮತ್ತು ಕೊನೆಗೊಳಿಸಲು ಅವರನ್ನು ಒತ್ತಾಯಿಸಿದರು. ಅಗತ್ಯವಿದ್ದರೆ ತಾನು ಖುದ್ದು ಸಹಾಯ ಹಸ್ತ ನೀಡುವುದಾಗಿ ಹೇಳಿದರು.

1912: ಕಾರ್ಲ್ ಲ್ಯಾಮೆಲ್ಲೆ “ಯುನಿವರ್ಸಲ್ ಪಿಚ್ಚರ್ಸ್” ಅನ್ನು ಸಂಯೋಜಿಸಿದರು.

1915: ಲೋಕಮಾನ್ಯ ತಿಲಕ್ ಅವರು ಬರೆದ ಕೃತಿ “ಗೀತ ರಹಸ್ಯ” ಪ್ರಕಟವಾಯಿತು.

1918: “ಅಕ್ವಿಲ” ನವ್ಯತಾರೆ “ಕೆಪ್ಲರ್” ನವ್ಯತಾರೆ (1604) ಯ ನಂತರ ಕಂಡ ಅತ್ಯಂತ ಪ್ರಕಾಶಮಾನವಾದ ನವ್ಯತಾರೆ.

1936: ಭಾರತೀಯ ರಾಜ್ಯ ಪ್ರಸಾರ ಕೇಂದ್ರವನ್ನು ಆಲ್ ಇಂಡಿಯಾ ರೇಡಿಯೋ (ಆಕಾಶವಾಣಿ) ಎಂದು ಮರುನಾಮಕರಣ ಮಾಡಲಾಯಿತು.

1936: ಮೊದಲ ಪಾರ್ಕಿಂಗ್ ಮೀಟರನ್ನು ಕಂಡುಹಿಡಿಲಾಯಿತು.

1937: ವಿಶ್ವದ ಅತ್ಯಂತ ದೊಡ್ಡ ಹೂವಾದ ಕಲ್ಲಾ ಲಿಲ್ಲಿ (12 ಇಂಚ್ ಅಗಲ) ನ್ಯೂಯಾರ್ಕಿನ ಬೊಟಾನಿಕಲ್ ಉದ್ಯಾನವನದಲ್ಲಿ ಅರಳಿತು.

1938: ಸ್ಥಳಿಯ ಶಾಲಾ ಹುಡುಗನಾಗಿದ್ದ ಗೆರ್ಟ್ ತೆರ್ಬ್ಲಾಂಚೆ ಅಜ್ಞಾತ ‘ಧೃಡ-ರೀತಿಯ’ ಮಾನವ ಪೂರ್ವಜರ ಪಳಯುಳಿಕೆಯನ್ನು ದಕ್ಷಿಣ ಆಫ್ರಿಕಾದಲ್ಲಿ ಕಂಡುಹಿಡಿದನು. ನಂತರ ರಾಬರ್ಟ್ ಬ್ರೂಮ್ ಎಂಬಾತ ಇದನ್ನು “ಪರಾಂತ್ರೋಪಸ್ ರೋಬಸ್ಟಸ್” ಎಂದು ಹೆಸರಿಡುತಾರೆ.

1948: ಏರ್ ಇಂಡಿಯಾ ಸಂಸ್ಥೆಯ ಮೊದಲ ಅಂತರಾಷ್ಟ್ರೀಯ ವಿಮಾನ “ಮಲಬಾರ್ ಪ್ರಿನ್ಸೆಸ್” ಬಾಂಬೆ ಇಂದ ಹೊರಟು ಕಾಯಿರೋ ಹಾಗೂ ಜೆನಿವಾದ ಮೂಲಕ ಲಂಡನನ್ನು ತಲುಪಿತು. ಇದು ಭಾರತ ಮತ್ತು ಯುನೈಟೆಡ್ ಕಿಂಗ್ ಡಮ್ ನಡುವೆ ಸಪ್ತಾಹಿಕ ವಾಯು ಸೇವೆಯಾಗಿತ್ತು.

1949: ಸಿಯಾಂ ದೇಶವು “ಥೈಲಾಂಡ್” ಎಂದು ಮರುನಾಮಕರಣಗೊಂಡಿತು.

1987: ನ್ಯೂಜಿಲ್ಯಾಂಡಿನ ಕಾರ್ಮಿಕ ಸರ್ಕಾರವು ಪರಮಾಣು ಶಸ್ತ್ರಾಸ್ತ್ರದ ವಿರುದ್ಧ ಶಾಸನ ನಡೆಸಿತು. ಪರಮಾಣು ಶಕ್ತಿಯ ವಿರುದ್ಧ ಶಾಸನ ಮಾಡಿದ ಏಕೈಕ ರಾಷ್ಟ್ರ ನ್ಯೂಜಿಲ್ಯಾಂಡ್ ಆಗಿತ್ತು.

1990: ಭಾರತ ಮತ್ತು ನೇಪಾಳವು ಮೊದಲ ಸಂಭಂದವನ್ನು ಪುನಃ ಸ್ಥಾಪಿಸಲು ನಿರ್ಧರಿಸಿತು.

ಪ್ರಮುಖ ಜನನ/ಮರಣ:

1906: ಕ್ರಿಕೆಟ್ ಪಟು ಎಸ್.ನಾಜಿರ್ ಅಲಿ ಜನಿಸಿದರು.

1957: ಖ್ಯಾತ ಚಲನಚಿತ್ರ ನಟಿ ಡಿಂಪಲ್ ಕಪಾಡಿಯಾ ಜನಿಸಿದರು.