Loading Events

« All Events

  • This event has passed.

ಚಂದ್ರಭಾಗಾದೇವಿ

August 11, 2023

೧೧.೦.೧೯೨೧ ೧೪.೦೪.೧೯೯೭  ನೃತ್ಯ ಪ್ರದರ್ಶನದ ಮೂಲಕ ಪ್ರಪಂಚದಾದ್ಯಂತ ಹೆಸರುಗಳಿಸಿದ್ದ ಚಂದ್ರಭಾಗಾದೇವಿಯವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ. ಹೆಸರಾಂತ ಲೇಖಕರಾದ ಪಡುಕೋಣೆ ರಮಾನಂದರಾಯರು ಮತ್ತು ಲೇಖಕಿ ಸೀತಾದೇವಿಯವರ ಮಗಳು. ಓದಿದ್ದು ಬಿ.ಎಸ್ಸಿ ಕೆಮಿಸ್ಟ್ರಿ. ಶಿವರಾಮಕಾರಂತರಿಂದ ಫ್ರೀಸ್ಟೈಲ್‌ ನೃತ್ಯಾಭ್ಯಾಸ ತರಬೇತಿ. ನೃತ್ಯ ಶಿಕ್ಷಣ ನೀಡುತ್ತಾ ಬಾಳ ಸಂಗಾತಿಯನ್ನಾಗಿಮಾಡಿಕೊಂಡವರು ಯು.ಎಸ್‌. ಕೃಷ್ಣರಾವ್‌. ಐವತ್ತಕ್ಕೂ ಹೆಚ್ಚು ವರ್ಷಕಾಲ ದೇಶ ವಿದೇಶಗಳಲ್ಲಿ ನೀಡಿದ ನೃತ್ಯ ಬೋಧನೆ, ಪ್ರದರ್ಶನ, ಉಪನ್ಯಾಸ, ರತಿ-ಮನ್ಮಥ, ರಾಧ-ಕೃಷ್ಣ, ಶಿವಲೀಲೆ, ದಿ ಟೆಂಪ್ಟೇಷನ್‌ ಆಫ್‌ ಬುದ್ಧ, ರಾಣಿ ಶಾಂತಲಾ, ಗೀತ-ಗೋವಿಂದ, ಕಾಮದಹನ ಇವರು ಪ್ರದರ್ಶಿಸುತ್ತಿದ್ದ ಪ್ರಮುಖ ಕೃತಿಗಳು. ಬೆಂಗಳೂರಿನಲ್ಲಿ ‘ಮಹಾಮಾಯಾ’ ನಾಟ್ಯ ತರಗತಿ ಆರಂಭಿಸಿ ನೂರಾರು ಶಿಷ್ಯರಿಗೆ ನಾಟ್ಯ ತರಬೇತಿ. ಇಂದ್ರಾಣಿ ರೆಹಮಾನ್‌, ಸೋನಾಲ್‌ ಮಾನ್‌ಸಿಂಗ್‌, ಸುಧಾರಾಣಿ, ಪ್ರತಿಭಾ ಪ್ರಹ್ಲಾದ್‌, ರೇವತಿ ಸತ್ಯು, ಆಶಾಗೋಪಾಲ್‌, ಶಾರದಾರುದ್ರ, ದೀಪ್ತಿ ದಿವಾಕರ್ ಪ್ರಸಿದ್ಧಿ ಗಳಿಸಿದ ಶಿಷ್ಯರು. ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಅಧ್ಯಕ್ಷೆಯಾಗಿ ಕೆಲಕಾಲ. ಕರಾಚಿಯಲ್ಲಿ ಇಂಡೋ ಪಾಕಿಸ್ತಾನ್‌ ಮ್ಯೂಸಿಕ್‌ ಕಾನ್‌ಫರೆನ್ಸ್, ಕೇಂದ್ರ ಸಂಗೀತ ನಾಟಕ ಅಕಾಡಮಿಯ ಮಾಡರ್ನ್ ಟ್ರೆಂಡ್‌ ಇನ್‌ ಭರತನಾಟ್ಯ, ನ್ಯೂಯಾರ್ಕ್‌ನ ಇಂಡೋ ಅಮೆರಿಕನ್‌ ಡಾನ್ಸ್‌ ಕಂಪನಿ, ಲಂಡನ್ನಿನ ಏಷಿಯನ್‌ ಮ್ಯೂಸಿಕ್‌ ಸರ್ಕಲ್‌, ಸಿಂಗಪೂರ, ಹವಾಯಿ, ಹಾಂಗ್‌ ಕಾಂಗ್‌ ಮುಂತಾದೆಡೆ ಉಪನ್ಯಾಸ, ಪ್ರದರ್ಶನಗಳು. ರಾಜ್ಯ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಕಲಾಭಾರತಿ ಪ್ರಶಸ್ತಿ, ಕಲಾಪ್ರವಾಸ ಯಾತ್ರೆಯ ‘ಗೆಜ್ಜೆಯ ಹೆಜ್ಜೆ ನುಡಿ’ ಪುಸ್ತಕಕ್ಕೆ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ಸರಕಾರದ ಶಾಂತಲಾ ಪ್ರಶಸ್ತಿ, ಕೃಷ್ಣಯ್ಯರ್ ಸ್ಮಾರಕ ಚಿನ್ನದ ಪದಕ ಮುಂತಾದ ಗೌರವ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಕಲಾವಿದರು ಪಿ. ಗುಡದಪ್ಪನವರು – ೧೯೧೮ ವಿ. ದೊರೆಸ್ವಾಮಿ ಅಯ್ಯಂಗಾರ್ – ೧೯೨೦

* * *

Details

Date:
August 11, 2023
Event Category: