ಆಂಗ್ಲ ಅಧಿಕಾರಿ ಲೆಫ್ಟಿನೆಂಟ್ ಎಮಿಟ್ ನವೆಂಬರ್ ಮಾಹೆಯ ಕೊನೆಯಲ್ಲಿ ಈ ನಗರಕ್ಕೆ ಭೇಟಿ ನೀಡಿ ಇಲ್ಲಿನ ಅವಶೇಷಗಳನ್ನು ತನ್ನ ದಿನಚರಿಯಲ್ಲಿ ಮುಂದಿನಂತೆ ದಾಖಲಿಸಿದ್ದಾನೆ. “ಈ ನಗರವು ತುಂಭದ್ರ (Tombuddra) ನದಿಯ ದಕ್ಷಿಣ ದಂಡೆಯ ಮೇಲಿದ್ದು, ಆನೆಗೊಂದಿ (Annagondy) ಎದಿರು ದಿಕ್ಕಿನಲ್ಲಿದೆ. (ಆನೆಗೊಂದಿ) ತುಂಗಭದ್ರ ನದಿಯ ಉತ್ತರದ ದಡದಿಂದ ಎರಡು ಮೈಲಿ ದೂರದಲ್ಲಿದ್ದು, ಇದೇ ಹೆಸರಿನ ಜಿಲ್ಲೆಯೊಂದು (ನಗರ) ಇಂದು ಅಸ್ತಿತ್ವದಲ್ಲಿದೆ. ಇದು ಪ್ರಾಚೀನ ನಗರ ‘ಬಿಜನುಗ್ಗೂರು’ ಕಾಲದಲ್ಲಿ ಒಂದು ಜಹಾಗೀರ್ ಆಗಿತ್ತು. ಎರಡು ಶತಮಾನಗಳ ಹಿಂದೆ ಈ ಸಾಮ್ರಾಜ್ಯದ ಅಧೀನಕ್ಕೊಳಪಟ್ಟ ವಿಶಾಲ ಭೂ ಭಾಗವನ್ನು ಕೆನಾರ (Canahara) ಎಂದು ಕರೆಯಲಾಗುತ್ತಿತ್ತು”.

“ಕೊಮಲಾಪುರದ (Comalapura) ಆಗ್ನೇಯ ಭಾಗದ ಕೊಲವೆಯು ಅರ್ಧ ಮೈಲಿ ದೂರದವರೆಗೆ ಬೆಟ್ಟ ಮತ್ತು ದೇವಾಲಯಗಳಿಂದ ಸುತ್ತುವರೆದಿದೆ. ಅತ್ಯಂತ ಸುಂದರವಾಗಿರುವ ಈ ಪ್ರದೇಶವು ಪೂರ್ವ ಭಾಗದಲ್ಲಿ ಬಲವಾದ ಕಲ್ಲಿನ ಕೊಲವೆಯಿಂದ ಮತ್ತು ಪಶ್ಚಿಮ ಭಾಗದಲ್ಲಿ ನದಿಯು ಎಲ್ಲೆಯಾಗಿ ಸುತ್ತುವರೆದಿದೆ. ಎಂಟು ಮೈಲಿಯಷ್ಟು ಸುತ್ತಳತೆಯಿರುವ ಈ ಪ್ರದೇಶವನ್ನು ಕುರಿತು ನಾನು ಬಹಳವಾಗಿ ಕೇಳಿದ್ದೇನೆ. ಇದರ ಮಧ್ಯಭಾಗವು ಎತ್ತರವಾದ ಹಲವು ಬೆಟ್ಟಗಳಿಂದ ಹಾಗೂ ದೇವಾಲಯಗಳಿಂದ ಸುತ್ತುವರೆದಿದೆ. ಇಲ್ಲಿ ೩೦ರಿಂದ ೪೫  ಯಾರ್ಡ್‌ನಷ್ಟು ವಿಶಾಲವಾಗಿರುವ ಹಲವು ರಸ್ತೆಗಳನ್ನು ನಾನು ಕಂಡಿದ್ದೇನೆ. ಇಂದು ಇಲ್ಲಿ ಕೆಲವರು ಉತ್ತಮವಾದ ಭತ್ತವನ್ನು ಬೆಳೆಯುತ್ತಾರೆ.” ಹೀಗೆ ಒಂದು ರಸ್ತೆಯ ಅವಶೇಷವನ್ನು ಸಹ ಈತನು ತನ್ನ ದಿನಚರಿಯಲ್ಲಿ ದಾಖಲಿಸಿದ್ದಾನೆ. “ನೈರುತ್ಯ ಮೂಲೆಯಲ್ಲಿರುವ ರಸ್ತೆಯು ಈಶಾನ್ಯ ಭಾಗದೆಡೆಗೆ ಸುಮಾರು ಅರ್ಧ ಮೈಲಿ ದೂರದವರೆಗೂ ಸಾಗಿದೆ. ಇದು ೩೫ ಯಾರ್ಡ್‌ನಷ್ಟು ಅಗಲವಾಗಿದೆ. ಇದರ ಎರಡೂ ಬದಿಯಲ್ಲಿ ಕಂಬಗಳ ಸಾಲಿವೆ. ಅಲ್ಲದೆ ನೈರುತ್ಯ ಮೂಲೆಯ ಕೊನೆಯ ಭಾಗದಲ್ಲಿ ವಿಶಾಲವಾದ ಮತ್ತು ಬೃಹತ್ ದೇವಾಲಯ ಇತ್ತು” ಎಂದು ದಾಖಲಿಸಿದ್ದಾನೆ (ಇದು ಈಗಿನ ವಿರೂಪಾಕ್ಷ ದೇವಾಲಯ). “ಈ ರಸ್ತೆಯ ಪಶ್ಚಿಮ ಭಾಗದಲ್ಲಿ (ತುಂಗಭದ್ರಾ ನದಿಯ ದಡದಲ್ಲಿ) ಮಾವಿನ ಹಣ್ಣಿನ ತೋಟವಿದೆ. ಇಲ್ಲಿ ಹಲವು ತೊರೆಗಳು (Strearns) ಇವೆ. ಅಲ್ಲದೆ ಇಲ್ಲಿ ಕಾಲುವೆಯ ಭಗ್ನಾವಶೇಷಗಳು ಹರಡಿವೆ. ಈ ಪ್ರದೇಶದ ಹೆಸರೇನೆಂದು ನಾನು ಸ್ಥಳೀಯರನ್ನು ವಿಚಾರಿಸಿದಾಗ ಇದು ಆಳು ಪಟ್ಟಣ (Allputna) ಎಂಬುದಾಗಿ ತಿಳಿಸಿದರು. ನದಿಯ ಒಂದು ಭಾಗದಲ್ಲಿ ೧೬ ಯಾರ್ಡ್ ಅಗಲದ ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಅದರ ಅವಶೇಷಗಳು ನದಿಯೊಡನೆ ಬೆರತುಹೋಗಿವೆ” ಎಂದೂ ಸಹ ಆತ ವಿವರವಾಗಿ ದಾಖಲಿಸಿದ್ದಾನೆ.

“ಕಮಲಾಪುರ (Comalapour)ವು ಬೆಟ್ಟಗಳಿಂದ ಸುತ್ತುವರೆದಿದೆ. ಕಮಲಾಪುರದಿಂದ ರಸ್ತೆಯು ಎತ್ತರವಾದ ಬೆಟ್ಟಗಳ ಮಧ್ಯೆ ಕೆಲವು ಕಡೆ ಏರುತ್ತಾ ಇನ್ನು ಕೆಲವು ಕಡೆ ಇಳಿಯುತ್ತಾ ದೊಡ್ಡ ಕಲ್ಲುಗಳ ಸಮೀಪದಲ್ಲಿಯೇ ಹಾದು ಹೋಗುತ್ತದೆ. ಹೀಗೆ ೮೧/೨ ಮೈಲಿ ದೂರದವರೆಗೆ ರಸ್ತೆ ಇದೆ. ೮ ಅಡಿಗಿಂತಲೂ ಹೆಚ್ಚು ಅಗಲವಿಲ್ಲದ ಈ ರಸ್ತೆಯು ಅತಿ ಎತ್ತರವಾಗಿರುವ ಬೆಟ್ಟಗಳವರೆಗೆ ಮುಂದುವರೆಯುತ್ತದೆ. ಈ ರಸ್ತೆಯನ್ನು ಕಲ್ಲು ಹಾಸಿನಿಂದ ನಿರ್ಮಾಣ ಮಾಡಲಾಗಿದೆ. ಇಲ್ಲಿ ಕಲ್ಲಿನ ಪ್ರವೇಶ ದ್ವಾರಗಳು (Gateways) ಮತ್ತು ಕಾವಲುಗಾರರ ಮನೆಗಳಿದ್ದು ಅವು ಬೆಟ್ಟದ ಮೇಲಿನ ಭಾಗದಲ್ಲಿವೆ (ರಸ್ತೆಯ ಪೂರ್ವಭಾಗಕ್ಕೆ) ನೇರವಾದ ರಸ್ತೆಯ ನಂತರ (Country Opens & C’ ಗಳಿವೆ)” ಎಂದು ವಿವರಿಸಿದ್ದಾನೆ.

ನನ್ನ ಸ್ನೇಹಿತ ಕ್ಯಾಪ್ಟನ್ ಕ್ರಿಕ್ ಪ್ಯಾಟ್ರಿಕ್‌ನು ಪರ್ಷಿಯನ್ ಭಾಷೆಯಲ್ಲಿ ರಚಿಸಿರುವಂತೆ “ಹಾಳುಪಟ್ಟಣ ಮತ್ತು ಬಿಜುನಗರ ಎರಡೂ ಒಂದೇ. ಆದರೆ ಇದನ್ನು ಅಲ್ಲಿಯ ಜನರು ಮೂಲ ಹೆಸರಿನಿಂದ ಕರೆಯುತ್ತಿಲ್ಲ. ಕ್ಯಾಪ್ಟನ್ ಬಿಟ್‌ಸನ್ ಎನ್ನುವವನು ಎಮಿಟ್‌ನಿಗಿಂತಲೂ ಅವನು ಸಹಾ ದಾಖಲಿಸಿದ್ದಾನೆ. ಎಮಿಟ್‌ನು ನೋಡಿದ ಕ್ರಮವೂ ಸರಿಯಾಗಿದ್ದು ತದನಂತರ ಬಿಜಯನಗರದ ಅವಶೇಷಗಳು ಹೆಚ್ಚು ಹಾಳಾಗಿವೆ” ಎಂದು ಆತ ವಿವರಿಸಿದ್ದಾನೆ. ಜಿಲ್ಲೆಯ ಕೇಂದ್ರದಲ್ಲಿರುವ ಆನೆಗೊಂದಿಯನ್ನು ದಖ್ಖನ್‌ನೊಡನೆ ನೋಡಿರುವುದು ಲೇಖಕನ ಹಿಡಿತಕ್ಕೆ ಸಾಕ್ಷಿಯಾಗಿದೆ (ನೋಡಿ, ರಿವ್ಯೆ ಆಫ್ ದ ಡೆಕ್ಕನ್, ಪು. ೧೪). “ಕ್ರಿ.ಶ. ೧೫೬೫ರಲ್ಲಿ ಬಿಜನಗರಕ್ಕೆ ಭೇಟಿ ನೀಡಿದ ಸೀಸರ್ ಫೆಡ್ರಿಕ್‌ನು ೨೪ ಮೈಲಿಗಳ ವಿಸ್ತಾರವಾದ ಈ ನಗರದಲ್ಲಿ ಹಲವು ದೇವಾಲಯಗಳು ಬೆಟ್ಟಗಳು ಇವೆ” ಎಂದು ದಾಖಲಿಸಿದ್ದಾನೆ. ಎಮಿಟ್‌ನು ಸಹ ಪ್ರಾಚೀನವಾದ ಈ ನಗರವು Boundaryಯಿಂದ ಸುತ್ತುವರಿದಿದೆ. ಕಲ್ಲುಹಾಸಿನ ರಸ್ತೆಗಳು ಕಮಲಾಪುರದವರೆಗೆ ಮುಂದುವರಿದಿದ್ದು, ಅದು ನಗರದ ಎಲ್ಲೆಯವರೆಗೆ ಮುಂದುವರಿದಿದೆ. ಹೀಗೆ ಹಾದು ಹೋಗುವಾಗ ಹಲವು ದ್ವಾರಗಳಿದ್ದು, ಅವುಗಳಲ್ಲಿ ಒಂದು ದ್ವಾರ ಇಡೀ ನಗರಕ್ಕೆ ಪ್ರಮುಖವಾಗಿತ್ತು ಎಂದು ಈತನು ದಾಖಲಿಸಿದ್ದಾನೆ. ಟಿಪ್ಪುವಿನಿಂದ ಹಿಂದುರುಗಿ ಸಲ್ಪಟ್ಟ ಆನೆಗೊಂದಿ ಸರ್ಕಾರವನ್ನು (Circar of Annagondy) ನಾನು ಮನಸ್ಸಿನಲ್ಲಿ ಊಹಿಸಿದ್ದೇನೆ. ಟಿಪ್ಪುವಿನ ಅಧೀನದಲ್ಲಿದ್ದ ಈ ಪ್ರದೇಶ ದೋ ಆಬ್ ಪ್ರದೇಶದಲ್ಲಿದ್ದು, ನಿಜಾಮರು ಮರಾಠರಿಂದ ಪಡೆದುಕೊಂಡಿದ್ದು ಅದಕ್ಕೊ ಪೂರ್ವದಲ್ಲಿ ಆನೆಗೊಂದಿಯ ಬಿಜನಗರದ ರಾಜರ ಮೂಲ ಸಂತತಿಯ ನೆಲೆಯಾಗಿತ್ತು. ಅಷ್ಟೇ ಅಲ್ಲದೆ ಮುಂದೆ ಆ ಸಾಮ್ರಾಜ್ಯಕ್ಕೂ ಈ ಪ್ರದೇಶ ಸೇರಿಸಲ್ಪಟ್ಟಿತ್ತು. ಇಲ್ಲಿ ಪ್ರಾಚೀನ ರಾಜಧಾನಿಯ ಹಲವು ಅವಶೇಷಗಳಿವೆ. ಟಿಪ್ಪು ತನ್ನ ಪ್ರತಿಷ್ಠೆಗಾಗಿ ಈ ಪ್ರದೇಶವನ್ನು ಆ ಕಾಲದಲ್ಲಿ ಹಿಡಿದು ಕೊಂಡನು. ಈ ಕುರಿತು ನಾನು ಹೆಚ್ಚಿನ ವಿವರಣೆ ನೀಡಿದ್ದೇನೆ. ನಾನು ಇಲ್ಲಿನ ರಹದಾರಿ ಮೊದಲಾದ ವಿವರಗಳನ್ನು ‘ವೀವ್ ಆಫ್ ದಿ ಡೆಕ್ಕನ್’ ಎಂಬ ಗ್ರಂಥದಲ್ಲಿ ಯಥಾವತ್ತಾಗಿ ದಾಖಲಿಸಿ ಅದನ್ನು ಕ್ರಿ.ಶ. ೧೭೯೧ರಲ್ಲಿ ಪ್ರಕಟಿಸಿದ್ದೇನೆ. ಇದರಲ್ಲಿ ಹಲವು ಘಟನೆಗಳನ್ನು ಮತ್ತು ಯುದ್ಧದ ನಂತರ ವಿವರವನ್ನು ನೀಡಲಾಗಿದೆ.

ಆನೆಗೊಂದಿಯಲ್ಲಿ ನಡೆದ ಪ್ರಮುಖ ರಾಜಕೀಯ ಘಟನೆಗಳು ಮತ್ತು ಟಿಪ್ಪುವಿನ ಹಿಡಿತಕ್ಕೆ ಈ ಪ್ರದೇಶ ಒಳಪಟ್ಟ ರೀತಿಯನ್ನು ವಿವರಿಸಲಾಗಿದೆ. ಈ ಪ್ರಾಂತ್ಯ ಇಪ್ಪತ್ತು ಮೈಲಿಗಳವರೆಗೆ ವಿಸ್ತರಿಸಿದ್ದು ಬಿಜನಗರಕ್ಕೆ ಹೊಂದಿಕೊಂಡಂತೆ ಸುತ್ತುವರಿದಿದೆ. ಹಿಂದೆ ಇದೇ ಹೆಸರಿನ ಹಿಂದೂ ಸ್ರಾಮಾಜ್ಯಕ್ಕೆ ಸೇರಿತ್ತು. ದಕ್ಷಿಣದ ಎಲ್ಲಾ ರಾಜ್ಯಗಳು ರಾಮರಾಜೆ (ರಾಮರಾಯ)ನ ಪೂರ್ವಜರಾದ ಕೃಷ್ಣ (ಕೃಷ್ಣದೇವರಾಯ) ಎಂಬ ರಾಜನ ಅಧೀನಕ್ಕೊಳ ಪಟ್ಟಿದ್ದವು. ಕೆನರಾ ಮತ್ತು ಮಲಬಾರ್ ರಾಷ್ಟ್ರಗಳು ಇಂದಿಗೆ ೭೦೦ ವರ್ಷಗಳ ಹಿಂದೆ ಈ ದೊರೆಯ ಅಧೀನಕ್ಕೊಳಪಟ್ಟಿದ್ದವು. ಹಿಂದೂಸ್ಥಾನದ ಉದಯಪುರದಲ್ಲಿ ಈತ ತನ್ನ ಪ್ರತಿನಿಧಿಯನ್ನು ನೇಮಿಸಿ ಆಳ್ವಿಕೆ ಮಾಡುತ್ತಿದ್ದುದು ಈತನ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ‘ಮಹಾರಾಜ’ ಅಥವಾ ‘ರಾಜ’ ಎಂದು ಸಂಬೋಧಿಸಲಾಗುತ್ತಿದ್ದ ಈತನನ್ನು ದಖ್ಖನ್‌ನಲ್ಲಿ ಸಾಮಾನ್ಯವಾಗಿ ರಾಯಲ್ (Royeel) ಎಂದು ಸಂಬೋಧಿಸಲಾಗುತ್ತಿತ್ತು. ಈ ಪ್ರದೇಶದಲ್ಲಿ ಅಂದು ಕ್ರಾಂತಿಕಾರಕ ಸುಧಾರಣೆಗಳನ್ನು ಕೈಗೊಳ್ಳಲಾಗಿತ್ತು. ಅಲ್ಲದೆ ಈ ಪ್ರಾಂತ್ಯಕ್ಕೆ ಎರಡೂವರೆ ಲಕ್ಷ ರೂಪಾಯಿ ಆದಾಯ ಪ್ರಾಪ್ತವಾಗುತ್ತಿತ್ತು. ಇದು ಆನೆಗೊಂದಿಯ ನಾಣ್ಯಶಾಲೆಗೆ ಸೇರ್ಪಡೆಗೊಳ್ಳುತ್ತಿತ್ತು. ಇದು ಹೈದರ್ ಮತ್ತು ಆತನ ಪೂರ್ವಜರನ್ನು ಆಕರ್ಷಿಸಿತು. ಅಲ್ಲದೆ ಇಲ್ಲಿ ಅವರು ಸ್ವತಂತ್ರ್ಯವಾಗಿ ತಲೆ ಎತ್ತಲು ಪ್ರೇರಣೆ ನೀಡಿತು. ಮೊಗಲರು ಮತ್ತು  ಅವರ ಪ್ರತಿನಿಧಿಗಳು ಹಾಗೂ ಮರಾಠರ ಹಗೆತನಗಳಿಂದಾಗಿ ಈ ಸಾಮ್ರಾಜ್ಯ (ಸರ್ಕಾರ) ಅವನತಿ ಹೊಂದಿತು”.