ಸಹೋದರರಿಗೆ ರಾಖಿ ಕಟ್ಟಿ ಆರತಿ ಮಾಡುವ ಕಾರ್ಯಕ್ರಮ

ರಕ್ಷಾಬಂಧನ

’ರಾಖಿ’ ಯ ಹಬ್ಬವು ಭಾರತೀಯ ಸಂಸ್ಕೃತಿಯ ಪರಸ್ಪರತೆಯ ಭಾವನೆಯ ಪ್ರತೀಕವಾಗಿದೆ. ಸಹೋದರಿಯರು ಸಹೋದರರ ಮುಂಗೈ ಮೇಲೆ ಕಟ್ಟುವ ರೇಷ್ಮೆ ಎಳೆಗಳಿಂದ ಮಾಡಿದ ಕಚ್ಚಾಧಾಗಾ ಯುಗ-ಯುಗದಲ್ಲಿಸಹೋದರ-ಸಹೋದರಿಯರ ಪವಿತ್ರ ಸಂಬಂಧ ಮತ್ತು ಸಂಪೂರ್ಣ ಮಾನವೀಯ ಸಂವೇದನೆಯನ್ನು ತೋರಿಸುತ್ತದೆ. ಸಾಮಾನ್ಯ ಜನರಲ್ಲಿ ಇದು ಸಾಂಸ್ಕೃತಿಕ ಉತ್ಸವವಾದರೆ, ಇದರ ಆಧ್ಯಾತ್ಮಿಕ ಮಹತ್ವವೂ ಇದೆ. ರಜಪೂತ ಸಾಮಾಜಿಕ ಜೀವನದಲ್ಲಿ ಮೌಲ್ಯಗಳ ರಕ್ಷಣೆಯ ಪ್ರತೀಕವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ರಾಖಿ ’ಹೊಣೆಗಾರಿಕೆ’ಯ ಮಹತ್ವವನ್ನು ಸಾರಿಹೇಳುತ್ತದೆ. ಸಹೋದರಿಯ ಬಗೆಗೆ ಸಹೋದರನಿಗಿರುವ ಜವಾಬ್ದಾರಿಯನ್ನು ಇದು ಜಾಗ್ರತಗೊಳಿಸುತ್ತದೆ. ಜೀವನ ಮೌಲ್ಯ ಮತ್ತುಆದರ್ಶಗಳಿಂದ ವ್ಯಕ್ತಿ ಹಾದಿ ತಪ್ಪುತ್ತಿರುವಾಗ, ಆಕಾಂಕ್ಷೆಗಳು ಹದ್ದು-ಬಸ್ತುಮೀರುತ್ತಿರುವಾಗ ರಾಖಿ ಸಂಯಮದ ಬೋಧನೆ ಮಾಡುತ್ತದೆ. ಕೆಟ್ಟ ನಡೆ-ನುಡಿಗಳಿಂದಾಗಿ ಜೀವನ ಜಟಿಲ ಮತ್ತು ಜರ್ಝರಿತ ಗೊಳ್ಳುತ್ತಿರುವಾಗ ರಾಖಿ ಜೀವನದ ಜವಾಬ್ದಾರಿಯನ್ನು ನೆನಪಿಸುತ್ತದೆ.

’ರಾಖಿ’ಯ ಭಾವಾರ್ಥ ’ಇಟ್ಟುಕೊಳ್ಳುವುದು’ ಅಂದರೆ ಪ್ರೇಮ ಭಾವ ಇಟ್ಟುಕೊಳ್ಳುವದು, ರಕ್ಷಣೆ ಮಾಡುವದು, ಕಾವಲು ಕಾಯುವದು. ರಾಖಿಯ ಸಂಬಂಧಕೇವಲ ದಾರದ ಪರಂಪರೆಯಲ್ಲ, ಪ್ರೀತಿಯ ಬಂಧನವಾಗಿದೆ. ಈ ಬಂಧನವು ಇಂದು ನಿನ್ನೆಯದಲ್ಲ,ಪುರಾಣಗಳಿಂದ ನಡೆದು ಬಂದುದಾಗಿದೆ. ಒಮ್ಮೆ ವಿಷ್ಣುವನ್ನು ಸಹ ಬಲಿ ಚಕ್ರವರ್ತಿ ಬಂಧಿಸಿದ್ದ. ವಿಷ್ಣುವಿನ ಪತ್ನಿ ಲಕ್ಷ್ಮಿ ರಾಜಾ ಬಲಿಯ ಮನೆಗೆ ಹೋಗಿ ಬಲಿಗೆ ರಾಖಿ ಕಟ್ಟಿ ತನ್ನ ಸಹೋದರಿ ಪ್ರೇಮ ತೋರಿಸಿದಳು. ಸಹೋದರಿಯ ಪ್ರೀತಿಗಾಗಿ ಬಲಿ ವಿಷ್ಣುವನ್ನು ಬಂಧನದಿಂದ ಬಿಡುಗಡೆ ಮಾಡಿದನೆಂಬ ಕತೆ ಪುರಾಣದಲ್ಲಿದೆ. ದೇವ ದೈತ್ಯರ ಯುದ್ಧದಲ್ಲಿ ದೇವರು ಸೋಲುತ್ತಿರುವಾಗ ಇಂದ್ರನ ಹೆಂಡತಿ ಶಚಿ ಇಂದ್ರನ ಕೈಯಲ್ಲಿ ರಕ್ಷಾ ಸೂತ್ರ ಕಟ್ಟಿದ್ದು ಪುರಾಣದಲ್ಲಿ ಮಹಾಸತಿ ಕುಂತಿಯ ರಕ್ಷಾಸೂತ್ರ ಅಭಿಮನ್ಯುವಿನ ಕೈಯಲ್ಲಿರುವ ವರೆಗೆ ಆತ ಅಜೇಯವಾಗಿ ಉಳಿದಿರುವ ಅಂಶ ಮಹಾಭಾರತದಲ್ಲಿ ಇದೆ.

ಸ್ತ್ರೀ-ಪುರುಷನ ಕೈಗೆ ಕಟ್ಟಿರುವ ದಾರದಲ್ಲಿ ಎಷ್ಟೊಂದು ಶಕ್ತಿ ಅಡಗಿದೆ. ಎಂಬುದರ ಜೊತೆಗೆಯೇ ನಮ್ಮ ಸಮಾಜದ ಮಹಿಳೆಗಿರುವ ಮಹತ್ವವನ್ನು ಸಹ ಈ ಹಬ್ಬವು ಸಾರಿ ಹೇಳುತ್ತದೆ. ಈ ದಾರದಲ್ಲಿ ಅವರ ಭಾವನೆ, ಸ್ನೇಹ ಶಕ್ತಿ ಇದ್ದು ಅದು ಪುರುಷನಿಗೆ ಎಷ್ಟೊಂದು ಉಪಯುಕ್ತವಾಗಿದೆ ಎಂಬುದನ್ನು ಈ ಹಬ್ಬ ತೋರಿಸುತ್ತದೆ.

ರಾಖಿ ಹಬ್ಬ ಮಹಿಳೆಯ ಮಂಗಲಮಯ ಭಾವನೆಗಳ ಚಮತ್ಕಾರವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯನ್ನು ಬಿಟ್ಟು ಭಾರತೀಯ ಸಂಸ್ಕೃತಿಯಲ್ಲಿ ಅಡಗಿರುವ ಶಕ್ತಿಯ ರಹಸ್ಯ ಅರಿಯುವ ಪ್ರಯತ್ನ ಮಾಡಬೇಕಾಗಿದೆ. ಇದರ ಜಾಗದಲ್ಲಿ ಹೆಣ್ಣು ಭ್ರೂಣ ಹತ್ಯೆಗಾಗಿ ವೈಜ್ಞಾನಿಕ, ತಾಂತ್ರಿಕ ಹಾದಿಯನ್ನು ಶೋಧಿಸುವ ಮೂಲಕ  ನಾವು ರಕ್ಷಾ ಬಂಧನ ಪರಂಪರೆಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ. ಇದು ಒಂದು ರೀತಿಯಲ್ಲಿ ಸಹೋದರಿಯರ ಅಸ್ತಿತ್ವವನ್ನು ನಾಶಗೊಳಿಸುವ ಕುತಂತ್ರವಾಗಿದೆ. ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಸಹೋದರರು ತಮ್ಮಚೈತನ್ಯವನ್ನು ಜಾಗ್ರತಗೊಳಿಸುವ ಮೂಲಕ ಸಹೋದರಿಯರ ರಕ್ಷಣೆಗೆ ಮುಂದಾಗಲೇಬೇಕಾಗುವುದು ಕಾಲದ ಕರೆಯಾಗಿದೆ.

ಜಾಗತೀಕರಣ ವಾಣಿಜ್ಯೀಕರಣದ ಭರಾಟೆಯಲ್ಲಿಯೂ ಪರಂಪರಾಗತ ರಾಖಿಯ ಬದಲಿಗೆ ನವೀನ ವಿನ್ಯಾಸದ ರಾಖಿಗಳು ಪೇಟೆಗೆ ಬರುತ್ತಿದ್ದು, ಇದರ ಮಹತ್ವ ಈಗಲೂ ಉಳಿದಿದೆ. ಪರಿವಾರಗಳು ಒಡೆಯುತ್ತಿರುವಾಗ, ಸಂಬಂಧಗಳು ತಮ್ಮ ಕೊಂಡಿ ಕಳಚಿಕೊಳ್ಳುತ್ತಿರುವಾಗ, ಸ್ನೇಹ ಮತ್ತು ಪ್ರೀತಿಯು ತೋರಿಕೆಯದಾಗಿ ಒತ್ತಾಯ ಪೂರ್ವಕವಾಗಿ ಪ್ರದರ್ಶಿಸುತ್ತಿರುವಾಗ, ರಾಖಿ-ರಕ್ಷಾಬಂಧನದಲ್ಲಿ ಅಡಗಿರುವ ಪ್ರೀತಿ ಮತ್ತು ತ್ಯಾಗದ ವಾಸ್ತವಿಕ ಅರ್ಥ ಜಾಗ್ರತಗೊಳಿಸುವ ಪ್ರಯತ್ನದಂಗವಾಗಿಯೇ ರಜಪೂತ ಸ್ತ್ರೀಯರು ಈ ಹಬ್ವವನ್ನು ವಿಶೇಷವಾಗಿ ಆಚರಿಸುತ್ತಾರೆ. ಸಹೋದರರಿಗೆ ಶುಭ ಕೋರುವದು, ಅವರಿಂದ ರಕ್ಷಣೆಯ ಅಭಯ ಪಡೆದುಕೊಳ್ಳುವದು ಹಬ್ಬಕ್ಕೆ ಮೆರಗು ತಂದುಕೊಟ್ಟಿದೆ. ರಾಖಿ ಹಬ್ಬ ರಜಪೂತ ಮಹಿಳೆಯರು ಕರ್ನಾಟಕಕ್ಕೆ ನೀಡಿದ ಕೊಡುಗೆಯಾಗಿದೆ. ಅದೀಗ ಸಾರ್ವತ್ರಿಕವಾಗುತ್ತಲಿರುವುದು.

***

ಮಹಾರಾಣ ಪ್ರತಾಪಸಿಂಹರ ಜಯಂತಿ

ಮೊಘಲ ಅರಸರೊಂದಿಗೆ ಜೀವನದುದ್ದಕ್ಕೂ ಹೋರಾಟ ಮಾಡಿದ, ಆತನಿಗೆ ಎಂದೂ ತಲೆಗಬಾಗದ ಅರಸನೆಂದರೆ ಮಹಾರಾಣಾ ಪ್ರತಾಪಸಿಂಹರು. ಭಾರತದ ಕ್ಷಾತ್ರತೇಜವೇ ಮೈದಾಳಿದಂತೆ ಶೌರ್ಯ, ಸಾಹಸ, ಪರಾಕ್ರಮ, ತ್ಯಾಗದ ಪ್ರತಿರೂಪದಂತೆ ಇವರು ಇತಿಹಾಸದಲ್ಲಿ ಕಂಗೊಳಿಸುತ್ತಾರೆ. “ಜನ್ಮಕೊಟ್ಟ ತಾಯಿ ಹಾಗೂ ತಾಯ್ನಾಡು ಸ್ವರ್ಗಕ್ಕಿಂತ ಮಿಗಿಲೆಂದು” ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಉಪದೇಶಿಸಿದ್ದರೆ, ಮಹಾರಾಣಾ ಪ್ರತಾಪಸಿಂಹ “ಸ್ವಾತಂತ್ರ‍್ಯ ಸುಖದ ಮುಂದೆ ಸ್ವರ್ಗ ಸುಖ ತೃಣ ಸಮಾನ” ಎಂದು ಹೇಳಿದ್ದಲ್ಲದೇ, ಸ್ವಾತಂತ್ರ‍್ಯಕ್ಕಾಗಿ ಸಾಯುವದು ಪರತಂತ್ರದಲ್ಲಿ ಜೀವಿಸುವುದಕ್ಕಿಂತ ಮೇಲು ಎಂಬುದನ್ನು ತನ್ನ ಆಚರಣೆಯಿಂದ ತೋರಿಸಿದ. ತ್ಯಾಗ. ಬಲಿದಾನ, ಕಷ್ಟ ಸಹಿಸುವುದು, ಹೋರಾಟಕ್ಕೆ ಸದಾ ಸಜ್ಜಾಗಿರುವದು ಸ್ವಾತಂತ್ರ‍್ಯಕ್ಕಾಗಿ ನೀಡಬೇಕಾದ ಬೆಲೆ ಎಂಬುದನ್ನು ತನ್ನ ಬದುಕಿನಿಂದ ಸಾಬೀತು ಪಡಿಸಿದ. ನಾಯಕನಾದವನು ಅಧಿಕಾರ ಬಲದಿಂದ ಜನರನ್ನಾಳದೇ ಜನರ ಮನಸ್ಸು ಗೆದ್ದು, ಅವರ ಭಾವನೆಗಳ ಮೇಲೆ ಅಧಿಕಾರ ನಡೆಸಿದ ಏಕೈಕ ದೊರೆ ಮಹಾರಾಣಾ ಪ್ರತಾಪಸಿಂಹ.

ಇಂಥ ಮಹಾನ್ ವ್ಯಕ್ತಿಯ ಜೀವನ ತಮಗೆ ಸ್ಫೂರ್ತಿದಾಯಕವೆಂದು ರಜಪೂತರ ನಂಬಿಕೆ. ಮೊದಲು ಮೇ ೧೯ರಂದು ಮಹಾರಾಣಾರ ಜನ್ಮದಿನ ಆಚರಿಸಲಾಗುತ್ತಿತ್ತು. ರಾಜಪೂತ ಮಹಾಸಭಾವ ನಿಣ್ಯದಂತೆ ಈಗ ಜೇಷ್ಠ ಮಾಸ ಶುಕ್ಲ ಪಕ್ಷ ಪ್ರತಿಪದದಂದು ಮಹಾರಾಣಾರ ಜಯಂತಿ ರಾಜ್ಯಾದ್ಯಂತ ಏಕಕಾಲಕ್ಕೆ ಆಚರಿಸಲಾಗುತ್ತದೆ. ಅಂದು ಬೆಳಿಗ್ಗೆ ಧ್ವಜಾರೋಹಣದ ನಂತರ ಮಧ್ಯಾಹ್ನ ಮಹಾರಾಣಾ ಪ್ರತಾಪಸಿಂಹರ ಭಾವಚಿತ್ರದ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ನಡೆಯುತ್ತದೆ. ಡೊಳ್ಳು, ಬಾಜಾ, ಭಜಂತ್ರಿ, ಹಾಡು,ಕುಣಿತ ನಡೆಯುತ್ತವೆ. ವಿಧಾಯಕ ಕೆಲಸ -ಕಾರ‍್ಯಗಳನ್ನು ನಡೆಸಲಾಗುತ್ತದೆ. ಪ್ರತಿ ಕುಟುಂಬದ ಹೆಣ್ಣು ಮಕ್ಕಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ, ತಮ್ಮ ವೀರ ಸಂಪ್ರದಾಯವನ್ನು ನೆನೆಸಿಕೊಳ್ಳುವರು.

***

ವಿಶೇಷ ಆಚರಣೆಗಳು (ನಂಬಿಕೆ)

ಮಾತಾ ಕೀ ರೋಟಿ:

ಸಮಾಜದ ಜನರೆಲ್ಲರಿಗೆ ಅನುಕೂಲವಾದಾಗೇ ಎಲ್ಲಾ ಮಾತಾ ಕಿ ರೋಟಿ (ದೇವರ ರೊಟ್ಟಿ) ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ರಜಪೂತರು ತಾವು ವಾಸಿಸುವ ನಗರ ಪಟ್ಟಣದ ಹೊರವಲಯದಲ್ಲಿರುವ ಹುಣಸೆ ಮರವನ್ನು ಪೂಜಿಸುವದು ಈ ಪದ್ಧತಿಯಲ್ಲಿನ ನಂಬಿಕೆಯಾಗಿದೆ. ಅಂದು ಬಹುತೇಕವಾಗಿ ಓಣಿಯಲ್ಲಿನ ಎಲ್ಲ ರಜಪೂತರೂ ಈ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಮತ್ತು ತಮ್ಮ ಬಂಧು-ಮಿತ್ರರನ್ನು ಆಮಂತ್ರಿಸುತ್ತಾರೆ.

ಪೂಜೆ ಮುನ್ನಾದಿನದಂದು ನಿಶ್ಚಿತ ಪ್ರದೇಶದಲ್ಲಿನ ಹುಣಸೀ ಮರದ ಬಳೆ ಕಟ್ಟಿ ಕಟ್ಟುತ್ತಾರೆ. ಪ್ರತಿಯೊಂದು ಮನೆತನದವರು ಇಲ್ಲವೆ ಕೆಲವು ಮನೆತನದವರು ಕೂಡಿಕೊಂಡು ದೇವಿಗೆ ಹೋತದ ಬಲಿ ಅರ್ಪಿಸಿ ಪೂಜಿಸುತ್ತಾರೆ.

ಊರಲ್ಲಿ ಬರಗಾಲವಿದ್ದಾಗ, ಕಾಲರಾ, ಪ್ರೇಗದಂತಹ ಕಾಯಿಲೆಗಳುಹರಡಿದಾಗ ಈ ಪೂಜೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ನಿಸರ್ಗ ಪೂಜೆಯ ಮೂಲಕ ಅದು ಮಾನವನ ಮೇಲೆ ಮುನಿಸಿಕೊಳ್ಳಬಾರದೆಂಬ ದೃಷ್ಟಿಯಿಂದ ಈ ಪೂಜೆ ಮಾಡಲಾಗುತ್ತದೆ. ಇದರ ಎಲ್ಲ ನಿರ್ವಹಣೆ ಮಹಿಳೆಯರೇ ಮಾಡುತ್ತಾರೆಂಬುದು ವಿಶೇಷ.

ಲಗ್ನವಾದ ನಂತರ ವರ್ಷದಲ್ಲಿ ಮಾಡುವ ಈ ಪೂಜೆಗೆ ಕೆಲವು ಕಡೆ ’ಬಗೀಚಾ’ ಎಂದೂ ಕರೆಯುವುದುಂಟು.

ಮನೆಯಮಗಳಿಗೆ ನಮಸ್ಕಾರ:

ರಜಪೂತರಲ್ಲಿ ಮನೆಯ ಮಗಳಿಗೆ ಸರ್ವೋತ್ತಮ ಸ್ಥಾನ ಕಲ್ಪಿಸುವ ಮೂಲಕ ಹೆಣ್ಣಿನ ಶ್ರೇಷ್ಠತೆಯನ್ನು ಎತ್ತಿಹಿಡಿಯಲಾಗಿದೆ. ಮನೆಯ ಮಗಳು ಎಷ್ಟೆ ಕಿರಿಯವಳಾದರೂ ಸಹ ಅವಳಿಗೆ ತಂದೆ, ತಾಯಿ ಅಣ್ಣ-ತಮ್ಮಂದಿರು ಕಾಲಿಗೆ ನಮಸ್ಕರಿಸಿ ಅವಳಿಂದ ಶುಭಾಶೀರ್ವಾದ ಪಡೆಯುವ ವಿಲಕ್ಷಣ ಪದ್ಧತಿಯಿದೆ. ಮಗಳಿಗೆ ಅಣ್ಣತಮ್ಮಂದಿರು ನಮಸ್ಕರಿಸುವದು ವಾಡಿಕೆಯಾದರೂ ಸಹ ತಂದೆ ತಾಯಿಯರೂಸಹ ನಮಸ್ಕರಿಸುವ ಪದ್ಧತಿ ರಜಪೂತರಲ್ಲಿ ಇನ್ನೂ ಚಾಲ್ತಿಯಲ್ಲಿದೆ.

ಅಕ್ಕ ತಂಗಿಯರಿಗೆ ನಮಸ್ಕರಿಸುವ ಪದ್ಧತಿಯಿಂದಾಗಿ ಗಂಡು ಮಕ್ಕಳಿಗೆ ಇತರೆ ಹೆಣ್ಣುಮಕ್ಕಳ ಬಗೆಗೂ ಸಹ ಗೌರವ, ಶ್ರದ್ಧೆ ಹುಟ್ಟುವದು ಸ್ವಾಭಾವಿಕವಾಗಿದೆ. ಮನೆಯಲ್ಲಿ ನಡೆಯುವ ಎಲ್ಲ ಶುಭ ಸಂದರ್ಭಗಳಲ್ಲಿ ಈ ಪದ್ಧತಿ ಪರಿಪಾಲಿಸಲಾಗುತ್ತಿದೆ. ಹೀಗಾಗಿ ಹೆಂಡತಿಯನ್ನು ಹರತುಪಡಿಸಿ ಇತರೆಲ್ಲಾ ಸ್ತ್ರೀಯರನ್ನು ಮಾತೃಭಾವನೆ ಸಹೋದರ ಭಾವನೆಯಿಂದ ಕಾಣಬೇಕೆಂಬ ಉದಾತ್ತ ದೃಷ್ಟಿಕೋನವು ತನ್ನಷ್ಟಕ್ಕೆ ತಾನೇ ಬೆಳೆದು ಬರುತ್ತದೆ. ಹೀಗೆ ಸಹೋದರಿಯರ ಜೊತೆಗೆಯೇ ಇತರೇ ಸ್ತ್ರೀಯರಿಗೂಸಹ ನಮಸ್ಕರಿಸುವ ಪರಿಪಾಠ ಬೆಳೆದಿದೆ. ಹುಟ್ಟಿದ ಸಣ್ಣ ಹೆಣ್ಣುಮಗುವಿದ್ದಾಗಿನಿಂದ ಹಿಡಿದು,ಅವಳು ಗಂಡನ ಮನೆಗೆ ಹೋದರೂ ಸಹ ಅವಳನ್ನು ನಮಸ್ಕರಿಸಿ ಬೀಳ್ಕೊಡುವ ಪದ್ಧತಿ ಇರುವುದರಿಂದ ಅವಳು ಕೊನೆಯ ವರೆಗೂ ಹುಟ್ಟಿದ ಮನೆಯೊಂದಿಗೆ ಭಾವನಾತ್ಮಕ ಸಂಬಂಧಮುಂದುವರೆಸಿಕೊಳ್ಳುವುದರ ಜೊತೆಗೆಯೇ, ತವರಿನಲ್ಲಿ ತನಗೆ ಗೌರವದ ಸ್ಥಾನವಿದೆಯೆಂದು ಭರವಸೆ ತಾಳಲು ಸಹಾಯಕವಾಗಿದೆ.

ಗೊಂದಲಹಾಕುವದು

ರಾಜ್ಯದಲ್ಲಿನ ರಜಪೂತರ ಕೆಲವು ಮನೆತನಗಳಲ್ಲಿ ಗೊಂದಲ ಹಾಕುವ ಪದ್ಧತಿ ಇದೆ. ಇದು ಸಾಮಾನ್ಯವಾಗಿ ದಸರಾ ಆಚರಣೆಯ ನವರಾತ್ರಿ ಉತ್ಸವದಲ್ಲಿ ನಡೆಯುತ್ತದೆ. ನವರಾತ್ರಿಯ ಒಂಭತ್ತು ದಿನಗಳ ವರೆಗೆ ದೇವಿ ಪೂಜೆ ನಡೆಸಿ, ಖಂಡೇ ಪೂಜೆಯ ದಿನದಂದು ಮುಂಧೇ ಹೋತದ ಬಲಿ ನೀಡಲಾಗುತ್ತದೆ. ಈ ದಿನದಂದು ಪೂಜೆ ಮಾಡಲು ಗೊಂದಲಿಗರಿಗೆ ಮತ್ತು ಜೋಗಮ್ಮರಿಗೆ ಕರೆಸಿಕೊಳ್ಳುವದು ವೈಶಿಷ್ಟ್ಯವಾಗಿದೆ. ಇದರ ಜೊತೆಗೆಯೇ ಸಂಜೆ ದೇವಿಗೆ ಮಾಡಿದ ಅಡಿಗೆಯ ನೈವೇದ್ಯ ಮಾಡುವುದಕ್ಕೆ ’ಮಾಜಗ’ ಎನ್ನುವರು. ಜೋಗಮ್ಮಗಳಿಗೆ ಹನ್ನೊಂದು ತಾಟುಗಳನ್ನಿಟ್ಟು ಪೂಜೆ ಮಾಡುತ್ತಾರೆ ಮತ್ತು ಇವುಗಳನ್ನು ಅವರಿಗೆ ಊಟಕ್ಕೆ ಕೊಡುತ್ತಾರೆ. ಐದು ಜನ ಮುತ್ತೈದೆಯರಿಗೆ ಉಡಿ ತುಂಬುತ್ತಾರೆ. ಆಗ ಮಹಿಳೆಯರು. ತಾವು ಸಹ ಪೂಜೆ ಮಾಡಿದ ನಂತರ ಉಪವಾಸ ವ್ರತ ಮುಗಿಸುತ್ತಾರೆ. ಊಟ ಮಾಡುತ್ತಾರೆ.

ಗೊಂದಲಿಗರು ದೇವಿಯನ್ನುಹೊರಗೆ ಕೂಡಿಸುತ್ತಾರೆ. ಬಾಳಿ ಗಿಡ ಮತ್ತು ಮಾವಿನ ಗಿಡದ ದಿಂಡು, ಎಲೆಗಳಿಂದ ಮಂಟಪ ಶೃಂಗರಿಸಿ, ಅದರಲ್ಲಿ ದೇವಿಯನ್ನಿರಿಸಿ ಸೀರೆ ಕುಪ್ಪಸ ದೇವಿಗೆ ಅರ್ಪಿಸಲಾಗುತ್ತದೆ. ಬೆಳಗಿನ ಜಾವ ನಾಲ್ಕು ಗಂಟೆಯ ವರೆಗೆ ದೇವಿಯ ಸುತ್ತಿಸಿ ಕಥೆ ಹೇಳಲಾಗುತ್ತದೆ. ಈ ಸಂದರ್ಭದಲ್ಲಿ ರಾತ್ರಿಯಿಡೀ ದೀಪದಲ್ಲಿ ಎಣ್ಣೆ ಹಾಕಿ, ಅದು ಸದಾಕಾಲ ಬೆಳಕು ನೀಡುವಂತೆ ಮಾಡುತ್ತಿರುವ ’ದೀವಟಿಗಿ ಮಾಮಾ’ ಬೆಳ್ಳಿಗೆ ನಾಲ್ಕು ಗಂಟೆಗೆ ಎಲ್ಲರನ್ನು ಕರೆಯುತ್ತೇನೆ ಆಗ ಪರಶುರಾಮನ ಜನ್ಮದಿನದಂಗವಾಗಿ ತೊಟ್ಟಿಲಲ್ಲಿ ಹಾಕುವ ಕಾರ್ಯಕ್ರಮ ನಡೆಯುತ್ತದೆ. ತೊಟ್ಟಿಲನ್ನು ಫಲ-ಪುಷ್ಪ, ಬಾಳೆ ಗಿಡ, ಮಾವಿನ ತಳಿರು ತೋರಣಗಳಿಂದ ಅಲಂಕರಿಸಲಾಗುತ್ತದೆ. ಗೊಂದಲಿಗರು ಮತ್ತು ಸಮಂಗಲೆಯರು ಜೋಗುಳ ಪದಗಳನ್ನು ಹಾಡುತ್ತಾರೆ. ಸೂರ್ಯೋದಯಕ್ಕೆ ಮೊದಲು ಪರಶುರಾಮನನ್ನು ತೊಟ್ಟಿಲಿಂದ ಹೊರತಂದು ಉತ್ತರ ದಿಕ್ಕಿಗೆ ಮುಖ ಮಾಡಿ, ಪೂಜೆ ಸಲ್ಲಿಸಿ ಬೀಳ್ಕೊಡುತ್ತಾರೆ. ಇದಾದ ನಂತರ ಗೊಂದಲಗರಿಗೆ ಕಾಣಿಕೆ ನೀಡಿ ಕಳಿಸಿಕೊಡಲಾಗುತ್ತದೆ.

***

ದೇವರ ಹಾಡುಗಳು

ನವಗ್ರಹ ಪೂಜೆ

ಗಣೇಶ ದೇವತ ಹೋ ತುಮ್ ಹೋ ನ್ಯೂವತೆ
ಆಜಿ ಹೋ ತುಮ್ ಹೋ ನ್ಯೂವತೆ
ತೀನ ಲೋಕ ಸೆ ಆಯೆ ಹೋ, ಪಟೋಲಿ ಕೈಚಡ ನ್ಯೂವತೆ ಲೇವ
ಲಕ್ಷ್ಮೀ ದೇವತ ಹೋ ತುಮ್ ಹೋ ನ್ಯೂವತೆ ಲೇವ
ಸೂರ್ಯ ದೇವತ ಹೋತುಮ್ ಹೋ ನ್ಯೂವತೆ ಲೇವ
ಚಂದ್ರ ದೇವತ ಹೋ ತುಮ್ ಹೋ ನ್ಯೂವತೆ ಲೇವ
ಚಂದ್ರ ದೇವತ ಹೋ ತುಮ್ ಹೋ ನ್ಯೂವತೆ ಲೇವ
ವಾಯು ದೇವತ ಹೋ ತುಮ್ ಹೋ ನ್ಯೂವತೆ ಲೇವ
ಅಗ್ನಿ ದೇವತ ಹೋ ತುಮ್ ಹೋ ನ್ಯೂವತೆ ಲೇವ
ವರುಣ ದೇವತ ಹೋ ತುಮ್ ಹೋ ನ್ಯೂವತೆ ಲೇವ
ಗುರು ದೇವತ ಹೋ ತುಮ್ ಹೋ ನ್ಯೂವತ ಲೇವ
ರಾಹು ದೇವತ ಹೋತುಮ್ ಹೋ ನ್ಯೂವತ ಲೇವ
ಕೇತು ದೇವತ ಹೋ ತುಮ್ ಹೋ ನ್ಯೂವತೆ ಲೇವ
ಪಿತೃ ದೇವತ ಹೋ ತುಮ್ ಹೋ ನ್ಯೂವತೆ ಲೇವ

* * *

ಗಣಪತಿ ಗಣೇಶ ಮನಾವೊ ಮೇರಿ ಜೋಲಾ ರಾಣಿ
ಗಣಪತಿ ಗಣೇಶ ಮನಾವೊ ಮೇರಿಜೋಲಾ ಆದೇ ಭವಾನಿ
ಕಯೇಕೊ ತೇರಾ ಭುವನ ಬನ್ಯೋ ಭುವನ ಬನ್ಯೋ ರೇ ಮಯ್ಯಾ
ಕಯೇಕೊ ತೇರಾ ಭುವನ ಬನ್ಯೋ ಭುವನ ಬನ್ಯೋ ರೇ ಮಯ್ಯಾ
ಕಾಹೇ ಲಗೇ ದರವಾಜೇ ಮೇರಿ ಜೋಲಾ ರಾನಿ
ಗಣಪತಿ
ಸರ್ವ ಸೋನೆಕೋ ತೇರಾ ಭುವನ ಬನ್ಯೋ ರೀ ಮಯ್ಯಾ ಬಾಗ ಬನ್ಯೋ ಹಯ
ಲಾಲಾ ಲಗೇ ದರವಾಜೇ ಮೇರಿ ಜೋಲಾ ರಾನಿ ||ಪ||
ಕಾಹೇ ಕೋ ತೇರೋ ಬಾಗ ಬನ್ಯೋ ಮಯ್ಯಾ ಬಾಗ ಬನ್ಯೋ ಹೈ
ಕಾಹೇ ಕೀ ಫುಲವಾಡಿ ಮೇರಿ ಜೋಲಾ ರಾನಿ ||ಪ||
ಹರಿನಾರಿಯಲಕೋ ತೇರೋ ಬಾಗ ಬನ್ಯೋರಿ ಮಯ್ಯಾ ಬಾಗ ಬನ್ಯೋ ಹೈ
ಚಂಪೇ ಕೀ ಫುಲವಾಡಿ ಮೇರಿ ಜೋಲಾ ರಾನಿ  ದೌನೆ ಮರವೇ ಕೀ
ಪುಲವಾಡಿ ಮೇರಿ ಆದೇ ಭವಾನಿ. ||ಪ||
ಕಾಹೇ ಕೋ ತೇರೋ ಮೂರ್ತಾ (ಮೂರ್ತಿ) ಬನ್ಯೋರಿ ಮಯ್ಯಾ ಮುರ್ತಾ ಬನ್ಯೋ
ಹೈ ಕಾಹೇ ನಾ ಛತ್ರ ಚಡಾವು ಮೇರಿ ಜೋಲಾ ರಾನಿ.. ||ಪ||
ಸರ್ವ ಸೋನಾಕಾ ತೇರೋ ಮೂರ್ತಾ ಬನ್ಯೋ ರೀ ಮಯ್ಯಾ ಮೂರ್ತಾ ಬನ್ಯೋ ಹೈ
ಮೋತಿಯನ ಛತ್ರ ಮೇರಿ ಜೋಲಾ ರಾನಿ ||ಪ||
ಸುವಾ ಸುವಾ ಚೋಲಿ ರೀ ಮಯ್ಯಾ ಅಂಗ ವಿರಾಜೇ
ಕೇಸರ ತಿಲಕ ಲಗಾವೂ ಮೇರಿ ಜೋಲಾ ರಾನಿ ||ಪ||
ಪುರವೇ ಸೋ ಹರಿಯಾ ಮಯ್ಯಾ ನೇವತಾ ಬುಲಾಯೇ
ಗೋದ ಬರೇ ತಿಲ ಮೇರಿ ಜೋಲಾ ರಾನಿ ||ಪ||
ದನ್ನುಭಗತ ಮಯ್ಯಾ ಸೇವಕ ವಾ
ವಿಮಲ ವಿಮಲ ಜಸ್ ಗಾಂವ್ ಮೇರಿ ಜೋಲಾ ರಾನಿ ||ಪ||

* * *

ಶೀಲ ಶಿವಾ ಪರ‍್ ಠಾಡಿ ಭವಾನಿ ದೇಖ ಭಕತನಕೀ ಹೋ
ಧರಂ ಶೀಲಾ ಪರ‍್ ಠಾಡಿ ಭವಾನಿ ರಾಹಾ ದೇಖ ಸಂತನಕೀ ಹೋ
ರಾಹಾ ದೇಖ ಭಕತನ ಕೀ ಹೋ ರಾಹಾ ದೇಖ ಸಂತನಕೀ ಹೋ ಶೀಲ ಶೀಲಾ ಪರ‍್…
ಪಹಲೇ ದರವಾಜೇ ನೌಬತ ಬಾಜೇ, ದುಸರೇ ಭೂಪಾ() ನಾಚೇ ಹೋ
ತಿಸರೆ ದರವಾಜೇ ಹೋಮ ರಛೋ ಹೈ ಚೌತೇ ದುರ್ಗಾ
ಆಯೀರೆ ಅಂಬೆ ಚೌತೆ ದುರ್ಗಾ ಆಯಿ ರೀ ಅಂಬೆ.
ಶೀಲ…
ಅಲವಲ ಕುಂಡಲ ಅಜಭ ಬನ್ಯೋ ಹೈ ಗೌಮುಖ ಗಂಗಾ ನಹಾಯೀ ಹೋ
ದೀಪ ಮಹೇಶ್ವರ ಅಜಭ ಬನ್ಯೋ ಹೈ ಜೋತ ಜಗವೆ ಭಾರಿ ರೇ
ಅಂಬೆ ಜೋತ ಜಗವೇ ಭಾರಿ ಹೋ
ಶೀಲ…
ಸಾಡಿ ಜೋ ಪೇಹರಿ ಸಬ್ ಜರತಾರಿ ಶೀರಪರ ಮುಖುಟ ಭಾರಿ ಹೋ
ಗಲೆ ಮೋತಿಯನ್ ಕೋ ಹಾರ ವಿರಾಜೇ ನಾಕಮೆ ನತನಿ ಭಾರಿ ರೇ
ಅಂಬೆ ನಾಕಮೆ ನತನಿ ಭಾರಿ ಹೋ, ಶಿಲ…
ಸೀದೆ ಹಾಥ್ ತೇರೆ ಶೂಲ ವಿರಾಜೆ ಹಾತಮೇ ಖಪ್ಪರ ಹೋ
ಹಾಸನ ಮೋಡ ಸಿಂಹಾಸನ ಬೈಠಿ ಮೈರಾವಣ ಕು ಮಾರಿರೀ ಅಂಬೆ ಮೈರಾವಣ ಕುಮಾರಿ ಹೋ
ಶೀಲ ಶೀಲಾಪರ….

* * *

ಕಹಾ ತುಮಾರಾ ಜನ್ಮಭಯೋ ಹೈ ಕಹಾ ತುಮಾರಾ ಠಾನಾ ರೆ
ಕಹಾ ಹೋಮ ರಛೋ ಹೈ ಕಹಾ ಚಡೆ ಬಲಿವಾನಾ ರೆ
ರಾಮಾ ಕಹಾ ಚಡೆ ಬಲಿವಾನಾ ರೆ
ಜೈ ಜಂತ್ರಿ ದೇವಿ..
ಇಂಗ ಲಾಜ ಮೇ ಹೋಮ ರಛೊ ಹೈ ವಿಂದ್ಯಾ ಚಲವೇ ಠಾನಾ ರೆ
ವಹ ಹಮಾರಿಹೋಮ ರಛೋ ಹೈ ವಹ ಚಡೆ ಬಲಿವಾನಾ ರೆ
ರಾಮಾ ಚಡೆ ಬಲಿವಾನಾ ರೇ.

* * *

ಖುಲೇ ಖುಲೇ ಭವಾನಿ ತೇರಾ ಕೇವಡಾ ಖುಲೇ ಜಗದಂಭೇ ತೇರಾ
ಕೇವಡಾ
ಪುಲ್ ಖುಲೇ ಪುಲಾವಾರಿ ಖುಲೇ ಖುಲೇ ಕಚುನಾರ||೨||,
ಏ ಕೇವಡೆ ಕೆ ದಯಾಲ ಅಂಬೇ ದಯಾಲ
ಖುಲೇ ಖೂಲೇ

* * *

ಜೋಗಿ ನಾಹೊಂಗಿ ಭವಾನ ಮೈ ತುಮಪರ ಜೋಗಿ ನಾ ಹೊಂಗಿ ಮೈ
ತುಮಪರ
ಮಾತಾಜೀ ಕೆ ಹಾತಮೇ ಚಂದನ ಖಟೋರಿಯಾ ದೇವಿಜಿ ಕೇ ಹಾತಮೇ
ಚಂದನ ಖಟೋರಿಯಾ ಘರ ಘರ ತಿಲಕ ಲಗಾಂವೊಗಿ ಮೈ ತುಮಪರ
ಜೋಗಿ ನ ಹೋಂಗಿ ಭವಾನಿ

* * *

ಬೊಲೋ ಭೈಯ್ಯಾ ಮುಖ ಸೇ ರಾಮ ರಾಮ
ತುಮ್ ಬೋಲೋ ಸಾಧು ಮುಖಸೇ ರಾಮ ರಾಮ
ರಾಮ ಬೈನೆ ಬಾನ ಚಡಾಯಿ, ಬಂದೂಕ ಪೇ ಹೈ ಪಾಂವ್
ಐಸೇ ಮೇ ರಾಮ ಹೈ, ವೈಸೇಮೀಠೆ ರಾಮ
ತುಮ್ ಬೋಲೋ ಮುಖ ಸೇ ರಾಮ ರಾಮ
ಹರೆ ಚಿರಂಚಿ ಖೋಪರಾರೇ, ಕಸಕಸ ಹೈಬದಾಮ
ಬಿನದಂಡಿ, ಬಿನ ತಕಡಿ ಕೀ ತೋಲೇ ಸಬ್ ಸಂಸಾರ
ತುಮ್ ಬೋಲೊ ಮುಖಸೇ ರಾಮ ರಾಮ
(ಜಗತ್ತಿನ ಎಲ್ಲ ಆಗು ಹೋಗುಗಳಿಗೆ ಶ್ರೀ ರಾಮನೇ ಕಾರಣಕರ್ತನೆಂಬ ಅರ್ಥ)

* * *

ರತನಲಗೆ ಜಿ ಬಿಯಾ ಹರಿಭಗವಾನ ತರನಲಗೆ ಜಿ ಬಿಯಾ
ನೈನಾ ಕಹೇ ಹಮ್, ಸುನೇಂಗೆ ಪೂರಣ
ಸಬ್ ಕುಛ ದೇಖೆ ರಾಮ ರತನಲಗೆ ಜಿ ಬಿಯಾ
ಜಿಬ್ ಕಹೀ ಹಮ್ ಅಮೃತ ಖಾಯೆ ಹಮ್
ದಾಂತಾ ಕಹೇ ಹಮ್ ಚಾಬೇಗೆ ಬೀಡಾ
ರತನ ಲಗೆಜಿ ಬಿಯಾ ಹರಿ ಭಗವಾನ, ರತನಲಗೆ ಜಿ ಬಿಯಾ
ಪಾವ ಖಾಯೆ ಹಮ್ ಸಬ್ ತೀರದ ಜಾಯೆ
ಹಾಂಥ ಖಾಯೆ ಹಮ್ ದೀಯೆಂಗೆ ದಾನ
ರತನ ಲಗೆಜಿ ಬಿಯಾ ಹರಿಭಗವಾನ, ರತನ ಲಗೆ ಜಿ ಬಿಯಾ
ಕೈತಕ ಬೀಕ ಹೈ ಸುನೋ ಸಾಧುರಾಮ
ಮನ ಮೇ ರಖೇಂಗೆ ಭಗವಾನ ಧ್ಯಾನ
ರತನ ಲಗೆ ಜಿ ಬಿಯಾ ಹರಿಭಗವಾನ, ತರನಲಗೆ ಜಿ ಬಿಯಾ

* * *

ತೊಟ್ಟಿಲ ಹಾಡು
ಝೂಲಾವೋರಿ ಮಾಯಿ ಶ್ಯಾಮಸುಂದರ ಪಾಲನ
ಹಂಗರೆ ಚಂದನ ಕಾ ಗವಾರಾ ಬನಾ ಹೈ
ರೇಶಮ್ ಕೇ ತೇರೆ ಬಿಛೋನೆ ಬನಾ ಹೈ, ಕುತನಿಕೆ ತಕಿಯೆ
ಝೂಲಾವೋರಿ ಮಾಹಿ ಶ್ಯಾಮಸುಂದರ ಪಾಲನ
ಕಾಯಕಾ ತೇರಿ ಖೇಲ ಖಿಲೋನೆ
ಕಾಯಕೇ ಝನ-ಝನೆ ವಿರಾಮ ರಾಜೆ ಝಂಝನೆ
ಝೂಲಾವೋರಿ ಮಾಯಿ ಶ್ಯಾಮಸುಂದರ ಪಾಲನ
ಸುನ್ನೇ ಕಾ ತೇರಾ ಖಿಲೋನಾ ಬನಾರೇ, ರೋಪಕಾ ಝಂಝನೆ
ಝೂಲಾವೋರಿ ಮಾಯಿ ಶ್ಯಾಮಸುಂದರ ಪಾಲನ
ಅಡೋಸನ ಪಡೋಸನ ಕಿ ನಜರ ನಲಗಿ ಹೈ
ರೋವನ ಲಗೆ ಲಲನ ನಯೆ
ರಾಯಿ ನೂನ ಉತಾರಿತ ಶೋಧ, ಖೇಲನೆಲಗೆ ಲಲನ
ಝೂಲಾವೋರಿ ಮಾಯಿ ಶ್ಯಾಮಸುಂದರ ಪಾಲನ

* * *

ದೇವ ಪ್ರೀತ್ಯರ್ಥ ಆಹ್ವಾನದ ಹಾಡು
ಗಣೇಶ ದೇವತಾ ಹೋ ತುಮ್ ಬಿನ್ ನೇವತಾ ತಿನ ದಿವಸ ಚಲೇ ಅಓ
ಬಾಲಾಜಿ ದೇವತಾ ಹೋ ತುಮ್ ಬಿನ್ ನೇವತಾ ತಿನ ದಿವಸ ಚಲೇ ಆಓ
ಪಿತ್ರದೇವತಾ ಹೋ ತುಮ್ ಬಿನ್ ನೇವತಾ ತಿನ ದಿವಸ ಚಲೇ ಆಓ
ಚಾಡಿ ಚುಗಲಿ ಹೋ ತುಮ್ ಚಲೇ ಜಾವೋ

* * *

ತೇಲ ಚಡಾನಾ ಹಾಡು/ಹಲದಿ
ಮೇಘಾ ಗರಜನ ಲಾಗೇ ಮೇಘಾ ಗರಜನ ಲಾಗೇ
ಲಾಲಚಂದುಲ ತಾನೆ ಮೇರಿ ಕೌನ ಸುಹಾಗಿಲ ಮೇರಿ ಶೋಭಾ ಸುಹಾಗಿಲ
ದುಲಹನ ಕೋ ತೇಲ ಚಡಾವೊ
ಚಾವಲ ಚಡೆ ಹೈ ಚಂಬೇಲಿ ಉಪರ ವಾರಸಿಯಾ
ದುಲಹನ ತೇರಿ ಬಹನ ರಾನಿ ತೋ ಬೊಲೆ ದರ ಆರತಿಯಾ.
ಕನ್ಯಾದಾನ ಮಾಡುವಾಗ ಹಾಡುವ ಹಾಡು
ಬಿಜ ಬಿಚ ಗಂಗಾ ಬಿಚ ಬಿಚ ಜಮುನಾ ಬೈಠಿ ಹುಂ.
ಕುಲಿಯಾ ಬೀ ಛೋಡಿ ಖಿಲೋನೆ ಭೀ ಛೋಡಿ ಪಕಡೆ ಮಾಯನ ಗೋದ
ದಾನ ದೇಬಾಬಾ ದಾನ ದೇ… ದಾನ ದೇ ಭಯ್ಯ ದಾನ ದೇ
ಮಸಾಲಿ ಹಚ್ಚಿ ಎರೆಯುವಾಗ
ನಬಿ ನಬಿ ಬೋಲೋ ಎ ಹಲ್ಢಿ ಉಡಾವೋ ಮಾ
ಎ ಹಲ್ಡಿಪರ ದರಿ ಮಂಡಲ ಬಜಾವೋ ಮಾ
ಅ ಮನೆ-ಸಮನೆ ದೋ ಮಜಲೀಸ ಬಿತಾವೋ ಮಾ
ಚಾಂದ-ಸೂರಜ ದೋ ಮೈ ತಾಬ ಲಗಾವೋ ಮಾ
ಮದುವೆ ಹಂದರಲ್ಲಿ
ಹರ-ಹರ ಭಾ ಸೊಂಕಾ ಮಂಡವಾ ಛವಾಯೆ
ಅಬ್ ಆವೋ ಕೀ ಢಾಲಿ ಬಂಧಾಯಿ ಹೋ ಮಾ
ಗೋವೋ ಕಾ ಗೋಬರ ಕಲಶ ಚಿತಾಯೆ
ಅಬ್ ಆವೋ ಕಿ ಢಾಲಿ ಗಡಾಯೆ ಹೋ ಮಾ
ಅಬ್ ನಗ ಬೇಲ ಬಂದ ಛುಡಾಯಿ ಹೋ ಮಾ
ಅಬ್ ಸೋನೆ ಕಾ ಕಲಶ ಗಡಾಯೆ ಹೋ ಮಾ

(ಮೊದಲು ಡಂಬುಗಳನ್ನು ಕಟ್ಟಿ ಮದುವೆ ಮಂಟಪ ಹಾಕಿ ಅದಕ್ಕೆ ಮಾವಿನ ಮರದ ಟೊಂಗೆ ಯನ್ನು ಕಟ್ಟಿ, ಆಕಳ ಸೆಗಣಿಯಿಂದ ಮಣ್ಣಿನ ಮಡಿಕೆಯನ್ನು ಶೃಂಗರಿಸಿ, ಅದರಲ್ಲಿ ಜವೆ ಗೋಧಿಯನ್ನು ಚುಚ್ಚಿ, ಬಂಗಾರದ ಕಳಸವನ್ನಾಗಿ ಪರಿವರ್ತಿಸುವಾಗ ಹಾಡುವದು)

ಚೌಕ ತುಂಬುವಾಗ..
ಚೌಕ ಮೈ ಭರೂಂಗಿ ಈ ಲಾಚಿ ನಕಸ ಅಗೆ ಮಾ ಯೇ ಚೌಕಿ ಪರ ಬೈಠೋ ಬಾಲಾಜಿ ರೆ ಹಂಸ
ಚೌಕ ಮೈ ಭರೂಂಗಿ ಜಾಯಿಪಲ್ ನಕಸ ಅಗೆ ಮಾ ಯೇ ಚೌಕಿಪರ
ಬೈಠೋ ಬಾಲಾಜಿ ಕಿ ಹಂಸ
ಭೌರಿಯ ಹಾಡು
ಏಕಚ ಭಾಂವರ ಜ್ಯೋತಿರೇ ಆಯೇ ಆಬತೋ ಆಜಾ(ದಾದಾ) ಕೀ ಪೊತರಿ ಕಹಾಯೇ
ದುಸರಿ ಭಾಂವರ ಜ್ಯೋತಿರೇ ಆಯೇ ಆಬತೋ ಬಾಬಾ ಕಿ ಬೇಟಿ
ಕಹಾಯೇ
ತಿಸರಿ ಭಾಂವರ ಜ್ಯೋತಿರೇ ಆಯೇ ಅಬತೋ ನಾನಾ ಕಿ ನಾತಿನ ಕಹಾಯೇ

* * *

ಇಂದಿನ ರಜಪೂತ ಕುಲದ ಯಶಸ್ವೀ ಮಹಿಳೆಯರು

ಯಾವುದೇ ಒಂದು ಜನಾಂಗದ ಸಂಸ್ಕೃತಿಗೆ, ನಾಗರಿಕತೆಯ ಶ್ರೇಷ್ಠತೆಗೆ, ಅದರ ಔನ್ನತ್ಯಕ್ಕೆ ಅದರ ಸ್ತ್ರೀವರ್ಗದ ಹಿರಿಮೆ ಗರಿಮೆಗಳೇ ಅಳತೆಗೋಲು. ರಜಪೂತ ಮಹಿಳೆಯರಲ್ಲಿ ವೀರನಾರಿಯಾಗಿ, ದಕ್ಷ ಆಡಳಿತ ನಿರ್ವಹಣಾ ತಜ್ಞೆಯಾಗಿ ರಾಜ್ಯವಾಳಿದ ರಾಣಿ ದುರ್ಗಾಬಾಯಿ, ತಾರಾಬಾಯಿ, ಅಕ್ಕಾದೇವಿ, ಪ್ರಾಣಕ್ಕಿಂತ ಮಾನವೇ ಶ್ರೇಷ್ಠವೆಂದು ತಿಳಿದ ಅಲೌಕಿನ ಸೌಂದರ್ಯದ ಖನಿ ರಾಣಿ ಪದ್ಮಿನಿಸದಾಕಾಲ ನೆನಪಿನಲ್ಲಿಡುವಂತವರು. ಆಧ್ಯಾತ್ಮ ಕ್ಷೇತ್ರದಲ್ಲಿ ಕೃಷ್ಣ ಭಕ್ತಿಯಲ್ಲಿ ಲೀನಳಾದ ’ಕಲಿಯುಗದ ರಾಧೆ’ ಮೀರಾಬಾಯಿ ಮಿಂಚಿದರೆ, ಮೇವಾಡದ ಯುವರಾಜನ ಪ್ರಾಣ ರಕ್ಷಣೆಗಾಗಿ ತನ್ನ ಮಗನನ್ನೇ ಬಲಿಕೊಟ್ಟ ದಾಸಿ ಪನ್ನಾ ತಾಯಿ ತ್ಯಾಗದ ಮೂರ್ತಿಯಾಗಿ ಇತಿಹಾಸದ ಪುಟಗಳಲ್ಲಿ ಮಿಂಚಿದ ಕೆಲ ಪ್ರಸಿದ್ಧ ಮಹಿಳಾ ಮುಕುಟ ಮಣಿಗಳು. ಅಂದಿನ ಪರಿಸ್ಥಿತಿ ಇಂದಿಲ್ಲ.

ಕರ್ನಾಟಕದಲ್ಲಿ ರಜಪೂತ ಮಹಿಳೆಯರು ಇಂದು ಹೇಗೆ ಬದುಕುತ್ತಿದ್ದಾರೆಂಬ ಬಗೆಗೆ ಈವರೆಗೆ ಬೆಳಕು ಚೆಲ್ಲುವ ಕೆಲಸ ನಡೆದಿಲ್ಲ. ಈ ಹಿನ್ನಲೆಯಲ್ಲಿ ನಮಗೆ ಮಾಹಿತಿ ದೊರೆತವರ ಬಗೆಗೆ ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರಿನ ಡಿ.ಕೆ. ಸರೋಜಾಬಾಯಿ ಸ್ವಾತಂತ್ರ‍್ಯ ಹೋರಾಟಗಾರರು ಸಮಾಜ ಸೇವಕಿಯಾಗಿರುವ ಅವರು ಮದರ ಥೇರೇಸಾ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದಾರೆ. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಸದಸ್ಯರಾಗಿ, ಐ.ಎನ್.ಟಿ.ಓ.ಸಿ ಸಂಘಟನಾ ಕಾರ್ಯದರ್ಶಿಯಾಗಿ, ಭಾರತೀಯ ಮೈತ್ರಿ ದಳದ ಸಹ ಕಾರ್ಯದರ್ಶಿಯಾಗಿಯೂ ಸಹ ಕೆಲಸ ಮಾಡುತ್ತಿದ್ದಾರೆ.

ರಾಜಕೀಯ ಕ್ಷೇತ್ರದಲ್ಲಿ ಹುಬ್ಬಳ್ಳಿ ಧಾರವಾಡದ ಮೇಯರ ಆಗಿ ಕೆಲಸ ಮಾಡಿರುವ ಮಂಗಳಗೌರಿ ಅಗ್ನಿಹೋತ್ರಿ ಪ್ರಮುಖರು. ಶ್ರೀರಂಗಪಟ್ಟಣ ಪರುಸಭಾ ಸದಸ್ಯರಾಗಿ ಶಾಂತಾಬಾಯಿ ಲಕ್ಷ್ಮಣಸಿಂಗ ಕೆಲಸ ಮಾಡಿರುವರು. ಗ್ರಾಮ ಪಂಚಾಯ್ತಿ ಸದಸ್ಯರಾಗಿ ಹಲವಾರು ಜನರು ಆಯ್ಕೆಯಾಗಿರುವದು ಗಮನಾರ್ಹ ಸಂಗತಿಯಾಗಿದೆ. ಇದು ಶೇ. ೩೩ರ ಮಹಿಳಾ ಮೀಸಲಾತಿಯ ಪ್ರಭಾವ.

ಹಾಸನ ಜಿಲ್ಲೆಯ ಅರಸೀಕೆರೆಯ ಪ್ರೇಮಕುಮಾರಿ ಮೈಸೂರ ವಿಶ್ವವಿದ್ಯಾಲಯದಲ್ಲಿ ಎಂ.ಎಸ್.ಸಿ.ದ್ವಿತೀಯ ರ‍್ಯಾಂಕ್‌ಗಳಿಸಿ, ನಂತರ ೧೯೮೦ರಲ್ಲಿ ಪುಣೆ ವಿಶ್ವವಿದ್ಯಾಲಯದಿಂದ ಔಷಧ ಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದ ಮೊಟ್ಟ ಮೊದಲ ಮಹಿಳೆ. ಮಯಸೂರಿನ ಬಯೋಟೆಕ್‌ದಲ್ಲಿ ಡಾಕ್ಟರೇಟ್ ಪಡೆದು ಲ್ಯಾಂಡಲ್ಯಾಬ್‌ದಲ್ಲಿ ಮ್ಯಾನೇಜಿಂಗ್ ಡೈರೆಕ್ಟರ ಆಗಿ ಕೆಲಸ ಮಾಡುತ್ತಿರುವ ಡಾ|| ಗೀತಾ ಸಿಂಗ, ಬಿಜಾಪೂರದ ತಾಳಿಕೋಟೆಯಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿರುವ ಡಾ. ಶೋಭಾ ಪಟಪಟೆ, ಡಂಟಲ್ ವೈದ್ಯರಾಗಿರುವ ಗದುಗಿನ ಸುನೀತಾ ಜನಕರಾಜಸಿಂಗ ಬ್ಯಾಳಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ರಾಗಿರುವ ಅನಸೂಯಾ ವಿಶ್ವನಾಥಸಿಂಗ್, ಬೆಂಗಳೂರಿನ ಪೊಲೀಸ ಮಹಾನಿರ್ದೇಶಕರ ಕಚೇರಿಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿರುವ ಅನಸೂಯಾ ಬಾಯಿ, ಗುಲಬರ್ಗಾದ ’ಚಿಂತಕ’ ದಿನ ಪತ್ರಿಕೆ ಸಂಪಾದಕೀಯಾಗಿರುವ ಶಾರದಾಬಾಯಿ ಬ್ಯಾಳಿ, ಎಮ್. ಫಿಲ್ ಪದವಿ ಪಡೆದಿರುವ ಭಾರತಿ ಬ್ಯಾಳಿ ಕೆಲ ಯಶಸ್ವಿ ಮಹಿಳೆಯರು.

ಸಮಾಜ ಸೇವೆಯಲ್ಲಿ ಮೈಸೂರಿನ ವಿಮಲಾಬಾಯಿ ಗೋಪಾಲಸಿಂಗರಿಗೆ ಹಾಗೂ ಅನಾಥ, ನಿರ್ಗತಿಕರ ಸಂಸ್ಥೆ ನಡೆಸುತ್ತಿರುವ ಗದುಗಿನ ಸುಗಂಧಾ ಶಂಕರಸಿಂಗ ರಜಪೂತರಿಗೆ ರಾಜ್ಯ ಮಟ್ಟದ ಪುರಸ್ಕಾರ ದೊರೆತಿದೆ. ಚಿತ್ರದುರ್ಗದಲ್ಲಿ ಬ್ಯೂಟಿ ಪಾರ್ಲರ ನಡೆಸುತ್ತಿರುವ ಬಿ.ಆರ‍್. ವಿಜಯಲಕ್ಷ್ಮಿಯವರಿಗೆ ಯಶಸ್ವಿ ಮಹಿಳಾ ಉದ್ಯಮಿಯೆಂದು ಗುರುತಿಸಿದ ನಬಾರ್ಡ ಸಂಸ್ಥೆ ರಾಷ್ಟ್ರಪತಿ ಅಬ್ದುಲ ಕಲಾಂರೊಂದಿಗಿನ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿತ್ತು.

ಸಾಫ್ಟವೇರ‍್ ಇಂಜಿನಿಯರ‍್ ಆಗಿರುವ ಗದುಗಿನ ಕುಮಾರಿ ವನಿತಾ ಜಗನ್ನಾಥಸಿಂಗ ಜಮಾದಾರ ಚೀನಾ, ಅಮೇರಿಕೆಗೆ ಹೋಗಿ ಬಂದಿರುವ ಮೊದಲ ರಜಪೂತ ಯುವತಿ. ಮೈಸೂರಿನ ವಿಜಯಲಕ್ಷ್ಮಿಸಿಂಗ ಹಾಗೂ ಉಷಾಸಿಂಗ ಗುಲಬರ್ಗಾದ ಅನಿತಾ ಪ್ರತಾಪಸಿಂಗ ಕ್ರೀಡಾಲೋಕದ ಪ್ರತಿಭಾವಂತರು. ಧಾರವಾಡದ ಕವಿಯತ್ರಿ ಸುಮಿತ್ರಾ ಹಲವಾಯಿ, ಕೊಪ್ಪಳದ ಶಾರದಾ ಶ್ರಾವಣಸಿಂಗ ರಜಪೂತ, ಬಿಜಾಪೂರದ ಸುರೇಖಾ ಸುನೀಲಸಿಂಗ ಧಡೇಕರ, ಗದಗಿನ ಮಂಜು ಶಂಕರ ಸಿಂಗ ರಜಪೂತ ಸ್ನಾತಕೋತ್ತರ ಪದವಿಧರೆಯಾದರೆ ಗದುಗಿನ ವಿದ್ಯಾ ತುಕಾರಮಸಿಂಗ ಜಮದಾರ ಎಂ. ಬಿ.ಎ ಪದವೀಧರೆ. ಬಿಜಾಪೂರದವರೇ ಆದ ಅನಿತಾ ಪ್ರತಾಪಸಿಂಗ ಧಡೇಕರ ಬ್ಯಾಂಕದಲ್ಲಿ, ಬಾಗಲಕೋಟೆಯ ಉಷಾ ಸುಧೀರಸಿಂಗ ಧಡೇಕರ ಆಹಾರ ನಿರೀಕ್ಷಕರಾಗಿ, ಗದುಗಿನ ಪ್ರತಿಭಾ ಜನಕರಾಜಸಿಂಗ ಬ್ಯಾಳಿ ಅಂಚೆ ಇಲಾಖೆಯಲ್ಲಿ, ಆಶಾ ಹನಮಾನಸಿಂಗ ಜಮಾದಾರ ನ್ಯಾಯಾಂಗ ಇಲಾಖೆಯಲ್ಲಿ ದಕ್ಷತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಹೊಸಪೇಟೆಯ ಕೆ. ಶೋಭಾಸಿಂಗ, ಬಿಜಾಪುರದ ಗಾಯತ್ತಿ ಶೀತಲ ವಜ್ರಾ ಸಮೋರೇಕರ, ಸಾವಿತ್ರಿ ಸೀತಾರಾಮ ಶೀತಲ, ನಿರ್ಮಲಾ ದೊಡ್ಡಮನಿ, ಹುಬ್ಬಳಿಯ ಸುಜಾತ ವಸಂತಸಿಂಗ ರಂಗವಾಲೆ, ಗದುಗಿನ ರಾಖಿ ಗುಲಾಬಸಿಂಗ ಧಡೇಕರ, ಶಶಿಕಲಾ ಹನಮಾನಸಿಂಗ ಬ್ಯಾಳಿ, ಸರೋಜನಿ ಹನಮಾನಸಿಂಗ ರಜಪೂತ, ಗಂಗಾವತಿಯ ಕಾವೇರಿ ರಘೂವೀರಸಿಂಗ ಜಮಾದಾರ, ಗುಲಬರ್ಗಾದ ಸುನೀತಾ ಗಂಗಾವತಿ ಬಳ್ಳಾರಿಯ ಕವಿತಾ ಪಟಪಟಿ ಮೊದಲಾದವರು ಶಾಲಾ ಶಿಕ್ಷಕಿಯರಾಗಿ ಸೇವೆ ಸಲ್ಲಿಸುತ್ತಿರುವವರು.

***

ಇಂದಿನ ಸ್ತ್ರೀಯ ಸಾಮಾಜಿಕ ಸ್ಥಾನಮಾನ

ಸ್ತ್ರೀ ಮತ್ತು ಪುರುಷರು ಸಮಾಜದ ಎರೆಡು ಕಣ್ಣುಗಳಿದ್ದಂತೆ ಎರಡೂ ಕಣ್ಣುಗಳು ಸುಂದರವಾಗಿಯೂ ಹಾಗೂ ಆರೋಗ್ಯವಾಗಿಯೂ ಇದ್ದಾಗ ಮಾತ್ರ ಮನುಷ್ಯನ ಮುಖ ಕಾಂತಿ ಹೆಚ್ಚುತ್ತದೆ. ಹೀಗಾಗಿ ಸ್ತ್ರೀ-ಪುರುಷರಿಬ್ಬರಿಗೂ ಸಮಾನವಾದ ಹಕ್ಕು ಬಾದ್ಯತೆಗಳನ್ನು, ಸಮಾನ ಸ್ಥಾನ-ಮಾನಗಳನ್ನು ಕಲ್ಪಿಸಿಕೊಡಬೇಕಾಗಿದೆ. ಈ ದೃಷ್ಟಿಯಲ್ಲಿ ರಜಪೂತ ಸಮಾಜ ಇನ್ನೂ ಸಾಕಷ್ಟು ಹಾದಿ ಕ್ರಮಿಸಬೇಕಾಗಿದೆ. ಸ್ತ್ರೀ ಮನೆಯಲ್ಲಿಯೇ ಮಾಡುವ ಕಾರ್ಯ ಆಡುವ ಭೂಮಿಕೆ ಸಮಾಜದ ದೃಷ್ಟಿಯಿಂದ ಅತ್ಯಂತ ಮಹತ್ವವೂ ಶ್ರೇಷ್ಟವೂ ಆಗಿದ್ದರೂ ಸಹ ಅವಳಿಗೆ ಸೂಕ್ತ ಸ್ಥಾನಮಾನ ನೀಡುವಲ್ಲಿ ಒಂದಲ್ಲೊಂದು ದೃಷ್ಟಿಯಿಂದ ಅನ್ಯಾಯ ಮಾಡಲಾಗಿದೆ. ಹಿಂದೂಗಳ ಸ್ತ್ರೀಗೆ ಒದಗಿ ಬಂದ ಗತಿಯೇ ರಜಪೂತ ಸ್ತ್ರೀಗೂ ಒದಗಿಬಂದಿರುವದು. ಪ್ರಾಚೀನ ಭಾರತದಲ್ಲಿ ಸರ್ವ ಸ್ವಾತಂತ್ರ‍್ಯ ಪಡೆದಿದ್ದ ಸ್ತ್ರೀಯರು, ಮದ್ಯಕಾಲಿನ ಭಾರತದಲ್ಲಿ ಕಗ್ಗತ್ತಲೆಗೆ ಜಾರಿದರು. ಮುಸಲ್ಮಾನರ ದಾಳಿಯಿಂದಾಗಿ ರಜಪೂತ ಸ್ತ್ರೀಯರ ಮಾನ ಕಾಪಾಡುವುದೇ ದೊಡ್ಡಸಮಸ್ಯೆಯಾಗಿಯೇ ಹೋಯಿತು. ಬಾಲ್ಯ ವಿವಾಹ ಪದ್ಧತಿ ಆಚರಣೆಗೆ ಬಂದಿದ್ದರಿಂದ ಸಹಜವಾಗಿಯೇ ಶಿಕ್ಷಣದಿಂದ ವಂಚಿತರಾಗಬೇಕಾಯಿತು. ಸತಿ ಪದ್ಧತಿ, ಜೋಹರದಂತಹ ಭೀಕರ ಕೃತ್ಯಗಳು ಕಂಡು ಬಂದವು. ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿಟ್ಟ ಎರಡನೇ ದರ್ಜೆಯ ಪ್ರಾಣಿಯಂತಾದಳು ಪುರುಷನ ಭೋಗ ವಸ್ತುವಾಗಿ, ಕೇವಲ ಮಕ್ಕಳನ್ನು ಹೆರುವ ಯಂತ್ರದಂತಾದಳು. ಇಂಥ ವಿಷಮ ಪರಿಸ್ಥಿತಿಯಲ್ಲಿಯೂ ಸಹ ಕಗ್ಗತ್ತಲೆಯ ವಾತಾವರಣವನ್ನು ಸೀಳಿ ಹೊರಬಂದ ಕೆಲ ಸ್ತ್ರೀಯರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಸ್ತ್ರೀ ಸಾಮರ್ಥ್ಯದ ಹಿರಿಮೆ ಎತ್ತಿಹಿಡಿದಿರುವರು. ಬ್ರಿಟಿಷ ಆಡಳಿತ ಆರಂಭಗೊಳ್ಳುತ್ತಿದ್ದಂತೆಯೇ ರಾಜಾರಾಮ ಮೋಹನರಾಯ ಮತ್ತಿತರರ ಪ್ರಯತ್ನದಿಂದಾಗಿ ಸ್ತ್ರೀಯರ ಬದುಕಿನಲ್ಲಿ ಹೊಸ ಗಾಳಿ ಬೀಸಲಾರಂಭಿಸಿತು. ಸ್ತ್ರೀಗೆ ಸಮಾನ ಹಕ್ಕು ಕೊಡುವದು ಕುಟುಂಬದಿಂದಲೇ ಆರಮಭವಾಗಬೇಕೆಂದು ಮಹಾತ್ಮಾಗಾಂಧಿಜೀಯವರು ಹೇಳಿ ಅದರಂತೆ ನಡೆದರು. ಈ ಬದಲಾವಣೆಗಳು ಸಹಜವಾಗಿ ರಜಪೂತರ ಮೇಲೆಯೂ ಆಯಿತು.

ಸ್ವಾತಂತ್ರ್ಯಾನಂತರ ರಚನೆಯಾದ ಸಂವಿಧಾನವು ಸ್ತ್ರೀ-ಪುರುಷರ ಭೇದವನ್ನು ತೊಡೆದು ಹಾಕಿ ಸರ್ವರಿಗೂ ಸಮಾನ ಸ್ಥಾನ-ಮಾನಗಳನ್ನು ಪ್ರತಿಯೊಂದು ಕ್ಷೇತ್ರದಲ್ಲಿ ಕೊಡಮಾಡಿತು. ಸ್ತ್ರೀ ಉನ್ನತಿ ಹಾಗೂ ಪ್ರಗತಿಯ ಹಾದಿಯಲ್ಲಿ ಮುಳ್ಳಿನಂತಾಗಿದ್ದ ಕೆಲವು ಅಡತಡೆಗಳನ್ನು ಕಾನೂನಿನ ಮೂಲಕ ತೊಡೆದು ಹಾಕಲು ಯತ್ನಿಸಲಾಯಿತು. ೧೯೫೫ರ ಹಿಂದೂ ವಿವಾಹ ಕಾಯ್ದೆಯನ್ವಯ ಏಕ ಪತ್ನಿತ್ವ ಕಡ್ಡಾಯಗೊಳಿಸಿ, ಬಹು ಪತ್ನಿತ್ವದಿಂದ ರಜಪೂತ ಸ್ತ್ರೀಯರಿಗೆ ಆಗುತ್ತಿದ್ದ ತೊಂದರೆಗಳನ್ನು ಹೋಗಲಾಡಿಸಲಾಯಿತು. ಜೊತೆಗೆಯೇ ಸ್ತ್ರೀಯರಿಗೆ ವಿವಾಹ ವಿಚ್ಛೇದನ. ಅಂತರ್ಜಾತೀಯ ವಿವಾಹ ಮತ್ತು ಸಗೋತ್ರ ವಿವಾಹಕ್ಕೂ ಸಹ ಕಾನೂನಿನ ಮಾನ್ಯತೆ ನೀಡಲಾಯಿತು. ಪಿತ್ರಾರ್ಜಿತ ಆಸ್ತಿಯಲ್ಲಿ ಮಗನಿಗಿರುವಂತೆ ಮಗಳಿಗೂ ಸಮಾನ ಹಕ್ಕು ಕೊಡಲಾಗಿದೆ. ದತ್ತಕ ಸ್ವೀಕಾರ, ಜೀವನಾಂಶದ ಕಾನೂನು, ಅಪ್ರಬುದ್ಧ ಮಕ್ಕಳ ರಕ್ಷಕಳಾಗುವ ಹಕ್ಕನ್ನು ನೀಡಲಾಗಿದೆ. ಈ ಎಲ್ಲ ಶಾಸನಬದ್ಧ ಅನುಕೂಲತೆಗಳು ಸ್ತ್ರೀಯ ಸ್ಥಾನ-ಮಾನ ಎತ್ತರಿಸಲು ಸಹಾಯಕವಾಗಿವೆ. ಇದರ ಫಲವೇ ಎನೋ ಎಂಬಂತೆ ಈಗೀಗ ರಜಪೂತ ಸ್ತ್ರೀಯರು ಅಲ್ಲಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊದಲಿನ ಕಟ್ಟಳೆ ಈಗಿಲ್ಲ. ಹೆಣ್ಣುಮಕ್ಕಳ ಜನನವೇ ಅಪೇಕ್ಷಣೀಯವಾಗಿರದೇ ಇದ್ದಕಾಲದ ಕಥೆ ಮುಗಿದು ಹೋದಂತಿದೆ. ಹೆಣ್ಣುಮಕ್ಕಳಿಗೂ ಸಹ ಗಂಡು ಮಕ್ಕಳಂತೆಯೇ ಕುಟುಂಬ ಪೋಷಿಸುವ ಶಕ್ತಿ ಬರಲು ಅವರಿಗೂಉನ್ನತ ಶಿಕ್ಷಣದ ಅವಕಾಶ ನೀಡಲಾಗುತ್ತಿದೆ. ಹೀಗಾಗಿ ರಜಪೂತ ಸ್ತ್ರೀಯರು ಎಲ್ಲ ಕ್ಷೇತ್ರಗಳಲ್ಲಿಯೂ ಮುಂದೆ ಬರುವಂತಾಗಿದ.ಎ ಈ ಬದಲಾವಣೆ ಬಹುತೇಕವಾಗಿ ನಗರ ಪ್ರದೇಶಗಳಿಗೆ ಸೀಮಿತವಾಗಿರುವಂತಿದೆ. ಗ್ರಾಮೀಣ ಪ್ರದೇಶದಲ್ಲಿನ ಹೆಣ್ಣುಮಕ್ಕಳು ಈಗಲೂ ಮಧ್ಯಯುಗದಲ್ಲಿಯೇ ವಾಸಿಸುತ್ತಿರುವಂತಿದೆ. ಐದು ವರ್ಷಕ್ಕೊಮ್ಮೆ ಜರುಗುವ ಮಹಾ ಚುನಾವಣೆಯಲ್ಲಿ ಮತದಾನ ಮಾಡುವುದನ್ನು ಬಿಟ್ಟರೆ ಅವರಿಗೆ ಆಧುನಿಕ ಸ್ತ್ರೀಯ ಯಾವ ಹಕ್ಕು-ಸೌಲಭ್ಯಗಲು ದೊರೆತಿಲ್ಲ. ಸಾಕ್ಷರತಾ ಪ್ರಮಾಣವೂ ಅಷ್ಟಕ್ಕಷ್ಟೇ ಇದೆ.

ಸುಶಿಕ್ಷಿತ ಮಹಿಳೆಯರು ಆರ್ಥಿಕ ಸ್ವಾತಂತ್ರ‍್ಯ ಪಡೆದಿರುವರು ಎಂಬುದು ತೋರಿಕೆಗೆ ಕಾಣುವ ವಿಷಯ. ವಿವಾಹದ ಮೊದಲು ತಂದೆಯ ಅಣತೆಯಂತೆ ನಡೆಯುವ ಈ ಸ್ತ್ರೀಯರು ವಿವಾಹದ ನಂತರವಂತೂ ಪತಿಯ ಇಚ್ಛೆ ಮೀರಿ ಒಂದು ಚಿಕ್ಕಾಸನ್ನೂ ಖರ್ಚು ಮಾಡದ ಸ್ಥಿತಿಯಲ್ಲಿದ್ದಾರೆ. ಪತಿಅಲ್ಪ ಸ್ವಲ್ಪ ರಿಯಾಯ್ತಿ ನೀಡಿದರೂ ವೇತನದ ಬಹುತೇಕ ಭಾಗ ಪತಿ ಅಥವಾ ಮಾವನ ಕೈಯಲ್ಲಿ ಕೊಡುವ ಪಾಳಿ ಇನ್ನೂ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಮಹಿಳೆಯರು ಆರ್ಥಿಕವಾಗಿ ಹಿಡಿತ ಸಾಧಿಸಿರುವುದಕ್ಕಿಂತಲೂ ನಿರಾಧಾರ ಸ್ಥಿತಿಯನ್ನೇ ಹೊಂದಿರುವದು ಸ್ಪಷ್ಟವಾಗಿ ಕಾಣುತ್ತಿದೆ.

ಮಹಿಳೆಯ ಆರ್ಥಿಕ ಸ್ಥಿತಿ ನಿರಾಧಾರವಾಗಿದ್ದರೂ, ಪುರುಷ ಪ್ರಧಾನ ಕೌಟುಂಬಿಕ ವ್ಯವಸ್ಥೆ ಚಾಲ್ತಿಯಲ್ಲಿದ್ದರೂ ಸಹ ಮಹಿಳೆಯೇ ಕುಟುಂಬದ ವಾಸ್ತವಿಕ ಒಡತಿ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಎಲ್ಲ ಕೆಲಸ-ಕಾರ್ಯಗಳು, ಹಿರೇತನ ಪುರಷನ ಹೆಸರಿನಲ್ಲಿ ನಡೆದರೂ ಸಹ ಅವುಗಳನ್ನು ನೈತಿಕ ನಿಷ್ಠೆಯಿಂದ ನಿಯಂತ್ರಿಸುವವಳು ಮಹಿಳೆಯೇ ಆಗಿರುವಳು. ನಿಜವಾದ ಅರ್ಥದಲ್ಲಿ ಅವಳು ಕುಟುಂಬ ಸಂಸಾರವೆಂಬ ಚಲನ ಚಿತ್ರದ ನಿರ್ದೇಶಕಿಯಾಗಿರುವಳು. ನಿರ್ದೇಶಕರು ಯಾವ ರೀತಿ ತೆರೆಮರೆಯಲ್ಲಿ ಕೆಲಸ ನಿರ್ವಹಿಸುವರೋ ಅದೇ ರೀತಿ ಅವಳು ಎಲೆ ಮರೆಯ ಕಾಯಿಯಂತಿದ್ದು ಕೆಲಸ ಮಾಡುತ್ತಿರುವಳು, ಹೀಗಾಗಿ ರಜಪೂತ ಕುಟುಂಬ ವ್ಯವಸ್ಥೆಯಾವ ತೊಂದರಯೂ ಇಲ್ಲದೇ ಮುಂದೆ ಸಾಗುತ್ತಲಿದೆ. ಯಾವುದೇ ತಾಪತ್ರಯ ಇಲ್ಲದೇ ಸಂಸಾರ ದೋಣಿ ಮುನ್ನಡೆಯುತ್ತಲಿದೆ. ಮಹಿಳೆ ಭೂಮಿಯ ಮೇಲಿನ ಪ್ರೇಮದ ಪ್ರತ್ಯಕ್ಷ ರೂಪವಾಗಿರುವಳು. ಅವಳ ತ್ಯಾಗ ಲೋಕ ಬೆಳಗುವ ಸೂರ್ಯನಿಗಿಂತಲೂ ಮಿಗಿಲಾಗುವುದು. ಅವಳ ಮಮತೆಯ ಮಡಿಲಲ್ಲಿ ಬೆಳೆದವರೇ ಭಾಗ್ಯವಂತರು ಎಂಬ ಭಾವನೆ ಪುರಷರದ್ದಾಗಿದೆ. ಹೀಗಾಗಿ ತಾಯಿಗೆ, ಹೆಂಡತಿಗೆ, ಮಗಳಿಗೆ ಕುಟುಂಬ ಜೀವನದಲ್ಲಿ ಎಲ್ಲಿಲ್ಲದ ಮಹತ್ವವಿದೆ. ಇದರ ಪರಿಣಾಮವಾಗಿಯೇ ಕುಟುಂಬಗಳು ದ್ವೇಷಮಯ ಪರಿಸ್ಥಿತಿಯ ತಾಣವಾಗದೇ ಸಂತಸ, ನೆಮ್ಮದಿ ತುಂಬಿದ ಮಂದಿರಗಳಾಗಿವೆ. ಮಹಿಳೆಯರಿಗೆ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ಕೊಡುವಂತಹ, ದೌರ್ಜನ್ಯ ನಡೆಸುವಂತಹ ಪ್ರಕರಣಗಳು ಇಲ್ಲವೇ ಇಲ್ಲವೆಂದೂ ಅತಿಶಯೋಕ್ತಿ ಆಗಲಾರದು. ಎಲ್ಲಿಯಾದರೂ ಇಂಥ ಪ್ರಕರಣಗಲು ನಡೆದಿದ್ದರೆ ಅದಕ್ಕೆ ಕಾರಣ ಬೇರೆಯೇ ಇರಬಹುದಾಗಿದೆ. ಸ್ತ್ರೀಯ ಸಕ್ರೀಯ ಸಹಾಯ, ಸಹಕಾರ ಇಲ್ಲದೇ ಕುಟುಂಬ ಜೀವನ ಪರಿಪೂರ್ಣವಾಗುವದಿಲ್ಲವೆಂಬ ನಂಬಿಕೆ ರಜಪೂತರದ್ದಾಗಿದೆ.

ಬದಲಾದ ಪರಿಸ್ಥಿತಿಯಲ್ಲಿ ರಜಪೂತ ಮಹಿಳೆಯರ ರೀತಿ-ನೀತಿಗಳಲ್ಲಿಯೂ ಸಹ ಮಾರ್ಪಾಡು ಆಗುತ್ತಿರುವದು ನಿಜವಾದರೂ ಬಹಳಷ್ಟು ಜನ ಮಹಿಳೆಯರೂ ಇನ್ನು ಪರಂಪರಾಗತ ಪದ್ಧತಿಯಿಂದ ದೂರ ಸರಿದಿದಲ್ಲ, ಹಳೆ ಸಂಪ್ರದಾಯ, ಆಚರಣೆಗಳನ್ನು ’ಗೊಡ್ಡು’ ಎಂದು ಮೂಗು ಮುರಿಯದೇ ಅವುಗಳನ್ನು ತಮ್ಮ ಕೈಲಾದ ಮಟ್ಟಿಗೆ ಪರಿಪಾಲಿಸಲು ಮುಂದಾಗುತ್ತಿರುವುದರಿಂದಲೇ ಕುಟುಂಬದಲ್ಲಿ ನೆಮ್ಮದಿಯಿಂದ ಇದ್ದಾರೆ. ಭಾರಿ ಆಶೆ-ಆಕಾಂಕ್ಷೆಗಳ ಬೆನ್ನು ಹತ್ತಿ ಜೀವನದಲ್ಲಿ ಅಸಂತೃಪ್ತಿ ಹೊಂದುವದಕ್ಕಿಂತಲೂ ಸಂಪ್ರದಾಯದ ಚೌಕಟ್ಟಿನಲ್ಲಿಯೇ ಸುಖೀ ಜೀವನ ನಡೆಸುವ, ನೆಮ್ಮದಿ ಪಡೆದುಕೊಳ್ಳುವ ಮನೋಧರ್ಮ ಹೊಂದಿರುವರು. ಮನೆಯಲ್ಲಿನ ಹಿರಿಯರ ಸೇವೆ ಮಾಡುವದು ಮತ್ತು ಮಕ್ಕಳ ಲಾಲನೆ ಪಾಲನೆಗೆ ಯಾವುದೇ ಕೊರತೆ ಉಂಟಾಗದಂತೆ ಮಹಿಳೆಯರು ನಡೆದುಕೊಳ್ಳುತ್ತಿರುವುದರಿಂದಲೇ ಕುಟುಂಬದಲ್ಲಿ ಪ್ರತೀ, ವಿಶ್ವಾಸದ ವಾತಾವರಣ ತನ್ನಷ್ಟಕ್ಕೆ ತಾನೆ ನಿರ್ಮಾಣವಾದಂತಾಗಿದೆ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳು , ವಿಷಮ ಪರಿಸ್ಥಿತಿಯನ್ನು ಸರ್ವರ ಒಳಿತಿಗಾಗಿ ನಿಭಾಯಿಸಿಕೊಳ್ಳುವ ಜಾಣ್ಮೆಯನ್ನು ರಜಪೂತ ಮಹಿಳೆಯರು ಪಡೆದಿರುವರು.

* * *

ಜನಸಂಖ್ಯೆಯಲ್ಲಿ  ತೀರಾ ಅಲ್ಪ ಸಂಖ್ಯಾತರಾಗಿರುವ ರಜಪೂತರು ತಮ್ಮಕರ್ತೃತ್ವ ಶಕ್ತಿ ಹಾಗೂ ಸಂಘಟನೆಯ ಬಲದಿಂದ ಇತರೆ ಸಮಾಜದ ಜನರು ಬೆರಳು ಕಚ್ಚುವಂತೆ ಪ್ರಗತಿ ಸಾಧಿಸುತ್ತಲಿರುವದು ಹೆಮ್ಮೆಯ ಸಂಗತಿಯಾಗಿದೆ. ಸಮಾಜದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಬದಲಾವಣೆ ಮತ್ತುಪ್ರಗತಿಯ ವೇಗ ಹೆಚ್ಚಿದೆ. ಮುಲ್ಕಿ ಪರೀಕ್ಷೆ ಅಥವಾ ಮ್ಯಾಟ್ರಿಕ್ ಪರೀಕ್ಷೆ ನಂತರ ಮಹಿಳೆಯರನ್ನು ಶಾಲೆ ಬಿಡಿಸುವ ಪದ್ಧತಿ ಮಾಯವಾಗಿದೆ. ಮಹಿಳೆಯೊಬ್ಬಳಿಗೆ ಶಿಕ್ಷಣ ನೀಡಿದರೆ ಕುಟುಂಬವೊಂದಕ್ಕೆ ಒಳ್ಳೆಯ ಸಂಸ್ಕಾರ ನೀಡಿದಂತಾಗುತ್ತದೆ ಎಂಬ ಭಾವನೆ ಬಲಗೊಳ್ಳತ್ತಲಿದೆ. ಇದರ ಜೊತೆಗೆಯೇ ವಾಸ್ತವಿಕ ಜೀವನದಲ್ಲಿ ಮಹಿಳೆಯು ತನ್ನ ಕಾಲ ಮೇಲೆ ತಾನು ನಿಂತು ಕೊಳ್ಳಲು, ಸಾಮಾಜಿಕ ಸ್ಥಾನ ಮಾಡ ಪಡೆಯಲು ನೆರವಾಗುತ್ತದೆ. ಹೀಗಾಗಿ ಮಹಿಳೆಯರ ಪರಿಸ್ಥಿತಿ ಮೊದಲಿಗಿಂತಲೂ ಸಾಕಷ್ಟು ಸುಧಾರಿಸಿದಂತಿದೆ. ಆಧುನಿಕತೆಯ ಗಾಳಿ ರಜಪೂತ ಮಹಿಳೆಗೂ ಬಡಿಯುತ್ತಲಿರುವದು ಸಂತಸದ ಸಂಗತಿಯಾಗಿದೆ.