ಜನನ : ೨೮-೧೧-೧೯೫೮ ರಂದು ಪುತ್ತೂರಿನಲ್ಲಿ

ಮನೆತನ : ಸುಸಂಸ್ಕೃತರ ಮನೆತನ. ತಂದೆ ಹರಿಹರನಾಯಕ್, ತಾಯಿ ವರಲಕ್ಷ್ಮಿನಾಯಕ್.

ಗುರುಪರಂಪರೆ : ದೇವದಾಸ್‌ನಾಯಕ್ ಅವರ ಮಾರ್ಗದರ್ಶನದಲ್ಲಿ ಸ್ವಂತ ಪರಿಶ್ರಮದಿಂದ ಮುಂದೆ ಬಂದವರು.

ಸಾಧನೆ : ಸ್ವಾಧ್ಯಾಯಿಯಾಗಿ ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮದೆ ಆದ ಛಾಪು ಮೂಡಿಸಿದವರು. ತಮ್ಮ ೨೦ನೇ ವಯಸ್ಸಿನಿಂದಲೆ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ನವೋದಯ ಧ್ವನಿಸುರುಳಿಗಳಿಗಾಗಿ ಗುಣಸಿಂಗ್ ಹಾಗೂ ಪದ್ಮಚರಣ್ ಅವರ ನಿರ್ದೇಶನದಲ್ಲಿ ಜಾನಪದ ಹಾಗೂ ಭಾವಗೀತೆಗಳನ್ನು ಹಾಡುವುದರ ಮೂಲಕ ಸುಗಮ ಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಅಲ್ಲಿಂದ ಮುಂದಕ್ಕೆ ದಾಪುಗಾಲು ಹಾಕುತ್ತಾ ಮುಂದೆ ಹೆಜ್ಜೆಯಿಟ್ಟವರು.

೧೯೮೫ ರಲ್ಲಿ ಲಹರಿ ಸಂಸ್ಥೆಗಾಗಿ ತಮ್ಮ ಪೂರ್ಣ ಗಾಯನದ ಮೊದಲ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿ ಅನಂತರದಲ್ಲಿ ಸುಮಾರು ೧೦೦ ಕ್ಕೂ ಮಿಕ್ಕಿ ಧ್ವನಿಸುರುಳಿ. ಸಿ.ಡಿ.ಗಳಿಗಾಗಿ ಹಾಡಿದ್ದಾರೆ. ಸುಮಾರು ೧೦,೦೦೦ ಕ್ಕೂ ಮಿಕ್ಕಿ ಭಾವಗೀತೆ – ದೇವರನಾಮ – ಭಕ್ತಿಗೀತೆಗಳನ್ನು ಹಾಡಿ ದಾಖಲೆ ಸೃಷ್ಟಿಸಿದ್ದಾರೆ. ಪವಮಾನ ಜಗದಪ್ರಾಣ; ದಾಸನಾಗೂ ವಿಶೇಷನಾಗು ಗೀತೆಗಳು ಅತ್ಯಂತ ಜನಪ್ರಿಯ.

ಕೆಂಡದ ಮಳೆ, ಗೌರಿಗಣೇಶ ಚಿತ್ರದ ಹಿನ್ನೆಲೆ ಗಾಯಕರಾಗಿಯೂ ಪಾಲ್ಗೊಂಡಿದ್ದಾರೆ. ರಾಜ್ಯ, ಹೊರರಾಜ್ಯ, ಹೊರ ರಾಷ್ಟ್ರಗಳಲ್ಲೂ ಸಂಚರಿಸಿ ಕಾರ್ಯಕ್ರಮಗಳ ದಾಖಲೆಯನ್ನೇ ಸೃಷ್ಟಿಸಿರುವ ಜನಪ್ರಿಯ ಗಾಯಕ.

ಪ್ರಶಸ್ತಿ – ಸನ್ಮಾನ : ಕೆಂಡದ ಮಳೆ ಹಾಗೂ ಗೌರಿಗಣೇಶ ಚಿತ್ರದ ಹಿನ್ನೆಲೆ ಗಾಯನಕ್ಕಾಗಿ ಕ್ರಮವಾಗಿ ೧೯೯೧-೧೯೯೮ ರಲ್ಲಿ ರಾಜ್ಯ ಪ್ರಶಸ್ತಿ, ೨೦೦೦ ಸಾಲಿನ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೨೦೦೫ ರಲ್ಲಿ ಕರಾವಳಿ ರತ್ನ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ, ೨೦೦೬-೦೭ರ ಸಾಲಿನ ಸಂಗೀತ ನೃತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಇವರಿಗೆ ಸಂದಿದೆ.