Categories
e-ದಿನ

ಸೆಪ್ಟೆಂಬರ್-8

ಪ್ರಮುಖ ಘಟನಾವಳಿಗಳು:

1636: ಅಮೇರಿಕಾದ ಮೊದಲ ಕಾಲೇಜಾದ ಹಾರ್ವರ್ಡ್ ಕಾಲೇಜನ್ನು ಕೇಂಬ್ರಿಡ್ಜ್ ಕಾಲೇಜೆಂದು ಸ್ಥಾಪಿಸಲಾಯಿತು. ನಂತರ ಜಾನ್ ಹಾರ್ವರ್ಡ್ ಅವರಿಗೆ ಗೌರವ ಸೂಚಿಸಲು ಹಾರ್ವರ್ಡ್ ಕಾಲೇಜು ಎಂದು ಮರುನಾಮಕರಣ ಮಾಡಲಾಯಿತು.

1906: ರಾಬರ್ಟ್ ಟರ್ನರ್ ಸ್ವಯಂಚಾಲಿತ ಟೈಪ್ ರೈಟರ್ ರಿಟರ್ನ್ ಕ್ಯಾರೇಜನ್ನು ಕಂಡುಹಿಡಿದರು.

1915: ನೀಗ್ರೋಗಳ ಜೀವನ ಮತ್ತು ಇತಿಹಾಸದ ಸಂಘವನ್ನು ಸ್ಥಾಪಿಸಲಾಯಿತು.

1930: ಸ್ಕಾಟ್ಚ್ ಟೇಪನ್ನು ರಿಚರ್ಡ್ ಡ್ರೂ ಸೃಷ್ಟಿಸಿದರು.

1945: ವಾಷಿಂಗ್ಟನ್ ಡಿ.ಸಿಯಲ್ಲಿ ದ್ವಿ-ಮಾರ್ಗ ರೇಡಿಯೋವನ್ನು ಹೊಂದಿದ ಬಸ್ಸನ್ನು ಮೊದಲ ಬಾರಿಗೆ ಸೇವೆಗೆ ಸೇರಿಸಲಾಯಿತು.

1950: ಅಮೇರಿಕಾದ ಕಾಂಗ್ರೆಸ್ ರಕ್ಷಣಾ ಉತ್ಪಾದನೆ ಕಾಯಿದೆಯನ್ನು ಅಂಗೀಕರಿಸಿದರು.

1951: ಮಿಲಿಟರಿ ಅಕೌಂಟ್ಸ್ ನಿಯಂತ್ರಕರ ಕಛೇರಿ (ಪಿಂಚಣಿ)ಯನ್ನು ಅಲ್ಲಹಬಾದಿನ ಸಿಡಿಎ(ಪಿ) ಎಂದು ಮರುನಾಮಕರಣ ಮಾಡಲಾಯಿತು.

1959: ಏಷಿಯಾದ ತಂತ್ರಜ್ಞಾನ ಸಂಸ್ಥೆಯಾದ “ಏಷಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ”ಯನ್ನು ಸ್ಥಾಪಿಸಲಾಯಿತು.

1962: ಚೀನಿಯರು ಪೂರ್ವ ಪ್ರದೇಶದ ಭಾರತೀಯ ಪ್ರಾಂತ್ಯಕ್ಕೆ ತಮ್ಮ ಮೊದಲ ಆಕ್ರಮಣವನ್ನು ಮಾಡಿದರು.

1965: ಪಾಕಿಸ್ತಾನವು ಭಾರತದ ಪಂಜಾಬಿಗೆ ತನ್ನ ಚಾಲನೆ ಆರಂಭಿಸಿತು.

1986: ಸುಂದರ್ ಲ್ಯಾಂಡ್ ಇಂಗ್ಲಾಂಡಿನಲ್ಲಿ ಯೂರೋಪಿನಲ್ಲಿ ಜಪಾನಿಯರ ಮೊದಲ ವಾಹನ ಕಾರ್ಖಾನೆಯಾದ ನಿಸ್ಸಾನ್ ಕಾರುಗಳ ಕಾರ್ಖಾನೆಯನ್ನು ತೆರೆಯಲಾಯಿತು.

ಪ್ರಮುಖ ಜನನ/ಮರಣ:

1790: ಭಾರತದ ಗವರ್ನರ್ ಜೆನೆರಲ್ ಆಗಿದ್ದ (1842-1844) ಲಾರ್ಡ್ ಎಡ್ವರ್ಡ್ ಆಲೆನ್ ಬಾರೋ ಜನಿಸಿದರು.

1887: ಡಿವೈನ್ ಲೈಫ್ ಸೊಸೈಟಿಯ ಸಂಸ್ಥಾಪಕರಾದ ಸ್ವಾಮಿ ಸಿವಾನಂದ ಜನಿಸಿದರು.

1910: ಸಂತ ಶ್ರೀ ಗಜಾನನ್ ಮಹಾರಾಜ್ ನಿಧನರಾದರು.

1911: ಹಿಂದಿ ಲೇಖಕ ಮತ್ತು ಪತ್ರಕರ್ತ ಆನಂದ ಗೋಪಾಲ್ ಶೆರೋರೆ ಜನಿಸಿದರು.

1926: ಭಾರತೀಯ ಗಾಯಕ, ಗೀತರಚನೆಕಾರ, ಕವಿ ಮತ್ತು ನಿರ್ದೇಶಕ ಭುಪೇನ್ ಹಜಾರಿಕಾ ಜನಿಸಿದರು.

1935: ಪ್ರಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಂಸಲೆ ಜನಿಸಿದರು.

1960: ಲೋಕಸಭೆಯ ಪ್ರಮುಖ ಸದಸ್ಯ ಫಿರೋಜ್ ಗಾಂಧಿ ಅವರು ನಿಧನರಾದರು.

1981: ಭಾರತೀಯ ಗುರು, ತತ್ವಜ್ಞಾನಿ ಮತ್ತು ಶಿಕ್ಷಣತಜ್ಞ ನಿಸರ್ಗದತ್ತ ಮಹಾರಾಜ್ ನಿಧನರಾದರು.

1982: ಕಾಶ್ಮೀರದ ಮಾಜಿ ಮುಖ್ಯಮಂತ್ರಿಯಾಗಿದ್ದ ಶೇಖ್ ಮೊಹಮ್ಮದ್ ಅಬ್ದುಲ್ಲಾ ನಿಧನರಾದರು.

2008: ಖ್ಯಾತ ವಯಲಿನ್ ವಾದಕ ಕುನ್ನಕುಡಿ ವೈದ್ಯನಾಥನ್ ನಿಧನರಾದರು.