ಪ್ರಮುಖ ಘಟನಾವಳಿಗಳು:

 • 1863: ಅಮೇರಿಕಾದ ನಾಗರೀಕ ಯುದ್ಧದಲ್ಲಿ ಹೋರಾಡಿದ ಗೆಟ್ಸಬರ್ಗ್ ಯುದ್ಧದ ಸ್ಥಳದಲ್ಲಿ ಅಮೇರಿಕಾದ ಮಾಜಿ ಅಧ್ಯಕ್ಷ ಅಬ್ರಹಾಮ್ ಲಿಂಕನ್ ಮಾತನಾಡಿದರು.

 • 1872: ಬಾಸ್ಟನ್ನಿನ ಇ.ಡಿ.ಬಾರ್ಬರ್ ಮೊದಲ “ಕ್ಯಾಲ್ಕುಲೇಟರ್” ಲೆಕ್ಕ ಮಾಡುವ ಯಂತ್ರಕ್ಕೆ ಪೇಟೆಂಟ್ ಪಡೆದರು.

 • 1893: ನ್ಯೂಯಾರ್ಕ್ ವರ್ಲ್ಡ್ ಬಹುವರ್ಣಗಳಲ್ಲಿಮೊದಲಪತ್ರಿಕೆಯು ಮುದ್ರಿತವಾಯಿತು.

 • 1895: ಫ್ರೆಡ್ರಿಕ್ ಇ ಬ್ಲಾಯಿಸ್ಡೆಲ್ ಪೆನ್ಸಿಲಿಗೆ ಪೇಟೆಂಟ್ ಪಡೆದರು.

 • 1905: ಉಗಿ ದೋಣಿ ಹಿಲ್ಡಾ ಇಂಗ್ಲಿಷ್ ಕಾಲುವೆಯಲ್ಲಿ ಮುಳುಗಿದ ಕಾರಣ 100 ಮಂದಿ ಮೃತ ಪಟ್ಟರು.

 • 1965: ಕೆಲ್ಲಾಗ್ಸಿನ ಪಾಪ್ ಟಾರ್ಟ್ಸ್ ಪೇಸ್ಟ್ರಿಯನ್ನು ತಯಾರಿಸಲಾಯಿತು.

 • 1970: ಕ್ಯಾಲಿಫೋರ್ನಿಯಾದ ಗೋಲ್ಡನ್ ಗೇಟ್ ಪಾರ್ಕ್ ಅನ್ನು ಐತಿಹಾಸಿಕ ತಾಣವಾಗಿ ನೊಂದಾಯಿಸಲಾಯಿತು.

 • 1977: ಒಂದು ದೈತ್ಯಾಕಾರದ ಚಂಡಮಾರುತವು ಆಂಧ್ರಪ್ರದೇಶ ಮತ್ತು ಅಕ್ಕಪಕ್ಕ ಪ್ರದೇಶದಲ್ಲಿ ಬಂದು ತೀವ್ರ ಹಾನಿ ಮಾಡಿತು.

 • 1982: 9ನೇ ಏಷಿಯನ್ ಗೇಮ್ಸ್ ನವದೆಹಲಿಯಲ್ಲಿ ಆರಂಭವಾಯಿತು.

 • 1994: ನಟಿ ಐಶ್ವರ್ಯ ರೈ ಅವರನ್ನು ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿಜೇತೆಯಾಗಿ ಘೋಷಿಸಲಾಯಿತು.

ಪ್ರಮುಖ ಜನನ/ಮರಣ:

 • 1828: 1857 ರ ಧಂಗೆಯಲ್ಲಿ ಬ್ರಿಟೀಷರ ವಿರುದ್ದ ಯುದ್ಧ ಮಾಡಿ ವೀರಮರಣ ಹೊಂದಿದ ಭಾರತದ ರಾಷ್ಟ್ರೀಯತೆಯ ಚಿನ್ಹೆಯಾದ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಜನಿಸಿದರು.

 • 1917: ಭಾರತದ 3ನೇ ಪ್ರಧಾನಿಯಾದ ಇಂದಿರಾ ಗಾಂಧಿ ಜನಿಸಿದರು.

 • 1922: ಸಂಯೋಜಕ, ಚಿತ್ರಕಥೆಗಾರ ಮತ್ತು ನಿರ್ದೇಶಕ ಸಲೀಲ್ ಚೌಧರಿ ಜನಿಸಿದರು.

 • 1923: ಸಂಗೀತ ಸಂಯೋಜಕ ಸಲೀಲ್ ಚೌಧರಿ ಪಶ್ಚಿಮ ಬಂಗಾಳದಲ್ಲಿ ಜನಿಸಿದರು.

 • 1928: ಭಾರತದ ಖ್ಯಾತ ಕುಸ್ತಿಪಟು, ನಟ, ರಾಜಕಾರಣಿ ಧಾರಾ ಸಿಂಗ್ ಜನಿಸಿದರು.

 • 1951: ಬಾಲಿವುಡಿನ ಖ್ಯಾತ ಝೀನತ್ ಅಮಾನ್ ಜನಿಸಿದರು.

 • 1968: ಖ್ಯಾತ ಬಾಲಿವುಡ್ ಚಿತ್ರರಂಗದ ನಿರ್ದೇಶಕ ಮಣಿ ಶಂಕರ್ ಜನಿಸಿದರು.

 • 1974: ಭಾರತದ ನಟ, ಮತ್ತು ಗಾಯಕ ಅರುಣ್ ವಿಜಯ್ ಜನಿಸಿದರು.

 • 1975: 1994ರ ವಿಶ್ವ ಸುಂದರಿ, ನಟಿ ಮತ್ತು ಮಾಡೆಲ್ ಸುಶ್ಮಿತಾ ಸೆನ್ ಜನಿಸಿದರು.

 • 1979: ಕಿರುತೆರೆಯ ನಟ ಭಕ್ತಿಯಾರ್ ಇರಾನಿ ಜನಿಸಿದರು.