Categories
ರಚನೆಗಳು

ಕಾರ್ಪರ ನರಹರಿದಾಸರು

ಬಾರೋ ಬೇಗನೆ ಶ್ರೀಧರ
೧೦೮
ಬಾರೋ ಬೇಗನೆ ಶ್ರೀಧರ ಗುಣಾಕರ ಪ
ಬಾರೋ ಬೇಗನೆ ಪಾದವಾರಿಜಕೆರಗುವೆ
ಧಾರುಣಿಯನು ಪೊತ್ತ ಚಾರು ಪರಿಯಂಕಕ್ಕೆಅ.ಪ
ಶೌರಿ ಅಗ್ರಜನಾಗಿ ಕ್ರೂರರ ಸದೆದು ಭೂ
ಭಾರವನಿಳುಹಿದ ಶೌರ್ಯದ ಮಂಚಕೆ೧
ರಾಮನ ಶೇವಿಸಿ ಪ್ರೇಮವನು ಪಡೆದಂಥ
ಸೌಮಿತ್ರಿಯೆಂಬ ಸುನಾಮದ ಹಾಸಿಗೆಗೆ ೨
ಸಾಸಿರವದನದಿ ಶ್ರೀಶನೆ ತವಗುಣ
ಲೇಶ ವರ್ಣಿಸುವಂಥ ಭಾಸುರ ತಲ್ಪಕೆ ೩
ಇಂದಿರದೇವಿಯು ನಿಂದಿರುವಳು ತವ
ಸುಂದರ ಚರಣಾರವಿಂದವ ತೋರಿಸು ೪
ಶರಣರ ಪೊರೆವ ಕಾರ್ಪರನರಶಿಂಹನೆ
ಹರಗೆ ಭೂಷಣವಾದ ಉರಗಪರ್ಯಂಕಕೆ೫

ಹಾಡಿನ ಹೆಸರು :ಬಾರೋ ಬೇಗನೆ ಶ್ರೀಧರ
ಹಾಡಿದವರ ಹೆಸರು :ನೀಲಾ ರಾಮಗೋಪಾಲ್
ರಾಗ :ರಾಗಮಾಲಿಕೆ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ನೀಲಾ ರಾಮಗೋಪಾಲ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ವಂದಿಪೆ ವಾಗ್ದೇವಿ ಭಾರತಿ ನೀಡೆನಗೆ
೨೧
ವಂದಿಪೆ ವಾಗ್ದೇವಿ ಭಾರತಿ ನೀಡೆನಗೆ ಸುಮತಿ
ನಂದಸುತನ ಪದದಿ ಕೊಡು ರತಿ ಪ
ವಂದಿಪೆ ವಾಗ್ದೇವಿಯನ್ನ ಮಂದಮತಿಯ
ಕಳೆದು ಮನದಿ-
ನಿಂದು ವಿದ್ಯೆಯ ನೀಡಿ ಎನಗಾನಂದ
ಗರಿಯೆ ಬಂದು ಬೇಗ ಅ.ಪ
ಇಂದು ಮೌಲಿ ಮುಖ್ಯ ಸುರಗಣ ವಂದಿತಳೆ ಎನ್ನ
ನಿಂದು ವದನದಲ್ಲಿ ಅನುದಿನ ನಂದ ಮುನಿಯ ಶಾಸ್ತ್ರವಚನ
ಛಂದದಿಂದ ಪಠಣ ಶ್ರವಣಾನಂದವಾಗುವಂದದಿ ಗುರು
ಗಂಧ ವಾಹನರಾಣಿ ನಿನಗೆ೧
ಪೇಳಲಳವೆ ನಿಮ್ಮ ಮಹಿಮೆಯ ಕಾಲಭಿಮಾನಿ
ಕೇಳುವೆ ಸುಜ್ಞಾನ ಭಕುತಿಯ ಕಾಲಕಾಲಗಳಲ್ಲಿ ಎನ್ನ
ನಾಲಿಗೆಯೋಳ್ ನಿಂತು ಲಕ್ಷ್ಮೀಲೋಲನ ಶುಭ ಲೀಲೆಗಳನು
ಪಾಡಿ ಪೊಗಳುವಂತೆ ಜನನಿ ೨
ಚಾರು ಕೃಷ್ಣಾತೀರಸಂಸ್ಥಿತಾ ಉದಾರ ಚರಿತ
ನೀರಜಾಸನಾದಿಸುರನುತಾÀ ಶೇರಿದ ಭಕುತರಿಗೆ ತ್ರಿದಶ
ಭೂರುಹ ವೆಂದೆನಿಸಿದಂಥಾ ಪಾರ ಮಹಿಮ ಕಾರ್ಪರಸಿರಿ
ನಾರಸಿಂಹನ ಸೊಸೆಯೆ ನಿನಗೆ ೩

ಹಾಡಿನ ಹೆಸರು :ವಂದಿಪೆ ವಾಗ್ದೇವಿ ಭಾರತಿ ನೀಡೆನಗೆ
ಹಾಡಿದವರ ಹೆಸರು :ಮಂಗಳಾ
ರಾಗ :ಹಂಸನಾದ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ರತ್ನಮಾಲಾ ಪ್ರಕಾಶ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಸಾರಿದೆನೋ ನಿನ್ನ ವೆಂಕಟರಮಣ
೭೭
ಸಾರಿದೆನೋ ನಿನ್ನ ವೆಂಕಟರಮಣ ಪ
ನಾರಪ್ಪಯ್ಯನಿಗೊಲಿದು ಗೋರೂಪದಲಿ ಬಂದಿಯೊ ಅ.ಪ
ಸುಂದರ ಶುಭಕಾಯಾ ಆಕಾಶರಾಜನ
ನಂದಿನಿಯಳ ಪ್ರೀಯ
ವಂದಿಸುವೆನು ಭವಬಂಧನ ಬಿಡಿಸಯ್ಯ ೧
ಕುರಕಿಹಳ್ಳಿಯ ಗ್ರಾಮದಿ ಶಿಲೆಯೊಳಗೆನಿಂದು
ವರಕೃಷ್ಣಾನದಿ ಜಲದೀ
ಅರುಣನುದಯದಲ್ಲಿ ನಿರುತ ಪೂಜೆಯಕೊಳುವಿ ೨
ನೀರದ ನಿಭಕಾಯಾ ಧರೆಯೊಳುಕೃಷ್ಣಾ
ತೀರ ಕಾರ್ಪರನಿಲಯಾ
ಘೋರ ಪಾತಕಹರ ನಾರಸಿಂಹಾತ್ಮಕನೆ ೩

ಹಾಡಿನ ಹೆಸರು :ಸಾರಿದೆನೋ ನಿನ್ನ ವೆಂಕಟರಮಣ
ಹಾಡಿದವರ ಹೆಸರು :ರವೀಂದ್ರ ಸೂರಗಾವಿ
ರಾಗ :ಕಲಾವತಿ
ತಾಳ :ದಾದ್‍ರಾ
ಸಂಗೀತ ನಿರ್ದೇಶಕರು :ನಾಗರಾಜರಾವ್ ಹವಾಲ್ದಾರ್
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ