Categories
e-ದಿನ

ಸೆಪ್ಟೆಂಬರ್-25

 

ಪ್ರಮುಖ ಘಟನಾವಳಿಗಳು:

1513: ಸ್ಪೇನ್ ದೇಶದ ಪರಿಶೋಧಕ ವಾಸ್ಕೋ ನುನೆಸ್ ಡಿ ಬಲ್ಬೋವಾ ಪೆಸಿಫಿಕ್ ಮಹಾಸಾಗರವನ್ನು ಕಂಡುಹಿಡಿದರು.

1639: ಅಮೇರಿಕಾದಲ್ಲಿ ಮೊದಲ ಮುದ್ರಣಾಲಯ ಆರಂಭವಾಯಿತು.

1654: ಇಂಗ್ಲೆಂಡ್ ಮತ್ತು ಡೆನ್ಮಾರ್ಕಿನ ನಡುವೆ ವ್ಯಾಪಾರದ ಒಪ್ಪಂದಕ್ಕೆ ಸಹಿ ಹಾಕಲಾಯಿತು.

1789: ಅಮೇರಿಕಾದ ಕಾಂಗ್ರೆಸ್ ಹಕ್ಕುಗಳ ಮಸೂದೆಯನ್ನು ಪ್ರಸ್ತಾಪಿಸಿತು.

1820: ಫ್ರೆಂಚ್ ಭೌತವಿಜ್ಞಾನಿ ಫ್ರಾಂಕೋಯಿಸ್ ಅರಾಗೋ ಅವರು ವಿದ್ಯುತ್ ಕಾಂತೀಯತೆಯನ್ನು ಪತ್ತೆ ಹಚ್ಚಿ ಪ್ರಕಟಿಸಿದರು.

1878: ಬ್ರಿಟಿಷ್ ವೈದ್ಯ ಡಾ.ಚಾರ್ಲ್ಸ್ ಡ್ರೈಡೇಲ್ ತಂಬಾಕಿನ ಬಳಕೆಯ ಬಗ್ಗೆ ಮತ್ತು ಧೂಮಪಾನ ಅಪಾಯಗಳ ಬಗ್ಗೆ ಆರಂಭಿಕ ಸಾರ್ವಜನಿಕ ಆರೋಗ್ಯ ಪ್ರಕಟಣೆಗಳಲ್ಲಿ ತಿಳಿಸಿದರು.

1890: ಸೆಂಟ್ರಲ್ ಕ್ಯಾಲಿಫೋರ್ನಿಯಾದ ಸಿಕೊಯಾ ಉದ್ಯಾನವನವನ್ನು ಅಮೇರಿಕಾದ ರಾಷ್ಟ್ರೀಯ ಉದ್ಯಾನವನವೆಂದು ಸ್ಥಾಪಿಸಲಾಯಿತು.

1897: ಮೊದಲ ಬ್ರಿಟಿಷ್ ಸೇವೆಯು ಆರಂಭಿಸಲಾಯಿತು.

1926: ಹೆನ್ರಿ ಫೋರ್ಡ್ ಒಂದು ದಿನಕ್ಕೆ 8 ಗಂಟೆಗಳ, ವಾರಕ್ಕೆ 5 ದಿನಗಳ ಕೆಲಸದ ವೇಳೆಯನ್ನು ಘೋಷಿಸಿದರು.

1955: ರಾಯಲ್ ಜೋರ್ಡಾನಿಯನ್ ಏರ್ ಫೋರ್ಸ್ ಸ್ಥಾಪಿಸಲಾಯಿತು.

1985: ಅಕಾಲಿ ದಳವು ಭಾರತದ ಪಂಜಾಬ್ ರಾಜ್ಯದ ಚುನಾವಣೆ ಗೆದ್ದಿತು.

2016: ಗ್ವಿಝೌ ಪ್ರಾಂತ್ಯದಲ್ಲಿ 500 ಮೀಟರ್ ಗಳಷ್ಟು ವಿಶಾಲವಾದ ವಿಶ್ವದ ಅತಿ ದೊಡ್ಡ ರೇಡಿಯೋ ಟೆಲಿಸ್ಕೋಪ್ ಕಾರ್ಯನಿರ್ವಹಿಸಲು ಆರಂಭಿಸಿತು.

ಪ್ರಮುಖ ಜನನ/ಮರಣ:

1899: ಭಾರತೀಯ ಕವಿ ಮತ್ತು ಗೀತ ರಚನೆಕಾರ ಉದುಮಲೈ ನಾರಾಯಣ ಕವಿ ಜನಿಸಿದರು.

1916: ಭಾರತೀಯ ತತ್ವಜ್ಞಾನಿ ಮತ್ತು ಸಾಮಾಜಿಕ ಕಾರ್ಯಕರ್ತರಾದ ದೀನದಯಾಳ್ ಉಪಾಧ್ಯಾಯ ಜನಿಸಿದರು.

1920: ಭಾರತೀಯ ಇಂಜಿನಿಯರ್ ಸತೀಶ್ ಧವನ್ ಜನಿಸಿದರು.

1939: ನಟ, ನಿರ್ದೇಶಕ, ನಿರ್ಮಾಪಕ ಫಿರೋಜ್ ಖಾನ್ ಜನಿಸಿದರು.

1946: ಕ್ರಿಕೆಟ್ ಕೋಚ್ ಮತ್ತು ಆಟಗಾರ ಬಿಶನ್ ಸಿಂಗ್ ಬೇಡಿ ಅವರು ಜನಿಸಿದರು.

1981: ಭಾರತೀಯ ಹಾಕಿ ಆಟಗಾರ ರಂಣಧೀರ್ ಸಿಂಗ್ ಜೆಂಟಲ್ ನಿಧನರಾದರು.

1986: ಭಾರತೀಯ ಕಾರ್ಮಿಕರ ಒಕ್ಕೂಟದ ನಾಯಕ ಮತ್ತು ಕಾರ್ಯಕರ್ತ ದರ್ಶನ್ ಸಿಂಗ್ ಕ್ಯನೆಡಿಯನ್ ನಿಧನರಾದರು.

1990: ಪಶ್ಚಿಮ ಬಂಗಾಳದ 3ನೇ ಮುಖ್ಯಮಂತ್ರಿ ಆಗಿದ್ದ ಪ್ರಫುಲ್ಲ ಚಂದ್ರ ಸೆನ್ ನಿಧನರಾದರು.

1990: ಭಾರತೀಯ ಫುಟ್ ಬಾಲ್ ಆಟಗಾರ ರಾಜು ಗಾಯಕವಾಡ್ ಜನಿಸಿದರು.

2005: ಉರ್ದು ಸಾಹಿತ್ಯದ ಲೇಖಕ, ವಿಮರ್ಶಕ ಗುಲಾಂ ಮುಸ್ತಫಾ ಖಾನ್ ನಿಧನರಾದರು.