ಪ್ರಮುಖಘಟನಾವಳಿಗಳು:

 • 1498: ಕೊಲಂಬಸ್ ಆರು ಹಡಗುಗಳೊಂದಿಗೆ ಮೂರನೇ ಬಾರಿ ಅಮೇರಿಕಾದಪ್ರವಾಸ ಆರಂಭಿಸಿದರು.

 • 1527: ಜರ್ಮನಿಯಲ್ಲಿ ಮಾರ್ಬರ್ಗ್ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು.

 • 1539: ಸ್ಪೇನ್ ದೇಶದ ಪರಿಶೋಧಕ ಹೆರ್ನಾಡೋ ಡೆ ಸೋಟೋ ಫ್ಲೋರಿಡಾವನ್ನು ಕಂಡುಹಿಡಿದರು.

 • 1783: ಫಿಲಡೆಲ್ಫಿಯಾದ ಬೆನ್ಜಾಮಿನ್ ಟವರ್ ಮೊದಲ ದಿನಪತ್ರಿಕೆಯನ್ನು ಪ್ರಕಟಿಸಿತ್ತು,

 • 1848: ವಿಲ್ಲಿಯಂ ಜಿ ಯಂಗ್ ಐಸ್ಕ್ರೀಮ್ ಅನ್ನು ಗಟ್ಟಿ ಮಾಡುವ ಯಂತ್ರಕ್ಕೆ ಪೇಟೆಂಟ್ ಪಡೆದರು.

 • 1879: ಮೇ ತಿಂಗಳಲ್ಲಿ ಕ್ಲೀವ್ ಲ್ಯಾಂಡಿನಲ್ಲಿ 92o F ಉಶ್ಣಾಂಶವನ್ನು ದಾಖಲಿಸಲಾಗಿತ್ತು.

 • 1879: ಗಿಲ್ಮೋರ್ ಗಾರ್ಡನ್ ಅನ್ನು ಮೇಡಿಸನ್ ಸ್ಕ್ವೇರ್ ಗಾರ್ಡನ್ ಎಂದು ಮರು ನಾಮಕರಣ ಮಾಡಲಾಯಿತು.

 • 1889: ಸ್ತ್ರೀಯರ ಒಳ ಉಡುಪಾದ (Bra) ಸ್ತನಬಂಧವನ್ನು ರೂಪಿಸಲಾಯಿತು.

 • 1908: ಮೊದಲ ಸಂಯುಕ್ತ ರಾಷ್ಟ್ರದ ಕಾರ್ಮಿಕರ ಪರಿಹಾರ ಕಾನೂನು ಅಂಗೀಕರಿಸಲಾಗಿತ್ತು.

 • 1908: ಪ್ಯಾರೀಸಿನ ವಕೀಲರಾದ ಈ ಆರ್ಚ್ಡೆಕಾನ್ ವಿಮಾನದ ಮೊದಲ ಪ್ರಯಾಣಿಕರಾಗಿದ್ದರು.

 • 1933: ಅಗೋಚರ ಕನ್ನಡಿಯ ಅನುಸ್ಥಾಪನೆಗೆ ಪೇಟೆಂಟ್ ಪಡೆಯಲಾಗಿತ್ತು.

 • 1954: ಎಮಿಲಿ ಜಟೋಪೆಕ್ 5 ಸಾವಿರ ಮೈಲಿ ಓಟವನ್ನು 13 ನಿಮಿಷ 57 ಸೆಕೆಂಡಿನಲ್ಲಿ ಮುಗಿಸಿ ವಿಶ್ವದಾಖಲೆ ಮಾಡಿದರು.

 • 1962: ಭಾರತದ ಅಹಮದಾಬಾದಿನಲ್ಲಿ ಬಸ್ ಅಪಘಾತದಿಂದ 69 ಜನ ಮೃತಪಟ್ಟಿದ್ದರು.

 • 1975: ಯುರೋಪಿಯನ್ ಸ್ಪೇಸ್ ಏಜೆನ್ಸಿ ಆರಂಭವಾಯಿತು.

 • 1987: ಉತ್ತರ ಅಮೇರಿಕಾದ ಫಿಲಿಪ್ಸ್ ಸಂಸ್ಥೆಯು “ಕಾಂಪ್ಯಾಕ್ಟ್ ಡಿಸ್ಕ್” ವೀಡಿಯೋವನ್ನು ಬಿಡುಗಡೆ ಮಾಡಿತು.

 • 2012: ಭಾರತೀಯ ವಿಶ್ವನಾಥನ್ ಆನಂದ್ 5ನೇ ವಿಶ್ವ ಚೆಸ್ ಚಾಂಪಿಯನ್ ಪ್ರಶಸ್ತಿ ಗೆದ್ದರು.

ಪ್ರಮುಖಜನನ/ಮರಣ:

 • 1808: ವಲಸೆ ಬಂದ ಸ್ತ್ರೀಗಳ ಹಕ್ಕುಗಳ ಹೋರಾಟಗಾರ್ತಿ ಕಾರೋಲಿನ್ ಜೋನ್ಸ್ ಜನಿಸಿದರು.

 • 1814: ರಾಜಕೀಯ ಹೋರಾಟಗಾರ ಮತ್ತು ಲೇಖಕ ಮಿಖಾಯಿಲ್ ಬಕುನಿನ್ ಜನಿಸಿದರು.

 • 1907: ನುಡಿಸೇವಕ ಸಾಹಿತಿ ನರೆಗಲ್ಲ ಪ್ರಹ್ಲಾದರಾಯರು ಜನಿಸಿದರು.

 • 1934: ಬಾಹ್ಯಾಕಾಶಯಾನದಲ್ಲಿ 12 ನಿಮಿಷ ಬಾಹ್ಯಾಕಾಶದಲ್ಲಿ ನಡೆದ ಗಗನಯಾತ್ರಿ ಆಲೆಕ್ಸಿ ಲಿಯನೊವ್ ಜನಿಸಿದರು.