Categories
ರಚನೆಗಳು

ಹೆನ್ನೆರಂಗದಾಸರು

೧೬೮
ವ್ಯರ್ಥ ಹೋರಾಟವಲ್ಲದೆ ಇದು ನಿಜವಲ್ಲಾ
ಕರ್ತೃ ಶ್ರೀಹರಿ ಮಾಡಿದರ್ಥವೆ ಸರಿ ಅಲ್ಲದೆ ಪ
ಪುರಾಕೃತ ಸಂಚಿತಾರ್ಥ ಪುಣ್ಯ ಪಾಪಗಳಿಂದ
ಪರಿ ಪರಿ ಅನುಭವ ಬಡುತಾ ಇನ್ನೂ
ಇರುವೆಯಲ್ಲದೆ ಘಣಿಯಲಿ ವಿರಂಚಿ ಬರೆದ
ಬರಹ ಪರಿಮತಿ ತಿಳಿಯದೆ ಭಂಗ ಬಡುತಲಿಷ್ಟು ೧
ಎಂದೆಂದೂ ನಿನ್ನ ಹಿಂದೆ ಒಂದೂ ಬರುವುದಿಲ್ಲ
ಮುಂದುಗಾಣದೆ ಇನ್ನು ಮೋಹಕೆ ಸಿಲುಕಿ
ನಂದೆಂದು ಪರಿಯಿಂದ ಘಳಿಸಿದ ದ್ರವ್ಯದ
ಬಿಂದಿಗೆ ದಾರೋ ನೀದಾರೋ ಪಾಮರ ಮೂಢಾ ೨
ನನ್ನ ಹೆಂಡತಿ ಮಕ್ಕಳು ನನ್ನ ಮನೆ ಬಾಗಿಲು
ನನ್ನ—-ಯು ವೃತ್ತಿ ನನ್ನದೆಂದೂ
ನಿನ್ನ ಗರ್ವದಿ ನೀನು ನಿತ್ಯ ಒಂದಾಡುವೆ
ಇನ್ನು ಮನೆ ಮಡದಿ ಹಿತ ಸುತರಾರೋ
ನೀದಾರೋ ಮೂಢಾ ೩
ತಂದೆ ತಾಯಿಯ ಗರ್ಭದಿಂದ ಪುಟ್ಟಿರುವಂದೇ
ತಂದೆಲ್ಲೊ ತಾಯೆಲ್ಲೊ ತಾನೆಲ್ಲೊ ಮರುಳೆ
ಹಿಂದೆ ಆದವರ ಚರ್ಯವ ವಿವರಿಸಿ ನೋಡಿನೋಡಿ
ಕುಂದು ಇಲ್ಲದೆ ಮುಕ್ಕುಂದನ ಸ್ಮರಿಸು ಗಾಢಾ ೪
ಮಾಯಾ ಪ್ರಪಂಚದೋಳ್ ಮಗ್ನನಾಗಿ ಇನ್ನು
ಕಾಯಾ ಅಸ್ಥಿರವೆಂದು ಕಾಣೋ—–
ಶ್ರೀಯರಸ ‘ಹೆನ್ನ ವಿಠ್ಠಲ’ರಾಯನ
ಕಾಯ ಮನಸಾ ವಾಚಾ ಕರ್ಮ ಧ್ಯಾನವು ಬಿಟ್ಟು ೫

 

೧೧೮
ಶರಣಾಗತ ರಕ್ಷಕ ಕರುಣಾಂಬುಧೆ
ಪರಿಪಾಲಿಸುವ ಮೊರೆ ಪಂಕಜಾಕ್ಷ
ಪೊರೆವುದು ಲೇಸು ನಿರಾಕರಿಸದೆ ಹರಿ
ನಿನ್ನ ಚರಣಕಮಲವನು ಸ್ಮರಿಸುತಲಿರುವೆನು ಪ
ನಂದನಂದನ ಮುನಿವೃಂದ ವಂದಿತ ರಾಕೇಂದುವದನ ಗೋ
ವಿಂದ ಕೃಷ್ಣಾ ಮಂದರಧರ ಮುಚುಕುಂದವರದ ಸಂ-
ಕ್ರಂದನಾರ್ಚಿತ ಪಾದಸುರಾಂಗ ಸಿಂಧುಶಯನ
ನರಸಿಂಹತ್ರಿವಿಕ್ರಮ
ಕುಂದರದನ ಶ್ರೀ ಮುಕುಂದ ಶೌರಿ
ಇಂದಿರಾಪತೆ ಪರಮಾನಂದ ವಿಗ್ರಹಭವ
ಬಂಧನ ಮೋಚನ ಆಪದ್ಭಾಂಧವ ಶೌರೇ ೧
ವೇಣುಗೋಪಾಲ ಪುರಾಣಪುರುಷ ಸುಮ-
ಬಾಣಜನಕ ಸಾಮಗಾನ ಲೋಲ
ಚಾಣೂರಾಂತಕ ಭಕ್ತಾಧೀನ ಮಾಧವ ಚತು-
ರಾನನ ವಿನುತ ವಇಹಾನುಭಾವ ಶ್ರೀನಿ-
ವಾಸಾಚ್ಯುತಾಶ್ರೀತ ಕಲ್ಪತರು ಚಕ್ರಪಾಣಿ
ಪದ್ಮೋದರ ಘೋರರೂಪ
ಧೇನುಕ ಭಂಜನ ದೇವಾದಿದೇವ ವಿಷ್ವಕ್ಸೇನ ಜನಾರ್ದನ
ಶ್ರೀ ವತ್ಸಲಾಂಛನ ೨
ಹರಿಸರ್ವೋತ್ತಮ ಮರುತಾಂತರ್ಗತ
ಪರಮಾತ್ಮ ಗರುಡವಾಹನ ಶುಭಕರಚರಿತ
ಮುರಸೂದನಾನಂತ ಮುಕ್ತಿದಾಯಕ ಜಗದ್ಭರಿತ
ಕೇಶವ ಕೌಸ್ತುಭಾಲಂಕೃತ
ವರದ ಅಹೋಬಲ ಗಿರಿವಾಸ ವಸುಧೇಶ
ಭಾಸುರ ಕೀರ್ತಿಸಾಂದ್ರ ೩

 

೧೧೯
ಶರಣು ನಿನಗೆ ಶರಣೆಂದೆನೊ ಹರಿಯೇ
ಕರುಣಿಸಿ ಕಾಯೋ ಎನ್ನಧೊರಿಯೆ ಪ
ಪರಮಕೃಪಾಕರ ಪಾವನ
ನರಹರಿ ಪಾಲಿಸೊ ಎನ್ನನಿ—
ಶರಣೆಂದ ವಿಭೀಷಣನ ಆದಿಭಕ್ತರ
ಶ್ರಮ ಪರಿಹರಿಸಿದಂಥ ಶ್ರೀಧರಾ ೧
ಭಕ್ತಾ ಪಾಂಡವ ಪಕ್ಷಾ ಬಲಿಯ
ಭೂಮಿಯ ಭಿಕ್ಷಾ ಯುಕ್ತಿಲಿ
ನೀ ಸಾಧಿಸಿದ ಯೋಧನೆ
ಮುಕ್ತಿದಾಯಕ ದೇವ ಮುರಹರ ಮಾಧವನೆ
ಮೌಕ್ತಿಕ ಮುಕುಟ ಧರಿಸಿದನೆ ೨
ಸುಂದರ ಮೂರುತಿ—–ಜಗತ್ಪತಿ
ಇಂದಿರಾ ಹೃದಯಾನಂದನೆ
ಬಂದ ಭಕ್ತರ ಬಿಡದೆ ಅಂದಿಗೆ ನೀನೆ ಪೊರೆದೆ—-ಹೆನ್ನ ವಿಠ್ಠಲಾ ಸಲಹೋ ಎನ್ನ ೩

 

೩೩
ಶರಣು ಶ್ರೀ ಪಾರ್ವತಿದೇವಿಗೆ ಶರಣು ಶಾಂಭವಿಗೌರಿಗೆ |
ಶರಣು ಭಕ್ತರ ಪೊರೆವ ಕರುಣಿಗೆ ಶರಣು
ನಮ್ಮ ಶರ್ವಾಣಿಗೆ ಪ
ಲಂಬ ಕರ್ಣನ ಬಿಂಬಛಿದ್ರನ ಸಂಭ್ರಮದಿ ಪಡೆದಮ್ಮಗೆ
ಶಂಬರಾರಿಯ ಅಂಬಿಗಾಹರ ನಂಬಿದಾ ಪಟ್ಟದರಸಿಗೆ ೧
ಅಮಿತ ಮಹಿಮಳೆ ಜ್ಯೋತಿ ಆದಿಶಕ್ತಿ ದುರ್ಗಾಂಬೆಗೆ
ಹೇಮ ಗಿರಿಸುತೆಯಾದ ನಮ್ಮ
ಹೇಮವರ್ಣ ಭವಾನಿಗೆ ೨
ತಂದು ದಕ್ಷನ ಶಿರವ ಮಹಿಷಾಸುರನ
ಹೊಡೆವ ಮೃಡಾಣಿಗೆ
ಕರುಣಾನಿಧಿ ‘ ಹೆನ್ನೆ ವಿಠಲನ ‘ ಮುನ್ನ
ಸ್ಮರಿಸದವರನ ಕಾಯ್ವಳೆ ೩

 

೩೨
ಶಿವ ಮಹದೇವಗೆ ಶರಣೆಂಬೆನಾ
ಮಾಯಾ ಶಿರ ಮಾಲಾಧರನಿಗೆ ಶರಣೆಂಬೆ ನಾ ಪ
ಪಾರ್ವತಿ ರಮಣಗೆ ಶರಣೆಂಬೆ ನಾ
ಭವತಾಪ ಸಂಹಾರಗೆ ಶರಣೆಂಬೆನಾ
ಸರ್ವಕಾಲ ಬಿಡದೆ ಶರಣೆಂಬೆನಾ
ಸಾಧು ಸಜ್ಜನರ ಪೊರೆವಗೆ ಶರಣೆಂಬೆನಾ ೧
ನಂದಿವಾಹನಗೆ ಶರಣೆಂಬೆನಾ
ನಾಗ ಭೂಷಣಗೆ ಶರಣೆಂಬೆನಾ
ಸುಂದರ ಮೂರ್ತಿಗೆ ಶರಣೆಂಬೆನಾ
ಸುರಮುನಿ ವಂದ್ಯಗೆ ಶರಣೆಂಬೆನಾ ೨
ಗಜಚರ್ಮಧಾರಿಗೆ ಶರಣೆಂಬೆನಾ
ಕೈಲಾಸ ವಾಸಿಗೆ ಶರಣೆಂಬೆನಾ
ಭಯನಾಶ ಮಾಡ್ವವಗೆ ಶರಣೆಂಬೆನಾ
ಭಕ್ತಿಭಾವ ಮಾನಸನಿಗೆ ಶರಣೆಂಬೆ ನಾ ೩
ಲಯಕರ್ತ ಮೂರ್ತಿಗೆ ಶರಣೆಂಬೆನಾ
ಕೈಲಾಸವಾಸಿಗೆ ಶರಣೆಂಬೆನಾ
ಭಯನಾಶಮಾಡ್ವವಗೆ ಶರಣೆಂಬೆನಾ
ಭಕ್ತಿಭಾವ ಮಾನಸನಿಗೆ ಶರಣೆಂಬೆ ನಾ ೪
ಆಕಾರಶೂನ್ಯ ಪರೇಶಗೆ ಶರಣೆಂಬೆನಾ
ಅಖಿಲಾಕಾರ ತಾನೆಂಬಗೆ ಶರಣೆಂಬೆನಾ
ಲೋಕದೋಳ್ ಭಕ್ತರ ಪೊರೆವಗೆ ಶರಣೆಂಬೆನಾ
ಶ್ರೀಲೋಲ ಹೆನ್ನೆವಿಠ್ಠಲ ಪ್ರಿಯಗೆ ಶರಣೆಂಬೆನಾ ೫

 

೧೨೩
ಶೇಷ ಗಿರಿಯ ವಾಸಈಶ ಜಗತ್ರಯ
ಪೋಷಕ ಸರ್ವೇಶ ಭಾಸುರ ಕೀರ್ತಿ
ಶೇಷ ಎನ್ನ ನೀ ಪೋಷಿಸುವುದು ಈಶ ಪ
ವಕ್ಷಸ್ಥಳದಲಿ ವಾಸವಾಗಿಹ ಶ್ರೀ ಪರಬ್ರಹ್ಮ ನಾ
ಪಕ್ಷಿವಾಹನ ಪರಮಪರುಷ
ಅಕ್ಷಯ ಫಲದಾಯಕನಾ
ರಕ್ಷಕ ದೀನ ಜನರ ಸರ್ವೋತ್ತಮನ ರಾಜೀವದಳನಯನ
ಈಕ್ಷಣದಲೆನ್ನ ನಿನ್ನ ಕುಕ್ಷಿಯೊಳಗೆ ಇಟ್ಟು
ರಕ್ಷಿಸೊ ಸಂಪನ್ನ ೧
ವೇಣುನಾದ ವಿನೋದನಾದ
ಸುಗಾನಲೋಲ ಹರಿಯೆ
ದಾನವಾಂತಕ ದಜನುರಕ್ಷಕ
ಸುಜ್ಞಾನಿಗಳ ಧೊರಿಯೆ
ಮಾನವಾಧಿ ಪ ಮದನವಿಲಾಸ
ಮಾಧವ ಮುಕುಂದಾ
ನೀನೆ ದಯಮಾಡಿ ಸಲಹೊ
ಆನಂದಾ ನಿಜನಿತ್ಯ ಗೋವಿಂದಾ ೨
ಜಲದಲಿ ವಾರಿಧಿ ಬಂಧಿಸಿ ದೈತ್ಯರ
ಬಲವನೆಲ್ಲ ಮುರಿದಾ ಬಲವಂತಾ
ರಾವಣನ ಭಂಗವ ಬಡಿಸಿ ತಲೆಗಳ ಛೇದಿಸಿದಾ
ಸುಲಭದಿ ಅವನನುಜಗೆ ಪಟ್ಟವನಿತ್ತು
ಸತಿಯನೆ ತಂದಾ ಜಲಧಿಶಯನ
ಅಹೋಬಲ ‘ಹೊನ್ನವಿಠ್ಠಲ’
ಚಲುವ ಸದಾನಂದಾ ೩

 

೨೩
ಶೇಷಗಿರಯವಾಸಾ ಶ್ರೀವೆಂಕಟೇಶಾ ಶಾಶ್ವತ ಜಗದೀಶಾ ಪ
ಸಾಸಿರ ನಾಮದೊಡೆಯಾ ಸಕಲ ಭಕ್ತರ ಪ್ರೀಯಾ
ವಾಸವಾರ್ಚಿತ ಕಾಯ ವಸುದೇವನಂದನ ಜೇಯಾ ಅ.ಪ
ಹಿಂಡುವಾನರ ಬಳಗಾವಾ ಬಲವನೆ
ಕಟ್ಟಿಕೊಂಡು ಲಂಕೆಯಪುರವಾ
ಕಂಡು ದೈತ್ಯರ ಬಲವಾ ನೆಲ್ಲನು ಮುರಿದು
ಪುಂಡಮಹಾನುಭಾವ
ದಂಡಿದಾನವರನ ಹಿಡದಾ ಖಂಡಗಳು ಕತ್ತರಿಸಿನಿ ದಶಶಿರ
ನಂಡ ತಪ್ಪಿಸಿ ಚಂಡನಾಡಿದ ಪುಂಡರೀಕ ವರದ ದೇವ ೧
ಯಾದವ ಪತಿ ಗೋವಿಂದಾ ಗೋಕುಲಾನಂದಾ
ಮಾಧವ ಶ್ರೀ ಮುಕುಂದಾ
ಭೇದದಿಂದಲಿ ಬಂದಾ ಪೂತಣಿ ಮೊಲೆಯಾ
ಭೇದಿಸಿ ಹರಿಕೊಂದಾ
ಶ್ರೀಧರನೆ ನಿನ್ನ ಚರಿತಗಳು ಇನ್ನೀಧರಿಯೊಳು
ಪೊಗಳಲೊಶವೆ
ಸಾಧು ಜನರಾನಂದ ಮೂರುತಿ ಸಕಲ
ವೈಭವ ದೇವ ದೇವಾ ೨
ಅಜನಾಸುತನು ಮಾಡಿದ ಅವು ಮರ್ಯಾದಿಗೆ
ತ್ಯಜಿಸಿ ವೈಕುಂಠದಿಂದಾ
ಭುಜಗಾದ್ರಿಯನೆ ಸೇರಿದಾ ಪೂರ್ಣಾನಂದ
ಭಜಕಾರ ಪೊರೆವ
ಇಂದಾ ಗಜನ ಹಿಂಬತ್ತಿ ಕಾನನದೊಳು
ನಿಜವುವುಳ್ಳ ಕನ್ನಿಕೆಯ
ಸಂಗ ಭಜನಿಯನು ಕಳಕೊಂಡು ಬಂದ ತ್ರಿಜಗವಂದಿತ ಹೊನ್ನ ವಿಠಲಾ ೩

 

೧೨೧
ಶ್ರೀ ಜಗದೀಶ ಮುರಾರಿ ಶ್ರೀತಜನ ರಕ್ಷಕನೆ
ಪೂಜಿತ ಸರ್ವತ್ರ ಪೂರ್ಣ ಪ್ರಭಾವನೆ
ಪುರುಷೋತ್ತಮಹರಿಯೆ ಪ
ರಾಜಾಧಿರಾಜ ಶ್ರೀ ರಘು ಕುಲೋತ್ತಮ ನೀರಜದಳನಯನಾ
ಈ ಜಗತ್ರಯಗಳ ಇಷ್ಟದಿ ಸಲಹುವ ವೆಂಕಟಗಿರಿ ರಮಣ
ಭೋಜ ಭಾನುಕೋಟಿತೇಜ ಪ್ರಕಾಶನೆ ಪಾಂಡವ ಪಕ್ಷಕನೆ
ಸುಜನರೊಡೆಯ ಸುರೇಂದ್ರ ವಂದ್ಯ ನಿಜ
ಸದ್ಗುಣ ಭೂಷಿತನೆ ೧
ಪುಂಡರೀಕವರದ ಪುರಾಣಪುರುಷ ಕೋದಂಡಧರ ಪ್ರಿಯಾ
ಅಂಡಜವಾಹನ ಅಖಿಲಲೋಕಕರ್ತ ಆನಂದ ನಿಲಯಾ
ಮಂಡಲಾಧಿಪ ಕೃಷ್ಣ ಮುನಿಗಣ ಸೇವಿತ ಮಾಧವ ಗೋವಿಂದ
ಕೊಂಡಾಡುವ ನಿಮ್ಮ ಕೀರುತಿ ಜಗದೊಳು
ಕೃಪೆಯ ಮಾಡುಯೆಂದಾ ೨
ಮಂಗಳಮೂರುತಿ ಮಾರಜನಕ ದೇವೋತ್ತುಂಗ
ಮಹಾನುಭಾವಾ
ಗಂಗಾಪಿತ ಶ್ರೀಗೌರಿಪತಿ ಪ್ರಿಯಾ ಕರುಣಾಸಾಗರ ದೇವಾ
ಶೃಂಗಾರಾಂಗನೆ ಶ್ರೀ ಲಕುಮಿಯ ಉರಸೂಸುತಲಿರುವಂಥಾ
ರಂಗನಾಯಕ ಭೂರಮಣ ‘ಹೆನ್ನವಿಠ್ಠಲ’
ರಕ್ಷಿಸೊ ಭಗವಂತಾ

 

೧೨೦
ಶ್ರೀಕೃಷ್ಣಾ ನೀನೇಕೊ ಗತಿಯೆಂದು—ಯರು ನಿಂದು
—–ನಿನಗೆ ಹುಟ್ಟದೊ—-ದು ಯಾಕಿಂದೂ ಪ
—ಹಾರೈಸಿಕೊಂಡೂ —-ದಯಾಸಿಂಧೂ ಅತಿಕಷ್ಟಾ—-
ನೀ ಈಗ ಬಂದೆಯಾ—-ಶ್ರೀಷ್ಟನೆ—-ನೀನಿಂದೂ
ಇನ್ನೂ ಸೃಷ್ಟ್ಯಾದಿ —–ನಿಂದೂ ೧
ಮಂದಾರಗಿರಿಯ ಪೊತ್ತ ಮಹಿಮನು—ಂದೂ ಇನ್ನೆಂದೂ—
ಸುಧೆಯಾನುಣಿಸಿದ ಅವನೆಂದೂ ಇನ್ನೆಂದೂ
ನಿನ್ನ ಹೊಂದಿದ—-ದಿ
ಪೊರೆಯೆಂದೂ ನಾ ಬಂದು ನಿನ್ನ
ಮೊರೆಯಾ ಹೊಕ್ಕೆನಾ—– ೨
ಅನ್ಯನಾನಲ್ಲ ನಿನ್ನ ಅಡಿಯನು ಎತ್ತಿಂದೂ—-ಬಡುವೆ ಇಷ್ಟು
ತಾರಿಸೊ—-ಮಹಾಚಿನ್ಮಯ ರೂಪನಾದ ಶ್ರೀಹರಿ
ಗೋವಿಂದೋ ಘನ ಹೊನ್ನಯ್ಯ ತೆರಹೀಕ ವಿಠ್ಠಲನೀನೆಂದೂ ೩

 

೧೨೨
ಶ್ರೀನಿವಾಸ ಗೋಪಾಲ ಧೀನ ಬಂಧು |
ನೀನೇಗತಿಯಂತೆಂದು ನಿನ್ನ ನಂಬಿದೆ ಇಂದು |
ಭವಕಮಲ ಭವವಿನುತ ಪಾದ ಪಂಕಜರಮಾ —-
ಧವ ಜಗದ್ಭರಿತ ನಿತ್ಯಾನಂದ ಮೂರ್ತಿ |
ಕವಿಜಸ್ತುತಯನ್ನವಗುಣಗಳನ್ನೆಣಿಸದಲೆ
ಪವಮಾನನೊಡೆಯ ನೀ ಪಾಲಿಸಿದರೆ ಕೀರ್ತಿ ೧
ಅಂದು ಧೃವ ಪ್ರಹ್ಲಾದ ಗಜವಿಭೀಷಣ ರನ್ನ
ಛಂದದಿ ಅಹಲ್ಯಾ ದ್ರುಪದನಂದನಿಯಗ್
ಸಂದೇಹವಿಲ್ಲದೇ ಸಂತೈಸಿ ನುಡಿದೆ
ಕೃಪಾಸಿಂಧು ಅರವಿಂದಾಕ್ಷ ಸುಂದರ ಶರೀರ ೨
ಶರಣಾಗತತ್ರಾಣ ಬಿರುದು ನಿನ್ನದು ದಯಾಕರ
ಪರಮ ಪುರುಷ ಮಂದರ ಗಿರಿಧರ
ಹರುಷದಲಿ ವರ ಹೆನ್ನೆಪುರ ಲಕ್ಷ್ಮಿ ನರಸಿಂಹ
ಕರುಣಿಸೆನ್ನಘಗಳನ್ನು ಕಳೆದು ನಿರುಮಪಧೀರ ೩

 

೨೧
ಶ್ರೀರಾಮ ಜಯರಾಮ ಶ್ರೀರಾಮರಾಮ
ಕಾರುಣ್ಯ ನಿಧಿರಾಮ ಕೌಸಲ್ಯ ರಾಮ ಪ
ಜಾನಕೀ ಪತಿರಾಮ ಜಯರಘುರಾಮ
ಜಾನ್ಹವೀ ಪಿತರಾಮ ಸರ್ವೇಶರಾಮ ೧
ಭಯ ನಿವಾರಣರಾಮ ಪಾವನರಾಮ
ನಯಗುಣ ಶ್ರೀರಾಮ ನರಹರೇ ರಾಮ ೨
ತ್ರಿಜಗ ಮೋಹನ ರಾಮ ದಿವಿಜೇಶರಾಮ
ಅಜಭವನುತರಾಮ ಆನಂದರಾಮ ೩
ಭುವನ ಪಾಲಕರಾಮ ಭೂಪತೆ ರಾಮ
ಸವನ ರಕ್ಷಕರಾಮ ಶತ್ರುಘ್ನ ರಾಮ ೪
ಸವನ ಶೇವಿತರಾಮ ಪರಮಾತ್ಮ ರಾಮ
ಭವ ವಿಮೋಚನ ರಾಮ ಪದ್ಮಾಕ್ಷರಾಮ ೫
ವೈದೇಹಿ ಪತಿರಾಮ ವೈಕುಂಠರಾಮ
ವೇದಗೋಚರ ರಾಮ ವೆಂಕಟೇಶರಾಮ ೬
ಮಂಗಳಾತ್ಮಕರಾಮ ಮಾಧವರಾಮ
ಶೃಂಗಾರ ಶೇಖರರಾಮ ಶ್ರೀರಾಮ ರಾಮ೭
ದಶರಥಸುತರಾಮ ದನುಜಾರಿರಾಮ
ಕುಶಲವ ಪಿತರಾಮ ಕೋದಂಡರಾಮ ೮
ಕರುಣಸಾಗರ ರಾಮ ಕಾಕುಸ್ಥರಾಮ
ಶರಧಿಶಯನ ರಾಮ ಶಾಶ್ವತರಾಮ೯
ಶ್ರೀಕರಾವ್ಹಯರಾಮ ಶ್ರೀಧರರಾಮ
ಪಾಕಾರಿಸುತ ರಾಮ ಪರಮೇಶರಾವು ೧೦
ಮಧುರ ಭಾಷಣರಾಮ ಮಧುವೈರಿರಾಮ
ಮದನಾರಿನುತರಾಮ ಮೌನೀಶರಾಮ ೧೧
ಗೌತಮ ಸತಿ ಶಾಪ ಖಂಡನ ರಾಮ
ಪಾತಕ ಹರ ರಾಮ ಪ್ರಖ್ಯಾತ ರಾಮ೧೨
ರಾಮ ಗರ್ವವಿರಾಮ ರಾಮಾಭಿರಾಮ
ಸೌಮಿತ್ರಿವರರಾಮ ಸೌಂದರ್ಯರಾಮ ೧೩
ಸುಗ್ರೀವಸಖರಾಮ ಶುಭಕರ ರಾಮ
ಅಗ್ರಜಾಧಿಪ ರಾಮ ಅಮಿತಬಲರಾಮ ೧೪
ಅನ್ಯಮಾನಸರಾಮ ರಘುರಾಮ
ಇನಕುಲೇಶ್ವರ ರಾಮ ವಿಭುದೇಂದ್ರರಾಮ ೧೫
ಚಾರು ಚರಿತ ರಾಮ ಜಯಜಯ ರಾಮ
ಮಾರುತಾತ್ಮಜ ವಂದ್ಯ ಮಾನಿತರಾಮ ೧೬
ವಾಲಿ ಮರ್ದನರಾಮ ವರದಶ್ರೀರಾಮ
ಫಾಲಾಕ್ಷ ಸಖರಾಮ ಭದ್ರಶ್ರೀರಾಮ ೧೭
ಸೇತುಬಂಧನ ರಾಮ ಚಿನ್ಮಯರಾಮ
ಸೀತಾಪತೆ ರಾಮ ಜಿತದೈತ್ಯ ರಾಮ ೧೮
ನತವಿಭೀಷಣರಾಮ ನಗಧರ ರಾಮ
ಚತುರಾಶ್ಯಪಿತ ರಾಮ ಚಂದ್ರಶ್ರೀರಾಮ ೧೯
ಮಾರೀಚ ಮದಭಂಗ ಮಹಾದೇವರಾಮ
ವೀರಾಗ್ರಣೀರಾಮ ವಿಶ್ವೇಶರಾಮ ೨೦
ರಾಮರಾಮ ರಾಮರಾಮ ಶ್ರೀರಾಮ
ಕಾಮಿತಾರ್ಥಪ್ರದ ಕಲ್ಯಾಣರಾಮ ೨೧
ಅಗಣಿತ ಮಹಿಮ ವಿಲಾಸ ಶ್ರೀರಾಮ
ನಿಗಮಗಾನ ವಿನೋದ ನಿತ್ಯ ಶ್ರೀರಾಮ ೨೨
ಕಂಬುಕಂಧರ ರಾಮ ಘನತರರಾಮ
ಕುಂಭಕರ್ಣಾಂತರ ಗೋವಿಂದರಾಮ ೨೩
ಸುಜನ ಹೃತ್ಕಮಲ ಭಾಸುರ ಸೂರ್ಯರಾಮ
ನೀಲ ನೀರದ ವರ್ಣ ನೃಪತಿ ಶ್ರೀರಾಮ ೨೪
ಲೀಲಾ ಮನುಜ ವೇಷ ರಿಪು ಜೈತ್ರರಾಮ
ಪ್ರಕಟ ಪರಾಕ್ರಮ ರಾಮರಾಮ ಶ್ರೀರಾಮ ೨೫
ಅಕಲಂಕ ನಿರುಪಮಾನ ಸಹಾಯ ರಾಮ
ಭಕ್ತವತ್ಸಲ ದೀನ ಬಂಧು ಶ್ರೀರಾಮ ೨೬
ಮುಕ್ತಿದಾಯಕ ರಾಮ ಪೂಜಿತರಾಮ
ದಶಕಂಠ ಮರ್ದನ ತಾರಕನಾಮ ೨೭
ಶಶಿಬಿಂಬ ವದನ ದಾಶರಥಿ ಶ್ರೀರಾಮ
ನಾರಾಯಣಾಚ್ಯುತಾನಂತ ಶ್ರೀರಾಮ ೨೮
ವಾರಿಜೋದರ ಶ್ರೀನಿವಾಸ ಶ್ರೀರಾಮ
ಹರಧನುರ್ಭಂಗ ದಯಾನಿಧೆ ರಾಮ ೨೯
ಪುರುಷೋತ್ತಮ ಪುರಾಣ ಪುರುಷ ಶ್ರೀರಾಮ
ಸರ್ವಲೋಕ ಶರಣ್ಯ ಸೌಭಾಗ್ಯರಾಮ ೩೦
ಶರ್ವರೀಚರ ಹರಕ್ಷ್ಮಾಪತೇರಾಮ
ಸರಶಿಜನಾಭ ದಾಶಾರ್ಹ ಶ್ರೀರಾಮ ೩೧
ಶರಣಾಗತ ತ್ರಾಣ ಶರಣು ಶ್ರೀರಾಮ
ಮುದನೂರ ಗೋಪಾಲ ಮೂರ್ತಿ ಶ್ರೀರಾಮ ೩೨
ಬುಧ ಜನಾಧಾರ ಸರ್ವೋತ್ತಮರಾಮ
ವರ ಹೆನ್ನೆಪುರನಿವಾಸ ಶ್ರೀರಾಮ ೩೩
ನರಸಿಂಹ ಭಕ್ತ ಚಿಂತಾಮಣಿ ರಾಮ
ಇಷ್ಟದಾಯಕ ಹೆನ್ನೆ ವಿಠಲರಾಮ ೩೪
ಕಷ್ಟ ರಕ್ಷಿಸುಯನ್ನ ಶ್ರೀರಾಮರಾಮ
ಕುಜನವನ ಕುಠಾರ ಕೋವಿದ ರಾಮ ೩೫

 

೨೨
ಶ್ರೀರಾಮ ರಾಮ ರಾಮಾ ರಘುಕುಲ
ಅಬ್ಧಿ ಸೋಮಾ ಪ
ದಶರಥನಂದನ ರಾಮಾ ಜಗದೇಕ ರಾಮಾ
ರಾಮ ಜಾನಕಿ ಪ್ರೇಮ ಸುರಕ್ಷಕ ಸುಧಾಮಾ
ಸಕಲಲೋಕ ಸ್ವಾಮಿ ಜಗನ್ನಾಥ ಅ.ಪ
ದಂಡಿ ದಾನವರ ಕುಲತರಿದೂ ದಶಶಿರನಳಿದೂ ಭೂ
ಮಂಡಲ ಮಾತೆ ಸೀತೆತಂದಾ ಅತಿ ಶರತಿನಿಂದಾ
ಹಿಂಡು ವಾನರ ಬಹು ದಂಡನೆ ಕೂಡಿಸಿ
ಪುಂಡ ರಕ್ಕಸರೆದೆ ಗುಂಡಿಗೆ ಮುರಿದಾ ೧
ವೀರಾಧಿ ವೀರರಲಿ ಗಂಭೀರಾ ಸುಂದರಾಕಾರಾ
ಧೀರಾ ವಿಜಯರಣಶೂರಾ ಪೋಷಿತಾಮರ
ಸರ ಜಗಗಳೊಳು ಮೀರಿದವರ ಗರ್ವ
ಕಾರಿಸಿ ಮುರಿದಾ ಹೋ ಧೀರ ಮಹಾನುಭಾವಾ ೨
ಪನ್ನಗಾದ್ರಿಯ ವಾಸಾ ಈಶಾ ಭಕ್ತರ ಪೋಷಾ
ಚಿನ್ಮಯ ರೂಪ ಜಗದೀಶಾ ಚಿದ್ಪಿಲಾಸಾ-
ಪನ್ನ ಶರಣ್ಯ ‘ಶ್ರೀ ಹೆನ್ನ ವಿಠ್ಠಲ’
ಎನ್ನ ಮರೆಯದಲೆ ಇನ್ನು ರಕ್ಷಿಸೊ ೩

 

೧೭೧
ಶ್ರೀರಾಮ ರಾಮನ ಭಜಿಸೊ
ಮನದಲಿ ಶ್ರೀಕೃಷ್ಣನ ಸ್ಮರಿಸೊ
ಪರಾಭವಾರೂರ್ವು ಪವಾಸಗಳಿಂದ
ಪತಿತಪಾವನ ಶ್ರೀಗೋವಿಂದ ಪ
ಧರಾಧರ ಧರ ಜಗದೋದ್ಧಾರ
ತಾರಕ ರಘುವೀರಾ
ಶರಾದಿಬಂಧಿಸಿ ಸೈನ್ಯವು ನಡೆಸಿ
ತ್ವರಾ ಲಂಬಿಣಿ ಬೇಧಿಸಿ
ಸರಾಗ ದಿಂ——-ಪುರಾದಿ
——–ಸರಾಗೆಲ್ಲರನೊಯ್ದಡಿಕ್ಕಿ
ಪುರಾಧಿಪತಿ ಮಹಾ—-ರಾವಣನ
ಶಿರಾಗಳ್ಹತ್ತನೆ ಛಂಡಿಸಿ ಹರೆದನಾ ೧
ಶರಾಣೆಂದು ಬಂದರು
ನಗಾನಂದ ಕರುಣಿಸು ಚಂದಾ
ಸ್ಥಿರಾ ಲಂಕೆ ಪಟ್ಟ ಹರುಷದಲಿಕೊಟ್ಟ
ಯಾರು ಎಂದ್ಹೇಳಿದಿರಾ ವೀರಾಧಿವೀರ
ಶೌರ್ಯ ಶೂರ ಪ್ರಚಂಡರು ಧೀರ
ಹನುಮದೇವರು ಆರಾಮದಲಿತ್ತ
ಆರಾಮಿಯಾರಥನೇರಿ ಶಿಕಾರ
ತಂದೆ ಕಾಂತೆ ಜಗನ್ನಾಥ ೨
ರಾಮಾಯೆಂದು ಭಯ ಭಕ್ತಿಯಿಂದಾ
ಸ್ಥಿರಚಿತ್ತದಿಂದಾ ಸ್ಮರಣೆ ಮಾಡುತ
ಶ್ರೀಹರಿಯು———-ತ
ನಿರಾಳ ಮನ ಕವಿತ
ಇರುತಲಿಪ್ಪವರಿಗೆ ಸಂಪತ್ಕರವು
ಧರೆಯೋಳ್ ಹೆನ್ನತೀರವಾಸನ
ಧೊರೆ ‘ಹೆನ್ನ ವಿಠ್ಠಲ’ ರಾಯನ ೩

 

೧೭೨
ಶ್ರೀಹರಿ ಚಿಂತನೆ ಚಿತ್ತದೊಳಗೆ ಬಿಡದೆ
ಚನ್ನಾಗಿ ಸ್ತುತಿಸುವ ರಾ
ಆಹರಿ ಕರುಣಿಸಿ ಅನುಗ್ರಹ ಮಾಡುವ
ಆಶ್ರಿತ ಜನರಾಧಾರಾ ಪ
ಭಾಗವತರ ಪ್ರಿಯ ಭಾವಜ ಜನಕ
ಪ್ರಭಾಕರ ಕೋರುತ ಜನಾ
ನಾಗಶಯನ ಶ್ರೀ ನಾರಾಯಣ ಕೃಷ್ಣ
ನಾರದವರದನ ಯೋಗಿಗಳ
ಹೃದಯ ಯೋಗವಿಲಾಸನ ಯಾದವ ಕುಲೋದ್ಭವನ
ಭಾಗೀರಥಿಯ ಪಡೆದ ಧೀರನಾ ಪಾಂಡವ ಪಕ್ಷಕನಾ ೧
ವೇದಗೋಚರನೆ ವೇಣುನಾದ ಶ್ರೀ ವೇಂಕಟ ಶ್ರೀಶನಾ
ಸಾಧು ಸಜ್ಜನರ ಸರ್ವದಿ ಸಲಹುವ ಸಕಲಲೋಕ ಕರ್ತನಾ
ಆದಿ ಮೂರುತಿ ಅನೇಕ ಚರಿತನ ಅನಂತ ಅವತಾರನಾ
ಮೋದದಿ ಮನದಲಿ ಮರೆಯದೆ ಸ್ಮರಿಸುವ
ಮನುಜರ ಪೋಷಕನಾ ೨
ಗಾನಲೋಲ ಶ್ರೀಕರುಣಕೃಪಕ್ಷಾನ ಕಾಮಿತ ಫಲವೀವನಾ
ಜ್ಞಾನಿಗಳರಸ ಶ್ರೀ ಘನ ‘ಹೆನ್ನ ವಿಠ್ಠಲನ’
ಕಮಲಸಂಭವ ವಪಿತನ
ಮಾನಾಭಿಮಾನ ಮಹಾನುಭಾವ—————-
ಧ್ಯಾನದೊಳಗೆ ಅನುದಿನದಿರುವರ ಕಾಮಧೇನು
ಆದ ಅವನಾ ೩

 

೧೨೪
ಸಂದು ಹೋಯಿತೀ ಕಾಲವು ವ್ಯರ್ಥಾ
ಸ್ಮರಿಸದೆ ಶ್ರೀಹರಿಯ
ಒಂದು ಬಾರಿ ಗೋವಿಂದ ಎನದÉ
ಮಂದನಾಗಿ ಅತಿಮಾತಿಗೆ ಒಳಗಾಗಿ ಪ
ಹುಟ್ಟಿದ ಮೊದಲು —-ಬಹು
ಭ್ರಷ್ಟರ ಸಂಗದಿ ಬೆರೆದಾಡುತ
ಸೃಷ್ಟಿಗೊಡೆಯ ಶ್ರೀಕೃಷ್ಣನ ಪಾದವ
ಮುಟ್ಟಿ ಭಜಿಪರ ಮರದಾಡುತಾ
ಕೆಟ್ಟ ಬುದ್ಧಿಯ ಗುರುಹಿರಿಯರ ಕಂಡು
ಬೆಟ್ಟನಾಗಿ ಬಹು ಜಗಳಾಡುತಾ
ನಿಷ್ಠರ ಕಂಡರೆ ನಿಂದೆಗೆ ಒಳಗಾಗಿ
ಕಟ್ಟಕಡೆಗೆ ನರಕ ಘೋರವೇ ಸಿದ್ಧವಾಗಿ ೧
ಹರಿಶರಣರ ಕೂಡನುದಿನ ಮನದಲಿ
ದುರುಳ ಮಾತಿನಲಿ ದೂಷಿಸುತಾ
ಪರಮಾತ್ಮನ ಕೃಪೆ ಪಡೆದ ಸುಜನರಾ
ಪಾದಕೆ ಶಿರವೆರಗದೆ ಇರುತಾ
ಶರಣರ ದ್ರೋಹದೊಳಿರುಳು ಹಗಲು
ಇದು ಶಿಷ್ಟನು ನಾನೆಂದು ಹೇಳಿಕೊಳುತಾ
ಗರುವತನದಿ—— ಹೀನನು ಆಗಿ
———-ರತನಾಗಿ ಇನ್ನೂ ೨
ಅಂಡಜವಾಹನ ಪುಂಡರಿಕಾಕ್ಷನ
ಕೊಂಡಾಡುವರನ ಕು—–ಡಿ
ಕಂಡ ಕಂಡ——ನ ಮಹಾಮಹಿಮರನ
ಪುಂಡನಾಗಿ ಇನ್ನು ಹೋಗಲಾಡಿ
ಮಂಡಲದೊಡೆಯ ‘ಶ್ರೀಮಹಾಹೆನ್ನೆವಿಠ್ಠಲನ’
ಕಂಡು ಪೂಜಿಸು—-ಒಡನಾಡಿ
ಗುಂಡತನದಿ——-ಕಾಲನ
ದಂಡನೆಗೊಳಗಾಗಿ—-ರಾರಿಯ ಮುಖ—-ಗಿ ೩

 

೧೨೬
ಸಂದೇಹ ವೇತಕೆ ಸರ್ವೇಶಾ
ಇಂದೆನ್ನ ಹೃದಯಾದಿ ನಿಂದೆನ್ನ ರಕ್ಷಿಸಲು ಪ
ಹಿಂದೆ ನೀ ಸಲಹಿದವರು ಹೊಂದಿದವರೇನಾ
ನಿಂದಿನ್ನೂ ನಿನ್ನ ಪಾದ ಹೊಂದಲಲ್ಲೇ
ಬಂದೆನ್ನ ಅತಿತ್ವರದಿಂದೆನ್ನ ಕೈಯಪಿಡಿದು
ಅಂಧ ನಾ ತೋರಿಸಾ ನಂದನ ಸುತಹರಿ ೧
ಭಂಡಾರ ವುಳ್ಳವನಾಗಿ ನೀನುಯನ್ನ
ಕಂಡಾರೆ————–
————– ಏನು
ಹೆಂಡಾರ ಮೇಲೆ ದೃಷ್ಟಿ ಗಂಡಾರಿಗಿಲ್ಲದಿರೆ
ದುಂಡೇರಿಗೇನುಗತಿ ಪುಂಡರೀಕ್ಷಾಕ ಹರಿ ೨
ನಿನ್ನನ್ನೇ ನಂಬಿದವ ನಾನು ಇನ್ನು
ಯನ್ನಾ ನೀಕಡೆ ದೃಷ್ಟಿ ನೋಡ್ವದೇ ನೋ
ನಿನ್ನಾಣೆ ನಿನಗೆ ಇನ್ನು ಎನ್ನ ನೀ ಸಲುಹದಿರೆ
ಮುನ್ನೀನಾ ದೋಷ ಕಳೆದು ‘ಹೆನ್ನೆಯ ವಿಠಲಾ’ ೩

 

೧೨೫
ಸಂದೇಹವಾಯಿತು ಕಾಲ ಅನೇಕಾ ಬಂದು
ಕಾಯೋನೀ ಬಹುಮುಖಾ
ವಂದಿಸಿ ನಿಮ್ಮ ಪಾದದ್ವಂದ್ವಾರ್ಚನೆ ಎಂದಿಗೆ ದೊರಕುವದು
ಈ ಪರಿ ಹರಿಯೇ ಪ
ಹುಟ್ಟಿದ ಮೊದಲು ನೆಟ್ಟಗೆ ನಡದಾ ಪುಟ್ಟನು
ನಾನಲ್ಲ ಪುರುಷೋತ್ತಮ
ಪಟ್ಟಿಗಾಳನಾಗಿ ಪಾಪದ ಒಳಗೆ ಪುಟ್ಟಿ
ಬೆಳೆದೆ ನಾ ಪರಮಾತ್ಮ
ಗುಟ್ಟಿಲಿ ನಿಮ್ಮಯ ಧ್ಯಾನವು ಜ್ಹಿಹೆಗೆ ನಟ್ಟು
ಚಿತ್ತದಿ ನಡೆವೆ ಈ ಪರಿ ೧
ಸಂಸಾರ ಸತಿಸುತರ ಮೋಹಸಂಭ್ರಮ
ಕೆಲವು ದಿವಸಾಯಿತು
ಅಂಶಫಲಗಳಿಂದ ಆಗುವ ಅನುಭವ
ಸಂಶಯವೆಂಬುದು ತಿಳಿದು
ಹೋಯಿತು ಕಂಸಾಂತಕ ಹರಿ ಕಾಮ
ಜನಕನೇ ಹಿಂಸೆಯೊಳಗೆ
ಬಿದ್ದು ಈ ಪರಿಯಿಂದ ೨
ಮಂದಮತಿಯಾಗಿ ಇಂದಿನ ಪರಿಯಲಿ ಬಂದೆನು
ನಾನು ಭಗವಂತಾ
ಕುಂದು ಇಲ್ಲದ ಹಾಗೆ ಕರುಣಿಸಿ ಎನ್ನ ಕೈಯ್ಯನೆ
ನಾಡಿಯೊಳಗಾದಂಥಾ
ಮಂದರಧರ ಶ್ರೀ ಮಧುಸೂದನ ಗೋವಿಂದ ‘ಹೆನ್ನೆವಿಠ್ಠಲ’ ರಾಮಾ ೩

 

೨೯
ಸರಸ್ವತಿ ತಾಯಿ ಬಿಡದೆನ್ನ ಕಾಯಿ ||
ಪರಮ ಮಂಗಳ ಮೂರ್ತಿ ಹರಿಯ ಸುತನಸತಿ || ಪ
ಕಡಗ ಕಂಕಣ ಗೆಜ್ಜೆ ಕಾಲು ಪೆಂಡಿಗಿಯಿಂದ ||
ಸಡಗರದಲಿ ಹೊಳೆವ ನಡುವಿನೊಡ್ಯಾಣವು ||
ಪೊಡವಿಯೊಳಗೆ ನಿಮ್ಮ ವಡಸತಿಯರೊಳು ||
ಕಡುಸುಂದರಿ ಜಗದಂಬೆ ಕನಕದ ಗೊಂಬೆ ೧
ಕೊರಳಿಗೆ ವೈರನ(?) ಪೊಲುವ ಮುಖದಲ್ಲಿ
ಹೊರಳೆಲಿಯಂದದಿ(?)ಫಣಿಯಲ್ಲಿ ತಿಲಕ |
ಎರಳೆ ಕಂಗಳೆ ನಿನ್ನ ಹೆರಳಿನ ಸೊಬಗು
ಉರಗನ ಪೋಲ್ವದು ಬಾಲೆ ಸುಲೀಲೆ ೨
ಧರೆಯೊಳಧಿಕ ‘ ಹೆನ್ನೆಪುರ ಹೆನ್ನೆವಿಠಲನ’
ಚರಣ ಕಮಲದಲಿ ದೇವ ಭಜಿಸುವ
ಪರಮ ಭಕುತಿಯಿಂದ ಪಾಲಿಸೆ ಮಣೀಯುವೆ |
ಸ್ಥಿರ ನಿನ್ನ ನಂಬಿದ ಜನರನು ಕಾಯುವೀ ೩

 

೧೨೭
ಸಾಕಲಾರದಿರೆ ಎನ್ನ ಯಾಕೆ ಪುಟ್ಟಿಸಿದ್ಯೊ ಹರಿಯೆ ಪ
ಬೇಕು ಬೇಡದಿದ್ದರೆ ನಿನಗೆ —–ಯುಗ ಜನರೊಳೆನ್ನಾ ಅ.ಪ
ಹಿಂದಿನಿಂದ ಬಂದಾ ದೋಷಗಳಿಂದ ನಾನು ಬಹಳ
ಬೆಂದು ಬಳಲುತ ನಿನ್ನ ಪಾದವ ಹೊಂದಿ ನಿನ್ನ ಸೇರೆ
ಬಂಧು ಬಳಗ ನೀನೆ ಇನ್ನು ಎಂದು ಮೊರೆಯ ಇಡಲೂ
ತಂದೆ ತಾಯಿಗಳು ಕಂದನ ಪೊರೆದಂತೆ ಮಂದರಧರ ಶ್ರೀ
ಮಾಧವ ಕೃಷ್ಣಾ ೧
ವಸುಧೆಯೊಳಗೆ ನಿನ್ನ ಬಿಡದೆ ಮನಸಿನಲಿ ಸ್ತುತಿಸುವಾ
ಪಶುಪತಿ ಪಾಲಕನೆ ಎನ್ನ ಪಾಲಿಸೊ ಕೈ ಹಿಡಿದೂ
ಶಿಶುವಿನಂದ ನಿನ್ನ ನಿಜ ಸೇವಕ ಜನರಂತೆ
ಸೂನುವು ಎನಗೆ ಅಡಗಿಸಿ ರಕ್ಷಿಸಿದರೆ ವಸುಧೆಯೊಳಗೆ ಎನ್ನ ೨
ಎಲ್ಲ ಜನಕೆ ಇನ್ನು ಕರ್ತನಲ್ಲವೇನೊ ನೀನು
ಎಲ್ಲರಂತೆ ಎನ್ನಾ ಕರುಣಿಸಿ ಯಾಕೆ ನೋಡವಲ್ಲೆ
ಹೊಲ್ಲನೊ ನಾ ನಿಮಗೆ ನಿಮ್ಮ ಧ್ಯಾನದಲ್ಲಿರುವನಲ್ಲೊ
ಭಲೆ ‘ಹೆನ್ನೆ ವಿಠ್ಠಲನೆ’ ನೀನಿಷ್ಟು ಭಾಗ್ಯವಂತ ನಾಗಿ
ಬಡವನ ನೋಡಿ ೩

 

೧೨೮
ಸಾಕಲಾರೆಯಾ ಎನ್ನನು —-ಹಿಂದಕೆ
ಯಾಕೋ ಶ್ರೀಹರಿಯೇ ನೀನೂ
ಲೋಕನಾಯಕ ಭಕ್ತರೊಡೆಯನೆಂಬ ಬಿರುದು
ಬೇಕಿಲ್ಲವೇನು ನಿನಗೆ ಪ
ಹಿಂದಕ್ಕೆ ನೀ ಪೊರೆದ ಭಕ್ತಾರು ಎಲ್ಲಾರು
ಹಿತವೇನೋ ನಿನಗೆ
ಇಂದು ನೀನೇ ಗತಿಯೆಂದು ಇರುವವನ
ಇನ್ನು ರಕ್ಷಿಸದ ಬಗೆ
ಸಂದೇಹವಾಯಿತು ಸರ್ವರಕ್ಷಕನೆಂಬ
ಶಬ್ದಾವು ತೋರು ಇನ್ನು
ಇಂದಿರೇಯರಸ ಮುಕುಂದ ಗೋವಿಂದ
ಶ್ರೀಮಂದರಾದ್ರಿಧರ ೧
ಸಕಲ ಜಗತ್ಕರ್ತ ಸರ್ವಾಂತರ್ಯಾಮಿ
ಸಾಧುಜನರ ಪೋಷಕಾ
ಸಕಲ ಸ್ವತಂತ್ರನೇ ಸರ್ವೋತ್ತುಮನಾಗಿ
ಸಕಲರ ಪೊರೆಯದಿರೆ
ಪ್ರಕಟಉಳಿಯ—-ಹೀಗಾದೀತು
ಶುಕಮುನಿ ವಂದಿತ ಶ್ರೀ
ಅಕಲಂಕ ಚರಿತ ಶ್ರೀ ಆದಿನಾರಾಯಣ
ರುಕ್ಮಿಣೀ ಪ್ರಿಯಹರೆ ೨
ಶೃತಿಶಾಸ್ತ್ರ ಪುರಾಣ ಮತಿಯಲ್ಲಿ ಶೋಧಿಸಿ
ಗತಿನೀನೆಯಂದು ಇರಲು
ಹಿತದಲಿ ನಿಮ್ಮ ಪಾದ ಸ್ತುತಿಯಾನೆ ಮಾಡುವರ
ಅತಿ ಕಷ್ಟಕೊಡದಿರಲು
ಕ್ಷಿತಿಯೊಳು ನಿನ್ನ ಕೀರುತಿ ಪ್ರಭಾವದ ಗತಿ
ಹೀಗೆ ಕೆಡುವುದಿನ್ನು
ಪತಿತಪಾವನ ಶ್ರೀಪತಿ ‘ಹೆನ್ನೆವಿಠ್ಠಲ’ ಪಾಲಿಸದ ನೇಮ ೩

 

೧೨೯
ಸಾಕು ಸಾಕು ಇನ್ನು ಕಷ್ಟ ಅನೇಕಾ
ಬೇಕು ಬೇಕು ನಿನ್ನ ಕರುಣ ಪ
ಹಿಂದಿನಿಂದ ಎನ್ನ ಹೊಂದಿಬಂದ
ದೋಷದಿಂದ ನಾನು ಬಹು ಬಳಲುತಲಿ
———————–
ಎಂದು ಎಂದು ನಿಮ್ಮಂದ ದ್ವಯಪಾದ
ಹೊಂದುವೆ ನಾನೆಂದೆನುತಲಿ—–
ಬೆಂದುನೊಂದು ಈ ಚಂದದಿ
ಈ ಪರಿಯಿಂದ ನಿನ್ನನಾ ಹೊಗಳುತಲಿ—
ಬೆಂದು ನೊಂದೆ ನಿನ್ನ ಮಂದಿರ ಸೇವಕನೆಂದು
ಬಹಳ ಗೋವಿಂದ ಕೃಪಾಳು ೧
ಘೋರ ರಾಕ್ಷಸ—-ರಿದ ಅವರ
ಸಂಹಾರವ ಮಾಡಿದ ಬಲವಂತ
——————
ವೀರಶೂರ ಗಂಭೀರ ಕೃಪಾಕರ
ವಾರಿಜೋದ್ಭವನ ಪಡೆದಂಥಾ
ಸಾರಿಸಾರಿ ನಿಮ್ಮ ಸ್ಮರಿಸುವವರಿಗೆ
ಸರ್ವ ಸಂಭ್ರಮವು ಮಾಡುವಂಥಾ
ಕೀರುತಿ—–ರನು ಯನುತಲಿ
——ನಿಮ್ಮ ಸರ್ವೋತ್ತಮನಂಥಾ ೨
ಗಾಧೆ ಬೋಧೆ ಗೊಳಗಾದೆ ಈ ಪರಿ
ವೇದಾಂತ—ದೊಂದರಿಯೆ
ಸಾಧು ಸಾಧಕರ ಬೋಧೆಗಳೆಂಬುವ
ಸದಾ ಕರ್ಣದಿ ಕೇಳರಿಯೆ—-ದರೆ
ಇದರದೆಷ್ಟು ಮಾಧವ ಮಧುಸೂದನ ಧೊರಿಯೆ
ವೇದ ಆದಿ ಅಗಾಧ ಗೋಚರನೆ
ಯಾದವ ಪತಿ ‘ಹೆನ್ನ ವಿಠ್ಠಲ’ ಹರಿಯೆ ೩

 

೧೩೦
ಸಾರಿದೆ ನಿನ್ನ ಬೇಸಾರಲಾರೆನೊ ಹರಿ ತೋರಿಸಿದರೆ
ಸರಿ ತ್ವರದಿ ನೀ ಕರುಣಾವು ಪ
ಸಾರೋ ಸಾರಿಗೆ ಬಂದದೊಮೋಹನೀನಾ ಭಾರಿಪುಟ್ಟಿ ಪುಟ್ಟಿ
ಭವಣಿಯು ಬಡುತಾ ಮಾರ ಜನಕ
ಗುಣಗಂಭೀರಾ ಈ ಪರಿ
ಇರಲು ತೋರೋ ನಿನ್ನಯ ಚರಣಾರ ವಿಂದಗಳಿಂದೂ ೧
ದೇಹಕ ಹೊಂದಿಬಂದ ಕಾಮಾದಿಗಳಾರರಿಂದಾ
ಬಾಧೆಗೆ ಒಳಗಾಗಿ
ವಿಹಿತ ಮಾರ್ಗವನಳಿದು ಶ್ರೀ ಹರಿ ನಿನ್ನ
ಧ್ಯಾನಚಿತ್ತಕೆ ಬಾರದೊ
ಈ ಮಹಾ ಭಕ್ತನಕೈಯ ಹಿಡಿದು ರಕ್ಷಿಸು ಇಂದೂ ೨
ಹಿಂದು ಮುಂದು ಇಂದು ತಂದೆ ತಾಯಿ
ನೀನೆ ಬಂಧುಬಳಗ ಮುನ್ನ
ಭಾಗ್ಯ ಪುರುಷ ನೀನೆಂದು ರಾಯ ಪಾದ ಹೊಂದಿ
ಬಂದವರಾನಂದದಿ
ಕಂಡು ಮುಕುಂದ ‘ಹೊನ್ನೆಯ ವಿಠ್ಠಲಾ’ ೩

 

೧೭೪
ಸಿದ್ಧವು ಮನದಲ್ಲಿ ಶ್ರೀಹರಿಯ ಅರ್ಚಿಸಿದ ಬುದ್ಧಿವಂತರಿಗೆ
ಮೋಕ್ಷ ಪುಣ್ಯ ಫಲಾ
ಮಧ್ವಾಂತರ್ಯಾಮಿ ಮದನ ಜನಕನಾದ ಮಾಧವಾ ಕೃಷ್ಣಾ
ಗೋವಿಂದನ ಕರುಣವು ಪ
ಲೋಕದೊಳಗೆ ಅನೇಕಾ ಗ್ರಂಥಗಳಲ್ಲಿ
ಆಕಾರಾಮೊದಲಾ ದಕ್ಷರದಲಿ
ನೇಕಾ ಪರಿಯಲಿ ಕರೆದು ಸುವರ್ತಡದನಿಂದಾದಾ ಆದಿಮುನಿ
ಗಣಸಹಿತಾ ಶ್ರೀ ಕರದಿಂದಾಲಾಶ್ರಿತ ಜನ ಪೋಷಕನ ನೀ
ಕಾಮನಾದಿ ಪೂಜಿಸಿ ನಿಜಭಕುತಿ ಆಕಾಲದಲ್ಲಿ ಮಾಡಿದವರಿಗೆ
ಎಲ್ಲಾ ಮುಕುತಿ ಲೋಕನಾಯಕನನುಗ್ರಹದಿಂದಲೇ ೧
ವ್ಯಾಸಾಂಬರೀಷ ಪರಾಶರಾವಂದಿತ ಭೂಸುತೇ
ನಾಯಕ ಪೂಜಿತನಾ
ಈಶ ಜಗತ್ಕರ್ತ ಇಹಪರದಾಯಕ
ಸಾಸಿರನಾಮದ ಸರ್ವೇಶನ
ನೀ ನೋಡಿ ಮನದಲ್ಲಿ ಲಕ್ಷ್ಮೀಯನೆ ಇಟ್ಟಾ
ದಾಸೋತ್ತುಮರಾದ
ವರಿಗೆಲ್ಲಾ ವಾಸುದೇವಾನು ತನ್ನವರು ಎಂದು ಪಾಲಿಸಿ
ಈಸು ಜನರಿಗಿತ್ತಾ ಇಹಪರವು ೨
ಅಂದು ಚಂದ್ರಗೆ ಬಂದ ಶಾಪವು ಕಳೆದಾ ಅಜಮಿಳನಂತ್ಯ
ಕಾಲಕೆ ಕಾಯ್ದ ಕಂದಾ ಕೂಗಲು ನೇರ ಕಂಭದೊಳಗೆ ಬಂದಾ
ಮುಂದಾ ದನುಜನ ಸೀಳಿ ಮಗನಕಾಯ್ದ ಸಿಂಧುಶಯನ
ತನ್ನ ಹೊಂದಿದವರನೆಲ್ಲಾ ಬಂಧು ಬಳಗ ಆಗಿಪೊರೆವಂಥಾ
ಇಂದಿರೆಯರಸ ಶ್ರೀ ‘ಹೆನ್ನೆವಿಠ್ಠಲನ’ ಸಂದೇಹವಿಲ್ಲದೆ
ಸ್ಮರಿಸುವ ಶರಣರಿಗೆ ೩

 

೧೭೫
ಸುಮ್ಮನೆ ಹರಿಯ ದೂಷಿಸದಿರು ಯಮ-
ಧರ್ಮನಾಳ್ಗಳು ನಿನ್ನ ಎಳದೊಯ್ವರೊ ಪ
ಇಷ್ಟೂನು ವಿಷ್ಣು ಮಾಯವು ಎಂದು
ಈ ಸೃಷ್ಟಿ ಕರ್ತನು ಶ್ರೀಹರಿ ಎಂದು
ಸ್ಪಷ್ಟದಿ ಮನದಲ್ಲಿ ತಿಳಿಯದೆ
ಇಂಥ ದುರುಳ ಮಾತನಾಡಬಹುದೆ ೧
ಲೋಕನಾಯಕ ಲಕ್ಷ್ಮೀಲೋಲನಾ
ಜಗದೇಕ ವಿನುತರಾಮ ದೇವರನಾ
ಶ್ರೀ ಕರುಣಾಂಬುದಿ ಶಾಂತನಾ
ಇನ್ನು ನೀ ಕಾಣದೆ ಈ ಪರಿನಿಂದೆಯೆನೆ ೨
ಹರಿಶರಣರ ಕೊಂಡಾಡುತಿರು
ಘೋರ ನರಕದೊಳಗೆ ಬಿದ್ದು ನರಳದಿರು
ಪರಮಭಕ್ತರ ಬಾಯಿಲೆ ಬೊಗಳದಿರು
ಅತಿ ಪಾಪಿಯಾಗಿರುವರ ಸೇರಿ ಹೋಗದಿರು ೩
ಶೃತಿ ಶಾಸ್ತ್ರಗಳು ಸುಜ್ಜನ——–
ಇಂಥ ಕೃತಕ ಶಾಸ್ತ್ರಗಳ ನೋಡಿ ಕೂಗಬೇಡಾ
ಮತಿಗೆಟ್ಟು ಪರನಿಂದೆ ಮಾಡಬೇಡಾ
ಸದ್ಗತಿ ಮಾರ್ಗಕೆ ಹೊರಗಾಗ ಬೇಡಾ ೪
ಹರಬ್ರಹ್ಮ ಇಂದ್ರಾದಿಗಳೆಲ್ಲ
ಶ್ರೀಹರಿಯ ಸೇವಕರೆಂಬುದು ಬಲ್ಲ
‘ವರಹೆನ್ನ ವಿಠ್ಠಲನ ’ ನೀನೆ ಬಲ್ಲ
ಅವರ ಚರಣಕ್ಕೆ ಎರಗುವದು ಅಲ್ಲಾ ೫

 

೧೮೫
ಸೆರೆಯೊಳಗೆ ಹರಿಸೆರೆಯೆ ಮುಖ್ಯಾ
ಭಾವದೊಳಗೆ ಗುರುಭಾವನÉಯೆ ಮುಖ್ಯಾ ಪ
—-ದೊಳಗೆ ಪ್ರಥಮ —–ರಾರÉೀ ಮುಖ್ಯಾ
ಸೇವನೆಯೊಳಗೆ ಪುಣ್ಯ ಸೇವನೆ ಮುಖ್ಯಾ
ದೇವರೊಳಗೆ ವಿಷ್ಣು ದೇವಾರೆ ಮುಖ್ಯಾವು
ಯಾವ ಶಾಸ್ತ್ರಗಳಿಗೂ ವೇದವೇ ಮುಖ್ಯಾ ೧
ವನದೊಳು ಫಲವುಳ್ಳಾ —–ಮುಖ್ಯಾ
ದೀನದಾನವರೊಳಗೆ —–ದೀನನೆಂಬುವದೇ ಮುಖ್ಯ
ಜನರೊಳು ಸಾಧು ಸಜ್ಜನರಾದವರೇ ಮುಖ್ಯಾ
ಮನೆಗೆ ಹಿರಿಯನಾದ ಯಜಮಾನನೇ ಮುಖ್ಯಾ ೨
ಮಾಸಗಳೊಳು ಚೈತ್ರಮಾಸವೆ ಮುಖ್ಯವು
ವಾಸನೆಯೊಳು ಲಕ್ಷ್ಮೀವಾಸನೆ ಮುಖ್ಯ
ಭೂಸುರರೊಳಗೆಲ್ಲ ಪೂರ್ಣ ಪಂಡಿತರೆ ಮುಖ್ಯ
ವಾಸು ದೇವರಿಗೆ —-ದಾಸನೆ ಮುಖ್ಯ ೩
ಸ್ಥಾನದೊಳಗೆ ಗಂಗಾಸ್ಥಾನವೇ ಮುಖ್ಯವು
ಧೇನುಗಳೊಳು ಕಾಮಧೇನುವೇ ಮುಖ್ಯ
ಜ್ಞಾನದಲ್ಲಿ ಹರಿಸರ್ವೋತ್ತಮ ಜ್ಞಾನವೆ ಮುಖ್ಯ
ಗಾನದೊಳಗೆ ಸಾಮಗಾನವೇ ಮುಖ್ಯ ೪
ವೃಕ್ಷಗಳೊಳು ತುಲಸೀ ವೃಕ್ಷವೇ ಮುಖ್ಯವು
ಭಿಕ್ಷಗಳೊಳು ಯತಿ ಭಿಕ್ಷವೇ ಮುಖ್ಯವು
ಪಕ್ಷಿಗಳೊಳು ಗರುಡ ¥ಕ್ಷಿಯೇ ಮುಖ್ಯ
ಲಕ್ಷಾಧಿಕಾರರಿಗೆ ಲಕ್ಷ್ಮೀಯೆ ಮುಖ್ಯ ೫
ಪರ್ವತಗಳೊಳು ಮೇರು ಪರ್ವತವೆ ಮುಖ್ಯ
ಉರೆಗೆ ಮಳೆ ಬೆಳೆ ಉರುವೆ (ಬರುವೆ?) ಮುಖ್ಯ
ಮರ್ಯಾದೆ ನ್ಯಾಯಗಳಿಗೆ ಹಿರಿಯರಾದವರೇ ಮುಖ್ಯ
ಸರ್ವಾಧಿಕಾರರಿಗೆ ಸರ್ವಸಮತವೆ ಮುಖ್ಯ ೬
ಕ್ಷೇತ್ರಗಳೊಳು ಕುರುಕ್ಷೇತ್ರವೆ ಮುಖ್ಯ
ಯಾತ್ರಿಗಳೊಳು ಗಂಗಾಯಾತ್ರಿಯೆ ಮುಖ್ಯ
ಸೂತ್ರಗಳೊಳು———ಮುಖ್ಯವು
ಸ್ತೋತ್ರಗಳೊಳು ಹರಿಸ್ತೋತ್ರವೇ ಮುಖ್ಯ ೭
ಗ್ರಾಮಗಳೊಳು ಸಾಲಿಗ್ರಾಮವೇ ಮುಖ್ಯ
ಭೂಮಿಗಳೊಳು ಪುಣ್ಯ ಭೂಮಿಯೇ ಮುಖ್ಯ
ಆರು——-ಳಿಗೆಲ್ಲ ಆರೋಗ್ಯವೆ ಮುಖ್ಯ
ಕಾಮುಕ ಸ್ತ್ರೀಯರಿಗೆಲ್ಲ ಕಾಮಪುರುಷನೇ ಮುಖ್ಯ ೮
ಸನ್ಮಾರ್ಗಗಳೊಳಗೆ ಸನ್ಯಾಸಿ ಮಾರ್ಗವೆ ಮುಖ್ಯ
ಅನಿಮೇಷಾ ಜಾಗರದೊಳಗೆ ಅನಿಮೇಷರೆ ಮುಖ್ಯ
—————————-
ಧನ್ಯ ‘ಹೆನ್ನೆ ವಿಠ್ಠಲನ ‘ ದಯವು ಇದ್ದರೆ ಮುಖ್ಯ ೯

 

೧೭೩
ಸ್ವಾಮಿ ಭಜನೆ ಮಾಡೊ ಮನುಜ ಪ್ರೇಮದಿಂದಲಿ
ಕಾಮಿನಿಯರ ಮೋಹವತೊರೆದು ಕಮಲನಾಭನ
ಪಾದ ಹಿಡಿದು ಪ
ಬಂಧು ಬಳಗ ಭಾಗ್ಯವೆಂಬ ಬಯಲು ವಸ್ತುವೊ
ಹಿಂದು ಮುಂದೇನು ಬರುವರು ಯಾರು ಇಲ್ಲವೊ
ಎಂದು ತಿಳಿದು ಹರಿಯ ಮನದಿ ಮರೆಯಬೇಡವೊ
ಇಂದಿರೇಶ ಸಕಲಕರ್ತ ವೆಂಕಟಾದ್ರಿ ನಿಲಯನಾದ ೧
ನಿತ್ಯನೇವÀು ನಿಷ್ಠೆಯಿಂದ ನಿಜವು ತಿಳಿದು ನಿ
ಸತ್ಯವಂತರ ಸಂಗ ಬಿಡದೆ ಸರ್ವಕಾಲದಿ
ಭೃತ್ಯರಿಗೆ ಭೃತ್ಯನಾಗಿ ಪೂರ್ಣಭಾವದಿ
ಕೃತ್ರ್ಯಹರಿಯ ನಾಮಸ್ಮರಣೆ ಘಳಿಗೆ
ಮರಿಯದ್ಹೋಗಿ ಬಿಡದೆ ೨
ಗಾನಲೋಲ ಕರುಣಾಸಾಗರ ಘನವಿಲಾಸನ
ಭಾನುಕೋಟಿ ತೇಜನಾದ ಪರಮ ಪುರುಷನಾ
ಶ್ರೀನಿವಾಸ ‘ಹೊನ್ನವಿಠ್ಠಲ’ ಶರಧಿ ಶಯನನಾ
ಧ್ಯಾನದಲಿ ಚಿತ್ತವಿಟ್ಟು ಧೇನು ಪಾಲಕ ದಿವಿಜವಂದ್ಯನ ೩

 

೩೧
ಹದ್ದುಗಮನ ನೋಡು ಮುದ್ದು ಶ್ರೀಕೃಷ್ಣ ಪ
ಪಕ್ಕಕೆಂಪು ಬಿಳಿಕೊರಳು ನಖವುಳ್ಳ ದೊಡ್ಡಮೂಗ ೧
ಅಂಜಿಸಿ ದಿಶೆಗೇಡಿ ಮಾಡಿದಂತ ನಾಗಕುಲಾಂತಕ
ಆ ಗರುಡನ ೨
ಪನ್ನಗ ಗಿರಿಯಲೆ ಇಪ್ಪ ಯನ್ನಸ್ವಾಮಿ ವರ
‘ಹೆನ್ನೆ ವಿಠ್ಠಲ’ ಹರಿ ನೀನಿರುವಂಥ ೩

 

೨೮
ಹನುಮ ಶ್ರೀರಾಮ ದೇವರ
ಅತಿ ತ್ವರದಲಿ ಬಾ ಹನುಮ ಪ
ದಿನವೊಂದು ಯುಗವಾಗಿ ದೈತ್ಯರಬಾಧೆಗೆ
ತನುವು ಬಹಳ ಪರಿ ತಲ್ಲಣುಸುತಲಿದೆ ಅ.ಫ
ಚಂಡ ಪ್ರಚಂಡನಾದ ದೇವಾ ಸದ್ಗುಣಭಾವಾ
ಮಂಡಲಾಧಿಪ ಶೌರಿ ಹರೇ ಜಗದೋದ್ಧಾರಿ
ಹಿಂಡು ಬಲದಿ ಬಂದೀ ದೈತ್ಯರನೆಲ್ಲ
ಛಂಡಿಸಿ ಬಿಡುವಾ ಶರ್ತು ಬಿರುದು ನಿಂದ್ಹನುಮಾ ೧
ಹತ್ತು ಮಾಸವು ಆಯಿತ್ಹನುಮಾ
ಭಕ್ತರ ಪ್ರೇಮಾ ಒತ್ತಿಸೈನ್ಯದಿಂದ
ವಾರಿಧಿ ಬಂಧಿಸಿ ಮತ್ತಿನ ದೈತ್ಯರ
ಮರ್ದನ ಮಾಡೆಂದ್ಹೇಳ್ಹನುಮಾ ೨
ರಾಜಾಧಿ ರಾಜನಾದಂಥಾ ರಾಮನಂತಾ
ಭೋಜ ಮಹಿಮ ಬಲವಂತ
ವಿಜಯನಂತ ಈನಗರ ರಕ್ಷಕ
‘ಹೊನ್ನವಿಠ್ಠಲ’ ರಾಜೀವಾಕ್ಷಗೆ ರೋಷವು ಇದ್ದರೆ ೩

 

೨೪
——–ಹರಿ ನಾರದವರದ ಪ
ಅಗಣಿತ ಮಹಿಮನ ಆನಂದ ನಿಲಯನ
ಬಗೆ ಬಗೆಯಲಿ ಭಕ್ತರನ ಬಿಡದೆ ಪೊರೆವನಾ ೧
ಸುಜನ ವಿಲಾಸನ ಕಂದನ ಕಾಯ್ದನ
—–ವರದನಾ ಸುಂದರ ರೂಪನಾ ೨
ಜಲದೊಳಾಡುವನ ನೆಲದ ಮೇಲಾಡುವನ
ಬಲವುಳ್ಳ ಅರಸನ ಬತ್ತಲೆ ಹಯವನೇರಿದನ ೩
ಶೃಂಗಾರ ಭೂಷಣನ ಸುರಮುನಿವಂದ್ಯನ
ಗಂಗೆಯ ಪಡೆದನ ಕರುಣಾಸಾಗರನ ೪
ಮಕರಕುಂಡಲ ಕರ್ಣ ಮೌಕ್ತಿಕ ಹಾರನಾ
ಸಕಲ ಆಭರಣನ ಸರಸಿಜನಯ್ಯನ ೫
ನಿಗಮ ಗೋಚರನ ನಿತ್ಯ ಕಲ್ಯಾಣನ
ಜಗದೋದ್ಧಾರನ ಜಾನಕಿ ಪ್ರೇಮನಾ ೬
ಅಚ್ಯುತಾನಂತನ ಹರಿ ‘ಹೊನ್ನ ವಿಠ್ಠಲನ’
ಸಚ್ಚಿದಾನಂದ ಸರ್ವೋತ್ತಮ ದೇವನ ೭

 

೧೭೮
ಹರಿನಾಮ ಭಜನೆಯೊಳಿರು ಇರೂ
ಶ್ರೀಹರಿ ಮಹಿಮೆಯ ಭುವಿ ತೋರುರೋರು ಪ
ಸಜ್ಜನರ ಸಂಗವ ಮಾಡು ಮಾಡು
ದುರ್ಜನರ ಸಂಗವ ಬಿಡೂ ಬಿಡೂ
ಮೂಜ್ಜಗದೊಡೆಯನ ಪಾಡು ಪಾಡು
ಇನ್ನು ಮುಕುತಿಯ ಬೇಕೆಂದು ಬೇಡು ಬೇಡು ೧
ಗುರುಹಿರಯರ ಪಾದ ಹಿಡಿ ಹಿಡಿ
ಮನದಿರುವ ಕಾಮ ಕ್ರೋಧ ಕಡಿ ಕಡಿ
ಶರಣರ ಕೂಟದೋಳ್ ಕೂಡಿ ಕೂಡಿ
ಬೇಗ ನರಹರಿ ಮೂರ್ತಿಯ ನೋಡಿನೋಡಿ ೨
ರಾಮನಾಮಾಮೃತ ಕುಡಿ ಕುಡಿ
ಅತಿಕಾಮುಕ ದ್ರವ್ಯವ ಬಿಡಿಬಿಡಿ
ಸ್ವಾಮಿ ನಾರಾಯಣನೆಂದು ನುಡಿನುಡಿ
ಬಹು ಪ್ರೇಮದಿ ಹರಿಕರುಣ ಪಡಿಪಡಿ ೩
ಸಕಲಶಾಸ್ತ್ರಗಳ ನೋಡು ನೋಡು
ಅದರ ಸಾರಾಂಶ ತಿಳಿದು ಆಡೂ ಆಡೂ
ಪ್ರಕಟಿತ ಭಕ್ತರಿಗನ್ನ ನೀಡು ನೀಡು
ಇನ್ನು ಪರಮಾತ್ಮನ ಕೊಂಡಾಡು ಆಡು ೪
ಹರಿಯ ಚರಿತವ ಹೇಳು ಹೇಳು
ನರಹರಿಯು ಕಥೆಯ ಕಿವಿಲಿ ಕೇಳುಕೇಳು
ಪರಮ ಭಕ್ತರ ಪಾದಕೆ ಬೀಳು ಬೀಳು
ಶ್ರೀ ಪರಬ್ರಹ್ಮನ ಸೇವೆಗೆ ಏಳು ಏಳು ೫
ಯೋಗ್ಯರ ಕಂಡರೆ ಹಿಗ್ಗೂ ಹಿಗ್ಗೂ
ಅತಿ ಭಾಗ್ಯರ ಕಂಡರೆ ತಗ್ಗೂ ತಗ್ಗೂ
ಸುಜ್ಞಾನಿಗಳಿಗೆ ಡೊಗ್ಗು ಡೊಗ್ಗು
ಇನ್ನು ಶುದ್ಧಾತ್ಮಕರೊಳು ಜಗ್ಗು ಜಗ್ಗು ೬
ಸನ್ಯಾಸಿಗಳನು ಸೇರು ಸೇರು
ದುಷ್ಟದುರ್ಮಾಗರ ಕಂಡು ದೂರು ದೂರು
ಮರ್ಮ ಬಲ್ಲವರಲ್ಲಿ ಜಾರು ಜಾರು
ಶ್ರೀ ಮಹಾ ‘ಹೆನ್ನ ವಿಠ್ಠಲನ’ ‘ಸಾರೂ ಸಾರೂ’ ೭

 

೧೭೬
ಹರಿಭಜನೆ ಮಾಡುವಗೆ ಅನಂತಫಲವೂ
ಹರಿ ಭಜನೆ ಇಲ್ಲದವಗೆ ಅತಿಘೋರ ತಮವೂ ಪ
ಪರಮಾತ್ಮನ ಧ್ಯಾನ ಭಾರದಲಿ ಇರುವಗೆ
ಭವರೋಗ ಸಂಚಿತವು
ಪರಿಹಾರವು ಪರಮಮಂಗಳಮೂರ್ತಿ
ಸ್ಮರಣೆ ಮಾಡದ ನರಗೆ
ಪರಿ ಪರಿಯ ನರಕಾದಿ ಬಂಧಕವು ಬಿಡದು ೧
ಆ ರಾಮನಂಘ್ರಿಗಳ ಅರ್ತಿಯಲಿ ಅರ್ಚಿಸುವರಿ
ಗಾರಾಮವಾದಂಥ ಸುಖಸೌಖ್ಯವು
ಹೇರಾಮ ಎನದವಗೆ ಅತಿ ದು:ಖದಾರಿದ್ರ್ಯ
ತೋರುವುದು ಅನುಗಾಲ ತಗಲಿ ಬಿಡದವೆಯಿನ್ನು ೨
ವಿತರಣಾದಿ ಶ್ರೀ ಹೆನ್ನೆವಿಠ್ಠಲನ ಹೃದಯದಲಿ
ಸತತಧ್ಯಾನವು ಮಾಡುವ ಸಾಧು ಜನರಾ
ಪತಿತ ಪಾವನನಾದ ಪರಮಾತ್ಮ ಪಾಲಿಸೆ
ಗತಿಯು ತೋರುವ ಇನ್ನು ಕರುಣದಲಿ ಹರಿಯು ೩

 

೧೭೭
ಹರಿಯಂದು ಮನದಲ್ಲಿ ಅರಿತು ಪೂಜಿಸುವರಿಗೆ ಪರಮ
ದಾರಿದ್ರ್ಯ ದು:ಖ ಘೋರ ನಿಹಾರವೂ ಪ
ಶ್ರೀರಾಮ ನಾಮವು ಚಿತ್ತದಲ್ಲಿ ಬಿಡದೆ
ಆರು ವರ್ಣಿಸುವರು
ಅವರಿಗೆಲ್ಲಾ ಆ ರಾಮನನೇ ತೋರಿ ಅಧಿಕ
ಭವದೋಷನಳಿದೂ
ಪಾರಗಾಣಿಸಿ ಮುಕ್ತಿಪದವಿಯ ಕೊಡುವಂಥಾ ೧
ಶ್ರೀ ಕೃಷ್ಣಾಯನುತಾ ನೀ ಶಾಶ್ವತವಾಗೀ——
ಸ್ಮರಿಸುವ ಉಚಿತಜ್ಞರಾ ಆಕಷ್ಟವನೆ ಕಳೆದು
ಅಧಿಕ ಸಾಮ್ರಾಜ್ಯ
ಪದವಿ ಬೇಕಾದಷ್ಟು ಕೊಡುವಂಥ ಭಗವಂತ ಪರಬ್ರಹ್ಮ ೨
ನಾರಾಯಣಾ ಎಂದು ನಾಲಿಗೆಯಲಿನುಡುವಂಥ
ನರಮಾನವರಿಗೆ ಇಲ್ಲಾ ಧೀರ ಹೊನ್ನಯ್ಯ ವಿಠ್ಠಲ
ದನುಜ ಮರ್ದನ
ದೇವ———–ರೆಂದೆನಿಸಿ ೩

 

೧೩೧
ಹರಿಯಂದು ಸ್ಮರಿಸುವರ ದುರಿತಪರಿಹಾರವೆಂದು
ನೆರೆಪೇಳ್ವ ಶೃತಿ ತಿಳಿದು ಮನವೆ
ಕರುಣಾಸಾಗರನಾದ ಕಮಲಾದ್ರಿವಾಸ
ನರಹರಿಯಪಾದ ಭಜಿಸುವ ಮನವೆ ಪ
ಸುತನ ನಿಂದಗನೆಂದು ಹಿತದಂತ್ಯಕಾಲ ಸಂಘಾತನೆ
ಹಿತ ವೇಳ್ವೆ ಕರಿಯಲು ಮನವೆ
ಚತುರಾಸ್ಯ ಜನಕ ಮನ್ಮಥಕೋಟಿರೂಪ
ಸದ್ಗತಿ ತೋರಿಸಲಹುದೇನು ಮನವೆ ೧
ಆ ಮರರೀಮರ ಎಂಬ ಪಾಮರಗೆ ಪಟ್ಟಾಭಿರಾಮ
ಭಕ್ತರ ಪ್ರೇಮ ಮನವೆ
ಕಾಮಿತಾರ್ಥವನಿತ್ತ ಕಂಜಾಕ್ಷದಯದಿ
ಸೀತಾಮನೋಹರ ರಾಮ ಮನವೆ ೨
ಕರಿಯು ಮಕರಿಗೆ ಶಿಲ್ಕಿ ನೆರಳುತಲಿ ಪರಮಾತ್ಮ
ಪರಬ್ರಹ್ಮನೆಂದು ಸ್ತುತಿಸಿ ಮನವೆ
ಗರುಡವಾಹನ ಹೆನ್ನೆಪುರನಿಲಯ
ಮರಿಯದಲೆ ಪರಿಪಾಲಿಸಿ ಪೊರೆವ ಮನವೆ ೩

 

೧೩೩
ಹರಿಯೆ ನಿನ್ನ ಚರ್ಯದಲ್ಲಿದೊ ಇನ್ನು ಉಗ್ರವಾದ
ಚರ್ಯಗಳಿಂದನಾ
ಮಾಡು ಪರಮಾತ್ಮ ನಿನ್ನ ದೃಷ್ಟಿ ಹರಿದರೆ ಸಕಲ
ಗ್ರಹಬಾಧನೆಯು ಎಲ್ಲಿನೋಡು ಪ
ಗುರುಕರುಣಾಪೂರ್ಣರಾಗಿರುತ ನೀನಿರುತದಲಿ
ಪರಮ ಪ್ರೀತಿ ನಿಷ್ಟ ಗರಿಷ್ಟರಾಗಿ ಪರಮ ಹರುಷದಿ
ಇರುವ ಭಾವಜ್ಞರನ ಪೊರೆವ ಭಾವಗವೇ ಗ್ರಹಗಳಾಗಿ ೧
ಗ್ರಹವೇ ನಿಮ್ಮನುಗ್ರಹವು ಇಹಪರಕ್ಕೆರಡಕ್ಕೂ ಸಹಾಜವಾಗಿ
ತೋರುವವು ಶಬ್ಧಮಾತ್ರ ಮಹಾದೇವ ನಿಮ್ಮ
ಕರುಣಮಹಿಮೆಯನ್ನು ಈ ಪರಿ
ಮಹಿಯೊಳಗೆ ಚರಿಸುವಂಥಾ ೨
ಆವನಾರನ ಗತಿಯು ಆವನಾರನ ರೀತಿಯು
ಆವನಾರನ ಸ್ಥಿತಿಯು ಅರಿತು ಇರುವಾ
ಭಾವ ಭಾವಗಳಿಂದ ಫಣಿಯ ಲಿಖಿತಗಳಂತೆ
ಯಾವ ಕಾಲ—–ಇರುವಾ ೩
ಸೂತ್ರಧಾರನು ನೀನು ಸಕಲವನು ಇನ್ನು ಈ
ಗಾತ್ರಗಳಿಗೆಲ್ಲ ಕಾರಣ ಕರ್ತನಾಗಿ
ಮಾತ್ರದಲಿ ಪ್ರಾಣಿಗಳನ್ಯತಾಥ್ಯ——-
ಪಾತ್ರ ನೀನಲ್ಲವೇನೈ ೪
ದೂರು—–ತ್ರವೆ ಅವರಿಗಾಧಾರ ನೀನಾಗಿ
—————————
‘ಹೊನ್ನವಿಠ್ಠಲ’ ದನುಜಮರ್ದನದೇವ
——————— ೫

 

೧೩೨
——–ಹರಿಯೆನ್ನ ಕೂಡಿಸೊ ಬಿಡದಿನ್ನು
ಕೂಡಿಸು ಕೃಪಾನಿಧಿಯೆ ಕೂಡಿಸೆನ್ನ ಧೊರಿಯೆ ಪ
ಉದಯದಲಿ ಏಳುತಲಿ ಊರ್ವೀಶ ನಿಮ್ಮಸ್ಮರಣೆ
ಹೃದಯದಲಿ ಅನುಗಾಲ ಉಚಿತನಾಗಿ
ಪದುಮನಾಭ ನಿಮ್ಮ ಪಾದವನೆ ಪೂಜಿಸುವ
ಸದಮಲ ಜ್ಞಾನಿಗಳ ಸಂಗದೊಳಗೆ ಎನ್ನ ೧
ನಿತ್ಯನೇಮ ವ್ರತದಲ್ಲಿ ಬೇಕಾಗಿ ಇರುತಲಿ
ಅತ್ಯಂತ ಪುರುಷ ಆನಂದದಲ್ಲಿ
ಕರ್ತೃ ನೀನಲ್ಲದೆ ಸರ್ವೋತ್ತಮರು ದಾರೆಂದು
ನಿತ್ಯ ನೀನೆಂದು ತಿಳಿಯುವ (ತಿಳಿಸುವ ) ಆತ್ಮಕರಸಂಗ ೨
ಅನುದಿನವು ನಿಮ್ಮ ಧ್ಯಾನ ಮನದಲ್ಲಿ ಮರೆಯದೆ
ದಿನಗಳನು ಕಳೆವಂಥಾ ದ್ವಿಜೋತ್ತಮರಾ
ಅನುಸರಿಸಿ ಅವರನನು ಅತಿಮೋದದಿಂದ ಬೆರೆದು
ವನಜನಾಭನೆ ನಿಮ್ಮ ಭಜನೆ ಮಾಡುವರ ಸಂಗ ೩
ವೇದಶಾಸ್ತ್ರಾದಿಗಳ ಭೇದಗಳನರಿತು ಸತ್ಯ
ಬೋಧಗುರು ಕರುಣದಲಿ ಪೂರ್ಣರಾಗಿ
ಗಾದೆಗಳ ಕಳೆದು ಸುಬೋಧೆಗಳ ಹೇಳುವಂಥ
ಸಾಧು ಸಜ್ಜನರಾದಂಥ ಸತ್ಪುರುಷರಾ ಸಂಗ ೪
ಉಪವಾಸವನೆ ಮಾಡಿ ಉಚಿತ ಕರ್ಮಗಳಿಂದ
ತಪಗಳನೆ ಮಾಡುವಂಥ ಧನ್ಯಜನರಾ
ಸುಫಲಂಗಳನೆ ಪಡೆದು ಸೂತುತಲಿ ಇರುವರಾ
ಅಪರಿಮಿತ ಮಹಿಮ ನಿನ್ನ ಹಾಡಿ ಪಾಡುವರಸಂಗ ೫
ಪರಮಾತ್ಮ ನಿನ್ನ ಮಹಿಮೆ ಭಾವದಲಿ ಶೋಧಿಸಿ
ಪರಿಪರಿಯಲಿರುವಂಥ ಭಾವಜ್ಞರಾ-
ಚರಣೆಯನು ಮಾಡಿ ನಿಮ್ಮ ಸೇವೆಯನು ಮಾಡುವಂಥ
ಪರಮ ಭಕ್ತರಾದ ಪುಣ್ಯವಂತರ ಸಂಗ ೬
ಗಂಗಾದಿ ಸಕಲ ತೀರ್ಥಂಗಳನು ಆಚರಿಸಿ
ಅಂಗಾದಿ ದೋಷವ ಕಳೆದ ಅಧಿಕ ಜನರಾ
ಸಂಗಸುಖ ಅಬ್ಧಿಯೊಳು ಸಂತತವು ಬೆರೆವಂಥರಂಗ ‘ ಹೊನ್ನ ವಿಠ್ಠಲ’ ರಾಯ ಗೋವಿಂದ ೭

 

೧೭೯
ಹಲವು ಹಂಬಲಿಸಿದಲ್ಲೇನೂ ಇಲ್ಲ
ಜಲಜನಾಭನ ಕರುಣÉೂೀದಯವು
ತಪ್ಪಿದ ವೇಳ್ಯಾ ಪ
ಬರಿಗಂಟು ಅಪೇಕ್ಷೆ ಬಯಸುವುದೆಲ್ಲಾ
ಪೂರ್ವಾಕೃತ ಇದ್ದದ್ದು ಬಿಟ್ಟದ್ದೆ ಇಲ್ಲ
ಬಿರುದು ಬಾವಲಿ ದೇಹಾಭಂಗ ಬಡುವಾದೊಂದೆ
ಪರಿ ಪರಿ ವ್ಯಥೆಯಿಂದ ಫಲವೇನೊ ಇಲ್ಲ ಮುಂದಾ ೧
ಬಿತ್ತಿದ ಬೀಜ ಎಷ್ಟು ಬೆಳೆಯ—-ಲಿನೂ
ಸುತ್ತಾ ದೇಶವು ತಿರುಗಿ ಸೂಸಿದರೇನೂ
ಪತ್ರ ಬರೆದ ಬ್ರಹ್ಮ ಫಣಿಯ ಲಿಖಿತವಲ್ಲದೆ
ಪ್ರತ್ಯೇಕ ನಿನಗೊಂದು ಬಾಹೋದು ಇನ್ನುಂಟೆ ೨
ಅನುಭವ ಇದ್ದವಲ್ಲಾ ——ಇಲ್ಲಾ
ಮನದಿ ತಿಳಿದು ಇನ್ನು ಮರಿಯದು ಎಲ್ಲಾ
ಘನ್ನ ‘ಹೊನ್ನೆ ವಿಠ್ಠಲ ನಾ ಕರುಣಾವಿಲ್ಲ —–
ಮನಸಿನೊಳಗೆ ಸ್ಮರಿಸಿ ಮುಕುತನಾಗೋದು ಬಿಟ್ಟು ೩

 

೧೩೫
ಹೀಗೆ ನಿರ್ದಯ ಮಾಡುವರೆ ಶ್ರೀಮನೃಹರೇ ಪ
ಹೀಗೆ ನಿರ್ದಯ ಮಾಡುವರೆ ಕರುಣಾಂಬುಧೆ
ಭೋಗೀಶಶಯನ ಸನ್ಮುನಿಜನ ಪಾಲನ ಅ.ಪ
ವಾರಿಜಾಸನ ವಂದಿತ ತ್ರಿಜಗದಾಧಾರ ನಿರ್ಜರ ಪೋಷಿತ
ಘೋರದೈತ್ಯೇಯ ಸಂಹಾರ ಕೌಸ್ತುಭರತ್ನಹಾರ ಭೂಷಿತ
ಯದುವೀರ ಮಾರಮಣನೇ ೧
ಮದನ ಜನಕ ಸರ್ವೇಶ ಭಾಸುರ
ಶಶಿವದನ ನೀರದ ಸಂಕಾಶ
ಮಧು ಮುರಾಂತಕ ಕುಂದರದನ ಸುಂದರಗಾತ್ರ
ಸದಮಲ ತೇಜ ಕಂಜದಲ ಲೋಚನ ಹರೇ ೨
ಪರಮ ಪುರುಷ ಗೋಪಾಲ ಚಿನ್ಮಯರೂಪ
ಗರುಡವಾಹನ ಶ್ರೀಲೋಲ
ಕರಿರಾಜವರದ ಸುಸ್ಥಿರ ಕೀರ್ತಿಸಾಂದ್ರಮಂ
ದರಧರ ವರ ಹೆನ್ನೆಪುರ ಲಕ್ಷ್ಮೀನರಸಿಂಹ ೩

 

೧೮೬
ಹೋತಾರ ಪರುವಾಸ ಶ್ರೀ ಲಕ್ಷ್ಮೀಶಾ ಪ
ಶ್ರವಣ ಮನನ ನಿದಿಧ್ಯಾಸನಗಳಿಂದ
ಭವ ಪರಿಹಾರ ನಿಮ್ಮ ನಾಮ ಗೋವಿಂದ ೧
ಭಕ್ತ ———————–
—————-ಭಜಿಸುವನೇಕ ೨
ಪನ್ನಗಶಯನ ಸುಪನ್ನಗ ವಾಹನ
ಹೆನ್ನೆವಿಠಲರಾಯ ಮೋಹನ ೩

 

ಆತ್ಮ ನಿವೇದನೆಯ ಕೀರ್ತನೆಗಳು
೩೪
ಅಂತರಂಗದಲ್ಲಿ ಮಾಯಾ ಚಿಂತನೆಮಾಡುವ ಸಾಧೂ
ಸಂತರ ಸಂಗದೊಳಿರಿಸೆನ್ನಾ ಪ
ಸಚ್ಚಿದಾನಂದಾ ನಿನ್ನ ಉದಯಾದಿ ಏಳುತಾ ಶ್ರೀ
ಪದುಮನಾಭಾನ ಭಜನಿ ಮುದದಿ ಮಾಡುತಾ ——- ೧
ಮುಖ್ಯ ಭಕ್ತಾಜನರೊಳು ಪದಸೇವೆಯಾ ಮಾಡುವಂಥ
ನಿಜಜ್ಞಾನ ನಾನು ಹೃದಯಾದೊಳು ಇನ್ನು
ಉದ್ಧರಿಸು ನೀನು ಯನ್ನ ೨
ಹರಿಸರ್ವೋತ್ತಮ ಜ್ಞಾನಾ ಅಧಿಕಾ ಸಂಪನ್ನಾರಾದ ಪರಮ
ಮಹಾನುಭಾವ ಪುಣ್ಯವಂತರ ಕೂಡಾ ಇರುವ ಹಾಗೆ ನೀ
ಬಿಡದೆ ಇರುವಂತೆ ಮಾಡೋ ಶ್ರೀ ಪರಮಾತ್ಮಾ ಪರಮಪುರುಷಾ
ಸೋಪಾನಾ ಶ್ರೀನಿವಾಸ ೩
ನಿತ್ಯಕ್ಕೆರಗೂತ ನಿನ್ನಲ್ಲೆ ನೀತಿ ತಪ್ಪಾದಂತೆ ಇರುವಾ
ಸತ್ಯ ಆತ್ಮತಾ ಅರುವು ಆದಾ
ಶರಣರೊಳಗೆಯಂಣ(ಯನ್ನ) ೪
ಭೃತ್ಯನಾಗಿ ನಡುನಂತ್ತೆ (ನಡಿಯುವಂತೆ ) ಪಾಲಿಸು ಎಂದೆ
ತಂದೆ ನಿತ್ಯ ‘ಹೊನ್ನ ವಿಠ್ಠಲ ಶ್ರೀ ನಾರಸಿಂಹ’
ನಾರದ ವರದ ೫

 

ಎಂದಿಗೆ ದಯಬಾಹುದೋ
೪೯
ಎಂದಿಗೆ ದಯಬಾಹುದೋ ರಾಮಾ
ಎಂದಿಗೆ ದಯಬಾಹುದೊ ಎನ್ನಯ ಮೇಲೆ
ಮಂದರಧರ ಗೋವಿಂದ ಮುಕುಂದ ಪ
ಸ್ಪಷ್ಟದಿ ನಿಮ್ಮ ಪಾದ ಸ್ಮರಿಸುತಲಿರುವನ
ಕಷ್ಟವ ಕಳೆದು ಮನೋಭಿಷ್ಟವ ತೀರಿಸು ೧
ಕಂತುಜನಕ ಶ್ರೀಕಾಂತಾ ಭಕ್ತನ
ಚಿಂತಿಯ ಬಿಡಿಸಿ ಸಂತತ ಪಾಲಿಸಲು ೨
ವರಹೆನ್ನೆಪುರ ನರಹರಿ ನಿನ್ನಯ ಮೊರೆ
ಹೊಕ್ಕವನ ಪೊರೆಯಲಿ ಹರುಷದಲಿ ೩

 

ಹಾಡಿನ ಹೆಸರು :ಎಂದಿಗೆ ದಯಬಾಹುದೋ
ಹಾಡಿದವರ ಹೆಸರು :ಅನಘಾ ಭಟ್
ರಾಗ : ತೋಡಿ
ತಾಳ :ಭಜನ್ ಠೇಕಾ
ಸಂಗೀತ ನಿರ್ದೇಶಕರು :ವಿನಾಯಕ ತೊರವಿ
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಎದೆ ಒಡೆದು ಏಕೆ ನೀ
೫೧
ಎದೆ ಒಡೆದು ಏಕೆ ನೀ ಹೆದರುತಿ ಮನವೆ
ಪದುಮನಾಭನ ಪಾದ ಭಜನೆ ಹೃದಯದಲಿರೆ ಪ
ಅಖಿಲ ಜನಗಳ ಪೊರೆವ ಹರಿಯು ಕರ್ತನಾಗಿರಲು
ಸಕಲ ಜಗಬೋಧಗುರು ಸನ್ನಿಧಿ ಇರಲೂ
ಸಕಲ ಬ್ರಹ್ಮಾದಿ ದೇವತೆ ಬಂಧು ಬಳಗಿರಲು
ನಿಖಿರವಿಲ್ಲದೆ ಚಿತ್ತ ನೀನು ಈ ಪರಿಯಿಂದಾ ೧
ಮುದದಿಂದ ಶ್ರೀ ಲಕ್ಷ್ಮೀ ಮಹಾತಾಯಿ ತಾ —–
—–ದಮಲ ಜ್ಞಾನಿಗಳ ಸಂಬಂಧ ವಿರಲೂ
ಕುದುರೆಯಂದದಿ ಮನಸು ಕ್ರೂರರಾರ್ವರಕೂಡಿ
ಒದರಿ ಪರಿಪರಿಯಲ್ಲಿ ಚಿಂತೆಯೊಳಗಾಗಿ ೨
ಪರಮಾತ್ಮ ಪರಬ್ರಹ್ಮ ಪರಲೋಕ ಬಾಂಧವನು
ಪರಿಪರಿಯ ಷೋಷಿಸುವ ಭಾರಕನು ಇರಲು
ಅರಿತು ನೀ ಚನ್ನಾಗಿ ಹರಿ ಹೊನ್ನ ವಿಠ್ಠಲನ ಸ್ಮರಣೆಯಲಿ
ನಿರುತ ಇರೆ ಸಕಲ ಸಂಭ್ರಮವು ೩

 

ಹಾಡಿನ ಹೆಸರು :ಎದೆ ಒಡೆದು ಏಕೆ ನೀ
ಹಾಡಿದವರ ಹೆಸರು :ಕೀರ್ತಿ ಬಡಶೇಷಿ
ರಾಗ :ಜನ ಸಮ್ಮೋಹಿನಿ
ತಾಳ :ಜಪ್‍ತಾಲ್
ಸಂಗೀತ ನಿರ್ದೇಶಕರು :ವಿನಾಯಕ ತೊರವಿ
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಬಂದ ದುರಿತ ಪರಿಹರಿಸೋ
೯೩
ಬಂದ ದುರಿತ ಪರಿಹರಿಸೋ ಭಾರಕನು ನೀನು
ಎಂದೆಂದು ನಿನ್ನ ಪಾದ ಹೊಂದಿದವರಿಗೆಯಿನ್ನು ಪ
ಮಂದ ಮಾನವ ನಾನು ಮನ ಖಚಿತವಿಲ್ಲದ
ಕಂದರಕೆ ಬಿದ್ದು ಬಹುಕಷ್ಟ ಪಡುತಾ
ಸಂದೇಹವಾನು ಬಿಡದೆ ಸಂಶಯಿಸಿ ನಿನ್ನೊಮ್ಮೆ
ಎಂದು ಕೊನಿಮದ ದೋಷದಿಂದ ಅದರಿಂದಾ ೧
ಕಷ್ಟವನು ಪಡುವಾಗ ಕೃಷ್ಣ ನೀನೆ ಗತಿಯೆಂದು
ಅಷ್ಟು ಮಾತ್ರ ಸುಖಬರಲು ಅರಿತು ನಿನ್ನ
ನಿಷ್ಠರಾದವರನಾಸಂಖ್ಯ ಅರಿಯೆನು ಮಾಡ್ದ
ದುಷ್ಟ ಬುದ್ಧಿಗಳಿಂದ ದುರುದ್ದೇಷದಿಂದಾ ೨
ನೀನೆ ಸೂತ್ರಧಾರನಾಗಿರುವೆ ಸಕಲಕ್ಕೂ
ನಾನೊಂದೂ ಅರಿಯದಜ್ಞಾನಿ ಹರಿಯೆ
ಏನಾದರಾಗಲಿ ಇನ್ನು ಎನ್ನನು ಬಿಡದೆ
ನೀ ದಯಮಾಡಿ ರಕ್ಷಿಸೋ ನಿಜ ‘ಹೊನ್ನ ವಿಠ್ಠಲಾ ೩

 

ಹಾಡಿನ ಹೆಸರು :ಬಂದ ದುರಿತ ಪರಿಹರಿಸೋ
ಹಾಡಿದವರ ಹೆಸರು :ಸಿಂಚನ್ ದೀಕ್ಷಿತ್
ರಾಗ :ಮಾಲ್‍ಕೌಂಸ್
ತಾಳ :ಭಜನ್ ಠೇಕಾ
ಸಂಗೀತ ನಿರ್ದೇಶಕರು :ವಿನಾಯಕ ತೊರವಿ
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಬಾರೋ ರಂಗಯ್ಯ ಬಾರೋ
೧೪
ಬಾರೋ ರಂಗಯ್ಯ ಬಾರೋ ಕೃಷ್ಣಯ್ಯ
ಬಾರೋ ರಂಗ ನವನೀರದ ನಿಭಾಂಗ ಪ
ನಂದಗೋಪನಂದನ ಸುಂದರ ನಾರಾಯಣ
ಮಂದರಧರ ಕರುಣಾಸಿಂಧು ಇಂದು ವದನ ೧
ಉರಗವೈರಿ ಗಮನ ವರ ಶ್ರೀವತ್ಸಲಾಂಛನ
ಕರಿ ವರ ದುರಿತ ಹರಣ ನರಹರಿ ಪರಮಪಾವನ ೨
ಪಂಕಜದಲಲೋಚನ ವೆಂಕಟಾಚಲರಮಣ
ಶಂಕರನುತ ಚರಣ ಶಕಟಾಸುರ ಭಂಜನ ೩
ಅನಘ ವನಧಿಶಯನ ಮುನಿ ಹೃತ್ಕಮಲ ಪೋಷಣ
ಘನಮಣಿ ಖಚಿತಾಭರಣ ಕನಕಾಂಬರ ಭೂಷಣ ೪
ಬಲಿಬಂಧನ ವಾಮನ ಜಲಜೋದರ ಜನಾರ್ಧನ
ವಿಲಸಿತ ಹೆನ್ನೆ ಪಟ್ಟಣ ನಿಲಯ ಶ್ರೀ ಮಧುಸೂದನ ೫

 

ಹಾಡಿನ ಹೆಸರು :ಬಾರೋ ರಂಗಯ್ಯ ಬಾರೋ
ಹಾಡಿದವರ ಹೆಸರು : ಸಂಗೀತಾ ಕಟ್ಟಿ
ರಾಗ :ಜೋಗ್
ತಾಳ :ದಾದ್‍ರಾ
ಶೈಲಿ :ಹಿಂದೂಸ್ತಾನಿ
ಸಂಗೀತ ನಿರ್ದೇಶಕರು : ಸಂಗೀತಾ ಕಟ್ಟಿ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ರಂಗ ಬಂದನೋ ಮೋಹನಾಂಗ
೧೬
ರಂಗ ಬಂದನೋ ಮೋಹನಾಂಗ ಬಂದನೋ
ರಂಗ ಬಂದ ನೋಡಿ ಹೆನ್ನೆರಂಗ ದೇವೋತ್ತುಂಗ ಕೃಷ್ಣ ಪ
ಭೋಗಿಶಯನ ಭವರೋಗಹರಣ ನಿಗಮಾ
ಗಮಗನುತ ಶರಣಾಗತ ಪೋಷ ೧
ಮಂದರಧರ ಮುಚುಕುಂದವರದ
ರಾಕೇಂದುವದನ ಗೋವಿಂದ ಮುಕುಂದ ೨
ತಾಪಸವಂದಿತ ಶ್ರೀಪತಿ ಘನ
ಹೆನ್ನೆಪುರ ನರಹರಿ ಭೂಪರಿಪಾಲನ ೩

 

ಹಾಡಿನ ಹೆಸರು :ರಂಗ ಬಂದನೋ ಮೋಹನಾಂಗ
ಹಾಡಿದವರ ಹೆಸರು :ಶಂಕರ ಶಾನುಭಾಗ್
ರಾಗ :ಮಧುಮಾತ್ ಸಾರಂಗ್
ತಾಳ :ಭಜನ್ ಠೇಕಾ
ಶೈಲಿ :ಹಿಂದೂಸ್ತಾನಿ
ಸಂಗೀತ ನಿರ್ದೇಶಕರು :ಸಂಗೀತಾ ಕಟ್ಟಿ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಸ್ವಾಮಿ ಭಜನೆ ಮಾಡೊ
೧೭೩
ಸ್ವಾಮಿ ಭಜನೆ ಮಾಡೊ ಮನುಜ ಪ್ರೇಮದಿಂದಲಿ
ಕಾಮಿನಿಯರ ಮೋಹವತೊರೆದು ಕಮಲನಾಭನ
ಪಾದ ಹಿಡಿದು ಪ
ಬಂಧು ಬಳಗ ಭಾಗ್ಯವೆಂಬ ಬಯಲು ವಸ್ತುವೊ
ಹಿಂದು ಮುಂದೇನು ಬರುವರು ಯಾರು ಇಲ್ಲವೊ
ಎಂದು ತಿಳಿದು ಹರಿಯ ಮನದಿ ಮರೆಯಬೇಡವೊ
ಇಂದಿರೇಶ ಸಕಲಕರ್ತ ವೆಂಕಟಾದ್ರಿ ನಿಲಯನಾದ ೧
ನಿತ್ಯನೇವÀು ನಿಷ್ಠೆಯಿಂದ ನಿಜವು ತಿಳಿದು ನಿ
ಸತ್ಯವಂತರ ಸಂಗ ಬಿಡದೆ ಸರ್ವಕಾಲದಿ
ಭೃತ್ಯರಿಗೆ ಭೃತ್ಯನಾಗಿ ಪೂರ್ಣಭಾವದಿ
ಕೃತ್ರ್ಯಹರಿಯ ನಾಮಸ್ಮರಣೆ ಘಳಿಗೆ
ಮರಿಯದ್ಹೋಗಿ ಬಿಡದೆ ೨
ಗಾನಲೋಲ ಕರುಣಾಸಾಗರ ಘನವಿಲಾಸನ
ಭಾನುಕೋಟಿ ತೇಜನಾದ ಪರಮ ಪುರುಷನಾ
ಶ್ರೀನಿವಾಸ ‘ಹೊನ್ನವಿಠ್ಠಲ’ ಶರಧಿ ಶಯನನಾ
ಧ್ಯಾನದಲಿ ಚಿತ್ತವಿಟ್ಟು ಧೇನು ಪಾಲಕ ದಿವಿಜವಂದ್ಯನ ೩

 

ಹಾಡಿನ ಹೆಸರು :ಸ್ವಾಮಿ ಭಜನೆ ಮಾಡೊ
ಹಾಡಿದವರ ಹೆಸರು :ಅಜಯ್ ವಾರಿಯರ್
ರಾಗ :ಬೃಂದಾವನ ಸಾರಂಗ
ತಾಳ :ಆದಿ ತಾಳ
ಶೈಲಿ :ಸುಗಮ
ಸಂಗೀತ ನಿರ್ದೇಶಕರು :ಮನೋರಂಜನ್ ಪ್ರಭಾಕರ್
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಹರಿಭಜನೆ ಮಾಡುವಗೆ
೧೭೬
ಹರಿಭಜನೆ ಮಾಡುವಗೆ ಅನಂತಫಲವೂ
ಹರಿ ಭಜನೆ ಇಲ್ಲದವಗೆ ಅತಿಘೋರ ತಮವೂ ಪ
ಪರಮಾತ್ಮನ ಧ್ಯಾನ ಭಾರದಲಿ ಇರುವಗೆ
ಭವರೋಗ ಸಂಚಿತವು
ಪರಿಹಾರವು ಪರಮಮಂಗಳಮೂರ್ತಿ
ಸ್ಮರಣೆ ಮಾಡದ ನರಗೆ
ಪರಿ ಪರಿಯ ನರಕಾದಿ ಬಂಧಕವು ಬಿಡದು ೧
ಆ ರಾಮನಂಘ್ರಿಗಳ ಅರ್ತಿಯಲಿ ಅರ್ಚಿಸುವರಿ
ಗಾರಾಮವಾದಂಥ ಸುಖಸೌಖ್ಯವು
ಹೇರಾಮ ಎನದವಗೆ ಅತಿ ದು:ಖದಾರಿದ್ರ್ಯ
ತೋರುವುದು ಅನುಗಾಲ ತಗಲಿ ಬಿಡದವೆಯಿನ್ನು ೨
ವಿತರಣಾದಿ ಶ್ರೀ ಹೆನ್ನೆವಿಠ್ಠಲನ ಹೃದಯದಲಿ
ಸತತಧ್ಯಾನವು ಮಾಡುವ ಸಾಧು ಜನರಾ
ಪತಿತ ಪಾವನನಾದ ಪರಮಾತ್ಮ ಪಾಲಿಸೆ
ಗತಿಯು ತೋರುವ ಇನ್ನು ಕರುಣದಲಿ ಹರಿಯು ೩

 

ಹಾಡಿನ ಹೆಸರು :ಹರಿಭಜನೆ ಮಾಡುವಗೆ
ಹಾಡಿದವರ ಹೆಸರು :ಶ್ರುತಿ ಭಟ್
ರಾಗ : ಮಾಂಡ್
ತಾಳ :ಭಜನ್ ಠೇಕಾ
ಸಂಗೀತ ನಿರ್ದೇಶಕರು :ವಿನಾಯಕ ತೊರವಿ
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ