ಪ್ರಮುಖ ಘಟನಾವಳಿಗಳು:

 • 1630: ಮ್ಯಾಸಚೂಸೆಟ್ಸ್ ಗ್ರಾಮವು ಅದರ ಹೆಸರನ್ನು ಬಾಸ್ಟನ್ ಎಂದು ಮರುನಾಮಕರಣ ಮಾಡಲಾಯಿತು.

 • 1782: ಅಮೇರಿಕಾ ಸಂಯುಕ್ತ ಸಂಸ್ಥಾನದ ಗ್ರೇಟ್ ಸೀಲ್ ಮೊದಲ ಬಾರಿಗೆ ಬಳಸಲಾಯಿತು.

 • 1810:ಮೆಕ್ಸಿಕೋ 300 ವರ್ಷಗಳ ಸ್ಪಾನಿಷ್ ರೂಲಿನ ನಂತರ ಸ್ಪೇನಿನಿಂದ ತನ್ನ ಸ್ವಾತಂತ್ರವನ್ನುಘೋಷಿಸಿತು.

 • 1848: ಎಲ್ಲಾ ಫ್ರೆಂಚ್ ಪ್ರಾಂತ್ಯಗಳಲ್ಲೂ ಗುಲಾಮಗಿರಿಯನ್ನು ರದ್ದುಗೊಳಿಸಲಾಯಿತು.

 • 1858: ಮೊದಲ ಭೂಮಾರ್ಗ ಅಂಚೆಯು ಕ್ಯಾಲಿಫೋರ್ನಿಯಾಗೆ ತಲುಪಿತು.

 • 1861: ಬ್ರಿಟಿಷ್ ಅಂಚೆ ಕಛೇರಿಯ ಉಳಿತಾಯ ಖಾತೆಯ ಬ್ಯಾಂಕ್ ತೆರೆಯಲಾಯಿತು.

 • 1906: ನಾರ್ವೀಜಿಯನ್ ಪರಿಶೋಧಕ ರೊವಾಲ್ಡ್ ಅಮುಂಡ್ಸನ್ ಮ್ಯಾಗ್ನೆಟಿಕ್ ದಕ್ಷಿಣ ಧ್ರುವವನ್ನು ಪತ್ತೆಮಾಡಿದರು.

 • 1954: ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನವನ್ನು ನೀಡುವ ವಿಶೇಷ ವಿವಾಹ ಮಸೂದೆಯಲ್ಲಿ ಲೋಕಸಭೆಯು ಒಂದು ಷರತ್ತನ್ನು ಅಳವಡಿಸಿಕೊಂಡಿತು.

 • 1967: ಟಿಬೆಟ್-ಸಿಕ್ಕಿಂ ಗಡಿಯಲ್ಲಿ ಟಿಬೇಟಿಯನ್, ಭಾರತೀಯ ಮತ್ತು ಚೀನಿ ಪಡೆಗಳು ನಾಟು-ಲಾ ಪಾಸಿನಲ್ಲಿ ಹೋರಾಟ ಮಾಡಲು ಸಜ್ಜಾದರು.

ಪ್ರಮುಖ ಜನನ/ಮರಣ:

 • 1916: ಪ್ರಖ್ಯಾತ ಶಾಸ್ತ್ರೀಯ ಗಾಯಕಿ ಎಂ.ಎಸ್.ಸುಬ್ಬಲಕ್ಷ್ಮಿ ಜನಿಸಿದರು.

 • 1916: ಪತ್ರಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ಡಿ.ಆರ್.ಸಮಂತ್ ಜನಿಸಿದರು.

 • 1929: ಶಿಕ್ಷಣತಜ್ಞ ಎರಾಮಿಲ್ಲಿ ಜನಾರ್ಧನ್ ರಾವ್ ಜನಿಸಿದರು.

 • 1931: ವಿಶ್ವಖ್ಯಾತಿಯ ಭೌತವಿಜ್ಞಾನಿ ಜಾರ್ಜ್ ಸುದರ್ಶನ್ ಜನಿಸಿದರು.

 • 1931: ಟೆಸ್ಟ್ ಕ್ರಿಕೆಟ್ ಅಂಪೈರ್ ಆಗಿದ್ದ ಆರ್.ರಾಮಚಂದ್ರ ರಾವ್ ಜನಿಸಿದರು.

 • 1932: ವೈದ್ಯ ಮತ್ತು ಗಣಿತತಜ್ಞ ಮತ್ತು ನೋಬಲ್ ಪ್ರಶಸ್ತಿ ಪುರಸ್ಕೃತ ರೊನಾಲ್ಡ್ ರೋಸ್ ನಿಧನರಾದರು.

 • 1954: ಸಿತಾರ್ ವಾದಕ ಸಂಜಯ್ ಬಂಡೋಪಾಧ್ಯಾಯ ಜನಿಸಿದರು.

 • 1955: ಭಾರತದಲ್ಲಿನ ಬ್ರಿಟಿಷ್ ವಸಾಹತುಗಳ ಮಂತ್ರಿ ಲಿಯೋಪೋಲ್ಡ್ ಸಿ.ಎಂ.ಎಸ್.ಆಮ್ರಿ ನಿಧನರಾದರು.

 • 1973: ಖ್ಯಾತ ಸಂಗೀತಗಾರ ಅಭಾಸಾಹೇಬ ಮಜುಂಮ್ದಾರ್ ನಿಧನರಾದರು.

 • 1977: ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕ ಕೇಸರ್ ಬಾಯಿ ಕೇರ್ಕರ್ ನಿಧನರಾದರು.