ಗೋಕಾಕ

ಬೆಳಗಾವಿಯಿಂದ – ೭೦ ಕಿ.ಮೀ.
ಗೋಕಾಕದಿಂದ – ೫ ಕಿ.ಮೀ.
ಕೊಣ್ಣೂರದಿಂದ – ೫ ಕಿ.ಮೀ.

ಭಾರತದ ನಯಾಗರಾ ಎಂದು ಕರೆಯುವ ಗೋಕಾಕ ಜಲಪಾತ ರಮ್ಯ ಮನೋಹರವಾದುದು. ೫೭ ಅಡಿ ಕಲ್ಲು ಬಂಡೆಗಳ ಮೇಲಿಂದ ಧುಮ್ಮಿಕ್ಕುವ ಘಟಪ್ರಭೆಯನ್ನು ನೋಡುವುದೇ ಭಾಗ್ಯ. ಈ ಪರಿಸರದಲ್ಲಿರುವ ಮಹಾಲಿಂಗೇಶ್ವರ ದೇವಸ್ಥಾನ ಚಾಲುಕ್ಯ ಶೈಲಿಯ ಶಿಲ್ಪಕಲೆಯದು, ೧೮೮೫ ರಲ್ಲಿ ಪ್ರಾರಂಭವಾದ ನೂಲಿನ ಗಿರಣಿ, ಅದರಿಂದ ೧೮೮೭ರಲ್ಲಿ ಏಷ್ಯಾದಲ್ಲಿಯೇ ಮೊಟ್ಟಮೊದಲ ಜಲವಿದ್ಯುತ್‌ಉತ್ಪಾದನಾ ಘಟಕವಿದೆ. ಪಕ್ಕದ ಊರಿನಿಂದ ಬರುವ ಕಾರ್ಮಿಕರಿಗೆ ಅನುಕೂಲಕ್ಕಾಗಿ ಅಂದೇ ನಿರ್ಮಿಸಿದ ತೂಗುಸೇತುವೆ, ಮನೋಹರವಾದ ಯೋಗಿಕೊಳ್ಳ ಈ ಪ್ರದೇಶವನ್ನು ಪ್ರೇಕ್ಷಣೀಯವಾಗಿಸಿವೆ.

ಮಹಾಲಿಂಗೇಶ್ವರ ದೇವಸ್ಥಾನ, ಯೋಗಿಕೊಳ್ಳ, ತೂಗುಸೇತುವೆ.

೧೯೩೫ ರಲ್ಲಿ ಗ್ರಾಮೀಣ ಭಾರತದ ಆರೋಗ್ಯದ ಕನಸು ಹೊತ್ತು ಡಾ. ಜಿ.ಆರ್‌. ಕೊಕಟನೂರ, ಡಾ. ಎಂ.ಕೆ. ವೈದ್ಯ, ಡಾ. ನಾ.ಸು. ಹರ್ಡೀಕರರಿಂದ ೨೦೦ ಎಕರೆ ಪ್ರದೇಶದಲ್ಲಿ ಸ್ಥಾಪಿತವಾದ ಕರ್ನಾಟಕ ಆರೋಗ್ಯಧಾಮ ಕರ್ನಾಟಕದ ಹೆಮ್ಮೆ. ಕಡಿಮೆ ವೆಚ್ಚದಲ್ಲಿ ಉತ್ತಮ ಆರೋಗ್ಯ ಸೇವೆ ನೀಡುವ ಇಲ್ಲಿ ಕ್ಷಯರೋಗಕ್ಕೆ ವಿಶೇಷ ಉಪಚಾರವಿದೆ. ಗ್ರಾಮೀಣ ಮಹಿಳೆಯರ ಅಭಿವೃದ್ಧಿಗೆ ಸ್ವಸಹಾಯ ಸಂಘಗಳ ಕಲ್ಪನೆಯನ್ನು ವತ್ಸಲಾ ತಾಯಿ ವೈದ್ಯರು ಅಂದೇ ಸಾಕಾರಗೊಳಿಸಿದ್ದರು.

೧೯೨೩ರಲ್ಲಿ ಹಿಂದೂಸ್ಥಾನಿ ಸೇವಾದಲವನ್ನು ಸ್ಥಾಪಿಸಿ ಭರತ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಶಿಸ್ತು ಒದಗಿಸಿಕೊಟ್ಟು. ಭಾರತ ಸೇವಾದಲ ಸ್ಥಾಪಿಸಿ ಕರ್ನಾಟಕದ ಶಾಲೆಗಳಲ್ಲಿ ದೇಶಭಕ್ತಿಯನ್ನು ಪಸರಿಸಿದ, ಡಾ. ನಾ.ಸು. ಹರ್ಡೀಕರ ಸಮಾಧಿ ಇಲ್ಲಿದೆ.

ಬೆಳಗಾವಿಯಿಂದ – ೮೦ ಕಿ.ಮೀ.
ಗೋಕಾಕದಿಂದ – ೧೫ ಕಿ.ಮೀ.

ಡಾ. ನಾ.ಸು. ಹರ್ಡೀಕರರ ಸಮಾಧಿ

ಬೆಳಗಾವಿಯಿಂದ – ೮೦ ಕಿ.ಮೀ.
ಗೋಕಾಕದಿಂದ – ೧೫ ಕಿ.ಮೀ.

ಮಾರ್ಕಂಡೇಯ ನದಿಯು ಎರಡು ಸ್ಥಳಗಳಲ್ಲಿ ಉಂಟು ಮಾಡಿರುವ ಗೊಡಚಿನಮಲ್ಕಿ ಜಲಪಾತ ರಮಣೀಯವಾದುದು. ಟ್ರೆಕ್ಕಿಂಗ್‌ಗೆ ಅತ್ಯುತ್ತಮವಾದ ಸ್ಥಳವಾಗಿದೆ.

ಬೆಳಗಾವಿಯಿಂದ – ೭೧ ಕಿ.ಮೀ.
ಗೋಕಾಕದಿಂದ ೬.ಕಿ.ಮೀ.

ವೀರಶೈವ ಭಕ್ತಿಕೇಂದ್ರವಾದ ಅರಭಾವಿಯ ಮಠವು ಹಿಮಾಲಯದಿಂದ ಬಂದು ಸ್ಥಾಪಿಸಿದ ದುರುದುಂಡೇಶ್ವರ ಪುಣ್ಯಕ್ಷೇತ್ರವಾಗಿದೆ. ಕೆಂಪುಕಲ್ಲಿನಲ್ಲಿ ಕಟ್ಟಿದ ಕಟ್ಟಡದ ಶಿಲ್ಪಕಲೆ. ಕೆತ್ತನೆಯ ಕೆಲಸಗಳು ಅದ್ಭುತವಾಗಿವೆ. ಏಕಶಿಲಾ ಸರಪಳಿಗಳು ಶಿಲ್ಪ ಕಂಬಗಳು ಆಕರ್ಷಕವಾಗಿವೆ. ಈ ಕಟ್ಟಡವನ್ನು ಕ್ರಿ.ಶ. ೧೧೫೦ ರಲ್ಲಿ ಕಟ್ಟಲಾಗಿದೆ.

ಗೋಕಾಕ ತಾಲ್ಲೂಕಿನ ಎಲ್ಲ ಸ್ಥಳಗಳನ್ನು ಸಂಪರ್ಕಿಸುವ ರೈಲು ವ್ಯವಸ್ಥೆಯಿದೆ.

ಸಾವಳಗಿಮಠ
ದೂಪದಾಳ ಡ್ಯಾಮ
ಗೋಕಾಕ ಗಿರಣಿ

 

ರಾಯಬಾಗ

ಬೆಳಗಾವಿಯಿಂದ – ೧೨೫ ಕಿ.ಮೀ.
ರಾಯಬಾಗದಿಂದ – ೧೦ ಕಿ.ಮೀ.

ಕೃಷ್ಣಾ ನದಿ ತಟದಲ್ಲಿರುವ ಚಿಂಚಲಿ, ಮಾಯಕ್ಕನಿಂದ ಪ್ರಸಿದ್ಧಿ ಪಡೆದ ಊರು, ಕೋಲ ಮತ್ತು ಕಟ್ಟ ಎಂಬ ರಾಕ್ಷಸರನ್ನು ಸಂಹಾರ ಮಾಡಿ ಜನರನ್ನು ಮಾಯಕ್ಕ ರಕ್ಷಿಸಿದಳೆಂಬ ಐತಿಹ್ಯವಿದೆ. ಅವರ ಸಮಾಧಿಗೆ ಸಂಬಂಧಿಸಿದ ‘ಹಗೆ’ಗಳು ಈಗಲೂ ಚಿಂಚಲಿಯಲ್ಲಿವೆ. ಮೂರು ವರ್ಷಕ್ಕೊಮ್ಮೆ ನಡೆಯುವ ಮಾಯಕ್ಕನ ಜಾತ್ರೆ ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವಲ್ಲಿ ಮಹತ್ವದ್ದಾಗಿದೆ. ಇಲ್ಲಿ ವರ್ಷ ಪೂರ್ತಿ ನಿರಂತರ ಅನ್ನದಾಸೋಹ ನಡೆಯುತ್ತದೆ.

ಬೆಳಗಾವಿಯಿಂದ – ೧೧೦ ಕಿ.ಮೀ.
ರಾಯಬಾಗದಿಂದ – ೩೮ ಕಿ.ಮೀ.

೧೯೩೩ ರಲ್ಲಿ ಯಲ್ಲಾಲಿಂಗ ಪ್ರಭುಗಳಿಂದ ಸ್ಥಾಪನೆಯಾಗಿ ನಿರಂತರ ಅಭಿವೃದ್ಧಿ ಹೊಂದಿದ ಕ್ಷೇತ್ರ ಮುಗಳಖೋಡ. ಜನರಲ್ಲಿ ಧೈರ‍್ಯ, ಆತ್ಮವಿಶ್ವಾಸ, ಸನ್ಮಾರ್ಗವನ್ನು ಬಿತ್ತರಿಸಿ ಸಮಾಜವನ್ನು ಶುಚಿಗೊಳಿಸಲು ಪ್ರಯತ್ನಿಸಿದ ಕ್ಷೇತ್ರ ನಾಡಿನ ಜನರನ್ನು ಆಕರ್ಷಿಸಿದೆ.

 

ಅಥಣಿ

ಬೆಳಗಾವಿಯಿಂದ – ೧೨೦ ಕಿ.ಮೀ.
ಅಥಣಿಯಿಂದ – ೩೦ ಕಿ.ಮೀ.

ಮಂಗಸೂಳಿ ಮಲ್ಲಯ್ಯ ದೇವಸ್ಥಾನ

ವಂಟಮುರಿ ದೇಸಾಯರ ಕಾಲದಲ್ಲಿ ಸ್ಥಾಪಿತವಾದ ಈ ದೇವಾಲಯದ ಹಿನ್ನೆಲೆ ಪವಾಡಗಳೊಮದಿಗೆ ತಳಕು ಹಾಕಿಕೊಂಡಿದೆ. ಆದಿಲ್‌ಶಾಹಿ ಅರಸರು ವಂಟಮುರಿ ದೇಸಾಯರನ್ನು ಬಂಧಿಸಿದಾಗ, ಮಲ್ಲಯ್ಯನ ಆಶೀರ್ವಾದದಿಂದ ದೇಸಾಯರು ಬಿಡುಗಡೆ ಹೊಂದಿದರು ಎಂಬ ನಂಬಿಕೆ. ಅದರಿಂದ ಅವರಿಂದ ಸ್ಥಾಪನೆಯಾದ ಮಂದಿರ ಪ್ರಸಿದ್ಧಿಯನ್ನು ಪಡೆದಿದೆ.

ಬೆಳಗಾವಿಯಿಂದ – ೧೪೮ ಕಿ.ಮೀ.

ಮುರುಘೇಂದ್ರ ಶಿವಯೋಗಿಗಳ ಮಠ (ಗಚ್ಚಿನ ಮಠ)

ಕರ್ನಾಟಕ ಹೆಬ್ಬಾಗಿಲು ಎಂದು ಕರೆಯುವ ಅಥಣಿಯಲ್ಲಿಯ ಗಚ್ಚಿನಮಠ ಅಥವಾ ಮುರುಘರಾಜೇಂದ್ರ ಶಿವಯೋಗಿ ಮಠ ಇಲ್ಲಿಯ ಆಕರ್ಷಣೆ. ಇದರೊಂದಿಗೆ ಇಲ್ಲಿರುವ ಅಮೃತೇಶ್ವರ ದೇವಾಲಯ, ಸಿದ್ದೇಶ್ವರ ದೇವಾಲಯ ಮತ್ತು ಮಸೀದಿಗಳು ಒಂದೇ ಆವರಣದಲ್ಲಿದ್ದು ಧಾರ್ಮಿಕ ಐಕ್ಯಭಾವನೆಯನ್ನು ಬೆಳೆಸಲು ಕಾರಣವಾಗಿವೆ. ಚಾಲುಕ್ಯ ಮಾದರಿಯ ಶಿಲ್ಪಕಲೆಯನ್ನು ಹೊಂದಿರುವ ಅಮೃತೇಶ್ವರ ದೇವಾಲಯದ ಶಿಲ್ಪಕಲೆ ಪುರಾತನವಾದುದು. ಸಮರ್ಥ ರಾಮದಾಸರಿಂದ ಶೋಧಿಸಲ್ಪಟ್ಟ ರಾಮಮಂದಿರ ಪುರಾತನವಾದುದು.

 

ಚಿಕ್ಕೋಡಿ

ಬೆಳಗಾವಿಯಿಂದ – ೭೦ ಕಿ.ಮೀ.
ಚಿಕ್ಕೋಡಿಯಿಂದ – ೨೨ ಕಿ.ಮೀ.

ಸ್ಥವನಿಧಿ

ತವಂದಿ ಬೆಟ್ಟ ಗುಡ್ಡಗಳ ತಳದಲ್ಲಿಯ ಗವ್ಹಾನ ಗ್ರಾಮದಲ್ಲಿ ಇರುವ ಸ್ತವನಿಧಿ ರಾಷ್ಟ್ರೀಯ ಹೆದ್ದಾರಿ ೪ ರ ಪಕ್ಕದಲ್ಲಿಯೇ ಇರುವ ಜೈನ ಕ್ಷೇತ್ರ. ಐದು ಗರ್ಭಗೃಹಗಳಿರುವ ಬ್ರಹ್ಮದೇವರ ಗುಡಿ ಬ್ರಹ್ಮದೇವ, ಪಾರ್ಶ್ವನಾಥರ ಪ್ರಾಚೀನ ಮೂರ್ತಿಗಳನ್ನು ಹೊಂದಿದೆ. ೨೦ ಕೆತ್ತನೆಯ ಕಂಬಗಳನ್ನು ಹೊಂದಿರುವ ಬಸದಿಯ ಶಿಲ್ಪಕಲೆ ಉತ್ಕೃಷ್ಟವಾದುದಾಗಿದೆ. ಚಾಲುಕ್ಯರ ಪ್ರಸಿದ್ಧ ಅರಸ ಪುಲಿಕೇಶಿ ಮತ್ತು ಇಬ್ರಾಹಿಂ ಆದಿಲಶಾಹಿಯ ಕಾಲದಲ್ಲಿ ಜೀರ್ಣೋದ್ಧಾರವಾದುದಕ್ಕೆ ಶಿಲಾ ಶಾಸನಗಳಿವೆ. ಇಲ್ಲಿರುವ ಝರಿಗಳು, ವನೌಷಧಿ ಸಸ್ಯಗಳು ಈ ಪ್ರದೇಶವನ್ನು ಆಕರ್ಷಣೀಯವಾಗಿಸಿವೆ

ಬೆಳಗಾವಿಯಿಂದ – ೯೦ ಕಿ.ಮೀ.
ಚಿಕ್ಕೋಡಿಯಿಂದ – ೧೦ ಕಿ.ಮೀ.

ಶ್ರೀಕ್ಷೇತ್ರಪಾಲ ಬ್ರಹ್ಮದೇವ ದೇವಸ್ಥಾನ ಸ್ತವನಿಧಿ

ಶಾಂತಗಿರಿ ಕೋಥಳಿ

ಶ್ರೀ ದೇಶಭೂಷಣ ಜೈನ ಮುನಿಗಳ ಜನ್ಮಭೂಮಿಯಾದ ಕೋಥಳಿಯ ಶಾಂತಗಿರಿಯಲ್ಲಿ ೧೪೫ ಅಡಿ ಎತ್ತರದ ಬೆಟ್ಟದ ಮೇಲೆ, ಶಾಂತಿನಾಥರ ೨೧ ಅಡಿ ಎತ್ತರದ, ಶ್ರೀ ಚಂದ್ರಪ್ರಭಾ ಮತ್ತು ಮಹಾವೀರರ ೧೯ ಅಡಿ ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಆಧ್ಯಾತ್ಮಿಕ ಚಿಂತನೆ ಸಾರುವ ಶಾಂತ, ನಿಸರ್ಗ ಪ್ರದೇಶ ಶಾಂತಗಿರಿಗೆ ಅನ್ವರ್ಥಕವಾಗಿದೆ.

ಬೆಳಗಾವಿಯಿಂದ – ೯೨ ಕಿ.ಮೀ.
ಚಿಕ್ಕೋಡಿಯಿಂದ – ೨೨ ಕಿ.ಮೀ.

ಯಡೂರ

ಕೃಷ್ಣಾನದಿ ದಂಡೆಯ ಮೇಲಿರುವ ಪ್ರಾಚೀನ ವೀರಭದ್ರ ದೇವರ ದೇವಸ್ಥಾನವು ಸಾಂಸ್ಕೃತಿಕ, ಧಾರ್ಮಿಕ ಕೇಂದ್ರವಾಗಿದೆ.