Categories
ರಚನೆಗಳು

ಅಂಬಾಬಾಯಿ

(ಪಲ್ಲವಿ) : ಪ್ರಾಣ ಎಂದರೆ ವಾಯು
೧೧೩
ಪ್ರಾಣದೇವ ನೀ ಕಾಯೊ ಕರುಣಿ ಸತತ
ಪಾಲಿಸು ಸುಖದಾತ ಪ.
ಪ್ರಣಾಪಾನವ್ಯಾನೊದಾನತೋಷ
ಸಮಾನ ಭಾರತೀಶ ಅ.ಪ.
ತ್ರಿವಿಧ ಜೀವರ ಶ್ವಾಸ ನಿಯಾಮಕನೆ ಶ್ರೀ ಹರಿ ಸೇವಕ ನೀನೆ
ಭವ ಇಂದ್ರಾದಿಗಳಿಂದಲಿ ವಂದಿತನೆ ಭಾರತಿಗತಿ ಪ್ರಿಯನೆ
ತ್ರಿವಿಧ ಶ್ವಾಸ ಜಪ ನಿರ್ಲಿಪ್ತದಿ ಜಪಿಸಿ ಜೀವರ ಗತಿಗೈಸಿ
ನವವಿಧ ಭಕ್ತಿಯ ಹರಿಚರಣದಿ ನಿರುತ ಚರಿಸುವ ಮತಿದಾತ ೧
ತತ್ವಾಧೀಶರ ಪ್ರೇರಕ ಮಹಪ್ರಾಣ ಜೀವರ ಸುತ್ರಾಣ
ವ್ಯಾಪ್ತಜಗದಿ ಶ್ರೀ ಹರಿ ಲಕುಮಿಯ ಸಹಿತ ಬಳಿತ್ಥಾ ಸೂಕ್ತ ಸ್ತುತ
ತತ್ವಾದಿಗಳಿಗಧೀಶ ಪೋಷತೋಷ ಶ್ರೀ ಹರಿ ನಿನ್ನೊಳು ವಾಸ
ಸತ್ವ ಗುಣದ ಜೀವರ ಸದ್ಗತಿದಾತ ಸುಜ್ಞಾನ ಪ್ರದಾತ ೨
ತ್ರೇತೆಯಲ್ಲಿ ಶ್ರೀ ರಾಮದಾಸ್ಯ ಚರಿಸಿ ದಶಶಿರನನು ಮುರಿಸಿ
ಮಾತೆ ಕೊಟ್ಟ ಭಿಕ್ಷಾನ್ನ ಉಂಡು ಸುಖಿಸಿ ಬಕ ಹಿಡಿಂಬಕರೊರಸಿ
ಪಾತಕಿ ಮಾಯವಾದಿ ಜೈಸಿ ಸದ್ಗ್ರಂಥವ ರಚಿಸಿ
ಖ್ಯಾತ ಗೋಪಾಲಕೃಷ್ಣವಿಠ್ಠಲ ಪ್ರಿಯ ನಮೋ ಚಳ್ಳಕೆರೆನಿಲಯ ೩

 

೧೧೪
ಪ್ರಾಣದೇವನ ನಮಿಪೆ ನಮೋ
ಪ್ರಾಣಕಧೀಶನೆ ಶರಣು ನಮೋ
ಕಾಣಿಸು ಹರಿಯಂಘ್ರಿಯನು ನಮೋ
ಪ್ರಾಣ ಪಂಚರೂಪಾತ್ಮ ನಮೋ ಪ.
ಅಂಜನೆ ಆತ್ಮಜ ಕುವರ ನಮೋ
ಸಂಜೀವನ ಗಿರಿ ತಂದೆ ನಮೋ
ನಂಜುಂಡನ ಪ್ರಿಯ ಜನಕ ನಮೋ
ಕಂಜಾಕ್ಷನ ದಾಸಾರ್ಯ ನಮೊ೧
ಗುಪ್ತದಿ ಕೃಷ್ಣನ ದಾಸ ನಮೊ
ಆಪ್ತವರ್ಗ ನಿರ್ಧೂತ ನಮೋ
ಶಕ್ತ ಜರಾದಿ ಹಂತ ನಮೋ
ತಪ್ತಕಾಂಚನ ಸುದೀಪ್ತ ನಮೊ ೨
ಏಕವಿಂಶತಿ ಮತಧ್ವಂಸ ನಮೋ
ಶ್ರೀಕಳತ್ರಪ್ರಿಯ ಪಾತ್ರ ನಮೋ
ಏಕ ಚತುರ ನವಗ್ರಂಥ ನಮೋ
ಜೋಕೆಯಿಂದ ನಿರ್ಮಿಸಿದೆ ನಮೋ ೩
ಮುಕ್ತ ಜೀವರ ಸ್ತುತ್ಯ ನಮೋ
ಯುಕ್ತಿವಂತ ಜಗದ್ವ್ಯಾಪ್ತ ನಮೋ
ಶಕ್ತಿವಂತ ಶುದ್ಧಾತ್ಮ ನಮೋ
ಭಕ್ತಭರಿತ ಹರಿಪ್ರೀತ ನಮೋ ೪
ನಮೋ ನಮೋ ಶ್ರೀಗೋಪಾಲ
ಕೃಷ್ಣವಿಠ್ಠಲನಿಗೆ ಪ್ರಿಯಬಾಲ
ನಮೋ ನಮೋ ಶ್ರೀ ಭಾರತಿಲೋಲ
ನಮಿಸುವೆ ಚಳ್ಳಕೆರೆಯ ಪಾಲ ೫

 

೧೧೫
ಬಂದ ಬಂದಾ ಕದರೂರಿಂದ ನಿಂದಾ ಪ.
ಬಂದ ಕದರೂರಿಂದ ಕರಿಗಿರಿ
ಎಂದು ಕರೆಸುವ ಪುಣ್ಯಕ್ಷೇತ್ರಕೆ
ತಂದೆ ಮುದ್ದುಮೋಹನ್ನ ಗುರುಗಳು
ತಂದು ಸ್ಥಾಪಿಸೆ ತಂದೆ ಹನುಮನು ಅ.ಪ.
ವ್ಯಾಸತೀರ್ಥರು ಸ್ಥಾಪಿಸಿದ ಶ್ರೀ
ದಾಸಕೂಟದಿ ಉದಿಸಿದಂಥಾ
ವಾಸುದೇವನ ಭಕ್ತವಂಶದಿ
ಲೇಸುಮತಿಯಿಂ ಜನಿಸಿ ಭಕ್ತರ
ಆಸೆಗಳ ಪೂರೈಸುತಲಿ ಬಹು
ತೋಷದಂಕಿತಗಳಿತ್ತು
ನಾಶರಹಿತನ ಭಕ್ತರೆನಿಸಿದ
ದಾಸವರ್ಯರ ಮಂದಿರಕೆ ತಾ ೧
ಶಾಲಿವಾಹನ ಶಕವು ಸಾವಿರ
ಮೇಲೆ ಶತ ಎಂಟರವತ್ತೊಂದು
ಕಾಲ ಫಾಲ್ಗುಣ ಕೃಷ್ಣ ಪಂಚಮಿ
ಓಲೈಸುವ ಪ್ರಮಾಥಿ ವತ್ಸರ
ಶೀಲ ಗುರುವಾಸರದಿ ಬುಧರ
ಮೇಳದಲಿ ವೇದೋಕ್ತದಿಂದಲಿ
ಶೀಲ ಶ್ರೀ ಕೃಷ್ಣದಾಸತೀರ್ಥರು
ಲೀಲೆಯಿಂದ ಪ್ರತಿಷ್ಟಿಸಲು ತಾ ೨
ರಾಮದೂತ ಶ್ರೀ ಹನುಮ ಬಂದನು
ಭೀಮ ಬಲ ವಿಕ್ರಮನು ಬಂದನು
ಶ್ರೀ ಮದಾನಂದತೀರ್ಥ ಬಂದನು
ಪ್ರೇಮಭಕ್ತರ ಪೊರೆವ ಬಂದನು
ಸ್ವಾಮಿಗೋಪಾಲಕೃಷ್ಣ ವಿಠಲನ
ಪ್ರೇಮಭಕ್ತನು ದಾಸ ಭವನಕೆ ೩

 

೧೯೭
ಬಂದನಿಂದು ರಾಘವೇಂದ್ರನು ಆನಂದದಿಂದಲಿ
ಬಂದನಿಂದು ರಾಘವೇಂದ್ರನು ಪ.
ಕಂದರಾದ ಭಕ್ತ ಜನರ
ಚಂದದಿಂದ ಪೊರೆವೆನೆಂದು ಅ.ಪ.
ಪರಿಪರಿಯ ವೈಭವವನು ಪಡಲಿಬೇಕೆಂದು
ಕರದು ತರಲು ಕರಕರಿಯ
ಕರದು ಮನವ ನೋಡಬೇಕೆಂದು ೧
ಕರುಣಾನಿಧಿ ಎಂದೆನಿಸಿ ನಿನಗೆ ಥರವೆ ಇದು ಎಂದು
ಪರಿಪರಿಯಲಿ ಸ್ತುತಿಸುತಿರಲು
ಸ್ಥಿರವಾರದಿ ಹರುಷ ತೋರಲು ೨
ಬಂದ ಬುಧರಿಂದ ಪೂಜೆನಂದಗೈಸ ಬೇ
ಕೆಂದು ತುಂಗಜಲವ ತರುತಿರÉ
ಬಂದ ಮಾಯದಿಂದ ಹರಿಯು ೩
ದ್ವಿಜರ ಹಸ್ತಜಲವ ಶ್ರೀನಿವಾಸ ಬೇಡಲು
ದ್ವಿಜರು ಕೊಡಲು ಗುರುಗಳನ್ನು
ಪೂಜೆಗೈದೆನೆಂದು ನುಡಿದ ೪
ಈ ತೆರದ ಕೌತುಕವ ಶ್ರೀನಾಥ ತೋರುತ
ಆ ತಕ್ಷಣದಿ ಮಾಯವಾಗೆ
ರೀತಿಯಿಂದ ಪೂಜೆಗೈಯ್ಯಲು ೫
ಮಂತ್ರಾಲಯದ ಮಂದಿರನಿಗೆ ಪಂಚಾ
ಮೃತದಿಂದ ಸಂತೋಷದಲಿ ಪೂಜೆ
ಗೈದು ಪಂಚಮೃಷ್ಟಾನ್ನ ಬಡಿಸೆ೬
ಶ್ರೀನಿವಾಸ ಸಹಿತ ಶ್ರೀ ರಾಘವೇಂದ್ರರು
ಸಾನುರಾಗದಿ ಸೇವೆಕೊಂಡು
ನಾನಾ ವಿಧದ ಹರುಷಪಡಿಸೆ ೭
ಎನ್ನ ಮನಕೆ ಹರುಷಕೊಡಲು ನಿನ್ನ ಭಜಿಸುವೆ
ನಿನ್ನ ಮನಕೆ ಬಾರದಿರ್ದೊಡೆ
ಮುನ್ನೆ ಪೋಗಿ ಬಾರೆಂದೆನಲು ೮
ತುಂಗಮಹಿಮ ರಾಘವೇಂದ್ರರ ಮಂಗಳದ ಪುತ್ರ
ಕಂಗಳೀಗೆ ತೋರಿ ಅಂತ
ರಂಗದಲ್ಲಿ ಹರುಷವಿತ್ತು ೯
ಶ್ರೀ ಗುರುಗಳ ಕರುಣದಿಂದ ರಾಘವೇಂದ್ರನು
ಭಾಗವತರ ಪೊರೆವೆನೆಂದು
ಯೋಗಿ ಶೇಷಾಂಶ ಸಹಿತ ೧೦
ಇಂತು ರಾಘವೇಂದ್ರ ಗುರು ತಾ ಶಾಂತನಾಗುತ
ಶಾಂತ ಗೋಪಾಲಕೃಷ್ಣವಿಠ್ಠಲನ
ಅಂತರಂಗದಿ ತೋರ್ವೆನೆಂದು ೧೧

 

೫೬
ಬಂದನಿದಕೋ ರಂಗ ಬಂದನಿದಕೋ
ಸುಂದರಾಂಗನು ನಮ್ಮ ಮಂದಿರಕೆ ಈಗಾ ಪ.
ಮುಗಳುನಗೆ ಮುಖದಲ್ಲಿ ಮುಂಗುರುಳು ನವಿಲುಗರಿ
ಖಗರಾಜ ವಾಹನನ ಕಂಬು ಕಂಠಾ
ಝಗ ಝಗಿಪ ಕುಂಡಲವು ಕಸ್ತೂರಿ ತಿಲಕ ಫಣಿ
ನಗಧರನು ನಮ್ಮ ಮನಸೂರೆಗೊಂಬುದಕೇ ೧
ಕರದಲಿ ಕಂಕಣವು ಬೆರಳಲ್ಲಿ ಉಂಗುರವು
ಕೊರಳಲ್ಲಿ ನವರತ್ನ ಮುತ್ತಿನಹಾರಗಳೂ
ಕಿರುಗೆಜ್ಜೆ ನಡುವಿನಲಿ ವಲಿವೋ ಪೀತಾಂಬರವು
ವರ ವೇಣು ವಯ್ಯಾರದಿಂದ ಊದುತಲೀ ೨
ಸುರರ ವಂಚನೆಗೈದು ವರ ಋಷಿಗಳನೆ ಜರಿದು
ಸಿರಿಗಗೋಚರನೆನಿಸಿ ಪರಮ ಪುರುಷಾ
ವರಧಾಮತ್ರಯಗಳನೂ ಮರದೆಮ್ಮ ಗೋಕುಲದಿ
ಮೆರೆವ ನೀ ಲೋಕಮೋಹನ ಚರಿಯ ತೋರೀ ೩
ಇಂದಿರೇಶನು ನಮ್ಮ ವೃಂದಾವನದೊಳಿಪ್ಪ
ಮಂದಿಗಳ ಮನ ಸೆಳೆದು ಮಾರಜನಕಾ
ಒಂದೊಂದು ರೂಪಿನಲಿ ಗೋಪಿಕಾ ಸ್ತ್ರೀಯರೊಳು
ಬಂದು ಬೆರೆಯುವ ಮದನಕಲೆ ನಿಪುಣ ಚೆಲುವಾ ೪
ಗೋವರ್ಧನೋದ್ಧಾರ ಗೋವಳರ ವಡಗೂಡಿ
ಗೋವುಗಳ ಕಾಯತಲಿ ಗೋಪಿ ಬಾಲಾ
ಗೋವಿಂದ ಗೋಪಾಲಕೃಷ್ಣವಿಠಲ ನಮ್ಮ
ಪೂರ್ವ ಪುಣ್ಯದ ಫಲದಿ ಭೂವನಿತೆ ಪಾಲಾ ೫

 

೫೭
ಬಂದಾ ಬಂದಾ ಉಡುಪಿಲಿ ನಿಂದ ನಿಂದಾ ಪ.
ಬಂದ ಗೋಪೇರ ವೃಂದಗಳ ತಾ
ನಂದು ದಣಿಸುತ ಸುಂದರಾಂಗನು
ನಂದಗೋಪಗೆ ನಂದನೆನಿಸಿದ
ಮಂದರೋದ್ಧರ ಬೃಂದೆಯಿಂದಲಿ ಅ.
ಮುದ್ದುಸುರಿಸುತ ಗೋಕುಲದೊಳಿರೆ
ಕದ್ದು ಬೆಣ್ಣೆಯ ತಿಂದನೆನುತಲಿ
ಸುದ್ದಿ ತಾಯಿಗೆ ಪೇಳಿ ಸತಿಯರು
ಗದ್ದಲದಿ ತನ್ನ ಗಾರು ಮಾಡಲು
ಮುದ್ದು ಯತಿಗಳು ಎದ್ದು ಪೂಜಿಸಿ
ಮುದ್ದಿ ಬೆಣ್ಣೆ ನೇವೇದ್ಯವಿಡುತಿರೆ
ಸದ್ದು ಇಲ್ಲದೆ ತಿಂದು ಸುಖದಲಿ
ಇದ್ದೇನೆಂಬುವ ಬುದ್ಧಿಯಿಂದಲಿ ೧
ಭಾರವಿಳುಹಲು ಕೋರೆ ಭೂಮಿಯು
ನಾರದಾದ್ಯರ ನುತನು ತಾ ಬರೆ
ನಾರಿಯರು ಮನ ಬಂದ ತೆರದಲಿ
ಜಾರ ಚೋರನೆನುತ್ತ ಬೈಯ್ಯಲು
ಧೀರ ಯತಿಗಳು ಸೇರಿ ಪರಬೊಮ್ಮ
ಶ್ರೀರಮಣನೆನ್ನುತ ಸ್ತುತಿಸುವೋ
ವಾರುತಿಗೆ ಮೈದೋರಿ ಭಕುತರ
ಪಾರಿಗಾಣಿಪೆನೆಂಬ ನೆವದಲಿ ೨
ಹಸಿದುಗೋಪರ ಯಜ್ಞವಾಟಕೆ
ಅಶನ ಬೇಡಲು ಕಳುಹೆ ಗೊಲ್ಲರ
ಪಸುಳರಿಗೆ ನೈವೇದ್ಯವಿಲ್ಲದೇ
ವಶವೆ ಕೊಡಲೆಂದೆನ್ನೆ ಋಷಿಗಳು
ವಸುಧಿಪತಿ ಸರ್ವೇಶನೆಂದರಿ
ದಸಮಯತಿಗಳು ಕ್ಷಣ ಕ್ಷಣಕ್ಕೆ ಷ
ಡ್ರಸದ ಆರೋಗಣೆಯ ಮಾಡಿಸೆ
ಕುಶಲದಲಿ ಮೃಷ್ಟಾನ್ನ ಭುಜಿಸಲು ೩
ಬಾಲ ಕಂದಗೆ ತೊಡಿಗೆ ತೊಡಿಸಲು
ಲೀಲೆಯಿಂದಲಿ ಗೋಪಿದೇವಿಯು
ಕಾಳ ಮಡುವಿಲಿ ಧುಮಿಕಿ ಎಲ್ಲವ
ಕಳೆದು ಬರೆ ಆಟಗಳ ಪರೆವೆಲಿ
ಶೀಲಯತಿಗಳು ವಾರ ವಾರಕೆ
ಬಾಲ ತೊಡಿಗೆ ಶೃಂಗಾರಗೈಯ್ಯಲು
ಆಲಯವ ಬಿಟ್ಟೆಲ್ಲಿ ಪೋಗದೆ
ಓಲಗವ ಕೈಕೊಳ್ವೆನೆನ್ನುತ ೪
ಗೋಪಜನ ಗೋವ್ಗಳನೆ ಕಾಯಲು
ಗೋಪಿಯರು ತನ್ನ ಗುಲ್ಲು ಮಾಡಲು
ಪಾಪಿ ಕಂಸ ಅಟ್ಟುಳಿಯ ಪಡಿಸಲು
ಭೂಪತಿಯ ಪದವಿಲ್ಲದಿರಲು
ಈ ಪರಿಯ ಬವಣೆಗಳ ತಾಳದೆ
ಗೋಪ್ಯದಿಂದಿಲ್ಲಡಗಿ ನಿಂತು
ಗೋಪಾಲಕೃಷ್ಣವಿಠಲ ಯತಿಗಳ
ಗೌಪ್ಯಪೂಜೆಯಗೊಂಬ ವಿಭವಕೆ ೫

 

೫೮
ಬಂದು ನಿಲ್ಲೆಲೊ ಮನಮಂದಿರದೊಳು ಹರಿ
ಇಂದುವದನ ಆನಂದದಿಂದ ಪ.
ಮುಂದಗಮನೆರ ಅಂದದಿ ಕೂಡ್ಯರ-
ವಿಂದ ಮಧ್ಯದಿ ಬಹು ಸುಂದರ ವೆಂಕಟ ಅ.ಪ.
ಗಜವ ಪಾಲಿಸಿದಂಥ ಭುಜಗಶಯನ ಹರೆ
ತ್ರಿಜಗದೊಳಗೆ ದಿಗ್ವಿಜಯ ಮೂರುತಿ ಗೋ-
ವ್ರಜವ ಪಾಲಿಸಿ ಭೂಭುಜರ ಪೊರೆದೆ ಅಂ-
ಬುಜನೇತ್ರ ಅಜಪಿತ ಭಜಿಸಲಾಪೆನೆ ನಿನ್ನ
ಅಜಸುತಗೊಲಿದನೆ ಭುಜಗ ಭೂಷಣವಂದ್ಯ
ರಜ ತಮೊ ಸತ್ವದಿ ತ್ರಿಜಗವ ಸೃಷ್ಟಿಪೆ
ಕುಜನರ ಶಿಕ್ಷಿಪೆ ರಜ ತಮೊ ದೂರನೆ
ಸುಜನರ ಪೊರೆಯುವ ಋಜುಗಣವಂದಿತ ೧
ವ್ಯಾಪ್ತಾ ಜಗದಿ ನಿರ್ಲಿಪ್ತ ಗುಣಗಳಿಂದ
ಆಪ್ತ ಜೀವಕೆ ಸುಷುಪ್ತಿ ಕಾಲದಿ ನೀ
ಗುಪ್ತನಾಗಿ ಪೊರೆವ ಶಕ್ತನಹುದೊ ತ್ರಿ-
ಸಪ್ತ ಇಂದ್ರಿಯಗಳ ತೃಪ್ತಿಗೊಳಿಸು ನಿನ್ನೊಳ್
ಸಪ್ತ ಋಷಿಗಳಿಂದ ಗುಪ್ತರ್ಚನೆಗೊಂಬೆ
ಸಪ್ತಜಿಹ್ವನೊಳು ವ್ಯಾಪ್ತನಾಗಿ ಸುರರ
ತೃಪ್ತಿಪಡಿಸುವ ವ್ಯಾಪ್ತ ಮೂರುತಿಯೆ
ಸಪ್ತ ಸಪ್ತ ಭುವನೇಶ ಪ್ರಕಾಶ ೨
ವೇದಸುತಗೆ ಇತ್ತು ಆದರದಿ ಸುಧೆ
ಮೋದದಿ ಸುರರಿಗುಣಿಸಿ ಭೂದೇವಿಯನು ಕಾಯ್ದೆ
ಬಾಧಿಸೆ ಖಳ ಸುತನ ಭೇದಿಸಿ ಕಂಭ ಬಂದೆ
ಪಾದದಿ ಗಂಗೆ ಪೆತ್ತು ಬಾಧೆ ಕ್ಷತ್ರಿಯರಿಗಿತ್ತೆ
ಆದರದಲಿ ಸುಗ್ರೀವನ ಪೊರೆದೆ
ಯಾದವ ವಂಶ ಮಹೋದಧಿ ಚಂದ್ರ
ಸಾಧಿಸಿ ತ್ರಿಪುರರ ಛೇಧಿಸಿ ಕಲಿಮುಖ-
ರಾದ ದುಷ್ಟರ ಸೀಳಿ ಬಾಧೆಯ ಬಿಡಿಸಿದೆ ೩
ಪದ್ಮನಾಭನ ತೋರೊ ಪದ್ಮಸಂಭವ ಜನಕ
ಪದ್ಮನಾಭನೆ ಹೃತ್ಪದ್ಮ ಮಧ್ಯದಿ ವಾಸ
ಪದ್ಮ ಬಾಂಧವ ತೇಜ ಪದ್ಮ ನಯನಕರ
ಪದ್ಮದಿಂದಲಿ ನೀ ಪದ್ಮಾವತಿಯ ಕೂಡ್ದೆ
ಪದ್ಮವೈರಿಯ ಕೋಟಿ ಮುದ್ದು ಮುಖದ ತೇಜ
ಪದ್ಮ ಉದರ ಷಟ್ಪದ್ಮದಿ ವಾಸ
ಪದ್ಮ ಸರೋವರ ತೀರವಾಸ ಹೃ
ತ್ಪದ್ಮ ಮಧ್ಯದಿ ಭೂಪದ್ಮಿನಿ ಸಹಿತ ೪
ಆಪಾರ ಮಹಿಮನೆ ಗೋಪಾಲಕೃಷ್ಣವಿಠ್ಠಲ
ಭೂಪರೈವರ ಕಾಯ್ದೆ ದ್ರೌಪದಿ ಮಾನದೊಡೆಯ
ಪಾಪಿ ಜರಾಸಂಧ ಭೂಪರ ಬಂಧಿಸೆ
ನೀ ಪ್ರೀತಿಯಿಂದ ಪೋಗಿ ತಾಪವ ಬಿಡಿಸಿದೆ
ವ್ಯಾಪಕನೊ ಜಗಸ್ಥಾಪಕನೊ ಬಹು
ರೂಪಕನೊ ದುಷ್ಟತಾಪಕನೊ ಹರಿ
ಪಾಪ ಹರಿಸಿ ಕರ್ಮಲೇಪನ ಮಾಡದೆ
ನೀ ಪರಿ ಪರಿಯಿಂದ ಕಾಪಾಡೊ ಭಕ್ತರ ೫

 

೫೯
ಬಂದೆನ್ನ ಮನಮಂದಿರದಲಿ ನಿಲ್ಲೊ | ಹೇ ಶ್ರೀನಿವಾಸ
ಬಂದೆನ್ನ ಮನಮಂದಿರದಲಿ ನಿಲ್ಲೊ ಪ.
ಇಂದಿರೇಶ ವೈಕುಂಠದಿಂದ ನೀ
ಬಂದು ಈಗ ಎನ್ನ ಹೃದಯ ಕಮಲದಿ ಅ.ಪ.
ಜಗದಂತರಾತ್ಮ ನಿರ್ಮಲಾತ್ಮ | ನಿರ್ಗತ ದುರಿತಾತ್ಮ
ನಿಗಮಾದಿಗಳೊಂದ್ಯ ನೀ ನಿತ್ಯಾತ್ಮ | ಜೀವಂತರಾತ್ಮ
ಸುಗುಣವಂತ ನಿನ್ನ ಬಗೆ ಬಗೆ ಮಹಿಮೆಯ
ಪೊಗಳಬಲ್ಲೆನೆ ನಾ ಖಗವಾಹನನೆ ೧
ಅರಿಯೇನೋ ಅನ್ಯರ ಹರಿ ಸರ್ವೇಶ | ಹೃತ್ಕಮಲದಿ ವಾಸ
ಪರಿಹಾರಗೈಸೊ ಈ ಭವಕ್ಲೇಶ | ನಂಬಿದೆ ಸರ್ವೇಶ
ಅರಘಳಿಗೆ ನಿನ್ನಗಲಿರಲಾರೆನೊ
ಸಿರಿಸಹಿತದಿ ನಿನ್ನರಮನೆಯಿಂದಲಿ ೨
ಅರುಹಿದರೆನಗೆ ಶ್ರೀ ಗುರುಗಳು ಇಂದು | ನೀ ರಕ್ಷಕನೆಂದು
ಕರಕರೆಗೊಳಿಪುದು ಧರ್ಮವೆ ನಿಂದು | ನೀ ಕಾಯಲಿಬೇಕಿಂದು
ಸರಿಯಲ್ಲವು ಈ ತೆರದಲಿ ತೊರೆವುದು
ಶರಣ ರಕ್ಷಕನೆಂಬೊ ಬಿರುದು ಪೊತ್ತಿಲ್ಲವೆ ೩
ಎಂತೆಂತು ಸಹಿಸಲಿ ಈ ಭವಕ್ಲೇಶ | ಜೀ