Categories
ರಚನೆಗಳು

ಹೆನ್ನೆರಂಗದಾಸರು

೭೮
ನಿನ್ನ ನಾ ಬಿಡುವನಲ್ಲಾ ಗೋಪಾಲಾ ನಿನ್ನ ಬಿಡುವನಲ್ಲ
ಎನ್ನ ರಕ್ಷಿಸದಿರೆ ಪನ್ನಗಾದ್ರಿಯವಾಸ ಪರಮಪುರುಷರಂಗಾ ಪ
ನಾಗಾರಿ ರೂಪನಾದ ಪರಮಾನಂದ
ಭೋಗಿಶಯನ ವಿನೋದ ಭಕ್ತವತ್ಸಲ
ಸಾಗರನಳಿಯ ಭೂಸುರಧೇನು ಪೋಷಕ
ಭಾಗವತರ ಪ್ರಿಯಾ ಯೋಗಿಗಳರಸ೧
ಜಲಜಾಕ್ಷ ನಳಿನನಾಭ ಜಾನಕೀರಮಣ
ಜಲನಿಧಿಶಯನ ದೇವಾ ಜಗದೋದ್ಧಾರ
ಜಲಜಬಾಂಧವ ಕುಲ ಶ್ರೇಷ್ಠಾದಿ ಮೂರುತಿ
ಒಲಿದೆನ್ನ ದುಷ್ಕರ್ಮನಳಿದು ಪೋಷಿಸದಿರೆ ೨
ಶಂಬರಾರಿಯ ಪಿತನೆ ಜಗನ್ನುತ
ಕುಂಭಿನೀಧವನಾದನೇ ಗೋವಿಂದ ಶ್ರೀ
ಕಂಬುಕಂಧರ ಕೃಷ್ಣಾ ಅಂಬುಧಿ
ಬಂಧಿಸಿ ಅಂಬುಜಾಕ್ಷಿಯ ತಂದ ಹರಿ ‘ಹೆನ್ನ ವಿಠ್ಠಲಾ’ ೩

 

೧೫೦
ನಿನ್ನ ಮಾರ್ಗ ನೀ ಬಿಡಬೇಡಾ ಇನ್ನನ್ಯರ
ಮಾರ್ಗ ನಡಿಬೇಡಾ ಪ
——ದಿಯಾ ಬಿಡಬೇಡಾ ಇನ್ನನ್ಯರ
ಸೇವೆಯ ಮಾಡಬೇಡ
ಕುಹಕ ಜನರೊಳು ಕೂಡಬೇಡ —ನ ಧ್ಯಾನ
ಮಾಡದಿರಬೇಡ ೧
ಶರಣರ ದ್ರೋಹವ ಮಾಡಬೇಡ ಘೋರ ನರಕದಲ್ಲಿ
ನೀ ಬೀಳಬೇಡ
—–ಮುಂದಮಾಡಬೇಡ ಅತಿ ಪಾಪಕೆ
ಒಳಗಾಗಿ ಕೆಡಬೇಡ ೨
ಜ್ಞಾನಿಗಳ ಸಂಗ ಬಿಡಬೇಡ ಅಜ್ಞಾನಿಯ—-ಇರಬೇಡ
ಮಾನಹೀನನಾಗಿ ತಿರುಗಬೇಡ ಸನ್ಮಾರ್ಗವ
ಮನ್ನಿಸದಿರಬೇಡ ೩
ಒಬ್ಬರ ಮಾತಿಗೆ ಒಳಗಾಗಬೇಡ ನೀತಿಯ
ತಪ್ಪಿನಡೆ ನುಡಿಬೇಡಾ
ಇಬ್ಬರ ಝಗಳಕೆ ಹೋಗಬೇಡಾ ನೀ
ಹಿರಿಯರ ಬುದ್ಧಿ ಬಿಡಬೇಡಾ ೪
ಅನ್ಯಜಾತಿಗೊಳಗಾಗಬೇಡಾ ನಿನ್ನ ಜಾತಿಧರ್ಮ ಬಿಡಬೇಡಾ
‘ಹೆನ್ನವಿಠ್ಠಲನ ‘ ಮರೆಯಬೇಡಾ—–ಯದಿ
ಸ್ಮರಿಸದಿನಿರು ಬೇಡಾ ೫

 

೭೭
ನಿನ್ನ ಮೊರೆ ಹೊಕ್ಕವರನ ನೀನೆ ರಕ್ಷಿಸದೆ
ಇನ್ನಾರು ಜಗದೀಶ—-
ಪನ್ನಗಾಚಲವಾಸ ಪಾಲಿಸೋ ಶ್ರೀನಿವಾಸ
ಎನ್ನ ಮೊರೆ ಕೇಳು ಶ್ರೀರಾಮ ಪ
ಪೂರ್ವ ಜನ್ಮದ ದೋಷಗಳು ಏನುಂಟೊ
ನಿರ್ವಹಿಸಲಾದೆ ಶ್ರೀರಾಮಾ
ಪೊರೆಯೊ ಎನ ಕೈ ಹಿಡಿದು ಕರುಣಾರಸವು
ತೋರಿ ಎಣಿಸುವರಾರು ರಾಮಾ ೧
ಸಕಲವೇದ ಶಾಸ್ತ್ರಗಳು ಸಾರುತವೆ ನೀನೆಂದು
ಅಕಳಂಕ ಚರಿತ ಶ್ರೀರಾಮ
ಅಕರ್ಮನ ದುಷ್ಕರ್ಮ ಅದನ್ನೆಲ್ಲ ಖಂಡ್ರಿಸೊ
ರುಕ್ಮಿಣಿಯರಸ ಶ್ರೀರಾಮ ೨
ತಂದೆ ತಾಯಿಯು ನೀನೆ ಬಂಧುಬಳಗವು
ನೀನೆ ಎಂದು ಸ್ತುತಿಸುವೆನು ಶ್ರೀರಾಮಾ
ಹಿಂದೆ ನಾ ಮಾಡಿದಾನಂತ ಅಘಗಳು ಮುಂದೆ ಕುಂದು
ಪರಿಹರಿಸಿ ಕಾಯೋ ರಾಮಾ ೩
ಪಾಂಡುನಂದನ ಪಕ್ಷ ಪರಮಾಣು ರೂಪ
ಬ್ರಾಹ್ಮಂಡನಾಯಕ ಹರೇ ರಾಮಾ
ಕುಂಡಲೀಶ ಶಯನ ಗೋಪಾಲ ಮೂರ್ತಿ
ಕೋದಂಡದರ ಶ್ರೀರಘು ರಾಮಾ ೪
ಈರೇಳು ಲೋಕಕ್ಕೆ ಹೆದ್ದೇವ ನೀನೆಂದು
ತೋರಿನಿಮ್ಮ ಸ್ಮರಿಸುವೆನು ರಾಮಾ
ಧೀರ ‘ಹೊನ್ನ ವಿಠ್ಠಲ ‘ ದಯಮಾಡಿ ಸಲಹುವ
ಭಾರವು ನಿನ್ನದು ಶ್ರೀರಾಮ ೫

 

೭೯
ನಿನ್ನಾಧೀನ ———–
ವೆಂಕಟಾದ್ರಿವಾಸ ವೆಂಕಟ ಪರಹರಿಸೊ
ನೀ ಎನ್ನ ಸಂಕಟ ಪ
ಚಿನ್ಮಯ—–ನಾದ—–ಶ್ರೀನಿವಾಸ
ಪರಮಪುರಷ ಮುನ್ನ ನಾ ಮಾಡಿದ
ದೋಷದಿಂದ ಅಮಲನಾಗಿ
ವ್ಯರ್ಥ ಬಳಲುತಿಹೆನಾ ——
ನೋಡದೆ ಕರುಣವಿಲ್ಲದೆ
ಘನವೆ ನಿನಗೆ ಇರುವುದಿನ್ನು
ಅನಿಮಿಷವು ನಿಮ್ಮ ಧ್ಯಾನದಲ್ಲಿ
ಮಗ್ನರಾದ ಅವರಾ ೧
ಶರಣರಾದ ಅವರಾ ಪೊರೆವ
ಬಿರುದು ನಿನ್ನದಾಗಿ ಇರಲು
ಪರಮ ಪತಿತ ಪಾವನನೆ
ಭಕ್ತ ಜನರ ಬಿಡದೆ ಕಾಯ್ವ
ಧೊರಿಯು ನೀನೇ ಎಂದು ನಿನ್ನ
ಚರಣಕಮಲ ನೆಚ್ಚಿದವನಾ
ಪರಿವೆ ಮಾಡದೆ ಇರುವುದಿನ್ನು
ಭರದಿ ಮೋಚನ ಪಾಪನಾಶನ ೨
——–ದೊಳಧಿಕನಾದವನ
ವರಹೊನ್ನ ನಿ———
ನಿಗಮಗೋಚರ ‘ಹೊನ್ನವಿಠ್ಠಲಾ’
ನಿತ್ಯ ಸತ್ಯ ಜಗವಿಲಾಸ
——–ಯಿಂದ ನಿನ್ನ ಪಾಡುವಂಥ
ಭಜಕರನ್ನ————-
ರಕ್ಷಿಸುವ ಅಭಯ ನಿನ್ನದಾಗಿ ಇರಲೂ ೩

 

೮೨
——–ನಿಲಯ ಮನೆಗೆ ಭವರೋಗ ವೈದ್ಯಾ
ತೋರಯ್ಯ ——ಕರುಣಿ ದಯಾರಸವೆಂಬ ಔಷದ ಪ
ಸಂಸಾರವೆಂಬಂಥಾ ಸಾಗರ ಬಹುದು:ಖ
——ದೊಳಗೆ ಬಿದ್ದು ಇರುವಾರೋಗಾ
ಕಂ ಸಾಮರ್ದನನಾದ ಘನ ಹೇಮ ಮಕುಟಧರನೆ
———ಸಲಹುವ ಕ್ರಿಯವು ನಿನ್ನದೊ ೧
ಜನ್ಮಾಜನ್ಮಾಗಳಿಂದಾ ಚಿನ್ಮನೆ——–
ಕಲ್ಮಾಷಾ ದೋಷ ಕಳೆವಾ ಘನಾಮಾತ್ರ ನಿನ್ನಲ್ಲಿ
——–ನೆ ಬಿಟ್ಟು ಕೈಯ್ಯಾನಾದೆನ್ನ ಕೈಯ್ಯ ಪಿಡಿದು
ನಿರ್ಮಲ ಜ್ಞಾನವೆಂಬ ನಿಜಾ ಔಷಧ ಕೊಡಲು ೨
ಅಖಿಲಲೋಕಾಗಳಿಗೆ ಆದಿ——-ತ್ರಿಯಾದಿ
ಸಕಲಾ ಚರಾಚರ ಸರ್ವದಾನೀ
ನಿ——-ರಾದಿ ಪುರವಂತ ನಿಜ ‘ಹೆನ್ನ ವಿಠ್ಠಲನಂಥ’
ಭಕ್ತವತ್ಸಲ ಲಕ್ಷ್ಮೀಕಾಂತ ಶ್ರೀಮಂತಾ ೩

 

೭೩
ನೀ ಕೈಯ ಬಿಡಲು ಸಾಕುವರಾರಲೋ ಪ
ಕರುಣಾಕರ ಮಂದರಗಿರಿಧರ ಶ್ರೀಹರಿನಿಮ್ಮ
ಪಾದಸ್ಮರಿಸುತಲಿರುವವನ ೧
ಕ್ಷಿತಿಪತಿ ರಕ್ಷಿಸೆನುತ ಸ್ತುತಿಸುತಿರು ವನವರತ ಧೃತಿಪಿತ
ಸಂತತ ಪಾಲಿಸಿದೆ ೨
ಶರಣಾಗತರಿಗೆ ಸುರತರುವೆನಿಪಾ ವರಹೆನ್ನೆಪುರ
ನರಹರಿಯನ್ನಯ ೩

 

೭೪
ನೀತಿವಂತನಾದ:
ನೀತಿ ವಂತನಾದ ನಿಗಮಗೋಚರ ದೇವ |
ಮಾತಿಗೆ ನಿಜಶೀಲ ಮಾತುಗಳಾಡಿ ಪ
ಕೂಸಿನ ಮೊಲೆಯವಳ | ಕೊಸರಿಮುತ್ತನೆ ಇಟ್ಟು |
ಚೂಶಿಯ ಮಾಡಿ ಬಲು ಘನವಾಗಿ ಮನಿಯೊಳು ೧
ಚದಗತನದಿಯಲ್ಲ | ಚಲುವೆಯರೂಡಗೂಡಿ
ಅಧರಾಮೃತ ಸವಿದು ಆನಂದದಲಿ ಇನ್ನು ೨
ನೀರಿಗೆ ಹೋಗುವಂಥಹ ನಿಜ ಸ್ತ್ರೀಯರನೆ ಕಂಡು
ತೋರಿವಟ್ಟಳ ಹಿಡಿದು ತುಟಿಯನೆ ಕಡಿದು ೩
ಕೆಳದೆರು ಜಲದಲ್ಲಿ ಕ್ರೀಡೆನಾಡುವ ವೇಳೆ
ಕೆಳಗಿದ್ದ ಶೀರೆಗಳ ಕೊಂಡು ಮರವನೇರಿ ೪
ಈ ಪರಿಚರ್ಯಗಳಷ್ಟು ತನ್ನಲಿದ್ದು
ಭೂಪ ಹೆನ್ನೆ ವಿಠಲ ಪೂಜಿತನಾನು ೫

 

೭೫
ನೀದಯಮಾಡಿ ಸಲಹೊ ಎನ್ನ ಪರಮಾತ್ಮ ಭವ
ಕಾನನವೆಂಬಾ ತೊಡರು ಬಿಡಿಸೊ ಪರಮಾತ್ಮ ಪ
—–ಸಂಖ್ಯಾನೂರು ಬಳಲುತಿರೆ ಪರಮಾತ್ಮ ಇವರ
ಸಂಚಿತವು ಏನೋ ಕಾಣೆನು ಪರಮಾತ್ಮ
ಕೋಟಿ ಉದ್ಯೋಗದವರು —- ಪರಮಾತ್ಮ
ಪ್ರಪಂಚಕ್ಕೆ ಸರಿ ಕಾಣಲಿಲ್ಲ ಪರಮಾತ್ಮ ೧
ನಾನಾ ಪರಿಯಿಂದ ನಡೆದೆ ಕಷ್ಟದಿಂದ ಪರಮಾತ್ಮ
ನಿಮ್ಮ ಧ್ಯಾನವು ಎನ್ನ ಮನಕೆ ನಿಲಕದು ಪರಮಾತ್ಮ
——- ಜೀವಕೆ ಇನ್ನು ಪರಮಾತ್ಮ
ಸುಜ್ಞಾನಿಗಳಿಗೆ ಜೀವನ ನೀನು ಪರಮಾತ್ಮ ೨
ಸಾರಜಗವ ರಕ್ಷಿಸುವಂಥ ಪರಮಾತ್ಮ ನಿ-
ಸ್ಸಾರ ಮಾಡುವರೆ ಎನ್ನ ಪರಮಾತ್ಮ
ವೀರ ‘ ಹೊನ್ನ ವಿಠ್ಠಲಾ’ ಶ್ರೀ ಪರಮಾತ್ಮ ಗುಣ
ಗಂಭೀರ ಪುಣ್ಯಪರುಷ ಕೇಳೊ ಪರಮಾತ್ಮ ೩

 

೮೦
ನೀನೆ ದಯಮಾಡಿ ಸಲಹೊ ಎನ್ನ ಪರಮಾತ್ಮ ಭವ
ಕಾನನ—— ತೊಡರು ಬಿಡಿಸೊ ಪರಮಾತ್ಮ ಪ
ಸಂಚಮಾರು ಬಿಡಲು ತಾರೊ ಪರಮಾತ್ಮಾ ಇವರ
ಸಂಚಿತವು ಏನೊ ಕಾಣೆ ಪರಮಾತ್ಮಾ
ಕಾಂಚದ್ಭೋಗದವರು ಇಷ್ಟೊ ಪರಮಾತ್ಮಾ
ಪ್ರಪಂಚಕ್ಕೆ ಸರಿಗಾಣನಿಲ್ಲ ಪರಮಾತ್ಮಾ ೧
ನಾನಾಪರಿ ನಡೆ ಕಷ್ಟದಿಂದ ಪರಮಾತ್ಮ ನಿನ್ನ
ಧ್ಯಾನ ಎನ್ನ ಮನಕೆ ಸಿಕ್ಕಿತು ಪರಮಾತ್ಮ
ನಾ ಜೀವನ ಜೀವಕೆ ಇನ್ನು ಪರಮಾತ್ಮ
ಸುಜ್ಞಾನಿಗಳಿಗೆ ಜೀವನ ನೀನು ಪರಮಾತ್ಮ ೨
ಸಾರ ಜಗವು ರಕ್ಷಿಸುವಂಥ ಪರಮಾತ್ಮ
ನಿಸ್ಸಾರ ಮಾಡುವರೆ ಎನ್ನ ಪರಮಾತ್ಮ
ನೇರ ಹೆನ್ನ ವಿಠ್ಠಲ ಶ್ರೀ ಪರಮಾತ್ಮ ಗುಣಗಂ-
ಭೀರ ಪುಣ್ಯ ಪುರುಷ ಕೇಳೋ ಪರಮಾತ್ಮ ೩

 

೮೧
ನೀರೆ ಶ್ರೀಕೃಷ್ಣನಾ ತಾರೆ ಬೇಗವನ ತೋರೆ
ಮುಖವಂತೋರೆ ಪ
ಸಾರಾಲೋಕಗಳುದ್ಧಾರಾ ——-ರಾ
ಸದ್ಗುಣ ಗಂಭೀರಾ
ಮಾರ ಜನಕನಾದ ಧೀರಾ ದನುಜಸಂಹಾರ
ಧಶರಥ ಕುಮಾರ ೧
ನಂದಾನಂದನ ಗೋವಿಂದಾ ಮುರಹರ
ಮುಕ್ಕುಂದಾ ಮುನಿ
ಹೃದಯಾನಂದಾ ಛಂದಾ ಪರಿಮಳದ
ಗಂಧಾ ಮೈಲೇಪನದಿಂದಾ
ವಿಪುಲ ವನ(?)ಯಿಂದಾ ೨
ದೇಶಾಜನರ ಪೋಷಕನಾ ದೇವಕಿಯ ಸುತನಾ
ಜಾಹ್ನವಿ ಪಿತನಾ ಎನ್ನಾ ‘ಹೊನ್ನ ವಿಠ್ಠಲನ ‘
ಕರುಣಾಸಾಗರನಾ
ಕರದು ತಾ ಬೇಗನೆ ೩

 

೮೪
——–ನೆ ಮಾಡುವೆಯಂದರೆ ಅರಸುಳ್ಯ
ದ್ವಂದ್ವಪಾದಕೆ ನಾ ವಂದನೆ ಪ
ಅಂದು ಜಲದೊಳಾಡಿ ಕೊಂದ ಸೋಮಕನ
ವೇದತಂದೂ ——ಗಿತ್ತಾಗೊಂದನೆ
ಮಂದರಗಿರಿಯ ನೆತ್ತಿ ಚಂದದಿ ———
ಭೂಮಿ ಮೂಗಿನಿಂದ ಸೀಳಿದ ದೇವಗೆ ವಂದನೆ ೧
ತರುಳನಿ ಗೋಸ್ಕರ ಸ್ತಂಭದೊಳಗೆ ಬಂದಾ
ನರಹರಿ ರೂಪಗೆ ವಂದನೆ
ಮುರುಡನಾಗಿ ದಾನ ಮೂರು ಪಾದವು ಕೇಳಿ
ಧರುಣಿಯ ಗೆದ್ದವಗೆ ವಂದನೆ ೨
ಪ್ರೇಮಸಲ್ಲದೆ ಪಿತೃವಾಕ್ಯವು ಮನ್ನಿಸಿ
ಪಡೆದಮ್ಮನ ಹೊಡೆದಾತಗೆ ವಂದನೆ
ತಾಮಸ ದಾನವರಗಳ ಖಂಡಿಸಿದ
ಶ್ರೀರಾಮ ದೇವರಿಗೆ ವಂದನೆ ೩
ಗೊಲ್ಲರ ಸ್ತ್ರೀಯರ ಕೂಡಿ ಮೆರೆದಾಡುವಂಥ
ನಲ್ಲ ಕೃಷ್ಣಗೆ ವಂದನೆ
ಎಲ್ಲಾನೂ ತೊರೆದು ಬತ್ತಲಲ್ಲಿ ಇರುವ
ನಮ್ಮ ಬೌದ್ಧಾವತಾರಗೆ ವಂದನೆ ೪
ಚಲುವ ಅಶ್ವವನೇರಿ ಚರಿಸಿದ ಮಹಾಮಹಿಮ
ಕಲ್ಕಿ ಸ್ವರೂಪಗೆ ವಂದನೆ
ಸುಲಭದಿ ಭಕ್ತರ ಚನ್ನಾಗಿಸಲಹುವ
ಶ್ರೀ ಹೆನ್ನೆ ವಿಠ್ಠಲಗೆ ವಂದನೆ ೫

 

೧೫೧
ನೆನಿಯೊ ಮನದಲಿ ಮನದಭಿಮಾನಿಯನ ಪ
ಶಿವ ಶಿವ ಶಿವ ಎಂದನುದಿನ ಹೃದಯದಿ
ಭವಭಯ ನಾಶನಾ ಪಾರ್ವತಿ ರಮಣನ ಅ.ಪ
ಸವಿನಯ ಶರಣರ ಸಂಗದಿ ಬೆರೆತ
ಗಂಗೆಯ ಪೊತ್ತ ಘನ ಗಂಭೀರನಾ ೧
ಮಂಗಳ ಮೂರುತಿ ಮಹಾಮಹಿಮನ ಇಂದು
ಸುಜನ ರಕ್ಷಕ ಕರುಣಸಾಗರನಾ —- ೨
‘ಹೊನ್ನ ವಿಠ್ಠಲ’ ಪ್ರೀಯ ಮಹಾದೇವನ ೩

 

೧೫೨
ನೆನಿಯೊ ಹರಿನಾಮ ನರಪಾನವರತ ಅನುದಿನ
ಮನದಲಿ —–ದೆ ಪ
ಮನಶುದ್ಧಿಯ ಮಾಡುವನು———- ೧
ತಾದಯಾಪರ ಪೂರ್ಣವಿಲಾಸನ ನಾಥ
ಜಗತ್ರಯ ನಾರಾಯಣನ ೨
ಚಂದದಿ ಹೃದಯಾನಂದದಿ —–ದು
ಇಂದಿರೆಯರಸನ ಇಷ್ಟರ ಬೆರೆದು ೩
ಅಘ ಪರಿಹರಿಸುತ ಅಖಿಲವೈಭವನಾ ನಿಗಮಗೋಚರನಾದ
ನೀರಜ ನಯನನಾ ೪
ಧರೆಯ ಹೊತ್ತಿರುವನ ಅರಿವಾಹನನಾದ ಧೊರೆ
‘ಹೆನ್ನೆವಿಠ್ಠಲ ದೇವರ ಇನ್ನುಸದಾ ೫

 

೧೫೩
———————
ನೆನೆಮನದಲಿ ಹರಿನಾಮವು ಸತತಾ
ದಿ—–ನ ಅನಿಮಿಷ ಅನಿಮಷ ರೊಡೆಯನಾ ಪ
ನಂದನಂದನ ಕೃಷ್ಣ ನವನೀತ ಚೋರನ
ಎಂದೆಂದೂ ಮರೆಯದೆ—-ರಮಣನಾ ೧
ಭೂತನಾಥಪ್ರಿಯ ಪೂತನಿಯ ಸಂಹಾರ
ಖ್ಯಾತಿ ನೀತಿಯುಳ್ಳನಾಥ ನೀತೋರುತಲಿ ೨
ಘನ್ನ ಹೇಮ ಭೂಷಿತಾಂಗನರಂಗನ
ಜನಕನ ಸುತೆಯಾದ ಜಾನಕೀರಮಣನ ೩
ನಯ ಭಯದಲಿ ವಿಜಯ ಜಯವೆಂದು
ರಾಮದೇವರ ನಿರಂತರಾ ೪
ಥಂಢ ಥಂಡದಲವ ತಾರಗಳೆತ್ತಿ ಬ್ರ
ಹ್ಮಾಂಡ ಅಂಡದೊ—–ಟ್ಟ ಹರಿ ‘ಹೆನ್ನವಿಠ್ಠಲನಾ ‘ ೫

 

೮೩
ನೆರೆನಂಬಿದವರನ್ನ ಪರಿವೆಮಾಡದೆ ಇನ್ನು
ಪೊರೆಯದಿರುವರೆ ಪರಮಪುರುಷನೆ
ನರಹರೆ ನಿಮ್ಮ ಚರಣ ಕಮಲವ ಹಾಗೆ
ಸ್ಮರಿಸುತಿರುವಂಥ ಪರಮಪುಣ್ಯ ಭಕ್ತಜನ
ರನು ಪಾಲಿಸದೆ ಇನ್ನು ಇರುವದುಚಿತವೆ ಪ
ಅಂಡಜವಾಹನ ಅಮಿತ ಪರಾಕ್ರಮ
ಕುಂಡಲಶಯನ ಅಕ್ರೂರ ವಂದ್ಯಾ
ಪುಂಡರೀಕಾಕ್ಷನೆ ಪುಣ್ಯ ಪ್ರಭಾವನೆ
ಕುಂಡಲಾಧಿಪ ದೇವ ಮಹಾನುಭಾವ
ದಂಡಿದಾನವ ಖಂಡಗರ್ವ ಅಖಂಡಮುನಿಮನ
ಮಂಡಲ ನಿಲಯ ಕೋದಂಡಧರನೆ
ದಂಡ ವರದನೆ ಅಂಡಜ ಗಿರಿವಾಸ ಹರಿಗೋವಿಂದನೆ ೧
ಭೂಮಿಜರಮಣ ಸಂಪೂರ್ಣಾನಂದನೆ
ಸಾಮಗಾನಲೋಲ ಸರ್ವೇಶನೆ
ಕಾಮತಾರ್ಥಗಳೀವ ಕರುಣಾಸಾಗರ ದೇವಾ
ಸ್ವಾಮಿ ಜಗನ್ನಾಥ ಸರ್ವೋತ್ತಮನೆ
ಕಾಮ ಜನಕ ಸುದಾಮ ರಕ್ಷಕ
ಪ್ರೇಮ ಸೀತಾರಾಮ ಜಗತ್ಪತಿ
ಶ್ಯಾಮ ಸುಂದರ ಶೌರಿ ಶ್ರೀಹರಿ
ಕೋಮಲಾಂಗ ಕೃಷ್ಣ ಮೂರುತಿ ೨
ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕನಾಗಿ
ಸಕಲಭಾರಕರ್ತ ಶ್ರೇಷ್ಠನೆ
ನಿಕರದಿ ಸಲಹುವ ನಿಜನಿತ್ಯಾನಂದಾನೆ
ಪ್ರಕೃತಾದಿ ಪಾಲಿಸುವ ಪರಮಾತ್ಮನೆ
ಸಕಲ ವೈಭವ ಚಿದ್ವಿಲಾಸನೇ
ನಿಖರಾರೈ ನಿನ್ನಲಿ ನಮೋ
ಭಕುತವತ್ಸಲ ಮುಕುತಿದಾಯಕ
ರುಕ್ಮಣಿಯವರ ‘ಹೆನ್ನವಿಠ್ಠಲಾ’ ೩

 

೧೫೪
ನೇಮದಿಂದ ಹರಿಯಭಜಿಸಿ ಪ್ರೀತಿಯಿಂದಲಿ
ಕಾಮಿತಾರ್ಥ ಫಲಗಳೀವ ಕರುಣದಿಂದಲಿ ಪ
ಜಲದಿ ಬಂಧಿಸಿ ಲಲನೆ ತಂದ ಜಾನಕೀಪತಿ
ಜಲಧಿಶಯನನಾದ ನಮ್ಮ ವಿಷ್ಣು ಮೂರುತಿ
ನಳಿನನಾಭನಾದ ರಕ್ಷಕನಾದ ಶ್ರೀಪತಿ
ಒಲಿದು ಮನದಿ ಸ್ಮರಿಸುವರಿಗರಂದೆ ಸದ್ಗತಿ ೧
ಇಂದಿರೇಶ ವಿಬುಧ ವಂದ್ಯ ವಿಶ್ವಕುಟುಂಬಿ
ಮಂದರಾದ್ರಿ ಗಿರಿಯ ಪೊತ್ತ ಮಹಿಮನೇನೆಂಬೆ
ಕುಂದು ಇಲ್ಲದ ಹೃದಯದಲ್ಲಿ ಕೃಷ್ಣನ ನೇನೆಂಬೆ
ಒಂದೆ ಧೃಡದಿ ಇರುಲು ಕೈವಲ್ಯ ಕೈಕೊಂಬಿ ೨
ಅಖಿಲ ಲೋಗಳನೆ ಆಳುವ ಅಧಿಕ ಸಂಪನ್ನಾ
ಮುಕುತಿದಾಯಕ —–ಮೋಕ್ಷದಾತನಾ
ನಿಖರವಾಗಿ ‘ಹೆನ್ನ ವಿಠ್ಠಲ’ ನೆಂದು ತಿಳದಿನ್ನುಭಕುತಿಯಿಂದ ಹಾಡಿ ಪಾಡುವ ಭಕ್ತರಾಧೀನಾ ೩

 

೮೫
———-ನೋಡಿದೆ ತಾಂಡವ ಕೃಷ್ಣನ ನೋಡಿದೆ
ಕೃಷ್ಣನ ನೋಡಿದೆ ಸೃಷ್ಟಿಗೆ ಕರ್ತನಾದ ವಿಠ್ಠಲಮೂರುತಿ
ಅಭೀಷ್ಟದಾ ನಾಯಕನಾ ಪ
ಅಕ್ಷಯ ತೋರುವನಾ ಸಕಲಾ ರಕ್ಷಕ ರಘುರಾಮಾನಾ
ಲಕ್ಷ್ಮಿ ಮನೋಹರನಾ ದೈವಾಧ್ಯಕ್ಷ ಮಹಾಮಹಿಮನಾ
ಪಕ್ಷಿವಾಹನ ಪರಮಪುರಷ
ಕಲ್ಪವೃಕ್ಷ ಕಾಮಧೇನು ವಿಶ್ವಕುಟುಂಬನಾ ೧
ದಶರಥನಂದನನಾ ದೇವಾ ವಸುಧಿಯನಾಳುವನಾ
ಪಶುಪತಿ ಪಾಲಕನಾ ಭಕ್ತರ ಕುಶಲದಿ ಸಲಹುವನಾ
ಬಿಸರುಹಾಕ್ಷ ಶ್ರೀ ಪೂರ್ಣ ಪ್ರಕಾಶನ
ದಶಶಿರನಳಿದ ಕೋದಂಡರಾಮನ ೨
ಶಿರಮಣಿ ಮಕುಟಧರನಾದಾ ಕೊರಳ ಪದಕಹಾರ
ಕರದೊಳು ಕಂಕಣವಾ ಕಿರಿಬೆರಳಲಿ ಉಂಗುರವಾ
ಪರಮ ಪರುಷ ನರಹರಿ ‘ ಹೆನ್ನೆವಿಠ್ಠಲ ‘ ಪರಮಾತ್ಮನ
ಸರ್ವ ಪೋಷಕ ನಾದನಾ ೩

 

೭೧
——ನ್ಯರ ಸಂಗಾ ಘಳಿಗೆ ಸಾಕಯ್ಯ ಪ
ಎಲ್ಲಾ ಇದ್ದೂ ದುರ್ಜನ ಸಂಗ ಎಂದಿಗೂ ಬೇಡಯ್ಯ —–
ಹರಿಯಾ ಮರೆಯದೆ ಇರುವಂಥಾ ——ಕೃಷ್ಣನ —–
ನಿರುವಂಥ ಸುಜನಾರ ಸಂಗ ಕೂಡದ ನಿನ್ನಿಂತಾ
ಪರಾಸು (?) ಮಕ್ಕಾಳ ಕೂಡಿ———– ೧
ಉದಯದಾವೇಳೆ ಉಚಿತಕರ್ಮ ಮಾಡುವಾ
ಸದಯ ಹೃದಯರಾದ ಸಜ್ಜನಸಂಗ——-
ಸದಯ ಕಾಲಾದಿ ಯಿ—–ಸನ್ನಿಧಿ ಸೇರುವಾ
ಕುದಯಾ ಕುಜನಾರ ಕೂಡಿದವ —–ಸೇರುವಾ ೨
ಅನೇವಿಷಾ (ಅನಿಮಿಷಾ) ಶ್ರೀ ಕೃಷ್ಣಾನ ಅರಸುತಿರುವಂಥ
ಜನ ಮಹಾಮಹಿವಇರಾದ ಶರಣಾರ ——-ರದಂಥಾ
ಹೊನ್ನ ವಿಠ್ಠಲನ ಕರುಣಾವು ಪಡುವಂಥಾ ಮಾರ್ಗ-
ವನ್ನು ಸೌಖ್ಯವು ತೋರುವಂಥಾ ೩

 

೭೨
ನ್ಯಹರೆ ನಿಮ್ಮ ಚರಣ ತೋರೋ ವಿಹಗಗಮನ ಕರುಣದಿ ಪ
ವಾರಿಜೋದರ ದಿವ್ಯ ಘನಸಾರ ಶೋಭಿತ ಮುನಿಮಂದಾರ
ಮಾಧವ ಮೇರುಗಂಭೀರ ಭವದುರಿತ ವಿದೂರ ೧
ಸಾರಸಾಕ್ಷ ಮಾರಜನಕ ಘೋರದನುಜ ಸಂಹಾರ
ಜಂಭಾರಿ ವಿನುತ ಮೇಘ ಫಲದ
ಶ್ರೀರಮಾರಮಣನುತ ಚರಿತ ೨
ಉರಗಶಯನ ಗರುಡಗಮನ ಧರಣೀಧರ ಮುರಾರಿ
ಹೆನ್ನೆಪುರ ನಿವಾಸ ನಾರಶಿಂಹ ತರಣಿಕೋಟಿಧಾಮ ರಾಮ ೩

 

೮೬
ಪಡೆದಲ್ಲದೆ ಮಿಗಿಲು ಬರಲರಿಯದು
ಎಡೆ ಬಿಡದೆ ಎಲೆ ಮನವೇ ಏಕೆ ಬಳಲುವಿ ವೃಥಾ ಪ
ವನನಿಧಿಯೊಳು ಪೊಕ್ಕು ಸಲಿರೆಡಿ ನೋಡಿದರೂ
ಭರದಿ ಬಲುಭಾರವನು ಹೊರಲಿ ಬೆನ್ನಿಲಿ
ಧರಗೆ ತಲೆಯನ್ನು ಬಾಗಿ ತಾನು ಯೋಚನೆ ಮಾಡಿ
ಪರಿ ಪರಿಯಲಿ ಭಯಂಕರ ೧
ಬಡವನೆಂದ್ಹೇಳ ಭರಬಾಗಿಲಲಿ ನಿಂದಿರಲು
ದೃಢದಿ ವೈರಿಗಳ ಖಂಡಿಸಲು ಮುದದಿ
ಅಡವಿ ಸಂಚರಿಸುತಲಿ ಹಾರೈಸಿ ಹುಡುಕಿದರು
ಕಡು ಕಳ್ಳತನ ಕಲೆತು ಕಂಡಕಡೆ ತಿರುಗಿದರು ೨
ಬರಿಯ ಬತ್ತಲು ನಿಂತು ನರರಿಗ್ಹೊಂನವ ತೋರಲು
ತುರಗವನ್ನೇರಿ ಧರಣಿಯನು ಪಾಲಿಸಲಿ
‘ವರ ಹೆನ್ನೆಪುರನಿಲಯ ನರಹರಿಯು ಮಾಡಿದ್ದ
ಬರಿದೆ ಚಿಂತಿಸಿ ನೀನು ಭಾಗ್ಯವದರಿಂದೇನು ೩

 

೮೭
ಪರಾಕು ಎಂದು ಬಹು ಪರಾಕು
ಹೇಳುವನ ನಿರಾಕರಿಸುವದು
ಪರಾಕುದಾರನ——ನಪಿತನೆಂದೂ ಶರಾಣು
ಹೊಕ್ಕ ನಿನ್ನ ಸೇವೆಯೊಳಗೆ ಬಹು ೧
ಮಲಾದು(?೦ ಇರುವಂ——-ಳಗೆ ಇರುವ
ಅಲಾದಿ ಅಂಗಗಳು ಅವತರಿಸಿದ ದೇವಾ ೨
ನೆಲಾನ ಘೂರಿಸಿದ ಭಲಾಶೆ ಮಾಡಿ
ದುರುಳಾದ ಕರುಳ ತೆಗೆದು ಕೊರಾಳಲ್ಲಿಟ್ಟ ಸ್ವಾಮಿ ೩
ಧರಾನ ದಾನ ಬೇಡಿ ಸರಾನ ಕೋಪದಿಂದ
ಶರ———ಸಿದ ಶ್ರೀಹರಿ ಎಂದು ಬಹು ೪
ಬಲಾನೆ ಕುಟ್ಟಿ ಖಳನ ಬಲಾನೆಲ್ಲವ ಮುರಿದು
ಲಲಾನೆಯನು ತಂದು ರಘುರಾಮನೆಂದು ಬಹು ೫
ದುಷ್ಟ ಕಂಸಾನ ಕೊಂದಾ ಸೃಷ್ಟಿಕರ್ತಾನು ನೀನು
ಕೃಷ್ಣಾ ಕರುಣಿಸೂ ಎಂದು ಪ್ರಾಯದಲಿ ಮೊರೆಯಿಟ್ಟು ೬
ಅಂಬಾರವನು ಬಿಟ್ಟು ಸಂಚಾರದಲಿ ನೀ—-
—ಂ ಬೇರಿದಂಥ ಶ್ರೀ ಮಹಾನುಭಾವನೆನುತಾ ೭
ಶರಾಣು ಎಂದು ಬಂದವರಾನ ಪೊರೆದ
ಶ್ರೀಧರಾನೆ ರಕ್ಷಿಸೆಂದು ಕರಾವು ಮುಗಿದಿಂದೂ೮
ನಿರಾಮಯಾನಾದ ಶ್ರೀ ರಾಮದೇವರೆನ್ನ
ಪರಾಮರಿಸಿ ಕಾಯೋ ಪತಿ ‘ಹೊನ್ನ ವಿಠ್ಠಲಾ’ ೯

 

೮೮
———-ಪರಿನಂಬಿ——ಕೃಷ್ಣಾ ಸಂತ—– ಪ
——-ಪಾದಸ್ಮರಣೆಯ ಮಾಡು ಸಾಧು
ಸಂತರಸಂಗಾ —–ಸರ್ವಕಾಲದಲಿ ನಿಂತು ನಿನ್ನ
ಸೇವಿಸುವ ನಿಜಭಕ್ತಾ—-ಇರುವಂಥಾ —- ವೇಮಾರಿ ೧
ಬಂದ ಭವದ ದೋಷಕಳೆದು ಪಾಲಿಸುವಂಥಾ ದೇವ
ತಂದೆ ತಾಯಿ ನೀನೆ ಎಂದೂ—–ಒಂದೆ
ಭಾವಧಿರುವ ಭಕ್ತಗೀ
ಬಂದ ಬವದ ಬಂಧಕವಾ ವೇಗದಿಂದ ಪರಿಹಾರ
ಮಾಡಿಕಾಯೋ ವಿಶ್ವಮನ —- ೨
ಚಿನ್ಮಯ ರೂಪಾ—–ದಾರಯ್ಯಾ ಇನ್ನು
ನಿನ್ನವರಕಯ್ಯ ಹಿಡುವಾ ಧನ್ಯರಾದ
ರಕ್ಷಿಸುವ ಭಾರ ನಿನ್ನದೇ ಸ್ವಾಮಿ ಶ್ರೀಪನ್ನಗಾದ್ರಿವಾಸ
‘ಹೊನ್ನ ವಿಠ್ಠಲ ‘ ಪ್ರೇಮಿ ೩

 

೮೯
ಪಾಲಿಸು ಬೇಗನೆ ಪಂಕಜನಯನ ಪ
ಸುರಮುನಿ ಸನ್ನುತ ಶುಭಕರ ಚರಿತ
ಗಿರಿಧರ ಹರಿ ಕರಿವರದ ಮುರಾರಿ ೧
ರತಿಪತಿಪಿತ ಸದ್ಗತಿಗಾಣಿಸು ಯಂ-
ದತಿ ಮುದದಿ ನಿನ್ನ ಸ್ತುತಿಸುತಲಿರುವೆನು ೨
ಶರಣಾಗತ ರಕ್ಷ ಕರುಣಾಂಬುಧೆ
ಧರೆಯೊಳಧಿಕ ‘ಹೆನ್ನೆಪುರ ಹರಿಯೆ’ ೩

 

೯೦
ಪಾಲಿಸೋ ಗೋಪಾಲಾ | ಪಾಲಿಸೋ ವೇಣುಗೋಪಾಲ |
ಮೊರೆಲಾಲಿಸು ಭಕ್ತವತ್ಸಲ | ರುಕ್ಮಿಣಿ ಲೋಲ
ಕರುಣಾಲೋಲ ಸದ್ಗುಣಶೀಲ ಪ
ಆ ದು:ಶ್ಯಾಸನನು ದ್ರೌಪದಿಯ | ಸೀರಿ
ಸೆರಗ್ಹಿಡಿದು ಸತ್ವರಶೆಳಿಯ |
ಲಾಗಾ ಶ್ರೀಕೃಷ್ಣ ನೀನೇ ಸಹಾಯ |
ನಿನಾಗದಿರೆ ಕಾಯ್ವರಾರೋ ಒಡೆಯ |
ಹಾ ಅನ್ನಲು ಹರುಷದಲ್ಯಕ್ಷಯಾಂಬರ ವಿತ್ತು |
ಕರುಣೆಸೆಲೊ ಜಗದ್ಭರಿತ ನಿತ್ಯಾನಂದ ೧
ಕಂದ ಪ್ರಲ್ಹಾದನ ತಂದೆ | ಹೇಮಕಶ್ಯಪ
ಬಾಧಿಸಲ್ ಬಂದೇ
ಛಂದದಿಂದ ದ್ವಂದ್ವ ರೂಪತಂದೆ ಖಲನ
ಸಂದೇಹವಿಲ್ಲದೆ ಕೊಂದೆ |
(ಹಾ) ಯೋಗಾನಂದ ನರಸಿಂಹ ಗೋವಿಂದ ಮಹಾನುಭಾವ
ಇಂದಿರೆಯರಸ ಸುರೇಂದ್ರ ವಂದಿತ ಪಾದ
ಪುಂಡರೀಕ ಗೊಲಿದು ಬಂದು |
ನೀ ಪಂಢರ ಪುರದಲಿನಿಂದು | ೨
ಭಕ್ತ ಮಂಡಲ ಕಾಯ್ವದೀನ ಬಂಧು |
ವೇತಾಂಡರಕ್ಷಕ ಕೃಪಾಶಿಂಧು |
(ಹಾ) ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ
ಪುಂಡರೀಕಾಕ್ಷ ಹೆನ್ನೆ ಪುರವಾಸ ಸರ್ವೇಶ ೩

 

೯೧
ಪಾಹಿಮಾಂ ಜಗದೀಶ ಭಕ್ತವಿಲಾಸ ಶ್ರೀ ಶ್ರೀನಿವಾಸನೆ
ಈ ಸೋಜಿಗದೊಳು ನಿನ್ನ ಮಹಿಮೆಯು
ಹೇಳಲೊಶವಲ್ಲ ದೇವನೆ ಪ
ಚಂಡಶಾಸಕ ಬಿರುದುವುಳ್ಳ ಪ್ರಚಂಡ ದೇವೋತ್ತುಂಗನೆ
ಮಂಡಲಾಧಿಪ ಮದನ ಜನಕ ಕೋದಂಡಧರ ಶ್ರೀರಾಮನೆ ೧
ಅಖಿಲವೈಭವ ಆದಿಮೂರುತಿ ಸಕಲಲೋಕಾಧಾರನೆ
ವಿಕಟದಾನವ ಮೂಲ ಚ್ಛೇದನ ವಿಶ್ವರೂಪ ವಿನೋದನೆ ೨
ಅಮಿತ ಮಹಿಮಾನಂದ ಹರನುತ ಕಮಲಸಂಭವ ನಯ್ಯನೆ
ಸುಮನರಾದ ಸುಜನರಾ ಹೃದಯ ಕಮಲದಲಿ ನೀ ವಾಸನೆ ೩
ಮಂಗಳಾಂಗ ವಿಹಂಗವಾಹನ ಮಾರಕೋಟಿ ಲಾವಣ್ಯನೆ
ಅಂಗನಾಮಣಿ ಲಕುಮಿಪುರದಲಿ ಅಡಗಿಸಿಪ್ಪ ಶ್ರೀ ಲೋಲನೆ ೪
ಶರಧಿಶಯನ ಸುರೇಂದ್ರವಂದಿತ ಶೌರಿ ಮಹಾಗುಣ ಶಾಂತನೆ
ಕರುಣೆಸೆನ್ನನು ಕಾಯೊ ಬೇಗನೆ ವರದ ‘ಹೆನ್ನ ವಿಠ್ಠಲನೆ’ ೫

 

೯೨
ಪೊರಿಯದಲಿರುವರೇನು ಶ್ರೀಹರಿ ನೀನು ಪ
ನಿರುತ ನಿನ್ನನಾನು ಸ್ಮರಿಸುತಲಿರುವೆನು
ವರದ ಕೌಸ್ತುಭ ಭೂಷಾ ಹರುಷದಿ ಮಂಜುಭಾಷಾ ೧
ಘೋರ ಭವಾರ್ಣವ ಪಾರಗಾಣಿಸೋ ದೇವಾ
ಸಾರಸದಲನೇತ್ರ ನೀರದ ನಿಭಗಾತ್ರ ೨
ದಿನಕರ ಕೋಟಿ ತೇಜ ಘನ ಗರುಡಧ್ವಜ
ಅನಘ ಮಹಾನುಭವ ವನಧಿ ಕನ್ಯಾಧವ ೩
ವರಗಿರಿಧರ ಕರುಣಾಕರ ಶುಭವದನ
ಶರಣರ ಕಾಯುವಂತಹ ಬಿರುದು ನಿನ್ನದೊ ಅನಂತ ೪
ಪರಮ ಪಾವನನಾದ ತರುಳ ಪ್ರಹ್ಲಾದಗೊಲಿದ
ನರಹರಿ ‘ಹೆನ್ನೆಯ ಪುರನಿಲಯ ಪ್ರಮೇಯ ೫

 

೯೩
ಬಂದ ದುರಿತ ಪರಿಹರಿಸೋ ಭಾರಕನು ನೀನು
ಎಂದೆಂದು ನಿನ್ನ ಪಾದ ಹೊಂದಿದವರಿಗೆಯಿನ್ನು ಪ
ಮಂದ ಮಾನವ ನಾನು ಮನ ಖಚಿತವಿಲ್ಲದ
ಕಂದರಕೆ ಬಿದ್ದು ಬಹುಕಷ್ಟ ಪಡುತಾ
ಸಂದೇಹವಾನು ಬಿಡದೆ ಸಂಶಯಿಸಿ ನಿನ್ನೊಮ್ಮೆ
ಎಂದು ಕೊನಿಮದ ದೋಷದಿಂದ ಅದರಿಂದಾ ೧
ಕಷ್ಟವನು ಪಡುವಾಗ ಕೃಷ್ಣ ನೀನೆ ಗತಿಯೆಂದು
ಅಷ್ಟು ಮಾತ್ರ ಸುಖಬರಲು ಅರಿತು ನಿನ್ನ
ನಿಷ್ಠರಾದವರನಾಸಂಖ್ಯ ಅರಿಯೆನು ಮಾಡ್ದ
ದುಷ್ಟ ಬುದ್ಧಿಗಳಿಂದ ದುರುದ್ದೇಷದಿಂದಾ ೨
ನೀನೆ ಸೂತ್ರಧಾರನಾಗಿರುವೆ ಸಕಲಕ್ಕೂ
ನಾನೊಂದೂ ಅರಿಯದಜ್ಞಾನಿ ಹರಿಯೆ
ಏನಾದರಾಗಲಿ ಇನ್ನು ಎನ್ನನು ಬಿಡದೆ
ನೀ ದಯಮಾಡಿ ರಕ್ಷಿಸೋ ನಿಜ ‘ಹೊನ್ನ ವಿಠ್ಠಲಾ ೩

 

೧೨
ಬಂದನು ಕೃಷ್ಣ ಗೋವಿಂದ ಮುಕುಂದ
ಬಂದನು ಕೃಷ್ಣ ಭವ ಬಂಧನ ಪರಿಹಾರ
ಇಂದಿರಾ ಮುಖಾಬ್ಜ ಶರದೇಂದು ಎನಿಪ ಶೌರಿ ಪ
ಸಾರಸಪತ್ರನೇತ್ರ ಅನಘ ಘನನೀರದÀ ನಿಭಗಾತ್ರ
ಶಕಟಾಂತಕ ಧೀರ ಕರುಣಾ ಪಾತ್ರ
ಮುರಹರ ಜಂಭಾರಿಸನ್ನುತ ಗೋತ್ರಾ
ಧಾರಿ ಮುನಿಜನ ಮಂದಾರ ಗೋಪಾಲ ಘನ
ಸಾರ ಶೋಭಿತ ಯದುವೀರ ನಾರಾಯಣ ೧
ಪಂಡಿತ ಕುಸುಮಪಾಣೆ ಜನಕ ಶ್ರೀ
ಅಂಡಜಗಮನ ಗಾನಲೋಲನೆ
ತಂಡ ರಕ್ಷಕ ಪುರಾಣಪುರುಷ ಕೋ
ದಂಡ ಪಾಣಿ ಧುರೀಣ
ಕುಂಡಲಿಶಯನ ಭೂಮಂಡಲಾಧಿಪ ಬಲೋ-
ದ್ದಂಡ ಪರಾಕ್ರಮ ಚಂಡಮಹಿಮ ರಾಮ ೨
ವೇದವೇದ್ಯ ಸುನಾಮಾ ತ್ರಿಜಗನ್ನುತ
ಯಾದವ ಸಾರ್ವಭೌಮ
ಪರಮಾತ್ಮ ಆದಿತೇಯಾಬ್ಧಿ ಸೋಮ
ರಮೇಶಾಂಬುಜೋದರ ಸುಗುಣಧಾಮ
ಶ್ರೀಧರ ಹೆನ್ನೆಪುರ ಮಾಧವ ನರಮೃಗ ಪ್ರಹ್ಲಾದ
ವರದ ಸನಕಾದಿ ವಂದಿತ ಚರಣ ೩

 

೧೩
ಬರಲಾರೆ ಹರಿ ಭಜಕರು ಕರಿಯಲಿ ಪ
ಹದಿನಾರು ಸಾವಿರ ಚದುರಿಯರ ಸಂಗವು
ಪದುಮಾಕ್ಷ ಸಾಲದೆ ಭಾರ್ಗವಿಲೋಲನಾಗಿ ೧
ಗೊಲ್ಲರ ಮನೆಪೊಕ್ಕು ನೆಲವಿಗೇರಿರಲು
ಕಳ್ಳನುಯಂದು ಕೈ ಬಿಡಹೋಗೆ ೨
ವರ ಹೆನ್ನೆಪುರ ನರಹರಿ ಕರುಣಾಕರ
ಮುನಿ ಹೃತ್ಕಮಲದಲಿ ವಾಸವ ಬಿಟ್ಟು ೩

 

೯೪
ಬರಿದೆ ಚಿಂತಿಸಿ ನೀನು ಬಳಲುವದೇಕೆ ಮನವೆ
ಹರಿನಾಮ ಸ್ಮರಣೆಯು ಹರುಷದಲಿ
ಸ್ಮರಿಸಿ ಧರ್ಮಾರ್ಥ ಕಾಮ ವರಮೋಕ್ಷ ಫಲಗಳು
ಕರುಣಾ ಕಟಾಕ್ಷದಿಂದ ಶ್ರೀಧರ ನಿರುತ ಕೊಡುವ ಪ
ಅರಿಷಡ್ವರ್ಗಕೆ ಸಿಲ್ಕಿ ಅರಿಯದೆ ಭವಸಾಗರದೊಳು
ಮುಣುಗಿ ಮೈಮರೆದು ಶ್ರೀನರಹರಿ
ಶರಣರ ಪೊರೆವ ಬಿರುದುಳ್ಳಂಥ
ಗರುಡವಾಹನ ಸಿರಿಯರಸ ಪರಮಾತ್ಮನ
ಚರಣ ಕಮಲ ಸತ್ಕರಿಸದೆ ಅನುದಿನ ೧
ಕುಂದ ಬುದ್ಧಿಲಿ ದೇಹಬಾಂಧವರೆಲ್ಲ ಸ್ಥಿರವೆಂದು
ನೆಚ್ಚಿ ನೀ ಮಂದಾಂಧನಾಗಿ
ಅಂದು ಪ್ರಹ್ಲಾದ ಪರಮಾನಂದದಿ ಕರೆಯಲು
ದ್ವಂದ್ವರೂಪತಾಳಿ ಬಂದು ಕಾಯಿದಾ
ವೃಂದಾರ ಕೇಂದ್ರನುತ ಮಂದರಧರ ಮುಚುಕುಂದ ವರದನ್ನ
ಸಲಹೆಂದು ಮೊರೆಯ ಹೋಗದೆ ೨
ನರಜನ್ಮ ತಾಳಿ ಸುಖಸ್ಥಿರ ಮಾರ್ಗ ಕಾಣದೆ
ಸತ್ಪುರುಷರ ಜರಿದು ಗರ್ವ ಭರಿತನಾಗಿ
ಮುರನರಕಾಂತಕ ಮುಕ್ತಿದಾಯಕ ಶುಭಕರ
ಸ್ಮರಜನಕ ಶ್ರೀಧರ ಮಾಧವ
ಉರಗಶಯನ ಹೆನ್ನೆಪುರ ನಿಲಯ ನರಸಿಂಹ
ತ್ವರದಿ ರಕ್ಷಿಸೋಯನ್ನ ಹರಿಸರ್ವೋತ್ತಮ ನೆನದೆ ೩

 

೯೫
ಬಾರೊ ನೀಯನ್ನಮನಿಗೆ ಗೋಪಾಲಕೃಷ್ಣ ಪ
ಅಂದದಿ ಚಂದದಿ ಆಡುತ ಪಾಡುತ
ಧಿ ಮಿಧಿಮಿಯನ್ನುತ ದಿನ ದಿನ ಕುಣಿಯುತ ೧
ಅಂದುಗೆ ಗೆಜ್ಜೆಗಳಿಂದ ಶೋಭಿತನಾಗಿ
ಮಂದಾರ ಕೂಡಿಕೊಂಡು ಗಜಗು ಭೊಗರಿಯಾಡುತ ೨
ಬಾಲಕನಾಗಿ ನೀ ಲೀಲೆಯ ತೋರುತ
ಲಾಲಿಯ ನಾಡುವ ಬಾಲಕರ ಕೂಡ ೩
ಕುಡಿಯಲು ನಿನಗೆ ಕೊಡುವೆನು ನೊರೆಹಾಲ
ಹುಡುಗರ ಕೂಡಿಕೊಂಡು ಶಿಡಿಗುಡಿನಾಡುತ ೪
ನೆರೆಮನೆ ಸತಿಯಳು ಕರೆವಳು ಹರುಷದಿ
ಪರಮ ಪುರುಷನಾದ ಪತಿ ಹೆನ್ನೆ ವಿಠಲ ೫

 

೧೪
ಬಾರೋ ರಂಗಯ್ಯ ಬಾರೋ ಕೃಷ್ಣಯ್ಯ
ಬಾರೋ ರಂಗ ನವನೀರದ ನಿಭಾಂಗ ಪ
ನಂದಗೋಪನಂದನ ಸುಂದರ ನಾರಾಯಣ
ಮಂದರಧರ ಕರುಣಾಸಿಂಧು ಇಂದು ವದನ ೧
ಉರಗವೈರಿ ಗಮನ ವರ ಶ್ರೀವತ್ಸಲಾಂಛನ
ಕರಿ ವರ ದುರಿತ ಹರಣ ನರಹರಿ ಪರಮಪಾವನ ೨
ಪಂಕಜದಲಲೋಚನ ವೆಂಕಟಾಚಲರಮಣ
ಶಂಕರನುತ ಚರಣ ಶಕಟಾಸುರ ಭಂಜನ ೩
ಅನಘ ವನಧಿಶಯನ ಮುನಿ ಹೃತ್ಕಮಲ ಪೋಷಣ
ಘನಮಣಿ ಖಚಿತಾಭರಣ ಕನಕಾಂಬರ ಭೂಷಣ ೪
ಬಲಿಬಂಧನ ವಾಮನ ಜಲಜೋದರ ಜನಾರ್ಧನ
ವಿಲಸಿತ ಹೆನ್ನೆ ಪಟ್ಟಣ ನಿಲಯ ಶ್ರೀ ಮಧುಸೂದನ ೫

 

೧೫
ಭಜಿಸುವೆನು ನಾನಿನ್ನ ಭಕ್ತಾಧೀನ
ಭಜಿಸುವೆ ನಾನು ನಿನ್ನ ಭುಜಗಶಯನದೇವ
ಅಜಹರನುತ ಅಗಣಿತಚರಿತ ಹರಿ ಪ
ಅಂದು ಮುನಿಸತಿ ಶಾಪದಿಂದ ಶಿಲೆಯಾಗಿರೆ ಛಂದದಿ
ಚರಣಾರವಿಂದ ಸ್ಪರ್ಶವಾಗಲು
ಕುಂದು ಪರಿಹಾರವಾಗಿ ಸುಂದರ ಮಣಿಯಾದಳೆಂದು
ನಿಮ್ಮಯ ಪಾದದ್ವಂದ್ವ ಬಿಡದಲೆ ನಾ ೧
ಕಂದ ಕರೆಯಲು ಶ್ರೀ ಗೋವಿಂದ ಘನ ಸ್ತಂಭದೊಳ್
ಬಂದು ದೈತ್ಯನ ಕೊಂದ ಇಂದಿರಾರಮಣ
ಕಂದರ್ಪ ಜನಕ ಮುಚುಕುಂದ ವರ ಕೃಷ್ಣಾ
ಮಂದರಧರ ಸಲಹೆಂದು ಅನವರತ ೨
ದೃಢ ಧ್ರುವರಾಯನ ಬಿಡದೆ ಮಲತಾಯಿ ತಾ
ಅಡವಿಗೆ ನೂಕಿಸಲು ಕಡು ಮುದದಿ
ಕಡಲಶಯನ ಜಗದೊಡಿಯನೆ ಕಾಯ್ದೆ
ಗರುಡವಾಹನನೊಡನೆ ನುಡಿಯಯ್ಯ ೩
ದುರುಳ ರಾವಣನ ದಶಶಿರಗಳು ಖಂಡಿಸಿ
ಶರಣೆಂದು ವಿಭೀಷಣ ಗೇ ಸ್ಥಿರದಿ ಪಟ್ಟವನಿತ್ತು
ಪರಮಪುರುಷ ಶಿರಿವರ ನರಹರಿ ಶೌರಿ
ಮೊರೆ ಹೊಕ್ಕೆ ರಕ್ಷಿಸೋ ಮುರಹರ ಕರುಣಾಂಬುಧೆ ೪
ಕರಿಸರೋವರದಿ ಮಕರಿಯ ಬಾಧೆಗೆ ಸಿಕ್ಕು
ಹರಿನೀನೆ ಗತಿಯೆಂದು ಸ್ಮರಿಸುತಲಿರಲು
ಭರದಿಪೋಗಿ ಕಷ್ಟಪರಿಹರಿಸಿ ಪೊರೆದಿ
ಶ್ರೀಧರವರ ಹೆನ್ನೆಯಪುರ ಲಕ್ಷ್ಮೀನರಸಿಂಗ ೫

 

೧೫೫
ಭಜಿಸೋ ಮೂಢ ಭಜಿಸದರಿಬೇಡಾ
ತ್ರಿಜಗ ವಂದಿತನಾದ ಶ್ರೀಹರಿ ಗಾಢಾ ಪ
ಇಂದಿರೆಯರಸಾನಂದದಿ ಮನಸಾ
ಛಂದದಿ ಧ್ಯಾನಾದಿಂದ ಉಲ್ಹಾಸಾ ೧
ಗೋಪಿಯಕಂದಾ ಗೋಕುಲಾನಂದಾ
ಭೂಪ ಗೋವಿಂದ ಯೆಂದೀಪರಿಯಿಂದಾ ೨
ಸುಂದರ ಮೂರುತಿ ಸುಗುಣಾ ಪ್ರಖ್ಯಾತಿ
ಮಂದರಗಿರಿ ಪೊತ್ತ ಪಾವನ ಕೀರುತಿ ೩
ಮಂಗಳದಾಯಕಾ ಮನ್ಮಥ ಜನಕಾ
ಗಂಗೆಯ ಪಡೆದಾ ಕರುಣಾನನೇ ಕಾ ೪
ನಿಗಮಗೋಚರನಾ ನೀರಜನಾಭನಾ
ಅಗಣಿತ ಮಹಿಮಾನಂತ ಅವತಾರನಾ ೫
ಭಕುತ ವತ್ಸಲನ ಮುಕುತಿದಾಯಕನಾ
ನಿಖರದಿ ಅನುದಿನ ನಿಜ ಮುಕ್ಕುಂದನಾ ೬
ಕಂದ ಪ್ರಹ್ಲಾದನಾ ಕಾಯ್ದ ದೇವನಾ
ಇಂದು ಬಿಡದೆ ‘ಹೊನ್ನವಿಠ್ಠಲ’ ಶ್ರೀ ಕೃಷ್ಣನಾ ೭

 

೩೦
ಭಾರತಿದೇವಿಯೆ ನಿನ್ನನು ಭಾವದಲಿ ಭಜಿಸುವೆ
ಮನದಲಿ ಪಾರಮಾರ್ಥಿಕ ಭಕುತಿಯಲಿ ಬಲು
ಪ್ರಬಲಿಸಮ್ಮಾ ಪ
ಮಂದ ಬುದ್ದಿಯಿಂದನಾ ಬಲುಮಾನ ಹೀನನಾಗಿ ಬಾಳಿದೆ
ಕುಂದು ಪರಿಹಾರ ಮಾಡಿ ಕಾಯಮ್ಮಾ
ಕೋಮಾಲಾಂಗಿಯೆ ೧
ಹತ್ತು ಎಂಟು ಅಂತರದಿ ಜಿಹ್ವದಿ ತಿಳಿವಂತೆನ್ನ ಮಾಡಮ್ಮಾ
ಸತ್ಯ ವಾಕ್ಯ ಪ್ರವೀಣೆ ನೀನು ಸಾರುವೆನು ನಾನು ೨
ಫಾಲನೇತ್ರಾದಿಗಳಿಲ್ಲಾ ಪರಮ ಮಂಗಳತೋರುವಿ
ಬಾಲರಾಮ ಪದಾಬ್ಜ ಭೃಂಗನ ಪಟ್ಟದರಸಿಯೆ ೩
ಭಕ್ತಿಯಲಿ ನೀನಿತ್ತರುಂಟು ಭಾದ್ಯರಿದಕಾರು ಕಾಣೆನು
ಮುಕ್ತಿ ಮಾರ್ಗವ ತೋರಿಸೆನ್ನನು ಮುಕ್ತನೆನಿಸಮ್ಮಾ ೪
ಭೂಮಿಗಧಿಕ ಹೆನ್ನೆಪುರ ಹೆನ್ನೆ ವಿಠಲನ ಪಾದಪದ್ಮವ
ಪ್ರೇಮದಿಂದಲಿ ಹೃದಯದಲಿ ಇಟ್ಟು ಪ್ರೀತಿ ತೋರಮ್ಮಾ ೫

 

೧೫೬
ಭಾವಜ್ಞರ ಪಾದವನೇ ಪಿಡಿಯೋ
ಭಾವಜನಯ್ಯನ ಸೇವೆಯ ಪಡೆಯೋ ಪ
ಘನಗುರು ಹಿರಿಯರ ಕಾಲಿಗೆ ಎರಗೋ
ಘನ ಮಹಿಮನ ಪಾದಕೆ—-ಗೋ ೧
ಪಂಡಿತ ಆರ್ಯರ ಪೂಜಿಸು ಇಲ್ಲೆ
ಪುಂಡರೀಕಾಕ್ಷನ ಭಜಿಸಿ ಪಾದವನು ಪಿಡಿಯೋ ೨
ಸುಜನರ ಸಂಗವನು ಸುಲಭದಿಕೂಡೊ
ನಿಜ ‘ಹೆನ್ನವಿಠ್ಠಲನ್ನ’ ನೀನಾಗ ಕೂಡೊ ೩

 

೯೬
ಮಂದಾನ ಬಾಧೆಗೆ ಮನಿ ಮಂದಿ ನಾವು ಸಹಿತ
ಬೆಂದು ಬೇಸರ ಗೊಂಡು ಬಳಲು ತೇವು ಹರಿ
ತಂದಿ ಬೇಗದಿ ಬಂದು ದಯಮಾಡಿ ಸಲಹೋ
ಗೋವಿಂದಾ ಕೃಪಾಳು ಶ್ರೀ ಕರುಣಾಂಬುಧಿಯೆ ಪ
ಕೃಷ್ಣಾ ರೌದ್ರಾಂತಕನ ಕ್ರೂರದೃಷ್ಟಿ ಮುಖ ಹಲಾ
ತ್ರ‍ಕಷ್ಠವಾಗಿ ಎನ್ನ ಕಾಡುತಿರಲು
ನಿಷ್ಠೆ ನೇಮಗಳೆಲ್ಲ ಜರಿದು ಮತಿ ಭೃಷ್ಟನಾಗಿ
ಕಷ್ಟಕ್ಕೆ ಒಳಗಾದೆ ಕಡೆಹಾಯಿಸೊ ಧೊರಿಯೆ
ಇಷ್ಟದಾಯಕ ನಿನ್ನಲ್ಲಿನ ಮಾಯವೆ ಆಡುದು (ಅಹುದು)
ಕೃಷ್ಣಮೂರುತಿ ಬೇಗ ಕೈಹಿಡಿ ಇನ್ನಾ
ಸೃಷ್ಟಿಗೊಡೆಯ ಶ್ರೀನಿವಾಸಕೇಶವ ಎನ್ನ
ಕಷ್ಟವು ಪರಿಹರಿಸಿ ಕಾಯೋ ಸಂಪೂರ್ಣ ೧
ಸೂರ್ಯಾನ ಪುತ್ರನ ಕಾರ್ಯಾವು ಎಮ್ಮ ಮೇಲೆ
ಭಾರಿ ಕಾಣುತಲಿದೆ ಪರಮಾತ್ಮನೆ ——-
ಘಟಗಳಿಗುಪದ್ರಕಾರನಾಗಿ ವ್ಯಾಧಿ ಖಂಡಿಸೋ ವೇಳೆ
ಆರು ಈ ಗ್ರಹಕರ್ತರಾಗಿರಲು ದೇವರಿನ್ನು
ಧಾರುಣಿಯೊಳು ಹರಿ ದನುಜಾಂತಕಾ
ವಾರಿಜಾನಾಭಾ ಶ್ರೀ ವೈದೇಹಿ ಪತಿರಾಮಾ
ಸಾರನೆ ಗಡ ಬಂದು ಸಲಹೋ ತಂದೆ ೨
ಗರ್ಭಾದಿ ಮುದನಿಂ ಸುಖಭ್ರೂಣ ಭಯವೆಂಬ
ದೆಬ್ಬಿಗೆ ತಾಳದೆ ತಲ್ಲಣಿಸುವೆ
ಅರ್ಭಕ ನಾನೊಂದು ಅರಿತು ಅರಿಯೆ ದೇವ
ಸಭ್ಯಾ ನೀ ನಂದ ಸರ್ವೋತ್ತುಮಾ
ನಿರ್ಭಯನನು ಮಾಡಿ ನೀನೆ ರಕ್ಷಿಸದಿರೆ
ಇನ್ನು ಬ್ಯಾರೆ ದಾರು ಮನಸು—-ಳಗೆ
ದರ್ಭಶಯನ ರಾಮನ—–‘ಹೊನ್ನ ವಿಠ್ಠಲ’
ಸಾಕಾರ ನೀ ಎನ್ನ ತ್ವರದಿ ಪೊರೆಯೊ ೩

 

೧೫೭
ಮನ್ನಿಸದೆ ಇರುಬೇಡ ಮಂದ ಮನುಜಾ
ಚಿನ್ಮಯ ಮೂರ್ತಿ ಶ್ರೀ ಹೆನ್ನೆಹೋಬಲವಾಸನಾ ಪ
ಮನಶುದ್ಧಿಯಾಗಿ ನಿರ್ಮಲಜ್ಞಾನದಲಿಯನ್ನು
ವನಜಸಂಭವ ಪಿತನ ವರ್ಣಿಸುತಲಿ
ದಿನಗಳನು ಕಳೆಯುತಲಿ ದೀನರಕ್ಷಕ ದೇವನ
ಅನುಮಾನಗಳ ತೊರೆದು ಆನಂದದಿಂದಲಿ ಇನ್ನು ೧
ಸಕಲಾಂತರ್ಯಾಮಿಯಾದ ಸಕಲ ದೀನರ ದೇವ
ಸಕಲ ಸಾಧು ಸಜ್ಜನರ ಸರ್ವದಲಿ
ನಿಖರವಾಗಿ ರಕ್ಷಿಸುವ ಲಕುಮಿಯರಸನ ಹೃದಯ
ಭಕುತಿಯಲಿ ಪಾಡುತಲಿ ಪರಮ ಪುರುಷನ ಇಂದು೨
ಎಂದೆಂದು ಹರಿಪಾದ ಹೊಂದಿದ ಮಹಾಮಹಿಮ
ರಂ——ತಿಳಿದು ನೀಯಿಂದು ಇನ್ನು
ಸಂದೇಹವನ್ನೆ ಬಿಟ್ಟು ತಂದೆ ‘ಹೆನ್ನವಿಠ್ಠಲ’
ಚಂದದಿಂದಲಿ ಹೃದಯ ಮಂದಿರದಲಿನ್ನೂ ೩

 

೯೭
ಮರದೆನೋ ಯನ್ನ ಶ್ರೀಹರಿಯೇ ಭಕ್ತರಿಸಿರಿಯೇ
ಸ್ಮರಿಸುವರ ಧೊರಿಯೇ
ಮರೆಯದೇ ಸಿರಿಸಂಪತ್ತು ಮಿಗಿಲಾಗಿರಲು
ಭಜಿಸವರನ ಬಿಡದಲೆ
ಕರುಣಾ ಭರದಲಿ ಕಾಯುವ (ಕಾಯುವಿ)ದತಿಘನ
ಬಿರುದು ನಿನ್ನದೆಂದು ಪೇಳುತಿರೆ ಶೃತಿ ಪ
ತಂದೆ ಕಂದನ ಭಾದಿಸಲು ಶ್ರೀಧರ ಬೇಗ
ಬಂದೆನ್ನ ಸಲಹೆನ್ನಲು ಮಂದರಧರ ವಳಿ-
ತೆಂದು ಸಂಧಿಸಿ ಕಾಲದ್ವಂದ್ವ ರೂಪವನೇ
ಮಂದ ದನುಜನ ಕೊಂದ ಬಳಿಕಾನಂದ
ಕರುಣಾಸಿಂಧು ಶ್ರೀಹರಿ ೧
ಅಂದು ಅಜಾಮಿಳನು ಅಕ್ಷರದ್ವಯದಿಂದ ಮುಕ್ತನಾದನು
ಕುಂದರದನ ದ್ರೌಪದಿ ಮಾನಕಾಯಿದಿ ಇಂದಿರೇಶನೆ ಮುದದಿ
ನಂದ ನಂದನ ನಾನು ಈ ಭವ ಬಂಧನದಿ ಬಲುನೊಂದೆನೋ
ಮುಚುಕುಂದವರದ ಪುರಂದರಾರ್ಚಿತ ಇಂದು ವದನ ೨
ವರಮುನಿಯ ಶಾಪದಲಿ ಸತಿಯು
ಘನತರ ಶಿಲೆಯಾಗಿರಲು
ಸರಸಿಜಾಸನ ವಂದೆ ತಾ ನಿಮ್ಮಯ
ಪಾದಸ್ಮರಿಸಲಾಕೆಯು ದುರಿತ
ಪರಿಹಾರಾಯಿತು ಗರುಡವಾಹನ ಧರಣಿಧರ
ಕರಿವರದ ‘ಹೆನ್ನೆಯ
ಪುರನಿಲಯ ನರಹರಿ ಮುರಾಂತಕ
ಉರಗಶಯನಾಂಬುರುಹ ನಯನ ೩

 

೧೫೮
ಮರೆಯದೆ ಶ್ರೀಹರಿಯಮನದಲಿ ಸ್ಮರಿಸೊ
ಗುರುಹಿರಿಯರ ಅನುಗ್ರಹವನು ಗಳಿಸೊ ಪ
ಚಂದದಿ ಹೃದಯದಿ ಇಂದಿರೆ ರಮಣನ
ಅಂದದಿ ಅನುದಿನ ಮಂದರ ಧರನಾ ೧
ಬಗೆ ಬಗೆಯಲಿ ಶ್ರೀ ಭಗವಂತನ ಪಾದ
ಯುಗವನು ನೆರೆನಂಬಿಯಿ—–ಎಂದೆಂದೂ ೨
ಪರಿಪರಿ ನವವಿಧ ಭಕ್ತಿಯು ಸಾಧಿಸಿ
ಪರಮಾತ್ಮ ಪರ ಬ್ರಹ್ಮ ಪರಮಾನಂದನ ೩
ಶರಧಿಶಯನನ ಶಾಂತ ನಿಧಾನನ
ಅರವಿಂದ ನಯನನ ಹರಿಗೋವಿಂದನಾ ೪
ದಿನಕರ ಕೋಟಿತೇಜ ವಿಲಾಸನ
ಮನುಜಾಧಿಪ ಮಾನವ ರಕ್ಷಕನಾ ೫
ಚಿತ್ತವು ಚಲಿಸದೆ ಚಿನ್ಮಯ ರೂಪನ
ನಿತ್ಯಾನಂದನ ನಿಗಮಗೋಚರನಾ ೬
ಭಾವಜನಯ್ಯನ —–
ಭಾವನಕೊಲಿದ ಜನ ಹೃದಯದಿ ಕುಣಿದಾಡುವ ನಾ೭
ಜ್ಞಾನಾನಂದನ ಜ್ಞಾನಿಗಳರಸನ
ಧೇನು ಪಾಲಕ ಜಗದೀಶನ ಮುಕುಂದನ ೮
ಮುರಹರ ಮಾಧವ ಮುನಿ ಗೋವಂದ್ಯನ
ಶರಣರ ಪೊರೆವಾ ಬಿರುದಿರುವ ದೇವನಾ ೯
ಇನಕುಲ ಭೂಷಣನ ವಿಶ್ವಲೋಕೇಶನ
ದನುಜಾಂತಕ ಶ್ರೀ ದಾಮೋದರನಾ ೧೦
ಪಾಂಡವ ಪಕ್ಷಕನ ಪರಮಾಣು ರೂಪ
ಬ್ರಹ್ಮಾಂಡನಾಯಕ ಕೋದಂಡಧರನ ಇಂದೂ ೧೧
ವಾರಿಧಿ ಬಂಧನ ವೈದೇಹಿ ತಂದನ
ಮೀರಿದ ರಕ್ಕಸರ ಮದಿಸಿದವನಾ ೧೨
ಪನ್ನಗ ಶಯನ ‘ಹೆನ್ನ ವಿಠ್ಠಲನ ‘
ಉನ್ನತ ಚರಿತನ ಇನ್ನು ಹರುಷದಲಿ ೧೩

 

೧೫೯
ಮಾಡು ನೀ ಹರಿಯ ಭಜನಿ ಪ
ಹರಿಯ ಭಜನಿ ಮಾಡು ಹಲವು ಯೋಚನೆಯ ಬಿಡು
ಶರಣರೊಳಗೆ ಕೂಡು ಸಿರಿಧರನ ನೋಡು ೧
ಹರಿಜನರನ್ನೇ ನೋಡಿ ಅವರ ಪಾದವು ಪಿಡಿ
ಶರೀರ ಸಾಧ್ಯನಿಕೆ ಮಾಡಿ ಶರಣ ತತ್ವವುಪಡಿ ೨
ಸಿಂಧುಶಯನ ಹರಿ ಎಂದು ಸ್ತುತಿಸೂತೇರಿ
ದಂದಗಳನೆ ಮರಿ ದೇವರೆಯೆಂದು ಇರಿ ೩
ಸುರಮುನಿ ವಂದ್ಯನಾ ಸುಗುಣ ವಿಲಾಸ ನಾ
ಸುಚಿರ ಚರಿತನ ಹರುಷದಿ ಅನುದಿನ ಭಜಿಸಿ ೪
ದೇಹ—–ವೆಂದೂ ದಿನಮಾನ ತಿಳಿದಂದೂ
ಮಹ ಹೊನ್ನ ವಿಠ್ಠಲ ಎಂದೂ —– ೫

 

೧೬೦
—ಮಾಡೋ ಏ ಮೂಢಾ ಪ
ನಾಮ ಭಜನಿ ಮಾಡೋ ಪ್ರೇಮದಿ —–
ಸ್ವಾಮಿ ಜಗನ್ನಾಥಾ ರಾಮ ರಾಮಯೆಂದು ೧
ಛಂದದಿ ಮನಸಲಿ ಶ್ರೀ ಕೃಷ್ಣನಾನಂದದಿ
ನೀನೀಗೊ————— ೨
ಹರಿಯ ಬಿಡದೆ ಚಿತ್ತ ಹರುಷದಿಸ್ಮರಣೀಯಾ
ಚರಣ ಕಮಲದಲಿ ನಿರುತದಿ ನೀಇನ್ನೂ ಪಠಿಸುತ
ಭಕುತಿಯಿಂದ ನೀ ಸದಾ ೩
ಮಂಗಳಮೂರುತಿ ತ್ರಿಜಗತ್ಕರ್ತ ರಂಗನಾಕೀರುತಿ
ಹಿಂಗದೆ ನಿಜ ಅಂತರಂಗ ಕೃಪಾಂಗನಾ ಗಂಗೆಯ
ಜನಕನಾದ ಘನ ‘ಹೊನ್ನ ವಿಠ್ಠಲನಾ’ ೪

 

೯೮
ಮಾಧವಾ ನಿನ್ನ ಮಹಿಮೆ ಪ್ರಕಾಶವು ಈ
ಧರೆಯೊಳು ಪೊಗಳೆಲೆನ್ನೊಶವೆ
ಸಾಧು ಸಜ್ಜನ ಸಂತರ ಸಲಹುವ
ಮಾಧವ ಪತಿ ಹರಿ ಯಶೋದ ನಂದನಾ ಪ
ಕನಕಾಂಬರಧರ ಕಮಲಸಂಭವ ಪಿತ
ಇನಕುಲ ಭೂಷಣ ವೀರಾಧಿವೀರ
ಘನಮಕುಟಧರ ಶಿರ ಕಾರುಣ್ಯಸಾಗರ
ಅನಿಮಿತ್ತ ಬಂಧು ಜಗದಾದಿ ಪ್ರಿಯ
ದಿನಕರ ಕೋಟಿ ತೇಜ ದೇವಾದಿದೇವ
ದೀನರಕ್ಷಕ ರಾಮ ಜಾನಕಿ ಪ್ರೇಮಾ
ಅನಿಮಿಷ ರೊಡೆಯ ಶ್ರೀ ಆದಿನಾರಾಯಣ
ಕನಿಕರಿಸಿ ಎನ್ನಮೇಲೆ ಕೃಪೆ ಮಾಡೋ ಗೋವಿಂದಾ೧
ವಾಸುಕಿಶಯನ ಶ್ರೀವಸುದೇವ ತನಯಾ
ಸಾಸಿರನಾಮದ ಸರ್ವೇಶಾ ಈಶಾ
ವಾಸುದೇವಾಕೃಷ್ಣಾ ವಾರಿಜೋದರ
ಶ್ರೀನಿವಾಸ ವೇದೋದ್ಧಾರ ವೈದೇಹಿ ರಮಣ
ಭೂಸುರ ವಂದಿತ ಪೂಜಿತ ಸರ್ವತ್ರ
ಶ್ರೀಶವೇಣನಾದ ಶೀತ ಜನಪೋಷಾ
ಭಾಸುತ ಕೀರ್ತಿ ವಿಶಾಲ ಭಕ್ತವತ್ಸಲ
ದಾಸನು ನಾ ನಿನ್ನ ದಯಮಾಡಿ ರಕ್ಷಿಸೆನ್ನ ೨
ಸುಂದರ ವದನ ಸುರೇಂದ್ರ ಅರ್ಚಿತ
ಪರಮಾನಂದ ಮುಕುಂದ ಮಹಾದೇವನೆ
ಹೊಂದಿ ನಿಮ್ಮಯ ಚರಣದ್ವಂದ್ವ ಪೂಜಿಪ
ರಂದದಿ ಪುರವಂತ ಬಿರುದುಳ್ಳ ದೇವಾ
ಸಿಂಧು ಶಯನನಾದ ‘ಶ್ರೀಹೆನ್ನವಿಠ್ಠಲಾ’ ಕರೆದೆನ್ನ
————————-
—— ಎನ್ನನ್ನು ಕರುಣಿಸು ಕಾಯೋ

 

೯೯
ಮಾಯಾದೊಳಗೆ ಶಿಲ್ಕಿ ಮಗ್ನನಾಗಿ ಮರವೆಗೆ ಒಳಗಾದೆ
ಕಾಯಬೇಕಯ್ಯ ನಿನ್ನ ಕರುಣ ರಸವನ್ನು ಕಾಣದೆ ನಾ ಬರಿದೆ ಪ
ದೀನದಯಾಪರ ದನುಜಾಂತಕ ನಿಧಾನ ಸುಜನವಂದ್ಯಾ
ಮಾನವಾದಿ——ಜನಕ ಸನ್ಮಾನಿತ ಮುಚುಕುಂದ
ಗಾನಲೋಲ ಕರಿವರದ ಗೋವಿಂದ ಕನಕ ಭೂಷಿತಾಂಗಾ
ನೀನೆ ದಯಮಾಡಿ ರಕ್ಷಿಸೋ ಎನ್ನ ನಿಜ ನಿತ್ಯ ಶ್ರೀ ರಂಗಾ ೧
ಈ ದೇಹವು ಸುಖ ಸೌಖ್ಯದೊಳಗೆ ಬಿದ್ದು
ಇತರ ಜ್ಞಾನತೊರೆದು
ಮಾಧವ ನಿಮ್ಮ ನಾಮಸ್ಮರಣೆಯು ಎಂಬುದು
ಮನಬಣ್ಣ ಮರೆದು
ಸಾಧಿಸಿ ನಿಮ್ಮ ಪಾದ ಸದ್ಗತಿ ಹೊಂದುವ
ಸೌಖ್ಯವ ಕಾಣದಿನ್ನೂ
ಗಾಧಿಯೊಳಗೆ —— ಬಡವನ ಕೈಯ್ಯ
ಪಿಡಿವರು ಇನ್ನೂ ೨
ಏಸೋ ಬಾರಿ ನಾ ಹುಟ್ಟಿದರೇನು ಇನ್ನು ನಿನ್ನ ಕಾಣದೆ
ಮೋಸ ಪ್ರಪಂಚದಿ ಮುರಾರಿ ಅನುದಿನವು
ಮನವು ನಿನ್ನಲ್ಲಿಲ್ಲದೆ
ಘಾಸಿಗೆ ಬಿದ್ದೆನು ಕರುಣಿಸೊ ಬೇಗನೆ ಘನ್ನ ‘ಹೆನ್ನ ವಿಠ್ಠಲನೆ ‘
ವಾಸುದೇವ ಎನ್ನ ವೈನದಿ ರಕ್ಷಿಸೋ ವಸುಧೆಯ ಪಾಲಕ ೩

 

೧೬೧
ಮುಕ್ತಿ ಹೇಗೆ ಬಂದೀತೊ ಪಾಮರನೆ ಕೇಳೊ ವಿ-
ರಕ್ತಿಯಾಗದೆ ಶಕ್ತಿ ಕಾಣಾದೆ ಪ
ದುರ್ಜನ ದುಷ್ಟರಾದವರಾ ದೂರಮಾಡಿ ಮನದಿ ಸಾಧು
ಸಜ್ಜನರ ಸಂಗವು ಮಾಡಿ ಸರ್ವೋತ್ತಮನಾ
ಕರುಣಾವು ಪಡುವಾ ೧
ವೇದಶಾಸ್ತ್ರ ಸಂಪನ್ನಾರು ಆದ ಪಂಡಿತಾರು ಕೂಡಿ
ಭೇದಾಭೇದಾರ್ಥಗಳು ಎಲ್ಲಾ ವಿದಿತವಾಗಿ ತಿಳುವ ಜ್ಞಾನಾ ೨
ಸಕಲಾಯೋಗಾಧ್ಯಾನಾರಾದ ಸತ್ಪುರಷಾರ ಪಾದ ಹಿಡದೂ
ನಿಖರನಾಗಿ ನಿಶ್ಚಲನಾಗಿ ನಿಂತು ಸೇವೆ ಮಾಡುವಂಥಾ ೩
ನಿತ್ಯ ಕರ್ಮಾ ನೇಮ ವೃತಾ ಸತ್ಯವಾಗಿ ನಡಸುವಂಥಾ
ಉತ್ತುಮಾರ ಮನೆಗಳಲ್ಲಿ ಭೃತ್ಯನಾಗಿ ನಡೆಸೆಂಬುವಾ ೪
ಸರ್ವಾಸಂಗ ತೊರದು ಹೃದಯ
ಮರ್ಮಮಂತ್ರಾಚಮನಾಗಳಲ್ಲಿ
ಸರ್ವಕಾಲ ಹರಿಯ ಭಜಿಸಿ ಸತ್ಪುರಷಾ ತಾನಾಗುವಂಥಾ ೫
ಜ್ಞಾನಭಕ್ತಿ ವಾರಿಧಿಯುಳ್ಳವನಾಗಿ ಮೆರೆದಾಡುತಲಿ
ನಾನಾ ಪರಿಯಲಿ
ಸ್ಮರಣೆಯ ಮಾಡಿ ನಾರಾಯಣನಾ ಕೃ————- ೬
ಪನ್ನಗಶಯನನಾದ ‘ಹೊನ್ನಯ್ಯ ವಿಠ್ಠಲನ್ನ ‘
ಚರಣವನ್ನೆ ಪೂಜಿಸಿ
ಧನ್ಯನಾ—-ಸನ್ಮಾರ್ಗವು ಕಾಣುವಂಥಾ ೭

 

೧೬೨
ಮುದದಿ ಹರಿಯ ಧ್ಯಾನ ಮಾಡಿ ಸಾಧಿಸೊ
ಸದಯ ಹೃದಯರಾದ ಸಂಗದೊಳಗೆ
ನೀನು ಬೆರೆದು ಪ
–ಕರ್ತನಾದ ದೇವ ಸದ್ಪಿಲಾಸನಾ
ನಿಖರವಾಗಿ ಹೃದಯದಲ್ಲಿ ನಿಲ್ಲಿಸುವೆನಾ
ಪ್ರಕಟಮಾಡಿ ಸ್ತುತಿಸುತಿರುವ ಬಿಡದೆ ಅನುದಿನ
ಭಕುತಿಯಿಂದ ಕ——–ಭಕ್ತ ಜನರಕೂಡಿ ೧
ಯೋಗಿಜನರ ಹೃದಯದೊಳು ನಿಖರವಾಗಿಇರುವ
ಭೋಗಿಶಯನನಾಗಿ ಇರುವ ಪುಣ್ಯ ಪುರುಷನಾ
ಸಾಗರಾನಸುತಿಯರಾಳ್ವ ಸಾರ್ವಭೌಮನ
ಬೇಗ ಭಜಿಸಿ ಗತಿಯು ಕಾಣ್ವ ಭಾಗವತರ ಸಂಗದಲ್ಲಿ ೨
ದುಷ್ಟ ಜನರ ಸಂಗವೆಂಬುದು ದೂರಮಾಡೋ ನೀ
ಶಿಷ್ಟ ಜನರ ಪಾದ———-ಯಾಗೋ ನೀ
ಇಷ್ಟದಿಂದ ವಿಷ್ಣು ಚಿಂತನೆ ಹಿತದಿ ಮನದಿ ನೀ
ನಿಷ್ಠೆಯುಳ್ಳವನು ಆಗಿ ಕೃಷ್ಣ ಹೊನ್ನ ವಿಠ್ಠಲರಾಯನಾ ೩

 

೧೩೪
————–ಹರಿಯೇ ಪ
ಮುನ್ನ ಘಣಿಯಲಿ ಬರದದಕಿನ್ನಾ ಅತಿಶಯೇನುಂಟು
ನಿನ್ನ ಚಿತ್ತಕೆ ಬಂದಂತೆ ಮಾಡುವುದೆಲ್ಲಾ ೧
ಎನ್ನ ದುಷ್ಕರ್ಮಯೋಗ ಬೆನ್ಹತ್ತಿ ಕಾಡುತಿರಲು
ಇನ್ನೀ ಅನುಭವ—–ನಾ——ನಿರುವದೆಲ್ಲಾ೨
ಕರ್ಮಕೆ ಸಾಕ್ಷಿ ಭೂತ ಕಾರಣ ಕರ್ತನಾಗಿ
ಧರ್ಮವೇ ಎನ್ನ ದುಷ್ಕರ್ಮ ಇದ್ದಾನಂ—ನೆಲ್ಲಾ ೩
ಎಷ್ಟು ಹೇಳಲಿ ಎನ್ನದೃಷ್ಟವ ಕಳಿಯಲಾಪೆ
ಸೃಷ್ಟಿರಕ್ಷನಾದ ಕೃಷ್ಣಾಮೂರುತಿ ದೇವಾ ೪
ಬಲ್ಲೀದ ನೀನು ಎಲ್ಲಿ ಬಡವನು ನಾನು ಎಲ್ಲಿ
ನಲ್ಲ “ಹೆನ್ನವಿಠ್ಠಲ” ಮಹಾನುಭಾವ ೫

 

೧೦೦
ಯಾಕೆ ಚಿಂತಿಯ ಮಾಡಿ ಹೆದರುತಿ ಮನವೆ
ಲೋಕ ನಾಯಕ ಲಕ್ಷ್ಮೀಲೋಲನಾ ಸ್ಮರಣೆ ಬಿಟ್ಟೂ ಪ
ವಿದಿ ಮುನ್ನೆ ಬರದಿಷ್ಟಾ ಯಡಿಯಾತಪ್ಪಾದು
ತುದಿಮೊದಲಿಂದಾ ಮಾಡಿದ ದೋಷವೆಲ್ಲಾ
ಬೆದರಿಸಿದರೆ ಅದು ಬಿಡಲು ಬಲ್ಲುದೆ ಕೇಳೂ
ಪದಮ ನಾಭನ ದಿವ್ಯ ಪಾದ ಭಜನಿಯ ಬಿಟ್ಟು ೧
ನಾನಾಪರಿಯ ಮನಸೂ ನಟಿಸುವದಲ್ಲಾದೆ
ಏನು ಎಲ್ಲವೂ ವ್ಯರ್ಥಾ ವೇದನೆ ನಿಂದೆ
ನೀನು ಮಾಡಿದಾ ಫಲ ನಿನಗುಣಿ ಸದೆ ಬಿಡದೂ
ಮಾನವಾಧೀಶನಂಘ್ರಿ ಧ್ಯಾನವೆಂಬುದು ಬಿಟ್ಟು ೨
ಸಕಲಕೆ ಕರ್ತನಾಗಿ ಸರ್ವೋತ್ತಮನಿರಲು
ಭಕುತಿ ಭಾವನೆಯಿಂದ ಭಜಿಸಾದೆ ನಿ
ವಿಕಟಯೋಚನೆಯಿಂದ ಏನುಫಲವು ಇಲ್ಲಾ
ನಿಕರ ‘ಹೊನ್ನೆಯ ವಿಠ್ಠಲನ ‘ ನಾಮೋಪಾಸನೆ ಬಿಟ್ಟು ೩

 

೧೦೧
ಯಾಕೆ ದಯವುಬಾರದು ಗೋಪಾಲಕೃಷ್ಣಾ ಪ
ಯಾಕೆ ಬಾರದು ಲೋಕನಾಯಕನೆ ಶ್ರೀಕರ
ಕರುಣನಾದ ದೇವ ಅ.ಪ
ಎಂದೆಂದೂ ನಿನ್ನ ಪೊಗಳೂವಾ ಭಕ್ತರ
ಬಿಡದಾನಂದಾದಿ ಇನ್ನು
ಪೊರೆವಾ ಬಿರುದೆಲ್ಲೋ ಇಂದಿರೆ ರಮಣ ೧
ನಾನಾತಿ ಕಷ್ಟದಿಂದಲಿ ಬಳಲೂತ
ನಿನ್ನ ಧ್ಯಾನಾವೇಗತಿ ಎನ್ನುತ
ನೀ ಎಂದೆಂದಿಗಾಪ್ತನು ಛಲದಾನಿ ಇರುವದು ನಿನಗೆ ಎನ್ನ
ಬಿಡವೊ ಕಾರಣೊಂದರಿಯೆನು ಗಾನಲೋಲ
ದಿವ್ಯದಾನಿಗಳರಸ ೨
ಭುಜಗ ಶಯನ ಹರಿಯೆ ಪೂರ್ಣಾನಂದ
ತ್ರಿಜಗವಂದಿತಧೊರಿಯೆ
ಸದ್ಗುಣಶೀಲ ಸುಜನರ ಭಾಗ್ಯನಿಧಿಯೆ ಜಲದೊಳು ಯಿ —–
ಜನಕಾಳು ——‘ಹೊನ್ನ ವಿಠ್ಠಲನೆ ‘ ಅಜಭವ
ಸುರನುತ—–ತ ಪರಾಕ್ರಮ ೩

 

೧೦೨
ಯಾಕೆ ನಿನಗೆ ಮನವೆ ವ್ಯಥೆಯು ಎಷ್ಟು
ಲೋಕನಾಯಕ ಶ್ರೀಲೋಲ ಲಕ್ಷ್ಮಯ್ಯಾ
ರಮಣ ಶ್ರೀಕಪರೇಯಾ ನಿನ್ನನ್ನೇ ಸ್ಮರಿಸುವುದು ಬಿಟ್ಟೂ ಪ
ಹಲವು ಹಂಬಲಿಸಿದರೇನು ಫಲಾ ವ್ಯರ್ಥಾ
ಬಳಲುವದೊಂದೇ ಅಲ್ಲದೆ ಬಾಧೆಯಿಂದಾ
ಅಜ ಬ್ರಹ್ಮಾಂಬರದ ವರ—–ಆರಾರಿಗ್ವಶನಲ್ಲಾ
ನಳಿನಾನಾಭನಾ ದಿವ್ಯನಾಮಾ ಭಜನೆಯ ತೊರೆದು ೧
ಹರಿಶ್ಚಂದ್ರಾ ನಳರಾಜಾ——-ದಶರಥ ಮೊದಲು
ಪುರಾಕೃತ ಕರ್ಮಾದಿ ಭಂಗಾ ಬಡಲಿಲ್ಲೇನೋ
ಅರಿತೂನೀ ಹೃದಯಾದಿ ಅನ್ಯಚಿಂತನೆ ಹಿಡಿದು
ಪರಮಾತ್ಮ ಪರಬ್ರಹ್ಮನ ಪಾದಧ್ಯಾನವೇ ಬಿಟ್ಟು ೨
ಧರೆಯೊಳಾಧಿಕನಾದ ಧೋರಿ ‘ಹೊನ್ನವಿಠಲನ’ ಚರಣವೇ
ಗತಿಯೆಂದು ಚಿತ್ತಾದಲೆ ಸ್ಥಿರವಾಗಿ ಪೂಜಿಸಿ
ಸೇವೆಯನೆ ಮಾಡಿ ಪರಮಹರುಷದಿಂದ
ಪಡೆಯಾದೆ ಹರಿಕರುಣಾ ೩

 

೧೦೩
ಯಾಕೋ ಕೋಪ ಕೃಷ್ಣಾ ನಿನಗೆ ಎನ್ನ ಮೇಲೆ
ಎಲ್ಲ ಸಾಕಬೇಕು ಎಂಬ ನಿಜವಾ ಪ
ಲೋಕನಾಯಕನಾದ ಲಕ್ಷ್ಮೀಲೋಲಗೋವಿಂದ
ಅನೇಕ ಅವತಾರಗಳೆತ್ತಿದ ಹರಿಯೆ ಮುಕುಂದಾ
——-ಜನರೊಳಗಿನ್ನು ಹೀನನ ಮಾಡಿ ಬಿಡಿಸಿ
ಸಾಕಲಾರದೆ ಹಿಂದಕೆ ಸರಿದರೆ
—————————— ೧
ತಂದೆತಾಯಿ ಬಂಧು ಬಳಗ ದೈವ ನೀನೆಂದು
ಇನ್ನು ಎಂದೆಂದು ಭಕ್ತರ ಸಲಹೊ
—– ಇಂದು ನಿನ್ನ ದ್ವಂದ್ವ ಚರಣಾನಂದದಿಂದ
ಹೊಂದಿದವನು ಕಂದನೆಂದು———
ಅಂದದಿಂದ ಪೊರೆಯದಿರುವದು ಹೇಗೊ ೨
ಅಷ್ಟು ಜಗಕಾಧ್ಯಕ್ಷನಾದ ಆದಿಮೂರುತಿ
ನಿಷ್ಟ ನೀನು ಶಿಷ್ಟ ಜನರ ಹೃದಯದಿರುತಿ
ಇಷ್ಟು ಕಷ್ಟ ಬಡುತ ನಾನು
ಇಷ್ಟದಿಂದ ಮೊರೆಯ ಹೊಕ್ಕರೆಸೃಷ್ಟಿಗೊಡೆಯನಾದ ‘ಹೊನ್ನವಿಠ್ಠಲ’ ನಿನ್ನ ಇಷ್ಟ ಇಲ್ಲದೆಲ್ಲಾ ೩

 

೧೬೩
ಯಾರಂದರೇನು ಫಲವದೆ ನಮ್ಮ ದೃಷ್ಟ
ಈ ರೀತಿ ಕಾಡಲು ಬರಿದೆ ಪ
ಯಕ್ಷ ಕಿನ್ನರಾದಿವಂದಿತ ಪರಮಾತ್ಮ ಜಲ-
ಜಾಕ್ಷ ಕೃಷ್ಣ ಮಾಧವಾಚ್ಯುತ
ಪಕ್ಷಿವಾಹನ ಪಾಲಿಸು ಕರಿವರದ ಬೇಗನೆ ನೀನು
ಪೇಕ್ಷಿಸದೆ ರಕ್ಷಿಸೆನ್ನ ೧
ಇನ ಶಶಿ ಕುಜರಾಹು ಗುರುಬಲ ಇದರ ಮೇಲೆ
ಶನಿ ಸೌಮ್ಯ ಕೇತು ಶುಕ್ರ ಗ್ರಹಗಳ
ಘನದಿ ಸುಫಲ ಲೇಶಕಾಣದೆ ಬಳಲುವ ವೇಳೆ
ಅನಿಮಿಷರೊಡೆಯನ ಮೊರೆ ಹೋಗದೆ ೨
ಪರಮ ಪುರುಷ ಪತಿತ ಪಾವನ
ಬಿರುದುಳ್ಳ ಹೆನ್ನೆಪುರನಿಲಯ ನರಹರಿ ಚರಣ
ಸ್ಮರಣೆ ಹರುಷದಿಂದ ನಿರುತ ಮನದೊಳಾವಾಗ
ಪರರ ನಿಂದೆಗೊಳಗಾಗಿ ವೃಥಾ ೩

 

೧೦೪
——ಯು ಮಾಡಿದರು ಏನು ಹರಿಯೆ
ಸ್ಪಷ್ಟ ನಿಮ್ಮ ಹರುಷರನು ಮುಟ್ಟುವ ಪರಿ—–ರದೆ ಪ
ಹಗಳಿರಳು ಬಗೆ ಬಗೆಯ ಹಲವು ಯೋಚನೆಮಾಡಿ
ಸೊಗಸಾಗಿ ದೇಹವನು ಸಲುವದೊಂದೆ
ನಿಗಮಗೋಚರ ನಿಮ್ಮ ನಾಮಧ್ಯಾನವು ತೊರೆದು
ಭುಗಲಿಗೆ ಒಳಗಾಗಿ ಪರಿಪರಿ ವಿಧದಿಂದಾ ೧
ಪರರ ಸುಖವನು ಕಂಡು ಇರುಳು—-ಮನದಿ
ನರಳುತ ನೀ ಎನಗೆ ಇನ್ನಿಲ್ಲವೆಂದು
ಹೊರಳಿ ಹೊರಳಿ ದು:ಖ ಹೊಂದಿ
ಬಿಡುವುದ ಒಂದೇ ಕರುಣಾ——- ೨
ಕರುಣೆ ತೋರಿ ತೋರದೆ ಇನ್ನು
ದುರುಳ ಬುದ್ಧಿಯ ಮಾಡಿ ಮೀರಿ
ಒಬ್ಬರ ————-
ಮಾಡಿಬಾಳು——— ೩
ಫಣೆಯಲ್ಲಿ ಬರೆದಂಥ ಬರಹವು ತಪ್ಪದಿನ್ನು
ನಾನು ಅಪೇಕ್ಷೆಗೆ ಒಳಗಾಗಿ ಬಹಳ—–
—ಲ್ಲದೆ ಉದರ ಧ್ಯಾಸಕ್ಕೆ ಒಳಗಾಗಿ
ಮನಸು ನಿಲ್ಲದೊ ಮರಳಿ ಮರುಳುತಲಿ ಇನ್ನೂ ೪
ಇಂಥ ಪರಿ—–ಗೆ ಒಳಗಾಗಿ
ಭ್ರಾಂತನಾಗಿ ನಿಮ್ಮ ಚರಣ ಭಜನೆ ಮರೆದು
ಸಂತತಯಿರುವುದು ವಂದೇ ನಾಥ —–
ಕಂತುಪಿತನಾಥ ಶ್ರೀ ಘನಹೆನ್ನವಿಠ್ಠಲಾ ೫

 

೧೬
ರಂಗ ಬಂದನೋ ಮೋಹನಾಂಗ ಬಂದನೋ
ರಂಗ ಬಂದ ನೋಡಿ ಹೆನ್ನೆರಂಗ ದೇವೋತ್ತುಂಗ ಕೃಷ್ಣ ಪ
ಭೋಗಿಶಯನ ಭವರೋಗಹರಣ ನಿಗಮಾ
ಗಮಗನುತ ಶರಣಾಗತ ಪೋಷ ೧
ಮಂದರಧರ ಮುಚುಕುಂದವರದ
ರಾಕೇಂದುವದನ ಗೋವಿಂದ ಮುಕುಂದ ೨
ತಾಪಸವಂದಿತ ಶ್ರೀಪತಿ ಘನ
ಹೆನ್ನೆಪುರ ನರಹರಿ ಭೂಪರಿಪಾಲನ ೩

 

೧೦೫
ರಂಗ ಬಾರೈಯ್ಯ ದೇವೋತ್ತುಂಗ ದಯಾಂತರಂಗ |
ಅಂಗಜನಯ್ಯ ನರಶಿಂಗಾ ಸಾರಸಾಪಾಂಗ ||
ಮಂಗಳ ಮಹಿಮಾ ವಿಹಂಗ
ಘೋರ ಭವಭಂಗರಹಿತ ರಣರಂಗ ವಿಜಯ ||
ಮುನಿಪುಂಗವ ಸನ್ನುತ ಶೃಂಗಾರಾಂಗ ರಮಾಂಗನಾಸಂಗ ಪ
ಶತಕೋಟಿ ಭಾಸ್ಕರ ಯುತತೇಜ ಮರುತಾಂತರ್ಗತ |
ಹರಿಮೃದು ಭಾಷಣ | ಕೌಸ್ತು ಭಾಭರಣ |
ಜಿತದಿತಿಸುತಬಾಲ | ಶ್ರಿತಭಕ್ತ ಮಂದಾರ |
ಪತಿತ ಪಾವನ ಶ್ರೀರಾಮ ಪಟ್ಟಾಭಿರಾಮ |
ಅತುಲಿತ ಚರಿತ ಕಾಮಿತ ಫಲದಾಯಕ |
ಶತ ಧೃತಿ ಜನಕಾಚ್ಯುತ ಸರ್ವೋತ್ತಮ |
ಸತತವು ನೀನೇ ಗತಿಯೆಂದೆನುತಲಿ |
ಹಿತದಿ ನಾನು ನಿಮ್ಮ ಸ್ತುತಿಸುತಲಿರುವೆನು ೧
ನಂದನಂದನ ವೇಣುನಾದ ವಿನೋದ
ಜಗದ್ವಂದ್ಯ ಶ್ರೀವತ್ಸಲಾಂಛನ ವಾಸುಕಿಶಯನ |
ಮಂದಹಾಸ ಮುಚುಕುಂದವರದ ರಾಕೇಂದುವದನ |
ಗೋವಿಂದ ಇಂದಿರಾನಂದ
ಸುಂದರ ವಿಗ್ರಹ ಸಿಂಧು ಗಂಭೀರಾ |
ಮುಕುಂದ ಧರಣೀಧರ ಕುಂದರದನ
ಕಾಳಿಂದಿರಮಣ ಗಜೇಂದ್ರನ ಸಲಹಿದ
ಛೆಂದದೆನ್ನ ಮೊರೆಯಿಂದಿಗೆ ಲಾಲಿಸೊ
ಪರಮಾತ್ಮ ಸರಸಿಚೋದರ ಸಕಲಾಣುರೇಣು ಪರಿಪೂರ್ಣ ೨
ಸಾರ್ವಭೌಮ ಭಾಸುರನಾಮ
ಸ್ಥಿರ ಕೀರ್ತಿಸಾಂದ್ರ ವಿಶ್ವಂಭರ ಪಾರಿಜಾತಪಹರಣ
ನಿರುಪಮಧೀರ
ಶರಣಾಗತ ರಕ್ಷಣ ಮಧುಸೂದನ
ಸುರವರ ಪೂಜಿತ ಚರಣಾಂಭೋರುಹ
ಸುರುಚಿರ ಮುರನರಕಾಂತಕ ಹೆನ್ನೆಯ ಪುರನಿಲಯ
ಕೃಪಾಕಾರ ಹರುಷದಲಿ ೩

 

೧೬೪
ರಂಗನಾಯಕ—-ತ್ತುಂಗನಾದ ಧೊರಿಯೆ ಪ
ಮೂರುತಿ ಮಹಾಮಹಿಮನಾದ
ಅಂಗಜ ಜನಕ ಕೃಪಾಂಗ ದೇವೋತ್ತುಂಗ ಅ.ಪ
ಸಿಂಧು ಶಯನ ದೇವ
ಭಕುತರ ಬಂಧು ಮಹಾನುಭಾವ
ಇಂದಿರಾ ಹೃದಯ ಧೀರಾ
ಈ ಜನರಿಗಾನಂದನಾಗಿ ತೋರಾ
ಮಂದರಧರ ಮುಕುಂದ ಮಾಧವ
ಸುಂದರಾಂಗ ಸುಜನ ಪೋಷಕ
ಕಂದನ ಸಲಹಿದ ಕರುಣಸಾಗರ
ಇಂದು ನಿಮ್ಮ ಚರಣ ದ್ವಂದ್ವಗಳ ತೋರು ೧
ವೆಂಕಟಗಿರಿವಾಸ—
ಕಿಂಕರ ನಾ ಅಣುದಾಸ
ಶಂಕೆಯಿಲ್ಲದ ದೋಷಾ
ಮಾಡಿದಂಥ—-
ಸಂಕಟಗಳೆಂಬೀ—-
ಕರಗಳೆನ್ನ
ಇರಲೂ ಕೊಂಕುಗಳ ಪರಿಹರಿಸ
—-ದರ ಪರಮಪಾವನಾ ೨
ವೇಣುಗಾನ ವಿನೋದಾ
ನೀಹಿತ–ಮೂಲನಾದ
ಶ್ರೀನಿವಾಸ ಗೋವಿಂದಾ
ಶ್ರೀತಜನ ರಕ್ಷಣಾನಂದ ನಿಲಯನಾದ
ಭಾನುಕೋಟಿ ಪ್ರಕಾಶದೇವ—-
ಸೂಸುತಿರುವ ದಾನವಾಂತಕ
‘ಹೆನ್ನೆ ವಿಠ್ಠಲ’ ಧೇನುರಕ್ಷಕ ದೀನಪೋಷಕ ೩

 

೧೦೬
ರಂಗಯ್ಯ ನಿನಗ್ಯಾತಕೋ |
ಯಾತಕ್ಕೆ ಒಬ್ಬರಗೊಡವಿ ಇಂಥಾ ಮಾತುಗಳ
ಹೇಳುವದು ಥರವೆ
ಅಲ್ಲಾ ಪೂತನಿ ಮೊಲೆ ಉಂಡ ಪುಂಡಗೋವಿಂದ ಪ
ನೆರೆಹೊರೆ ಮನಿಗಳಿಗ್ಹೋಗಿ |
ಅವರ ನೆಲವಿಗಳಿಗೆ ನೀನು ಹುದಗಿ |
ಮೇಲಿರುವಂಥ ಪಾಲು ಬೆಣ್ಣೆಗಾಗಿ |
ಎರಡು ಕರದಿತ್ವರದಿ ನೀನು ಬಾಗಿ |
ಇಂಥ ಪರಿಚೇಷ್ಟಿಗಳಲ್ಲಿ ಬಡವರಾಲಯ ಪೊಕ್ಕು |
ದುರುಳತನವ ಮಾಡಿ ದೂರುತರುವರೇನೊ ೧
ಮಂದಗಮನಿಯಳ ಕರವನ್ನು |
ಹಿಡಿದು ಮಾನಭಂಗವ ಮಾಡುವದೇನು |
ಇದು ಚಂದವೆ ಬುದ್ಧಿ ನಿಮಗಿನ್ನು |
ಇಂಥಾ ಚಾಳಕತನ ಬಿಡಿಸುವೆನು |
ಶ್ರೀ ಮಂದರೋದ್ಹರ ಮಹಾಮಹಿಮ ಪ್ರಕಾಶನೆ
ನಂದದಿ—————– ೨
ಧರೆಯೊಳ್ಹೆನ್ನೆಯ ಪುರವಾಸ |
ಧೊರಿ ಹೆನ್ನೆ ವಿಠಲನ ಈಶ |
ಭಕ್ತರನ್ನ ಪೊರೆವ ಜಗದೀಶ |
ತಾರಕನಾದ ಸರ್ವೇಶ |
ಇನ್ನು ಪರಿಯಾದದಲ್ಲಿ ಮೊರೆಯದ ಕಾರಣ
ನೀನಗೀಗ ಚನ್ನಾಗಿ ಬುದ್ಧಿಯಪೇಳ್ವೆನು೩

 

೧೬೫
ರಕ್ಷಿಸುವ ತಾಯಿತಂದೆ ರಘುಕುಲೋತ್ತಮ ರಾಮಚಂದ್ರ
ಅಕ್ಷಯ ವಿತ್ತು ಭಕ್ತಜನರುಪೇಕ್ಷೆ ಮಾಡದೆ ಪ
ಕಂದನೆಂದು ಖಳರ ಅನುಜರಂದದಿ ಕಾಯ್ದದೇವ
ಸಿಂಧುಶಯನ ಶ್ರೀನಿವಾಸ ಶ್ರೀಧರಾಚ್ಯುತಾ
ಇಂದು ಮುಖಿಯ ಸೀರಿ ಸೆರಗು ಹಿಡಿದು
ಎಳಿವೊ ವ್ಯಾಳ್ಯದಲ್ಲಿ
ಬಂದು ಮಾನ ರಕ್ಷಿಸಿದಂಥಾ ಪರಮಪುರುಷ ಭಕ್ತವತ್ಸಲ ೧
ಪೊರೆಯೊಯೆಂದು ಮೊರೆಯ ಹೊಕ್ಕ ನರನ
ಮತ್ತ ಸಲಹಬೇಕಂತ
ಬಿರುದುವುಳ್ಳ ಧೀರ ಭಾನುಕೋಟಿತೇಜನಾ
ಕರಿಯು ಕರಿಯೋ ಕಾಲದಲ್ಲಿ ಗರುಡನೇರಿ ಬಂದು
ಪೊರೆದ ಕರುಣಾಸಾಗರ——ನಾಮನಯ್ಯನಾದ ದೀನಾ ೨
ಅಂದು ಇಂದು ತನ್ನ ಬಿಡದೆ ಹೊಂದಿ
ಇರುವರೆಲ್ಲಾ ಅಂದು —
ಕರುಣಾವಿಟ್ಟು ಅತಿಶಯಾದಲಿ ಕುಂದು ಇಲ್ಲದೆ ಪಾಲಿಸು
ಸ್ವಚ್ಛಂದದಿಂದ ಚ್ಯುತಿಯಿಲ್ಲದೆ ಇಂದಿರೇಶ ‘ಹೊನ್ನವಿಠ್ಠಲ ‘
ವಿಶ್ವಕರ್ತಾ ಬುಧವಂದ್ಯಾ ೩

 

೧೦೮
ರಕ್ಷಿಸೋಯನ್ನ ರಕ್ಷಿಸೋ
ರಕ್ಷಿಸೋ ಬೇಗ ಉಪೇಕ್ಷಿಸದಲೆ ಜಲ
ಜಾಕ್ಷ ಯನ್ನ ಮೊರೆ ಪಕ್ಷಿವಾಹನ ದೊರೆ ಪ
ವಾರಿಧಿ ಮತ್ಸ್ಯಾವತಾರದಿ ಧರಿಸಿ ಪೊಕ್ಕು
ಘೋರದೈತ್ಯನ ಕೊಂದು ಇನ್ನು
ಚಾರು ಚರಿತ ವಿಸ್ತಾರ ಶೃತಿಗಳನು
ವಾರಿಜಾಸನಗಿತ್ತ ವರದ ಜಗನ್ನಾಥ ೧
ವರಕೂರ್ಮನಾಗಿ ಮಂದರಗಿರಿ ಪೊತ್ತು
ನಿರ್ಜರರಿಗೆ ಸುಧೆಯನುಣಿಸಿ ಹರುಷದಲಿ
ಕರುಣಿಸೋಯಂದರೆ ಕಠಿಣತ್ವ ವಹಿಸುವರೇ
ಪರಮ ಪುರುಷ ನೀನು ಭಜಕರ ಕಾಮಧೇನು ೨
ಧರೆಯ ಕದ್ದು ಒಯ್ದವನ ಕೋಪದಿ
ಘನತರ ಕೋರೆಯಲಿ ಸೆಳದೆ ದನುಜಹರ
ವರಾಹನಾದ ಶ್ರೀ ವತ್ಸಲಾಂಛನ ದೇವ
ಶರಣಜನ ಮಂದಾರ ಶರನಿಧಿ ಗಂಭೀರ ೩
ಗರುಡಗಮನ ಶ್ರೀ ಹರಿ ಸರ್ವೋತ್ತಮನೆಂಬ
ತರುಳನ ತಂದೆಯ ತಾಮಸದಿ
ಪರಿಪರಿಹಿಂಸೆಯ ಪಡಿಸುತಿರಲು
ನರಹರಿ ರೂಪತೋರಿ ಪ್ರಹ್ಲಾದಗೊಲಿದ ಧೊರೆ ೪
ಬಲಿಯದಾನವು ಬೇಡಿ ಬ್ರಹ್ಮಾಂಡ ಭಾಂಡವು
ಅಳೆದು ಮೂರು ಪಾದದೊಳಗೆ ಮಾಡಿ
ತುಳಿದವನ ಪಾತಾಳಕಿಳಿಯಲು ವಾಮನ
ಬಲಭೇದಿ ಸನ್ನತ ಪಾಲಿಸೋ ಪ್ರಖ್ಯಾತ ೫
ಪರಶುರಾಮ ಬಾಹು ಬಲದಿ ಸಕಲ
ರಾಜರನೆಲ್ಲ ಗೆದ್ದು ಸುಸ್ಥಿರ ಮೂರ್ತಿ
ಧುರದಿಂದ ಭೂಮಿ ಭೂಸುರರಿಗೇ ಧಾರೆಯ
ನೆರೆದ ಶ್ರೀಮದನಂತ ನಿರತದಿ ಭಗವಂತ ೬
ಅನಿಮಿಷರೊಡೆಯ ಶರಣು ಶರಣೆನುತ
ರಾವಣನನು ಜನು ವಿಭೀಷಣನು ಬರಲು
ಘನದಿ ಪಂಕ್ತಿ ಕಂಧರನ ಜಯಿಸಿ ಲಂ-
ಕೇಶನೆನಿಸಿದೆ ಭಕ್ತನ ಇನಕುಲ ಪಾವನ ೭
ಬಲದು:ಶಾಸನ ಸೀರಿಸೆಳಿಯೇ
ದ್ರೌಪದಿ ಮನದಲಿ ಕಾಮಿತಾರ್ಥ ಫಲದಾಯಕ
ನಳಿನಾಕ್ಷ ಈಗ ಮಾನವ ರಕ್ಷಿಸೆಂದು ಸ್ತುತಿಸಲು
ಪೊರೆದೆ ಹಲಧರಾನುಜ ಮುದದಿ ೮
ಅಂಗಜ ಪಿತ ತ್ರಿಪುರಾಂಗನೆಯರ ವ್ರತ
ಭಂಗಮಾಡಿದೆ ಹಿಂಗದಲೇ
ಮಂಗಳಮಹಿಮ ಕೃಪಾಂಗ ಗಂಗೆಯನು
ಅಂಗುಷ್ಠದಲಿ ಪಡೆದ ರಂಗ ಮುನಿನುತ ಪಾದ ೯
ಚಲುವ ಕುದುರೆಯನೇರಿ ಕಲ್ಕಿಕಯ್ಯೊಳು
ಥಳಥಳಿಪ ಖಂಡೆಯ ಪಿಡಿದು ಝಳಪಿಸುತ
ಕಲುಷಾತ್ಮರೆಲ್ಲರ ಖಂಡಿಸಿ ಧರ್ಮವು
ಪರಿಪಾಲನೆಮಾಳ್ಪ ಶ್ರೀ ಭೂದುರ್ಗಾಧಿಪಾ ೧೦
ಪಾವನಚರಿತ ಕೃಪಾವನ ರಾಶಿ
ಶ್ರೀ ದೇವಕೀಸುತ ‘ಹೆನ್ನೆಪುರೀಶ’
ದೀನ ದೇವೋತ್ತಮ ದೀನ ಬಾಂಧವ
ವೃಂದಾವನ ನಿಲಯಾನಂದ ಸುಂದರಕಾಯಾ ೧೧

 

೧೦೭
ರಕ್ಷೆಸೆನ್ನ ಈ ಕ್ಷಣದಲುಪೇಕ್ಷೆ ಮಾಡದೆ
ಪಕ್ಷಿವಾಹನ ಪರಮಪುರುಷ ಲಕ್ಷ್ಮಿನಾಯಕ ಪ
ಅಂದಂದಿಂದ ಕೈಯಹಿಡಿದು ಚಂದದಿಂದ ಎನ್ನಬಿಡದೆ
ಇಂದು ನಿನ್ನ ದ್ವಂದ್ವ ಚರಣಕ್ಹೊಂದಿದ ದಾಸನು ಎಂದು ೧
ಕಷ್ಟಿ ಇವನು ಎಂದು ಕರುಣ ದೃಷ್ಟಿಯನೆ ತೋರುಬೇಗ
ಸೃಷ್ಟಿಗೊಡೆಯ ನಾದ ಶ್ರೀ ಕೃಷ್ಣಮೂರುತಿ ನೀನೆ ಗತಿ ೨
ಹಿಂದು ಇಂದು ಮಾಡಿದಂಥದೆಂಥಾ ದೋಷವೊ ಹರಿಯೆ
ಇಂದು ಎನ್ನ ಬಾಧಿಸುವುದು ಏನು ಕಾರಣವೊ ಕೃಷ್ಣಾ ೩
ಸಜ್ಜನರ ರಕ್ಷಕ ದೇವ ಸರ್ವಜನರ ಪೋಷಕ ನೀನೆ
ದುರ್ಜನರ ಖಂಡಿಸಿದ ಮೂಜ್ಜಗ ಪಾಲಕ ನೀನೇ ಎಂದೂ ೪
ಪುಂಡರೀಕವರದ ಭೂಮಂಡಲಾಧಿಪತಿಯೆನಿಸಿ
ಕೊಂಡು ಜಗದಿ ಮರೆಯುತ್ತಿರುವ ಕೀರುತಿ
ಮಹಿಮವುಳ್ಳದೇವ ೫
ಭಕ್ತವತ್ಸಲ ಭಾವಜನಯ್ಯ ಭವ ವಿರಂಚಿ
ಸ್ತೋತ್ರ ಪ್ರೀಯಾ
ಮುಕ್ತಿದಾಯಕ ಮುನಿಗಳ ವಂದ್ಯಯುಕ್ತ ನೀ
ಪೊರೆಯದಲಿರುವದು ದೇವಾ ೬
ಗಂಗೆ ಜನಕ ಮಂಗಳಾಂಗ ಕರುಣಾಸಾಗರ ಘನಗಂಭೀರಾ
ರಂಗ ‘ಹೆನ್ನವಿಠಲ’ ಕೃಪಾಂಗ ದೇವೋತ್ತುಂಗ ಹರಿಯೆ೭

 

೧೮
ರಾಮ ರಮಣಾರಘು ಪ
ಸುಂದರವದನಾಸುರಮನಿ ಪಾಲಕ
ಮಂದರಧರ ಶ್ರೀ ಮಾಧವ ಕೃಷ್ಣ ಹರಿ ೧
ಕುಂಡಲೀಶ ಶಯನ ಕೋದಂಡಧರ ಘನ
ಮಂಡಲಾಧಿಪತಿ ಮಹಾಮಹಿಮ ರಘುಪತಿ ೨
ಶ್ರೀ ಜಗನ್ನಾಯ್ಕನೆ ಶ್ರೀತಜನಪೋಷಕ
ರಾಜಾಧಿರಾಜ ಮತ್ರ್ಯರಾಜನೆನಿಸಿಹ ೩
ವೆಂಕಟರಮಣ ಅಕಳಂಕ ಮಹಿಮ
ಪಂಕಜೋದ್ಭವನಯ್ಯಾ ಪರಮಭಕ್ತರ ಪ್ರಿಯ ೪
‘ಹೆನ್ನೆರಂಗ ‘ ಬಿಲವಾಸ ಹೆನ್ನ
ಚಿನ್ಮಯ ರೂಪ ಶ್ರೀ ಚಿತ್ತಜನಯ್ಯ ಭೂಪ ೫

 

೧೦೯
ರಾಮ ರಾಮ ರಾಮ ಎಂದು ಸ್ಮರಿಸೊ ನೀ ಮನಾ
ಪ್ರೇಮದಿಂದ ಜಾನಕಿಪತಿಯ ಅನುದಿನಾ ಪ
ಇಂದು ಶೇಖರ ವಂದ್ಯ ಗೋವಿಂದ ದೇವನಾ
ಮಂದರಾದ್ರಿ ಗಿರಿಯನೆತ್ತಿದ ಮಹಾಮಹಿಮನ
ಕಂದ ಕೂಗಲು ಕಂಬದಿ ಬಂದ ಕರುಣಾ ಸಾಗರನ
ಚಂದದಿಂದ ಚಲನೆಯಿಲ್ಲದೆ ಚೆಲುವ ಕೃಷ್ಣನಾ ೧
ಕುಲಸತಿಯ ಕುಚದಲ್ಲಿಟ್ಟ ಕೋಮಲಾಂಗನ
ಒಲಿದು ಧ್ರುವಗೆ ಪಟ್ಟವನಿತ್ತ ವಾರಿಜನಾಭಾನಾ
ಜಲದಿ ಬಂಧಿಸಿ ದೈತ್ಯರನ ಛೇದಿಸಿದಾತನಾ
ಸುಲಭದಿಂದ ಹೃದಯದಲ್ಲಿ ಸ್ತುತಿಸೊ ನೀ ಇನ್ನಾ ೨
ಸಿಂಧುಶಯನ ಶ್ರೀನಿವಾಸ ಸಕಲಕರ್ತನಾ
ನಂದದಿಂದ ಹೆನ್ನ ವಿಠ್ಠಲ ಇಂದಿರೇಶನ
ಹೊಂದಿ ಪಾದ ದ್ವಂದ್ವ ಭಜಿಸಿ ಹರುಷದಿ ಮನಾ
ಕುಂದುಯಿಲ್ಲದೆ ಕಾಯ್ವ ಭಾನುಕೋಟಿ ತೇಜನಾ ೩

 

೧೬೬
ರಾಮ ರಾಮ ರಾಮ ರಾಮಯೆಂದು
ರಾತ್ರಿ ಹಗಲು—ಪ್ರೇಮದಿಂದ
ಇಲ್ಲಿ ಬಂದು ಪ್ರತಿಗತಿ ಪಡಿಸಿಯಿಂದೂ ಪ
ಕಾಮಿತ ಫಲದಾಯಕನೆಂದೂ ಕಮಲಗರ್ಭನ ಪಿತನೀತೆಂದೂ
ಸ್ವಾಮಿ ರಕ್ಷಕನೆಂದೂ ನೇಮ ನಿತ್ಯ ಕರ್ಮದಿಂದ ೧
ಒಂದು ನಿಮಿಷ ಮರೆಯದೆಂದು ವಾಸುದೇವಾನಂದ ನೆಂದೂ
ಬಂಧು ಬಳಗ ಭಾಗ್ಯವೆಂದೂ ಛಂದ ನಿಮ್ಮ
ನಾಮ ನರೆ ತಂದೂ ೨
ಸುಂದರಾಂಗ ಸುಜನಾ ಪೋಷ ಸಿಂಧು
ಶಯನ ಶ್ರೀನಿವಾಸ
ಕುಂದು ಇಲ್ಲದೆ ಪೊರೆವಾ ದಾಸರಿಂದು
‘ಹೊನ್ನವಿಠ್ಠಲೇಶಾ’ ೩

 

೧೬೭
ರಾಮ ರಾಮ ರಾಮ ಶ್ರೀರಾಮನೆನ್ನಿರೊ
ಪ್ರೇಮದಿಂದ ಶ್ರೀ ಜಾನಕಿ ಪ್ರೇಮನನೆನೆಯಿರೊ ಪ
ಅಂದದಿಂದ ಈ ದಶರಥನಂದನೆಂದು —-
ಚಂದದಿಂದ ಚಲನೆಯಿಲ್ಲದೆ ಚಿತ್ತಸ್ವಸ್ಥದಿ
ಒಂದು ಘಳಿಗೆ ಕಾಲ ಕಳೆಯ
ಹೊಂದಿ ದೇವರ ಚರಣ ಕಮಲಾ
ನಂದ ಅರ್ಚಿಸುವ ಮಂದಿರದಿ ಭಜಿಸಿರೊ ೧
ಕಾಮನಯ್ಯನ ಕಡಲೊಳಾಳ್ದನ
ಕೂರ್ಮರೂಪ ವರಾಹನಾದನ ಸ್ವಾಮಿ ನರಹರಿ
ವಾಮನ ಪರಶುರಾಮನಾದನಾ
ರಾಮಕೃಷ್ನ ಬೌದ್ಧಕಲ್ಕಿ ನಾಮವುಳ್ಳ ನಾರಾಯಣನ
ನೇಮದಿಂದ ನಿತ್ಯದಲ್ಲಿ ನಾಮ ಸ್ಮರಿಸಿರೊ ೨
ಪಿತೃವಾಕ್ಯ ಪಾಲಿಸಿದವನು
ಸತತ ಭಕ್ತರ ಸಲಹುತಿಹನು
ಕ್ಷಿತಿಗೆ ಒಡೆಯನಾದ ದೇವನು ‘ಶ್ರೀ ಹೊನ್ನ ವಿಠ್ಠಲಾ’
ನತಿಶಯದಿಂದಲಿ ಹೃದಯನಂಬಿ ಇರುವ ನರರಿಗೆ——–ಸದ್ಗತಿಯ ತೋರುವನಧಿಕ ಸಂಪನ್ನ ೩

 

೧೭
ರಾಮ ರಾಮ ರಾಮ ಹರೇ ರಘೂ ಪ
ರಾಮ ಜಾನಕಿ ಪ್ರೇಮ ಕೃಪಾಂಬುಧಿ ಸ್ವಾಮಿ
ಪರಂಧಾಮ ಸಾರುಚಿವರದಾ ಅ.ಪ
ಪತಿತಪಾವನದೇವಾ ಸದ್ಭಕ್ತರ
ಸತತ ಬಿಡದೆ ಕಾಯುವಾ ಮಹಾನುಭಾವ-
ನತಿಶಯದಲಿ ಮನಹಿತದಲಿ ಅನುದಿನ
ಸ್ತುತಿಯನು ಮಾಡುವರಿಗೆ ಗತಿ ಕಾಣಿಸುವಂಥ ೧
ಅಂಡಜವಾಹನನೆ ಅನೇಕ ಭೂ
ಮಂಡಲ ನಾಳುವನೆ ಮಣಿಯ ಮುಕುಟಧರನೆ
ಪುಂಡರೀಕಾಕ್ಷ ಕೋದಂಡ ಪಾಣಿ ಉದ್ದಂಡ ರಕ್ಕಸರಳಿದ
ಚಂಡಪರಾಕ್ರಮಿ೨
ಪನ್ನಗಾದ್ರಿಯವಾಸಾ ಭಜಕರ ಪೋಷಾ ಶ್ರೀ
ಹೆನ್ನವಿಠ್ಠಲ ವೇಶಾ ಪರಮೋಲ್ಹಾಸಾ
ಚಿನ್ಮಯ ಮೂರುತಿ ಶ್ರೀ ಗೌರೀವರಪ್ರಿಯ
ಮನ್ನಿಸಿ ಸಲಹೊ ಎನ್ನ ಮದನ ಜನಕ ಹರೆ ೩

 

೧೧೧
ರಾಮರಾಮ ರಾಮ ರಾಮಸೀತಾರಾಮ
ದಶರಥನಂದನ ರಾಮ ದಯಮಾಡು ಶ್ರೀರಾಮ
ಪಶುಪತಿ ಪಾಲಕರಾಮ ಪಾಲಿಸೊಯನ್ನನು ಶ್ರೀರಾಮ ಪ
ಭಕ್ತವತ್ಸಲರಾಮ ಪಾಂಡವ ಪಕ್ಷಕರಾಮ
ಮುಕ್ತಿದಾಯಕ ರಾಮ ಮುನಿಗಣ ವಂದ್ಯರಾಮ
ಯುಕ್ತ ಜಗತ್ಕರ್ತರಾಮ ಇನಕೂಲಭೂಷಣರಾಮ
ಮೌಕ್ತಿಕ ಮಣಿಗಣರಾಮ ಮಾಣಿಕ್ಯ ಮುಕುಟಧರರಾಮ ೧
ಅಹಿಪಶಯನ ಶ್ರೀರಾಮ ಅನೇಕ ಚರಿತರಾಮ
ಅಹಲ್ಯಾರಕ್ಷಕ ರಾಮ ಅಮಿತ ಪರಾಕ್ರಮ ರಾಮ
ಇಹಪರ ಬಾಂಧವ ರಾಮ ವಿಶ್ವಕುಟುಂಬ ರಾಮ
ಮಹಾಮಹಿಮ ಶ್ರೀರಾಮ ಮನುಜಾಧಿಪತಿರಾಮ ೨
ಭೂತದಯಾಪರರಾಮ ಪುಣ್ಯಪುರುಷ ಶ್ರೀರಾಮ
ಪಾತಕ ಭಯಹರರಾಮ ಪತಿತ ಪಾವನ ರಾಮ
ನಾಥ ಜಗತ್ರಯರಾಮ ಅನಾಥ ರಕ್ಷಕರಾಮ
ಸೇತುಬಂಧನ ರಾಮ ಶಾಶ್ವತ ವಿಗ್ರಹರಾಮ ೩
ಮಂಗಳ ಮೂರುತಿ ರಾಮ ಮಧುಸೂದನ ಶ್ರೀರಾಮ
ಗಂಗಾಪಿತ ಹರಿರಾಮ ಗೌರೀವಲ್ಲಭರಾಮ
ಶೃಂಗಾರಾಂಗ ರಾಮಾಶ್ರಿತಜನ ಪೋಷಿತರಾಮ
ರಂಗನಾಯಕ ರಾಮ ರಾಜೀವ ನಯನ ರಾಮ ೪
ಸತ್ಯವಾಕ್ಯ ಶ್ರೀರಾಮ ಸದಾನಂದ ರಾಮ
ನಿತ್ಯನಿರಂಜನ ರಾಮ ನಿರ್ವಿಕಲ್ಪ ಶ್ರೀರಾಮ
ಭೃತ್ಯಕೋಟಿ ಸಂಘರಾಮ ಪುಣ್ಯಪ್ರಭಾವ ಶ್ರೀರಾಮ
ದೈತ್ಯಾಂತಕ ಶ್ರೀರಾಮ ತಾಟಕಮರ್ದನ ಶ್ರೀರಾಮ ೫
ಕಪಟನಟವರರಾಮ ನವನೀತ ಹೃದಯರಾಮ
ಕೋಟಿ ಭಾನುತೇಜ ರಾಮ ಕರುಣಸಾಗರ ರಾಮ
ಹಾಟಕಾಂಬರಧರ ರಾಮ ಆದಿನಾರಾಯಣ ರಾಮ
ಕೋಟಿಕಂದರ್ಪರೂಪ ರಾಮ ಕೋಮಲಗಾತ್ರರಾಮ ೬
ಯದುಕುಲಾಬ್ಧಿಚಂದ್ರ ರಾಮ ಯಶೋದಾನಂದನ ರಾಮ
ಮೃದು ಮಧು ಭಾಷಣರಾಮ ಮೂಲರೂಪ ಶ್ರೀರಾಮ
ಗದಧರ ವಂದ್ಯರಾಮ ಘನಗಂಭೀರರಾಮ
ಪದುಮನಾಭ ಶ್ರೀರಾಮ ಪರಮಕೃಪಾಳುರಾಮ ೭
ಸರಸಿಜಭವನುತರಾಮ ಸದ್ವಿಲಾಸ ಶ್ರೀರಾಮ
ಕರಿರಾಜ ಪಾಲಕ ರಾಮ ಕಲ್ಮಷ ಪರಿಹರರಾಮ
ಸುರಪತಿ ವಂದ್ಯರಾಮ ಸುಜನಾಂತರ್ಯಾಮಿ ರಾಮ
ಶರಧಿಶಯನ ಶ್ರೀರಾಮ ಶಾಙ್ರ್ಞಪಾಣಿ ರಾಮ ೮
ಕಮಲೋದರರಾಮ ಘನಗುಣಶಾಂತ ರಾಮ
ಕಮಲಜನಕ ರಾಮ ಕಿರೀಟಿ ಸಾರಥಿ ರಾಮ
ಕಮಲಮನೋಹರ ರಾಮ ಗರುಡವಾಹನರಾಮ
ಕಮಲಾಪ್ತ ಶಶಿನೇತ್ರ ಕರ್ಮಸಾಕ್ಷಿ ಭೂತರಾಮ ೯
ಈಶ ಜಗತ್ರಯ ರಾಮ ವಿಷ್ಣುಸರ್ವೋತ್ತಮ ರಾಮ
ವಾಸುದೇವ ಕೃಷ್ಣರಾಮ ವಸುದೇವ ನಂದನ ರಾಮ
ಭೂಸುರಪ್ರಿಯ ಶ್ರೀರಾಮ ಸರ್ವಪೂಜಿತರಾಮ
ವಸುಗಿರಿ ವಾಸರಾಮ ವೈಕುಂಠನಿಲಯರಾಮ ೧೦
ನೀಲಮೇಘವರ್ಣರಾಮ ನಿಖಿಲವೈಭವರಾಮ
ಬಾಲಗೋಪಾಲ ರಾಮ ಪುಂಡರೀಕ ವರದ ರಾಮ
ಫಾಲಲೋಚನ ಪ್ರಿಯರಾಮ ಪಾಂಡುರಂಗ ಶ್ರೀರಾಮ
ಕಾಲಿಯಾಮರ್ದನರಾಮ ದ್ವಾರಕಾವಾಸರಾಮ ೧೧
ವೇಣುನಾದ ಶ್ರೀರಾಮ ವೆಂಕಟರಮಣ ರಾಮ
ಗಾನಲೋಲ ಶ್ರೀ ರಾಮ ಕಂಬುಕಂಧರರಾಮ
ಮಾನಿತ ತ್ರಿಭುವನರಾಮ ಮಂದರಧರ ಶ್ರೀರಾಮ
ಧೇನು ಪಾಲಕ ರಾಮ ದೇವಾಧಿದೇವ ರಾಮ ೧೨
ಕುಂಭಿನೀಧವ ರಾಮ ಕುಶಲವ ಜನಕರಾಮ
ನಂಬಿದೆ ನಿನ್ನ ಪಾದರಾಮ ರಕ್ಷಿಸೋಬಿಡದಲೆ ರಾಮ
ಅಂಬರ ಧ್ರುವನಂತೆ ರಾಮ ಅಜಮಿಳನಂತೆ ರಾಮ
ಸ್ತಂಭದೊಳಗೆ ಬಂದ ರಾಮ ತರುಳನ
ಪೊರೆದಂಥ ರಾಮ ೧೩
ತಾಪತ್ರಯದಲಿ ರಾಮ ನಾತಪಿಸುತಿರುವೆ ರಾಮ
ಈ ಪರಿ ತಾಪವ ರಾಮ ಹೆದರಿಸಿ ಕಳೆಯೊ ರಾಮ
ಭೂಪ ನೀನಲ್ಲದೆ ರಾಮ ಭೂವಿಯೊಳಧಿಕ ನೀನಲ್ಲವೆರಾಮ
ಕಾಪಾಡುವ ಭಾರರಾಮ ಕರ್ತನು ನೀನೆ ರಾಮ ೧೪
ನಿಗಮಗೋಚರರಾಮ ನಿತ್ಯ ಕಲ್ಯಾಣರಾಮ
ಅಘನಾಶನ ಶ್ರೀರಾಮ ಅನಂತನಾಮರಾಮ
ಜಗದೊಳಧಿಕನಾದರಾಮ ಜಯ’ಹೆನ್ನೆವಿಠಲ’ ರಾಮ
ಮಗುವು ನಾನೊಂದರಿಯೆ ಶ್ರೀರಾಮ
ಮನ್ನಿಸಿ ಸಲಹೊರಾಮ ೧೫

 

೧೧೦
ರಾಮಾ ರಕ್ಷಿಸೋ ಎನ್ನ ಪ್ರೇಮಾ ಸಂಪೂರ್ಣಕಾಮಾ ಪ
ಸ್ವಾಮಿ ಜಗನ್ನಾಥ ಸರ್ವಾಂತರ್ಯಾಮಿ ರಾಮಿಯ ರಮಣ
ಶ್ರೀ ರಘುಕುಲಭೂಷಣ ಅ.ಪ
ಅಂಗಜ ಜನಕಯ್ಯ ಮೋಹನಾಂಗ ಜಗದಂತರಂಗ
ಶೃಂಗಾರ ಪರಿಮಳ ಭೂಷಿತಾಂಗಾ ಒಪ್ಪಿರುವೊ ರಂಗಾ
ಗಂಗೆಯ ಜನಕ ತುರಂಗನೇರಿದಾ ಮಂಗಳ ಮಹಿಮ
ಕುರಂಗಲೋಚನಾ ಅಂಗನೆಯರೆಡಬಲ ಸಂಗಡದಲಿ
ಮೋಹಂಗಳ ಮಾಡುತ ಶೃಂಗಾರದಲಿ
ರಂಗ ಮಂಟಪ ಮಧ್ಯರಂಗಲಿರುವ ರಾಮಂಗಾರ —
ಹೆನ್ನರಂಗನಾಯಕ ೧
ಚಂದದಿಂದಾದಿ ವೇಣು —–ನಂದದಿ ಮೋದ
ಮಂದಾರಧರ ಮಾಧವನಾದ ಗೋವಿಂದ ನಿ ನೋಡಾ
ಇಂದಿರೆರಮಣ ಮುಕುಂದ ಮಹಾನುಭಾವ
ಸಿಂಧು ಶಯನ ಮುನಿ
ವಂದಿತ ಚರಣಾರವಿಂದ ಭಜಿಸುವ ಕಂದನ ತೋರದಯ
ದಿಂದ ಪಾಲಿಸುವ ತಂದೆಯು ನೀನೆ ಎಂದು ತಿಳಿದು ಈ
ಅಂದದಲಿ ನೀನು ಬಂದು ನಿಮ್ಮ
ಪಾದ ಹೊಂದಿ ಭಜಿಸುವೆನು ೨
ಚಂಡಶಾಸನ ಬಿರುದಿನಾ ದೇವಾದಿದೇವ
ಮಂಡಲಾಧಿಪ ಮಹಾನುಭಾವ ಭಕ್ತರ ಕಾಯುವ
ಪುಂಡರೀಕ ವರದಂಡ—–ಕುಂಡಲಿಶಯನ ಕೋ
ದಂಡಧರ ಬಲೋದ್ದಂಡ ವಾನರದಂಡನೆ ಕೂಡಿಸಿ
ಪುಂಡ ರಕ್ಕಸರ ಹಿಂಡನೆ ಹಿಡಿದು ಮಂಡಿಗಳನು ಬಿಡದೆ
ಚಂಡಿಸಿದಂಥಾ ಗಂಡರಗಂಡ ‘ಶ್ರೀ ಹೆನ್ನೆವಿಠ್ಠಲಾ ‘ ೩

 

೧೧೨
ರೂಪನ ಗುಡಿನಿ¯ಯಾ ವೇಂಟಕರಾಯಾ
ರೂಪನ ಗುಡಿ ನಿಲಯಾ
ವ್ಯಾಪಕ ಜಗತ್ರಯ ಕಾಪಾಡುವ ಭಾರತರ್ಕನು ದಾಸರ ಪ
ದಂಡಿ ದಾನವಮರ್ದನ ಸಕಲಜಗ ಉ-
ದ್ದಂಡ ರಕ್ಷಕ ಪಾವನಾ ಚಂಡ ಪ್ರ-
ಚಂಡ ಮಾರ್ತಾಂಡ—-ದ್ಭವ
ಕುಂಡಲಿ ಶಯನ ಕೋದಂಡ ಪಾಣಿ ಹರಿ ೧
ಗಂಗಾಜನಕ ದೇವಾ ಸಕಲಮೋಹ-
ನಾಂಗನಾ ಪಡೆದನಾ ಶೃಂಗಾರದಲಿ ಕುಜ
ರಂಗ ಮಂಟಪದಲಿ ಮಂಗ
ಳಾಂಗಿಯ ಬಿಡದೆ ಮಡಗಿಸಿ ಇರುವಂಥಾ ೨
ಮಂದರಾದ್ರಿಯ ಧರಿಸಿ ಸುಜನರಿಗೆ ಆ-
ನಂದದಿ ಸುಧೆಯನುಣಿಸಿ
ಅಂದು ಭಕ್ತರ ಆನಂದದಿ ಸಲುಹಿದ
ತಂದೆ ‘ಹೊನ್ನ ವಿಠ್ಠಲ’ ದಯಮಾಡಿ ಸಲಹಯ್ಯಾ ೩

 

೨೭
ಲಂಕೆ ನಿರ್ಧಾಮ ಮಾಡಲು ಇಲ್ಲದೆ ಈ ಸೀತಾ
ಲಲನೆ ಕ್ಷೇಮವು ತರಲು ಶಂಕೆಯಿಲ್ಲದ
ಬಿರುದಾಂಕನ ಸೇವಕರು ಅಂಕರಲಿ
ಪೇಳಿರಲಧಿಕ ಬಲವಂತರೆಲ್ಲಾ ಪ
ಭೇದಿಸಿ ದೈತ್ಯರ ಹಿಡಿಯಲೊ ಆಪುರಿಸೇರಿ
ಹೊಡೆದು ಮಾರಿಯ ಮಾಡಲು
ದೃಢವು ಎನ್ನಯಮಾತುಬಿಡದೆ ಆರಾವಣನಾ
ಹೊಡೆದು ಹೆಡ ಮುಡಿ ಕಟ್ಟಿ —-ಲ್ಲಿ ತರಲು ಇಲ್ಲದೆ ೧
ವಾರಿಧಿ ಲಂಘಿಸಲು ಒಳಹೊಕ್ಕು
ದೈತ್ಯ ವಂಶವೇ ಭೇದಿಸಲೆ ಸಾರಿ
ಹೇಳುವೆ ಇನ್ನು ಸರಸಜ್ಞರೆಲ್ಲ ಕೇಳಿ ವಾರೆಲ್ಲ
ಎನ್ನ ಮಾತು ಒಂದೇ ನಿಮಿಷದಿ ಹೇಳಿನ್ನೂ ೨
ನಿಟ್ಟಾಗಿ ಒಳಹೋಗಲು ಹೋಗುತಲಿ
ನಗರಸುಟ್ಟು ಬೂದಿಯ ಮಾಡಲು
ಘಟ್ಟ್ಯಾಗಿ ಕೇಳಿರಿನ್ನು ಘನ ‘ಹೊನ್ನವಿಠ್ಠಲ ‘ನಾದ
ಧಿಟ್ಟ ಶ್ರೀರಾಮರ ಭಂಟ ಹನುಮಂತನಾನು ೩

 

೧ ಗಣೇಶ ಪ್ರಾರ್ಥನೆ

ವಂದಿಸುವೆ ನಾನಿಮ್ಮ ನನುದಿನ ವಂದಿಸುವೆ ಗಣನಾಥನೆ
ವಂದಿಸುವೆ ನಿಮ್ಮ ಚರಣ ಕಮಲವ
ವಂದೆ ಮಾನಸದಿಂದಲಿ ಪ
ಭುಜಗಭೂಷಣ ಪಾರ್ವತೀಶನ ಪುತ್ರನೆನಿಸಿದ ದೇವನೆ
ಅಜ ಹರ ಹರಿ ವರವ ಪಡೆದು
ಆದಿಪೂಜೆಯ ಗೊಂಬನೆ ೧
ಕಿರಿಯಡೊಳ್ಳಿನ ತೆರಿಯ ಘಮಕವು ಕೀಲು ಕಾಲು
ಮೇಲ್ ಮಾಡಿದನೆ
ಇರುವ ಜ್ಯೋತಿಗಳಂದದಿಂದಲಿ ನೋಡುತಿಹ
ಕೋಮಲಾಂಗನೇ ೨
ಬೇಡುತಿಹ ಭಕ್ತರಿಗೆ ವಿದ್ಯಾವೃಷ್ಟಿಯನು ಕೊಡುತಿರುವನೆ
ಪಾಡುವೆನು ನಾ ಬಿಡದಲನುದಿನ
ಪಾಲಿಸೆನಗೆ ಮತಿಯನು ೩
ಅಂಗಭೇದ ವಿನೋದನಾದನೆ ಆರುಮುಖದವನಣ್ಣನೆ
ಮಂಗಳಾಭಯ ವಿತ್ತು ಸಭೆಯೋಳ್
ಮಾನದಲಿ ಕಡೆ ಹಾಯಿಸು ೪
ಕೊರಳ ಮುತ್ತಿನ ಹಾರ ಹೊಳೆವನೆ
ಗುಳಗಿ ಗಡುಬಿನಪ್ರಿಯನೆ
ಕರುಣಾನಿಧಿ ‘ಹೆನ್ನೆವಿಠ್ಠಲನ’ ಪದ ಕಾಣುತಲಿ
ನಲಿಯುವವನೆ

 

೧೯
ವಂದೇ ಹಂ ಶ್ರೀವರ ಕರಿವರದಂ
ವೃಂದಾರಕನುತ ಸುಂದರಪಾದಂ ಪ
ಈಶ ಭಕ್ತ ಭವಪಾಶನಾಶ
ವಾಗೀಶ ಜನಕ ಲಕ್ಷ್ಮೀಶ ಪರೇಶ ೧
ರಾಮತ್ರಿಜಗದಭಿರಾಮ ನೀರದ
ಶ್ಯಾಮ ಸುರಾರಿಸ್ತೋಮ ವಿರಾಮ ೨
ಮಂಗಳ ಮಹಿಮ ವಿಹಂಗ ಗಮನಯದು
ಪುಂಗವ ‘ಹೆನ್ನೆರಂಗ ‘ ಕೃಪಾಂಗ ೩

 

೧೧೩
ವಾರಿಜನಯನ ಮುರಾರಿ
ಕೃಪೆಯನು ತೋರೋತ್ವರದಿ ಕಂಸಾರಿ ಪ
ಆಗಮ ಸನ್ನುತನೆ ನಾ ಭವಸಾಗರದೊಳು ಸಿಲ್ಕಿದೆನು
ಶ್ರೀ ಗರುಡಾಚಲ ಧಾಮ ಇದು ಪಾರಾಗುವ
ರೀತಿಕಾಣೆ ರಾಮ ೧
ಅರಿಷಡ್ವರ್ಗದಿ ಬಹಳ ನೊಂದೆನೋ
ದುರಿತವಿದೂರ ಗೋಪಾಲ
ಕರುಣಾಕರ ಮುದದಿಂದ ರಕ್ಷಿಸೊಪರಮ
ಪುರುಷ ಗೋವಿಂದ ೨
ಆಪಾದ್ಭಾಂಧವ ಇಂದು ಈಗ ಎನ್ನನು
ಕಾಪಾಡೋ ನೀನೆಂದು
ಶ್ರೀಪತಿ ನಿನ್ನಯ ಮೊರೆಯೆ ಹೊಕ್ಕೆನೊ
ಹೆನ್ನೆಪುರ ಪತಿ ಸಲಹಯ್ಯ ೩

 

೧೭೦
ವಾಸುದೇವ ವಾರಿಜಾಕ್ಷನಾ ಸ್ತುತಿಸು ಮನದಿ ಪ
ಸಾಸಿರನಾಮದೊಡೆಯ ಸಕಲಲೋಕಕರ್ತನಾದ
ಈಶ ಶ್ರೀನಿವಾಸ ಸುಜನ ಪೋಷಕ ಭಕ್ತವಿಲಾಸ ಅ.ಪ
ಪಂಕಜೋದರ ಪರಮ ಪಾವನ
ಸರ್ವಜಗವ ಬಿಂಕದಿಂದ ಪೊರೆವ ದೇವನಾ
ಶಂಕೆಯಿಲ್ಲದ ದನುಜ ಮರ್ದನನಾದ ತನ್ನ
ಕಿಂಕರರÀನು ಬಿಡದೆ ಕಾಯುವಾ
ವೆಂಕಟಾದ್ರಿ—-ದ ವೇಣುನಾದದಲಿ ಬುಧವಂದ್ಯ
ಶಂಕರಾದಿ ದೇವ ದೇವ ಶರಧಿಶಯನ ಶಾಶ್ವತನಾದ ೧
—–ಶ್ವ ರೂಪನಾ ಎಂದು ಎಂದಾನಂದ ದಿಂದ
ನಂಬಿ ಅನುದಿನ ಚಂದದಿಂದ —ಸನಾ |—-ಭವ
ಬಂಧಕವನೆ ಪರಿಹರಿಸುವನಾ ಕಂದ ಕೂಗಲು
ಕಂಭದಿಂದಾ ಬಂದ ನಾರಸಿಂಹನ
ಮಂದರಗಿರಿಯ ಪೊತ್ತ ಮಹಾಮಹಿಮನಾದ ಮೂರ್ತಿ ೨
———-ಮಹಾನುಭಾವ
ಕಂಡ ಮುನಿಗಳಂತರ್ಭಾವನಾ
ಕುಂಡಲೀಶ ಭೂಷಣ ಪ್ರೀಯನಾಕರ ಘನಾ
ಕೋದಂಡಧರ ಶ್ರೀರಾಮನಾದನಾ
ಪುಂಡಲೀಕ ವರದಹರಿ—–ತನಾದ ವೇದವೇದ್ಯ
ಅಂಡಜನ——–ಹರಿ ‘ಹೊನ್ನಯ್ಯ ವಿಠ್ಠಲ’ ನಾದ ೩

 

೧೧೪
ವಾಸುದೇವಯನ್ನ ಸಲಹೋ ವಾರಿಜಾಸನ
ಈಶವಾಸವಾರ್ಚಿತ ಚರಣ ವನಜೋದರ
ಭಾಸುರಾಂಗ ಕೋಟಿ ಪ್ರಭಾಕರ ಪ್ರಕಾಶ
ಮಂದಹಾಸ ಕಮಲಾಚಲನಿವಾಸ ಶ್ರೀ ಜಗದೀಶ ಪ
ತಾಪಸೋತ್ತಮ ಸತಿಗೆ ಕೋಪದಿಂದ ಪಾಷಾಣರೂಪವಾಗಿ
ಬಿಟ್ಡೆನುತ ಶಾಪಕೊಡಲು
ಕೋಪನಾಮಣಿ ಬಲು ಪ್ರಲಾಪಿಸುತ ಮನದಿ
ನಿಷ್ಪಾಪರರ ನುಡಿಯಂತೆ ಧರಿಯಲಿಬಿದ್ದಿರಲು
ಪಾಪರಹಿತ ನಿಮ್ಮ ಪಾದ ಸ್ಪರ್ಶಿಸಲಾಕ್ಷಣ
ಸೀತಾಪತಿಯ ಸೇವೆಯಿಂದ ಸುಂದರಿಯಾದಳು ತ್ವರದಿ ೧
ಪಾಪಗಳು ಮಾಡಿದವನಂತ್ಯ ಕಾಲದಲಿ ಸುತನ
ನಾರಗೆಂದು ಕರಿಯೇ ಗತಿ ತೋರಿದಿ ಹಿತದ
ಲಾಮರಾಮರೆಂಬ ನಿನ್ನ ಹರುಷದಲಿ ಪೊರೆದೆ ಕ್ಷಿತಿ
ನಾಥ ಹರಿ ಮಹೋನ್ನತ ಚರಿತನೆ ಪತಿತ
ಪಾವನ ಬಿರುದು ಪರಮಾತ್ಮ ನಿನಗಿರಲು ಸ್ತುತಿಸುವೆನು
ಗೋವಿಂದ ಶುಭಕರ ಶ್ರೀ ಮುಕುಂದ ೨
ಶರಣುಜನ ಮಂದಾರ ಶರಧಿ ಗಂಭೀರ
ಕುಂಜರವರದ ಹಾಟಕಾಂಬರ ಶೋಭಿತ
ಪುರುಷೋತ್ತಮಾನಂತ ಮುರವೈರಿ
ಮುರಲೀರವ ವಿನೋದ ಗರುಡಗಮನ
‘ವರ ಹೆನ್ನೆಪುರನಿಲಯ’ ಪರಮಪಾವನ ನೃಹರೆ
ಉರಗೇಂದ್ರಶಯನ ಮಂದರಧರ ಕೃಪಾಂಬುಧೆ೩

 

೧೧೫
ವಿಧ———- ಪ
ಹದಿನಾರು ಸಾವಿರ ಹೆಂಡರು ಸಾಲು —-
————————–
ಶರಣಾರ್ಥಿಗಳ——ನಿನ್ನ ಬಿರುದ
ಪರಮ ಕೃಪಾರಸ ತೋರದೇನೋ
ಅಲ್ಲ ಸೂಳುಗಳ(?) ಕಾಯುತ ನಿಂತೇನೋ
ಸಿರಿನಿನ್ನ ಕುಚದ —-
ಡಗಿಸಿ ಎರವು ಇಲ್ಲಿದೆ———ಮತಿಯಲಿ
ತಿರುಗುತ—–ದಿ ಪರಮ ಪುರುಷನು ಸುಖಿಭವನಗಳ’ ೧
ಅಷ್ಟಧರ್ಮಗಳ ಬಿಟ್ಟೆನೊ ಅಸುರರ ಬಾಧೆಗೆ ಅಂಜಿದೆನೊ
ಸೃಷ್ಟಿಗೆ ನೀ ಕರ್ತನಲ್ಲವೇನೊ ಶ್ರೀನಿಕೇತನ
ಕ್ರೋಧಗೊಂಡೆ ಏನೋ
ದುಷ್ಟನಾಗಿ ಪರೇಷ್ಟರ ಮುನಿಯಲ್ಲಿಂಬಿಟ್ಟ
ಮೊಸರು ಬೆಣ್ಣೆಯಷ್ಟಿಲ್ಲ
—–ಬರುವನ ಕೂಡಿಕೊಂಡೆಲ್ಲರು——ಹಿಡಿದು ಕಟ್ಟಿ
ಹಾಕಿದರೇನೊ ೨
ಅಂತರಂಗಿಗಳ ಅರಸರತಿ ಅನಂತ
ಮಹಿಮನಾದ—-ತ್ತಿಗಳೆಲ್ಲ
ನೀಕ—-ಟರಲೆ ಬೆತ್ತಕೆ ಯಾಕೋನೀ
ತರವಲ್ಲೆ ಪಂಥಗಳಾಡುತ
—-ಸಂತಗಳಾಡುತ ಸಂತೋಷದಲಿ
ಕಾಂತೆರಕೂಡಿ ಶ್ರೀಕಾಂತ
‘ಹೊನ್ನಯ್ಯ ವಿಠ್ಠಲಂತರಂಗದಲಿ ನಿಂತೂ ಬಾರದ ೩

 

೧೬೯
ವಿಷ್ಣು ದ್ರೋಹಿಗಳ ಸಂಗವು ನೀ
ಇನ್ನೆಂದಿಗು ಮಾಡದಿರು ಶ್ರೀ
ಕೃಷ್ಣ ಸರ್ವೋತ್ತಮನೆಂಬುವರಾ ಸಂಗನುದಿನ ಬಿಡದಿರು ಪ
ಸಾಧು ಸಜ್ಜನ ನಂತರ ಸಂಗವು ಸೌಖ್ಯದಿ
ಕೂಡಿರು ಇನ್ನು ವೇದ ಬಾಹ್ಯರ
ದುರ್ಭೋಧಿಗಳ ಸಂಗೆಂದಿಗು ಹೋಗದಿರು
ಶ್ರೀಧರನಂಘ್ರಿಯ ಚಿತ್ತದಿ ಬಿಡದಿರೊ ಶರಣರ ಹೊಂದಿರು
ಮಾಧವನ ದ್ರೋಹ ಮಾಡುವ ಮನುಜರ
ಮಂಡಲಿಸೇರದಿರು ೧
ಅನುದಿನ ಶ್ರೀಹರಿ ಭಜನೆಯ ಮಾಡುತ ಆನಂದದಲಿರು
ದುರ್ಮನುಜರಾದ ಈ ದುಷ್ಟದುರಾತ್ಮರ ಮಾತನೆ ಕೇಳದಿರು
ಅನಿಮಿಷ ಬಿಡದಾ ಸಂತರ ಪಾದವು ಅರ್ಚಿಸುತಲಿ ಇರು
ದುರ್ಗುಣವುಳ್ಳ ಪರಮ ಪತಿತ ಜನರ ಪಥವನೆ ಬಿಟ್ಟಿರು ೨
ಸಕಲ ವೇದ ಶಾಸ್ತ್ರ ಮಂತ್ರ ಮರ್ಮಗಳ ಸರ್ವದಾ ತಿಳಿದಿರು
ಇನ್ನು ವಿಕಟ ಕುಭಕ್ತರ ಶಾಸ್ತ್ರಗಳೆಂಬುವನೆಂದಿಗು ನೋಡದಿರು
ರುಕ್ಮಿಣಿವರ ಶ್ರೀ ಹೆನ್ನೆವಿಠ್ಠಲನ ಭಕುತಿಯ ಬಿಡದಿರು
ಕೂ——ಕತರಾದ ಕುಚೇಷ್ಟರ ಕೂಡಿ ಭಂಗವ ಬಡದಿರು ೩

 

೨೦
ವಿಷ್ಣೋ ಭೋ ಸಂಸೇವಿತ ಜಿಷ್ಣೊ
ಉಷ್ಣಾಂಶಾಯುತ ಪುರುರೋಚಿಷ್ಣೊ ಪ
ಈಶ ಸುಜನ ಭವಪಾಶನಾಶ
ವಾಗೀಶಜನಕ ಲಕ್ಷ್ಮೀಶ ಪರೇಶ ೧
ರಾಮತ್ರಿಜಗದಭಿರಾಮ
ನೀರದ ಶ್ಯಾಮ ಸುರಾರಿಸ್ತೋಮ ವಿರಾಮ ೨
ಮಂಗಳ ಮಹಿಮ ವಿಹಂಗ ಗಮನಯದು
ಪುಂಗವ ‘ಹೆನ್ನೆರಂಗ ‘ ಕೃಪಾಂಗ ೩

 

೧೧೬
ವೆಂಕಟ ನರಸಿಂಹ ದೇವಾ ಎನ್ನ ಸಂಕಟ ಪರಿಹರಿಸುವಾ
ಶಂಕೆಯಿಲ್ಲದ ಬಿರುದಾಂಕ ಮಹಿಮನಾದ
ಪಂಕಜನಾಭ ಶ್ರೀ ಪರಮಾತ್ಮ ಪರಬ್ರಹ್ಮ ಪ
ಸÀಕಲಲೋಕ ಕರ್ತನಾದ ಶ್ರೀಲಕುಮಿರಮಣ ವೇಣುನಾದ
ಭಕುತವತ್ಸಲ ಬಿರುದುಳ್ಳ ಸ್ವಾಮಿ
ಮುಕುತಿದಾಯಕ ಕೃಷ್ಣ—ಲ್ಲಾ
ಅಖಿಲ ವೈಭವ ಮೂರ್ತಿ ಅಮಿತ ಪರಕ್ರಾಮ
—–ಪೋಷಕ ಸುಜನ ರಕ್ಷಕ ಹರಿ ೧
ಸಿಂಧುಶಯನ ಜಗದೀಶ ಆನಂದ ಪರಿಪೂರ್ಣ ವಿಲಾಸ
ಮಂದರಧರ ಮುಕುಂದ ಅತಿಸುಂದರ ರೂಪ ಗೋವಿಂದ
ಕುಂದದೊ ಅನುದಿನ ಕೋರಿದ ಜನಮನ
ಮಂದಿರವಾಸ ನಾ ಗಂದು ಇಂದು ಇರುವಾ ೨
ಆದಿ ಮಧ್ಯಾಂತ ರಹಿತ ಸಕಲ ವೇದಾಂತರ ಪ್ರಖ್ಯಾತ
ಸಾಧು ಸಜ್ಜನರೊಡೆಯಾನೀತಾ ಅತಿ ಮೋದದಲಿರುವಂಥ ದಾತಾ
ಮೇದಿನಿ ಪತಿಯೆನಿಸಿದ ‘ಹೆನ್ನ ವಿಠಲ’ ಮಾಧವ ವೈಕುಂಠ
ಮನಿಯಾಗಿ ಇರುವಂಥಾ ೩

 

೧೧೭
ವೆಂಕಟಪತೇಧೀರ | ಮಾಡೋಯನ್ನ ಸಂಕಟ ಪರಿಹಾರ ||
ಶಂಕರನ ವರ ಬಿಂಕರಕ್ಕಸಂ ಕಳೆದು ನಿ:ಶ್ಯಂಕನಾದ ಪ
ನಿಜಾಂಕ ಗುಣಪೂರ್ಣಾಂಕ ನಿನ್ನಯ ಕಿಂಕರರ ಕಿಂಕರನು ನಾನು |
ವರದ ಕೋಮಲ ಶುಭಾಂಗ| ಪಾವನಗಂಗ | ಬೆರಳಲಿಪಡೆದರಂಗ
ಪರಮ ಭಕ್ತರ ಪೋಷಾ | ಶ್ರೀಜಗದೀಶಾ |
ಉರಗಾದ್ರಿ ಸ್ಥಿರನಿವಾಸ ||
ಸ್ಥಿರದಲಿರೋ ನಿಯಿರದೆ ನಿನ್ನಯ ಚರಣದಲಿ
ಶಿರೆಯೆರಗುತಿರುವರು
ಕರುಣೆತೋರಿ ತ್ವರದಿ ಪೊರೆಯುವ ಬಿರುದು
ಮಹಿಮ ನಿನ್ನದು ೧
ಕುಂಡಲಿಶಯನ ಹರೆ ಮುರಾರಿ |
ಅಂಡಜವಾಹನ ಧೋರೆ |
ಪುಂಡಲೀಕವರದನೆ | ಗೋಪಾಲನೇ | ಪಾಂಡವರಕ್ಷಕನೆ |
ಹಿಂಡು ದೈವರ ಗಂಡ | ವೀರ ಪ್ರಚಂಡ | ಜಗದುದ್ದಂಡ
ರಿಪುಕುಲ ಖಂಡಗರ್ವ | ಅಖಂಡ ಮುನಿಜನ
ಮಂಡಲಾಧಿಪ ದೇವ ದೇವ ೨
ಪಾಲಸಾಗರ ಶಯನ | ಪಾವನ್ನ | ಪಾಲಿಸೋ ದಾಸರನ್ನ |
ಜ್ವಾಲಾ ಹೆನ್ನೆವಿಠಲ | ಭಕ್ತವತ್ಸಲ | ಲಾಲಿತ ಗುಣಶೀಲ |
ಪಾಲಿತಾಮರ ಲೂೀಲಗೋಪಿ ಬಾಲಾ ಲೀಲಾ ವಿಶಾಲನಾಯಕ |
ಲಾಲಿಸೋ ಕರುಣಾಳೋಯನ್ನಾಲ ಮೇಲ
ಮಂಗಮನೋಹರ ೩