Categories
e-ದಿನ

ಮೇ-23

ಪ್ರಮುಖಘಟನಾವಳಿಗಳು:

1533: ಹೆನ್ರೀ VIII ಮತ್ತು ಒರೆಗಾನ್ ರಾಜ್ಯದ ಕ್ಯಾಥರೀನ್ ಮದುವೆಯನ್ನು ಅನೂರ್ಜಿತಗೊಳಿಸಲಾಯಿತು.

1576: ಖಗೋಳಶಾಸ್ತ್ರಜ್ಞ ಟೈಕೋ ಬ್ರಾಹಿ ಅವರಿಗೆ ಹ್ವೀನ್ ದ್ವೀಪನ್ನು ಯುರೇನಿಬೋರ್ಗ್ ವೀಕ್ಷಣಾಲಯ ನಿರ್ಮಿಸಲು ನೀಡಲಾಯಿತು.

1785: ಬೆನ್ಜಾಮಿನ್ ಫ್ರಾಂಕ್ಲಿನ್ ತನ್ನ ಆವಿಷ್ಕಾರವಾದ ಬೈಫೋಕಲ್‌ಗಳನ್ನು ಪ್ರಕಟಿಸಿದ್ದರು.

1827: ಅಮೇರಿಕಾದ ಮೊದಲ ನರ್ಸರಿ ಶಾಲೆ ನ್ಯೂಯಾರ್ಕನಲ್ಲಿ ಸ್ಥಾಪಿಸಲಾಯಿತು.

1865: ಲಿಂಕನ್‌ನನ್ನು ಕೊಂದ ನಂತರ ವೈಟ್ ಹೌಸಿನ ಮೇಲೆ ಮತ್ತೆ ದ್ವಜವನ್ನು ಹಾರಿಸಲಾಯಿತು.

1873: ಅಂಚೆ ಕಾರ್ಡುಗಳನ್ನು ಎಸ್ ಎಫ್ ನಲ್ಲಿ ಮೊದಲ ಬಾರಿಗೆ ಮಾರಾಟ ಮಾಡಲಾಯಿತು.

1879: ಅಯೋವಾ ರಾಜ್ಯ ವಿಶ್ವವಿದ್ಯಾನಿಲಯವು ಮೊಟ್ಟ ಮೊದಲ ಅಮೇರಿಕಾದ ಪಶುವೈದ್ಯ ಶಾಲೆಯನ್ನು ಸ್ಥಾಪಿಸಲಾಯಿತು.

1882: ಪೂರ್ವ ಲೋವನಲ್ಲಿ 6 ಅಂಗುಲದಷ್ಟು ಹಿಮಪಾತವಾಗಿತ್ತು.

1900:  ಮುದ್ರಣ ಸುದ್ಧಿಸೇವೆಗಳ ಸಂಘ ನ್ಯೂಯಾರ್ಕ್‌ನಲ್ಲಿ ಆರಂಭವಾಯಿತು.

1901: ಒಟ್ಟಾವದಲ್ಲಿ ನಾಣ್ಯಗಳನ್ನು ಟಂಕಿಸುವ ಒಟ್ಟಾವ ಮಿಂಟ್ ಆಕ್ಟ್ ರಾಜಪ್ರಭುತ್ವದ ಅನುಮತಿ ಪಡೆಯಿತು.

1903: ಸ್ಯಾನ್ ಫ್ರಾನ್ಸಿಸ್ಕೋಯಿಂದ ನ್ಯೂಯಾರ್ಕಿಗೆ ಮೊದಲ ಮೋಟಾರ್ ವಾಹನದ ಪ್ರವಾಸ ಆರಂಭಗೊಂಡಿತು.

1907: ಫಿನ್ಲ್ಯಾಂಡಿನ ಏಕ ಚೇಂಬರ್ ಸಂಸತ್ತು ತನ್ನ ಮೊದಲ ಪೂರ್ಣಾವಧಿಯ ಅಧಿವೇಶನ ಸಮಾವೇಶಗೊಂಡಿತು.

1915: ಮೊದಲ ವಿಶ್ವಯುದ್ಧದ ಸಮಯದಲ್ಲಿ ಇಟಲಿ ಆಸ್ಟ್ರಿಯ ಮತ್ತು ಹಂಗೇರಿಯ ಮೇಲೆ ಯುದ್ದ ಘೋಷಿಸಿತು.

1918: ಕ್ಯೂರಾಕೋದಲ್ಲಿನ ತೈಲ ಶುದ್ದಿಕರಣ ಸಂಸ್ಕರಣಾಗಾರ ಅಧಿಕೃತವಾಗಿ ತೆರೆಯಲಾಯಿತು.

1922: ಡೇಲೈಟ್ ಸೇವಿಂಗ್ ಟೈಮ್ ಬಗ್ಗೆ ರೇಡಿಯೋದಲ್ಲಿ ಮೊದಲ ಸಾರ್ವಜನಿಕ ‍ಚರ್ಚೆ ನಡೆಸಲಾಯಿತು.

1939: ಹಿಟ್ಲರ್ ತಾನು ಪೋಲೆಂಡಿಗೆ ತೆರಳಲು ಬಯಸುತ್ತೇನೆಂದು ಘೋಷಿಸುತ್ತಾರೆ.

1958: ಚೀನಾದಲ್ಲಿ ಮಾವೋ ಝೆಡಾಂಗ್ ಗ್ರೇಟ್ ಲೀಪ್ ಫಾರ್ವರ್ಡ್ ಚಳುವಳಿಯನ್ನು ಆರಂಭಿಸಿದರು.

1964: ಡೆಲ್ ಗ್ರೆಗ್ ಮಹಿಳೆಯರ ಮ್ಯಾರಥಾನ್ ಓಟದಲ್ಲಿ (3:27:45) ಸಮಯದಲ್ಲಿ.ಓಟ ಪೂರೈಸುವ ಮೂಲಕ ವಿಶ್ವದಾಖಲೆ ಮಾಡುತ್ತಾರೆ.

1967: ಸರ್ಕಾರವು ದಕ್ಷಿಣ ಆಫ್ರಿಕಾದ ಬಳಿ ಜಲಾಂತರ್ಗಾಮಿಗಳ ಸಂಚಾರವನ್ನು ನಿಷೇದಿಸಿತು.

1981: ನಾಸಾ ಇಂಟೆಲ್ ಸಾಟ್-V ಉಪಗ್ರಹವನ್ನು ಹಾರಿಸಿತ್ತು.

1982: ಕಾಲಿನ್ ವಿಲ್ಸನ್ ಸರ್ಫ್ ಬೋರ್ಡ್ನಲ್ಲಿ 294 ಮೈಲಿಗಳು ಸವಾರಿ ಆರಂಭಿಸಿದರು.

2008: ಅಂತರಾಷ್ಟ್ರೀಯ ನ್ಯಾಯಾಲಯ ಮಿಡಲ್ ರಾಕ್ಸ್ ಪ್ರದೇಶವನ್ನು ಮಲೇಷಿಯಾಗೆ ಮತ್ತು ಪಡ್ರಾ ಬ್ರಂಕಾ ಪ್ರದೇಶವನ್ನು ಸಿಂಗಾಪುರಕ್ಕೆ ನೀಡಿ 29 ವರ್ಷಗಳ ಗಡಿ ವಿವಾದಕ್ಕೆ ತೆರೆ ಹಾಕಿತು.

1972: ಇಂದಿನ ಶ್ರೀಲಂಕಾ ದೇಶವು ಸಿಲೋನ್ ಎಂಬ ಹೆಸರಿಂದ ಶ್ರೀಲಂಕಾ ಎಂದು ಹೆಸರು ಬದಲಾವಣೆ ಮಾಡಿತು.

2016: ಬಾರ್ಲಿಯನ್ನು ಕ್ರಿ.ಪೂ 3400-2900ನಲ್ಲೆ ಬಿಯರ್ ಮಾಡಲು ಉಪಯೋಗಿಸುತ್ತಿದ್ದರು ಎಂದು ಚೀನಾದ ಪುರಾತತ್ವಜ್ಞರು ಘೋಷಿಸಿದರು.

ಪ್ರಮುಖಜನನ/ಮರಣ:

1937: ಉದ್ಯಮಿ ಜಾನ್ ಡಿ ರಾಕ್ ಫೆಲ್ಲರ್‍ ನಿಧನರಾದರು.

1707: ಆಧುನಿಕ ಜೈವಿಕ ವರ್ಗೀಕರಣ ವ್ಯವಸ್ಥೆಗಳ ತಂದೆ ಎಂದೇ ಪ್ರಖ್ಯಾತಿಯಾಗಿದ್ದ ಸಸ್ಯವಿಜ್ಞಾನಿ ಕಾರ್ಲ್ ಲಿನೇನಸ್ ಜನಿಸಿದರು.

1890: ಮೈಸೂರು ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞಾನದ ಮೊದಲನೇ ಅಧ್ಯಾಪಕರಾಗಿದ್ದ ಎ.ಎನ್.ನರಸಿಂಹಯ್ಯ ಜನಿಸಿದರು.