ಕಥೆ     

. ರಾಗಿ ಕಲ್ಲು ತರಲು ಹೋದವ
ಸಸಾರ : ಸುಲಭ, ಮಹತ್ವವಿರದ
ಹೊಯ್ಗೆ : ಉಸುಕು

. ನಗದರಸು ಮಗ
ಪರಾಯದ ಮೇಲೆ = ಪ್ರಾಯ ಕಳೆದ ಮೇಲೆ
ವಯ್ಸಿ : ವಹಿಸಿಕೊಟ್ಟು
ಮೋರ್ತ : ಮುಹೂರ್ತ
ಸಜ್ಜನ : ಕೋಣೆ
ಕುಟ್ಲ : ಕುಟ್ಟುವುದು, ಕುಟ್ಟಣ
ಸೋಮರಾಜ್ಞೆ : ಸಮಾರಾಧನೆ
ಸಕ್ಯಿಲ್ಲ, : ಶಕ್ಯವಿಲ್ಲ
ಕವಳ, : ವೀಳ್ಯ

. ತಪ್ಪಸಲಾಗದ ಗಂಟು
ತಿತ : ತಿಥಿ, ಮಡಿದವರ ದಿನ
ಪರಸ್ತ : ಶ್ರಾದ್ಧ
ಅಸ್ವಂತೆ ಕಟ್ಟಿ : ಅಶ್ವತ್ಥ ಕಟ್ಟೆ
ಬಳೆಬಿಡು : ನಿರಿನ ಪ್ರವಾಹದಲ್ಲಿ ಬಿಡು
ಬಗಿಲಿ : ಸ್ವಲ್ಪ
ಬೇರೆಗೊಟೆ : ಬೇರೆ ಕಡೆ
ಸಾಯಕಂಡೆ : ಸಾಕಿಕೊಂಡು
ಸೊಮ್ಗೆ : ಸುಮ್ಮನೆ
ಬವಕ ಹಣಕದ : ಬಯ್ಯಹತ್ತಿದ

. ಕೂಮನ ಪೂಜೆ
ಮರದ್ : ಮರಿದು, ಮಗ್ಗಲಿಗೆ ತಿರುಗಿಸಿ
ಹಮ್ಸ್ ಬಿಟ್ರು : ಮಲಗಿಸಿ ಬಿಟ್ಟರು
ಮಂಡಿ ಕಸದೆ : ಕೂದಲಿಗೆ

. ಮೂರು ಕೂಡ ನೀರನ್ನು ತಂದಳು
ದಡ್ಡ : ದೊಡ್ಡ
ಚಕ್ರಪುಡ್ಗಿ : ಪದ್ಮಾಸನ

. ಪದ್ಮಾಕ್ಷಿ ಸೂಳು ಕಥೆ
ಬೆನ್ನಟ್ಟು : ಇಡೀ ಬೆನ್ನು
ತಿಟೆ : ಒತ್ತು, ಚುಚ್ಚಿದಂತಾಗು
ಉರ್ ತರಲ್ರ? : ಎತ್ತರವಲ್ಲವೋ:
ಶಿದ್ದೆ : ಅಳೆವ ಸಾಧನ, ಅಂದಾಜು ೪೦ ತೊಲೆ
ವರ್ಲಿ ಬೆಂಡು : ಗೆದ್ದಲು ಹತ್ತಿದ (ಲಡ್ಡು) ಕಟ್ಟಿಗೆ
ಬೊರಡಗಾಯಿ : ನೀರು ಬತ್ತಿದ ತೆಂಗಿನ ಕಾಯಿ
ದೇಪ ಕಚ್ಚು : ದೀಪ ಹೊತ್ತಿಸು
ಗೆಕು ಗುಟ್ಕಿಡಿ : ಕಾಲನ್ನೆತ್ತಿ ಗಕ್ಕನೆ
ತೊಗ್ವಿ : ತುಕಡಿ, ಕೋಳಿ ಅಡಿಗೆ
ಕೋಸ : ಹುಡುಗ
ಜರಿಲ್ರ : ಜಜ್ಜಿ ಹಾಳಾಗಲಿ

. ಹೆಂಡಿತಿಯಲ್ಲ ತಂಗಿ ದೈವಗತಿ :
ಆಸರಿ : ನೀರಡಿಕೆ, ಪಾನೀಯ
ಹೂಡು : ಊಳು (ಗದ್ದೆಯನ್ನು)

. ಉಪಾಯ :
ಅಗ್ನಿಕೊಟ್ಕಂಡಿ : ಇಲ್ಲಿ ಅಗ್ನಿ ಕಟ್ಟಿಗೆಗೆ ಬೆಂಕಿ ಹಚ್ಚಿ
ಎಲಗು : ಎಲುವು
ಹೇಳಾರಿಕಂಡ : ಹೇಳಿದ್ದಾರಂತೆ

ಚಂದ್ರಕಾಂತಿ ಸೂಲಿಕಾಂತಿ
            ಸೋರಿ : ಸ್ವಾರಿ, ಸವಾರಿ
ವಲಿ : ಉಲಿ, ಶಬ್ದ, ಮಾತು
ಯಜಾರ : ವಿಚಾರ
ವಾಕ್‌ಕ್ಷೇಮ : ಯೋಗಕ್ಷೇಮ
ಇದ್ರ : ಈ ಸಂದರ್ಭದಲ್ಲಿ ಚಿಂತೆಯ
ಆಟೆ : ಅಷ್ಟು
ಇರಸ್ತ್‌ತ್ನೋವ : ಇರಿಸುತ್ತವಲೇ
ಅಸದ್ : ಎಸೆದು; ಪ್ರಜ್ವಲಿಸಿ
ಯೇಳಿ, ಈಳ್ಯ : ವೀಳ್ಯ,
ಅರಸೆಕಂಡು : ಹುಡುಕಿಕೊಂಡು
ಹಳ್ಳ : ಹರಳನ್ನು
ವತ್ತತ್ತಾಯ್ತು : ಒತ್ತುದಾಯಿತು
ಹೋಕ್ಕೆ : ಹೋಗಲು
ಯೇಗ : ಈಗ
ಹುಸಿ : ತುಂಡು ಮಾಡು,
ಪಾಯ : ಉಪಾಯ
ಅರಗೆ : ಎರಗಿ; ಕಿಟ್ಟರೆ; ಮುಟ್ಟಿದರೆ; ಬೊಬ್ಬಿ : ಸಣ್ಣ ಬುಟ್ಟಿ:
ಶತಿ : ಸರತಿ ; ಸಾಸ: ಸಾಹಸ, ಹೊಡೊಕೆ : ಹೊಡೆಯಲು
ಶರಗಿ : ಸರಿಗೆ;

ಅನ್ನದಾನದ ಫಲ :        
ದಿಕ್ಕೆ : ದಿಕ್ಕಿನಲ್ಲಿ ; ಇಟ್ : ಇಷ್ಟು
ಸಾಕಾಗದೆ : ಆಯಾಸವಾಗಿದೆ ; ತವನಲ್ಲಿ : ಜಾಗದಲ್ಲಿ
ಪಾರಸ : ಪಾರ್ಶ್ವ, ಪಕ್ಕ ; ಪರಾಮೋಶಿ, ಅಜಾಗ್ರತೆ ಎಣಿಕಂಡು ಎಣಿಸಿ (ತಿಳಿದು) ಕೊಂಡು
ಗುಬ್ತ : ಗುಪ್ತ

ಗೆಜ್ಜೆಕಾಲ ಮೊಮೃಗ ಬಂದ
ಆಗೂಕೆಲ್ಲಾ : ಆಗಲಿಕ್ಕಿಲ್ಲ ; ಕೊರ‍್ಸಾಗೆ : ಕುದಿದು
ಮಾಯ್ನಕುಂಟೆ : ಮಾವಿನ ಸೌದೆ ತುಂಡು

ಪರೋಪಕಾರಕ್ಕೆ ಪ್ರತ್ಯುಪಕಾರ
ಮಂತಾನ : ಮನೆತನ; ಯಸ : ವಿಷ, ಕಲಾಸಿ : ಆಳು
ಅದರ : ಆಧಾರ ; ತರಾಸು: ತ್ರಾಸು, ಕತ್ತು : ಜ್ವಲಿಸು
ಬಾಳಟ್ : ಬಹಳಷ್ಟು, ಕಟ್ಟಿ : ಕಷ್ಟ, ಹೊಗಲ : ಹೆಗಲ
ಮಾಯೇರಿ : ಬಹಳ ದೊಡ್ಡ, ಕೇದ್ಗಿ : ಹೊಗಲ : ಹೆಗಲ
ಬೀಯ : ವ್ಯಯಕ್ಕೆ ಅಗತ್ಯ ಆಹಾರ ಸಾಮಗ್ರಿ,
ಚಾವ್ಗಿ : ಕೀಲಿಕೈ, ಶರ : ಸರ
ಬಂಗ : ಭಂಗ, ಅಪಮಾನ
ಸೋಜ್ : ಕಜ್ಜಾಯ
ತಟ್ಟುಕೊಂಡು : ತೆಗೆದುಕೊಂಡು

ಕೊತಗಾಲ ಸಾಯ್ಬ :
ತಾಳಿ : ತಾಳೆ, ಹೊಂದಿಕೆ ; ಹಣಕ್ತು : ಪ್ರಾರಂಭವಾಯಿತು.
ಕವೆ : ತುದಿಗೆ ವಿಭಾಗವಿದ್ದ ; ಕಾಲು ಶಾರು : ಶಹರು, ಪಟ್ಟಣ
ಕಪ್‌ತದೆ : ನಾಟುತ್ತದೆ. ಇಲ್ಲಿ ನಿಶ್ಚಯ

ನಂಗಿ ಕೆಟ್ಟವರಿಲ್ಲ
ತೌರಿ : ಓಡಿಸಿ, ಒತ್ತಾದಿಂದ ಕಳಿಸಿ
ಚಿಳಿಕೊಟ್ಟ : ಅತಿಶಯ ಧಂಡಿ

ಕಷ್ಟಸುಖ :
ಸಾಕಾಗೆಹೋಯ್ತು – ಆಯಾಸವಾಯಿತು
ಹೆಕ್ಕಂಡ – ಹೆಕ್ಕಿಕೊಂಡು
ಪ್ರಸಾದ = ಶ್ರೀಗಂಧದ ಉಂಡೆಯಲ್ಲಿ ಹೂ ಇಟ್ಟು ನೀರಿನ ಪಾತ್ರೆಯಲ್ಲಿ ಬಿಟ್ಟು ತನಗೆ ಬೇಕಾದ ಹೂ ಕೇಳುವದು.
ಎರಡು ಉಂಡೆಗಳಲ್ಲಿ …………………….
ಬೇರೆ ಬೇರೆ ಬಣ್ಣದ ಹೂ ಹಾಕಿರುತ್ತಾರೆ. ಉಂಡೆ ಒಡೆದು …………………….
ಕೇಳಿದ ಹೂ ಹೊರ ಬಿದ್ದರೆ ತನ್ನ ಇಚ್ಛೆ ಪುರೈಸುತ್ತದೆ …………………….
ಎಂದು ತಿಳಿಯುವದು.
ಸಾಕರು, ಸಾಕಿದರು ; ನೆಕ್ಕಂಡೆ = ಎತ್ತಿಕೊಂಡು
ಹಂಚ = ಹೆಂಚು, ಕಾವಲಿ ತಟ್ಟೆ
ತಟ್ಟನೆ, ಪಾರು = ಓಡಿದ

ಶೇಕರಾಜ :
ನೆಂಜ = ಎಂಜಲು, ಹೊಡಿ = ಹುಡಿ
ಕುತ್ರಿ ಪೈರನ್ನ = ಸರಿಯಾಗಿ ರಾಶಿ ಹಾಕಿದ್ದು
ಸಿರಿಮಂತ್ರು = ಸಿರಿವಂತರು
ಹೋತಾರೆ = ಹೋಗುತ್ತಾರೆ.

ದೇವರು ಕೊಟ್ಟ ಹೆಂಡತಿ :
ಅಳ್ಸ = ಅಳತೆಯ ಸೇರು, ಕೊಜ್ಜಕ್ಕಿ = ಕಪ್ಪಾದ ಕೆಟ್ಟ ಅಕ್ಕಿ
ಮುಂಗುರಸಿ = ಮುಂಗುಲಿ
ಯೆಣಸದೆ = ಎಣಿಸುತ್ತಾಳೆ
ದೂಡ್ ಹಾಕು = ನೂಕು

ನಾಗದೇವತೆ :
ಬಡ್ಯದ್ದೆ = ಬಡಿಯದೆ, ಹಚ್ಚದೆ, ಆಗಿದ = ಅಗೆದು
ಕಾವುಕೆ = ಕಾಯಲು, ಕಲಿ = ಕೈಲಿ, ಹತ್ತಿರ,
ಚಕಮೊಕ = ಚಕಮಕಿ, ರೋಪ = ರೋಪ

ಮನೆಗೆ ಬಂದ ಲಕ್ಷ್ಮಿ :
ಶಶಿ – ಸಸಿ, ಕಟ್ = ಕಟ್ಟು
ಕದ್ರು = ಕದಿರು
ಮೈನೆರಿ = ಪ್ರಥಮದಲ್ಲಿ ಬಹಿಷ್ಠೆಯಾಗು
ದೇವಕಾಯ್ = ದೇವರ ವಿಶೇಷ ಪೂಜೆ

ಚಿನ್ನದ ಕೂದಲಿನ ಚೆಲುವಿ :
ದೊನ್ನೆ, ದ್ರೋಣ = ಬಾಳೆ ಎಲೆಯಿಂದ ಮಾಡಿದ ತಟ್ಟೆ,
ಜ್ಞಾಪಕ = ನೆನಪು
ಶಂಟ = ಅಧೋರೋಮ, ಶಷ್ಟ
ಶೇರಿ = ಸೇರಿಕೊಂಡ