Categories
ರಚನೆಗಳು

ಕಾರ್ಪರ ನರಹರಿದಾಸರು

೯೨
ಆರುತಿ ಮಾಡುವೆನಾ ಕೃಷ್ಣಮೂರುತಿಗೆ ಪ
ಆರುತಿ ಮಾಡುವೆ ನಾರಿ ದ್ರೌಪದಿಗೆ
ಸೀರಿಗಳುಡಿಸಿದ ಮಾರಪಿತಗೆ ಸಖಿ ಅ.ಪ
ಅಂಗುಟಾಗ್ರದಿಂದ ಗಂಗೆಯ ಪಡೆದಂಥ
ಮಂಗಳಪ್ರದ ಶಿರಿರಂಗನ ಚರಣಕೆ೧
ವಂದಿಸುವರ ಭವ ಬಂಧವ ಬಿಡಿಸುವ
ನಂದಗೋಪನ ಮುದ್ದು ಕಂದ ಶ್ರೀಕೃಷ್ಣಗೆ ೨
ಆರಾದಿಸುವ ರಘ ದೂರಮಾಡುವ ಶುಭ
ಕಾರಿ ಕೊಪ್ಪರ ‘ಸಿರಿನಾರಶಿಂಹಗೆ ‘ ಬೇಗ ೩

೯೩
ಆರುತೀಯ ತಾರೆ ಶ್ರೀಹರಿಗೆ ಸುರಸಾರ್ವಭೌಮಗೆ ಪ
ವಾರಿಜನಾಭಗೆ ನೀರದಾಭಗೆ ಬಾರೆ
ಬೇಗನೆ ಸಾರಸಾಂಬಕಿಅ.ಪ
ಮಾರಜನಕಗೆ ವಾರಿಜಭವ ಕು-
ಮಾರ ಜನಕ ಮುಖಾಮರೇಡ್ಯಗೆ
ಮಾರವೈರಿ ಚಾಪ ಮುರಿದ ಸುಕು-
ಮಾರ ಶರೀರ ಸೀತಾರಾಮ ಚಂದ್ರಗೆ ೧
ಇಂದಿರವರಗೆ ಮಂದರಧರ ಪು-
ರಂದರಾನುಜ ಸಿಂಧುಶಯನಗೆ
ಮಂದಯಾನೆ ಛಂದದಿಂದ ಬಂದೀಗ
ವಂದೀಶ್ಯಾನಂದಾದಿ ಬೆಳಗಲು ೨
ವಾರಣಭಯ ನಿವಾರಣ ಜಗ-
ತ್ಕಾರಣಗೆ ಸುಖಪೂರ್ಣದೇಹಗೆ
ಸೇರಿ ತನ್ನ ಸೇವಿಪರಘ ದೂರ
ಕೊಪ್ಪರ ಶ್ರೀ ನಾರಸಿಂಹನಿಗೆ ೩

೯೪
ಇಂದು ಆರತಿ ತಂದು ಬೆಳಗಿರೆ ಇಂದಿರಾವರಗೆ
ಮಂದರಧರಗಿಂದು ಪ
ನಂದಸುತನಿಗೊಂದಿಸುತಲಿ ಸಿಂಧು ಶಯನಗೆ
ಕುಂದರದನೆ ಅ.ಪ
ನಂದಿ ವಾಹನ ವಂದಿತ ದಶ
ಕಂಧರಾಂತಗೆ ಕುಂದರದನೆ
ವಂದಿಸುವರ ಬಂಧ ಬಿಡಿಶ್ಯಾ
ನಂದಗರಿವಗೆ ಮಂದಗಮನೆ ೧
ಅಂಗನೆಯರು ಶೃಂಗಾರದಲಿ
ಸಂಗೀತ ಪ್ರಿಯಗೆ ಭೃಂಗಾಲಕಿ
ಗಂಗಾಪಿತ ಮಂಗಳಾಂಗ ವಿ-
ಹರಿಗ ವಾಹನಗೇ ತಿಂಗಳಮುಖಿ ೨
ನಾರಿಯಳ ನುದ್ಧಾರ ಮಾಡಿದ
ಚಾರು ಚರಣಗೆ ನಾರಿ ಮಣಿಯೆ
ಸೇರಿದವರ ಪೊರೆವ ಕಾರ್ಪರ
ನಾರಶಿಂಹಗೆ ಭೂರಿಮಹಿಮಗಿಂದು ೩

೯೮
ಇಂದು ಆರುತಿ ತಂದು ಬೆಳಗಿರೆ ಸಿಂಧುರಾಜನ ಕುವರಿಗೆ
ಸಿಂಧು ರಾಜನ ಕುವರಿಗೆ ಅರವಿಂದ
ನಾಭನ ಮಡದಿಗೆ ಪ
ಅಂದು ಸುರಕೃತ ಸಿಂಧು ಮಥÀನದಿ ಬಂದು
ನೋಡುತ ಕೃಷ್ಣಗೆ
ವಂದಿಸುತ ಪೂಮಾಲೆ ಹಾಕಿದ
ನಂದಗೋಪಕುಮಾರಗೆ ೧
ಎಲ್ಲದೇಶ ದೊಳೆಲ್ಲ ಕಾಲದೊಳೆಲ್ಲ ಸುರರೊಳು ಕೃಷ್ಣಗೆ
ಇಲ್ಲ ಸಮರೆಂತೆಂಬುದನು ಜಗಕೆಲ್ಲ ತೋರಿದ ದೇವಿಗೆ ೨
ವಾರವಾರದಿ ಚಾರುಪದಯುಗ ಸಾರಿಭಜಿಸುವ ಜನರಿಗೆ ಆ-
ಪಾರ ಸೌಖ್ಯಗಳೀವ ಕಾರ್ಪರ ನಾರಸಿಂಹನ ರಾಣಿಗೆ೩

೪೮
ಎಂತು ನಾತುತಿಸಲಿ ಯತಿವರ
ಚರ್ಯನಾಮುಗಿವೆನು ಕೈಯ್ಯಾ ಪ
ಮಂತ್ರಸದನ ಪದ ಚಿಂತಕ ಶ್ರೀ ರಘು ಕಾಂತಕರಜ ರಘು
ದಾಂತ ಯತೀಂದ್ರರ ಅ.ಪ
ಅಂತರಂಗದಿ ಸಂತತ ಶ್ರೀಹರಿಯ ಚಿಂತಿಸುತಲಿ ಭೂಮಿಯ
ಕಾಂತ ದಂಷ್ಟ್ರದಿ ಸಂಜನಿಸಿದ ನದಿಯ ಸಂಗಮ ಶುಭನಿಲಯ
ಶಾಂತದಾಂತ ಧೀಮಂತರೆನಿಸುತ ದಿಗಂತರದಲಿ
ವಿಶ್ರಾಂತ ಸುಮಹಿಮರ ೧
ಮೇದಿನಿ ಜಾತ ಪತಿ ಲಕ್ಷ್ಮಣರ ಪಾದಾಂಬುಜ ಮಧುಪರ
ಮೋದಾಶ್ರು ಸುರಿಸುತ ಪೂಜಿಸಿದವರ ಪುಲಕೀತ ವಿಗ್ರಹರ
ವಾದಿವಾರಣ ಮೃಗಾಧಿಪರೆನಿಸುತ ಮೋದತೀರ್ಥ ಸುಮ
ತೋದಧಿ ಚಂದಿರ ೨
ಇಳಿಯೊಳು ಚರಿಸುತ ಬುಧ ಜನರನ್ನು ಚಲಿಸುತ ಛಾತ್ರರನು
ತಿಳಿಸೀ ಸಚ್ಛಾಸ್ತ್ರವ ಮರ್ಮಗಳನ್ನು ಉದ್ಧರಿಸ್ಯವರನ್ನು
ಯಳಮೇಲಾರ್ಯರ ಒಲುಮೆ ಪಡೆದು ಭವ
ಜಲಧಿಯ ದಾಟಿದ ಕಲುಷ ವಿದೂರರ ೩
ಪ್ರಥಮಾಶಿಲೆ ಕ್ಷೇತ್ರದೊಳಿಹ ಗುರುವಿಜಯ
ದಾಸರ ಶುಭಚರಿಯ
ಸ್ತುತಿಸಿ ಶೇವಿಸಿ ಪಡೆದರು ಗುರುಕೃಪೆಯ ನೋಳ್ಪರಿಗಾಶ್ಚರ್ಯ
ನತ ಜನರಘ ಪರ್ವತ ಪವಿ ಸನ್ನಿಭ
ಕ್ಷಿತಿ ಸುರತತಿ ಸೇವಿತ ಪದ ಪದ್ಮರ ೪
ಕ್ಷೋಣಿಯೊಳು ಕಾಣೆ ನಿವರಿಗೆ ಸಮಾನ
ಜಾಣ ಮಾನವರನ
ಸಾನುರಾಗದಿ ಧ್ಯಾನಿಸಲಿವರನ್ನ ಕಾಮಿತ ಗರಿವರನ
ಶ್ರೀನಿಧಿ ಕಾರ್ಪರ ಸ್ಥಾನಗ ನರಪಂಚನನನೊಲಿಸಿದ
ಮೌನಿವರೇಣ್ಯರ ೫

ಆತ್ಮನಿವೇದನೆಯ ಕೀರ್ತನೆಗಳು
೬೩
ಏನು ಸಾಧನ ಮಾಡಿ ಕೃಷ್ಣನ ಕರವ ಸೇರಿತೋ
ಸುಖಪೊಂದಲು ಪ
ಸಾನು ರಾಗದಿ ಶ್ರವಣ, ಮನನ ಧ್ಯಾನಗೈದಿತೋ
ಬಹು ಜನ್ಮದಿ ಅ.ಪ
ದೇವದಾರು, ಅಗರು, ಚಂದನ, ಮಾವು, ಚಂಪಕ,
ಹರಿ ತೋಷಕ
ಸಾವಿರಾರು ತರುಲತೆಗಳೀ ವಸುಧಿಯೊಳಿರಲೂ
ಬಿದಿರಿನಕೊಳಲು ೧
ಮುರಮಡನನ ಅಭಯ ಕರದವರ
ಪ್ರಸಾದವ ಕಮಲೋಧ್ಬವ
ಸ್ಮರರಿಪು ಮುಖಸುರರು ಬೇಡಲು ದೊರೆಯದೀ
ವಿಭವ ವಂಶೋದ್ಬವ ೨
ತ್ರಾಣವೇನು ಮುರಲಿಗೆ ಶ್ರೀ ಹರಿಯ ವದನದೊಳು
ಸುಧೆ ಸವಿಯಲು
ಶ್ರೀನರಸಿಂಹನರಾಣಿ ತಾನೆ ವೇಣುರಂಧ್ರದೊಳು
ನಿಂದಿರುವಳು ೩

೨೪
ಕರುಣಾದಿ ಪೊರೆಯನ್ನ ಪಾರ್ವತೀರಮಣ
ಪುರಹರನೆ ಕರುಣಿಪುದೆಮಗೆ ಸುಜ್ಞಾನ ಈ ಪ
ಧರಣಿಯೊಳು ಗೂಗಲ್ಲು ಕ್ಷೇತ್ರ ಸುಮಂದಿರನೆ ನಿನ್ನ
ಸ್ಮರಿಸುವೆನು ಅನುದಿನ ಅ.ಪ
ನಿರುತ ಸ್ಮರಿಪರ ದುರಿತ ಗಜ ಪಂಚಾಸ್ಯ ಕರಮುಗಿವೆ
ನೆರೆನಂಬಿನಿನ್ನನು ಶೇವಿಸುವ ಶರಣರಿಗೆ ಸುರತರುವೆ
ಜನಿಸಿರುವರೊಳು ಸರ್ವರಿಗೆ ಮನದಲಿ ಪ್ರೇರಿಸುವ ಗುರುವೆ
ಗೂಗಲ್ಲಪ್ರಭುವೆ ೧
ಕ್ಷಿತಿಪವರ ಪರಿಕ್ಷಿತಗೆ ಶೃತಿ ಸಮ್ಮತವೆನಿಸಿದಂಥ
ಭಾಗವತಸು
ಕಥಾ ಮೃತವನುಣಿಸಿದ ಪರಮ ಪ್ರಖ್ಯಾತ
ತಿಳಿಸೆನ್ನ ಮನಕೆ
ತದರ್ಥಗಳ ಪೊಳೆವಂತೆ ಶುಭಚರಿತ
ಜಿತ ಮನೋಜಾತ ೨
ಅನುಗಾಲ ಭಕುತರ ಮ್ಯಾಳವನು
ಪರಿಪಾಲಿಸಲು ಶಿವನೆ ರಾಜಿಸುವ
ಕೃಷ್ಣಾಕೂಲದಲಿ ನಿಂದಿರುವಿ ಶಂಕರನೇ ಜನಮೇಜಯಾಖ್ಯ
ನೃಪಾಲಪೂಜಿತ ಪಾದ ಪಲ್ಲವನೇ
ಸುವಿಶಾಲ ಮಹಿಮನೇ ೩
ನಂದೀಶ ಗಮನನೆ ವಂದಿಸುವೆ ಇಂದ್ರಾದಿಸುರರೊಡೆಯ
ನೀಡಿದೆಯೊ ಗೌತುಮ
ರಂದ ಮಾಡಿದ ತಪಕೆ ಒಲಿದಭಯ
ಮನಮಂದಿರದಿ ಗೋ-
ವಿಂದನಂಘ್ರಿಯ ಕಾಂಬುವೊ ಬಗೆಯ ತೋರೆನಗೆ ಜೀಯ೪
ಶ್ರೀಶ್ವೇತಗಿರಿ ಸುಕ್ಷೇತ್ರ ಪಂಚ ಕ್ರೋಶಗನು ನೀನೆ
ಸರ್ವೇಶ ಕಾರ್ಪರ ವಾಸಸಿರಿ ನರಕೇಸರಿಗೆ ಪ್ರಿಯನೇ
ದುರ್ವಿಷಯದಲಿ ಅಭಿಲಾಷೆ ಪುಟ್ಟಿಸದಂತೆ ಶಶಿಧರನೆ
ಸಿರಿವ್ಯಾಸಕುವರನೇ೫

೬೪
ಕರುಣಿಸು ನರಹರಿಯೇ ಸ್ಮರಣಿಯ
ಕರುಣಿಸು ನರಹರಿಯೇ ಪ
ಕರುಣಿಸುವದು ತವಸ್ಮರಣೆ ನಿರಂತರ
ಧರಣಿ ಸುರಪ್ರಿಯ ಚರಣಕೆರಗುವೆನು ಅ.ಪ
ಶರಣರ ಸುರತರುವೇ ಕರುಣಾ
ಶರಧಿ ಶಿರಿಯಧೊರೆಯೆ
ಸರಸಿಜ ಭವಮುಖರರಸನೆ ತವಪದ
ಸರಸಿಜದಲಿ ಮನವಿರಿಸುವಂತೆ ಜವ ೧
ಕಂದನನುಡಿಕೇಳಿ ಸ್ತಂಭದಿ
ಬಂದಿಯೊ ವೇಗದಲಿ
ವಂದಿಸುವೆನು ಭವಬಂಧ ಬಿಡಿಸಿ ಮನ
ಮಂದಿರದಲಿ ತವ ಸಂದರುಶನವನು ೨
ಚಾರು ಕೃಷ್ಣ ತೀರಾಕಾರ್ಪರಾ
ಗಾರನೆ ಸ್ಮರಿಸುವರ
ಘೋರದುರಿತ ಹರನಾರಸಿಂಹ ನಿ
ನ್ನಾರಧಕರೊಳು ಸೇರಿ ಸುಖಿಸುವಂತೆ ೩


ಕಾಯೇ ಕಮಲಾಲಯೇ
ಮಧು ಮಥನ ಸತಿಯೆ ಪ
ಕಾಯಜಾತನ ತಾಯೆನಮಿಸುವೆ
ಕಾಯೆ ತ್ರಿಜಗಕೆ ತೋಯ ಜಾಂಬಕಿ ಅ.ಪ
ತೋಯಜಾಸನ ಮುಖ್ಯ ತ್ರಿದಶ ನಿ
ಕಾಯ ಸಂಶೇವಿತಳೆ ಬೇಡುವೆ
ಹೇಯ ವಿಷಯವ ಮರಸಿ ಹರಿಪದ
ತೋಯಜಕೆ ಮನವೆರಗುವಂದದಿ ೧
ಘೋರತರ ಸಂಸಾರ ಶ್ರಮ ಪರಿ
ಹಾರ ಮಾಳ್ಪ ಸಮೀರ ಸಮಯದಿ
ಸಾರವನು ಸುಜನರಿಗೆ ಬೋಧಿಪ
ಸೂರಿಗಳ ಸಹವಾಸ ಪಾಲಿಸಿ ೨
ಭಾರ್ಗವಿಯೆ ಕಾಮಾದಿ ಷಡ್ರಿಪು
ವರ್ಗವನು ಗೆಲುವದಕೆ ಗುರುಗಳ-
ನು ಗ್ರಹಿಸಿ ಸುಜ್ಞಾನ ಭಕುತಿ ವೈ
ರಾಗ್ಯ ವೆಂಬುವ ಭಾಗ್ಯ ಒದಗಿಸಿ ೩
ರಾಮನರಸಿಯೆ ನಿಮ್ಮ ಶುಭಪದ
ತಾಮರಸವನು ಬಿಡದೆ ಪೂಜಿಪ
ಕಾಮಿನೀ ಜನ ಸ್ತೋಮಕನುದಿನ
ಕಾಮಿತಾರ್ಥಗಳಿತ್ತು ಕರುಣದಿ ೪
ಮಂಗಳಪ್ರದ ಕೃಷ್ಣವೇಣಿ ತ-
ರಂಗ ಶೋಭಿತ ಕಾರ್ಪರಾಲಯ
ತುಂಗ ಮಹಿಮ ವಿಹಂಗ ರಾಜ ತು
ರಂಗ ಶ್ರೀ ನರಸಿಂಗ ನರಸಿಯೆ೫

೯೫
ಕುಂದಣದಾರುತಿ ತಂದು ಬೆಳಗಿರೆ ಪ
ಇಂದಿರವರಗೆ ಮಂದರ ಧರಗೆ
ವಂದಿಸುವರ ಭವಬಂಧ ಬಿಡಿಸುವಗೆ ೧
ವಿಜಯಸಾರಥಿಗೆ ದ್ವಿಜವರ ಗಮನಗೆ
ಗಜ ವರದಗೆ ಪಂಕಜ ಭವಪಿತಗೆ ೨
ಸುರಪರಿ ಪಾಲಗೆ ಶರಧಿಜ ಲೋಲಗೆ
ಶರಣರ ಪೊರಿವ “ಕಾರ್ಪರ ನರಸಿಂಹಗೆ” ೩

೩೮
ಕೃಷ್ಣದ್ವೈಪಾಯನ ಗುರುರಾಜರ ಚರಣ ಕಮಲಕಾನಮಿಪೆ
ಶಿರಬಾಗಿ ಬಿನ್ನೈಪೆ ಪ
ಧರೆಸುರ ಮಂಡಿತ ಸುರಪುರದಲಿ ಮದ್ಗುರು
ಯಳಿಮೇಲಾರ್ಯರಿಗೆ ವರದ ಶಿರಿ ಅ.ಪ
ವೇದವ್ಯಾಸರ ಕರಕಮಲಜರೆನಿಸಿ ವೇದೇಶರ ಮುಖದಿ
ವೇದಾಂತ ಸುಶಾಸ್ತ್ರ ಜ್ಞಾನವ ಘಳಿಸಿ ಮೇದಿನಿಯೊಳು ಚರಿಸಿ
ವಾದಿವಾರಣ ಮೃಗಾಧಿಪರೆನಿಸುತ ಮೇದಿನಿ ಸುರರಿಗೆ
ಮೋದವ ಗರೆದ ೧
ಧರಿಜಾರಮಣನ ಪದಪೂಜಿಸಿದಂಥ ಶ್ರೀ ವ್ಯಾಸರ ಮಂತ್ರ
ಧರಿಯೊಳು ಜಪಿಸಿದರಿವರೆ ಮಹಾಂತರೆನಿಸಿದರತಿ ಶಾಂತ
ವರುಣಿಸಲೊಶವೆ ಗುರುವರ ಮಠದಲಿ ಸುರಗಂಗೆಯು
ಬಂದಿರುವ ಮಹಿಮೆಯನು ೨
ವರ ಭೀಮಾತಟದಿ ವಿರಾಜಿಸುವಂಥ ಕುಸುಮೂರುತಿ ಸಂಸ್ಥ
ಶರಣಾಗತ ಜನರಿಗೆ ಸಕಲಾಭೀಷ್ಟ ಗರಿಯುವ ಸುಸಮರ್ಥ
ಧರೆಯೊಳು ಮೆರೆಯುವ ‘ಶಿರಿ ಕಾರ್ಪರ ನರಹರಿ’ ಯ
ನೊಲಿ-ಸಿರುವ ಪರಮ ಮಹಾತ್ಮ೩

೧೧೧
ಕೊಡುವೆ ತಾಂಬೂಲವ ಪಿಡಿಯೊ ಪಿಡಿಯೊ ದೇವಾ
ಅಡಿಗಳಿಗೆರಗುವೆನಾ ಪ
ಕಡುಹರುಷದಿ ವಿಪ್ರ ಮಡದಿಯರನ್ನವ
ಕೊಡಲು ಭುಂಜಿಸಿದ ಪಾಲ್ಗಡಲ ಶಯನ ಕೃಷ್ಣ ಅ.ಪ
ಮಡದಿಯ ನುಡಿಕೇಳಿ ಕಡುಭಕುತಿಯಲವ
ಪಿಡಿಯವಲಕ್ಕಿಯನು ಕೊಡಲು ಭುಂಜಿಸಿಮಿತ್ರ
ಬಡವ ಸುದಾಮನಿಗೆ ಕೆಡದ ಸಂಪದವನ್ನು
ಗಡನೆ ನೀಡಿದ ದೇವಾ೧
ಕುಬ್ಜೆಗಂಧಕೆ ಒಲಿದು ಕಬರಿಯ ಪಿಡಿದೆತ್ತಿ
ಸುಭಗರೂಪಳ ಮಾಡಿದ ಅಬ್ಜನಾಭನೆ ತ್ವತ್ಪಾ-
ದಬ್ಜಕರ್ಪಿಸಿದಂಥ ಶಬರಿಯ ಫಲಮೆದ್ದ
ಪ್ರಭು ಶ್ರೀರಾಮನೆ ನಿನಗೆ ೨
ಲಲನೆ ದ್ರೌಪದಾದೇವಿ ಗೊಲಿದಕ್ಷಯಾಂಬರ-
ಗಳನೆ ಪಾಲಿಸಿಪೊರೆದ ಬಲುವಿಧ ಭಕುತರ
ಬಳಗವ ಸಲಹಲು ಇಳೆಯೊಳು ಕಾರ್ಪರ
ನಿಲಯ ಶ್ರೀ ನರಹರಿಯೇ೩

೮೬
ಕ್ಷೋಣಿಯೊಳು ಸರ್ವಪುರಾಣಜ್ಞಸೂತರು
ಶೌನಕಾದಿ ಮುನಿಗಳಿಗೆ
ಶ್ರೀನಿವಾಸನ ಪದ ಧ್ಯಾನಿಸಿ ಸತ್ಕಥೆ
ಸಾನುರಾಗದಲಿ ಪೇಳಿದರು ೧
ಕಾಳಿರಮಣ ಚಂದ್ರ ಮೌಳಿಗೆ ಮನೆಯೆಂದು
ಕೈಲಾಸಶಿಖರ ಮೆರೆವುದು
ಪೇಳಲಳವೆ ಇಂದ್ರನೀಲ ಮಾಣಿಕ್ಯಾದಿ
ಮೇಲಾದ ರತ್ನಕಾಂತಿಗಳಿಂ೨
ಚೂತ ಚಂಪಕ ಪಾರಿಚಾತ ಬಕುಲ
ಜಂಬುಕೇತಕಿ ಪನಸ ಪುನ್ನಾಗ
ಖ್ಯಾತವಾದ ತರುವ್ರಾತಗಳಿಂದ
ಸರ್ವಾತಿಶಯದಲಿ ತೋರುವದು ೩
ಸಿದ್ಧ ಚಾರಣ ತಪೋವೃದ್ಧರಿದೇ ಸ್ಥಳ
ಸಿದ್ಧಿದಾಯಕ ವೆಂದಿಲ್ಲಿ
ಹೃದ್ಗುಹದಲ್ಲಿ ಗೋವರ್ಧನ ಧರನಂಘ್ರಿ
ಪದಧ್ಯಾನದಿ ಕುಳಿತಿಹರು ೪
ಪವನಸಂಯುತಮಾಗಿ ದಿವಿಜ ಶೇವಿತ ಮಾಗಿ
ಅವನಿಧರಾಗ್ರಣಿಯಾಗಿ
ಭುವನೋದರತ್ವದಿ ಭುವನಜನಾಭ ಶ್ರೀಧವನಂತೆ
ಗಿರಿಯು ಮೆರೆಯುವುದು೫
ಭಾಸುರ ರತ್ನಸಿಂಹಾಸನದಲಿ ಪರಮೇಶ್ವರ
ಪಾರ್ವತಿಯೊಡನೆ
ತೋಷದಿ ಕುಳಿತಿರಲಾ ಸಮಯದಿ ಸತಿ ಈಶಗೆ
ನಮಿಸಿ ನುಡಿದಳು ೬
ಲೋಕಕ್ಕೆ ಹಿತವಾಗಬೇಕೆಂದು ಸತಿಯು ಪಿನಾಕಿಗೆ
ನುಡಿಯ ಲಾಕ್ಷಣದಿ
ಏಕಮನದಿ ಸರ್ವಲೋಕಮಾತೆಯವೃತ
ನಾಕರುಣಿಸುವೆ ಕೇಳೆಂದ೭
ಧರೆಯೊಳು ಕಾಮಿತ ವರಗಳ ನೀಡುವ
ವರಮಹಾಲಕ್ಷ್ಮಿಯ ವೃತವು
ಪರಮ ಭಕುತಿಯಿಂದಾಚರಿಸಿದ ಕ್ಷಣದೊಳು
ದೊರೆವುದು ಸಕಲಸೌಭಾಗ್ಯ ೮
ಮಾಸ ಶ್ರಾವಣ ಶುಕ್ರ ವಾಸರಯುತ
ಪೂರ್ಣ ಮಾಸಿಯ ದಿನದಿ ಪೂಜಿಪದು
ಭೂಸುರವರ್ಯ ಸುವಾಸಿನಿಯರನು
ವಿಶ್ವಾಸದಿಂದಾರಾಧಿಸುತಲಿ ೯
ಸಣ್ಣಶ್ಯಾವಿಗೆ ಪರಮಾನ್ನ ಭಕ್ಷಾದಿ
ಪಕ್ವಾನ್ನ ಲೇಹ್ಯಾದಿ ನೈವೇದ್ಯ
ಚಿನ್ನದ್ಹರಿವಾಣದಿ ಚನ್ನಾಗಿ ಬಡಿಸಿ
ತತ್ತನ್ನಿಯಾಮಕರ ಚಿಂತಿಪುದು ೧೦
ಧೂಪ ದೀಪಾದಿ ಸರ್ವೋಪಚಾರದಲಿ
ಕೃಪಾಪಯೋನಿಧೆಯ ಪೂಜಿಪುದು
ಕೋಪಧೂಪವು ಜ್ಞಾನದೀಪಗಳಿಂದ
ಬಿಂಬಾಪರೋಕ್ಷಿಗಳು ಪೂಜಿಪರು ೧೧
ಭೂಮಿ ಯೊಳೀವೃತ ನೇಮದಿಂದಲಿ ಮಾಡಿ
ಕಾಮಿತ ಪಡೆದವರ್ಯಾರು
ಸೋಮ ಶೇಖರನೆ ಪೇಳೀ ಮಹಾವೃತದ
ಮಹಾಮಹಿಮೆಯನು ಚನ್ನಾಗಿ೧೨
ಧರೆಯೊಳು ಕುಂಡಿನ ಪುರದೊಳಗೊಬ್ಬ ಭೂಸುರನ
ಮಡದಿ ತಾನಿರಲು
ಸರಸಿಜಾಂಬಕಿಯ ಪೆಸರು ಚಾರುಮತಿಯೆಂದು
ಕರೆಯುವರೆಲ್ಲಾರು ಪುರದಿ ೧೩
ಅನುದಿನದಲಿ ಗುರುಜನರ ಶೇವಿಸುವದೆ
ವನಜನಾಭನ ಶೇವೆಯೆಂದು
ಇನಿಯನ ನುಡಿಗಳಿಗನುಸರಿಸುತ ಭಹು ವಿನಯಾದಿ
ಗುಣದಿ ಭೂಷಿತಳು ೧೪
ನಂದದಿ ಮಲಗಿರಲೊಂದಿನ ಸ್ವಪ್ನದಿ
ಬಂದಳು ವರಮಹಾಲಕ್ಷ್ಮಿ
ಸುಂದರಿ ವರವ ಬೇಡೆಂದು ನುಡಿಯೆ ಪದಕೊಂದಿಸಿ
ಪರಮ ಸಂಭ್ರಮದಿ ೧೫
ಸಿರಿದೇವಿ ನಿನ್ನಯ ಕರುಣದಿ ಬ್ರಹ್ಮನು
ನಿರ್ಮಿಸುವನು ಜಗವೆಲ್ಲ
ಪರಮಧನ್ಯಳಾದೆ ದರುಶನದಿಂದಘತರಿದು
ನೀ ಕರುಣಿಸು ಮಾತೆ ೧೬
ಬರಲು ಶ್ರಾವಣ ಶುಕ್ರವಾರ ಪೂರ್ಣಮಿ
ಹರುಷದಿಂದೆನ್ನಯ ವೃತವ
ಚರಿಸಿದಾಕ್ಷಣದೊಳು ಗರಿವೆ ಸಂಪದವೆಂದು
ವರಗಳನಿತ್ತಳು ದಯದಿ ೧೭
ಇಂತಾದ ಸ್ವಪ್ನ ವೃತ್ತಾಂತ ಸ್ವಜನಕತಿ
ಸಂತೋಷದಲಿ ಪೇಳಲವರು
ಇಂತು ನುಡಿದರು ನಿಶಾಂತದಿ ಸ್ವಪ್ನವು
ಚಿಂತಿತ ಫಲವೀವುದೆಂದು ೧೮
ರಂಗವಲ್ಯಾದಿ ಚಿತ್ರಗಳಿಂದಲಿ ಮನಿ
ಸಿಂಗರಿಸಿದಳಾದಿನದಿ
ಅಂಗನೆ ಮಿಂದುಟ್ಟು ಶೃಂಗಾರದಿಂದ
ವಿಪ್ರಾಂಗನೆಯರನು ಕರೆದಳು ೧೯
ಕರೆಯ ಲಾಕ್ಷಣದಲ್ಲಿ ಪುರದ ನಾರಿಯರೆಲ್ಲ
ಶಿರಿದೇವಿ ಪೂಜಾಸಾಧನವ
ಧರಿಸುತ ಕರದೊಳು ಹರುಷದಿಂದಲಿ ಬಂದು
ನೆರೆದರಾ ದ್ವಿಜನಮಂದಿರದಿ ೨೦
ಅಂಬುಜಮುಖಿಯರು ಸಂಭ್ರಮದಲಿ ಪೂರ್ಣ
ಕುಂಭಗಳಿಟ್ಟಘ್ರ್ಯಾದಿಗಳಿಂ
ಅಂಬುಧಿಸುತೆಯ ಪಾದಾಂಬುಜ ಪೂಜಿಸೆ ಕುಂಬಿಣಿ
ಸುರರ ಸಮ್ಮುಖದಿ ೨೧
ಇಂದು ವದನೆಯರಾನಂದದಿ ಪಾಡುತ
ಇಂದಿರ ದೇವಿಗಾರುತಿಯ
ತಂದು ಬೆಳಗಿದರು ಛಂದದಿಂದಲಿ ದೋರು
ಬಂಧÀ£ವÀನ ಮಾಡುತಿಹರು ೨೨
ರಾಜಮುಖಿಯು ಸರ್ವರಾಜೋಪಚಾರದಿ
ಪೂಜಿಸುತಿರಲಾಗೃಹವು
ರಾಜಿಸುತಿರೆ ಸುರರಾಜ ಭವನದಂತೆ
ಸೋಜಿಗವಾಯ್ತು ನೋಳ್ಪರಿಗೆ ೨೩
ಸ್ವರ್ಣಮಯಾಂಬರ ಚರಣದಿ ನೂಪುರ
ಕೊರಳೊಳುನವರತ್ನಹಾರ
ಪರಿಶೋಭಿಸಲು ಕಂಡು ಬೆರಗಾದಳಂಗನೆ
ಸಿರಿದೇವಿ ಕರುಣವಿದೆಂದು ೨೪
ಮುತ್ತೈದೆಯರು ಭೂಸುರೋತ್ತಮರಿಗೆಲ್ಲ
ಇತ್ತರು ಬಾಗಿಣಗಳನು
ಭಕ್ತಿಯಿಂದೆಲ್ಲರು ಚಿತ್ತದಿ ಹರುಷ ಬಡುತ್ತ
ಪೋದರು ತಮ್ಮ ಮನೆಗೆ ೨೫
ಧನ್ಯಳು ಸುಗುಣ ಸಂಪನ್ನೆ ಚಾರುಮತಿ
ಪುಣ್ಯದಿಂದೆಲ್ಲರು ನಾವೆಂ
ದನ್ಯೋನ್ಯ ನುಡಿಯುತ ಬಣ್ಣಿಸಿದರು
ಧನಧಾನ್ಯ ಸಂಪದಾಗಮನ ೨೬
ಈ ಲಕುಮಿಯ ಕಥೆ ಹೇಳಿಕೇಳಿದರ
ಪಾಲಿಸುವಳು ಸಿರಿಯೆಂದು
ಶೈಲಕುಮಾರಿಗೆ ಕೈಲಾಸ ಶಿಖರದಿ ಪೇಳಿದ
ಶಿವನು ಹೀಗೆಂದು ||೨೭|
ತೋಯಜಾಕ್ಷಿಯೆ ಕೇಳು ಗಾಯನಮಾಡಲು
ಕಾಯಜ ಜನನಿಯ
ಆಯುರಾರೋಗ್ಯ ಐಶ್ವರ್ಯಾದಿಗಳ ಕೊಟ್ಟು
ಕಾಯುವದೆಂದು ನೀ ತಿಳಿಯೆ ೨೮
ಕಲಿಕೃತ ದೋಷವ ಕಳೆದು ಕೊಡುವ
ನಿರ್ಮಲ ಭಕ್ತಿಜ್ಞಾನ
ವೈರಾಗ್ಯ ಇಳೆಯೊಳು ಕಾರ್ಪರ ನಿಲಯ ಶ್ರೀನರಹರಿ
ಒಲಿವನು ನಿರುತ ಪಠಿಸಲು೩೦

೫೭
ಗುರು ನಾರಪ್ಪಯ್ಯನ ಚರಣಕಮಲಯುಗ್ಮ
ನಿರುತ ಸ್ಮರಿಸೆಲೊ ಮಾನವ ಪ
ನಿರುತ ಸ್ಮರಿಸುವ ಶರಣು ಜನರಘ-
ತರಿದಭೀಷ್ಠೆಯ ಗರಿಯಲೋಸುಗ
ಧರಣಿ ವಲಯದಿ ಮೆರೆವ ವೆಂಕಟ
ಗಿರಿಯ ರಮಣನ ಕರೆದು ತಂದಿಹ ಅ.ಪ
ಧರೆಸುರರೊಳು ಜನಿಸಿರಲು ಭ್ರಾತ್ರರುನಾನಾ
ಪರಿಬಾಧಿಸಲು ಸಹಿಸಿ ಚರಣ ಯಾತ್ರೆಯಲಿಂದ
ಗಿರಿಯಕಾಣುತ ಮಲಗಿರಲು ಸ್ವಪ್ನದಿಸೂಚಿಸಿ
ಧರಣಿ ದೇವನೆ ನಿನಗೆ ದರುಶನ ಕೊಡಲು ನಾ
ಬರುವೆನೆಂದಾಜ್ಞಾಪಿಸಿ ಭಕ್ತನನುಸರಿಸಿ
ತುರುಸ್ವರೂಪವ ಧರಿಸಿ ಬರುತಿರೆ
ಕುರಿಕಿಹಳ್ಳಿಯ ಗ್ರಾಮದಿಂದಲಿ
ತರುವರಾಶ್ವತ್ಥದಲಿ ಸಲೆ ಪಾಲ್ಗರಿದ ದೇವನ
ಕರೆದು ತಂದಿಹ ೧
ನಾರಾಯಣಾರ್ಯರು ಕಾರ್ಪರಾರಣ್ಯದಿ
ಆರಾಧಿಸುತಲಿರುತ ಆರಾರು ಭಕುತರು
ಗೋಧನ ಧಾನ್ಯದಿ ಸಾರಾವಸ್ತುಗಳೀಯುತ್ತ
ಗೋರಕ್ಷಣವ ಮಾಡಿರೆನುತ ತಮ್ಮಯ ಬಂಧು
ಬಾಲಕರಿಗೆ ಪೇಳುತ್ತ ಭಯ ಬ್ಯಾಡಿರೆನುತ
ಚಾರು ಶಿಲೆಯೊಳಗೊಂದು ದಿನ ಅಂಗಾರದಲಿ ಶ್ರೀ
ಭಾರತೀಶನ ಮೂರುತಿಯ ಬರೆದೀತ ಭಯ ಪರಿ-
ಹಾರಕನು ನಿಮಗೆಂದು ಪೇಳಿದ ೨
ಧರಣಿ ಪಾಲಕನಿಂದ ನಿರ್ಮಿತಮಾದ ಬಂ-
ಧುರ ನಿಲಯದಿ ರಾಜಿತ ತರುಮೂಲದೊಳಗವ-
ತರಿಸಿ ಷೋಡಶ ಸಂಖ್ಯ ಕರಗಳಿಂದಲಿ ಶೋಭಿತ
ವರ ಕೃಷ್ಣಾ ಜಲದೊಳಗಿರುವ ಪ್ರತಿಮೆಯ ತಂದು
ತರು ಬಳಿಯಲಿ ಸ್ಥಾಪಿತ ಶ್ರೀಭೂಸಮೇತ
ತಿರುಮಲೇಶನ ಮೂರ್ತಿ ಸಹಿತದ
ನಿರುತ ಪೂಜೆಯಕೊಳುತ ಧರೆಯೊಳು
ಶರಣು ಜನರನು ಪೊರೆವ ಕಾರ್ಪರ ನಿಲಯ’ಸಿರಿನರ ಹರಿ’ಯನೊಲಿಸಿದ೩

೬೦
ಗುರುಕೂರ್ಮಚಾರ್ಯರ ಚರಣಕಮಲಯುಗ್ಮ
ನಿರುತ ಸ್ಮರಿಸು ಮಾನವ ಪ
ಧರಣಿಯೊಳಗೆ ಸುಕ್ಷೇತ್ರಗಾಲವ
ಪುರದಿ ಶ್ರಿ ನರಶಿಂಹಾ ಚಾರ್ಯರ
ತರುಣಿಯಳ ಗರ್ಭಾಬ್ಧಿಯಲಿಹಿಮ
ಕರನ ತೆರದಲಿ ಜನಿಸಿಮೆರೆದ ಅ.ಪ
ವರಕೊಲ್ಹಾಪುರದಿ ಪೋಗಿರಲು ಸುಂದರವಾದ
ಸಿರಿಯರೂಪವ ಕಾಣುತ್ತ
ಅರಿತು ಪ್ರಾರ್ಥಿಸಲು ಶ್ರೀ ನರಶಿಂಹಾರ್ಯರಿಗೊಲಿದು
ಕರುಣದಿಂದಲಿ ಕೊಟ್ಟಂಥ ಚರಣಕವಚ
ಸ್ವರಣ ಸಂಪುಟದಲ್ಲಿ ನಿರುತ ಪೂಜೆಯ ಮಾಡುತ್ತ
ಪ್ರವಚನಾಸಕ್ತ ಧರೆಯೊಳಗೆ ಬಹು
ಶರಣು ಜನ ರಘ ತರಿದು ಸೌಖ್ಯವ ಗರಿವುದಕೆ ಸಂ
ಚರಿಸುತಲಿ ಸಚ್ಛಾಸ್ತ್ರ ಮರ್ಮವ ನರುಹಿಜನರನುದ್ಧರಿಸಿದಂಥ ೧
ಪೊಳೆವ ಫಾಲದಿ ಪುಂಡ್ರ ತಿಲಕ ಮುದ್ರಾಕ್ಷತಿ
ವಿಲಸಿತ ಶುಭಗಾತ್ರದಿ
ಅಲವ ಬೋಧರ ಮತದೊಳು ತತ್ವಬೋಧಕ
ಸುಲಲಿತೋಪನ್ಯಾಸದಿ
ಬಲು ವಿಧಾರ್ಥವ ಪೇಳಿಕುಳಿತಪಂಡಿತರನ್ನು
ಒಲಿಸುತಿರೆ ಪೂರ್ವದಿ ಪಂಢರಪುರದಿ
ಗಲಗಲಿಯ ಸದ್ವಂಶ ಭವ ಮುದ್ಗಲಾಚಾರ್ಯರಿ
ಗೊಲಿದು ಬಂದಿಹ ಚಲುವ ವಿಠ್ಠಲ ಮೂರುತಿಯ ಪದ
ಜಲಜ ಮಧುಕರರೆನಿಸಿದಂಥ ೨
ಜಡಜಾಪ್ತನುದಯದಿ ನಡೆದು ದ್ವಿಜಗೃಹದೇವ
ರಡಿ ಗೊಂದನೆಯ ಮಾಡುತ್ತ
ಎಡೆಬಿಡದಲೆ ತಮ್ಮ ಅಡಿಗೊಂದಿಸುವ ಭಕ್ತ
ಗಡಣವ ಮನ್ನಿಸುತ ಬಿಡದೆ ಶತತ್ರಯ
ಕೊಡ ಜಲದಲಿ ಸ್ನಾನ ದೃಢಮನದಲಿ
ಮಾಡುತ್ತ ತಂತ್ರ ಸಾರೋಕ್ತ
ಎಡಬಲದಿ ಶೇವೆಯನು ಮಾಡುವ
ಪೊಡವಿಸುರಕೃತ ವೇದ ಘೋಷದಿ
ಜಡಜನಾಭನ ಪೂಜಿಸುವ ಬಹು
ಸಡಗರವ ನಾನೆಂತು ಬಣ್ಣಿಪೆ ೩
ಭೂತಲದಲಿ ಶ್ರೇಷ್ಠವಾತ ಮಾತಾಂಬುಧಿ
ಶೀತ ಕಿರಣನೆನಿಸಿ
ಪ್ರಾತರಾರಭ್ಯ ಶ್ರೀನಾಥನೆ ಪರನೆಂಬೊ
ಶಾಸ್ತ್ರದಿ ಮನವಿರಿಸಿ
ಖ್ಯಾತ ಸತ್ಯಧ್ಯಾನ ತೀರ್ಥರೆಂಬುವ ಗುರು
ಪ್ರೀತಿಯ ಸಂಪಾದಿಸಿ ಪುತ್ರರಿಗೆ ಬೋಧಿಸಿ
ಪ್ರೀತಿಯಲಿ ಶಿಷ್ಯರಿಗೆ ಭಗವ
ದ್ಗೀತೆಯನು ಪ್ರತಿದಿನದಿ ಪೇಳುತ
ಪಾತಕವ ಪರಿಹರಿಸಿ ಪರಮ ಪು-
ನೀತ ಗಾತ್ರರ ಮಾಡಿ ಸಲಹಿದ ೪
ಧರೆಯೊಳಧಿಕಮಾದ ಗಿರಿ ವೇಂಕಟೇಶನ
ದರುಶನವನೆ ಕೊಳ್ಳುತ
ಗುರುವಾಜ್ಞೆಯಲಿ ಬಂದು ವರ ಸಭೆಯೊಳು ತಮ್ಮ
ಪರಿವಾರದಿಂದಿರುತ ವರಷ ಶಾರ್ವರಿಯೊಳು
ವರ ಮಾಘ ಪ್ರತಿಪದ
ಬರಲು ಧ್ಯಾನವ ಮಾಡುವ ಹರಿಪದಾಸಕ್ತ
ಪರಮ ಭಕುತಿಯಲಿಂದ ಶೇವಿಪ
ಶರಣು ಜನ ಮಂದಾರ ನೆನಿಸುತ
ಮೆರೆವ ಕಾರ್ಪರ ನಿಲಯ
ಶಿರಿನರ ಹರಿಯ ಪುರವನು ತ್ವರದಿ ಶೇರಿದ ೫

೩೯
ಗುರುರಾಘವೇಂದ್ರ ಕರುಣಿಸೋ ತವಚರಣ ಸ್ಮರಣೆಯ ಪ
ಶರಣು ಜನಕೆ ಸುರತರುವೆಂದೆನಿಸುತ ವರ ಮಂತ್ರಾಲಯ
ಪುರದಿ ಮೆರೆವ ಶ್ರೀಮದ್ ೧
ನಂದತೀರ್ಥರ ಮತ ಸಿಂಧುವಿಗೆ ಪೂರ್ಣ
ಚಂದ್ರನೆನಿಸಿದ ಸುಧೀಂದ್ರ ಕರೋದ್ಭವ ೨
ಧರಿಯೊಳು ಶರಣರ ಪೊರೆವ ಕಾರ್ಪರ
ನರಹರಿಯನೊಲಿಸಿರುವ ಪರಿಮಳಾಚಾರ್ಯ ಶ್ರೀ೩

೫೨
ಗುರುವರ್ಯ ಪುರಂದರ ಗುರುವರ್ಯ ಪ
ಗುರುವರ್ಯ ಕಾಯಬೇಕೆನ್ನ ಮಧ್ವ
ಗುರುಕೃತ ಗ್ರಂಥಾರ್ಥಜ್ಞಾನ ಕೊಟ್ಟು
ಕರಣತ್ರಯ ಗಳಿಂದಾಚರಿಸುವ ಕರ್ಮವ
ಹರಿಮಾಡಿಸುವನೆಂಬ ಸ್ಮರಣೆಯ ಕರುಣಿಸೊ ಅ.ಪ
ಸುರಮುನಿ ನಿನ್ನ ಪ್ರಾರ್ಥನದಿ ಶ್ರೀ ಮ
ದ್ಗುರು ವೇದವ್ಯಾಸರು ದಯದಿ ಪಾ-
ಮರ ಪಂಡಿತರಿಗೆ ಸುಲಭದಿ ಧರ್ಮ ತಿಳಿದಾ-
ಚರಿ ಪರೆಂದು ಮುದದಿ ಅರಿತು
ನಿರುತ ಶೇವಿಪರಿಗೆ ಪರಮ ಮಂಗಳವೀವ
ವರ ಭಾಗವತ ಗ್ರಂಥ ನಿರ್ಮಿಸಿದರು ಸತ್ಯ ೧
ಕಲಿಯುಗದಲಿ ಹರಿನಾಮ ಜನರ
ಕಲಿ ಕಲ್ಮಷಾದ್ರಿ ಸೂತ್ರಾಮ ಎಂದು
ತಿಳಿದು ಕೀರ್ತಿಪರಿಗೆ ಪರಮ ಮಂ
ಗಳ ಕರನಾಮದ ಮಹಿಮ ಎನುತ
ಇಳಿಯೊಳು ವರ ಪುರಂದರ ಗಡ
ದಲಿ ಪುಟ್ಟಿ ಬಲು ವಿಧ ಹರಿನಾಮಂ-
ಗಳನು ವಿರಚಿಸಿದ ೨
ಕಾಶ್ಯಾದಿ ಕ್ಷೇತ್ರ ಸಂಚರಿಸಿ ಪದ
ರಾಶಿ ಸುಳಾದಿಗಳ ರಚಿಸಿ ಸಂ-
ತೋಷ ತೀರ್ಥರ ಮತ ಬಲಿಸಿ ಗುರು
ವ್ಯಾಸರಿಂದುಪದೇಶ ಗ್ರಹಿಸಿ ಜಗದಿ
ಭೂಸುರ ಪಾಲಕ ಶ್ರೀಶಕಾರ್ಪರನರ
ಕೇ ಸರಿ ಗತಿ ಪ್ರಿಯ ದಾಸರೆಂದೆನಿಸಿದ ೩

೫೪
ಗೋಪಾಲದಾಸರಾಯ ಮಾಂಪಾಲಯ ಪ
ಗೋಪಾಲದಾಸರಾಯಾ ಅಪಾರ ಮಹಿಮ ಮ-
ತ್ಪಾಪಗಳೋಡಿಸಿ ಕಾಪಾಡೊ ಗುರುರಾಯ ಅ.ಪ
ಗಜಮುಖ ನಮಿಸುವೆ ಸುಜನ ಪಾಲಕ ಶ್ರೀಮದ್
ವಿಜಯದಾಸರಿಗೆ ನಿಜ ಶಿಷ್ಯರೆನಿಸಿದ ೧
ಧನ್ವಂತ್ರಿ ಜಪದಿ ಜಗನ್ನಾಥದಾಸರ
ಬನ್ನವ ಬಿಡಿಸಿದ ಘನ್ನ ಮಹಿಮಗುರು ೨
ಏನು ಕರುಣವೋ ಶ್ರೀ ಮಾನವಿ ದಾಸರಿಗೆ
ಸಾನುರಾಗದಿ ಆಯುರ್ದಾನವ ಮಾಡಿದ ೩
ಪದುಮನಾಭನ ಪದಪದುಮ ಮಹಿಮೆಗಳ
ವಿಧ ವಿಧ ಪದಸುಳಾದಿಗಳಿಂದ ತುತಿಸಿದ ೪
ಶರಣು ಜನಕೆ ಸುರತರುವೆನಿಸಿ ಧರೆಯೊಳು
ಮೆರೆವ ‘ ಕಾರ್ಪರ ನರಹರಿ’ ಯ ನೊಲಿಸಿದಂಥ೫

ತಾತ್ವಿಕ ಹಿನ್ನೆಲೆಯ ಪದಗಳು
೮೩
ಗೌರಿವರನೆ ಕಾಯೊ ಎನ್ನ
ಧಾರುಣಿಯೊಳು ರಾಯಕುಪ್ಪಿಸುಸದನ ಪ
ಮೂರುಲಿಂಗ ಸ್ವರೂಪದಲಿಯನ್ನ
ಮೂರು ತಾಪಗಳ ನೋಡಿಸಿ ಕರುಣದಲಿ
ಮೂರು ಸಾಧನವ ನೀಡುತಲಿ ಬಿಂಬಾ
ಮೂರುತಿಯನುಮನದಿ ಕಾಂಬುವಂದದಲಿ ೧
ಕರುಣಾ ಕಟಾಕ್ಷದಿ ನೋಡೋ ಸದಾ
ಕರಿವರದನ ಗುಣಗಳನೆ ಕೊಂಡಾಡೋ
ಹರಿ ಭಕುತರ ಸಂಗ ನೀಡೋ ಭವ
ಶರಧಿಯಿಂದೆನ್ನನುದ್ಧರಿಸಿ ಕಾಪಾಡೋ ೨
ಪಂಚಬಾಣನಗೆಲಿದಧೀರಾ ದ್ವಿ
ಪಂಚ ಕರಣಗಳಿಂ ಮಾಡಿಸು ಸದ್ವ್ಯಾಪಾರಾ
ಪಂಚಮುಖನೆ ಶ್ರೀಕಾರ್ಪರ ನರ
ಪಂಚಾನನಂಘ್ರಿ ಪಂಕಜ ಮಧುಕರ ೩

೧೧೮
ಘನ ಸುಖಮಂ ಪಡಿ ಇನಿಯನ ವಶದಿ
ಮನಸಿಜನಯ್ಯನ ದಯದಿಂದ ಬಾಲೆ ಪ
ಮನೆಗೆಲಸಗಳನು ದಿನಗೈಯುತ ಬಲು
ವಿನಯ ಸೌಶೀಲ್ಯದಿ ವನಿತೆಯರೊಳು ನೀ ೧
ಪತಿಯನು ಪರದೇವತೆಯೆಂಬುವ ಮಹಾ
ಮತಿಯಲಿ ಸೇವಿಸಿ ಸುತರನು ಪಡೆದು ನೀ ೨
ಗುರುಜನರಿಗೆ ಸದಾಶಿರಬಾಗುತ ಬಹು
ಸರಸದಿ ಸದ್ಗುಣಾಭರಣಗಳಿಂದ ನೀ ೩
ರತಿಪತಿ ಪಿತನಿಗೆ ಪ್ರತಿಮೆಗಳೆನ್ನುತ
ಅತಿಥಿಗಳನು ಸಂತತ ಸತ್ಕರಿಸುತ ೪
ಗಿರಿಜೆಯ ಪೂಜೆಯನು ನಿರುತದಿಗೈಯುತ
ಸಿರಿಕಾರ್ಪರ ನರಹರಿಯನು ಸ್ಮರಿಸುತ ೫

೨೫
ಚರಣ ಕಮಲ ಭಜಿಸೋ ಮೈಲಾರ ಲಿಂಗನ ಪ
ಪುರಹರ ಸ್ವರೂಪನೆ ಎಂದು ಧ್ಯಾನಿಸೋ
ಸ್ಮರಿಸುವರ ಪಾತಕ ತಿಮಿರ ಭಾಸ್ಕರನೆಂದು ನೀ
ಸ್ಮರಿಸೋ ಶಿರಬಾಗಿ ನಮಿಸೋ ಅ.ಪ
ತುರಗವಾಹನವೇರಿ ಬರುತಿಹನ
ಧರೆಯೊಳಗೆ ಮೈಲಾಪುರ ಸುಮಂದಿರನೆಂದು
ಕರೆಸುವನಾ ಹೊನಕೆರೆಯ ಜಲದಭಿಷೇಕದಿಂದ
ರ್ಚನೆಯ ಕೊಂಬುವನ ಶರಣರನ ಪೊರೆವನ ೧
ಕಾಲಕಾಲದಿ ಪಾಲಕಿಯ ಉತ್ಸವದಿ ಮೆರೆಯುವನ ಅನು
ಗಾಲಭಕುತರ ಮ್ಯಾಳವನು ಪಾಲಿಸಲು ಬಂದಿಹನ
ಕೇಳಿ ದ್ವರಗಳ ಕೊಡುವ ಘನ ತ್ರಿಶೂಲ ಧರಿಸಿಹನ
ಮಾಳಸಾಕಾಂತನ ೨
ನಿಷ್ಠೆಯಿಂದಲಿ ಭಜಿಪ ಭಕುತರನ
ರಕ್ಷಿಸಲು ಕೊಪ್ಪರ ಕಟ್ಟಿಯಲಿ ಸೇವೆಯನ್ನು ಕೊಳುತಿಹನ
ಸಿರಿ ವಿಷ್ಣು ಭಕುತರ ಮನೆಗಳಲಿ ಪೂಜೆಯನು ಕೊಂಬುವನ
ಇಷ್ಟ ಪ್ರದಾತನ೩
ಸಂಚರಿಸುತಲಿ ದಿನಕರನು ಮಕರದಿ ಬರಲು
ಸಂಕ್ರಮಣ ಉತ್ಸವದಿ ನೋಡಲು ನೆರೆದ ಬಹು ಜನ
ರಿಂದ ಸೇವಿತನ ಗಿರಿಶಿಖರ ಗುಂಡಿನ ಮೇಲೆ ದೀಪೋತ್ಸವದಿ
ರಾಜಿತನ ಮಹಿಮಾನ್ವಿತನ ೪
ವಾರಿಜಾಸನ ವಿನುತ ಶುಭಚರಣ ಸರೋಜ ಕಾರ್ಪರ
ನಾರಸಿಂಹನ ಒಲಿಮೆ ಪಡೆ ದಿಹನಾ ರವಿವಾರ ವಾರದಿ
ವಾದ್ಯ ವಿಭವದಿ ಶೇವೆ ಕೊಳುತಿಹನಾ
ಮಾರ್ತಾಂಡದೇವನ೫

ಲೋಕನೀತಿಯ ಪದಗಳು
೭೮
ಚರಣಕಮಲ ಭಜಿಸೋ ಗೋಪಾಲಕೃಷ್ಣನ ಪ
ಮುರಲೀ ವಾದ್ಯದಲಿ ಗೋಪರನ
ತರುಣಿಯರ ಮನವನು
ಮರುಳುಗೊಳಿಸಿದ ಪರಮ ಸುಂದರನ ಧರಿಯೊಳಗೆ
ಭಾಸ್ಕರಪುರ ಸುಮಂದಿರನೆಂದು ಕರೆಸುವನ
ಕರಿರಾಜವರದನ ಅ.ಪ
ಕ್ಷೋಣೆ ಗೀರ್ವಾಣರಿಂದಲಿ ಪೂಜೆಗೊಂಬುವನಾ
ಮಾನಸದಿ ತನ್ನನು ಧೇನಿಪರ ಸುರಧೇನು ಎನಿಸುವನಾ
ಗಾನವನು ಕೇಳುವ ಧೇನು ವತ್ಸಗಳಿಂದ ಶೋಭಿತನಾ
ವೇಣುಗೋಪಾಲನ ೧
ವಂದನೆಯ ಮಾಳ್ಪರ ಬಂಧ ಬಿಡಿಶ್ಯಾನಂದ ನೀಡುವನಾ
ಮಂದರದಿ ಗಣಪತಿ ಗಂಧವಾಹನರಿಂದ ವಂದಿತನಾ
ಮಂದಜಾಸನ ಮುಖ್ಯ ಸುರಗಣದಿಂದ ಸೇವಿತನಾ
ಸಿಂದೂರವರದನ ೨
ಕೃಷ್ಣಾ ಅಷ್ಟಮಿಯ ಉತ್ಸವ ಮಾಳ್ಪ ಭಕುತರನಾ
ಸೃಷ್ಟೀಶನಿವನೆಂದರಿಂದ ಮಹಿಮೆಯ ಪಾಡಿಪೊಗಳುವನಾ
ಕಷ್ಟವನು ಪರಿಹರಿಸ್ಯವರ ಸಕಲಾಭೀಷ್ಠಗರಿಯುವನಾ
ಪರಮೇಷ್ಠಿ ಜನಕನ ೩
ಹರಿಮಹಿಮೆ ತಿಳಿಯದೆ ಸುರಪತಿಯ ಮಳೆ
ಗರಿಯೆ ಗೋಗಳನಾ
ರಕ್ಷಣೆಯ ಮಾಡಲು ಕಿರಿಯ ಬೆರಳಲಿ
ಗಿರಿಯ ಧರಿಸಿದನಾ ಇದ
ನರಿತು ಸುರಪನು ಸುರಭಿ ಸಹ ಬಂದೆರಗಿ
ಕೃಷ್ಣನ್ನ ಪೂಜಿಸಲು ಒಲಿದನ ೪
ಶರಣಾಗತ ಜನರ ಪೊರೆಯಲು ಬಂದುನಿಂತಿಹನಾ ಕಾ
ರ್ಪರ ಕ್ಷೇತ್ರದಿ ಮೆರಿವ ತರುಪಿಪ್ಪಲ ಸುಮಂದಿರನ
ಸುರವಿನುತ ಸಿರಿನರಹರಿಯ ರೂಪಾತ್ಮಕನು ಎನಿಸುವನು
ತುರುಪಾಲ ಕೃಷ್ಣನ ೫

೬೫
ಚಿಂತಿಸುತಿರು ಮನವೇ ಸಿರಿಕಾಂತನಂಘ್ರಿಯ
ಚಿಂತಿಸು ಮನವೆ ನಿರಂತರ ಶ್ರೀಮದ
ನಂತಗಿರಿಯಲಿ ನಿಂತು ಭಜಕರ
ಚಿಂತಿತಪ್ರದ ನಂತಶಯನನ ಅ.ಪ
ಶಾಂತ್ಯಾದಿ ಗುಣಭರಿತ ಮಹಂತ ಮುನಿ ಮಾ
ರ್ಕಾಂಡೇಯಗೊಲಿದು ಸತತ ಪರ್ವತದಿ ಲಕ್ಷ್ಮೀ
ಕಾಂತನೆಸುರ ಸಹಿತ ಸನ್ನಿಹಿತನೆನುತ ಕಂತುಹರನುತ
ನಂತ ಮಹಿಮನ ಸಂತಸದಿ ಸಂತುತಿಸುತಲಿ ತ-
ಮ್ಮಂತರಂಗದಿ ಚಿಂತಿ ಸುವರಘಧ್ವಾಂತ
ದಿನಕರಾನಂತ ದೇವನ ೧
ನಾರ ಶಿಂಹನದರ್ಶನ ಕೊಳ್ಳುತಿರೆ ಮುನಿ ಬಲ
ದ್ವಾರದಿಂದಲಿ ಪ್ರತಿದಿನ ವಿರುತಿರೆ ಪ್ರಥಮ
ದ್ವಾದಶಿಯೊಳು ಸಾಧನ ತಕ್ಷಣ ಪ್ರಸನ್ನ
ಸೂರ್ಯಸುತನ ಉದಯದಲಿ ಭಾಗೀರಥಿಯು ಪು
ಷ್ಕರಣಿಯೊಳು ಬರೆ ಪಾರಿಜಾತದ ಭೂರುಹಂಗಳ
ಚಾರುರೂಪವ ತೋರಿದಾತನ ೨
ನೀರಜಾಸನ ವಂದಿತ ಬಂಗಾರಮಕುಟ
ಕೇಯೂರ ಕಂಕಣ ಭೂಷಿತ ಚಕ್ರಾದಿ ಚಿನ್ಹಿತ
ಚಾರುಶಿಲೆಯೊಳು ಸನ್ನಿಹಿತ ಭಜಕರನು ಪೊರೆಯುತ
ವಾರವಾರಕೆ ಭಕುತಜನ ಪರಿವಾರದಿಂ ಸೇವೆಯನು ಕೊಳ್ಳುತ
ಧಾರುಣಿಯೊಳು ಮೆರೆವ ಕಾರ್ಪರ ನಾರಶಿಂಹಾತ್ಮಕ ಸ್ವರೂಪನ೩


ಚಿಂತ್ರವೇಲಿನಿಲಯ ಭಾರತಿ ಕಾಂತನೆ ಪಿಡಿಕೈಯಾ ಪ
ಅಂತರಂಗದಲಿ ಚಿಂತಿಪರಘುÀಕುಲಧ್ವಾಂತದಿವಾಕರ
ಸಂತತ ಸ್ಮರಿಸುವೆಅ.ಪ
ಲಂಘಿಸಿ ವಾರಿಧಿಯ ಶ್ರೀರಾಮಾಂಗುಲಿ ಮುದ್ರಿಕೆಯ
ಅಂಗನಿಗೆ ಕೊಟ್ಟು ಮಂಗಳಾಂಗ ರಘು
ಪುಂಗವಗೆ ಕುಶಲ ಸಂಗತಿ ತಿಳಿಸಿದ ೧
ಇಂದು ಕುಲದಿ ಜನಿಸಿ ಕುಂತಿಯ
ಕಂದ ಭೀಮನೆನಿಸಿ ನಿಂದು ರಣದಿಕುರು
ವೃಂದವ ಮಥಿಶ್ಯಾನಂದ ಸುತನೊಲಿಮೆ
ಛಂದದಿ ಪಡೆದಿಹ ೨
ಮೇದಿನಿಯೊಳು ಜನಿಸಿ ಬಹುದು
ರ್ವಾದಿಗಳನು ಜಯಿಸಿ ಮೋದಮುನಿಯೆನಿಸಿ
ಭೇದವ ಬೋಧಿಸಿ ಸಾಧು ಜನಕೆ ಬಲು
ಮೋದವ ಗರಿದಿ ೩
ಶೇಷದಾಸರಿಗೊಲಿದಿ ಅವರಭಿಲಾಷೆಯ
ಪೂರ್ತಿಸಿದಿ ಪೋಷಿಸೆನ್ನ ಕರುಣಾ ಸಮುದ್ರ ಭವ
ಕ್ಲೇಶವ ಕಳೆಯಾ ಗಿರೀಶ ಮುಖವಿನುತ೪
ಭೀತರನ್ನು ಪೊರಿವಿ ಭಜಕರ ಪಾತಕವನು ಕಳೆವಿ
ಖ್ಯಾತ ಕಾರ್ಪರ ಕ್ಷೇತ್ರದಿ ನರಮೃಗ
ನಾಥನ ಪರಮ ಪ್ರೀತಿಪಡೆದಿಹ ೫

೯೯
ಜಯ ಜಯ ಶ್ರೀಹರಿಪ್ರಿಯೆ ಜಯಕ್ಷೀರಾಂಬುಧಿತನಯೇ
ಜಯ ಜಯ ಕೋಮಲಕಾಯೆ ಬಿಡದೆನ್ನನು ಕಾಯೆ ಪ
ಜಯ ರತ್ನಾಕರ ತನಯೆ ಕುರುಕರುಣಾಮಯಿ ಸದಯೆ
ಹರಿ ವಕ್ಷ ಸ್ಥಳ ನಿಲಯೆ ಸುರಮುಖಗೇಯೆ ೧
ಜಯ ಜಯ ಪಾವನ ಚರಿತೆ ಜಯಚತುರಾನನ ಮಾತೆ
ಜಯ ಭಕುತಾಭಯ ದಾತೆ ನಮಿಸುವೆ ಭೂಜಾತೆ ೨
ಜಯ ಜಯ ಕಾರ್ಪರ ಸದನೆ ಜಯನರಸಿಂಹನ ರಾಣಿ
ಸುರಸಂಶೇವಿತಚರಣೆ ಪಾಹಿಜಗಜ್ಜನನಿ ೩

೮೮
ಜಯ ಮಂಗಳೆಂದು ಪಾಡಿರೆ ಶ್ರೀರಂಗನಾಥಗೆ
ಲಕ್ಷ್ಮೀರಂಗನಾಥಗೆ ಮಂಗಳಪುರಿ ಜಾಲ
ಹಳ್ಳಿರಂಗ ನಿಲಯಗೆ ಬ್ಯಾಗೆ ಪ
ಅಂಗನೆಯರು ಶೃಂಗಾರದಿ ಸಂಗೀತಪ್ರಿಯಗೆ
ಮಂಗಳಾಂಗ ದೇವಗೆ ಮಾತಂಗವರದಗೆ ಬ್ಯಾಗೆ ೧
ಇಂದಿರವರ ಮಂದರೋದ್ಧರ ನಂದಕುವರಗೆ
ಹಿಂದಕೆ ಮುದಗಲ್ಲು ಪುರದಿ ಬಂದು ನಿಂದಗೆ ಬ್ಯಾಗೆ ೨
ದಾರಿಯೊಳು ಉಪ್ಪಾರಜನರ ಸೇರಿಬಂದವಗೆ
ಸಾರಿದವರ ಪೊರೆವ ‘ಕಾರ್ಪರ ನಾರಶಿಂಹಗೆ’ ಬ್ಯಾಗೆ ೩

೧೧೫
ಜೋ ಜೋ ವ್ಯಾಸ ತತ್ವಜ್ಞ ಮುನೀಂದ್ರ
ಜೋ ಜೋ ಮಧ್ವ ಮತಾಂಬುಧಿ ಚಂದ್ರ
ಜೋ ಜೋ ಮಾಯಿ ಮತ್ಯೇಭ ಮೃಗೇಂದ್ರ
ಜೋ ಜೋ ಭಕ್ತ್ಯಾದಿ ಸದ್ಗುಣ ಸಾಂದ್ರ ಜೋ ಜೋ ೧
ವೇಣುಗೋಪಾಲ ಪದಾಂಬುಜ ಭೃಂಗ
ವೇಣಿ ಸೋಮಪುರ ಸುಧಾಮಶುಭಾಂಗ
ಆ ನತಜನ ಸುರಧೇನು ಕೃಪಾಂಗ
ಮಾನಿತ ಸದ್ವಿಜಯಯತಿ ಕುಲೋತ್ತುಂಗ ೨
ಭೂಮಿ ಸುರಸ್ತುತ ಪಾವನ ಚರಿತ
ಸೌಮಿಭಕ್ತ ಕಾಮಿತದಾತ
ಸ್ವಾಮಿ ಶ್ರೀಕಾರ್ಪರ ನರಮೃಗನಾಥ
ಪ್ರೇಮ ಪಾತ್ರ ಭವ ಜ್ಞಾನ ಪ್ರದಾತ ೩

೧೧೪
ಜೋ ಜೋ ಶ್ರೀಗುರು ಪ್ರಹ್ಲಾದರಾಜ
ಜೋಜೋ ಭಜಕರ ಕಲ್ಪಮ ಹೀಜ
ಸ್ತಂಭ ದರ್ಶಿತ ನರಮೃಗರಾಜ ಜೋಜೋ
ಭಂಗಾರಕಶಿಪುತನುಜ ಜೋ ಜೋ ೧
ಚಂದ್ರಿಕಾದಿ ಸದ್ಗ್ರಂಥತ್ರಯದಿಂದಾ
ನಂದಿತ ಭೂಮಿ ವೃಂದಾರಕ ವೃಂದಾ
ವಂದಿಪರಘಕುಲ ಪನ್ನಗವೀಂದ್ರ
ವಂದಿಸುವೆನು ಗುರು ವ್ಯಾಸಯತೀಂದ್ರ೨
ಜೋ ಜೋ ಮಧ್ವಮತಾಂಬುಧಿ ಚಂದ್ರ
ಜೋ ಜೋ ಮಾಯಿ ಮತ್ತೇಭ ಮೃಗೇಂದ್ರ
ಜೋ ಜೋ ಜ್ಞಾನಾದಿ ಸದ್ಗುಣ ಸಾಂದ್ರ
ರಾಜಾಧಿರಾಜ ಶ್ರೀ ಗುರು ರಾಘವೇಂದ್ರ ೩
ಮಂತ್ರಮಂದಿರದಿ ನಿಂತು ಶೇವಕರ
ಚಿಂತಿಪ ಫಲಗಳ ಕೊಡುವ ಉದಾರ
ಎಂತು ತುತಿಸಲಿ ತನ್ಮಹಿಮೆ ಅಪಾರ ಮುಕ್ತಿ
ಪಂಥವ ತೋರಿಸಿ ಮಾಡೊ ಉದ್ಧಾರ ೪
ಗುರುರಾಘವೇಂದ್ರ ನಿಮ್ಮಯ ಶುಭ ಚರಿಯ
ನಿರುತಸ್ಮರಿಪರಘ ತಿಮಿರಕೆ ಸೂರ್ಯ
ಧರಿಸುರ ಶೇವಿತ ಪರಿಮಳಾಚಾರ್ಯ
ಶಿರಿ ಕಾರ್ಪರನರಹರಿ ಗತಿ ಪ್ರಿಯ೫

೧೦೦
ತಾರೆ ಆರುತಿ ಸಾರಸಾಂಬಕಿ ಭಾರತೀವರಗೆ ಬೆಳಗುವೆನು ಪ
ಮಾರಮಣನಾಗಾರವೆನಿಪೈಕೂರು
ನರಸಿಂಹಾರ್ಯ ಶೇವಿತಗೆ ಅ.ಪ
ನೂರುಯೋಜನ ವಾರಿನಿಧಿಯನು ಹಾರಿ ಜಾನಕಿಗೆ
ಚಾರು ಮುದ್ರಿಕೆಯನಿತ್ತು ಪುರದಿಭಯ ತೋರಿರಾಕ್ಷಸಗೆ
ನಾರಿಮಣಿಯ ಶುಭವಾರುತಿಯ ರಘುವೀರಗರುಹಿದ
ಮಾರುತಾತ್ಮಜಗೆ ೧
ಇಂದು ಕುಲದಲಿ ಬಂದು ಕುಂತಿಯ ಕಂದನೆಂದೆನಿಸಿ
ನಿಂದು ರಣದಿ ಖಳವೃಂದ ಸಹಿತ ಕುರುವೃಂದವನು ಮಥಿಸಿ
ನಂದಗೋಪನ ಕಂದನೊಲಿಮೆಯ
ಛಂದದಲಿ ಪಡೆದಂಥ ಭೀಮಗೆ ೨
ಭೂತಳದಿ ಸುಖತೀರ್ಥರೆನಿಸಿ ಸಚ್ಛಾಸ್ತ್ರವನು ರಚಿಸಿ
ಭೀತಿ ಪುಟ್ಟಿಸುತ ಖ್ಯಾತಮಾಯ್ಗಳ ವ್ರಾತವನು ಜಯಿಸಿ
ಪೂತ ಕಾರ್ಪರ ಕ್ಷೇತ್ರ ನರ ಮೃಗನಾಥನ ಪರಮಪ್ರೀತಿ
ಪಾತ್ರನಿಗೆ ೩

೭೯
ತಿರುಮಲೇಶನೆ ನಿನ್ನ ಚರಣ ಪಂಕಜಯುಗಲ
ನೆರೆನಂಬಿದವ ಧನ್ಯನೋ ಪ
ಗುರು ಮೂಲ ಪುರುಷ ನಾರಪ್ಪಯ್ಯ ಮುನಿಗೊಲಿದು
ಕುರಿಕಿಹಳ್ಳಿಯಲಿ ಬಂದಾ ನಿಂದಾ ಅ.ಪ
ವರಋಷಿಯ ಪೂರ್ವದಲಿ
ತಿರುಪತಿಯ ಮುಟ್ಟಿ ಮಲ-
ಗಿರಲು ಸ್ವಪ್ನವ ಕಾಣುತ
ತುರುರೂಪದಲಿ ನಾನೆ ಬರುವೆ ಕಾ-
ರ್ಪರ ವನಕೆ ದರುಶನವ ಕೊಡುವೆ
ನಿರುತ ಬರುತ ಬರುತಲಿ ವಿಪ್ರ
ತಿರುಗಿ ನೋಡಲು ಪದದಿ ಕಿರುಗಜ್ಜೆಗಳ ನುಡಿಸುತಾ
ಕುರಿಕಿ ಹಳ್ಳಿಯ ಸುಮಂದಿರನೆನಿಸಿ
ಸಿರಿಸಹಿತ ವರಶಿಲೆಯ ಮೇಲೆ ಪಾ
ಲ್ಗರಿದು ನೆಲೆಸಿರುವಂಥ ೧
ತೋಂಡಮಾನಕ್ಷಿತಿಪ ಪುಂಡಲೀಕಾದಿ ಬಹು
ತೋಂಡರಿಗೆ ಒಲಿದು ದೇವಾ
ಕುಂಡಲಿ ಪರ್ವತದಿ ತಂಡತಂಡದಿ ಭಕುತ
ಮಂಡಲಿಗೆ ಫಲವ ಕೊಡುವ
ದುಂಡುಮುತ್ತಿನಹಾರ ಮುಕುಟ ರತ್ನಾಭರಣ
ಮಂಡಿತನಾಗಿ ಮೆರೆವ
ಕಂಡೆನಾನಿಮ್ಮ ಪದ ಪುಂಡಲೀಕವನು ಈ
ಗುಂಡಿನಾ ತಿಮ್ಮಯ್ಯನೆಂದು ಕರೆಸಿಕೊಳುವಿ ೨
ಕರಮುಗಿವೆ ಮನ್ಮನದಿ
ಕರುಣದಲಿ ತೋರೋತವ
ಪರಮ ಸುಂದರ ಚರಣವ
ನಿರುತ ಸ್ಮರಿಸುವ ಜನರ
ದುರಿತ ತಿಮಿರಕೆ ದಿವಾ
ಕರನೆನಿಸಿ ಸುಖವಗರಿವಾ
ಸುರನಿಕರ ಸೇವ್ಯ ಕಾರ್ಪರನಿಲಯನೆನಿಸೆ ಬಹು
ಶರಣು ಜನರನು ಪೊರಿಯುವಾ
ವರಕೃಷ್ಣ ಗರ್ಭದಲಿ ಒಪ್ಪುವ ಪಿಪ್ಪಲಸ್ಥಶ್ರೀ
ನರಹರಿಯ ಬಳಿಯಲಿರುವಾಮೆರೆವಾ ೩

೧೧೩
ತೂಗಿರೆ ಗುರುಗಳ ತೂಗಿರೆ ಯತಿಗಳ
ತೂಗಿರೆ ದಾಸಗ್ರೇಸರರ ನಾಗಶಯನನು
ರಾಗವ ಪಡೆದಂಥ ಯೋಗಿವರೇಣ್ಯರ ತೂಗಿರೆ ಪ
ಈ ಮಹಿಯೊಳು ಪುಟ್ಟಿ ಶ್ರೀಮುದತೀರ್ಥ ಸು-
ನಾಮದಿ ಕರೆಸುವರ ತೂಗಿರೆ ಆ ಮುದತೀರ್ಥ
ಶಿಷ್ಯರೊಳು ಪದ್ಮನಾಭ ನಾಮದಿಂದಿರುವರ
ತೂಗಿರೆ೧
ರಾಮನ ತಂದಿತ್ತ ನರಹರಿ ಮುನಿಪರ
ಮಾಧವ ತೀರ್ಥರ ತೂಗಿರೆ ಆಮ-
ಹಾವಿದ್ಯಾರಣ್ಯರನ ಗೆಲಿದಂಥ
ಶ್ರೀ ಮದಕ್ಷೋಭ್ಯರ ತೂಗಿರೆ ೨
ಕಾಕಿಣಿತೀರಸ್ಥ ಟೀಕಾಚಾರ್ಯರೆಂಬೊ
ನಾಕಪಾಂಶಜರನ ತೂಗಿರೆ ಶ್ರೀಕೃಷ್ಣ
ತಟದಿ ಜಿತಾಮಿತ್ರರೆಂಬೊ ಪಿ-
ನಾಕಿ ಅಂಶಜರನ ತೂಗಿರೆ ೩
ರಾಜರಂದದಿ ಸುಖಭೋಜನ ಕೃದ್ಯತಿ
ರಾಜ ಶ್ರೀಪಾದರ ತೂಗಿರೆ
ವ್ಯಾಜದಿ ವಿಜಯ ಸಾಮ್ರಾಜ್ಯರೆನಿಸಿ
ವ್ಯಾಸರಾಜರು ಮಲಗ್ಯಾರ ತೂಗಿರೆ ೪
ವಾದಿಗಳನು ಯುಕ್ತಿವಾದದಿ ಗೆಲಿದಂಥ
ವಾದಿರಾಜರನ್ನ ತೂಗಿರೆ
ಮೇದಿನಿಯೊಳು ಕೃಷ್ಣದ್ವೈಪಾಯನರೆಂಬೊ
ವೇದವ್ಯಾಸಾತ್ಮಜರ ತೂಗಿರೆ ೫
ಪರಿಮಳ ರಚಿಸಿದ ವರಹಜ ತೀರಸ್ಥ
ಗುರು ರಾಘವೇಂದ್ರರ ತೂಗಿರೆ
ಇರುಳು ಕಾಲದಲಿ ತರಣಿಯ ತೋರಿದ
ಗುರುಸತ್ಯ ಬೋಧರ ತೂಗಿರೆ ೬
ಪರಮತ ಖಂಡನ ನಿರುತದಿ ಮಾಡಿದ
ಗುರುವರದೇಂದ್ರರ ತೂಗಿರೆ
ಗುರು ಭುವನೇಂದ್ರರ ಕರಜವ್ಯಾಸತತ್ವ
ವರಿತ ಯತೀಶರ ತೂಗಿರೆ ೭
ವರಭಾಗವತಸಾರ ಸರಸದಿ ರಚಿಸಿದ
ಗುರುವಿಷ್ಣು ತೀರ್ಥರ ತೂಗಿರೆ
ಪರಮ ಕ್ಷೇತ್ರಕೂಡಲಿಯೊಳಗಿರುವಂಥ
ಗುರುರಘುವೀರರ ತೂಗಿರೆ ೮
ಹರಿಯ ಮಹಿಮೆಯನ್ನು ಸರಸದಿ ಪೇಳಿದ
ಪುರಂದರ ದಾಸರ ತೂಗಿರೆ
ಹರಿಸರ್ವೋತ್ತಮನೆಂದು ಸುರಮುನಿ ಗರುಹಿದ
ಗುರು ವಿಜಯದಾಸರ ತೂಗಿರೆ ೯
ಬನ್ನವ ಬಿಡಿಸಿ ಶಿಷ್ಯನ್ನ ಪಾಲಿಸಿದ
ಭಾಗಣ್ಣ ದಾಸರನ್ನು ತೂಗಿರೆ
ಘನ್ನ ಹರಿಯಗುಣ ವರ್ಣಿಸಿದಂಥ ಜ
ಗನ್ನಾಥ ದಾಸರ ತೂಗಿರೆ ೧೦
ಮಾನವಿರಾಯರ ಪ್ರಾಣಪದಕರಾದ
ಪ್ರಾಣೇಶದಾಸರ ತೂಗಿರೆ
ವೇಣುಗೋಪಾಲನ್ನ ಗಾನದಿ ತುತಿಸಿದ
ಆನಂದದಾಸರ ತೂಗಿರೆ ೧೧
ವಾಸ ಆದಿಶಿಲಾಧೀಶನ್ನ ಭಜಿಸಿದ
ಶೇಷ್ಠ ದಾಸರನ್ನ ತೂಗೀರೆ
ಶ್ರೇಷ್ಠ ಕಾರ್ಪರ ನರಕೇಸರಿಗತಿಪ್ರೀಯ
ದಾಸೋತ್ತಮರನ್ನ ತೂಗೀರೆ ೧೨

೫೯
ತೆರಳಿಪೋದರು ವಿಠ್ಠಲಾರ್ಯರಿಂದು
ಮುರಹರನ ಚರಣವನು ಸ್ಮರಿಸುತಲಿ
ಹರಿಪುರಕೆ ಪ
ಸುರಪುರದಿ ಜನಿಸಿ ದೇವಾಂಶರೆಂದೆನಿಸಿದರು
ಪುರುಹೂತನಂತೆ ಸಕಲೈಶ್ವರ್ಯದಿಂ
ಗುರುರಾಘವೇಂದ್ರರೊಲಿವರಿಗೆ ಪಾತ್ರರೆಂದೆನಿಸಿ
ನರಯಾನದಲಿ ಕುಳಿತು ಮೆರೆದರತಿ ವೈಭವದಿ೧
ಬಂದ ಶಿಷ್ಯರಿಗೆ ನಿರುತ ಅನ್ನೋದಕವನಿತ್ತು
ತಂದೆಯಂತೆ ಸಲಹಿ ಪ್ರೀತಿಯಿಂದ
ಮಂದಹಾಸದಿ ಶಾಸ್ತ್ರಮರ್ಮಗಳ ಪೇಳಿಬುಧ
ರೆಂದೆನಿಸಿದಂಥ ಮಹಾಮಹಿಮರಾನಂದದಲಿ೨
ಪ್ರತಿವರ್ಷದಲಿ ಭಾಗವತ ಪುರಾಣವ ಜನಕೆ
ಅತಿಹಿತದಿ ಪೇಳಿ ದುಷ್ರ‍ಕತವ ಕಳೆದು
ಗತಿಯೆಂದು ನಂಬಿದ ಭಕುತ ಜನಕೆಧರ್ಮಪ
ದ್ಧತಿಗಳನು ಪೇಳುತ ಪ್ರತಿಮರೆಂದೆನಿಸಿ ೩
ಭೂತಲದಿ ಜನಿಸಿ ಬಹು ಖ್ಯಾತಿಯನು ಪಡೆದು ನರ
ನಾಥರಿಂದಲೆ ಮಾನ್ಯರಾಗಿ ಮೆರೆದು
ಪ್ರೀತಿಯಿಂ ಭಜಿಪ ಶಿಷ್ಯೋತ್ತಮರನುದ್ದರಿಸಿ
ಶ್ರೀ ತರುಣಿ ಪತಿ ಬಳಿಗೆ ಪೋಗುವಾ ತುರದಿ೪
ಮೋದದಿಂ ಪಿಂಗಲ ಸಮಾ ಮಾಘವದಿ ಪಂಚ
ಮೀ ದಿನದಿ ಆದಿವಾರ ಸ್ವಾತಿಯೋಳ್
ಶ್ರೀದಕಾರ್ಪರ ನಾರಶಿಂಹ ವಿಠ್ಠಲನ ಪದ
ಸಾದರದಿ ಧೇನಿಸುತ ಮೇದಿನಿಯ ತ್ಯಜಿಸಿ ೫

೫೬
ದಾಸವರ್ಯ ಪೋಷಿಸೆನ್ನನು ಪ್ರಾರ್ಥಿಸುವೆ ಶೇಷ
ದಾಸವರ್ಯ ಪೋಷಿಸೆನ್ನನು ಪ
ಪೋಷಿಸೆನ್ನ ಮನದಿ ಬಹದೋಷಗಳನು
ತರಿದು ಇಂದಿ-
ರೇಶನಂಘ್ರಿಧ್ಯಾನವ ಪ್ರತಿವಾಸರದಲಿ ಒದಗುವಂತೆಅ.ಪ
ದೇಶ ದೇಶಗಳಲಿ ಭಜಿಪ ದಾಸ ಜನರ ಮನದ ಅಭಿ-
ಲಾಷೆಗಳನು ಸಲಿಸುತಲಿ ಸುರೇಶನಂತೆ ಮೆರೆದ ಶೇಷ ೧
ಮಂದನಾದರು ನಿಮ್ಮಯ ಪದದ್ವಂದ್ವ
ಭಜಿಸೆ ಜಗದಿ ಪ್ರಾಜ್ಞ-
ನೆಂದು ಕರೆಸುವನು ಯೆನುತ ನಾವಂದಿಸುವೆ
ಸುಜ್ಞಾನವಿತ್ತು ೨
ಕರುಣಶರಥೇ ನಿಮ್ಮ ನಾಮ ಸ್ಮರಣೆ
ಮಾತ್ರದಿ ಭೂತ ಪ್ರೇತಗ-
ಳಿರದೆ ಪೋಪವು ಶರಣು ಜನರ ದುರಿತ
ಘನಕೆ ಮರುತರೆನಿಪ ೩
ಈ ಮಹಿಯೊಳಗಾದಿ ಶಿಲೆಯ ಸ್ವಾಮಿಯ
ಪದದಿಂದೆ ತ್ರಿಪಥ
ಗಾಮಿನಿಯಳ ತೋರಿ ಸ್ವಜನ ಕಾಮಿತವ ಪೂರೈಸಿದಂಥ೪
ಶೇರಿದ ಪರಿವಾರಕೆ ಸುರ ಭೂರುಹವೆಂದೆನಿಸುವಂಥಾ
ಪಾರ ಮಹಿಮ ‘ ಕಾರ್ಪರ ಸಿರಿನಾರಸಿಂಹ’ನ
ನೊಲಿಸಿದಂಥ ೫


ದುರ್ಗೇ ಪಾಲಿಸೆ ಹೇ ದುರ್ಗೇ ಪಾಲಿಸೆ ಪ
ಭಾರ್ಗವಿ ಭಜಕರ ವರ್ಗವ ಕರುಣದಿ ಅ.ಪ
ಸರ್ಗಸ್ಥಿತಿ ಲಯಕಾರಣೆ ಜಗಕೆ ಸು
ಮಾರ್ಗದಿ ನಡೆಯಲನುಗ್ರಹ ಮಾಡೆ ೧
ವಂದಿಸುವೆನು ಭವಬಂಧವ ಬಿಡಿಸ್ಯಾ
ನಂದವ ಕರುಣಿಸು ನಂದಾತ್ಮಜಳೆ ೨
ಕಡಲತನುಜೆ ತವಕಡು ಕರುಣದಲಿ
ಬಡಜಭವ ಮುಖರು ಪಡೆದರು ಪದವನು ೩
ಧಾರುಣೆ ನಭ ಸಂಚಾರಿಣೆ ಆಯುಧ
ಧಾರಿಣಿ ಭವ ಭಯಹಾರಿಣಿ ನಮೊನಮೋ೪
ಇಂದಿರೆ ಪದುಮ ಸುಮಂದಿರೆ ತವಪದ
ದ್ವಂದ್ವದಿ ಭಕುತಿಯ ಪೊಂದಿ ಸುಖಿಸುವಂತೆ ೫
ವೀರರೂಪಿ ಅಸುರಾರಿಯೆ ತವಪರಿ
ವಾರದ ಭಯವನು ತಾರದಿರೆಂದಿಗೂ ೬
ಮಂಗಳಕೃಷ್ಣ ತರಂಗಿಣೆ ಕಾರ್ಪರ
ತುಂಗಮಹಿಮೆ ನರಸಿಂಗನ ರಾಣಿ೭

೬೬
ದೇವಾ ಬಾರಯ್ಯಾ ವೈಭವದಿ ರಥವನೇರಿ
ಸೇವಿಸುವೆನು ಮಧ್ಭಾವದಿ ನೆಲಸೆಂದು
ಪಾವನ ಮಣಿಪುರ ಠಾವಿನೊಳಿಹ
ಭೂದೇವ ವರ್ಯ ಸಂಶೇವಿತ ಕೇಶವ ಪ
ದೇವಗಂಗೆಯಪೆತ್ತ ಪಾವನಗಾತ್ರಧ್ರುವ
ಭೂವರೋಪಾಸಿತನಾಗಿ ಈ ವಸುಧಿಗೆ ಬಂದು
ಪಾವಮಾನ ಶಾಸ್ತ್ರದಿ ಕೋವಿದಯತಿ ವರ
ಶ್ರೀ ವಿದ್ಯಾನಿಧಿ ತೀರ್ಥ ಸೇವಿತ ಸಂಸ್ಥಾಪಿತ
ಸೇವಕ ಜನ ಸಂಭಾವಿತ ಕಾಮಿತ ವೀವ
ಕಾವ ಸದಶಾವತಾರ ನಮೋ ಶ್ರಿವಿರಂಚಿಮುಖ
ದೇವನ ಮಿತ ಕಂಚೀವರದನೆ ಪೊರೆ ಶ್ರೀ ವರಕೇಶವ ೧
ಕಡು ಶೋಭಿಸುವ ಬಿಳಿಗೊಡೆ ಚಾಮರಾದಿಗಳ
ಪಿಡಿದು ಶೇವಿಪ ಜನರೆಡಬಲದಿ ಬರೆ
ಪೊಡವಿ ಸುರರು ಪಂಥಸ್ವಿಡಿದು ವೇದಪಠಣ
ಬಿಡದೆ ಮಾಡುತ ಬರೆ ನುಡಿವ ವಾದ್ಯಗಳಿಂದ
ಸಡಗರದಲಿ ದ್ವಿಜಮಡದಿಯರಾರುತಿ
ಪಿಡಿದು ಬೆಳಗುತಿರೆ ಕಡು ವೈಭವದಲಿ
ಅಡಿಗೆರಗುವೆ ಪಾಲ್ಗಡಲ ಶಯನ ಮೂ-
ರಡಿ ರೂಪನೆ ಜಗದೊಡೆಯ ಕೇಶವ ೨
ನಂದ ತೀರ್ಥರ ಮತ ಸಿಂಧುವಿಗೆ ಪೂರ್ಣ
ಚಂದ್ರರೆನಿಪಯತೀಂದ್ರ ಸತ್ಯ ಪ್ರಮೋದ
ರಿಂದ ಪೂಜಿತ ಪದ ದ್ವಂದ್ವ ಮಧ್ಯದೊಳಿಹ
ಮಂದಾಕಿನಿಗೆ ಪಿತನೆಂದು ತೋರಿಸಿದಂಥ
ಇಂದಿರೆಯರಸನೆ ಮಂದರಧರ ಗೋ
ವಿಂದ ಪಾಹಿ ಮುಕುಂದನೆ ಬಾಬಾ-
ರೆಂದು ಕರೆವ ದ್ವಿಜ ವೃಂದಮಧ್ಯದಲಿ
ಶ್ಯಂದನ ವೇರಿದ ಸುಂದರ ಕೇಶವ ೩
ಅಂಬುಜನಾಭನೆ ನಿತಂಬದಿ ಪೊಳೆವ ಪೀ-
ತಾಂಬರ ಧೃತ ಶಾತಕುಂಭ ಮಕುಟವದ-
ನಾಂಬೋಜವನು ತೋರೋಕುಂಭೀನಸ ಪರಿಯಂಕ
ಶಂಭ್ವಾದಿನಮಿತ ನೀಲಾಂಬುಧ ನಿಭಗಾತ್ರ ಕಂಬುಚಕ್ರಸುತ-
ದಾಂಬುಜಧರ ಬಲು ಸಂಭ್ರಮದಲಿ ಮುನಿಕುಂಭಜ ಪೂಜಿತ
ನಂಬಿದ ಭಕುತ ಕದಂಬ ದುರಿತ ಕಾದಂಬನಿ ಪವನ ಕೃ
ಪಾಂಬುಧೆ ಕೇಶವ ೪
ಗರುಡ ಮಾರುತರಿಂದ ಪರಶೇವಿತನೆ ಬಾರೊ
ಶರಣು ಜನರ ಸುರತರುವೆ ಚನ್ನಕೇಶವ
ಧರೆಯೊಳಧಿಕ ಮಣಿಪುರ ಪಂಡಿತಾಗ್ರಣಿ
ವರದಾಚಾರ್ಯ ಸನ್ನುತ ಸರಸಿಜಾಸನ ಪಿತ
ಸಿರಿದೇವಿಯು ಈರೆರಡು ರೂಪದಲಿ
ಕರದೊಳಗಾರುತಿ ವರಚಾಮರಗಳ ಧರಿಸಿ
ಶೇವಿಪಳು ಸಿರಿ ‘ ಕಾರ್ಪರ ನರಹರಿ ‘
ರೂಪನೆ ಮಾಂ ಪೊರೆವುದು ಕೇಶವ ೫

೮೦
ಧನ್ಯನಾಗೆಲೊ ಮುನ್ನ ಹರಿಯ ಕಾ
ರುಣ್ಯವನೆ ಪಡೆದು ಮಾನವನೆ ಪ
ಇನ್ನು ಸಂಸ್ರ‍ಮತಿಯ ಬನ್ನ ಬಿಡಿಸುವ
ಪನ್ನಗಾರಿ ಧ್ವಜನನ್ನು ಧ್ಯಾನಿಸುತ ಅ.ಪ
ಕಣ್ಣಿನಿಂದಲಿ ನೋಡು ಹರಿಯಲಾವಣ್ಯ ಮೂರ್ತಿಯನು
ಕರ್ಣದಿಂದಲಿ ಕೇಳು ಹರಿಯ ಪಾವನ್ನ ಕೀರ್ತಿಯನು
ಅನ್ಯವಾರ್ತೆಗಳಾಡದೆ ವದನದಿ ಘನ್ನ ಹರಿಯಗಣಗಳನ್ನೇ
ಬಣ್ಣಿಸುತ ೧
ಹಸ್ತವೆರಡು ಹರಿಮಂದಿರ ಮಾರ್ಜನಕೃತ್ಯ ಮಾಡುತಿರಲಿ
ಮತ್ತೆ ಪಾದಗಳು ಚಿತ್ತಜನಯ್ಯನ ಕ್ಷೇತ್ರ ತಿರುಗುತಿರಲಿ
ಚಿತ್ತವಿರಲಿ ಆಧ್ಯಾತ್ಮ ತತ್ವದಲಿ ಮತ್ತನಾಗದಲೆ
ಭೃತ್ಯನಾಗಿ ಬಲು ೨
ಇಂತು ಪಡಿಯೊ ಶಿರಿಕಾಂತನಲ್ಲಿ ಏಕಾಂತ ಭಕ್ತಿಯನು
ಸಂತತ ಹರಿಗುಣ ಚಿಂತನದಿ ವಿಷಯ
ಭ್ರಾಂತಿಯ ಬಿಡು ನೀನು
ಶಾಂತಮನದಿ ಗುರುಮಧ್ವಮತದ ಸಿದ್ಧಾಂತ
ಪೇಳುವ ಮಹಂತರ ಸೇವಿಸಿ ೩
ಸಾರ್ಥವಿದೆ ತಿಳಿ ಪಾರ್ಥಸಖನು ಸರ್ವತ್ರ ಇಹನೆಂದು
ಗಾತ್ರದೊಳು ಪ್ರತ್ಯಗಾತ್ಮನಲ್ಲಿ ಸದ್ಭಕ್ತಿಮಾಡು ತಿಳಿದು
ಮತ್ರ್ಯ ಜನ್ಮಕಿದು ಸಾರ್ಥಕವೊ ಸುಖತೀರ್ಥರ ಕರುಣಾ
ಪಾತ್ರನಾಗಿ ಬಲು ೪
ಈ ತೆರದಿ ಸಂಪ್ರಾರ್ಥಿಪರಿಗಿಷ್ಟಾರ್ಥಗಳ ಕೊಡುವಾ
ಭೂತಲದಿ ಪ್ರಖ್ಯಾತ ಕಾರ್ಪರ ಕ್ಷೇತ್ರದಲಿ ಮೆರೆವ
ಪಾತಕ ಹರ ಶಿರಿನಾರಶಿಂಹನ ಕೃಪಾತಿಶಯದಿ ನಿ
ರ್ಭೀತನಾಗಿ ಬಲು ೫

೨೯
ನರಹರಿ ತೀರ್ಥಯತಿವರ್ಯ ಇಷ್ಟೆಂದೊ
ರ್ಣಿಸಲೊಶವೆ ನಿಮ್ಮಯ ದಿವ್ಯ ಚರಿಯ ಪ
ಸುರವಿನುತ ಪದಹರುಷತೀರ್ಥರ
ಕರಕಮಲ ಸಂಜಾತರೆನಿಸುತ
ಧರೆಯೊಳಗೆ ಸಿರಿಸಹಿತರಾ ಮನ
ಕರೆದು ಧರೆಸುರ ಜನಕೆ ತೋರಿದ ಅ.ಪ
ಚರಿಸುತ ಬರಲು ಗಜಪುರದಿ ಪುರ-
ದರಸನಿಲ್ಲದಿರೆ ಯೋಚಿಸುತ ಕರಿಕರದಿ
ವರಮಾಲಿಕೆಯ ಕೊಡಲಾಕ್ಷಣದೀ ಯತಿ
ವರರ ಕಂಠದಲಿ ಹಾಕಲು ಜನ ಸಭದಿ
ಪುರಜನದ ಪ್ರಾರ್ಥನದಿ ದ್ವಾದಶ ವರುಷ
ಪ್ರಜರನು ಪೊರೆದು ಕೋಶದೊಳಿ-
ರುವ ಧರಿಜಾಸಹಿತ ರಾಮನ ತರಿಸಿ
ಪೊರಟರು ಕುದುರೆಯೇರುತ೧
ಆ ಮಹಾಮುನಿಪರು ತ್ವರದಿ ಬಂದು
ಶ್ರೀ ಮದಾನಂದ ತೀರ್ಥರ ಪದಯುಗದಿ
ಪ್ರೇಮವಂದನ ಪೂರ್ವಕದಿ ಸೀತಾ
ರಾಮಮೂರ್ತಿಯ ನೊಪ್ಪಿಸಿದರು ಕರದೀ
ಶ್ರೀ ಮನೋಹರ ನಂಘ್ರಿಯುಗಲವ
ಪ್ರೇಮದಿಂದಲಿ ಪೂಜಿಸುತಲಿರೆ
ಈ ಮಹಾತ್ಮರ ಕರೆದು ಕೊಟ್ಟರು
ನೇಮದಿಂದರ್ಚಿಸಿರಿ ಎನುತಲಿ ೨
ಭಾಸುರ ಹೇಮಮಂಟಪದಿ ನಿತ್ಯಾ
ಶ್ರೀಸೀತಾರಾಮನರ್ಚಿಪರು ವೈಭವದೀ
ಭೂಸುರ ಕೃತ ವೇದಘೋಷದಿ ಮತ್ತೆ
ವ್ಯಾಸಸೂತ್ರಗಳ ನಾಮಾವಳಿ ಪಠಣ ದಿ
ದೇಶ ದೇಶಗಳಲ್ಲಿ ಚರಿಸುತ
ತೋಷತೀರ್ಥರ ಮತವ ಬೋಧಿಸಿ
ಶ್ರೀಶಕಾರ್ಪರ ವಾಸ ಸಿರಿ ನರ
ಕೇಸರಿಗೆ ಪ್ರಿಯದಾಸರೆನಿಸಿದ ೩

೬೭
ನಾರಸಿಂಹ ಪರಿಪಾಲಯಮಾಂ ಸತತಂ ಭವ
ಕೂಪನಿ ಪತಿತಂ ಪ
ಘೊರ ದುರಿತಹರ ಚಾರುಚರಣಯುಗಲಂ ಪ್ರಣ
ಮಾಮಿ ತ್ರಿಕಾಲಂ ಅ,ಪ
ಕಾರ್ಪರ ಋಷಿಕೃತ ಘೋರ ತಪ:ಪ್ರೀತ ಅ-
ತ್ರಾವಿರ್ಭೂತ ಕಾರ್ಪರ ಗ್ರಾಮೇತೀರ ಗತಾಶ್ವತ್ಥ
ರೂ ಪೇಣ ಸಮಸ್ತ ಆರಾಧಕ ನಿಜಭಕ್ತ ಜ-
ನಾಭಿಷ್ಟ ವರ್ಷಣ ಸರ್ವೇಷ್ಟ ನಾರಾಯಣ ಮುನಿ
ಪೂಜಿತ ಸುರವ್ರಾತ ಸಂಸ್ತುತ ಶುಭಚರಿತ ೧
ಸಾಕ್ಷಾಚ್ಛ್ರೀರ ಪಿವೀಕ್ಷ್ಯಾದ್ಭುತರೂಪಂ ತವ ಪ್ರಕಟಿತ
ಕೋಪಂತ್ರ್ಯಕ್ಷಾದ್ಯಮರೈ:ಪ್ರೇಷಿತಾಪಿ ಸ್ವ¥ತಾ ಶಂಕೆ-
ತೇವ ತಸ್ಥಾ ರಕ್ಷಿತ ವಾನಭಿ ವೀಕ್ಷ್ಯ ಪ್ರಹ್ಲಾದಂ ಕೃತ್ವಾಪ್ರ
ಸಾದಂ ಲಕ್ಷ್ಮೀಧವಖಲ ಶಿಕ್ಷಣ ತವಚರಿತಂ
ಜ್ಞಾಪಯಮೇ ಸತತಂ ೨
ಭಕ್ತಿಂದೇಹಿ ಪ್ರಶಸ್ತಾಂತ್ವಯಿ ಕೃಪಯಾ ಚಿಂತಿತ ದುರ್ವಿಷಯಾ
ಸಕ್ತಿಂಜಹಿ ಸದ್ಭಕ್ತ ಚಿತ್ತನಿಲಯ ಕಾಯಾಧವ ಪ್ರಿಯ
ತೃಪ್ತಿರ್ಮೇಸ್ತು ಭವತ್ಕಥಾಖ್ಯ ಸುಧಯಾ
ಶೃತಿಪುಟಸಂಭೃತಯಾ
ಮುಕ್ತಾ ಮುಕ್ತ ಸಮಸ್ತ ಜಗತ್ಕಾಯಾ ಸುರಗಣ ಸಂಶೇವ್ಯಾ೩
ಪದ್ಮಾಜಾದಿನುತ ಸದ್ಗುಣ ಗಣ ಪೂರ್ಣ
ಸುಜನಾರ್ತಿಹರಣಾ
ಪದ್ಮಾಂಧವ ಮಾಮುದ್ಧರ ಸುಖಪೂರ್ಣ
ವೃಕ್ಷಾದವತೀರ್ಣ
ಮದೃತ್ತಿಮಿರ ಪ್ರದ್ಯೋತನಕಿರಣ ಸನ್ನಿಭಶುಭ ಚರಣ
ಪದ್ಮಾರ್ಚಿತ ಪದ ಪದ್ಮ ಸದಾ ಪೂರ್ಣ
ಷಡ್ಗುಣಸಂಪನ್ನ ೪
ಮಂಗಳ ಕೃಷ್ಣ ತರಂಗಿಣೆ ಕೂಲಸ್ಥ ಅಶ್ವತ್ಥೋದ್ಭೂತ
ತುಂಗವದನ ಬಹು ಶಾಲಿಗ್ರಾಮಗತ ಷೋಡಶ ಬಾಹುಯುತ
ಮಂಗಳಪ್ರದ ನರಸಿಂಹ ಕೃಪಾಪಾಂಗ ರಕ್ಷಿತ
ಮಾತಂಗ ಸಂಗೀತಪ್ರಿಯ
ಮಂಗಳತರಚರಿತ ಶತಿತತಿ ವಿಖ್ಯಾತ ೫

೩೭
ನೆರೆನಂಬಿದವನೆ ಧನ್ಯಾ ಈ ಗುರುಪದ ಪ
ನೆರೆನಂಬಿದವ ರಘತರಿವ ವೇದವ್ಯಾಸ ಕರ
ಸರೋರುಹ ಜಾತ ಗುರು ವೇದೇಶರ ಪಾದ ಅ.ಪ
ವರಮಣಿಯೊಳು ಶಿರಿತನದಿಂದಲ್ಲಿ ಮೆರೆವ ನಾಯ
ಕರ ಮಂದಿರದಿ ಜಾತರಾಗಿ ಪರಮ ಮಹಿಮರಾದ
ಗುರು ರಘೋತ್ತಮರಿಂದ ಪರವಿದ್ಯೆಯನು ಪೊಂದಿ
ಚರಿಸಿ ದಿಗಂತದಿ ವರವೇದ ವ್ಯಾಸರಿಂದ ತುರಿಯಾಶ್ರಮ
ಪಡೆದು ಸಚ್ಚಿಷ್ಯರಿಂದÀ ಸಂತತ ಪ್ರವಚನ ಮಾಡುತಲಿ
ಆನಂದ ತೀರ್ಥರ ಮತ ಶರಧಿಗೆ ಪೂರ್ಣ ಚಂದಿರನೆನಿ
ಪರ ಪದ ೧
ಬಾದರಾಯಣನ ಪ್ರಸಾದವ ಪಡೆದಂಥ
ಯಾದವಾರ್ಯರಿಗೆ
ಮೋದತೀರ್ಥ ರಮತ ಬೋಧಿಸಿದಂಥ
ಅಗಾಧ ಮಹಿಮರು ಈ
ಮೇದಿನಿಯೊಳಗಲ್ಪ ಭೋಧ ಜನಕೆ
ಪೂರ್ಣಬೋಧ ಗ್ರಂಥಾರ್ಥ
ಸುಬೋಧವಾಗಲೆಂದು ವೇದಾರ್ಥ
ಗ್ರಂಥಗಳನ್ನು ಟೀಕಾ ಕೃ
ತ್ಪಾದರುಕ್ತಿಗಳನು ಸ್ಮರಿಸಿ ಪದಾರ್ಥ
ಕೌವುುದಿಗಳನು ರಚಿಸಿದಂಥಾ
ವಾದಿ ಮಾತಂಗ ಮೃಗಾಧಿಪರನ್ನು ೨
ವರ ಕುಸುಮೂರ್ತಿಯೊಳು ಇರುತಿರಲೊಂದಿನ
ಕರೆದು ಶಿಷ್ಯರಿಗೆ
ಮರುತಶಾಸ್ತ್ರದ ಮರ್ಮ ಅರಹುವ ಸಮಯದಿ
ಹರಿ ಪಾದಂಗುಟದಿಂದ
ಪೊರಟು ಜಗವನೆಲ್ಲ ಪರಮ ಪಾವನಮಾಳ್ಪ
ಸುರನದಿಯನು ಸಾಕ್ಷಾ-
ತ್ಕರಿಸಿ ತೋರಿಸಿದಂಥ ಗುರು ಕೃಷ್ಣದ್ವೈಪಾಯನ ತೀರ್ಥರಿಗೆ
ಗುರುವೆನಿಸಿದ ಕಾರಣ ವರ್ಣಿಸಲೆಂತು
ಘನವಾದ ಮಹಿಮೆಯನಾ
ಸೇವಿಸುವಂಥ ಶರಣ ಜನರ ಸುರತರು ಸಮ ಚರಣ ೩
ಒಂದೆ ಮನದಿ ಬಲು ಸುಂದರವಾದ ಈ
ವೃಂದಾವನದೆಡೆ ಒಂದು ಪ್ರದಕ್ಷಿಣಿ
ವಂದನೆ ಮಾಡಲು ಮಂದನಾದರು ಪ್ರಾಜ್ಞನೆಂದು ಕರೆಸುವನು
ವಂಧ್ಯೆಯಾದರು ಬಹುಕಂದರ ಪಡೆವಳುಸಂದೇಹವ್ಯಾಕಿಲ್ಲಿ
ಬಂದು ಸೇವಿಸುವವರ ಸಂಸೃತಿಯ ಬಂಧನವನು
ದೂರಮಾಡುತಲಿ ಆ
ನಂದವ ಗರಿಯುವರ ಭಕ್ತರ ದುರಿತಾಂಧಕಾರಕ್ಕೆ ರವಿ
ಯಂದದಲಿಪ್ಪರ ೪
ವರಭೀಮಾತೀರದಿ ಪರಿಶೋಭಿಸುವ ಮಣಿ
ಪುರದಿ ಪಂಡಿತ ಭೂಮಿ
ಸುರರ ಪರಿವಾರದಿ ನಿರುತ ಸೇವೆಯಗೊಂಡು
ಚರಣಾರಾಧಕರನು
ದ್ದರಿಸಲೋಸುಗದಿ ಈ ವರವೃಂದಾವನ
ಸುಮಂದಿರದಿ ಕುಳಿತು ನಿತ್ಯ
ಗರಿಯು ತಲಿಷ್ಟಾರ್ಥವ ಪಿಪ್ಪಲವೆಂಬತರು
ಮೂಲದಲಿ ಮೆರೆವ
ಕಾರ್ಪರ ನರಹರಿಯ ಪಾದಾಂಬುಜವ
ಧೇನಿಸುತಿಪ್ಪ ಗುರುವೇದೇಶರ
ಶುಭ ಚರಣ ಯುಗಲವ ೫

ಕಥನಾತ್ಮಕ ಹಾಡುಗಳು
೮೫
ನೋಡಬನ್ನಿರಿ ಕಾರ್ಪರೇಶನ ಪಾಡಿರೈ ಸರ್ವೇಶನಾ
ರೂಢಿಯೊಳು ಶೇಷಾದ್ರಿನಿಲಯನ ಕೂಡಿಕೊಂಡಿಲ್ಲಿರುವನ ಪ
ಚಿಪ್ಪಗಿರಿ ದಾಸಾರ್ಯರೀತರು ಪಿಪ್ಪಲವ ಕಂಡಾಗಲೇ
ಕಾರ್ಪರಾರಣ್ಯೆಂಬ ಪದದಿ ಸಂಕ್ಷಿಪ್ತ ಮಹಿಮೆಯ ಪೇಳ್ದರು ೧
ಅಪರದಿಗ್ಭಾಗದಲಿ ನೋಡಲು ಸಪತ ಋಷಿಗಳ ಸ್ಥಾನವು
ತ್ರಿಪಥಗಾಮಿನಿ ವ್ಯಕ್ತಳಾದಳು ತಪಕೆ ವಿಶ್ವಾಮಿತ್ರರ ೨
ಯತ್ರಶ್ವೇತ ಶೃಂಗ ಕೃಷ್ಣಾಚೋತ್ತರ ವಾಹಿನಿಯೊಳು
ತತ್ತದಾನ ಸ್ನಾನ ಕಾಸಿಗೆ ಉತ್ತಮವು ಫಲವೀಯಲು ೩
ಚಾರುಕೃಷ್ಣಾತೀರವಿದರೊಳು ಕಾರ್ಪರಾಖ್ಯ ಮುನೀಂದ್ರನಾ
ಘೋರತಪ ಕೊಲಿದರಳೆ ಮರದಾಗಾರನೆನಿಸಿದ ಧೀರನ ೪
ನೀರಜಾಸನ ಮುಖ್ಯ ಸುರ ಪರಿಹಾರ ಸೇವಿತ ಚರಣನ
ಸೇರಿದವರಘ ದೂರ ಮಾಡುವ ಘೋರನರಹರಿ ರೂಪನ ೫
ಇಂತು ಅಶ್ವತ್ಥಾಂತರದಿ ಸಿರಿಕಾಂತನರಿಯನೆ ವಿಪ್ರರೊಳ್
ಶಾಂತ ನಾರಪ್ಪಯ್ಯನೆಂಬ ಮಹಾಂತರಿಲ್ಲಿರುತಿಪ್ಪರು ೬
ದೊಡ್ಡವರ ಗುರುತರಿಯದಿವರನು ದಡ್ಡರೆನ್ನುತ ಭ್ರಾತ್ರರು
ದೊಡ್ಡ ಕೃಷ್ಣಾನದಿಯೊಳಿವರನು ಕಟ್ಟಿ ಹಾಕಲು ಕೋಪದಿ ೭
ಕಡಲಶಯನನ ಕರುಣದಿಂದಲಿ ದಡಕೆ ಸೇರಿದನಂತರ
ದೃಢ ವಿರಾಗದಿ ವೆಂಕಟಾದ್ರಿಗೆ ನಡೆದರಾಗಲೆ ಹರುಷದಿ ೮
ವಿಠ್ಠಲನ ಶುಭ ಚರಣ ಪಂಕಜ ಷಟ್ವದಾಯಿತ ಚಿತ್ತರು
ಕೃಷ್ಣನಿರುತಿಹ ಬೆಟ್ಟದಡಿಯನು ಮುಟ್ಟಿಮಲಗಲು ಸ್ವಪ್ನದಿ೯
ಇಲ್ಲಿ ದರ್ಶನವಿಲ್ಲ ನೀವಿರುವಲ್ಲಿ ಪುಣ್ಯಸ್ಥಾನವು
ದುರ್ಲಭವು ಪಾಪಾತ್ಮರಿಗೆ ನೀನಲ್ಲಿ
ಪೋಗಿರೋ ಭೂಸುರ ೧೦
ಧೇನು ರೂಪದಿ ಬರುವೆ ಕಾರ್ಪರ ಕಾನನದ ಅಶ್ವತ್ಥದಿ
ಕಾಣುವುದು ಕ್ಷೀರಾಭಿಷೇಚನ ಧ್ಯಾನಿಸೆನ್ನನು ದ್ವಿಜವರ ೧೧
ಇಂತುಸ್ವಪ್ನದಿ ಸೂಚಿಸಿದ ವೃತ್ತಾಂತವನು ಸಂಚಿಂತಿಸಿ
ಕಂತು ಜನಕನ ಇಚ್ಛೆಯಿಂದಲೆ ಸಂತಸದಿ ಗಿರಿಗೊಂದಿಸಿ ೧೨
ಮುಂದೆ ನಡೆದರು ಹಿಂದೆ ಗೆಜ್ಜೆಗಳಿಂದ ಬರುತಿಹ ಗೋಗಳ
ದ್ವಂದ್ವ ರೂಪವ ನೋಡದಲೆ
ಗೋವಿಂದನಂಘ್ರಿಯ ಸ್ಮರಿಸುತ ೧೩
ಬರುತ ಬರುತಲೆ ತಿರುಗಿ ನೋಡಲು
ಕುರುಕಿ ಹಳ್ಳಿಯ ಗ್ರಾಮದಿ
ವರಶಿಲೆಯ ಮೇಲ್ಗರಿಯೆ ಪಾಲನು
ತಿರುಮಲೇಶನ ಕಂಡರು ೧೪
ತರುವರಾಶ್ವತ್ಥದಲಿ ಸಲೆ ಪಾಲ್ಗರಿಯೆ
ಗುರುತನು ಕಾಣುತ
ಗಿರಿಯ ವೆಂಕಟರಮಣ ತಾನಿಲ್ಲಿರಲು
ಬಂದನು ಎನ್ನುತ ೧೫
ನಿರುತ ಪೂಜೆಯ ಮಾಡುತಲೆ
ಮುನಿವರನು ಸುಖದಿಂದಿರುತಿರೆ
ತುರುಗಳನು ಶ್ರೀಹರಿಯ ಸೇವೆಗೆ ಶರಣು
ಜನರೊಪ್ಪಿಸು ತಿರೆ ೧೬
ಬಂದರಲ್ಲಿಗೆ ತಮ್ಮ ಗ್ರಾಮದ ಬಂಧು ಬಾಲಕರೆಲ್ಲರು
ಕಂದರಿಗೆ ಪೇಳಿದರು ಗೋಗಳ ವೃಂದ
ಕಾಯುವದೆನುತಲಿ ೧೭
ಚಾರು ಶಿಲೆಯೊಳಗೊಂದುದಿನ ಅಂಗಾರದಲಿ ಪ್ರಾಣೇಶನ
ಮೂರುತಿಯ ಬರೆದೀತ ಭಯ
ಪರಿಹಾರನುನಿಮಗೆಂದರು ೧೮
ಹಟ್ಟಿ ಹನುಮನ ಪಾದ ಪದುಮವ
ನಿಷ್ಠೆಯಿಂದಲಿ ಸೇವಿಸೆ
ಇಷ್ಟಗಳು ದೊರೆಯುವವು ಬುದ್ಧ್ಯಾದ್ಯಷ್ಟ
ಸಿದ್ಧಿಗಳಾಗ್ವವು ೧೯
ಮೂಲ ಪುರುಷರು ಅವರೆ
ನಾರಪ್ಪಯ್ಯರೆಂಬ ಮಹಾತ್ಮರು
ಕಾಲ ಕಾಲಗಳಲ್ಲಿ ಸ್ಮರಿಸಲು ಪಾಲಿಸುವ
ಹರಿ ಸಂತತ ೨೦
ವರ ವಿಜಾಪುರದರಸು ತನ್ನಯ
ಧರಣಿಯನು ಸಂಚರಿಸುತ
ಮೆರೆವ ಕರಿತುರಗಾದಿಸೈನ್ಯದಿ ಬರಲು
ಚೆನ್ನೂರ ಗ್ರಾಮದಿ ೨೧
ಧಾರುಣೀಶನ ಸೈನ್ಯದಲಿ ಭಯ
ತೋರಿತಂದಿನ ರಾತ್ರಿಯೋಳ್
ಸಾರಿದರು ಜನಘೋರ ಭಯಹರ ನಾರಸಿಂಹನ
ಮಹಿಮೆಯಾ ೨೨
ಎರಡನೆಯ ದಿನ ರಾತ್ರಿಯೊಳು ಮಲಗಿರಲು
ಭೂಪನ ಸ್ಪಪ್ನದಿ
ಅರುಹಿದನು ವಟುರೂಪದಲಿ ನರಹರಿಯು
ತರುವನು ತೋರಿಸಿ ೨೩
ಕಟ್ಟಿಸೆಲೊ ಭೂಪತಿಯೆ ಮಂದಿರ ಕೃಷ್ಣವೇಣಿಯ ಗರ್ಭದಿ
ಪುಟ್ಟುವನು ವರಕುವರ ನಿನಗತಿ
ಶ್ರೇಷ್ಠನೆನ್ನಯ ಕರುಣದಿ ೨೪
ಸುಪ್ರಭಾತದಲೆದ್ದು ನೃಪತಿಯು ಸ್ವಪ್ನಸೂಚಿತ ಸ್ಥಾನವ
ಕ್ಷಿಪ್ರ ನೋಡುವೆನೆನುತ ಸೈನ್ಯದಿ ಕಾರ್ಪರಕೆ ಬಂದಿಳಿದನು೨೫
ಆನೆಗಳು ಕಟ್ಟಿರುವ ಶಿಲೆಗಳು ಕಾಣಿಸುವ ವೀಗಾದರು
ಏನು ಧನ್ಯನು ನೃಪನು ನರಪಂಚಾನ
ನನಸೇವಿಸಿದನು ೨೬
ಬಂಧುರದ ಕಟ್ಟೆಯನು ಕಟ್ಟಿಸಿ
ಮಂದಿರವಮೇಲ್ ನಿರ್ಮಿಸಿ
ಇಂದಿರೇಶನ ಪದಕೆ ಭೂಸಂಬಂಧ ವೃತ್ತಿಯನೊಪ್ಪಿಸಿ೨೭
ಹಿಂದೆ ನೋಡಲು ಚಂದ್ರಶೇಖರ ನಂದಿಪತಿ ಮಂದಿರಗಳು
ವಂದೇ ವತ್ಸರದೊಳಗೆ ಶಿಲ್ಪಿಗಳಿಂದ ಕಟ್ಟಿದ ಶಿಲೆಗಳು ೨೮
ಆ ಮಹಾ ವೃಕ್ಷದಲಿ ಸಾಲಗ್ರಾಮ
ವೃಷ್ಟಿಯ ಮಹಿಮೆಯ
ಪ್ರೇಮದಿಂದಲಿ ಕೇಳುವವರಿಗೆ
ಕಾಮಿತಾರ್ಥವನೀವುದು ೨೯
ಎರಡು ಶತವತ್ಸರದೊಳಗೆ ಬಂದಿರುವ
ಮಾಧವ ಮಾಸ ದೊ
ಳಿರುವ ದ್ವಾದಶಿ ದಿನದ ತರಣಿಯು ಶರಧಿ
ಸೇರುವ ಸಮಯದಿ ೩೦
ಅರಿದರಾದ್ಯಾಯುಧಗಳನು ತಾ ಧರಿಸಿ
ಷೋಡಶ ಕರಗಳಿಂ
ಪರಮ ಸುಂದರ ನರಹರಿಯ ಮೂರುತಿಯು
ಹೊರಟನು ವೃಕ್ಷದಿ೩೧
ಸಕಲ ಯಾತ್ರೆಯ ಫಲವು ಲಭಿಸುವದಖಿಲ
ತೀರ್ಥ ಸ್ನಾನದ
ಭಕುತಿಯಿಂದಶ್ವತ್ಥ ವೃಕ್ಷದಿ ವ್ಯಕತ
ನರಹರಿ ದರ್ಶನ ೩೨
ದಕ್ಷಿಣಾಯನ ಪರ್ವದಲಿ ಈ ವೃಕ್ಷದೆಡೆಯಲಿ ಸ್ನಾನವು
ಮೋಕ್ಷ ಮಾರ್ಗಕೆ ಸಾಧನವು ಪ್ರದಕ್ಷಿಣಾದಿಕಮೆಲ್ಲವು೩೩
ಮಂದಿರವ ಕಾಣುತಲೆ ಶ್ರೀಗೋವಿಂದ ಗೋವಿಂದೆನುತಲಿ
ಬಂಧು ವರ್ಗ ಸಮೇತ ಭಕುತರ ವೃಂದ ಬರುವದು ನೋಡಿರೈ೩೪
ಪಾಲಿನಭಿಷೇಕದಿ ಅರ್ಚನ ಪಾಲಕಿಯ ಸೇವಾವಧಿ
ವಾಲಗವ ಕೈಕೊಳುತ ಭಕುತರ ಪಾಲಿಸುವ ನರಸಿಂಹನ ೩೫
ವಾರವಾರಕೆ ಭಕ್ತಜನ ಪರಿವಾರ ಸೇವೆಯಕೊಳ್ಳುತ
ಘೋರತರ ಸಂಸಾರ ಭಯಪರಿಹಾರ ಮಾಡುವ ದೇವನ ೩೬
ತಪ್ಪದಲೆ ಪ್ರತಿವರ್ಷ ದ್ವಿಜ ಸಂತರ್ಪಣಾದಿಗಳಿಂದಲಿ
ಕೊಪ್ಪರದಿ ನವರಾತ್ರ ಮೊದಲಾದುತ್ಸವಾದಿಗಳಾಗ್ವವು ೩೭
ಹಿಂದೆ ಚಾತುರ್ಮಾಸ್ಯ ಕಾಲವು ಬಂದಿರಲು ವಿಭುದೇಂದ್ರರು
ಬಂದರಿಲ್ಲಿಗೆ ಶಿಷ್ಯರಾದ ಯತೀಂದ್ರ ನಾರಾಯಣಾರ್ಯರು೩೮
ಆ ಸಮಯದಿ ರಘುನಾಥ ತೀರ್ಥ ಯತೀಶರಿಲ್ಲಿಗೆ ಬಂದರು
ತೋಷದಲಿ ವಿಭುದೇಂದ್ರ ತೀರ್ಥಮುನೀಶರವರಿಗೆ ಪೇಳ್ದರು೩೯
ವೃಕ್ಷದಲಿ ಸನಿÀ್ನಹಿತ ನರಹರಿಯಕ್ಷನೆದುರಿಗೆ ನಮ್ಮಯ
ಶಿಷ್ಯರೋದುವ ಗ್ರಂಥದರ್ಥ ಪರೀಕ್ಷೆ ಮಾಡಿರಿ ಎಂದರು೪೦
ಮೌನಿರಘುನಾಥಖ್ಯರವರನು ಏನು ಓದುತಿರೆನ್ನಲು
ಆನುಪೂರ್ವಿ ಸುಧಾಖ್ಯ ಗ್ರಂಥಾರ್ಥಾನುವಾದವ ಮಾಡಲು೪೧
ಮೇದಿನಿಯಲಿ ವಾದಿಜಯ ಸಂಪಾದಿಸಿರಿ ನೀವೆಂದರೂ
ಸಾದರದಿ ನಿಮಗೆಲ್ಲ ಜನ ಶ್ರೀಪಾದರಾಜರು ಎನ್ನಲಿ೪೨
ಹಿಂದೆ ಭೂಸೂರನೋರ್ವ ಸತಿಸಹ ಬಂದು
ಸೇವೆಯ ಮಾಡಲು
ಒಂದು ವತ್ಸರದೊಳಗೆ ಸತ್ಯಾನಂದ ಯತಿಗಳ ಜನನವು೪೩
ಸತ್ಯಧರ್ಮರು ಬಂದರೀ ಸುಕ್ಷೇತ್ರದರ್ಶನ ಮಾಡಲು
ಮುತ್ತಿನ್ಹಾರವ ಪದಕ ಸಹಿತಾಗಿತ್ತರೀ ನರಸಿಂಹಗೆ ೪೪
ಇದ್ದರಿಲ್ಲಿ ಜ್ಞಾನವೃದ್ಧ ಜನಾರ್ದನಾಭಿದ ಒಡೆಯರು
ಶುದ್ಧ ಮನದಲಿ ನರಹರಿಯ ಪದಪದ್ಮ ಸೇವೆಯ ಮಾಡುತ೪೫
ಬಿಡದೆ ತಪವಾಚರಿಸಿ ಕಾರ್ಪರದೊಡೆಯನನುಪಮ ಕರುಣವ
ಪಡೆದರಿವರನು ಸ್ಮರಿಸಿದವರಿಗೆ ಕೊಡುವ ಶ್ರೀಹರಿ ಸುಖವನು
ನಿತ್ಯದಲಿ ಪರಿಶುದ್ಧ ಮಧುಕರ ವೃತ್ತಿಯಿಂ ತಂದನ್ನವ
ಎತ್ತಿ ವೃಕ್ಷಕೆ ಕಟ್ಟುವರು ಇದು ಬುತ್ತಿ ನಾಳೆಗೆ ಎನ್ನುತ೪೭
ನಿನ್ನೆ ವೃಕ್ಷದಿ ತಂದು ಕಟ್ಟಿದ ಅನ್ನನದಿಯೊಳಗದ್ದುತ
ಪನ್ನಗಾರಿ ಧ್ವಜನಿಗರ್ಪಿಸಿ ಉಣ್ಣುತಿಹರಾನಂದದಿ೪೮
ಮಂದಮತಿ ಭೂದೇವನೊಬ್ಬನು ನಿಂದೆ ಮಾಡಿದನಿವರನು
ತಂದು ಕಟ್ಟಿದ ಅನ್ನ ತಂಗಳೆಂದು ತಿಳಿಯದೆ ಉಂಬರು ೪೯
ನಿಂದೆ ಮಾಡಿದ ವಿಪ್ರನನು ಕರೆಸೆಂದರರ್ಚನ ಸಮಯದಿ
ತಂದು ವೃಕ್ಷದಿ ಕಟ್ಟಿದನ್ನವ ತಂದು ಕೆಳಗಿಡಿರೆಂದರು ೫೦
ಒಡೆಯರಾಜ್ಞೆಯ ಮಿರದಲೆ ತಂದಿಡಲು
ಪೋಗಲು ವಿಪ್ರನು
ಸುಡುವು ದನ್ನವು ಎಂದೆನುತ ತಂದಿಡಲು
ಕೆಳಗಿಂತೆಂದರು

೨೦
ನೋಡು ಕರುಣದಿಂದ ಸರಸ್ವತಿ ನೀಡೆನಗೆ ಸುಮತಿಪ
ನೋಡು ಕರುಣದಿಂದಯನ್ನ ಮೂಢ
ಮತಿಯ ಕಳೆದು ಮನದಿ
ರೂಢೀಶ ಹರಿಯ ಗುಣಗಳನ್ನು
ಪಾಡಿಪೊಗಳುವಂತೆ ಯನ್ನ ಅ.ಪ
ಮೃಡ ಬಿಡೌಜರೊಡೆಯಳೆ
ನಿಮ್ಮಡಿಗಳಿಗೆರಗುವೆನು ಮಾತೆ
ಕಡಲಶಯನ ನಡಿಯುಗಲದಿ ದೃಢ
ಭಕುತಿಯ ಪಡೆಯುವಂತೆ ೧
ಚತುರವದನ ಸತಿಯ ಸಕಲ
ಶೃತಿಗಳಿಗಭಿಮಾನಿ ನಿಮ್ಮನು
ನುತಿಸಿ ಬೇಡುವೆ ರತಿಯ ಪತಿಯ ಪಿತನ
ಮಹಿಮೆ ತುತಿಸುವಂತೆ ೨
ಸರಸಿಜ ಭವನರಸಿ ನಿಮ್ಮನು ವರುಣಿಸಲೆನ್ನೊಶವೆ
ಜನನಿ ಶರಣು
ಜನರ ಪೊರಿಯುವ ಕಾರ್ಪರ
ಸಿರಿನರಹರಿಯ ಸೊಸೆಯೆ ೩

೨೮
ಪದ್ಮನಾಭರ ಭಜಿಸೋ ಹೇ ಮನುಜಾನೀ ಪ
ಮಧ್ವರಾಯರ ಕರಪದ್ಮ ಸಂಭವರಾದ ಅ.ಪ
ಮತ್ತ ಮಾಯಿಗಳೆಂಬೊ ಹಸ್ತಿಗಣಕೆ ಪಂಚ
ವಕ್ತ್ರರೆಂದೆನಿಸಿದ ಪೃಥ್ವೀಸುರಸೇವಿತ ೧
ಪ್ರೀತಿಯಿಂದಲಿ ಗೋಪಿನಾಥನರ್ಚಿಸಿ ಸುಖ
ತೀರ್ಥ ಗ್ರಂಥಕೆ ಸವ್ಯಾಖ್ಯಾತ್ರರೆಂದೆನಿಸಿದ ೨
ಧರೆಯೊಳು ಶರಣರ ಪೊರಿವ ಕಾರ್ಪರನರ
ಹರಿಯನೊಲಿಸಿದಂಥ ಪರಮ ಮಹಿಮರಾದ೩

೩೦
ಪಾದ ಪದುಮವ ಭಜಿಸೋ ಮಾಧವ ತೀರ್ಥರ ಪ
ಮೇದಿನಿಯೊಳು ನಾಲ್ಕು ವೇದಗಳಿಗೆ ಭಾಷ್ಯ
ಸಾದರದಲಿ ರಚಿಸಿದ ಮೋದತೀರ್ಥರ ಸುತರ ೧
ಸೂರಿಜನರ ಪರಿವಾರ ಸೇವೆಯ ಕೊಳುತ
ಧಾರುಣಿಯೊಳಗೆ ಮಣೂರು ಪುರದಲಿ ಮರೆವರ೨
ವೀಶಗಮನ ಚನ್ನಕೇಶವಾತ್ಮಕನಾದ
ಶ್ರೀಶ ಕಾರ್ಪರ ನರಕೇಸರಿಯನೊಲಿಸಿದವರ ೩

೬೮
ಪಾಲಿಸೆನ್ನನು ಶ್ರೀಲಕುಮಿವರ ಭೂಲೋಲಕಾರ್ಪರ
ದೊಳು ಪಿಪ್ಪಲತರು ಸುಮಂದಿರ ಪ
ಬಾಲತನದಿ ಜನಕನ ಬಹು ಕೀಳುನುಡಿಗಳನು ಸಹಿಸಿದ
ಬಾಲಗೊಲಿದ ನರಹರಿಯೆ ಕೃಪಾಳೊ ನಿಮ್ಮಯ
ಕಾಲಿಗೆರಗುವೆ ಅ.ಪ
ಸಾಲಿಗ್ರಾಮದಿ ನೆಲಸಿ ತರುವರ ಮೂಲದಿ ಸೇವಿಪರ
ಪಾಲಿಸಲೋಸುಗ ನಿರಂತರ ಕಾಲಕಾಲಗಳಲ್ಲಿ ಬಿಡದೆ
ವಾಲಗ ಕೈಕೊಳ್ಳುತ ಮೆರೆವ ಕಾಳಿಯಮದನನೆ ತವಪದ
ಕೀಲಾಜದಲಿ ಭಕುತಿಯ ೧
ಮಂದಜಾಸನಾದಿ ಸುರಗಣ ವಂದಿತ ಸುಚರಣ
ದ್ವಂದ್ವ ಭಜಕ ವೃಂದಪೋಷಣ ಸಿಂಧುಶಯನವಂದಿಪೆ ಭವ
ಬಂಧ ಬಿಡಿಸ್ಯಾನಂದಗರಿವ
ಸುಂದರ ಮೂರುತಿಯನು ಮನ
ಮಂದಿರದಲಿ ತಂದುತೋರಿಸಿ೨
ನಾರದಾದಿ ಮುನಿ ಸುವರ್ಣಿತ ಉದಾರ ಚರಿತ
ನಾರಾಯಣ ಮುನಿಸು ಪೂಜಿತ ಧಾರುಣಿಯೊಳು ಘೋರ
ಕೃಷ್ಣಾತೀರ ಸಂಸ್ಥಿತ ಸೇರಿದ ಭಕುತರಿಗೆ ತ್ರಿದಶ
ಭೂರುಹ ಸಿರಿನರಸಿಂಹನೆ ೩


ಪಾವಮಾನಿಯೇ ಪಾಲಿಸೋ ಕರಪಿಡಿದುದ್ಧರಿಸೋ
ಸೇವಕರೊಳಗಾಡಿಸೋ ಪ
ಶೇವಿಸುವವರಿಗೆ ದೇವತರುವೆನಿಸಿ
ಭೂವಲಯದಿ ಶು¨ಸ್ಛಾವಣಿ ನಿಲಯ ಅ.ಪ
ಜೀವೋತ್ತುಮಾನೀನೆನ್ನುತ ಹೇ ಪ್ರಾಣನಾಥ
ಭಾವಿಸುವೆನೊ ಸಂತತ
ಪಾವನ ಚರಿತ ಕೃಪಾವಲೋಕನದಿ
ಪಾವನ ಮಾಡೈ ಭಾವಿ ವಿಧಾತ ೧
ತುಂಗತರಂಗದುದಧಿ ಲಂಘಿಸುತ ಮುದದಿ
ಅಂಗನೆ ಸೀತೆ ಕರದಿ
ಉಂಗುರವ ಕೊಡುತ ಮಂಗಳಾಂಗ ರಘು
ಪುಂಗವಗೆರಗಿ ಸುಸಂಗತಿ ತಿಳಿಸಿದ ೨
ಇಂದು ಕುಲದಿ ಜನಿಸಿ ರಿಪುವೃಂದವ ಮಥಿಸಿ
ಇಂದ್ರಜನಣ್ಣನೆನಿಸಿ
ಅಂದು ರಣದಿ ಕುರು ವೃಂದವ ಮಥಿಶ್ಯಾ
ನಂದ ಕಂದ ಮುಕ್ಕುಂದನ ನೊಲಿಸಿದ ೩
ಮೇದಿನಿಯೊಳು ಜನಿಸಿ ಮೋದಮುನಿಯೆನಿಸಿ
ಭೇದಮತವ ಸ್ಥಾಪಿಸಿ
ವಾದಿಗಳನು ನಿರ್ವಾದಗೈಸುತಲಿ
ಸಾಧು ಜನಕೆ ಬಲು ಮೋದವಗರೆದ ೪
ಪುರಮರ್ದನಾದಿ ಸುರವರ ನಿರುತ ಸೇವಿಪರ
ದುರಿತ ತಿಮಿರ ಭಾಸ್ಕರ
ಶರಣು ಜನಕೆ ಸುರತರುವೆಂದೆನಿಸಿದ
ಸಿರಿ ಕಾರ್ಪರ ನರಹರಿ ಗತಿಪ್ರೀಯ ೫

೨೨
ಪಾಹಿ ವಿನತಾತ್ಮಜ ಪತಗಾಧಿರಾಜಾ ಪ
ಪಾಹಿಮಾಂ ವೈದೇಹಿರಮಣಗೆ ವಾಹನತ್ವವ
ಪಡೆದ ಗರುಡನೆ ಅ.ಪ
ವಂದಿಸುವೆ ಅರವಿಂದನಾಭನ
ಶ್ಯಂದನೋತ್ತಮನೆನಿಸಿ ಜಗದೊಳು
ಅಂದು ಸುರಕೃತ ಸಿಂಧು ಮಥನದಿ ಮಂದರವ
ತಂದಿಟ್ಟ ಧೀರನೆ ೧
ಕಾಳಗದಿ ಕಪಿವೀರರಿಗೆ ಕೃತವ್ಯಾಳ
ಬಂಧವ ಬಿಡಿಸಿದಂಥ
ವಾಲಖಿಲ್ಯರ ವರವ ಪಡೆದ ವಿಶಾಲಮಹಿಮನೆ
ಕಾಲಿಗೆರಗುವೆ ೨
ಧರಣಿಯೊಳು ಬಹು ಶರಣು
ಜನರಘ ತರಿದಭೀಷ್ಟಿಯ
ಗರಿವ ಕಾರ್ಪರ ನರಹರಿಯಶುಭಚರಣ
ಪೆಗಲೊಳು ಧರಿಸಿರುವ ಸೌಪರ್ಣಿ ರಮಣನೆ ೩

೪೦
ಪಾಹಿ ಶ್ರೀ ಗುರುರಾಘವೇಂದ್ರ ಅಮಿತಗುಣ
ಸಾಂದ್ರ ಯತೀಂದ್ರ ಪ
ಶ್ರೀದ ಮೋದತೀರ್ಥ ಮತವಾರಿಧಿ
ವಿಧು ವಸುಧಾ ಸುವಿಬುಧಾ ೧
ಅಮಿತ ಮಹಿಮಾಲಂಕೃತಾಂಗ
ಕುಮತ ಗಜಸಿಂಗ ಶುಭಾಂಗ ೨
ಶರಣು ಜನ ಮಂದಾರ ಕರುಣಾ
ಶರಧೆ ದುರಿತ ಘನ ಸುಪವನಾ೩
ಕೋಲತನಯಾ ಕೂಲಗತ ಮಂ
ತ್ರಾಲಯಾ ನಿಲಯಾ ಸುಕೃಪಯಾ ೪
ವೀರ ನಾರಸಿಂಹ ವಿಠಲ
ಚಾರು ಪದಕಮಲ ಸುಲೋಲ ೫

ರಾಘವೇಂದ್ರರ ಸ್ತೋತ್ರ
೪೧
ಬಂದರಾ ರಾಘವೇಂದ್ರರಾಯರು ಮಂತ್ರ
ಮಂದಿರ ವೆಂಬೀ ಸ್ಥಳಕೆ ವಿಭವದಿ ಪ
ಇಂದು ಭಜಕ ದ್ವಿಜ ವೃಂದಕೆ ಪರಮಾ
ನಂದ ಗರಿಯಲು ಶ್ಯಂದನವೇರಿ ಅ.ಪ
ಶ್ಯಂದನವೇರಿ ಧಣಂ ಧಣ ವಾದ್ಯದಲಿ ಪೌರಜನ
ಸಂದಣಿಸಿತು ಆನಂದದಿ ನೋಡುತಲಿ
ಪ್ರಾರ್ಥಿಪರು ಮುಗಿಯುತಲಿಕೈಯಾ ಕವಿಗೇಯಾ
ಶುಭಕಾಯಾ ಸುಧೀಂದ್ರರ ತನಯಾ ಗುರುವರಮಧ್ವ ಮು-
ನೀಂದ್ರರಾ ಸುಮತಾಂಬುಧಿ ಚಂದಿರ ಅತಿ ಸುಂದರ
ವೃಂದಾವನದಲಿ ನಿಂದಿಹರೆಂದರಿದೊಂದಿಪರಿಗೆ ಭವ
ಬಂಧವ ಬಿಡಿಸಲು ೧
ಸಡಗರದಲಿ ಬಿಳಿಗೊಡೆ ಚಾಮರ ವ್ಯಜನಾದಿಗಳನು
ಪಿಡಿದು ಸೇವಿಸುವ ಎಡಬಲದಲಿ ಸುಜನಾ
ಸಚ್ಛಾಸ್ತ್ರ ವೇದ ಪುರಾಣ ಪ್ರವಚನ ಪಾವನ್ನ
ಗುರುಗಳ ಗುಣಸ್ತವನ ಮಾಡುವಾ ವರಗಳ ಬೇಡುವಾ
ಕುಣಿಕುಣಿದಾಡುವಾ ಪಾಡುವಾ ಪೊಡವಿ ನಿರ್ಜರರ
ಗಡಣವ ನೀಕ್ಷಿಸಿ ಬಿಡದೆ ಪೊರಿವೆನೆಂದು
ಕಡು ವೈಭವದಲಿ ೨
ಥಳಥಳಿಸುತ ಕಂಗೊಳಿಸುವ ಮಣಿ
ಮುಕುಟ ದಿಂದ ದಿ-
ಗ್ವಲಯ ಬೆಳಗುತಿಹ ಚಲುವ ಮುಖದ ಮಾಟಾ
ಗಳದಲ್ಲಿ ಮೌಕ್ತಿಕದ ಹಾರ ಕೇಯೂರ ನೂಪರ ಸ-
ರ್ವಾಂಲಕಾರ ವಿಲಸಿತ ಮಂಗಳತರ ಗಾತ್ರದಿ
ಪೊಳೆಯುತ ಭಜಕರ ಕ-
ಲುಷಾಭ್ರಕೆ ಮಾರುವ್ರೆನಿಸುತ ಇಳೆಯೊಳು ಪಂಡಿತ
ಯಳೆಮೇಲಾರ್ಯಗೊಲಿದು ಭಕುತ ವತ್ಸಲರೆಂದೆ ನಿಸುತ೩
ಮಂಗಳ ತುಂಗ ತರಂಗಿಣಿ ತೀರದಲಿ ಭಕುತ ಜ-
ನಂಗಳಿಗೆ ನಿಖಿಲಾರ್ಧಂಗಳ ಸಲಿಸುತಲೀ
ಪಾಲಿಸುವ ದೇವ ಸ್ವಭಾವ ಶರಣ ಸಂಜೀವ
ಕರದಲ್ಲಿಗೆ ಬರುವ ಎನ್ನುತ ತುತಿಪರು
ದೃಗ್ಭಾಷ್ಪವ ಸುರಿಸುತ ಮೈಮರೆಯುತ
ಬಲು ನಿರ್ಮಲ ಅಂತರಂಗದಿತವ ಪದಂಗಳ
ಸ್ಮರಿಪರ ಸಂಘಕೆ ಸತತ ಸುಮಂಗಳವೀಯಲು ೪
ಪುರದರಸನು ತನ್ನ ಸಿರಿಪರಿವಾರದಲಿ
ಚರಿಸುತ ಬರುತ ಕಾಣುತಲೆ ಗುರುವರ
ಚರಣದಲಿ ಕಾಣಕೆಯನ್ನಿತ್ತು ಶಿರಬಾಗಿ ಚನ್ನಾಗಿ
ಆರುತಿಯ ಬೆಳಗಿ ಬರುತಿರೆ ರಥಸಾಗಿ ತೋರುವಾ
ನೋಳ್ಪರ ನಯನಕ್ಕೆ ಪರಮೋತ್ಸವಾ ಶರಣರ
ವಾಂಛಿüತಗಳ ಗರಿಯುವಾ ಪೊರೆಯುವ ಧರೆಯೊಳು
ಮೆರೆಯುವ ‘ಶಿರಿ ಕಾರ್ಪರ ನರಹರಿಯ’ ನೊಲಿಸಿರುವ
ಗುರು ಪ್ರಹ್ಲಾದರು ೫

೬೯
ಬಾಗೀನಮಿಪೆ ಬೇಗಬಾರೋ ಶ್ರೀ ನರಹರಿಯೇ ಪ
ಭಾಗವತರು ನಿನ್ನ ಕೂಗಿ ಕರೆವರಯ್ಯ ಅ.ಪ
ನಾಗಶಯನೆ ನಿನ್ನ ನಾಗರಾಜನು ಸ್ತುತಿಸೆ
ಬೇಗಸಲಹಿದಿ ಬಂದು ನಾಗಾರಿವಾಹನ ೧
ಸ್ತಂಭದಿಂದಲಿ ಬಂದು ಡಿಂಭಗೊಲಿದವನೆಂದು
ನಂಬಿದ ಭಕುತರ ಹಂಬಲ ಪೂರ್ತಿಸಲು೨
ಕಾರ್ಪರ ಋಷಿ ತಪಕೆ ಒಪ್ಪಿ ಭುವಿಯೊಳ್ ಬಂದು
ಪಿಪ್ಪಲ ತರುವಿನೊಳ್ ಇಪ್ಪ ‘ಶ್ರೀನರಹರಿಯೇ’ ೩

೨೬
ಬಾರೆ ಗೌರಿ ಪೂಜಿಸುವೆನು ಸಾರಸಾಂಬಕಿ
ಸಾರುವೆ ಸಂಸಾರದಿ ಸುಖದೋರೆ ವಿಧುಮುಖಿ ಪ
ಕುಂದ ಮಲ್ಲಿಗೆ ಜಾಜಿ ಕುಸುಮ ಗಂಧ ಪರಿಮಳ
ಚಂದದಿ ಸಮರ್ಪಿಸುವೆನು ಪುಷ್ಪಫಲಗಳ೧
ಮಂಗಳೆಂದು ಪಾಡುತ ಬೆಳಗುವೆನು ಆರುತಿ
ಮಂಗಳಗೌರಿಯೆ ಕೊಡು ಸೌಭಾಗ್ಯ ಸಂತತಿ೨
ಮಂಗಳ ಪ್ರದಾತೆ ಗಿರಿಸಂಭೂತೆ ಸುರನುತೆ
ಮಂಗಳಾಂಗಿ ಕುರು ಕರುಣಾಮಯಿ ನಮೋಸ್ತುತೆ ೩
ಪತ್ಯಂತರ್ಗತ ಹರಿಯಸೇವೆ ನಿತ್ಯ ಮಾಡಿಸೆ
ಪುತ್ರ ಪೌತ್ರಾದಿ ಸಂಪದವಿತ್ತು ರಕ್ಷಿಸೆ ೪
ರತಿಯ ಪತಿಯ ಪಿತಗೆ ಸದಾಪ್ರತಿಮೆಯೆನಿಸುವ
ಅತಿಥಿಗಳನು ಸೇವಿಸುವ ಸುಮತಿಯ ಕೊಡು ಜವ೫
ಸಡಗರದಿ ನಿಮ್ಮಡಿಯ ಶೇವೆ ಬಿಡುದೆ ಮಾಡುವೆ
ಮೃಡನ ರಾಣಿ ಕೊಡುವರಗಳ ಗಡನೆ ಬೇಡುವೆ ೬
ಶರಣು ಜನರ ಪೊರೆವ ಕಾರ್ಪರ ನಾರಸಿಂಹನ
ಚರಣ ಕಮಲಯುಗದಿ ಭಕುತಿ ಇರಲಿ ಅನುದಿನಾ ೭

೭೦
ಬಾರೊ ಶ್ರೀವೆಂಕಟರಮಣ ತವಪಾ-
ದಾರಾಧಕರನು ಪೊರೆಯಲು ಕರುಣಾಪೂರ್ಣ ಪ
ಬಾರೋ ನಮಿಸುವೆ ಪೂರ್ಣ ಕೃಷ್ಣಾ
ತೀರದಲಿ ಮಾಂಡವ್ಯ ಋಷಿಗಳ
ಘೋರ ತಪಸಿಗೆ ಒಲಿದು ಗುಡೆಬಲ್ಲೂರು
ಮಂದಿರನೆಂದು ಕರೆಸುತ ಅ.ಪ
ಎಲ್ಲ ಕಡೆಗೆ ನೆಲೆಸಿರುವ ಸಿರಿ
ನಲ್ಲನೊಲಿಸಲು ತಪವನು ಗೈವ
ಬಲ್ಲಿದ ಮಾಂಡವ್ಯರಿರವ ಕಂಡು
ಗೊಲ್ಲರು ಮಾಡಿದರನು ದಿನ ಶೇವಾ
ಪುಲ್ಲನಾಭನು ದರುಶನವ ಮುನಿ
ವಲ್ಲಭಗೆ ತೋರಿಸಲು ಬೇಡಿದ
ಗೊಲ್ಲರೆನ್ನಯ ಭಕುತರವರಿಂದಲ್ಲಿ
ಪೂಜೆಯಗೊಳ್ವದೆಂದನು ೧
ಬಾರೊ ಬೇಗನೆ ದ್ವಿಜರಾಜ ಧ್ವಜ
ವೇರಿ ಪೊರೆದೆಯೊ ಬಂದು ಕರಿಯೆ ಕರಿ
ರಾಜ ತೋರೋ ಚವತರಣ ಸರೋಜಯುಗ್ಮ
ಸಾರಿ ಭಜಿಸುವ ಭಕುತರ ಕಲ್ಪ ಭೂಜ
ಮಾರಜನಕನೆ ಚಾರುಕನಕ ಕಿ
ರೀಟ ಕುಂಡಲಹಾರಪದಕ ಕೇಯೂರ ಸಾಲಂ-
ಕಾರ ವಪು ಶೃಂಗಾರದಲಿ ರಥವೇರಿ ಮೆರೆಯುತ ೨
ವೇದವೇದ್ಯನೆ ನಿನ್ನ ಪ್ರೇಮಾ ಪಡೆದ
ಪಾದ ಮಹಿಮೆಯ ವರ್ಣಿಸಿದ
ದೇವ ಶರ್ಮಾ ಬೋಧಾದಿ ಸದ್ಗುಣಧಾಮ ಪಾಹಿ
ಮೇದಿನಿ ವಿಬುಧ ಪೂಜಿತ ಪೂರ್ಣಕಾಮ
ಮೇದಿನಿಯೊಳು ಶ್ರೀದ ನಿನ್ನಯ
ಪಾದಯುಗಳವ ಕಂಡು ಹರುಷದಿ
ಪಾದುಕೆಯ ರಚಿಸಿದಗೆ ಒಲಿದ
ಅಗಾಧ ಮಹಿಮನೆ ಮೋದಗರೆಯಲು ೩
ಒಂದಿನ ನಿಶಿಯೊಳುತ್ಸವದಿ ದಣಿ
ದಂದು ಮಲಗಿರಲರ್ಚಕರು ದೇವಾಲಯದಿ
ಬಂದು ಚೋರರು ಅತಿಜವದಿ ನಿನಗೆ
ಪೊಂದಿಸಿದೊಡವೆ ಗಳನು ಚೌರ್ಯತನದಿ
ಮಂದ ಮತಿಗಳು ಒಯ್ಯುತಿರೆ ಖಳ
ವೃಂದಕಂಗಳು ಪೋಗೆ ತುತಿಸಲು
ಚಂದದಿಂ ಬರೆ ಹೇಮನಾಮವ
ಕುಂದದಲೆ ಮಾಡಿಸಿದರಾಕ್ಷಣ ೪
ನೀರಜಾಸನ ಮುಖ್ಯ ತ್ರಿದಶ ಗಣದಿಂ-
ದಾರಾಧಿತಾಂಘ್ರಿ ಪಂಕಜ ಭಕ್ತಪೋಷ
ಸೂರಿಜನರ ಸಹವಾಸ ಕೊಡು
ಧಾರುಣಿಯೊಳು ಕೃಷ್ಣ ತೀರನಿವಾಸ
ಬಾರೊ ನಿನ್ನನು ಶೇರಿದವರವ್
ವಾರಿವಾಹ ಸಮೀರ ಕಾರ್ಪರ
ನಾರ ಶಿಂಹಾತ್ಮಕನೆ ಯನ್ನಯ
ಘೋರ ಭವ ಭಯ ದೂರಮಾಡಲು ೫

೪೨
ಬಾರೋ ಗುರು ರಾಘವೇಂದ್ರ ಸದ್ಗುಣಸಾಂದ್ರ ಪ
ಬಾರೋ ಸದ್ಗುರುವರ ಸಾರಿದ ಸುಜನರ
ಘೋರ ದುರಿತವ ತರಿದು ಕರುಣದಿ
ಸಾರ ಸೌಖ್ಯವಗರಿದು ಪೊರಿಯಲು ಅ.ಪ
ಸೂರಿಜನಾಲಂಕೃತ ಸುರಪುರದಿ ವಿಠ್ಠ
ಲಾರ್ಯರಿಂದಲಿ ಪೂಜಿತ ಯದುಗಿರಿಯ
ಕ್ಷೇತ್ರಾಗಾರನೆಂದೆನಿಸಿ ನಿರುತ ಭಜಕರನು ಪೊರೆಯುತ
ವಾರವಾರಕೆ ಭೂಮಿಸುರ ಪರಿವಾರದಿಂ
ಸೇವೆಯನುಕೊಳ್ಳುತ
ಹಾರ ಪದಕಗಳಿಂದ ಬಲುಸಿಂಗಾರ
ತುರಗವನೇರಿ ಮೆರೆಯುತ೧
ಭಕ್ತ್ಯಾದಿ ಫಲವೀವಂಥ ಗುರುವರನೆ ನಿಮ್ಮಯ
ಸ್ತೋತ್ರ ಪಠಣವ ಮಾಡುತ್ತ ಅನವರತ ಭಜ-
ನಾಸಕ್ತ ಜನರ ಕಾಮಿತ ನಾ ಕೊಡುವೆನೆನುತ
ಮತ್ತೆ ಎಡಬಲದಲ್ಲಿ ದ್ವಿಜಕೃತ ಛತ್ರಚಾಮರ
ವ್ಯಜನ ಸೇವಾ ನೃತ್ಯಗಾಯನ ವೈಭವದಿ ವರ
ಹಸ್ತಿವಾಹನ ವೇರಿ ಮೆರೆಯುತ ೨
ಇಳಿಸುರರೊಳು ಪ್ರಖ್ಯಾತ ಲಿಂಗೇರಿ ಭೀಮಾ
ಹೊಳಿಯ ಸ್ಥಾನಕೆ ಬಂದಂಥ ಯದುಗಿರಿಯ ದ್ವಿಜವರ
ಗೊಲಿದರ್ಚನಿಯ ಗೊಂಬಂಥ ಶರ್ವಾದಿವಿನುತ
ಚಲುವ ಪ್ರಾಣನಾಥನ ಜಲಜಯುಗ ಸನ್ನಿಧಿ
ಯೊಳನುದಿನ ಪೊಳೆವ ವೃಂದಾವನದಿ ಭಕುತರಿ
ಗೊಲಿದು ಪೊರೆಯಲು ಕುಳಿತ ಯತಿವರ ೩
ನಂದತೀರ್ಥರ ಸುಮತ ಸಿಂಧುವಿಗೆ ಪೂರ್ಣ
ಚಂದ್ರರೆಂದೆನಿಸಿ ದಂಥಾ ಕರ್ಮಂದಿವರ್ಯನೆ
ವಂದಿಸುವರ ದುರಿತ ಘನಮಾರುತ
ವಂದೆ ಮನದಲಿ ಬಂದು ನಿಮ್ಮಡಿ
ದ್ವಂದ್ವವನು ಶೇವಿಸುವ ಶರಣರ
ವೃಂದವನು ಪಾಲಿಸಲು ಸುಂದರಸ್ಯಂದನ-
ವೇರುತಲಿ ವಿಭವದಿ ೪
ನೀರಜಾಸನ ವರಬಲದಿ ಸಮರಾರೆನುತ ಬಂ-
ಗಾರ ಕಶ್ಯಪ ಪೂರ್ವದಿ ಪ್ರಹ್ಲಾದ ರಾಜಕು
ಮಾರ ನಿನ್ನೊಳು ವೈರದಿ ಹರಿಯನ್ನು ಜವದಿ
ತೋರು ತೋರೆಂದೆನಲು ಕೋಪದಿ ಚಾರು ಕೃಷ್ಣಾ
ತೀರಕಾರ್ಪರ ನಾರಸಿಂಹನ ಸ್ತಂಭದಿಂದಲಿ
ತೋರಿಸಿದ ಗುರು ಸಾರ್ವಭೌಮನೆ ೫

೧೦೮
ಬಾರೋ ಬೇಗನೆ ಶ್ರೀಧರ ಗುಣಾಕರ ಪ
ಬಾರೋ ಬೇಗನೆ ಪಾದವಾರಿಜಕೆರಗುವೆ
ಧಾರುಣಿಯನು ಪೊತ್ತ ಚಾರು ಪರಿಯಂಕಕ್ಕೆಅ.ಪ
ಶೌರಿ ಅಗ್ರಜನಾಗಿ ಕ್ರೂರರ ಸದೆದು ಭೂ
ಭಾರವನಿಳುಹಿದ ಶೌರ್ಯದ ಮಂಚಕೆ೧
ರಾಮನ ಶೇವಿಸಿ ಪ್ರೇಮವನು ಪಡೆದಂಥ
ಸೌಮಿತ್ರಿಯೆಂಬ ಸುನಾಮದ ಹಾಸಿಗೆಗೆ ೨
ಸಾಸಿರವದನದಿ ಶ್ರೀಶನೆ ತವಗುಣ
ಲೇಶ ವರ್ಣಿಸುವಂಥ ಭಾಸುರ ತಲ್ಪಕೆ ೩
ಇಂದಿರದೇವಿಯು ನಿಂದಿರುವಳು ತವ
ಸುಂದರ ಚರಣಾರವಿಂದವ ತೋರಿಸು ೪
ಶರಣರ ಪೊರೆವ ಕಾರ್ಪರನರಶಿಂಹನೆ
ಹರಗೆ ಭೂಷಣವಾದ ಉರಗಪರ್ಯಂಕಕೆ೫

೧೧೭
ಬಾಳೊ ಸುಖದಿ ಬಾಲನೆ ವರಗುಣ ಶೀಲನೆ ಪ
ಬಾಳೊ ಸುಖದಿ ಬಹುಕಾಲಶ್ರೀವೇಣು ಗೋ-
ಪಾಲನ ದಯದಿ ಸುಶೀಲ ಸತಿಯಳ ಕೂಡಿ ೧
ವಾಯುಸುತನ ಪಾದ ತೋಯಜ ಸ್ಮರಿಸುತ
ಕಾಯದಾರೋಗ್ಯದೀರ್ಘಾಯುತ್ವವ ಪಡೆದು ೨
ಕೃದ್ಧನಾಗದೆ ಜ್ಞಾನ ವೃದ್ಧರಸೇವಿಸಿ
ಮಧ್ವಮತದ ತತ್ವ ಶ್ರದ್ಧದಿ ಕೇಳುತ ೩
ತಂದೆ ತಾಯಿಗಳಲ್ಲಿ ಇಂದಿರೆರಮಣನೆ
ನಿಂದು ಪಾಲಿಪನೆಂದು ವಂದನೆ ಪಾಡುತ ೪
ಭಕ್ತಿಯಿಂದತಿಥಿಗಳ ನಿತ್ಯದಿ ಸೇವಿಸುತ
ಪುತ್ರ ಪೌತ್ರಾದಿ ಸಂಪತ್ತಿಯ ಪಡೆದು ೫
ಭೂಸುರರೊಡಗೂಡಿ ತೋಷದಿಕೃತ ಹರಿ
ವಾಸರ ವೃತ ಫಲ ಶ್ರೀಶನಿಗರ್ಪಿಸುತ ೬
ಧಾರುಣಿಯೊಳು ಕೃಷ್ಣಾತೀರ ಕಾರ್ಪರನಿಲಯ
ನಾರಸಿಂಹನ ಪದ ವಾರಿಜ ಸೇವಿಸುತ ೭

೯೬
ಬೆಳಗಿರೆ ಆರುತಿ ಲಲನೆಯರೆಲ್ಲರು
ಬಲಿ ನೃಪತಿಯ ಬಾಗಿಲ ಕಾಯ್ದವಗೇ ಪ
ಶಿಲೆಯನು ಪದದಲಿ ಲಲನೆಯ ಮಾಡಿದ
ಇಳಿಜಾರಮಣನ ಚಲುವ ಮೂರುತಿಗೆ೧
ಪದುಮಾವತಿಯಳ ಮದುವೆ ಯಾದವಗೆ
ಸುದತಿಯೆಲ್ಲರು ಮುದದಲಿ ಪಾಡುತ ೨
ಕರಿವರ ಕರೆಯಲು ಭರದಿ ಬಂದೊದಗಿದ
“ಸಿರಿ ಕಾರ್ಪರ ನರಹರಿ“ ರೂಪನಿಗೆ ೩

೧೦೨
ಬೆಳಗಿರೆ ಆರುತಿಯ ಶ್ರೀ ತುಳಸಿಗೆ ಪ
ಬೆಳಗಿರೆ ಆರುತಿ ತುಳಸಿದೇವಿಗೆ ನಿತ್ಯ
ಲಲನೆಯರೆಲ್ಲ ಮಂಗಳವೆಂದು ಪಾಡುತ ಅ.ಪ
ಸುಧೆಯ ಕಲಶದೊಳು ಮಧುವೈರಿನಯನದ
ಮುದ ಜಲಬೀಳಲು ಉದುಭವಿಸಿದಳೆಂದು ೧
ದರುಶನ ಮಾತ್ರದಿ ದುರಿತಗಳೋಡಿಸಿ
ಸ್ಥಿರವಾದ ಸೌಭಾಗ್ಯ ಕರುಣಿಸುವಳೆಂದು ೨
ಇಳೆಯೊಳು ಕಾರ್ಪರ ನಿಲಯ ಶ್ರೀನರಹರಿ
ಒಲುಮೆಯ ಪಡೆದ ಶ್ರೀ ತುಳಸಿದೇವಿಗೆ ಬೇಗ೩

೪೩
ಭಕುತಿ ಪಾಲಿಸೊ ವಿರಕ್ತಿ ಕರುಣಿಸೊ ಪ
ಸತ್ಯಪ್ರೀಯಾ ತೀರ್ಥಕರಜ ಸತ್ಯಬೋಧ ಗುರುವರೇಣ್ಯಅ.ಪ
ಪೃಥ್ವಿಜಾವಲ್ಲಭನ ಪಾದ ನಿತ್ಯ ಪೂಜಿಸುತಲಿ ಜಗದಿ
ಮತ್ತಮಾಯಿ ಗಜಕುಲ ಪಂಚ ವಕ್ತ್ರರೆನಿಸಿ ಮೆರೆದ ಗುರುವೆ೧
ನಂದತೀರ್ಥಮತ ಪಯೋಬ್ಧಿ ಚಂದ್ರ ಸದೃಶರೆನಿಸಿ ಸತತ
ನಂದ ಶಾಸ್ತ್ರ ಬೋಧಿಸಿ ಬುಧ ವೃಂದಕೆ ಆನಂದಗರೆದಿ ೨
ಇರುಳುಕಾಲದಲ್ಲಿ ನಭದಿ ತರಣಿಬಿಂಬ ತೋರಿದಂಥ
ಪರಮ ಮಹಿಮ ನಿಮ್ಮಯ ಶುಭ ಚರಣ ಸ್ಮರಣೆ ಕರುಣಿಸೆನಗೆ ೩
ಕೋನೇರಿಯಾಚಾರ್ಯರು ನಿಮ್ಮ ಕಾಣುತ ತೀರ್ಥವನು ಕೊಂಡು
ವಾನರ ದೇಹವನು ತ್ಯಜಿಸಿಸುಸ್ಥಾನ ಗತಿಯ ಪಡೆದರು ಜವ ೪
ಶರಣು ಜನರ ಪೊರಿವ ‘ ಕಾರ್ಪರ ನರಹರಿ’ ಪದದಿಂದ ಜನಿತ
ಸುರನದಿ ನಿಮ್ಮಯ ಬಳಿಗೆ ಬಂದಿರುವ ಮಹಿಮೆ ತುತಿಸಲೆಂತು ೫