Categories
ರಚನೆಗಳು

ಹೆನ್ನೆರಂಗದಾಸರು

೧೩೬
ಅನರತ ಜಿವ್ಹದಿ ಆದಿನಾರಾಯಣನಾ ಕೃಷ್ಣಾ ಎನಬಾರದೆ
ಮಹಿಮನಾದ ಕರುಣಾಸಾಗರ ಹರಿಯ ಕೃಷ್ಣಾ ಎನಬಾರದೆ ಪ
ಗೋಕುಲವಾಸ ಗೋಪಿಯಕಂದನ ಕೃಷ್ಣಾ ಎನಬಾರದೆ
ಕಾಕುಸ್ಥ ತಿಲಕನ ಕನಕಾಂಬರಧರನ ಕೃಷ್ಣಾ ಎನಬಾರದೆ
ಶ್ರೀಕರ ಭಕ್ತರ ಪೊರೆವನ ಕೃಷ್ಣಾ ಎನಬಾರದೆ
ಲೋಕನಾಯಕ ಲಕ್ಷ್ಮೀಲೋಲ ಮುಕುಂದನ
ಕೃಷ್ಣಾ ಎನಬಾರದೆ ೧
ನಂದನಂದನನಾದ ನವನೀತ ಚೋರನ ಕೃಷ್ಣಾ ಎನಬಾರದೆ
ಸಿಂಧುಶಯನ ಗುಣಸಿಂಧು ಗಂಭೀರನ ಕೃಷ್ಣಾ ಎನಬಾರದೆ
ಅಂದುಗೆ ಚಂದ್ರನ ಬಂದು ಪಾಲಿಸಿದವನಾ
ಕೃಷ್ಣಾ ಎನಬಾರದೆ ೨
ಮೂರುಲೋಕದೊಡೆಯ ಮುನಿಗೋವಂದ್ಯನ
ಕೃಷ್ಣಾ ಎನಬಾರದೆ
ಮಾರಜನಕ ಕೋಟಿ ಮನ್ಮಥ ರೂಪನ ಕೃಷ್ಣಾ ಎನಬಾರದೆ
ಧೀರ ‘ಹೆನ್ನೆವಿಠ್ಠಲ’ ದಿವ್ಯ ಬಿಲವಾಸನ ಕೃಷ್ಣಾ ಎನಬಾರದೆ
ಘೋರ ದುರಿತ ಸಂಹಾರ ಕರ್ತನ ಒಮ್ಮೆ
ಕೃಷ್ಣಾ ಎನಬಾರದೆ ೩

 

೩೫
ಅನಾಥ ನನ್ನಿಂದ ಆಗುವುದು ಏನು
ನೀನೆ ದಯಾಮಾಡಿ ಎನ್ನ ನೋಡಿದರೆ
ಸರಿಯಲ್ಲದೆ ಪ
ಸ್ನಾನ ಸಂಧ್ಯಾವನ ವೆಂಬ ಸತ್ಕರ್ಮ ವಿಧಿಹೋಗೆ
ಧ್ಯಾನಮೌನ ಜಪತಪ ನಿಧಾನ ಹೋಗೆ
ಕಾನನದೊಳಗಿನ ಕೊಂಡೆತ್ತಿ ನಂದದಿ
ಏನು ಅರಿಯದ ವ್ಯರ್ಥ ಹೀನನಾಗಿರುವಂಥ ೧
ಮಾಧವಾ ನಿಮ್ಮ ಸ್ಮರಣೆ ಮಹಾಮಹಿಮ ಸೇವೆ ಹೋಗೆ
ವೇದ ಶಾಸ್ತ್ರಗಳಲ್ಲಿ ಇರುವ ಮರ್ಮ ಹೋಗೆ
ಭೋಧ ಗುರುಕರ್ಣ ಪೂರ್ಣವು ಎಂಬದದು ಹೋಗೆ
———– ಂದರಿಯದೆ ಹೆಡ್ಡನಾದಂಥಾ ೨
ಹರಿ ನಿಮ್ಮ ಭಕ್ತರ ಅನುಗ್ರಹಕ್ಕೆ ಪಾತ್ರಹೆಂಗೊ
ಹರಿ ನಿನ್ನ ಚರಿತಗಳು ಅರುವದ್ಹೇಗೊ
ಕರುಣಿಸು ಕೈ ಹಿಡಿದು ಕಾಯ್ದರೆ ಸರಿ ಅಲ್ಲದೆ
ವರ ‘ಹೊನ್ನ ವಿಠ್ಠಲ’ ನೀನೆಂದು ನಾನರಿಯದಾ ೩

 

೧೩೭
ಅನುದಿನ ಮನದಲಿ ನೆನಿಯೋಮನುಜ ಪ
ಮಂದರದರ ಗೋವಿಂದನ ಪಾದದ್ವಂದ್ವ
ಯನಗೆ ಗತಿಯೆಂದು ಮುದದಿಂದನುದಿನ ೧
ಮುರಹರ ಭವಸಾಗರ ದಾಟಿಸಿ ಶ್ರೀ
ಗರುಡಾರೂಢನೆ ಕರುಣದಿ ಸಲಹೆಂದನುದಿನ ೨
ಹರಿಸರ್ವೋತ್ತಮ ಕರುಣಾಕರ ರಮಾ-
ವರ ಹೆನ್ನೆಪುರವರ ಹರಿ ಪೊರಿಯಂದನುದಿನ ೩

 

೩೬
ಅಮ್ಮಾ ಗೋಪೆಮ್ಮಾ ನಿಮ್ಮ ಕೃಷ್ಣಯ್ಯನ
ಹೊಮ್ಮೆಗಳನ್ನು ಹೇಳುವೆನು
ಗುಮ್ಮ ಆಣೆಯಿಂದಾ ಅಮ್ಮಣಿಗಳ ಹಿಡಿದು
ಅಮ್ಮ ಕೈ ಹಾಕುವನೆ ಪ
ಬತ್ತಿಯೆಂದು ನಾನು ಎತ್ತಿಕೊಂಡು ಮನಿಗೆ
ಕತ್ತಲೊಳಗೆ ಬರುತಿರೆ
ಮತ್ತೇನು ಹೇಳಲಿ ಕತ್ತು ಹಿಡಿದು ಎನ್ನ
ಹತ್ತಿರ ಮಲಗೆಂದನೆ ೧
ಕೂಸೆಂದು ನಾ ಬಂದು ತುಸು ಎತ್ತಿಕೊಳ್ಳಲು
ಏಸು ಮಾತುಗಳಾಡಿದ
ಮೋಸಮಾಡಿ ಕೆಡಹಿ ಘಾಸಿಯ ಮಾಡಿ
ಕೂಸೇನೆ ನಿನ್ನ ಮಗನು ೨
ಪುಟ್ಟನೆಂದು ಶೀರಿಬಿಟ್ಟು ವಾರಿಯಲ್ಲಿಟ್ಟು
ಹುಟ್ಟು ಬತ್ತಲೊಳಿರಲು
ಪುಟ್ಟ ಪುಟ್ಟನೆ ಬಂದು ಪುಂಡತನ ಮಾಡಿದ
ಪುಟ್ಟನೆ ನಿನ್ನ ಮಗನು ೩
ಕಂದನು ಇವನೆಂದು ಎತ್ತಿಕೊಂಡು
ಸಂದಿಯೊಳಗೆ ಬರುತಿರೆ
ಸಂದಿಸಿ ಕಳೆಯುಳ್ಳ ಸಂದುಗಳ್ಹುಡುಕುವ
ನಂದನ ಕಂದನೇನೇ ೪
ಇಂತ ಪರಿಯ ಮಾಡುವ ಕಾಂತ ‘ಹೆನ್ನೆವಿಠಲ’
ಎಂತವನೆ ಕೇಳಮ್ಮಾ
ಅಂತರಂಗದಿ ನಿಮ್ಮಗಂತು ತಿಳಿಯಲೆಂದು ಅಂತು
ತಿಳಿಸುವೆ ನಾನು ೫

 

೩೭
——-ಅರಿಯೆ —-ನಡತಿ ಮಾರ್ಗವನೂ ಹೀನಮಾನವ
ನಾನು ಯಂ —- ಹರೇ ಪ
ನಾನಾಜಾತಿಗಳಲ್ಲಿ ನಾನಾವರ್ಣಗಳಲ್ಲಿ
ನಾನಾಯೋನಿಗಳಲ್ಲಿ ನಟಿಸಿನಟಿಸಿ
ಜ್ಞಾನವನು ಇಲ್ಲದೆ ಅಜ್ಞಾನ ಮದಾಂಧನಾಗಿ ಏನು
ಇಲ್ಲದೆ ಇರೊ ವಿಧಾನ ಒಂದಲ್ಲದೆ ೧
ಧ್ಯಾನಿಪರ ಒಳಗೂಡಿ ಧ್ಯಾನ ಮಾಡುವ
ದರಿ—-ರ್- ಸರತಿ ತಿಳಿದಿನ್ನು
ಮನ್ನಿಸಾಲರಿಯೆ ಧೀನ ರಕ್ಷಕ ನಿನ್ನ ದಿನಚರ್ಯ ವರ್ಣಿಸುವರ
ಕಾಣುತಲೆ ವಂದಿಸಿ ಕಾಲುಹಿಡಿವದು ಅರಿಯೆ ೨
ವೇದಾದಿ ಸಕಲವು ವಿದ್ಯಶಾಸ್ತ್ರವನರಿಯೆ ಮೇದಿನಿಯೊಳು
ನಡೆವ ಸುಮಾರ್ಗ ನಾನರಿಯೆ ಗಾಧಿ ಬೋಧಿಗಳೀಗೆ ಒಳಗಾಗಿ
ಈ ಪರಿಯೆಗಾಧೆಯೊಳಗೆ ಬಿದ್ದನ ಕೈ ಪಿಡಿಯೊಧೊರಿಯೆ ೩
ಆಗ ಅಂತರಂಗದಾ ಭಾವನರಿಯೆ ನಾಗಶಯನ ನಿಮ್ಮ
ನಾಮವೆಂಬುದು ಅರಿಯೆ ಕೃಪೆತೋರಿ ರಕ್ಷಿಸಯ್ಯಾ
ಹರಿಯೆ ೪
ಸಕಲಾವು ನೀನೆಂದು ಸಾರುವ ಧರೆಯಾ ಭಕ್ತವತ್ಸಲನೆಂಬ
ಬಿರುದು ನಿಂದರಿಯಾ ಅಕಳಂಕ ಮಹಿಮ ‘ಹೊನ್ನವಿಠ್ಠಲನೆ’
ಪ್ರೀಯಾ ಮುಕುತಿದಾಯಕ ಆಲಸ್ಯನಾದವನ ಪೊರೆಯಾ ೫

 

೩೮
ಅಲ್ಪದೇಹವು ಹುಟ್ಟಿ ಮಾಯ ಕಲ್ಪನೆಗೊಳಗಾಗಿ
ಸ್ವಲ್ಪವನ (ಸ್ವಲ್ಪವು) ಶ್ರೀಹರಿ ನಾಮಸ್ಮರಿಸಿ
ಸದ್ಗತಿ ಕಾಣುವ ಸಾಧನೆ ಇಲ್ಲದ್ಹೋಯಿತು ಪ
ಜನುಮ ಜನುಮದಲಿ
ಸಂಸಾರ ಜಲಧಿಯೊಳಗೆ ಮುಳುಗಿ
ಘನ ಪುರುಷನ ಮಹಿಮೆ ಕಾಣದೆ
ಗಾಢಾಂಧ ಕಾರದಲಿ ದಿನಗಳ ಕಳೆದು
ದೇವರ ಭಜಿಸದೆ ಜನುಮಗಳಳಿದೂ
ಚರಿಸುವದಾಯಿತು ೧
ಭ್ರಾಂತಿಯ ಘನವಾಗಿ ಪ್ರಪಂಚ ಬದ್ಧನಾಗಿ
ಕಾಂತೇರ ಮೋಹಕ್ಕೆ ಸಿಲುಕಿ ಕಾಲವುಕಳೆದಿನ್ನು
ಶಾಂತಮೂರ್ತಿ ಲಕ್ಷ್ಮೀಕಾಂತನ ಮನದಲಿ
ಚಿಂತನೆ ಮಾಡದೆ ಮುಕ್ತಿ ಸೇರದಂತಾಯಿತು ೨
ಪನ್ನಗಶಯನನ್ನಾ ಪರಿಪರಿ ಭಕುತಿಲಿ
ಮನದಿಂದ ವರ್ಣಿಸಿ ಜಿವ್ಹದಲಿ
ಹರಿಪದವನ್ನೇ ಕಾಣದಲೆ ಇನ್ನು ಶ್ರೀ
‘ಹೆನ್ನವಿಠ್ಠಲ ‘ ಕೃಷ್ಣ ಎನ್ನದೆ ಕಾಲವೆಂಬುದು
ವ್ಯರ್ಥವು ಹೋಯಿತು ೩

 

೧೮೯
ಆಗ ಗೊಲ್ಲರೆಲ್ಲ ತಮ್ಮ ಬಾಗಿಲಲ್ಲಿ ನಿಂತು
ಕೂಗಿದರು ಒಳಗೇ
ಓಯನ್ನ ಪ್ರಾಣಸಖೀ ಬೇಗ ಬಂದು
ಕದವ ತೆಗೆಯಂದು ಪ
ಹೀಗೆ ಕೂಗುವ ಮನಿಯೊಳು ಇರುವ
ಸತಿಯರು ತಾವು ಆಗ ಆನು-
ಮಾನದಿಂದ ‘ಓಹೆನ್ನೆ ವಿಠಲ ‘ ಚೋರ
ನಿನ್ನ ನಾವು ಬಲ್ಲೆವು ೧
ನಲ್ಲ ಕೃಷ್ಣನಲ್ಲೆ ನಾನು ಅಲ್ಲೆ ನಿನ್ನ ವಲ್ಲಭನು
ಮೆಲ್ಲನ ಬಾರೆ ನೀ
ಇಲ್ಲಿಗೆ ಓಯನ್ನ ಪ್ರಾಣಸಖೀ ಮಾರಿನೋಡಿ
ನಿಜವ ಮಾಡೀಗ ೨
ಮೋರೆ ನೋಡುವದು ಏನು ಮೋಹದೊಡಿಯ
ಮನೆಯೊಳಿರಲು
ಮಾರುವೇಷದಿಂದ ಬಂದ ‘ಓ ಹೆನ್ನೆ ವಿಠಲ
‘ ಮಾರಜನಕನೆಂಬೊದು ಬಲ್ಲೆನೆ ೩
ಮಾರಜನಕನಲ್ಲೆ ನಾನು ಕೇರಿಯವರ
ಇನ್ನು ನೀರೆ ನಿನ್ನ ಗಂಡನೆ ನಾನು
ಓಯನ್ನ ಪ್ರಾಣಸಖಿ ಬೇಗ ಬಂದು ಕದವ ತೆಗೆ ಈಗ ೪
ಗಂಡ ಭವನದಲ್ಲಿ ಇರಲು ಪುಂಡನೀನು
ಎಲ್ಲಿಯವನು ಭಂಡತನ ಬಿಡುಇನ್ನು
‘ಓಹೆನ್ನೆ ವಿಠಲ’ ಮಾಡುವದು ಇದು ರೀತಿಯಲ್ಲವು ೫
ಗಂಡನೆಂಬುವನು ನಾನು ಗಂಡನಾರಿವುಳ್ಳವಗೆ ಇನ್ನು
ಚಂಡಿನಾಟ ಬಾ ಸಭಯದಿ
ಓಯನ್ನ ಪ್ರಾಣಸಖಿ ಚಲುವೆ ಹೊರಗೆ ಬಾರದಿರುವೇ ೬
ಯಷ್ಟು ಮಾತನಾಡಲು ನೀ ಸೃಷ್ಟಿಗೊಡೆಯನೆಂಬುವದು
ಅಷ್ಟು ಜಗದಲ್ಲಿ ಬಲ್ಲಿ
‘ಓಹೆನ್ನೆ ವಿಠಲ’ ಚೇಷ್ಟಿಮಾಡದಲೆ ನಡಿಯಯ್ಯಾ ೭
ಅಷ್ಟುವಾದರೆ ಸ್ಪಷ್ಟದಲ್ಲಿ ಇನ್ನು ನೀನು ಅಷ್ಟು
ದೇವರನ್ನು ಕೂಡಿತೆ
ಓಯನ್ನ ಪ್ರಾಣಸಖಿ ಈಗ ಆಣಿ ಮಾಡಿಸಿ ಕೇಳು ೮
ಅತ್ತಿಯನ್ನು ಕೂಡಿದವನೆ ಉತ್ತಮನೆ ನೀನು ಇನ್ನು
ಎತ್ತಲ ಆಣೆಯು ನಿನಗೇ ‘ಓ ಹೆನ್ನೆ ವಿಠಲ’
ಸತ್ಯವಂತನಾಗಿ ಹೇಳುವಿ ೯
ಕಣ್ಣಿಲಿ ನೋಡದೆ ಕಾಕು ಮಾಡುವರೆ ಇನ್ನು
ಹೆಣ್ಣು ನಿನಗೆ ಥರವೆ
ಓಯನ್ನ ಪ್ರಾಣಸಖಿ ಕಣ್ಣಿಲೆ ನೋಡದೆ ಕರಿಯೆ ೧೦
ಪರಮ ಪರುಷನುಳ್ಳವರು ಪರಮಪುರುಷನ ಪಡೆವಂಥ
ದುರುಳ ಬುದ್ಧಿ ನಮಗಿಲ್ಲವೆ ‘ ಓ ಹೆನ್ನೆ ವಿಠಲ’
ದೂರನಡಿಯೆ ಇಲ್ಲಿ ಎನಯ್ಯ ೧೧
ಪುರುಷನೆಂಬುವದು ಪರಪುರಷನೆಂಬುವದು
ಇನ್ನು ಸ್ವಲ್ಪ ನಿನಗೆ ತಿಳಿಯದೆ
ಓಯನ್ನ ಪ್ರಾಣಸಖಿ ಸಾಗಿ ಬಂದು ನೋಡೆ ಬೇಗನೆ ೧೨
ಅನಂತಾವತಾರನು ಅನಂತಗುಣ ಪೂರ್ಣನು
ಏನು ಆಶ್ವರ್ಯವು ನಿನಗೆ
‘ ಓ ಹೆನ್ನೆ ವಿಠಲ’ ಏನು ಸೋಗು ಮಾಡುವಿ
ನಡಿಯಯ್ಯಾ ೧೩
ನನ್ನ ತನುವಿನೊಳಗೆ ಇರುವ ಮುನ್ನಿನಾಪ್ತಾಲೋಚನೆ
ಇನ್ನು ನಿನಗೆ
ಗುರ್ತು ಹೇಳುವೆ ಓಯನ್ನ ಪ್ರಾಣಸಖಿ
ಇನ್ನಾದರೆ ಮನಸಿಗೆ ತಾರ ೧೪
ಹದಿನಾಲ್ಕು ಲೋಕದ ಚರ್ಯಾ ಅಷ್ಟು
ನಿನಗೆ ಅರುವು ಇರಲು
ಇದು ಹೇಳುವದರಿಯದೆ ಓ ಹೆನ್ನೆ ವಿಠಲನೆ ಈ
ಸೋಗು ಮಾಡಿನಡಿಯಯ್ಯಾ ೧೫
ಮನಸಿನೊಳಗೆ ಇರುವಂಥ ಮರ್ಮಗಳ
ತಿಳಿಸುವೆನು ಮನಸು ಇಟ್ಟು
ಮನ್ನಿಸೆನ್ನನು ಓಯನ್ನ ಪ್ರಾಣಸಖಿ ಮಾಡಬೇಡ
ಹೀಗೆಯನ್ನನು ೧೬
ಮನೆಯ ಮನೆಯ ದೈವವೆಂಬೊ ಮಹಿಮೆಯಲ್ಲ
ಬಲ್ಲರು ಮನೆಯ
ಮರ್ಮವು ತಿಳಿಯದೆ ‘ಒಹೆನ್ನೆವಿಠಲ’ ಮೋಸಮಾಡ
ಬಂದಿ ನಡಿಯಯ್ಯಾ ೧೭
ಅಲ್ಲಿ ಯಶೋದಾ ಬಳಿಗೆ ನಲ್ಲನ ಮೇಲೆ ದೂರು
ಹೇಳಿ ಎಲ್ಲರು ಹಿಗ್ಗುವ ವೇಳ್ಯೆದಿ
‘ಓ ಯನ್ನ ಪ್ರಾಣಸಖಿಕೇಳಿದ ಮಾತನು ಹೇಳುವೆ ೧೮
ಯಶೋದೆಗೆ ದೂರು ಹೇಳಿ ಪ್ರಾಣೇಶನ್ನ ಅಗಲಿ
ಬಂದು ವಾಸವಾಗಿ
ಮನೆಯೊಳಗೆ ಹಾನೆ ‘ ಓ ಹೆನ್ನೆ ವಿಠಲ’
ಹೇಸದೆ ಏನೆಂದು ಬಂದೆ ೧೯
ಏನು ಹೇಳಿದರು ಉದಾಸೀನ ಮಾಡುತಲಿ
ಮಾನ ಪತಿಯೆಂಬ ಮಾರ್ಯದೆ
ಓಯನ್ನ ಪ್ರಾಣಸಖಿ ಮನಸಿನಲ್ಲಿ ಏನು ಇಲ್ಲವು ೨೦
ಮಾನಪತಿ ಮಂಚದ ಮೇಲೆ ಮಲಗಿರಲು
ಮುನಿವಳಗೇ ಮಾನಪತಿ
ಹೇಗಯ್ಯ ನೀನು ‘ಓ ಹೆನ್ನೆ ವಿಠಲ’ ಮಾಡಿಕೊಂಡ
ಪುರುಷನೇನಯ್ಯಾ ೨೧
ಮಾಡಿಕೊಂಡೆನು ಇದೆ ಮಾತನಾಡುವದು ಇಷ್ಟು
ಮಾಡಿಕೊಳ್ಳದವನಿಗೆ
ಇನ್ನು ಓಯನ್ನ ಪ್ರಾಣಸಖಿ ಮಾತನಾಡುವ
ಧೈರ್ಯ ವಿಲ್ಲವೆ ೨೨
ಚೋರಬುದ್ಧಿಯುಳ್ಳ ಜಾರಪುರಷರಿಗೆ ಇನ್ನು ಯಾರ
ಅಂಜಿಕೆ ಏನಯ್ಯಾ
‘ಓಹೆನ್ನೆ ವಿಠಲ’ ಧೈರ್ಯವು ಯಾಕೆ ನಿನಗಯ್ಯ ೨೩
ಘಟ್ಟಿಯಾಗಿಯನ್ನನು ಹೆನ್ನೆವಿಠಲನೆ ಆಗಲೆ
ಬಂದು ಇಷ್ಟು ತಡ
ಮಾಡುವರೇನೆ ಓಯನ್ನ ಪ್ರಾಣಸಖಿ ಘಟ್ಟಿಯಾಗಿ
ನಿನ್ನ ಗಂಡನೆನಾನು ೨೪

 

೩೯
ಆದರೇನಾಯಿತು ಹರಿ ಎನ್ನ ಪೊರೆಯಾ
ಈ ಧರೆಯೊಳಾರು ಮಾಡದ ದೋಷ ನಾ ಮಾಡಲಿಲ್ಲಾ ಪ
ತಾರಾಪತಿಯಂತೆ ಗುರುದ್ರೋಹ ಮಾಡಿದವನಲ್ಲ
ವಾರಿಜೋದ್ಬವನಂತೆ ತಪ್ಪಲಿಲ್ಲಾ
ಮಾರ ಮಹಿಮನಂತೆ ನಾ ಮಹಿಮನೆಂದು ಹೇಳಲಿಲ್ಲ
ಬಾರಿಬಾರಿಗು ನಿನ್ನ ಭಜಿಸುವದೊಂದೆ ೧
ತಂದೆ ಮಾತನು ಕೇಳಿ ತಾಯಿ ದ್ರೋಹ ಮಾಡಲಿಲ್ಲ
ಬಂಧು ಬಳಗ ದ್ವೇಷ ಮಾಡಿ ಬಾಧಿಸಲಿಲ್ಲ
ಅಂಡಜಾಮಿಳನಂತೆ ಅತಿದ್ರೋಹ ಮಾಡಲಿಲ್ಲ
ಚಂದದಿಂದಲಿ ನಿಮ್ಮ ಸ್ಮರಿಸುವದೊಂದೆ ೨
ಅತಿ ಘಂಟಾಕರ್ಣನಂತೆ ಕರ್ಣಘಂಟೆ ಶಬ್ಧವಿಲ್ಲ
ಹಿತದಿ ——–ಬ್ರಹ್ಮತ್ಯನಿಲ್ಲ
ಸತತ ನೀನೆ ಎನಗೆ ಗತಿಯೆಂದು ಇರುವುದೊಂದೆವಿತರಣಾ ಕೊಂಡರಿಯೆ ವೀರ ‘ಹೊನ್ನವಿಠಲಾ’ ೩

 

೪೨
ಇಂದೆನ್ನ ಸಲಹೊ ಇಂದು ವದನ
ಇಂದುವದನ ಕುಂದರವದನ ಪ
ಬಂದ ದುರಿತವನ್ಹಿಂದುಮಾಡಿ ಕರುಣಾ
ಸಿಂಧು ಅರವಿಂದ ಭವ ವಂದಿತ ಮುಕುಂದ ಹರಿ ೧
ನಂದನಂದನ ಗೋವಿಂದ ನಿನ್ನಯ ಪಾದ ದ್ವಂದ್ವ
ಗತಿಯೆಂದೆ ಮುದದಿಂದ ಆನಂದಮಯ ೨
ಪನ್ನಗಾದ್ರೀಶವರ ಹೆನ್ನೆಪುರ ನಿಲಯ ಆ
ಪನ್ನ ಜನರನ್ನ ಕಾಯ್ವನೆ ತ್ವರದಿನ್ನು ೩

 

೪೧
ಇದು ರಕ್ಷಿಸುವಂಥ ಕಾಲ
ಚಿಕ್ಕ ಮುದನೂರ ಗೋಪಾಲ ಮುನಿಜನಲೋಲ ಪ
ಶರಣಾಗತ ವಜ್ರಪಂಜರ | ಜಗದ್ಭರಿತ
ನಿತ್ಯಾನಂದ ಭಕ್ತಮಂದಾರ
ಮೊರೆಹೊಕ್ಕೆ ಸಲಹೆನ್ನ ಮುದದಿಂದ
ನೀ ಕರುಣಾತೋರಿ ತ್ವರ ಕಾಯೋ ಗೋವಿಂದ ೧
ಪಂಕಜದಲಲೋಚನ | ನಿಷ್ಕಲಂಕ
ಸರ್ವೋತ್ತಮ ವೆಂಕಟರಮಣ |
ಸಂಕಟಗಳ ಬಡದಲೆ ಬಂದೆ ಭವ ಪಂಕವಿದೂರ
ನಿಃಶ್ಯಂಕ ನಿರಾಮಯ ೨
ವರಹೆನ್ನೆ ಪುರವಾಸನೆಂದು | ನರಹರಿ ಕೃಷ್ಣ
ವಿಠಲ ಹರ್ಷದಿ ಬಂದು
ಶರಣೆಂಬೆ ದೀನ ದಯಾಪರ
ಮುರಹರ ಮುರಲೀಧರ ಅಗಣಿತಾವತಾರ ೩

 

೪೦
ಇದ್ದಿದ್ದೊಮ್ಮೆ ಇಂಥಾ ಕಷ್ಟ ಏನು ತಂದ್ಯೋ ಹರಿಯೆ
ಬುದ್ಧಿಯ ತಿಳಿದು ಕರ್ಮಿಸಿ ನೋಡಿ
ಪೊರೆಯಬೇಕೆಂದು ನುತಿಸುವವಗೆ ಪ
ಮಧ್ಯಾಹ್ನಕ್ಕೆ ಮನೆಯ ಒಳಗೆ ಮುದ್ದಿಗೆ ಗತಿಯಿಲ್ಲಾ
ವಿದ್ಯಾರ್ಥಿಗಳು ಇಷ್ಟರು ಬಂದರೆ ಇಷ್ಟೂ ಅನ್ನವಿಲ್ಲಾ
ಎಂದು ಹೋಗುವೆನು ಎಲ್ಲಿಗೇನೆಂದರೆ ಎಲ್ಲಿ ಏನಿಲ್ಲಾ
ಬದ್ಧ ಕಂಕಣವ ಕಟ್ಟಿಕೊಂಡು ನಿನ್ನ ಪಾದವೆ ಗತಿ
ಯೆಂದಿರುವೆ ಇಷ್ಟು ೧
ಭಿಕ್ಷಕೆ ಬಂದವರಿಗೆ ನೀಡಲು ಹಿಡಿ ಭತ್ತಕೆ ನೆಲೆಯಿಲ್ಲಾ
ಕುಕ್ಷುಂಬರರಾಗಿ ಗೃಹಕೆ ಬಂದವರಿಗೆ ಕೂಳಿಗೆ ಗತಿಯಿಲ್ಲಾ
ತುಚ್ಛ ಕುಬುದ್ಧಿ ತುಂಟರ ಕೂಡ ಉಪೇಕ್ಷೆ ಮಾಡ್ವರಲ್ಲಾ
ಲಕ್ಷ್ಮೀರಮಣ ಶ್ರೀ ರಘುಕುಲ ತಿಲಕ ನೀ ರಕ್ಷಕನೆಂದಾ
ಪೇಕ್ಷೆಯಲಿರುವನಿಗೆ ೨
ಅತಿಥಿ ಆಭ್ಯಾಗತರು ಬಂದರೆ ಪೂಜಿಸೊ ಅಧಿಕಾರವು ಇಲ್ಲ
ಸುತರು ಹಿತರು ಕೂಡುಂಬುವ ಸಂತತ ಸುಖವು ಕಾಣಲಿಲ್ಲ
ಗತಿಯು ತಪ್ಪಿದ ವ್ಯಾಳ್ಯಾಕ ಈ ಯುಗದೊಳಗಂತ
ಹಿತವರುದಾರಿಲ್ಲ
ಗತಿ ನೀನೆಯಂದು ಅತಿ ಹಿತದಲಿರುವಗೆ
ಪತಿ ‘ಹೊನ್ನೆ ವಿಠ್ಠಲ’
ಪರಮ ಪುರುಷ ಕೃಷ್ಣಾ ೩

 

೪೩
ಇಷ್ಟೇಕೆ ಎನ್ನ ಮೇಲೆ ಈ ಸಿಟ್ಟು ಹರಿಯೆ
ಸೃಷ್ಟಿಗೆ ನೀ ಕರ್ತನಾಗಿ ಶ್ರೀನಿವಾಸಧೊರಿಯೆ ಪ
ಇನ್ಯಾರು ಹರಿ ಎನಗಿನ್ನು ಈ ಜಗದೊಳಗೆ
ಎನ್ನ ದೂರು ಯಾರಿಗೆ ಮೊರೆಯಿಡಲಿ
ಎನಗೆ ಮನ್ನಿಸಿ ದಯಮಾಡಿ ಸುಮತಿಯ
ನೀ ತಂದು ಕೈಯನ್ನೇ ಹಿಡಿದು ಇನ್ನು ಈಗ ರಕ್ಷಿಸದಲೆ ೧
ಸಕಲ ಜೀವ ರಕ್ಷಕನು ಸಾಧುಜನ ಪೋ-
ಷಕನು ಸಕಲ ಲೋಕಗಳೆಲ್ಲ ಸಲಹುತಿಹನೊ
ಅಕಳಂಕ ಮಹಿಮ ಶ್ರೀ ಆದಿದೇವರ ದೇವ
ಭಕುತ ವತ್ಸಲನೆಂಬ ಬಿರುದು ನಿನ್ನಲ್ಲಿ ೨
ಹಿಂದೆ ಮಾಡಿದ ದೋಷಗಳು ಇಂದು
ಮಾಡಿದ ಪಾಪಗಳು
ಇಂದು ಪರಿಹಾರ ಮಾಡಿ ಎನ್ನ
ಮುಂದೆ ಧನ್ಯನ ಮಾಡಿ ಮುಕ್ತಾನಂತೆನಿಸಿ
ತಂದೆ ‘ ಹೊನ್ನಯ ವಿಠಲ’ ದಯಮಾಡಿ ಸಲಹದಲೆ ೩

 

೪೪
ಈ ವೇಳೆಯಲಿ ಸಲಹದಿರುವರೆಯನ್ನ
ಶ್ರಿ ವತ್ಸಲಾಂಛನ ಶ್ರಿತಕಲ್ಪತರು ಹರಿ ಪ
ರತಿ ರಮಣಜನಕ ಭಾರತೀರಮಣ ಸನ್ನುತನೆ
ದಿತಿ ತನಯ ಸಂಹಾರಾಚ್ಯುತ ಮುಕುಂದ
ಪತಿತಪಾವನ ಭವದುರಿತ ಪಾಶ ಪರಿಹರಿಸೆ-
ನ್ನುತ ನಿನ್ನ ಸ್ತುತಿಸೆ ಸದ್ಗತಿ ತೋರಿ ಗೋವಿಂದ ೧
ಅಕಲಂಕ ಚರಿತ ತಾರಕರೂಪ ಸರ್ವೇಶ
ಸಕಲಲೋಕ ಶರಣ್ಯ ಪ್ರಕಟ ಮಹಿಮಾ
ಶುಕ ಶೌನಕಾದಿ ಮುನಿನಿಕರವಂದಿತಪಾದ
ವಿಕಸಿತಾಂಬುಜ ನೇತ್ರ ಪ್ರಕಟದಾನವ ಜೈತ್ರ೨
ಮೊರೆ ಹೊಕ್ಕವರನು ಕಾಯ್ವ ಬಿರುದು ನಿನ್ನದು ಕೃಪಾ
ಕರ ಗರಡಗಮನ ಕರಿವರದ ಶೌರಿ
ಧರಣಿಧರ ‘ವರಹೆನ್ನೆ ಪುರನಿಲಯ’ ಶ್ರೀಮ
ನೃಹರಿ ಪರಮ ಪುರುಷ ಶಿರಿಯರಸ ಹರುಷದಲಿ ೩

 

ಶ್ರೀಹರಿ ಸಂಕೀರ್ತನೆ

ಈಶ ಬಂದನೊ ಸರ್ವೇಶ ಬಂದನೊ
ಈಶ ಬಂದ ನೋಡಿ ಪಿಕನಾಶಿನೊಳಗೆ
ಸುಳಿದಾಡುತ ವಾಸುದೇವನಾದ ಮೂರ್ತಿ
ಶ್ರೀಶ ಭಕ್ತ ವಿಲಾಸರಾಮಾ ಪ
ಅಂಡಜವಾಹನ ಭೂಮಂಡಲೇಂದ್ರರು ನುತಿಸುವಂಥ
ಪುಂಡಲೀಕವರದ ಕೋದಂಡಧರ ದಶರಥ ನಂದನ
ಎಸೆವ ಮುತ್ತಿನ ಹಾರ ೧
ಎಸೆವ ಮುತ್ತಿನಹಾರ ಕೊರಳಾ ಹಸಿರು ಉಂಗುರಬೆರಳ
ತುದಿಬೆರಳಿನಿಂದ ತೋರಿಕರೆವ ಸುರುತಿ ಪಾಲಕನಾದ ೨
ಮುಗುಳು ನಗುವು ನಗುತ ನೀನು ಬಗೆ ಬಗೆಯ
ಭಾಗ್ಯಗಳಾ ತೋರುತ ಸರರಾತ್ರಿಯ ಒಳಗೆ ಒಳ್ಳೆ
ಸೊಗಸುವುಳ್ಳ ರೂಪದಿಂದಾ ೩
ತಂದೆ ತಾಯಿ ತಾನೇ ಆಗಿ ಬಂಧು ಬಳಗಾ ಭಾಗ್ಯವಾಗಿ
ಹಿಂದೆ ಮುಂದೆ ನನ್ನ ಪೊರೆವಾನಂದದಿಂದ
ಹರಿ ಗೋವಿಂದಾ ೪
ಪನ್ನಗಾರಿ ಪರ್ವತನಿಲಯಾ ಧನ್ಯ
‘ಹೊನ್ನವಿಠ್ಠಲ’ ರಾಯಾ
ಮನ್ನಿಸೆನ್ನ ಕರುಣದಿಂದಾ ನೀನು ಪೊರೆಯೋ
ಇಂದು ಮುಕುಂದಾ ೫

 

೪೫
ಉದ್ಧರಿಸು ಅನಿರುದ್ಧ ನೀಯನ್ನ
ಮಧ್ವಾಂತರ್ಯಾಮಿ ಮಾಧವ ಕೃಷ್ಣಾ ಪ
ಪಾಂಡುತನಯ ಪರಿಪಾಲನ ಹರಿ
ವೆತಂಡ ವರದ ಶ್ರೀಕುಂಡಲಿ±ಯÀನ ೧
ಅಂಡಜಗಮನ ಪ್ರಂಚಂಡ ಮಹಿಮಾ
ಭವ ಖಂಡನ ಮುನಿನುತ ಮಂಡನಭೀಮ ೨
ನೀಲವರ್ಣ ನವನೀತ ಚೋರ ಗೋ
ಪಾಲ ಮುರಾರಿ ದಯಾಲು ರಮೇಶ ೪
ಕಂಬುಕಂಠ ಕನ ಕಾಂಬರಧರ ಶಶಿ
ಬಿಂಬ ವಿಜಿತ ಮುಖ ಅಂಬುರುಹಾಕ್ಷ ೫
ಪಾಪರಹಿತ ನಿರ್ಲೇಪ ನಿರಂಜನ
ಶ್ರೀಪತಿ ಘನ ಹೆನ್ನೆಪುರನಿಲಯ ೬

 

೪೬
ಎಂಥ ಕೆಲಸಮಾಡಿ ಬಂದನೇ ಗೋಪ್ಯಮ್ಮ ನಿನ ಮಗ||
ಎಂಥ ಕೆಲಸ ಮಾಡಿ ಬಂದ ಕಾಂತ ಮಯೊಳಿಲ್ಲದಾಗ
ಚಿಂತೆಲೇಶವಿಲ್ಲದೆ ಬಂದು ಚಿದುಗ ಬುದ್ಧಿತೋರಿ ಆಗ ಪ
ಭಂಡಾರದ ಮನಿಯ ಒಳಗೆ ಗಂಡ ನಾನು
ಮಲಗಿ ಇರಲು |
ಕಂಡು ಆಕಳ ಕಣ್ಣಿ ತಪ್ಪಿಸಿ ಹೊರಗೆ
ಹೊಡಕೊಂಡು ಯಾರು ಹೋದರಂದನೆ
ಈ ಮಾತು ಕೇಳಿ ಗಂಡ ಆಕಳ ಹುಡುಕ ಹೋದನೆ
ಬೇಗನೆ ಬಂದು ದುಂಡು ಮಲ್ಲಗೆ ತುರುಬಿಗೆ
ಸುತ್ತಿ ಗಂಡನೆಂದು ಕೂಡೆಂದೆನ್ನ ೧
ಬಂಡು ಮಾಡಿ ಬಟ್ಟೆ ಬಿಡಿಸಿ ಭಯವಿಲ್ಲವೆಂದನಮ್ಮ
ಮಾನವುಳ್ಳ ಸ್ತ್ರೀಯರ ಸಂಗ ಸ್ನಾನಕ್ಕಾಗಿ ನದಿಗೆ ಹೋಗಿ
ನಾನು ಉಟ್ಟ ಸೀರೆ ಬಿಟ್ಟನೆ ಬಿಟ್ಟೊರಿಲಿಟ್ಟು
ಸ್ನಾನಮಾಡೊ ನೀರೊಳು ನಿಂತೆನೆ
ಆವೇಳೇ ಬಂದು ಕಾಣದ್ಹಾಗೆ ಶೀರಿ ತೆಗೆದನೆ
ಕಡಿಗೆ ಬಂದು ತಾನು ಅಲ್ಲಿ ಕುಳಿತು ಇರುವುದು
ನಾನು ಕಾಣದೆ ಉಡಲು ಹೋದೆ
ಕಾನನದೊಳು ಕೈಯ್ಯ ಪಿಡಿದು ಏನು ಮಾನ ಕಳದನಮ್ಮಾ ೨
ಹೆಂಗಳೆರು ಎಲ್ಲ ಕೂಡಿ ಗಂಗಾಕ್ರೀಡೆನಾಡೋ ವೇಳೆ
ರಂಗ ಬಂದು ಅಲ್ಲಿ ನಿಂತನೆ ನಿಲುತವರ
ಅಂಗವಸ್ತ್ರÀವನೆಲ್ಲ ತೆಗೆದನೆ
ತೆಗೆದು ಮರದ ಟೊಂಗೆನೇರಿ ಕಾಡುತಿಹನೆ
ಈ ಪರಿಯಿಂದ ಭಂಗ ಪಡಿಸಿ ನಾರಿಯರ
ಅಂಗವ್ರತವೆಲ್ಲ ಕೆಡಿಸಿರಂಗ ‘ ಹೆನ್ನೆ ವಿಠಲ’ ಶ್ರೀರಂಗಧಾಮನೆನೆಯಿರೆ ೩

 

೪೮
ಎಂಥಾ———–ಈಗ
ಪಿಡಿಯೊ ಎನ್ನ ಕೈಯ್ಯ ಬೇಗ
ಅನಂತಾ ಭಗವಂತಾ ಶ್ರೀಕಾಂತಾ ಜಗದಂತ ……. ಪ
ಒಂದೊಂದು ದಿನವು ಎಂಬುದು
ಒಂದೊಂದು ಯುಗವು ಆಗಿ
ಬೆಂದು ಬಹಳ ಬೇಸರದಿಂದ
ತಂದೆ ———-ಬಂದೀ
ಕಂದನೆಂದು ಕರುಣದಿಂದ
———ಗೋವಿಂದ
ನಂದ ಮುಕುಂದಾ
ಶ್ರೀ ಮಂದರಧರ ೧
ಮಕ್ಕಳು ಮರಿಗಳು ಎಲ್ಲಾ
——ಕಾಣದ ದೇವಾ
ಶುಷ್ಕ ಭೂತರಾಗಿ ಇನ್ನು
ಸುಖವು ಕಾಣದೆ —ನೆಗೊಂಡು
ಬಹಳಘೋರ ನಾ ಬಡುವದು ಕಂಡು
ನಿಕ್ಕಾಸಲಾರದೆ ನಿನ್ನ ಮೊರೆಯ ಹೊಕ್ಕ
ಕಾಯಯ್ಯ ನೀನೆ ———
ಶ್ರೀ ಲೋಕನಾಯಕ ಹರಿಯೆ ೨
ಮನಸು ನಿನ್ನ ಧ್ಯಾನವು ಬಿಟ್ಟು
ತಿರಸೂ? ಚಿಂತನೆಗೊಳಗೆ ಆಗಿ
ಕನಸಿನಲ್ಲಿ ಕಾಣೋನಿಲ್ಲಾ
ಕಾಯದ ಸುಖವೆಂಬಾದಿನ್ನು
ಅನಿಮಿತ್ತ ಬಂಧು ಕೃಷ್ಣ ಹರಿ
‘ಹೊನ್ನ ವಿಠ್ಠಲ’ ರಾಯ ಮನಸಿಜನಯ್ಯ
ಮೋಹನ್ನ ನಿಧಾನಾ
ಸುರಧೇನು ಸದ್ಗುಣಪೂರ್ಣ ೩

 

೪೭
ಎಂಥಾ ನಿರ್ದಯನಾದ್ಯೋ ಎಲೆ ದೇವನೆ
ಕಂತುಪಿತ ನಿನ್ನ ಅಂತ:ಕರುಣ ಎನ್ನ ಮೇಲೆ ಇಲ್ಲದೆ ಪ
ಅಂತರಂಗದಿ ಮನದಿ ಅನುದಿನವು ಬಿಡದೆ ನಿಮ್ಮಾ
ಚಿಂತನೆಯ ಮಾಡಿದರೆ ಚಿತ್ತಕರಗದೇಕೆ
ಅಂಥ ಮಹಾದೋಷ ದತಿಶಯನಗೇನುಂಟ-
ನಂತಗುಣ ಪರಿಪೂರ್ಣ ಆದಿನಾರಾಯಣ ೧
ವಾಸುದೇವನೆ ನಿಮ್ಮ ವರ್ಣಿಸುವೆನು ವಸುಧಿಯೊಳು
ಭೂಸುರರ ಪೋಷಿಸುವ ಪುಣ್ಯಪುರುಷಾ
ಘಾಸಿಗೊಳಗಾಗಿ ನಿಮ್ಮ ಧ್ಯಾಸವೇಗತಿಯೆಂದು
ಏಸೋ ಪರಿಯಲಿ ಭಜಿಸಿ ಈಶ ನಿನ್ನ ಕೃಪೆಯಾಗದೂ ೨
ಸಕಲಲೋಕಾಧೀಶ ಸಕಲಭಾರಕರ್ತನಾಗಿ
ಪ್ರಕಟ ಭಕುತರೊಳಗೆ ಪಾಲಿಸದೆ ಎನ್ನಾ
ಮುಕುತಿದಾಯಕ ಹೆನ್ನ ವಿಠ್ಠಲ ನೀನೆ ಗೋವಿಂದ
ಅಕಲಂಕ ಮಹಿಮ ನಿನ್ಹರುಷವನು ತೋರದಿನ್ನಾ ೩

 

೪೯
ಎಂದಿಗೆ ದಯಬಾಹುದೋ ರಾಮಾ
ಎಂದಿಗೆ ದಯಬಾಹುದೊ ಎನ್ನಯ ಮೇಲೆ
ಮಂದರಧರ ಗೋವಿಂದ ಮುಕುಂದ ಪ
ಸ್ಪಷ್ಟದಿ ನಿಮ್ಮ ಪಾದ ಸ್ಮರಿಸುತಲಿರುವನ
ಕಷ್ಟವ ಕಳೆದು ಮನೋಭಿಷ್ಟವ ತೀರಿಸು ೧
ಕಂತುಜನಕ ಶ್ರೀಕಾಂತಾ ಭಕ್ತನ
ಚಿಂತಿಯ ಬಿಡಿಸಿ ಸಂತತ ಪಾಲಿಸಲು ೨
ವರಹೆನ್ನೆಪುರ ನರಹರಿ ನಿನ್ನಯ ಮೊರೆ
ಹೊಕ್ಕವನ ಪೊರೆಯಲಿ ಹರುಷದಲಿ ೩

 

೫೦
ಎಂದಿಗೊ ನಿನ್ನ ಕರುಣದಯ ಎನಗೆ ಹರಿಯೆ
ಬಂದ ದುರಿತಗಳೆಲ್ಲ ಪರಿಹರಿಸಿ ಪೊರೆವದು ಪ
ಎಷ್ಟು ಪರಿಯಲಿ ನಿನ್ನ ಎಷ್ಟು ನಾ ಮೊರೆ ಇಡಲು
ಕಷ್ಟವನು ಕಳೆವ ಭರ ಕಾಣಲಿಲ್ಲ
ಸ್ಪಷ್ಟ ಭಕುತಿ ನಿಮ್ಮ ಸ್ಮರಿಸುವ ಭಕುತಾರಾ
ದೃಷ್ಟಿಲಿ ನೋಡದೆ ಹೋಗಿ ದಣಿಸುವ ೧
——-ನಿನ ವಸುದೇವನೆಂಬುದು
ಸಾರ್ಥಕವು ಏನು ಎನ್ನ ಸಲಹದಿರಲು
ಕೀರ್ತಿವಂತನು ಎನಿಸಿಕೊಂಡು ಕಾಯದಿರೆ
ಅಪಕೀರ್ತಿ ಬಾರದೆ ನಿನಗೆ ಅಧಿಕ ಜನರೊಳಗೆ ೨
ಧಾರುಣಿಯೊಳಧಿಕರಿನ್ನಾರು ನಿನಗಿನ್ನು
ತೋರು ಮಾರಜನಕನಾದ ಮಹಾಮಹಿಮನೆ
ಧೀರ ‘ಹೊನ್ನಯ್ಯ ವಿಠ್ಠಲ’ ದೀನ ರಕ್ಷಕನೆಂದು
ಸಾರುತದೆ ನಿಮ್ಮ ಕೀರ್ತಿ ಸಕಲ ಲೋಕದಲಿ ೩

 

೬. ತಾತ್ವಿಕ ಪದಗಳು
೧೮೦
ಎಂದೆಂದೂ ಈ ಜೀವಕೆ ಸುಖವೆಂಬೋದು ಎಂದಿಗೂ
ಇಲ್ಲವಲ್ಲಾ ಏ ಹರಿಯೆ ಪ
ಗಂಧಾರದೊಳು —ಕೊದ ಪಶುವಂತೆ ಹಿಂದೂ
ಮುಂದು ತಿರುಗಿ ತಿರುಗಿ ಬಳಲುವದೊಂದೆ ಅ.ಪ
ಕೆಲವು ದಿನವು ಮೇಘದೊಳು ಕೂಡಿ
ಅಲ್ಲಿ ಜಾರಿಬೀಳುತಾ ಪರಿಪರಿಯಲ್ಲಿ ಇನ್ನೂ
ಚಲನೆಯಿಂದ ಮೇಘ ಜಲದಾರಿಗಳಿಂದ
ನೆಲದೊಳಗೆ ಹೊಕ್ಕು ನರಳಾಡುತಾ
ಒಲಿದು ಔಷಧಿಗಳ ವಶವಾಗಿ ಧಾನ್ಯದೊಳು
ಕಲೆತು ಪಚನೆಯಿಂದ ಬಳಲುತ ನೀ
ಅಲ್ಲಿ ಪಕ್ವಾನ್ನಗಳಿಂದ ಪುರುಷನುದರ ಸೇರಿ
ನಲಿದಾಡುತಲಿ ಹೋಗೆ ಕೆಲವು ಕಾಲಾದಲ್ಲಿ ೧
ಸ್ತ್ರೀ ಪುರುಷ ಸಂಯೋಗದಿಂದ ಸ್ತ್ರೀ ಗರ್ಭದಲಿ
ವ್ಯಾಪಿಸಿ ಕೊಂಡಿಯ ರೂಪತೋರುತ ನೀ
ತಾಪವು ಬಡುತಾಲಿ ತಾಯಿ ಉದರದಲ್ಲಿ
ಈ ಪರಿ ನವಮಾಸ ಪರಿಯಂತರದಲಿ
ತಾ ಪರಿ ಮಾಡಿದ ಹಿಂದಿನ ದೋಷಗಳಿಂದ
ತನ್ನೊಳು ತನು ತಪಿಸುತಲಿ
ದೀಪವಿಲ್ಲದೆ ಗುಡಿಯೊಳಗಿನ ದೇವರಂತೆ
ಕೂಪದೊಳಗೆ ಬಿದ್ದು ಕಷ್ಟವ ಪಡುತಲಿ ೨
ಎಂದೆಂದು ಬಯಲಿಗೆ ಹೊರಡುವೆಯೆನುತಾಲಿ
ಸಂದೇಹ ಪಡುತಾಲಿ ಸರ್ವದಲಿ ಸಂಧಿಸಿಕಾಲದಿ
ತಂದೆ ತಾಯಿಗಳಿಗೆ ತನಯನಾಗಿ ಹುಟ್ಟಿ ತೋರುತಲಿ
ಕಂದನಾಗಿ ಅತಿ ಕಡುಮೋಹ ತೋರುತ
ಸಂದುಹೋಯಿತು ಕಾಲಸ—-ದಿನವೂ
ಮುಂದು ಗಾಣದೆ ಬಾಲಪ್ರಾಯದ ಹಮ್ಮಿಲಿ
ಅಂದದಿ ಆಟಪಾಟಗಳಿಂದ ——-ದಿನಾ ೩
ವಾರಕಾಂತೇರ ಸಂಗವುದ್ಯೋಗ ವ್ಯವ-
ಹಾರ ದೈನಂದಿನ ಕೆಲವು ಕಾಲಾಯಿತು
ಕ್ರೂರ ಚೋರ ದುಷ್ಟ ವ್ಯಾಪಾರಗಳ ಕೂಡಿ
ಕುಣಿದಾಡುವುದು ಕೆಲವು ದಿನವಾಯಿತು
ಮೀರಿ ಗರ್ವದಲಿನ್ನೂ ಮೈಯ ಸ್ಮರಣೆದಪ್ಪಿ
ಮರೆದು ಮೆರೆವ ಕಾಲ ಕೆಲವಾಯಿತು
ಪಾರಗಾಣದೆ ಪ್ರಪಂಚದೊಳಗೆ ಬಿದ್ದು
ಹೊರಟು ಬಿಡುತಾಲಿ ಹೋಯಿತು ಕೆಲವು ಕಾಲ೪
ಸತಿಸುತರ ಸಂಪತ್ತು ಅತಿಮೋಹ ವ್ಯಾಸಂಗ
ಸತವಾಗಿ ಕೆಲವು ಕಾಲ ಸಂದು ಹೋಯಿತು
ಮತಿಗೆಟ್ಟ ಮಂದ ಬುದ್ಧಿಲಿ ವಾರ್ಧಿಕದಿ
ಹಿತಗಳು ತಪ್ಪಿ ಮಾನ ಹೀನನಾಗಿ
ಗತಿಯು ಕಾಣದೆ ಘೋರ ಕಷ್ಟಕ್ಕೊಳಗಾಗಿ
ಮತಿಯಲ್ಲಿ ಹರಿನಾಮ ಮರೆದು ಹೋಗಿ
ಪತಿ ಹೆನ್ನೆ ವಿಠ್ಠಲನ ಪ್ರೀತಿಯ ಪಡೆಯದೆ
ಅತಿ ಘೋರತಮಸಿ ಗರ್ಹಾನು ಆಗೊ ಕಾಲಾಯಿತು ೫

 

೫೨
ಎಂದೆಂದೂ ಎಂದೆಂದೂ ನಿಮ್ಮ ಪಾದದೆ ಗತಿಯೆಂದು
ಹೊಂದಿದ ಭಕ್ತರ ಪೊರೆಯಲಿಲ್ಲೆ ಅಂದು ಪ
ಇಂದ್ರದ್ಯುಮ್ನನೆಂಬ ಅರಸಗೆ ಮುನಿಶಾಪದಿಂದ
ಸರೋವರದಿ ಗ
ಜೇಂದ್ರನಾಗಿ ಬಂದು ಮಕರಿಗೆ ಸಿಲುಕಿ
ಬಾಧೆಯ ಬಡುತ ಗೋ
ವೀಂದ ನೀ ಗತಿ ಎಂದ ಕರಿಯ ಕಾಯ್ದ ಧೊರಿಯೆ ೧
ದುರುಳ ದುಶ್ಯಾಸನ ನಿಂದ ತರುಣಿಯ
ಮಾನಭಂಗವ ಕಾಯ್ದ ಹರಿಯೆ
——————-
—————– ೨
ಪಿತನ ಬಾಧೆಗೆ ಸಿಲುಕಿ ಅತಿಕಷ್ಟ ಬಡುತಲಿ ——ದೆ
ಹಿಡಿದಂಥ ಮಗನಾದ ಪ್ರಹ್ಲಾದ ಕರಿಯೆ
ಅತಿವೇಗದಿಂದ ಬಂದು ಅವನ ತಂದೆಯ ಕೊಂದು
ಸುತನ ಕಾಯ್ದಂಥ ಸುಗಣ ಶ್ರೀನರಹರಿಯೆ ೩

 

೫೧
ಎದೆ ಒಡೆದು ಏಕೆ ನೀ ಹೆದರುತಿ ಮನವೆ
ಪದುಮನಾಭನ ಪಾದ ಭಜನೆ ಹೃದಯದಲಿರೆ ಪ
ಅಖಿಲ ಜನಗಳ ಪೊರೆವ ಹರಿಯು ಕರ್ತನಾಗಿರಲು
ಸಕಲ ಜಗಬೋಧಗುರು ಸನ್ನಿಧಿ ಇರಲೂ
ಸಕಲ ಬ್ರಹ್ಮಾದಿ ದೇವತೆ ಬಂಧು ಬಳಗಿರಲು
ನಿಖಿರವಿಲ್ಲದೆ ಚಿತ್ತ ನೀನು ಈ ಪರಿಯಿಂದಾ ೧
ಮುದದಿಂದ ಶ್ರೀ ಲಕ್ಷ್ಮೀ ಮಹಾತಾಯಿ ತಾ —–
—–ದಮಲ ಜ್ಞಾನಿಗಳ ಸಂಬಂಧ ವಿರಲೂ
ಕುದುರೆಯಂದದಿ ಮನಸು ಕ್ರೂರರಾರ್ವರಕೂಡಿ
ಒದರಿ ಪರಿಪರಿಯಲ್ಲಿ ಚಿಂತೆಯೊಳಗಾಗಿ ೨
ಪರಮಾತ್ಮ ಪರಬ್ರಹ್ಮ ಪರಲೋಕ ಬಾಂಧವನು
ಪರಿಪರಿಯ ಷೋಷಿಸುವ ಭಾರಕನು ಇರಲು
ಅರಿತು ನೀ ಚನ್ನಾಗಿ ಹರಿ ಹೊನ್ನ ವಿಠ್ಠಲನ ಸ್ಮರಣೆಯಲಿ
ನಿರುತ ಇರೆ ಸಕಲ ಸಂಭ್ರಮವು ೩

 

೧೩೮
ಎಲ ಎಲ ನೆನಿಯೊ ನೆನಿಯದೆ ಇರಬೇಡಾ
ಎಂದಿಗೆ ಶ್ರೀಹರಿಯಾ
ಮಾತಿಲಿ ಕಾಲವು ಕಳೆದಲ್ಲಿ ಘನವೇನಿಲ್ಲಯ್ಯ ಪ
ಸ್ಥಳಕುಲ ಮೋದಿಸಿ ತಾಂಡವಮೂರ್ತಿಯ
ಕುಲನೆನಿಸಿ ಮಾರ್ಗದಲಿ
ಕುಲನೆಲೆ ತಿಳಿದು ಕಾಣುತಹೋಗುವ
ನೆನೆಗಳ್ಳರ ಕೂಡೆ
ಚಲೊ ಚಲೊ ಬೋಧಿಗೆ ಒಳಗಾಗಿ ಮಧುರಸ
ಚಂಚಲ ನತಿ——ದು
ಭಲ ಭಲ ಎನಿಸಿಕೊ ಬೇಗನೆ ಪರಮ
ಭಕ್ತರ ಒಳಗೆಂದೂ ೧
ಸರಸರ ಮಾರ್ಗದ ಸರಳಿಯ ತಿಳಿದಾ
ಶರಣರ ನೆಲೆಗಾಣೊ
ನೆರೆಹೊರೆಲಿರುವರ ಕರಕರಿಗಳುಯೆಂಬ
ಕಲ್ಮಿಷ—–ಕಾಣೊ
ಹರಿಗುರು ಕರುಣಾದಿ ಅಂತರಂಗದಿ
ಅರಿತಿರುವರ ಕೂಡೋ
ಪರಿ ಪರಿಯಲಿ ಆ ಭಂಡಾರದ ಗುರುಭಾರವು
ನೀನೋಡೊ ೨
ಮನಘನ ಕಾಂತಿಯ ಮಹಿಮೆಯ ತಿಳಿದಾ
ಮರ್ಮಜ್ಞರ ಬೆರಿಯೊ
ದಿನ ದಿನ ಸಂಭ್ರಮವನು ಅಘಸರಿಸಿ
ದೃಢಭವವು ಪಿಡಿಯೊ
ತನುವನು——ದ್ರಿಸಿ ತಾರಕ ಜಪಿಸಿ
ಧನ್ಯನಾಗೊ ಇನ್ನೂ ದೀನಜನ ರಕ್ಷಕ
ಧೀರ ‘ಹೆನ್ನೆ ವಿಠ್ಠಲನ’ ಧಿಟ್ಟದಿ ಸ್ಮರಿಸಿನ್ನು ೩

 

೫೩
ಏಸುಬಾರಿ ಬೇಡಿದರೆ ಹೇಗಾಯಿತು ಹರೇ
ವಾಸುದೇವನೆ ನಿನ್ನ ಧ್ಯಾನಕೆ ಸರಿಬಾರದಿರೆ ಪ
ಈ ಸಮಯದೀ ಪರಿ ಘಾಸಿಗೊಳಗಾಗಿ ಬಹು
ಕ್ಲೇಶದಿಂದಲಿ ನಿನ್ನ ಆಶಿಸಿದವನಾ
ಭೂಸುರ ಧೊರಿಯೆ ಶ್ರೀನಿವಾಸ ವೇಣುಗೋಪಾಲ
ಕೂಸಿನಂದದಿ ಎತ್ತಿ ಪೋಷಿಸುವುದು ನಿನಗೆ ಹುಟ್ಟದೊ ೧
ಸಂಸಾರ ವೆಂಬಂಥ ಶರಧಿಯೊಳು ಮುಳುಗಿ ಬಹು
ಹಿಂಸೆ ಬಡುತಲಿ ಬಹಳ ಹೀನನಾಗಿ
ಕಂಸಮರ್ದನನಾದ ಘನಮಹಿಮಗೋವಿಂದ
ಸಂಶಯವಿಲ್ಲದೆ ನಿಮ್ಮ ಸ್ಮರಿಸುತಲಿ ಅನುದಿನವೂ ೨
ಅಘಹರನೆ ನಗಧರನೆ ಆದಿ ಪರಾಕ್ರಮನೆ
ನಿಗಮಗೋಚರನಾದ ಘನ ‘ಹೊನ್ನ ವಿಠ್ಠಲ ‘ನೆ
ಜಗತ್ಕರ್ತನೆ ನಿನ್ನ ಚಿಂತನೆಯೆ ಅನುದಿನವೂ
ಬಗೆ ಬಗೆಯಿಂದಲಿ ಮಾಡಿ ಬಳಲಿದರೂ
ಕರುಣಹುಟ್ಟದೇನು ೩

 

೭. ಸಂಪ್ರದಾಯದ ಹಾಡುಗಳು
೧೮೭
ಏಳೈಯ್ಯ ಬೆಳಗಾಯಿತು
ಏಳು ಹೆನ್ನೆಯರಂಗ ಕೃಪಾಂಗನೆ
ಏಳೈಯ್ಯ ರಾಮಾನಂತ ರಂಗ ನರಸಿಂಗ ಏಳೈಯ್ಯ ಪ
ಅರುಣೋದಯವಾಗುತಲೆ ಸುರಮುನಿ ಭಕುತರು
ಹರಿನೀನೆಗತಿಯೆಂದು ಆನಂದದಿ ನೆರೆದು ನಿಮ್ಮಯ ದಿವ್ಯ
ನಾಮಾಮೃತವ ಸವಿದು ಪರಿಪರಿ ಭಕ್ತಿಯಲಿ
ಪಾಡುತಿರಲಿನ್ನು ೧
ಸಿದ್ಧ ಗಂಧರ್ವ ಕಿನ್ನರ ಕಿಂಪುರುಷರು
ಸಿರಿಭೂದುರ್ಗಾದೇವಿಯರು
ಹರುಷದಲಿ ಅವರವರು ಸೇವೆಗಳನುಸರಿಸಿ
ಚರಣ ಕಮಲ ಬಳಿಯಲ್ಲಿ ಸ್ಥಿರವಾಗಿ ನಿಂತಿರಲು ೨
ಮೂಡಲು ಬೆಳಗಾಗಿ ಮೂಹೂರ್ತ ಒಂದಾಗಿ
ಗೂಡಿನ ಕರುಗಳು
ಗೋಗಳಿಗಾಗಿ ನೋಡುತಿರೆ ಮಾರ್ಗವನು
ಗಾಢನಿದ್ರೆಯೊಳಿರುವ ಕಾರಣವು ಏನೊ ೩
ಅಜಮಿಳ ಅಂಬರೀಷ ಅಕ್ರೂರ ವರದನೆ
ಗಜರಾಜನು ಕಾಯಿದ ಕರುಣಾವಿಲಾಸನೇ
ಭುಜಗೇಂದ್ರ ಶಯನ ಪೂರ್ಣಾನಂದನೇ ಸುಜನರನು
ಪೊರೆವ ಸಂಪನ್ನ
ಮಂದರೋದ್ಧರ ಕೃಷ್ಣ ಮಾಧವ ಗೋವಿಂದ ೪
ಸಿಂಧು ಶಯನನಾದ ಸಿರಿಹೆನ್ನೆವಿಠ್ಠಲ
ಛಂದದಿಂದಲಿ ನಿಮ್ಮ ಶೇವೆಯ ಮಾಳ್ಪರೊಳ್
ಸಂದೇಹಯಾತಕೆ ಶೀಘ್ರದಿಂದಲಿ ಇನ್ನು ೫

 

೧೩೯
ಕಂಡದ್ದು ಬಯಸಿ ಕಂಗೆಡು ಬೇಡಾ
ಪಾಂಡುರಂಗನ ಪಾದ ಬಿಡಬೇಡಾ ಪ
ಕಾಲನಿನ್ನದಲ್ಲ ಕಡುಮೂರ್ಖ ಆ
ಕಾಲ ಪುರುಷ ಮಾಡಿದನೇಕಾ ಪರಿಗಳಿಂದ
ಇನ್ನು ಯಾಲೋಕಾದಲಿ ನಡುವುದಲ್ಲಾ ಸುಖದು:ಖ
ಪಾಲಿಗೆ ಬಂದದ್ದು ಬಿಡದನಕಾ
ಪ್ರಾಪ್ತಿ ಇದ್ದಷ್ಟೇ ಇಲ್ಲಧಿಕಾ
ಶ್ರೀಲೋಲನ ನೀನಿರುವತನಕಾ
ಸ್ಮರಿಸದೆ ಇರಬೇಡ ಅವಿವೇಕಾ ೧
ಬಗಸುವದೊಂದೆ ಮನದಲ್ಲೆ
ಘಣಿಯಲ್ಲಿ ಬರದದ್ದು ತಪ್ಪದಲ್ಲೆ
ಜಗ ಭಗವಂತ ನೀ ಮಾಡಿದಲ್ಲೆ—
——– ನಿನ್ನದಲ್ಲೆ
ಅನುಗ್ರಹ ಮಾಡುವ ಭರದಲ್ಲೆ
ನಗಧರನಾ ನಾಮ ಬಲದಲ್ಲೆ
ಅಘಗಳ ಕಳಿ ನೀ ತೀವ್ರದಲ್ಲೆ ೨
ಇಷ್ಟಾರ್ಥ ನೀ ಮಾಡಬೇಕಂದಿ
ಹಿಂದಿನ ಸಂಚಿತ ಎಲ್ಲೆಂದಿ
ಕಷ್ಟವ ಪಡಕೊಂಡು ನೀ ಬಂದಿ
ಕಾಮಕೆ ಸುಖವು ಇಲ್ಲೆಂದಿ
ಇಷ್ಟದಿ ಶ್ರೀ ಹರಿ ಪದಹೊಂದಿ
ಇರದೆ ನೀ ಇರಬೇಡಾ ಇಬ್ಬಂದಿ
ಸ್ಪಷ್ಟದಿ ‘ಹೊನ್ನಯ್ಯ ವಿಠ್ಠಲಂದಿ’
ಸಾರ್ವದಿ ಮುಂದಕ ನೀ ಬಂದಿ ೩

 

೫೪
ಕಂಡೆನಾನು ಕಂಡೆ ನಾನೊಂದು ಕಮಲ——
ಕರುಣದಿಂದಲಿ
ಕಂಡೆನಾ ಶ್ರೀನಿವಾಸ ಮೂರ್ತಿಯ ಕೋಟಿಸೂರ್ಯ
ಪ್ರಕಾಶ ದೇವನ ಪ
ವುಸ್ತಕದ ಮೇಲಿರುವ ಹೇಮ ಮುಕುಟ-
ಮಾಣಿಕ್ಯಯುಕ್ತವಾಗಿರೆ
ಕಸ್ತೂರಿ ಫಣಿಯಲ್ಲಿ ತಿಲಕವು ಕರಗಳಲ್ಲಿ
ಇರುವ ಶಂಖಚಕ್ರವು
ಮುತ್ತಿನಹಾರ ಮೋಹನನೆ ಮತ್ತೆ ಅಂದಿಗೆ ಗೆಜ್ಜೆಯುಕ್ತದಿ
ವಸ್ತುಗಳು ಅಕೋ ಭೂಷಣವು ಪ್ರತಿರೂಪ—–ಭಾವನಾ ೧
ದೀನರಕ್ಷಕ ದನುಜ ಶಿಕ್ಷಕ ದಿವಿಜ ಪೋಷಕನಾದ ಶ್ರೀಹರಿ
ಜ್ಞಾನಿಗಳ ಬಿಡದಿನ್ನು ಸಲಹುವಾ—-
ನ ವಾಧಿಪನೊಳಾದನು ?
ಗಾನಲೋಲನಾಗಿ ಕನಸು ಮನಸಿನಲ್ಲಿ ಕರುಣರಸದಲ್ಲಿ
ಸಾನುರಾಗದಿ ನಾಟ್ಯವಾಡುತ ಸಾರಿ ಸಾರಿಗೆ ಬಂದ ಕೃಷ್ಣನ ೨
ಅಂದದಲಿ ಪೀತಾಂಬರ ಧರಿಸಿಂದು ಕಟಿ ರತ್ನ
ಸುದರ್ಶನ—-ಡುವಣಿ
ಯಿಂದ ನಲಿವುತ ಇಷ್ಟದಿಂದಲಿ
ಬಂದು ಎನ್ನ ಹೃದಯ
ಮಂದಿರದಿ ನಿಂದು ನೀರಜನಾಭ ಪರಿ
ಪರಿಯಿಂದ ತೋರುವ
ಮಹಿಮೆ ಚರ್ಯವು ತಂದೆ ‘ಹೆನ್ನೆ ವಿಠ್ಠಲನ ‘ ಮನ
ನಿರುತ ದೃಷ್ಟಿಯಿಂದ ನಾನು ೩

 

೫೫
ಕನಸು ಕಂಡೆನು ನಾನು ಸಂತೋಷದಿ|
ಕನಸು ಕಂಡೆನು ನಾನು ಅರನಿಮಿಷದೊಳು ಹರಿಯ
ಮನಸಿನಲಿ ಸ್ಮರಿಸಿ ಮಹಾರೂಪವನು ಕೂಡ ಪ
ವೆಂಕಟರಮಣನ ಯಾತ್ರೆಗೆ ಹೋದ್ಹಾಗೆ
ಶಂಕೆ ಇಲ್ಲದೆ ಪರಶಿಜನಕ ಕಂಡ್ಹಾಗೆ
ಬಿಂಕದಿಂದಲಿ ದೇವಸ್ಥಾನ ಪವಳಿಯ ಸುತ್ತ
ಅಂಕುರಾರ್ಪಣ ಧ್ವಜಸ್ತಂಭದಲಿ ನಿಂತ್ಹಾಗೆ ೧
ಅಡಗಿ ಶಾಲೆಯ ಅನ್ನಪೂರ್ಣೆಯನ್ನು ಕಂಡ್ಹಾಗೆ
ದೃಢದಿ ಶ್ರೀನಿವಾಸ ದೇವರ ನೋಡಿದ್ಹಾಗೆ
ಕಡು ಹರುಷದಲಿ ತೊಟ್ಲ ತೀರ್ಥ ಸೇವಿಸದ್ಹಾಗೆ
ಸಡಗರದ ಮಧ್ಯರಂಗದಲಿ ನಿಂತ್ಹಾಗೆ ೨
ಶಿರಞ್ಲ್ಲಿ ಕಿರೀಟ ಲಲಾಟ ತಿಲಕ ವಿಟ್ಟ್ಹಾಗೆ
ಕೊರಳೊಳ್ ಮುತ್ತೀನಹಾರ ಪದಕ ತೋರಿದ ಹಾಗೆ
ಕರದಲ್ಲಿ ಶಂಖಚಕ್ರ ಧರಿಸಿ ಕೊಂಡಿರುವ ಹಾಗೆ
ಉರದಲ್ಲಿ ಶಿರಿಲಕುಮಿ ವಾಸವಿದ್ಹಾಗೆ ೩
ಹೊನ್ನ ಹೊಸ್ತಿಲ ದಾಟಿ ವಳಗ್ಹೋಗಿ ನಿಂತ್ಹಾಗೆ
ಚಿನ್ಮಯನ ರೂಪವನು ಚಿಂತಿಸಿದ ಹಾಗೆ
ಅನ್ನ ಪ್ರಸಾದಾತಿ ರಸದೂೀಶಿ ಕೊಟ್ಹಾಗೆ
ಪನ್ನ ಗಾದ್ರಿ ವಾಸನ ಕಣ್ಣಿಂದ ನೋಡಿದ್ಹಾಗೆ ೪
ನಡುವಿನಲಿ ಒಡ್ಯಾಣ ಪೀತಾಂಬರವನುಟ್ಹಾಗೆ
ಯಡಬಲದಿ ಜಯು ವಿಜಯ ನಿಂತಿರೋಹಾಗೆ
ಪೊಡವಿಯೊಳ್ ‘ಹೆನ್ನೆವಿಠ್ಠಲ’ ವೆಂಕಟೇಶನ್ನ
ಕಡು ಹರುಷದಲಿ ಕಂಡು ಕೈಮುಗಿದು ನಿಂತ್ಹಾಗೆ ೫

 

೫೬
ಕಮಲನಯನನ ಕರತಾರೆ
ಕರುಣ ಸಾಗರನ ಕರಿರಾಜ ವರದನ ಪ
——-ಪನ ಕಂಬುಕಂಧರನ
ಲೋಕನಾಯಕ ಶ್ರೀಯದು ವೀರನಾ
ರಾಕೇಂದು ಮುಖಿ ವರ ಲಕ್ಷ್ಮೀನಾಯಕನ
ನೀ ಕರುಣಿಸಿ ಬೇಗ ನೀರಜ ನಾಭನಾ ೧
ಸುಂದರ ಮೂರುತಿ ಸುಜನ ವಿಲಾಸನಾ
ಕಂದ ಪ್ರಹ್ಲಾದನಾ ಕಾಯ್ದದೇವನಾ
ಸುಂದರ ವದನ ಗೋವಿಂದ ಮುಕುಂದನಾ
ಮಂದರಧರನಾದ ಮಾಧವ ಕೃಷ್ಣನಾ ೨
ಯದುಕುಲಾಬ್ಧಿಚಂದ್ರ ವೇದಗೋಚರನಾ
ಮಧು ಸೂದನ ರೂಪ ಮಹಿಮ ಪ್ರಕಾಶನಾ
ಬುದ್ಧ ಜನರ ಸಿರಿಯ ನಾ ಪೂರ್ಣಾನಂದನ
ಚದುರೆ ನೀ ಬೇಗ ಹೋಗಿ ಚಲುವ ಸಂಪನ್ನನಾ ೩
ಆನಂದ ನಿಲಯನಾದ ಅಖಿಲವೈಭವನಾ
ಜ್ಞಾನಿಗಳ ಪೊರೆವ ಘನ ಗಂಭೀರನಾ
ಧೇನು ಪಾಲಕ ದೇವಾದಿ ದೇವನ
ಗಾನಲೋಲನಾದ ವೇಣು ಗೋಪಾಲನ ೪
ಗರುಡವಾಹನನಾ—–ಜನ ಕಾಯ್ದವನಾ
ಸ್ಥಿರ ಹೆನ್ನ ತೀರದಿ ವಾಸವಾಗಿಹನ
ದೊರೆ ‘ಹೆನ್ನ ವಿಠ್ಠಲನ’ —-ದೇವನಾ
ಪೊರೆವನು ನಮ್ಮ ನಿಂದು ಪರಮಹರುಷದಿಂದಾ೫

 

೫೭
ಕರುಣಾ ತೋರದದೇನೊ ನರಹರಿಯೆ ನಿನ್ನ
ಕರುಣೆ ತೋರದೆ ಇರುವ ಪರಿಯೆನ್ಹರಿಯೇ ನಿನ್ನಯ
ಚರಣ ಕಮಲ ಸ್ಮರಣೆಯ ಇಹಪರಕೆ ಗತಿಯಂ
ದಿರುವ ಮನಜರಿಗ್ಹರುಷದಿಂದಲಿ ಪ
ಕ್ಷೋಣಿರೂಪ ಶುಭಾಂಗ ಶ್ರೀಧರ
ಸುಸಾಮಗಾನಪ್ರಿಯ ನರಸಿಂಗ
ದೈತ್ಯಾರಿ ಭಕ್ತಾಧೀನ ಗರುಡತುಂಗ ಕರುಣಾಂತರಂಗ
ಜ್ಞಾನನಿಧೆ ಘನವೇಣುನಾದ ಪ್ರವೀಣ
ಶೌರಿ ಪುರಾಣಪುರುಷ
ಭವಾನೀ ಪ್ರಿಯನುತ ದೀನ ಬಾಂಧವ
ದಾನವಾಂತಕ ಶ್ರೀನಿವಾಸನೆ
ಕ್ಷೋಣಿಧರ ಕಲ್ಯಾಣಕರ ಸುಮ ಬಾಣಪಿತ
ಶರಪಾಣೆ ವಿಷ್ಟಕ್ಸೇನವರ
ಗೀರ್ವಾಣವಂದಿತ ಜಾನಕೀಧರ ನೀನೇ ಸಲಹೆನೇ ೧
ಮಂದಹಾಸ ಮುಕುಂದ ಸನಕಾದಿ
ಸಂಯಮಿ ವೃಂದನುತ ಮುಚ-
ಕುಂದ ಪಾಲನ ಕೃಪಾಸಿಂಧು ಶ್ರೀ ಗೋವಿಂದ ಇಂದಿರಾನಂದ
ನಂದ ಗೋಪಿಯಾನಂದ ನಾಚ್ಯುತ ಮಂದರಧರ ಮಾಪತೆ
ಸಂಕ್ರಂದನಾರ್ಚಿತ ಕಂಬುಕಂಧರ ಇಂದು
ಮುಖ ಶ್ರೀ ಸುಂದರಾಂಗನೆ
ಅಂದು ಚಂದದಿ ಕಂದ ಕರಿಯಲು ದ್ವಂದ್ವ
ರೂಪದಿ ಬಂದು ಸ್ತಂಭದಿ
ಮಂದ ದನುಜನ ಕೊಂದೆ ನೀ ಮುದದಿಂದ
ರಕ್ಷಿಸೆಂದೆನಲು ಹರಿ ೨
ಶರಣಜನ ಮಂದಾರ ಶ್ರೀರಾಮ
ತ್ರಿಜಗದ್ಭರಿತ ಕೌಸ್ತುಭಹಾರ
ಶೋಭಿತ ಪೀತಾಂಬರ ಸುಮೇರುಗಂಭೀರ
ನರಮೃಗಾಕಾರ
ಗರುಡವಾಹನ ಪರಮ ಪಾವನ ಚರಿತ
ಮಂಗಳಕರ ಮಹಿಮಾ
ಕರಿರಾಜ ವರದ ದಾಶರಥಿ ದಾಮೋದರ
ಶರಣು ಭಾಸುರ ಕಿರೀಟನೆ
ದುರಿತಹರ ಶ್ರೀಧರ ಪರಾತ್ಪರ
ನಿರತದಲಿ ‘ಹೆನ್ನೆಪುರ ನಿಲಯ’
ಸಿರಿಯರಸ ನಿನ್ನಯ ಮೊರೆಯ ಹೊಕ್ಕರೆ ತ್ವರದಲಿ ನೀ ೩

 

೫೮
ಕರುಣಿಸಬಾರದೇನು ಶರಣೆಂಬೆ ನಾನು
ಕರುಣಿಸ ಬಾರದೆ ಮೊರೆಯ ಹೊಕ್ಕವನ
ಶರಣಾಗತ ಪಂಜರನೆಂಬೊ ಬಿರುದಿರೆ ಪ
ಸ್ತಂಭದಿ ನೀ ಬಂದು ದೈತ್ಯನ ಬೇಗ
ಶೀಳಿಕೋಪದಿಂದ ಇರಲು ಆಗ
ಬ್ರಹ್ಮೇಂದ್ರ ರುದ್ರ ವೃಂದ ಬೆದರಿ ಪೋಗೆ ಪ್ರಹ್ಲಾದನಾಗ
ಇಂದಿರಾವರ ಗೋವಿಂದ ಕೃಪೆಯ ಮಾಡೆಂದು ಸ್ತುತಿಸೆ
ಆನಂದದಿ ಕಾಯ್ದತಿ ಸುಂದರಮೂರ್ತಿ
ಮುಕುಂದ ಧರಣಿಧರ ಸಿಂಧುಶಯನ ಅರವಿಂದನಯನ ಹರಿ ೧
ದಶರಥ ಸುತನೆನಸಿ ಮುನಿಯಧ್ವರ ಕುಶಲದಿನ್ನುದ್ಧರಿಸಿ
ಅಸದೃಶವರ ಪಶುಪತಿ ಧನು ಭಂಜಿಸಿ
ಸೀತೆಯ ಕೋರಿ ದಶರಥನಾಜ್ಞೆ ವಹಿಸಿ ಕಾನನದಿ ಚರಿಸಿ
ಕುಶನಿಧಿಯನು ಬಂಧಿಸಿ ರಾವಣನ
ದಶ ಶಿರಗಳ ಭರದಿಂದಲಿ ಖಂಡಿಸಿ ಅವನನುಜಗ
ನಿಶದೊಳ್ ಶಿರಿಲಾಲಿಸಿ ಪೊರೆದ ಶ್ರೀಶಶಿಧರನು ಹರಿ ೨
ಗಂಗೆಯೊಳ್ ನಕ್ರ ಭಂಗಬಡಿಸೆ ಗಜಗಳರಸ ರಂಗ
ಮುರಾರಿ ದೇವೋತ್ತುಂಗ ಶ್ರೀ ಶ್ಯಾಮಲಾಂಗ
ಭಕ್ತಾಭಿಮಾನಿ ಮಂಗಳಾರಸತ್ಸಂಗ ಜಗದಂತರಂಗ
ಹಿಂಗದೆ ಭಜಿಸೆ ವಿಹಂಗ ಸಿರಿ ನರಸಿಂಹ ಬಂದು
ಶಾಪಂಗಳ ತರಿದೆ ಭುಜಂಗತಲ್ಪ ಕಾನಂಗಪಿತ
‘ಹೆನ್ನೆರಂಗ’ ಶರಣು ರಣರಂಗ ಭೀಮ ಹರಿ ೩

 

೫೯
ಕರುಣಿಸುವ ಹರಿ ನಿರಂತರವು ಮನವೆ
ಸರಸಿಜಾಕ್ಷನ ಪಾದ ಸ್ಮರಣಿಯನು ನೆರೆನಂಬು ಪ
ಕಂದ ಪ್ರಹ್ಲಾದನ ತಂದೆ ಭಾಧಿಸಲು ಗೋ
ವಿಂದ ಘನ ಸ್ತಂಭದೊಳ್ ಬಂದು ತಾಮುದದಿ
ಮಂದ ದನುಜನ ಬಿಡದೆ ಕೊಂದ ಶ್ರೀವರ ಮುಚು
ಕುಂದ ವರದ ಯೆಂದು ನೀ ಭಜಿಸು ೧
ಛಲದಿಂದ ಮಲತಾಯಿ ಸಲೆ ಧ್ರುವನ ಕಾನನಕೆ
ಕಳುಹಲಾಕ್ಷಣವೆ ಶ್ರೀ ನಳಿನನಾಭ
ಒಲಿದು ಪೊರಿದನು ಮಹಾಒಳಿತೆಂದು ಅವಗೆ
ನಿಶ್ಚಲ ಪದವಿಯನು ಇತ್ತ ಜಲನಿಧಿಶಯನ ೨
ಅರಸು ಮುನಿಶಾಪದಲಿ ಕರಿಯಾಗಿ ಜನಿಸಿ ಮ-
ಕರ ಬಾಧೆಗೆ ಶಿಲ್ಕಿ ಮೊರೆಯನಿಡಲು
ತ್ವರದಿ ಪೊರದಂಥ ಹೆನ್ನೆಪುರ ಲಕ್ಷ್ಮೀನರಶಿಂಹ
ಗರುಡವಾಹನನಾದ ಪರಮಾತ್ಮ ಸಿರಿ ಕೃಷ್ಣಾ ೩

 

೬೦
ಕರುಣಿಸೆಲೊ ಮುಕುಂದ ಮಾಧವ
ಶ್ರೀರಾಮ ಧರಣಿಧರನೆನಿಸಿ ನಿಮ್ಮ ದಾಸ್ಯವ ಪ
ಅಂಬುಜಾಕ್ಷ ಕಂಬುಕಂದರ
ಶ್ರೀರಾಮ ಜಂಬಭೇದಿ ವಿನುತ ಮುರಹರ
ಶಂಬರಾರಿ ಜನಕ ಗಿರಿಧರ
ಶ್ರೀರಾಮ ಕುಂಭಿಣೀಶ ಶೌರಿ ಶುಭಕರ ೧
ಇನಕುಲೇಶ ಚಾರು ಸುಚರಿತ
ಶ್ರೀರಾಮ ವನಜನಾಭ ಮುನಿ ವಂದಿತ
ದನುಜ ಗರ್ವ ಸಂಹಾರಾಚ್ಯುತ
ಶ್ರೀರಾಮ ಅನಘ ಕನಕವಸನ ಭೂಷಿತ ೨
ಪನ್ನಗೇಂದ್ರಶಯನ ವಾಮನ
ಶ್ರೀರಾಮ ಉನ್ನತಾಂಗ ಉದಧಿ ಬಂಧನ
ಹೆನ್ನೆಪುರನಿಲಯ ಜನಾರ್ದನ
ಶ್ರೀರಾಮಯನ್ನ ಮೊರೆಯ ಕೇಳಿ ಬೇಗನೆ ೩

 

೬೧
ಕರುಣಿಸೋ ಬೇಗನೆ ಕರಿವರದ ಹರಿ ಪ
ತೋಯಜನಯನ ಕಾಯಜಪಿತ ದೈ
ತ್ಯೇಯ ಹರಣ ಸ್ವಶ್ರೇಯ ಸಕರಹರಿ ೧
ಶ್ರೀಯುತ ವಿಧೇಯ ನೃಹರೇ
ನಾರಾಯಣ ಯದುಕುಲನಾಯಕ ಮಾಧವ ೨
ಅಂಡಜಗಮನ ಆಖಂಡಲನುತ ಭೂ
ಮಂಡಲ ಪಾಲಕ ತಾಂಡವ ಕೃಷ್ಣಾ ೩
ನಗಧರವರ ಪನ್ನಗತಲ್ಪಕ ನರಮೃಗರೂಪಾ-
ನಘ ತ್ರಿಗುಣಾತ್ಮಕ ಹರಿ ೪
ಗೋಪತನಯ ಸಂಜೀವಿತ ತ್ರಿಜಗ-
ದ್ವ್ಯಾಪಕ ಘನ ಹೆನ್ನೆಪುಗ್ದ ಶ್ರೀಪತಿ ೫

 

೬೨
ಕುಂಡಲಿಶಯನನ ಕೋದಂಡಧರನಾ
ಮಂಡಲಾಧಿಪ ತ್ರಿ——- ಬಲವಂತನ ಪ
ಪುಂಡರೀಕ ವರದನ ಪುರಾಣ ಪುರುಷನ
ಪಂಡರಪುರ ನಿಲಯ ಭಕ್ತರ ಚಲನ ೧
ದಂಡಿ ದಾನವರನ ಛೇದನ ಮಾಡಿದನ
——-ಕರುಣಿಸಿ ಕಾಯ್ದನ ೨
ಪುಂಡರಾವಣನ ಶಿರಗಳ ತರಿದನ
ಅಂಡಸೇರಿ ಶರಣಂದನ ಕಾಯ್ದನ ೩
ದ್ರೌಪದಿ ಮಾನವ ದಯಮಾಡಿ ಕಾಯ್ದನ
ಕವಿಜನ ರಕ್ಷಕ ಘನ ಶ್ರೀಕೃಷ್ಣನ ೪
ಭುವಿನಾಯಕನ ಪೂರ್ಣ ಪ್ರಭಾಕರನ
ರವಿಕೋಟಿ ತೇಜನ ರಾಜೀವ ನೇತ್ರನ ೫
ಲವಕುಶ ಜನಕನ ರಘುಕುಲ ಶ್ರೇಷ್ಠನ
——————– ೬
ಭವಸುರ ವಂದ್ಯನ ಪರಮಾನಂದನ
ಕಲೆಯುಕ್ತ ಶಿರಸೂರನ ೭
—–ನಾಭನ ಪಾಂಡವ ಪಕ್ಷನ
ಮುದನೂರ ವಾಸನ ಮುನಿಜನವಂದ್ಯನ ೮
ಯದುಕುಲ ಭೂಷಣನ ——-
ವೇದಾಂತ ವೇದ್ಯನ ವಿಶ್ವರೂಪನ ೯
ಹೆನ್ನಪುರನಿಲವಾಸ ‘ಹೆನ್ನೆವಿಠ್ಠಲನ’
ನಿನ್ನ —— ಶ್ರೀತ ಜನಪೋಷಕನ ೧೦

 

೬೩
——————- ಪ
———————

——————–
——————— ೧
——————–
——————–
——————- ೨

ಖ್ಯಾತಿಲಿ ನಿನ್ನ ಸ್ತುತಿಸುವ ಭಕುತನ
ಪ್ರೀತಿಲಿ ರಕ್ಷಿಪ ರಾಮ ಪೂತನಿ —
ಪಾತಕ ಭವದೂರ ಪುರ ‘ಹೊನ್ನವಿಠ್ಠಲ ‘ ರಾಮ ೩

 

೬೪
————–ಗುಡಿವಾಸಾ ಪ
——ತಾಪತ್ರಯಗಳಿಂದ ——ರದೆ ಬಂದೆ
ಭೂಪಾ ನೀ ಕರುಣದಿ ಪೊರೆಯೆನ್ನ ಅ.ಪ
ಚಂದ್ರ ಸೂರ್ಯ ನೇತ್ರಾಗದಾಧರ—-ಸುಂದರಗಾತ್ರಾ
ಇಂದಿರಾ ಹೃದಯಾನಂದಾ ವಿಶ್ವೇಶ ಮು-
ಕುಂದ ಮಾಧವ ಗೋವಿಂದಾ
ಸಿಂಧು ಶಯನ ಆಶ್ರಿತ ಜನ ರಕ್ಷಕ
ಮಂದರಧರ ಹರಿ ಮಂಗಳದಾಯಕ ೧
ಸುರಮುನಿ ವಂದ್ಯ ದೇವ ದೇವಾದಿ ದೇವ
ವರದಾ ಮಹಾನುಭಾವ ಕರುಣಸಾಗರನಿಲಯಾ
ಕಮಲನಾಭ ಸ್ಥಿರಹರಿ ಪುರಿಗೀಯಾ
ಪರಮಭಕ್ತನಾದ ಕರಿರಾಜನ ಕಾಯ್ದ
ಪರಮಾತ್ಮನೆಂದು ಇಂದು ಭಜಿಸುವೆ ನಿಮ್ಮ ಪಾದ ೨
ಶಂಕರನುತ ಶಾಶ್ವತ ಜಗತ್ಕರ್ತ
ಪಂಕಜೋದ್ಭವನ ಪಿತ
ಶಂಕೆಯಿಲ್ಲದೆ ದೈತ್ಯರಾ ಭೇದಿಸಿ——ನೆನಿಸಿದ ಧೀರಾ
ಕಿಂಕರನಾನು ನಿಮ್ಮ ಕೀರ್ತಿ ಕೊಂಡಾಡುವೆ
ಪುಂಕಾಲದಿ (?) ಸಲಹೊ ಹೊನ್ನಪುರ ‘ಹೊನ್ನವಿಠ್ಠಲಾ’ ೩

 

೧೪೦
ಚಿತ್ತದೊಳಗೆ ಹರಿ ಚಿಂತನೆ ಮಾಡಿ ಚಿಂತಿಗಳನು
ಬಿಡ್ವು-ದುತ್ತ ಮವು ಪ
ಹೋದಯೋಚನೆ ಮಾಡಲು ಮನದಲ್ಲಿ ಅತಿಶಯವೇನಲ್ಲಿ
ಫಲವೇನಿಲ್ಲಾ ಬಹು ಭಾದಕ ವಂದೆ ಬುದ್ಧಿಯು ತಿಳಿಯದೆ
ಸುಲಭದಿಂದಲಿ ಮುನಿವಂದ್ಯನ ಸ್ತುತಿಯ ಮಾಡಿದಲ್ಲಿ
ಖನಿಯಂತೆ ಭಾಗ್ಯವು ಬೇಗನೆ ಕೊಡುವನು—ಸ್ಥಿರವಲ್ಲಿ ೧
ದುಷ್ಟ ಚಿಂತನೆ ಮಾಡುತೀ ನೀ ಗೇಣು
ಹೊಟ್ಟಿಯ ದೆಸೆಯಿಂದಾ
ಎಷ್ಟು ಮಾಡಿದರೆ ಅಷ್ಟೆ ಪ್ರಾಪ್ತಿಯೊಳಿಲ್ಲದರಿಂದಾ
ಕೃಷ್ಣನ ಚರಣಾರವ ಕ್ರಿಯದಲಿ ಪೂಜಿಸಿ ನಿಷ್ಟವಾಗು—-
ಕಷ್ಟವೆಲ್ಲ ಕಳೆದು ಕರುಣಿಸಿ ಶೀಘ್ರದಿ ಕಾಯುವ ಗೋವಿಂದ ೨
ಕಷ್ಟ ಮಾರ್ಗಗಳ ಕಾಣದೆ ನಡಿಬೇಡಾ ಪುಂಡರ
ಕೂಡಿ ಪುಣ್ಯವು
ಕಳೆದು ಪಾಪಕೆ ಹೋಗಬೇಡಾ ಮಂಲದೊಡೆಯನ ಮಹಿಮ
ವುಳ್ಳ ದಾಸರ ಮನ್ನಿಸದಿರ ಬೇಡಾ ——–
‘ಹೊನ್ನವಿಠ್ಠಲನ ‘ ಪಾದ ಬಿಡಬೇಡಾ ೩

 


ಜಗನ್ನಿವಾಸ ಜಾನಕೀರಮಣ ಪ
ನಿಗಮಗೋಚರ ಹರಿ ನಗಧರ ಭವಹರ
ಅಗಣಿತ ಚರಿತಾನಂದ ಮುಕುಂದಾ ೧
ಶಂಕ ಚಕ್ರ ಗದ ಶಾಙ್ರ್ಞಪಾಣಿ
ಪಂಕಜೋದರ ಪಾಲಕ ಪಾವನ ೨
ಗರುಡ ಗಮನ ಕರಿವರದ ಗೋವಿಂದ
ಪರಮಾತ್ಮಾ ಪರಬ್ರಹ್ಮ ಪರಮಾನಂದಾ ೩
ವಾರಿಧಿ ಬಂಧನ ನೀರಜನಯನ
ವಾರಿಜೋದ್ಭವ ಪಿತ ವಸುದೇವನಂದನ ೪
ಪ್ರೇಮ ‘ಹೆನ್ನವಿಠಲಾ ‘ ಮಹಾಮಹಿಮ
ಸ್ವಾಮಿ ಪರಂಧಾಮ ಸರ್ವ ರಕ್ಷಕ ಹರಿ ೫

 


ಜಯ ರಘುರಾಮ ಜಾನಕಿ ಪ್ರೇಮ
ಭಯ ಭವ ಪರಿಹಾರ ಪಾವನನಾಮ ಪ
ಕಮಲಜ ಜನಕಾ ಕಾಮಿತ ಫಲದಾಯಕಾ
ಅಮಿತ ಪರಮಾನಂದ ಆದಿಮೂರುತಿ ಗೋವಿಂದಾ ೧
ಸಕಲಗುಣ ಪರಿಪೂರ್ಣ ಶಾಶ್ವತ ಸಂಪನ್ನ
ಮುಕುತಿ ರಾಮಕೃಷ್ಣ……………ರುತಿ ಮೋಹನಾ ೨
ಸುಂದರರೂಪಾ ಸುಗುಣ ಪ್ರತಾಪ
ಇಂದಿರೆ ರಮಣ ಶ್ರಿತ ಜನ ಪೋಷಣ ೩
ದಶ ಅವತಾರಾ ದೈತ್ಯ ಸಂಹಾರಾ
ಪಶುಪತಿ ಪಾಲಕಾ ಪಾವನೋದಕ ಜನಕಾ ೪
ಹರಿ ‘ಹೆನ್ನ ವಿಠಲಾ ‘ ಅಧಿಕ ಸುಶೀಲಾ
ಪರಮ ಭಕ್ತ ವಿಲಾಸಾ ಪಾಲಿತ ಜಗದೀಶಾ ೫

 

೬೫

ಜಯಶ್ರೀ ರಾಮನ ಜಾನಕಿ ಪ್ರೇಮನ
ಭಯ ಭಕ್ತಿಲಿ ಮನ ಭಜಿಸಿರು ಅನುದಿನ ಪ
ಸುಂದರ ವದನನ ಶುಭ ಕಲ್ಯಾಣನ
ಮಂದರಧರ ಮಾಧವ ಮುಕುಂದನ ೧
ಇಂದಿರೆಯರಸನ ವಿಶ್ವ ಪ್ರಕಾಶನಾ
–ನಂದದಿ ಹೃದಯ ಗೋವಿಂದನ ಬಿಡದಿನ್ನು ೨
ಕಂದರ್ಪ ಜನಕನ ಕರಿರಾಜ ವರದನ
ಸಿಂಧುಶಯನ ಹರಿ ಶ್ರೀ ಜಗನ್ನಾಥನ ೩
ಸೌಂದರ್ಯ ರೂಪನ ಪುರುಷೋತ್ತಮನ
ಕುಂದರದನ ಹರಿ ಕೋಮಲಾಂಗನ ೪
ಪರಮ ಪುರುಷನ ಪತಿತಪಾವನನ
ನರಹರಿರೂಪನ ನಾರಾಯಣನ ೫
ಗರುಡಾರೂಢನ ಕರುಣಾಸಾಗರನ
ಉರದಲಿ ಲಕ್ಷ್ಮಿಯ ಧರಿಸಿ ಕೊಂಡಿಹನ ೬
ಉರಗಾದ್ರಿ ವಾಸನ ವಸುದೇವಸುತನಾ
ಭವಪಾಪ ಸಂಹಾರನ ೭
ಶರಣರ ಕಾಯುವನ ಶ್ರೀನಿವಾಸನ
ಉರಗಶಯನನ ಹರಿವಾಸುದೇವನಾ ೮
ಮಂಗಳಮೂರುತಿ ಮಹಾನುಭಾವನ
ಗಂಗೆಯ ಪಡೆದನ ಘನ ಗಂಭೀರನ೯
ಶೃಂಗಾರ ಭೂಷಣನ ಸುಗುಣ ಪ್ರತಾಪನ
ಅಂಗನೆಯರೆಡ ಬಲದಲಿರುವನ ೧೦
ರಂಗನಾಯಕನ ರಾಜಾಧಿರಾಜನ
ಮಂಗಾರಮಣನ ಮಧುಸೂದನನಾ ೧೧
ರಂಗವುಳ್ಳ ಪೀತಾಂಬರ ಧರನಾ
ಗಂಗಾಧರ ಪ್ರಿಯ ಕಂಬು ಕಂಧರನಾ ೧೨

 

೧೮೧
ಜೋಗಿ ಬಂದನು ನೋಡು ಯೋಗಾಧ್ಯಾನದಿ
ಮನೋರೋಗಾವು ಕಳವೂತಾ ಪ
ಗಿಡರಸ ಕ್ರಿಯಗಳು ಘಟದಾ ಒಳಗೆ ತುಂಬಿ
ಸಡಗರಾಸಾರಾರಾದ
ಕುಂಭ ದ್ವಯವು ಬಿಡದೆ ಸುಮಾರ್ಗಕಾವಡಿಯಾ
ಕೈಗಲಾಹಿತ್ತು
ಬಡವಾರ ಕೈನೋಡಿ ಪಾಪ ಖಂಡಿಸುವಂಥ ೧
ಪೂರ್ಣಕಲಶಪೂಜೆ ಪುಣ್ಯೋಗವೆಂಬೂವಾ
ವರ್ಣಾನಾಡಿಗಳಲ್ಲಿ
ವರ್ಣನೆ ತಿಳಿದು ಸ್ವರ್ಣ ಪಾತ್ರೆಗಳಂದಾ ಸಲ್ಲಿಸುವ
ಸ್ಥಾನದೊಳು
ವರ್ಣಿಸಿ ಕೊಡುವಂಥಾ ಕ್ರಿಯೆಗಳ ಬಲ್ಲಂಥಾ ೨
ಅಲ್ಲಿ ಅಮೃತಯೆಂಬ ಔಷಧಗಳ ತಿಳಿದು
ಬಲ್ಲ ಹಿರಿಯರಿಗೆಲ್ಲ
ಬೈಗು ಬೆಳಗಾಗಿ ಪುಲ್ಲನಾಭ ‘ಹೊನ್ನವಿಠ್ಠಲನ ‘
ಮಹಿಮೆಬಲ್ಲ
ಸುಜನರಾದ ಭವರೋಗ ಕಳಿವಂಥ ೩

 

೬೬
ತಂದೆ ನಿನ್ನ ಕೃಪೆಯು ಎಂದಿಗೊ ಗೋವಿಂದ ಹರೆ ಪ
ತಂದೆ ನಿನ್ನ ಕೃಪೆಯು ಎಂದಿಗೆ ——ಸಿಗುವದೆಂದೆ
ನಂದೂ ಎಂದು ಕಾಣಲಿಲ್ಲ
ಮಂದರಾಧರ ಮಾಧವಕೇಶವ ಅ.ಪ
ಸಾರೆ ಸಾರೆ —- ಚ್ಚ ಸಂಸಾರದೊಳು ಮುಳುಗಿ ತೇಲುತಾ
ಇರುವುದು ಒಂದೆ ಧೀರ ನಿಮ್ಮಯ ಸ್ಮರಣೆಯ ತೋರದೆ
—–ಕ್ರೂರ ಬುದ್ಧಿಯಿಂದ ಮುಕ್ತಿದಾರಿ
ಕಾಣದಂತೆ ಆಯಿತು ೧
ಸಕಲವೇದ ಶಾಸ್ತ್ರ ಪುರಾಣ—-ರಿತಾ ಪ್ರಕಟ
ಭಕ್ತ ಪಂಡಿತಾರ್ಯರಾ ಭಜಿಸದೆ ಮನದಿ
ವಿಕಟನಾಗಿ ನಿಮ್ಮ ಮಹಿಮೆಯನು ಕಾಣದೆ—–ತು
ಸಕಲಲೋಕ ಕರ್ತ ದೇವ ಸಾಧು ಜನರ ರಕ್ಷಿಸುವಾ ೨
ಬ್ರಹ್ಮೇಂದ್ರ ರುದ್ರಾದಿಗಳಿಗೆ ವಶವು —-
ಮಹಿಮೆಯನು ಹೇಳಾ ನೀ
ಅನೇಕ ಚರಿತ ತೋಯಜನಕನಾದ
ಪರಬ್ರಹ್ಮ ‘ಹೆನ್ನವಿಠ್ಠಲಾ ‘ ಸಂ—–ತೋರದು ನಿಮ್ಮ
ಕರುಣ ತೋರಿದರೆ ಸರಿ ೩

 

೬೭
ದಶರಥನಂದನ ದೀನದಯಾಪರ ಶಶಿಮುಖಿ ಜಾನಕಿ ರಮಣ
ವಸುಧೆಯೊಳಗೆ ನಿಮ್ಮ ಭಜನೆಯ ಮಾಡುವರ
ಶಿಶುವುಯೆಂದು ತಿಳಿದು ಶೀಘ್ರದಿ ರಕ್ಷಿಸೊ ಪ
ಪಶುಪತಿ ರಕ್ಷಕ ಪಾವನ ಮೂರ್ತಿ
ಪಶುಪಾಲಕನಾದ ಪರಮಾತ್ಮ
ಕುಸುಮಜನನು ಅತಿಕರುಣದಿ ನೀನು
ಕುಶಲದಿ ಪಡೆದ ಗುಣವಂತಾ
ಹಸ ಮೀರಿನಡೆವಂತ ಅನೇಕ ದುಷ್ಟ
ಅಸುರರ ಛೇದಿಸಿದ ಬಲವಂತಾ
ದಶದಿಕ್ಕಿನೊಳಗೆ ದಾರನು ಕಾಣೆನೊ
ದಶವಂತನು ನಿನಗಾರು ಸರಿಹಾರೊ ೧
ಪಿತೃವಾಕ್ಯ ಪರಿಪಾಲನೆ ಮಾಡಿದ
ಪುತ್ರನು ಅನಿಸಿದ ಪುಣ್ಯನಿಧಿ
ಸತಿ ಪತಿ ಧರ್ಮವ ಸರ್ವದಾ ನಡೆಸುವ
ಸತ್ಯಮೂರ್ತಿ ಸೌಭಾಗ್ಯನಿಧಿ
ಶತದ್ರೋಹಿಯಾಗಿ ಸೀತೆಯ ಒಯ್ದನ
ಶತಮುಖನಯ್ಯನ ಸಂಹರಿಸಿದಿ
ಸತತ ವಿಭೀಷಣ ಭಕ್ತಿಯಿಟ್ಟ
ಸಲುವಾಗಿ ಲಂಕೆಯ ಧಾರೆಯನೆರದೀ ೨
ಯಾದವ ಕುಲಪತಿ ಯಶೋದೆನಂದನ
ವ್ಯಾಧನ ರಕ್ಷಿಸಿದಿ ವಿಶ್ವೇಶ
ಬಾಧಕ್ಕೆ ಒಳಗಾಗಿ ಕರಿಕೂಗಲು ಮಕರಿ
ಬಾಧೆಯ ತಪ್ಪಿಸಿದ ಪರಮೇಶಾ
ಸಾಧು ಸಜ್ಜನ ಸರ್ವರ ಸಲಹುವ
ಸಾಧು ಗುಣಾನಂದ ಸರ್ವೇಶಾ
ಮಾಧವ ‘ಸಿರಿಹೆನ್ನೆ ವಿಠಲ’ ನಿನ್ನಯ
ಮೋದವ ತೋರೋ ಜಗದೀಶಾ ೩

 


ದಶರಥರಾಮಹರೆ ಸೀತಾಪತೆ
ದಶರಥರಾಮ ಸುಧಾಕರವದನ
¥ರಶುರಾಮ ಬಾಹುಪರಾಕ್ರಮ ಜಿತಶ್ರೀ ಪ
ಸುರಮುನಿ ಸೇವಿತ ಶುಭಕರ ಚರಿತ
ಭಾಸುರ ಕೀರ್ತಿಸಾಂದ್ರ ಕೌಸ್ತುಭ ಶೋಭಿತ
ವರ ವಿಶ್ವಾಮಿತ್ರಾಧ್ವರ ಪರಿಪಾಲನ
ಖರ ದೂಷಣ ರಾಕ್ಷಸ ಬಲ ಖಂಡನ ೧
ವಾಲಿ ಮರ್ದನ ಭಕ್ತವತ್ಸಲ ಮಾಧವ
ಫಾಲಲೋಚನ ವಿನುತ ಪಾದ ಪದ್ಮ
ನೀಲ ನೀರದ ಸನ್ನಿಭಗಾತ್ರ ಪರಮ ದಯಾಳು
ನಾರಾಯಣ ಲೀಲಾ ಮಾನುಷ ವೇಷ ೨
ಸಿಂಧು ಬಂಧನ ಪಂಕ್ತಿ ಕಂಧರಾಂತಕ
ಗೋವಿಂದ ಮುಕುಂದಾರ ವಿಂದೋದರ
ಇಂದಿರಾಧಿಪ ಶ್ರೀ ಹೆನ್ನೆಪುರ ನಿಲಯಾ
ನಂದ ವಿಗ್ರಹ ಜಗದ್ವಂದ್ಯ ಮಂದಹಾಸ ೩

 

೧೮೨
———ದಾನು ಮುಕ್ತಿ ಭಕ್ತಿ — ಪ
——————————
———–ಭಾರತನವು ಬಿಟ್ಟು ೧
ತಾ—ಪತ್ರ ಕಮಲ ರಥದಲ್ಲಿ ಧರಿಸಿ
ಮೇಲುವಲ್ಲಿ ಹಣೆಯ ಕಟ್ಟಿ ಮೇಲೆ
ಪಟ್ಟಿ ನಾಮಗಳಿಟ್ಟೂ ೨
ನೀ ———-ದೇಹದಿಯಂಥ
ವೇಗದಿಂದ ನಡೆದು ಸಂಸಾರ ಗೃಹಧರ್ಮ
ಹಿಡಿದಾನಂತಕಾಲ———ನೆಂದು ೩
ಭಾರಮಾರ್ಗ ಹಿಡಿದು ಅತಿಧೀರನಾಗಿ
ಗ್ರಾಮದೊಳಗೆ ಮೂರು ಎರಡು
ಮನಿಗಳ ಬಿಟ್ಟು ಮೂರು ಮೂರು ಮನಿಗಳ್ಹಾದಿಲೆ ೪
ಸ್ಥಿರಹೊನ್ನ ವಿಠ್ಠಲನ್ನ ದಿವ್ಯ ಚರಣದಲ್ಲಿ ಚಿತ್ತವಿಟ್ಟು
ಪರಮ ಹರುಷದಿಂದ ಪಾಡುತ
ಭಕ್ತಿ ಸಿದ್ಥಿಯಲ್ಲಿ ೫

 

೧೪೧
—-ದಿ ಅನುದಿನ ಹರಿಸೇವೆಯನು ಮಾಡಿ
ಆನಂದವು ಹೊಂದಿರೆ
ಕರುಣಾ ಕೃಪಾಕ್ಷನ ಕರುಣಾವು ಪಡೆದಿನ್ನು
ಕೈವಲ್ಯವು ಅಂದಿರೆ ಪ
ಪುಂಡರೀಕ ವರದ ಶ್ರೀ ಪಾಂಡುರಂಗನ
ಪಾದಾನ ಸೇರಿ ನಂಬಿರೆ
ಮಹಾಕರುಣಾಳು ಹರಿ ಮಹಿಮ ಕೊಂಡಾಡುವರ
ಕಂಡು ಅವರಕೂಡಿರೆ
ಗುಂಡು ಪೆನ್ನಾಕೆ (ಹೆಣ್ಣಾಕೆ) ಮಾಡಿಕುಲದೊಳಗೆ
ತಂದವನ ಕೀರ್ತನೆಗಳು ಮಾಡಿರೆ
ಕುಂಡಲಿಶಯನ ಗೋವಿಂದಾನ ಭಜಿಸಿನ್ನು
ಕಲ್ಮಷವನು ಕಳಿಯೀರೆ ೧
ನಾರದವರದ ಶ್ರೀ ನಾರಾಯಣನಾ
ನಾಲಗೀಯಲಿ ಸ್ಮರಿಸೀರೆ
ವಾರಿಜಾಂಬಕ ಸಿರಿವರದ ಮುಕುಂದರ
ವರ್ಣನೆಯನು ಬಿಡದರೆ
ವÀುೂರುಲೋಕದೊಡೆಯ ಮುನಿಗಣವಂದ್ಯ
ನೇವೇದ್ಯಾದಿ ನಿವೇದಿಸಿದರೆ
ಸಾರಾಭಕ್ತರನ್ನೆಲ್ಲ ಸಲಹುವ ದೇವನಾ
ಸರ್ವೋತ್ತಮನ ನಂಬಿರೆ ೨
ಮೇಲುಗಿರಿಯವಾಸ ಶೃಂಗಾರ ವದನನ
ಮನದಲ್ಲಿ ಕೊಂಡಾಡಿರೆ
ಘೂಳಿಮೆಲುವಾ ನರಿಯಾ ಸೇರಿ ಮೆರೆದಾಡುವ
ಘನದಲ್ಲಿ ನೀವು ಪಾಡಿರೆ
ವಾಲಾಗದಲ್ಲಿ ನಮ್ಮ ‘ಹೊನ್ನವಿಠ್ಠಲನ್ನ ‘
ವರಿಸಿನ್ನು ಕುಣಿದಾಡಿರೆ
ಶ್ರೀಲೋಲನಂಘ್ರಿಯು ಚನ್ನಾಗಿ ಪೂಜಸಿ
ಸಿದ್ಧ ಮುಕುತಿ ಎನ್ನೀರೆ ೩

 

೬೮
ದೂರು ಯಾತಕ್ಕೆ ತರಲ್ಯಮ್ಮಾ | ಯಶೋದಮ್ಮ ||
ವಾರಿಜ ಮುಖಿಯರು ಶೇರದೆ ಹೇಳ್ವರು ಪ
ವಂದು ದಿನ ನಾ ಮನಿಯ ಬಿಟ್ಟು ಹೋಗುವೆನೆಯಲ್ಲ್ಯೊ |
ಬಂದು ಹೇಳುವರೆಲ್ಲ ಕೇಳು ಗೋಕುಲದೊಳು |
ಸಂದು ಸಂದನೆ ತಿರುಗಿ ಮಂದಗಮನಿಯರು |
ಹೊಂದಿ ಒದಗಿ ಬಾಯಂದದ್ದು ನಿಜಮಾತು ೧
ಯನ್ನ ಮಾತನ್ನು ಸುಳ್ಳಾದರೆ |
ಗೋವಳ್ಹಾರೇ ಮನ್ನಿಸಿ ಬದಿಗೆ ಕರೆದುಕೇಳು | ಅವರಿಗೆ ಹೇಳು
ಕನ್ಯೆಯರೆಲ್ಲಾ ಬಂದು ಬೆಣ್ಣೆಗಳ್ಳನೆಂದು
ಕಣ್ಣಿಲಿ ನೋಡದೆಯನ್ನ ದಂಡಿಸುವರೇ೨
ಪರರ ಮನೆಯೊಳಗಿರುವ ಮಡಿಕೆ ಪಾತ್ರೆ ನಿನಗ್ಯಾಕೆ |
ಸ್ಥಿರ ಕ್ಷೀರಾಂ ಬುಧಿಶಯನನಾಗಿ | ಇರವದು ಆಗಿ |
ಪುರದ ಸ್ತ್ರೀಯರು ಯಲ್ಲ ದೊರೆ ಹೆನ್ನೆ ವಿಠಲನೆಂದು
ಮರೆತು ಹೇಳಲಿ ಬಹು ಸ್ಥಿರವಾಗಿ ಮಾಡುವರೇನೆ ೩

 

೬೯
ದೇವ ದೇವ ದೇವ ದಿವಿಜರೊಡಿಯನೆ
ಭಾವ ಪೂರ್ವಕ ವಿಧದಿ ಭಜಿಸುವೆನು ನಾನು ಪ
ನಂದಗೋಪಿಯ ಕಂದನಾದ ಸುಂದರಾಂಗನೆ
ಸಿಂಧುಶಯನ ಮಂದರಧರ ಇಂದಿರೇಶನೆ
ಕಂದ ಕೂಗಲು ಬಂದು ಕಾಯ್ದ ದ್ವಂದ್ವರೂಪನೆ
ಎಂದು ನಿನ್ನ ಪೊಂದಿದವರನಂದ ಪೊರೆವನೆ ೧
ಹೆಂಗಳೆರ ಸಂಗವುಳ್ಳ ಮಂಗಳಾಂಗನೆ
ಶೃಂಗಾರಾಂಗ ರಮಾಸಂಗವುಳ್ಳ ರಂಗನೆ
ಗಂಗಾಜನಕ ನೀರಜಾಂಬಕ ಗಾನಲೋಲನೆ
ಮಂಗಳಕರದಿಂದ ಲಭಯಂಗಳೀವನೆ ೨
ರನ್ನೆ ಸೀತೆಯನ್ನು ವೈದವನ್ನ ತರಿದನೆ
ನಿನ್ನವರಿವರೆನ್ನುವವರನ್ನು ಕಾಯ್ವನೆ
ಪನ್ನಗಶಯನನಾದ ಚೆನ್ನ ನೀವನೆ
ಘನ್ನ ‘ ಶ್ರೀ ಹೆನ್ನೆವಿಠಲ’ ನನ್ನ ಕಾರುಣಿ ೩

 


ದೇವಕಿ ನಂದನ ಕೃಷ್ಣಾ
ದೇವಕಿನಂದನ ಧೇನುಕ ಭಂಜನ
ಭಾವಜಪಿತ ಶ್ರೀಕೃಷ್ಣಾ ಪ
ಶುಭಕರ ಘನ ಕೌಸ್ತುಭಮಣಿ ಶೋಭಿತ
ಇಭರಾಡ್ಪರದ ಶ್ರೀಕೃಷ್ಣ ೧
ಶ್ರೀಕೇಶವ ಶಶಿ ಶೇಖರನುತ ಕರುಣಾಕರ ರೂಪ ಶ್ರೀಕೃಷ್ಣ ೨
ಕುಂದರದನ ಕಾಲಿಂದೀವರ ಮನ್ಮಂದಿರೋದ್ಧಾರ ಶ್ರೀಕೃಷ್ಣಾ ೩
ಮೃಗಮದತಿಲಕ ರಮೇಶಾಚ್ಯುತ
ಶ್ರೀ ಖಗಪತಿವಾಹನ ಕೃಷ್ಣ ೪
ಚಾರುಚರಿತ ವಿಸ್ತಾರ ಮಹಿಮಾ ನೀರೇರುಹಲೋಚನ ಕೃಷ್ಣ ೫
ಕೈಟಭ ದಾನವ ಖಂಡನ ಭಾಸುರ ಹಾಟಕಾಂಬರಧರ ಕೃಷ್ಣ ೬
ಶ್ರೀಪತಿಭವ ಸಂತಾಪಹರಣ ‘ಹೆನ್ನೆಪುರನಿಲಯ’ ಕೃಷ್ಣಾ ೭

 

೧೪೨
ದೇವದೇವನಾ ಭಜಿಸು ಜಾನಕಿ ಪ್ರೇಮನಾ
ಭಾವ ಭಕುತಿಯಿಂದ ಮನದಿ ಯಾವ ಕಾಲಕೆ
ಬಿಡದೆ ಇನ್ನು ಪ
ಇಂದಿರೇಶನಾ ಸಕಲ ವಿಶ್ವನಾಥನಾ
ಸುಂದರ ರೂಪನ ಸುಗುಣ ಸುಜನವಂದ್ಯನಾ
ಸಿಂಧು ಶಯನನಾ ಚೆಲುವ ಶ್ರೀನಿವಾಸನಾ
ಮಂದರಾದ್ರಿಯನೆ ಪೊತ್ತ ಮಹಿಮಾನಂದನ ೧
ವಾರಿಜನಾಬನಾ ಘನ ವಾಸುಕಿಶಯನನಾ
ನೀರಜ ನಯನನಾ ಕೃಷ್ಣಾ ನಿಗಮಗೋಚರನಾ
ನಾರದ ವರದನಾ ನವನೀತ ಚೋರನಾ
ಪಾರಮಾರ್ಥಿಕ ಜ್ಞಾನದಲ್ಲಿ ಪ್ರಬಲವಾಗಿ ಮನವು ನಿಲ್ಲಿಸಿ೨
ಪನ್ನಗ ಭೂಷಣನಾದ ಪಾರ್ವತೀಶನಾ
ಮನ್ನಿಸಿ ಪೊರೆದನ ಮಹಾಮಹಿಮೆಯುಳ್ಳನಾ
ಚಿನ್ಮಯ ರೂಪನಾ ಪರಮ ಚಿದ್ವಿಲಾಸನಾ
ಹೆನ್ನ ತೀರನಿಲಯ ಸುಪ್ರಸನ್ನ ‘ಹೆನ್ನ ವಿಠ್ಠಲ’ ನಾದ ೩

 


ದೇವಾ ದೇವಾಧಿದೇವ ದೇವ ದೇವಾ ಭಾ ——-
————ಇಂದಿರೆರಮಣ ಗೋವಿಂದ ಸುಂದರಾ ೧

ಕೃಷ್ಣಾ——ಇಷ್ಟದಿಂದ ಶಿಷ್ಟರ ಪೊರೆವುದೆ ಕೀರುತಿ
ಇಷ್ಟು ಈ ಸೃಷ್ಟಿಯೊಳುತ್ಕಷ್ಟರಾದಂಥಾ ಶ್ರೇಷ್ಠವುಳ್ಳನಿಷ್ಟ ಜನರ
ಕಷ್ಟುವು ಕಳೆವಂಥಾ ೨
ವೀರಾವೀರಾಧಿ ವೀರ ವಿಶ್ವರೂಪನೆ ಘೋರಾಘೋರಾದಿಕ್ರೂರ
ಖಳರ ನಳಿದಾನೆ ಸಾರಾಸರ್ವದಿ ಜಗವು ಸಲಹುತಿಹನೋ
ಧೀರ ——-‘ಹೆನ್ನೆವಿಠ್ಠಲನೆ ‘ ೩

 

೩. ದೇವ-ದೇವತೆಗಳ ಸ್ತುತಿ
೨೫
ದೇವಿ ನೀಕರುಣಿಸಮ್ಮಾ ಶಿರಿಲಕುಮಿ
ದೇವಿ ನೀಕರುಣಿಸಮ್ಮಾ||
ದೇವಿ ನೀಕರುಣಿಸು ದೀನನಮರಿಯದೇ ಭಾವದಿ
ಮನದಲಿ ಭಜಿಸುವೆ ತಾಯಿ ಪ
ವಾರಿಜಮುಖಿ ನಿನ್ನ ವಂದಿಸುವೆ ನಾನು
ದಾರಿದ್ರ್ಯ ಪರಿಹರಿಸಿ ದಯಮಾಡಿ ಸಲಹಮ್ಮಾ ೧
ಸಾಗರನ ಸುತೆ ಸಕಲ ಲೋಕ ಮಾತೆ
ನಾಗಶಯನ ನುರದಲಿ ನಲಿದಾಡುವಿ ೨
ಮದಗಜಗಾಮಿನಿ ಮಹಿಮಾ ಪ್ರಕಾಶಿನಿ
ಪದುಮನಾಭನ ಪಟ್ಟಿದ ರಾಣಿ ೩
ಚಂದಿರಮುಖಿ ಚಲುವಕಾಂತೆ ಸೀತೇ
ಇಂದ್ರಾದಿಗಳಿಗೊಲಿದಿಷ್ಟಾರ್ಥ ವೀಯುವಿ ೪
ಅರವಿಂದಾಲಯರನ್ನೆ ಆನಂದ ಪರಿಪೂರ್ಣೆ
‘ವರ ಹೆನ್ನೆ ವಿಠಲನ’ ರಮಾ ನಮ್ಮಮ್ಮಾ ಕಾಯಮ್ಮಾ ೫

 


ನಂದನಂದನ ಗೋವಿಂದ ಮುರಾರಿ
ಸುಂದರ ಮೂರುತಿ ಸುಖವಿಲಾಸಾ ಪ
ಚಂದದಿಂದಲಿ ನಿಮ್ಮ ಸ್ತುತಿಸುವ ಭಕುತರಾ-
ನಂದದಿ ಕಾಯ್ವ ಮುಕುಂದ ಮಹಾನುಭಾವ ೧
ಸುರಮುನಿ ಪೂಜಿತಾ ಸುಗುಣ ಪ್ರಖ್ಯಾತಾ
ಅರವಿಂದ ಶಾಖಾ ಶ್ರೀ ಅಖಿಲವೈಭವ ಮೂರ್ತಿ ೨
ವೆಂಕಟಾದ್ರಿಯವಾಸಾ ವಿಜಯಶ್ರೀ ಜಗದೀಶಾ
ಶಂಕರಪ್ರಿಯ ಮೀನಾಂಕ ಜನಕಹರೆ ೩
ವೇದಗೋಚರ ವೇಣುನಾದ ವಿನೋದ ಕೃಷ್ಣಾ
ಮಾಧವ ಕೇಶವ ಯಾದವ ಕುಲಪತಿ ೪
ಚಿನ್ಮಯಾಕಾರಾ ಸಿಂಧು ಗಂಭೀರಾ
ಪನ್ನಗಶಯನ ‘ಶ್ರೀ ಹೆನ್ನವಿಠ್ಠಲಾ’ ೫

 

೧೪೪
ನಂಬಿಗಿಟ್ಟ ಸಂಸಾರ
ಇದು ನಂಬಿ ಹಂಬಲಿಸದಿರು ಪೂರಾ ಪ
ಕಾಯವೆಂಬುದು ಸ್ಥಿರವಲ್ಲಾ
ಅತಿ ಮಾಯಕೆ ಬಂದು ಸಿಕ್ಕಿದೆಲ್ಲಾ
ಬಾಯಿ ರುಚಿಗಳು ಬಿಡು ಎಲ್ಲಾ
ಹರಿಭಜನೆಯೆಂಬ ರುಚಿ ರುಚಿಸೆಲ್ಲಾ
ತಂದೆ ತಾಯಿಗಳು
ಇನ್ನು ಹೊಂದಿದ ಅದರಲ್ಲೆ ಬಗೆ
ಮಾಯದೊಳು ಇರುವಾಗೆ
ಆನಂದ ತೋರುವದು ನಿನ್ನೊಳಗೆ ೧
ಧೊರೆತನ ದೌಲತ್ತು ಸ್ಥಿರವೆಂದು
ಬಹು ಪರಿ ಪರಿಯಲಿ ವಿಹರಿಸು ಎಂದೂ
ಪರಮಾತ್ಮನ ಭಜನಿಲ್ಲದೆಂದೂ
ವ್ಯರ್ಥ ಪಾಪಕೆ ಒಳಗಾಗಿ ಕೆಡುವೆಂದೂ ೨
ಬದುಕು ಬಾಳುವೆ ನಂಬಿಕೊಂಡು
ಮುಂದೆ ತುದಿಗಾಣದೆ ಹೋಗ್ವದು ಕಂಡೂ
———————–
———————- ೩
ಅಷ್ಟೂ ಶ್ರೀಹರಿ ಮಾಯವೆಂದೂ
ಸ್ಪಷ್ಟದಿ ಮನದಲಿ ತಿಳಿಯಿಂದೂ
ಶಿಷ್ಟ ಹೆನ್ನ ವಿಠ್ಠಲನೆಂದೂ
ಉತ್ರ‍ಕಷ್ಟದಿ ಹೃದಯದಿ ಸ್ಮರಿಸಿಂದೂ ೪

 

೧೪೫
ನಂಬಿಗಿಲ್ಲದ ಕಾಯ ನೆಚ್ಚಿ ಮಾಯಾ-
ಡಂಬರಕೊಳಗಾಗಿ——ದುರ್ಜನರು ಪ
ಎಂಬತ್ತು ನಾಲ್ಕು ಲಕ್ಷ ಜೀವರಾಶಿಗಳ
ಇಂಬಿನಲ್ಲಿ ಹುಟ್ಟಿ ವ್ಯಥೆಯ ಬಿಟ್ಟು
ಸಂಭ್ರಮದಿ ಸುಖದು:ಖ ಸಂಸಾರದೊಳು ಬಿದ್ದು
ಕುಂಭಿಣೀ ದೇಹಮರೆತು ಕಡೆಗೆ ಹೋಗ್ವದು ತಿಳಿದು ೧
ಈ ಶರೀರದ ಭೋಗ ಎನಗೆ
ಶಾಶ್ವತವೆಂದು ಏಸೊ ಪರಿಯಿಂದ
ಹಾರೈಸಿ ಇನ್ನೂ ಆಸೆಯಿಂದ ನೀ ಬಹಳ
ಅತಿಶಯದಲಿರದಿರು ಮೋಸದಲಿ ಕಾಲ ಒದಗಿ
ಮೃತರಾಗುವದು ತಿಳಿದು ೨
ನಿಶ್ಚಯವಿಲ್ಲದ ದೇಹಗಳು ನಿಜವೆಂದು ಮಂದನಾಗಿ
ಅಚ್ಯುತ ‘ಹೆನ್ನೆವಿಠ್ಠಲ’ನ ಅರಿಯದಿನ್ನು
ಎಚ್ಚರಿಕೆಯನು ತಪ್ಪಿ ಇಹಲೋಕವನು ತ್ಯಜಿಸಿ
ಕೊಚ್ಚಿಕೊಳಗೆ ಬೀಳುವದು ಪ್ರಕೃತಿಯ ತಿಳಿದೂ ಇನ್ನೂ

 

೭೦
ನಂಬಿದೆನೊ ನೀರೇರು ಹಾಕ್ಷ ನಿನ್ನ ನಂಬಿದೆನೊ
ನಿನ್ನ ನಂಬಿದೆ ಯನ್ನ ಸಲಹುವದಿನ್ನು ಮನ್ನಿಸೊ
ಹೆನ್ನೆ ವಿಠ್ಠಲ ಪ
ಸಿಂಧು ಗಂಭೀರ ಶ್ರೀ ವೇಣುನಾದ ಮಂದರಾದ್ರಿಧರ
ನಂದನಂದನ ಕುಂದರದನ ಗೋವಿಂದ ಪರಮಾ-
ನಂದ ವಿಗ್ರಹ ೧
ಜಾನಕೀರಮಣ ಸರ್ವೇಶ ಈಶವಿನುತ ಚರಣ
ದೀನಬಾಂಧವ ದೇವರದೇವ ಪುರಾಣಪುರುಷ
ಮಹಾನುಭಾವ ಹರಿ ೨
ಬಾಲಗೋಪಾಲ ಭಾಸುರ ಗುಣಶೀಲ ಶ್ರೀಲೋಲ
ನೀಲವರ್ಣ ಹೆನ್ನೆಪುರೀಶ ಕುಚೇಲವರದ
ದಯಾಲು ಮಾಧವ ೩

 

೧೪೬
ನಂಬು ನಂಬು ಶ್ರೀನರಹರಿ ಪಾದವ ನರನೇ ಪಾಮರನೆ
ಕುಂಭಿನಿ ಪಾತಕ ಘೋರವ ಕಳೆವಾ
ಕೃಷ್ಣಾ ಮೂರ್ತಿಯನ್ನೇ ಪ
ಸಾಧು ಸಜ್ಜನ ಸಂತರ ಸಲಹುವ ಸಕಲ ಲೋಕ ಕರ್ತನಾ
ಮೇದಿನಿ ಭಕ್ತರ ಮನದಲಿ ಚರಿಸುವ ಮಂಗಳ ಮಹಿಮನ
ಆದಿಮೂರುತಿ ಆನೇಕ ಚರಿತಾ ಅನಂತ ಅವತಾರನಾ
ಮೋದದಿ ಅನುದಿನ ಮನ ಹರುಷದಲಿ
ಮರೆಯದೆ ನೀ ಯಿನ್ನಾ ೧
ಶ್ರೀನಿವಾಸ ಆಶ್ರಿತ ಜನಪೋಷಕ ಶಾಶ್ವತನಾಗಿಹನಾ
ಗಾನಲೋಲ ಶ್ರೀವೇಣುನಾದನ ಕರಿರಾಜ ವರದನ
ದಾನವಾಂತಕನ ದಶರಥತನಯನ ದೇವಾದಿದೇವನ್ನ
ಮಾನಿತ ದ್ರೌಪದಿ ಮಾನವ ರಕ್ಷಿಸಿದ
ಮದನ ಜನಕನಾದನಾ ೨
ಪುಂಡರೀಕ ವರದನ ದಂಡಜ ನಾಮಾನ(?)
ಭೂಸುರ ನಾಯಕನ
ಮಂಡಲಾಧಿಪ ಮುರಹರ ಕೇಶವ
ಮಾಧವ ಗೋವಿಂದನ
ಕುಂಡಲಿ ಶಯನ ಕೋದಂಡ ಪಾಣಿ
ಮುಕ್ಕುಂದನಾದ ಅವನಾ
ಹಿಂಡು ಗೋಪಿಕಾ ಹೆಂಗಳೆರನಾಳುವ
‘ಹೆನ್ನೆವಿಠ್ಠಲನಾ’ ೩

 

೧೪೭
ನಂಬೂ ವಿಷ್ಣು ಪಾದಧ್ಯಾನಾ ನರನೆ ಪಾಮರನೆ ಇನ್ನು
ಕುಂಭಿಣಿ ಪಾತಕಗಳೆಂಬವು ಬಾಧಿಸಾವು ಜನ್ಮ ಜನ್ಮದಿ ಪ
ಅಂಬರಾದಿ ಧೃವನ ಕೂಡ ಅಕ್ರೂರ
ಅಜಾಮಿಳಾ ವ್ಯಾಸಾಂಬರೀಷ
ಮೊದಲಾಞ್ವರಾ ರಾಸನಕಾದಿಗಳಾದ ನರಾಕೂಡಾ
ಶಂಭುಶಂಕರ ರಾಣಿಗ್ಹೇಳಿದ ಶ್ರೀರಾಮಮಂತ್ರವನೇ ಕೂಡಾ ೧
ಹಿರಣ್ಯ ಕಶ್ಯಪನ ಕ್ರೂರದೂತರು ತರುಳಾನ
ಕಾಯಿದದ್ದು ನೋಡು
ದುರುಳಾ ದಾನವರ ತೊರದು ಸುರರಿಗೆ
ಸುಧೆನುಣಿಬಡಿಸಿದ ನೋಡು
ಪರಮಾ ಹರ್ಷದಿ ಧರ್ಮರಾಯಗೆ
ಭಾಗ್ಯವು ಕೊಟ್ಟದ್ದು ನೋಡು
ಅರಿಮುಖಲಿ ಚಕ್ರವೆತ್ತಿದಗೆ ಇತ್ತ ಐಶ್ವರ್ಯವು ನೋಡು ೨
ಚಲನೆ ಇಲ್ಲದ ಬಿದ್ದಾಶಿರಿಯಾ ಲಲನೆ
ಮೂಲ ‘ಹೊನ್ನೆವಿಠ್ಠಲ’
ಭಗವಂತಾನಾ ನಂಬಿದವ ಕಲದ—-ಅಕಾಲ ಸುಖ
ಸಂಭ್ರಮ ಪಡೆದು ಕಡೆಗೆ ಕಾಣೋ ನೋಡಾ ೩

 

೨೬
ನಮೋ ನಮೋ ಹನುಮ | ನಮೋ ನಮೋ ಭೀಮ|
ನಮೋ ನಮೋ ಮಧ್ವರಾಯ ಸುಪ್ರಿಯ ||
ಅಂಬುಧಿಯ ಪೋರ್ದು | ನಿಜ ಡಿಂಭದೊಳ್ ಬೆರೆದು |
ಚೆರ್ಬಿಂಬಳಂ ತರಿದು | ದಶಬಿಂಬನಾಪುರ ಪೊಕ್ಕು |
ಚೆರ್ಭರುಸಿತಂ ಗುಂಬಗಲ್ ಹುಡುಕುತಲ್
ಗಂಟುಗಳ ದಾಟಿ |
ಮೂರ್ಜಂಬಳಂತೋರಿ ಎಲ್ಲಂಬಳಂ ನಳಿದು
ಅಂಬುಜಾಕ್ಷೆಗೆ ಮುದ್ರೆಯಿತ್ತ ಹನುಮಂತ ೧
ಸತಿಯೆ ಹಂಬತ್ತಿದ ನತಿಗಳೇದು ಕೃತಕೋಪ
ವೃತನಾಗಿ ಮಶತಂತುರದೆ ಹತಿಯೆ ಮೋಹತಿಯೆ |
ಸಂಪತಿಯ ತೊಲಗಿ ಅಗತರಾಗಿಗತಿಯಲಿರುತಿಹ |
ಮತಿಹೀನ ಬಕನಕೊಂದ ಭೀಮನಿಸ್ಸೀಮ ೨
ಮಧ್ಯಗೇಹನುದರದಿಂದುದ್ಭವಿಸಿ ಜಗದ್ಭಲ ಭರಿತರಾಗಿ
ಶಾಸ್ತ್ರ ಶುದ್ಧವನೆ ಕೈ ಕೊಂಡು ಮಧ್ವ ಮತದಲ್ಲಿ ಬಲು
ಶುದ್ಧನಾಗಿ ಅದ್ವೈತಗಳ ನಳಿದು ಸದ್ವೈತ ಮಾರ್ಗದೊಳ್ |
ಹೆನ್ನೆವಿಠಲನ ಕಂಡ ಮಧ್ವಮುನಿರಾಜನೆ
ಪೂರ್ಣಗುಣತೇಜ೩

 

೧೪೩
ನರಜನ್ಮವೇ ದೊಡ್ಡದು ಇದರಾ ಪರಿ ತಿಳಿದು
ನಡಿಯುತ ಪುಣ್ಯವಂತರಾದ ಪ
ನಿತ್ಯಕರ್ಮನೇಮ ಸತ್ಯಾನುಷ್ಠಾನವು ಅತ್ಯಂತ
ಹರುಷಾದಿ ಆಚರಿಸುತಾ
ಸತ್ಯಾತ್ಮಕರಾಗಿ ಸರ್ವೋತ್ತಮನ ಪಾದ ನಿತ್ಯದಲ್ಲಿ
ಬಿಡದೆ ನಿಜಭಕ್ತಿಯಲಿರುವಂಥ ೧
ಗುರುಹಿರಿಯಾರನುಸರಿಸಿ ಕೃತಶೃತ ಸ್ರ‍ಮತಿಗಾಳ
ಪರಿಪರಿ ಶೋಧಿಸಿ
ಭಾವದಲಿ ಪರಮಪುರುಷನಾದ ಪರಮಾತ್ಮನ
ಮಹಿಮೆ ಸ್ಥಿರವಾಗಿ
ಮನದಲ್ಲಿ ತಿಳಿದು ಸಿದ್ಧಿಸಿದಂಥಾ ೨
ದುಷ್ಠರ ಸಂಗವು ದೂರನೀ ಮಾಡಿನ್ನು
ಇಷ್ಟದಿಂದ ಅತಿಯೋಗ್ಯರ
ಕೂಡಿ ಶ್ರೇಷ್ಠ ಜ್ಞಾನಾಧಿಕ ನಿಷ್ಠಾರು ಎನಿಸಿದ ಶಿಷ್ಟ ಮಾನವ
ಸಾಧು ಸಜ್ಜನರಾದಂಥ ೩
ಯೋನಿಯೆಂಬತ್ತು ಮೂರೆರಡು ಲಕ್ಷಾದೊಳ್
ಮಾನವನಾಗುವದೇ
ಮಹಾದೊಡ್ಡದು ಕಾಣುತ ಇದರೊಳು
ಘನಸಾರವನೆ ಗ್ರಹಿಸಿ
ಮಾನಿತರೆನಿಸೀದ ಮಹಿಮರಾದಂಥಾ ೪
ಭೂಮಿಪಾಲಕನಾದ ‘ಹೆನ್ನೆವಿಠ್ಠಲನ’
ಪ್ರೇಮದಿ ಹೇದಯಾದಿ
ಪೂಜಿಸುತಾ ನೀ ಪಾಮರತ್ವವನಳಿದು
ಪ್ರಣಿತಾರ್ಥವು ಹಿಡದು
ಸ್ವಾಮಿ ನೀನೇಗತಿ ಸಕಲಾವು ನೀನೆಯೆಂಬೊ೫

 

೧೮೩
ನರರು ಏನು ಬಲ್ಲರಯ್ಯ ನರಹರಿಯ ಚರ್ಯಾ ಪ
ಆರು ಮೂರರ ಹಾದಿ ಅರಿಯದಲೆ ತಾಮಸಾದಿ
ಆರು ಯರಡನು ಸರಿಸಿ ಆರರಿಂದ ಮೀರಿನಡೆವ ೧
ನಾಲ್ಕು ನಾಲ್ಕೆರಡನ್ನು ನಾಲ್ಕೆರಡು ನಡಿಯನ್ನು
ನಾಲ್ಕು ವಂದರಿಯದಲೇ ನಾಲ್ಕೈದೊಂದರನು ಕೂಡಿದ ೨
ಎರಡು ಒಂದು ಯುಕ್ತನ ‘ಹೆನ್ನೆಪುರನಿವಾಸನ ‘
ಎರಡ್ವೊಂದ್ವಿಧಯಂದರಿಯದೇ ಎರಡು ಒಂದೇ
ಯಂಬ ಪಾಮರ ೩

 


ನರಸಿಂಹ ನರಸಿಂಹ
ಶರಣು ಧರಣಿಧರ ಪರಮ ಕೃಪಾಕರ ಪ
ಶ್ರೀಕರ ಭಕ್ತ ವಶೀಕರ ಕೋಟಿ
ಪ್ರಭಾಕರ ಸನ್ನಿಭ ಭೀಕರ ರೂಪ ೧
ಜಂಭ ಭೇದಿಸುತ ಕುಂಭಿಣಿ ಧವ ಶಶಿ
ಬಿಂಬ ಲಿಖಿತ ಮುಖ ಕಂಬು ಕಂಠಶ್ರೀ ೨
ಘೋರದುರಿತ ಸಂಹಾರ ಶರಧಿ ಗಂಭೀರ
ಮುನಿ ಮಂದಾರ ಮನೋಹರ ೩
ಗಾನಲೋಲ ಸುಮಬಾಣ ಜನಕ
ಮುನಿ ಮಾನಸ ಹಂಸ ಶ್ರೀನಿವಾಸ ಹರಿ ೪
ಗರುಡಗಮನ ಮುರನರಕಾಂತಕ
ಶ್ರೀಧರವರ ‘ಹೆನ್ನೆಪುರ ನಿಲಯ’ಶ್ರೀ ೫

 

೧೦
ನಾನು ನಿನ್ನ ಏನು ಅಂದೆನೊ ರಂಗರಾಯಾ
ನಾನು ನಿನ್ನ ಏನು ಅಂದೆ ನಾಲ್ಕು ದಿಕ್ಕಿನೊಳಗೆ ನಿಮ್ಮ
ಧ್ಯಾನಪಥವು ದೊಡ್ಡದೆಂದು ದೃಢವು ಮಾಡಿ
ಹೇಳ್ದೆನಲ್ಲದೆ ಪ
ಕುಂಡಲೀಶ ಶಯನನಾದ ಪುಂಡಲೀಕವರದ ಬ್ರ
ಹ್ಮಾಂಡವೆಲ್ಲ ನಿಮ್ಮ ಉದರ ಅಂಡದಲ್ಲಿ ಇರುವುದೆಂದೆ
ಮಂಡಿಗೊರಳನು ಇದೆವೆಂದನೆ ಮತ್ತೆ ಮತ್ತೆ
ಕುಂಡಗೊಳರ [ಪುಂಡಗೊಲ್ಲರ] ಕುಲದೈವವೆಂದೆನೆ
ಹಿಂಡುಲೋಕಗಳಿಗೆಲ್ಲ ಹಿರಿಯ ನೀನೆಯಂದೆನಲ್ಲದೆ ೧
ಸಕಲಯೋಗಿ ಜನರ ಹೃದಯ ನಿಖರವಾಗಿ ನಿಂತು ಎಲ್ಲ
ಭಕುತರನ್ನು ರಕ್ಷಿಸುವ ಲಕುಮಿರಮಣಾನಂದೆ ನಲ್ಲದೆ
ಪ್ರಕಟದೈತ್ಯರ ಕೊಂದೆನೆÀಂದೆನೆ ನೀಚರಲ್ಲಿ
ಕಕುಲಾತಿಯ ಮಾಡೆನೆಂದೆನೆ
ಅಕಳಂಕ ಮಹಿಮನಾದ ಆದಿ ಮೂರುತಿ ಎಂದೆನಲ್ಲದೆ ೨
ಬೊಟ್ಟಿನಿಂದ ಧರೆಯನೆತ್ತಿ ಚೇಷ್ಟೆಜನರ ಉರಳಿಸಿದ
ಕೃಷ್ಣ ಮೂರುತಿನೀನೆಯೆಂದು ಇಷ್ಟದಿಂದ ಪಾಡುವೆನಲ್ಲದೆ
ಸೃಷ್ಟಿನೀಟಗೊಲ್ಲನೆಂದೆನೆ ನಿನ್ನ ಮಗನ ಸುಟ್ಟು ಅವನ
ಮಿತ್ರನೆಂದೆನೆ ಸೃಷ್ಟಿಗಧಿಕವಾದ ‘ಹೊನ್ನವಿಠ್ಠಲ’
ರಾಯನಂದೆನಲ್ಲದೆ ೩

 

೧೪೮
ನಾರಾಯಣ ಎನಬಾರದೆ
ಕಾರುಣ್ಯ ಮೂರುತಿ ಕರುಣಾಸಾಗರ ಪ
ಘೋರದುರಿತ ಸಂಹಾರ ಜಗತ್ಕರ್ತ
ಮಾರ ಜನಕ ಶ್ರೀ ಮನೋಹರನ
ವಾರಿಜಾಂಬಕ ಕೃಷ್ಣ ವಾರಧಿ ಶಯನನ
ಪಾರಿಮಾರ್ಥಿಕ ನರಿತು ಪರಮ ಹರುಷದಿಂದ ೧
ಕುಂಭಿನೀ ಪತಿರಾಮ ಕೋದಂಡಧರ ಗುಣ
ಗಂಭೀರ ಪುರುಷ ಶ್ರೀ ಘನ ಮಹಿಮನ
ಶಂಬರಾರಿಯ ಕೊಂದ ಶಿವನ ರಕ್ಷಿಸಿದಂಥ
ಕಂಬು ಕಂಧರ ಕನಕಾಂಬರ ಭೂಷಣನಾ ೨
ಅಗಣಿತ ಚರಿತ ಅನಂತ ಅವತಾರನ
ನಿಗಮಗೋಚರ ವಿಷ್ಣು ನಿಜ ನಾಮವು
ಬಗೆ ಬಗೆಯಲಿ ಅತಿ ಭಕುತಿಯಿಂದಲಿ ಜಯ
ಜಗದೊಡೆಯ ಹೆನ್ನ ವಿಠ್ಠಲನ ಜಿವ್ಹದಿ ೩

 

೧೮೪
ನಾರಾಯಣ——–ಜಾಯನಮ: ಪ
ಸರ್ವವಾರಿಜೋದ್ಭವ ಹರಿ ನೀ ಪೊತ್ತ
ಶಿರಲೋಕ ಎರಡೇಳಾರೊಳಾನೇಕ ದ್ವಾದಶಾದಿ–
ಶಾಸನ ಆದಿದಿಕ್ಪಾಲರಾ ಬೇಕಾದ ಹಾಗೆ
ರಾಜನ ಯುಕ್ತ ಮೆರೆವಂಥ ಶ್ರೀಕರ
ವಾಣೀ ಪತಿ ¨್ರಹ್ಮನೀನೆ ೧
ಜಗದೊಳು ಹುಟ್ಟಿದ ಪ್ರಾಣಿಗಳಿಗೆ ಎಲ್ಲ
ಬಗೆ ಬಗೆ ಸಂಹಾರ ಕರ್ತನಾಗಿ
ಅಗಣಿತ ಮಹಿಮ ತಾಮಸಯುಕ್ತನಾದಂಥ
ಮೃಗ ಚರ್ಮಾಂಬರಧರ ಮಹಾದೇವನೀನೆ ೨
ಸಕಲ ಚರಾಚರ ಸಲಹುತಲಿರುವಂಥ
ನಿಕರಾದಿ ಸಾತ್ವಿಕ ನಿಜಧರ್ಮಾದಿ
ಅಕಲಂಕ ಮಹಿಮ ಶ್ರೀಹರಿ ‘ಹೊನ್ನ ವಿಠ್ಠಲ’
ಸಕಲ ಸ್ವತಂತ್ರನಾದ ಸರ್ವೋತ್ತಮ ನೀನೆ ೩

 

೧೧
ನಾರಾಯಣ ಹರಿಗೋವಿಂದ ನಾರದವರದ ಮುಕ್ಕುಂದಾ ಪ
ವೇಣುನಾದ ವಿಶೂರವಿಹಿತ ಸುಗಾನಲೋಲ
ಸುಜ್ಞಾನಿಗಳಾದವರ
ಮಾನಸಾಂತರದಿ ಮಹಿಮೆಯು ತೋರುತ ನಾನಾಪರಿಯಲಿ
ನಟನೆಯು ಮಾಡುವಾ ೧
ಸುಂದರ ವಿಗ್ರಹ ಸುಜನರ ಪೋಷಕನಂದನಂದನ
ವಂದಿತ ಮುನಿಜನಾಮಂದರಧರ ಮಾನದ ಜಗದ್ಭರಿತಾ
ನಂದನಿಲಯನಾದ ಅಮಿತ ಪರಾಕ್ರಮ ಮೂರ್ತಿ
ಆಗರ ದ್ವಾರಕ ಹರಿಪುರ ಸ್ಥಳವು ಭಾಗೀರಥಿಪಿತ ಭವ
ವಿಮೋಚನ ಕೃಷ್ಣ ನಾಗಶಯನ ಶ್ರೀನಿಲಯನ ೨
ಪುಂಡರೀಕಾಕ್ಷ ಶ್ರೀ ಪಾಂಡವ ಪಕ್ಷಕ ಪಂಡಿತ
ರಕ್ಷಕ ಪರಮಾತ್ಮನೆ
ಹಿಂಡೂ ದೈತ್ಯರ ಕುಲ ಚಂಡಾನೆ ಭೇರಿಸಿ ಭೂಮಂಡಲವನಾ
ಳ್ವಂಥ ಮಹಿಮ ಪ್ರಕಾಶ ೩
ನಿಗಮಗೋಚರ ಜಗನ್ನಾಯಕ ನರಹರಿ ಅಗಣಿತ ಚರಿತ
ಅನಂತನಿನ್ನಾ ಬಗೆಬಗೆಯಿಂದಲಿ ಭಜಿಸುವ ಭಕುತರ
ಆಘಗಳ ಖಂಡಿಸುವಾ ಹರಿ ‘ಹೊನ್ನವಿಠ್ಠಲ ‘ ೪

 

೧೪೯
ನಾರಾಯಣನೆಂಬ ನಾಮದ ಸವಿಯನೆ
ನರರೇನು ಬಲ್ಲರು ಪ
ಘೋರದುರಿತ ಸಂಹಾರ ಕೇಶವಧೀರಾ
ಮಾರಜನಕ ಸುಂದರ ಹೇ ವೀರಾ
ಸುರಾಸುರಪವಂದ್ಯ ಸುಗುಣ
ಶ್ರೀಗೋವಿಂದ ವೀರಾ
ಶ್ರೀರಾಮಾವತಾರ ಎತ್ತಿದ ಧೀರಾ ೧
ಆದಿಮೂಲ ಕರ್ತನೆಂದು ಅರಿತು ಮನದಿ
ಶೋಧಿಸೆ ಸಕಲ ಸಾರವನು
ಭೇದಾನರಿತು ಯದಾಯುಗ ಭಟಗಾಳಾರು
ಮೋದದಿ ನವಯುಗದ ಮರ್ಮವ ನರಿತು ೨
ಸಕಲ ಪ್ರಪಂಚವೆಂಬ ಸುಖವನ್ನೆ ಅತಿಗಳೆದು
ಮುಕುತಿ ದಾಯಕ ‘ಹೊನ್ನ ವಿಠ್ಠಲ’ ನೆಂದೆನ್ನು
ಭಕುತಿಯಿಂದಲಿ ಸದಾಭಾವನೆಯ ನೀ ಬಿಡದೆ
ಅಕಳಂಕ ಮಹಿಮನ ಅರಿತು ಸ್ತುತಿಸುವರಿಗಲ್ಲದೆ ೩

 

೧೮೮
ನಾರಾಯಣಾ ಹರಿನಾರಾಯಣಾ ಕೃಷ್ಣಾ
ನಾರಾಯಣಾ ಸ್ವಾಮಿ ನಾರಾಯಣಾ ೧
ಅಚ್ಯುತಾನಂತ ಗೋವಿಂದ ಪರಬ್ರಹ್ಮ
ಸಚ್ಚಿದಾನಂದ ಶ್ರೀ ನಾರಾಯಣಾ ೨
ಭಕ್ತವತ್ಸಲ ದೇವಾ ಪಂಡವಾಪಕ್ಷಕಾ
ಮುಕ್ತಿ ದಾಯಕ ಶ್ರೀ ನಾರಾಯಣಾ ೩
ನಂದನಂದನ ಆನಂದ ಶಂಕರ ಪ್ರೀಯಾ
ವಂದಿತಾ ಮುನಿಜನರ ನಾರಾಯಣ ೪
ಇಂದಿರಾರಮಣ ಮುಕುಂದ ಮುರಹರಿ
ಮಂದರಧರ ಹರಿನಾರಾಯಣ ೫
ದ್ರೌಪದಿ ರಕ್ಷಕಾ ದಾನವಾ
ಶಿಕ್ಷಕಾ ಕವಿಜನ ಪೋಷಕ ನಾರಾಯಣಾ ೬
ರಾವಣ ಮರ್ದನಾ ಆಜೀವಲೋಚನಾ
ಯದುಕುಲಾಬ್ದಿ ಚಂದ್ರ ನಾರಾಯಣಾ ೭
ಅಕ್ರೂರವರದಾ ನಿಜಾನಂದ ಮೂರುತಿ
ಚಕ್ರಧರ ಹರಿ ನಾರಾಯಣಾ ೮
ಭುಜಗಶಯನ ದಿವ್ಯಾ ಬುಧಜನ ಪೂಜಿತಾ
ಭವ ನಾಯಕ ವಿಷ್ಣು ನಾರಾಯಣಾ ೯
ಗಂಗಜನಕ ದೇವೋತ್ತುಂಗ ಮಹಾನುಭಾವ
ಶೃಂಗಾರ ಮೂರುತಿ ನಾರಾಯಣಾ ೧೦
ಅಂಬುಜಾದಳ ನೇತ್ರಾ ಅಜಮಿಳಾರಕ್ಷಕ
ಶಂಬರಾರಿ ಪತಿ ನಾರಾಯಣ ೧೧
ಪಕ್ಷಿವಾಹನ ಜಗದೃಕ್ಷಾ ಸುಲಕ್ಷಣಾ
ಲಕ್ಷ್ಮೀರಮಣ ಶ್ರೀ ನಾರಾಯಣಾ ೧೨
ಕಮಲಸಂಭವಪಿತಾ ಕರುಣಪಯೋನಿಧಿ
ಅಮಿತ ಪರಾಕ್ರಮ ನಾರಾಯಣಾ ೧೩
ಭೂತ ದಯಾ ಮೂರ್ತಿ ಪೂಜಿತ ಸರ್ವತ್ರಾ
ಪೂತನ ಸಂಹಾರ ನಾರಾಯಣಾ ೧೪
ದಿನಕರಾ ಕುಲದೀಪಾ ದೀನ ದಯಾಪರ
ಅನಿಮಿತ್ತ ಬಂಧು ದೇವಾ ನಾರಾಯಣಾ ೧೫
ಕಾಲಿಯಾ ಮರ್ದನಾ ಗಂಗಾಧರಾರ್ಚಿತ
ಕಲ್ಮಷರಹಿತ ಶ್ರೀನಾರಾಯಣಾ ೧೬
ಪಾಲಿತಾ ಸುರಮುನಿ ಪಾಪವಿನಾಶನಾ
ವಾಲಿ ಸಂಹಾರಕಾ ನಾರಾಯಣ ೧೭
ದಶರಥನಂದನ ಧರಣಿರಕ್ಷಕಾ ಲವ
ಕುಶಪಿತಾ ಶ್ರೀಹರಿನಾರಾಯಣಾ ೧೮
ವೇದಗೋಚರ ನಿಗಮಾಗಮ ವೇದ್ಯ ಸು-
ನಾದ ವಿನೋದ ಶ್ರೀನಾರಾಯಣ ೧೯
ಕೋಟಿದರ್ಪಕ ರೂಪಲಾವಣ್ಯ ಭಕ್ತ
ಸಂಕಟ ಪರಿಹಾರ ನಾರಾಯಣಾ ೨೦
ವಾರಿಧಿ ಬಂಧನಾ ವನಚರ ಪಾಲನಾ
ವೈಕುಂಠ ಶ್ರೀನಾರಾಯಣಾ ೨೧
ಗಜರಾಜ ವರದಾ ಕಾಮಿತಫಲದಾಯಕಾ
ಅಜಭವ ಪೂಜಿತಾ ನಾರಾಯಣಾ ೨೨
ಸಾಧುಜನ ಪ್ರಿಯಾ ಸಾಮಗಾನವೇಣು
ನಾದ ಲೋಲ ಕೃಷ್ಣ ನಾರಾಯಣಾ ೨೩
ಯಾದವ ಕುಲದೀಪಾ ಯಶೋದಾನಂದನಾ
ಯಜ್ಞರಕ್ಷಕಾ ಹರಿನಾರಾಯಣಾ ೨೪
ಕೇಶವಾ ಮಾಧವಾ ಕೃಷ್ಣ ದಾಮೋದರಾ
ವಾಸುದೇವ ಹರಿನಾರಾಯಣ ೨೫
ಸುಂದರ ವಿಗ್ರಹಾಸುಗುಣ ವಿಲಾಸ
ಆನಂದ ನಿಲಯಾ ಹರಿನಾರಾಯಣಾ ೨೬
ವ್ಯಾಸಾಂಬರೀಷ ವಾಲ್ಮೀಕ ನಾರದಾ
ಪಾರಾಶರ ವಂದಿತ ನಾರಾಯಣ ೨೭
ದೋಷದೂರಾ ನಿರ್ದೋಷಾ ಪರಮಪುರಷ
ಪೋಷಿತ ಜಗತ್ರಯ ನಾರಾಯಣಾ ೨೮
ಮಕರಕುಂಡಲಧರಾ ಮಹಿಮಾ ಚರಾಚರಾ
ಸಕಲಂತರ್ಯಾಮಿ ನಾರಾಯಣ ೨೯
ಲೋಕನಾಯಕಾ ವಿಲಾಸ ಮೂರುತಿ
ತ್ರೀಲೋಕ ವಂದ್ಯ ಹರಿನಾರಾಯಣಾ ೩೦
ವಿಶ್ವವ್ಯಾಪಕಾ ಘನ ವಿಶ್ವರೂಪಾ ಮಹಾ
ವಿಶ್ವೇಶ್ವರಾ ಹರಿನಾರಾಯಣಾ ೩೧
ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ದೇವ
ಸಕಲ ಕರ್ತ ನೀನೆ ನಾರಾಯಣಾ ೩೨
ಪನ್ನಗಶಯನಾ ಆಪನ್ನ ಶರಣ್ಯ ಶ್ರೀ
‘ಹೆನ್ನೆ ವಿಠ್ಠಲ ‘ ನಾರಾಯಣಾ ೩೩

 

೭೬
ನಿನ್ನ ಕೃಪೆಯ ತೋರೆನ್ನ ರಕ್ಷಿಸೊಬೇಗಾ
ನೀರಜದಳನಯನಾ
ಅನ್ಯನಲ್ಲ ನಾ ನಿನ್ನ ದಾಸನುಯಂದು
ಚಿನ್ಮಯ ಮೂರುತಿ ಶ್ರೀನಿವಾಸಹರೆ ಪ
ಶಂಕರನುತ ಬಿರುದಾಂಕ ಭಕ್ತರಪೋಷ
ಪಂಕಜೋದ್ಭವನಾ ಪಡೆದಂಥಾ
ವೆಂಕಟಗಿರಿನಿಲಯ ವೇಣುನಾದಪ್ರೀಯಾ
ಬಿಂಕಾದಿ ಶರಣರ ಪೊರೆದಂಥಾ
ಶಂಖ ಚಕ್ರಧರ ಶೌರಿ ಮಹಾನುಭಾವ
ಬಿಂಕದಾನವರಳಿದ ಬಲವಂತಾ
ಶಂಕೆಯಿಲ್ಲದೆ ನಿಮ್ಮ ಸ್ಮರಿಸುವ ದಾಸರ
ಕಿಂಕರ ಕಿಂಕರ ಕಿಂಕರನೆಂದು ಇನ್ನು ೧
ವಾಸುಕಿಶಯನ ಶ್ರೀ ವಸುದೇವನಂದನ
ಭೂಸರವಂದ್ಯ ಪುರಾಣ ಪುರುಷ
ಈಶ ಜಗತ್ರಯ —–ರಾಜವರದಾ
ಭೂಸುತೋನಾಯಕ ಭೂರಮಣಾ
ಸಾಸಿರನಾಮದ ಸರ್ವೇಶನೆ ಕೃಷ್ಣಾ
ಭೂಸೂರ ಕೀರ್ತಿ ಪ್ರಕಾಶನಾದ
ಕೇಶವ ಗೋವಿಂದ ಕರುಣಿಸಿ ಕಾಯೋ ಎನ್ನ
ದಾಸರಾರ್ಚಿತ ಪಾದ ವೈಕುಂಠಾಧೀಶ ೨
ಅಂಡಜಗಮನ ಭೂಮಂಡಲ ನಾಯಕ
ಪುಂಡರೀಕಾ ವರದ ಪರಮಾತ್ಮನೆ
ಚಂಡ ಪ್ರಚಂಡ ವೇದಾಂತ ರಹಸ್ಯನಾದ
ಗಂಡರ ಗಂಡ ಉದ್ದಂಡ ದೇವಾ
ಕೊಂಡಾಡುವರ ನಿಮ್ಮ ಕರುಣಿಸಿ ಕೈಹಿಡಿದು
ಕಾಯ್ವ ಭಾರವುಳ್ಳ ಘನನು ನೀನೂ
ಪಾಂಡುನಂದನ ಪಕ್ಷ ಪತಿ ‘ ಹೆನ್ನ ವಿಠ್ಠಲ’
ನಿನ್ನಂದು ಸೇರಿದ ಅವರ ಹರುಷದಿ ಸಲಹೋ ಇನ್ನೂ ೩