Categories
e-ದಿನ

ಸೆಪ್ಟೆಂಬರ್-1

 

ಪ್ರಮುಖ ಘಟನಾವಳಿಗಳು:

1804: ಜರ್ಮನ್ ಖಗೋಳಶಾಸ್ತ್ರಜ್ಞ ಕಾರ್ಲ್ ಲುಡ್ವಿಗ್ ಹಾರ್ಡಿಂಗ್ ಅವರು ದೊಡ್ಡ ಬೆಲ್ಟ್ ಕ್ಷುದ್ರಗ್ರಹದಲ್ಲಿ ಒಂದಾದ ಜುನೋ ಪತ್ತೆಹಚ್ಚಿದರು.

1874: ಸಿಡ್ನಿ ಜೆನರಲ್ ಅಂಚೆ ಕಛೇರಿ ಆಸ್ಟ್ರೇಲಿಯಾದಲ್ಲಿ ತೆರೆಯಲಾಯಿತು.

1887: ಡಚ್ ಹವ್ಯಾಸಿ ಛಾಯಾಗ್ರಾಹಣ ಸಹಕಾರ ಸಂಘ ಸ್ಥಾಪನೆಯಾಯಿತು.

1947: ಭಾರತ ದೇಶಕ್ಕೆ ಅಧಿಕೃತ ಸಮಯ ಎಂದು ಇಂಡಿಯನ್ ಸ್ಟಾಂಡರ್ಡ್ ಟೈಂ (ಐ.ಎಸ್.ಟಿ) ಅನ್ನು ಪರಿಚಯಿಸಲಾಯಿತು.

1956: ಭಾರತದ ತ್ರಿಪುರಾ ರಾಜ್ಯವನ್ನು ಒಕ್ಕೂಟದ ಪ್ರದೇಶವನ್ನಾಗಿ ಸೇರ್ಪಡೆ ಮಾಡಲಾಯಿತು.

1956: ಜೀವ ವಿಮಾ ನಿಗಮ ಸ್ಥಾಪಿಸಲಾಯಿತು ಮತ್ತು ಎಲ್ಲಾ ಜೀವ ವಿಮಾ ವ್ಯಾಪಾರ ಮಾಡುವ ಸಂಸ್ಥೆಗಳನ್ನು ರಾಷ್ಟ್ರೀಕರಿಸಿ ಜೀವ ವಿಮಾ ನಿಗಮದಡಿಯಲ್ಲಿ ವಿಲೀನಗೊಳಿಸಲಾಯಿತು.

1962: ವಿಶ್ವಸಂಸ್ಥಯು ಭುಮಿಯ ಜನಸಂಖ್ಯೆಯು 3 ಶತಕೋಟಿ ಮುಟ್ಟಿದೆ ಎಂದು ಘೋಷಿಸಿತು.

1985: ಮಂಜುಗಡ್ಡೆಗೆ ಗುದ್ದಿ 1912ರಲ್ಲಿ ಮುಳುಗಿ 1513 ಜೀವಗಳನ್ನು ಸಾವನ್ನಪ್ಪಿದ ಟೈಟಾನಿಕ್ ಹಡಗಿನ ಧ್ವಂಸವನ್ನು ಫ್ರೆಂಚ್ ವಿಶೇಷ ತಂಡದವರು ಪತ್ತೆ ಮಾಡಿದರು.

1989: ಅಮೇರಿಕಾದಲ್ಲಿ ನೂತನ ಕಾರಿನ ಸುರಕ್ಷತಾ ಶಾಸನದಲ್ಲಿ ಎಲ್ಲಾ ಹೊಸದಾಗಿ ತಯಾರಿಸುವ ಕಾರುಗಳಿಗೆ ಚಾಲಕನ ಬದಿಯಲ್ಲಿ ಏರ್ ಬ್ಯಾಗ್ ಅಳವಡಿಸುವುದು ಅಗತ್ಯವೆಂದು ನಿರ್ಣಯಿಸಲಾಯಿತು.

1998: ಟಾಟಾ ಸಂಸ್ಥೆಯವರು ದೇಶೀಯ ವಲಯದಲ್ಲಿ ವಿದೇಶೀ ಷೇರುಗಳ ಪಾಲುದಾರಿಕೆಯೊಂದಿಗೆ ವಿಮಾನಯಾನ ನಡೆಸಲು ಹೂಡಿದ್ದ 1475 ಕೋಟಿ ರೂ ಯನ್ನು ಹಿಂಪಡೆದರು.

2015: ಗೂಗಲ್ ತನ್ನ ಲೋಗೋವನ್ನು ಪುನರ್ವಿನ್ಯಾಸಗೊಳಿಸಿತು.

ಪ್ರಮುಖ ಜನನ/ಮರಣ:

1896: ಸಾಮಾಜಿಕ ಕಾರ್ಯಕರ್ತ ಮತ್ತು ಸಾಹಿತಿ ಭಕ್ತಿವೇದಾಂತ ಸ್ವಾಮಿ ಜನಿಸಿದರು.

1909: ಆಂಗ್ಲ ಭಾಷೆಯಿಂದ ಹಿಂದಿ ಅನುವಾದ ಸುಲಭ ನಿಘಂಟು ತಯಾರಿಸಿದ ಕಾಮಿಲ್ ಬುಲ್ಕೆ ಜನಿಸಿದರು.

1915: ಉರ್ದು ಕಥೆಗಾರ ಹಿಂದಿ ಚಲನಚಿತ್ರ ಕಥೆಗಾರ ರಾಜೀಂದ್ರಸಿಂಗ್ ಬೇಡಿ ಜನಿಸಿದರು.

1970: ಭಾರತೀಯ-ಅಮೇರಿಕಾ ನಟಿ ಮತ್ತು ಲೇಖಕಿ ಪದ್ಮ ಲಕ್ಷ್ಮಿ ಜನಿಸಿದರು.

1999: ಇಸ್ರೋದ ವಿಕ್ರಂ ಸಾರಾಬಾಯಿ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾದ ಡಾ.ಎಸ್.ಶ್ರೀನಿವಾಸನ್ ನಿಧನರಾದರು.