Categories
e-ದಿನ

ಸೆಪ್ಟೆಂಬರ್-2

 

ಪ್ರಮುಖ ಘಟನಾವಳಿಗಳು:

1789: ಅಮೇರಿಕಾದಲ್ಲಿ ಕಾಂಗ್ರೆಸ್ ಸರ್ಕಾರ ಅಮೇರಿಕಾದ ಖಜಾನೆ ಇಲಾಖೆಯನ್ನು ಸ್ಥಾಪಿಸಿತು.

1859: ಹವಾಯಿಯಲ್ಲಿ ಅನಿಲ ಬೆಳಕನ್ನು ಪರಿಚಯಿಸಲಾಯಿತು.

1859: ಸೌರ ಸೂಪರ್ ಸ್ಟಾರ್ಮಿನಿಂದ ವಿದ್ಯುತ್ ಟೆಲಿಗ್ರಾಫ್ ಸೇವೆಗೆ ಪರಿಣಾಮ ಬೀರಿತು.

1867: ನೆದರ್ಲ್ಯಾಂಡಿನ ಹಾರ್ಲೆಮ್ಮಿನಲ್ಲಿ ಮೊದಲ ಬಾಲಕಿಯರ ಶಾಲೆ ತೆರೆಯಲಾಯಿತು.

1898: ಮೊದಲ ಬಾರಿಗೆ ಯುದ್ಧದಲ್ಲಿ ಮಶೀನ್ ಗನ್ನನ್ನು ಬಳಸಲಾಯಿತು.

1929: ಮಾರ್ಗರೀನ್ ಯೂನಿಯನ್ ಮತ್ತು ಲಿವರ್ ಬ್ರದರ್ಸ್ ವಿಲೀನದಿಂದ ಯುನಿಲಿವರ್ ಸಂಸ್ಥೆ ರೂಪಿತವಾಯಿತು.

1937: ರಾಷ್ಟ್ರೀಯ ವಸತಿ ಕಾಯಿದೆಯ ಪ್ರಕಾರ ಅಮೇರಿಕಾದ ವಸತಿ ಪ್ರಾಧಿಕಾರವು ರಚಿಸಲಾಯಿತು.

1946: ಭಾರತದಲ್ಲಿ ಮಧ್ಯಂತರ ಸರ್ಕಾರ ರಚನೆಯಾಯಿತು. ಈ ತಾತ್ಕಾಲಿಕ ಸರ್ಕಾರವನ್ನು ಭಾರತದ ಸಂವಿಧಾನ ಸಭೆಯಿಂದ ರಚಿಸಲಾಯಿತು.

1946: ಜವಹರ ಲಾಲ್ ನೆಹರು ಭಾರತದಲ್ಲಿ ಸರ್ಕಾರವನ್ನು ರಚಿಸಿದರು.

1947: ಗಾಂಧೀಜಿಯನ್ನು ಕಲ್ಕತ್ತಾ ಮನೆಯಲ್ಲಿ ಬಂಧಿಸಲಾಯಿತು. ಶಾಂತಿ ಪ್ರಯತ್ನಗಳು ತೀವ್ರಗೊಂಡವು.

1956: ಭಾರತದಲ್ಲಿ ರೈಲಿನಡಿಯಲ್ಲಿ ಆರ್.ಆರ್ ಸೇತುವೆ ಕುಸಿದು 120 ಮಂದಿ ಮೃತರಾದರು.

1958: ರಾಷ್ಟ್ರೀಯ ರಕ್ಷಣಾ ಶಿಕ್ಷಣ ಕಾಯಿದೆಗೆ ಸಹಿ ಹಾಕಲಾಯಿತು.

1969: ಅಮೇರಿಕಾದ ಮೊದಲ ಸ್ವಯಂ ಚಾಲಿತ ಟೆಲ್ಲರ್ ಮಷಿನನ್ನು ನ್ಯೂಯಾರ್ಕಿನ ರಾಕ್ವಿಲ್ಲೆ ಸೆಂಟರಿನಲ್ಲಿ ಸ್ಥಾಪಿಸಲಾಯಿತು.

1970: ರಾಷ್ಟ್ರಪತಿ ವಿ.ವಿ.ಗಿರಿಯವರು ಕನ್ಯಾಕುಮಾರಿಯಲ್ಲಿ ವಿವೇಕಾನಂದ ರಾಕ್ ಮೆಮೋರಿಯಲ್ ಉದ್ಘಾಟಿಸಿದರು.

1984: ಅಮೃತಸರದಗೋಲ್ಡನ್ ಟೆಂಪಲ್ಲಿನಲ್ಲಿ ಸರ್ಕಾರದ ಉದ್ಯೋಗದ ಬಗ್ಗೆ ಸಾವಿರಾರು ಸಿಖ್ಖರು ಪ್ರತಿಭಟನೆ ನಡೆಸಿದರು.

1987: ಫಿಲಿಪ್ಸ್ ಸಂಸ್ಥೆಯು ಸಿಡಿ-ವೀಡಿಯೋವನ್ನು ಪರಿಚಯಿಸಲಾಯಿತು.

ಪ್ರಮುಖ ಜನನ/ಮರಣ:

1838: ಭಾರತೀಯ ಗುರು ಮತ್ತು ತತ್ವಜ್ಞಾನಿ ಭಕ್ತಿವಿನೋದ ಠಾಕುರ್ ಜನಿಸಿದರು.

1918: ಲಾಲ್ ನಿಶಾನ್ ಪಕ್ಷದ ಅಧ್ಯಕ್ಷರಾಗಿದ್ದ ದತ್ತ ದೇಶ್ಮುಖ್ ಜನಿಸಿದರು.

1941: ಭಾರತೀಯ ನಟಿ ಸಾಧನ ಶಿವದಾಸಾನಿ ಜನಿಸಿದರು.

1960: ಭಾರತೀಯ ಸಸ್ಯಶಾಸ್ತ್ರಜ್ಞ ಡಾ.ಶಂಕರ್ ಪುರುಷೋತ್ತಮ್ ಅಧಾರ್ಕರ್ ನಿಧನರಾದರು.

1965: ಭಾರತೀಯ ನಿರ್ದೇಶಕ ಮತ್ತು ಚಿತ್ರಕಥೆ ರಚನೆಕಾರ ಪಾರ್ಥೊ ಸೇನ್ ಗುಪ್ತ ಜನಿಸಿದರು.

1971: ತಮಿಳು, ತೆಲಗು ಚಿತ್ರನಟ ಪವನ್ ಕಲ್ಯಾಣ್ ಜನಿಸಿದರು.

1988: ಭಾರತೀಯ ಕ್ರಿಕೆಟ್ ಆಟಗಾರ ಇಶಾಂತ್ ಶರ್ಮ ಜನಿಸಿದರು.

2009: ಭಾರತದ ಆಂಧ್ರಪ್ರದೇಶದ 14ನೇ ಮುಖ್ಯಮಂತ್ರಿಯಾಗಿದ್ದ ವೈ.ಎಸ್.ರಾಜಶೇಖರ ರೆಡ್ಡಿ ನಿಧನರಾದರು.