Loading Events

« All Events

  • This event has passed.

ಅಮೃತೇಶ್ವರ ತಂಡರ

November 9, 2023

೯-೧೧-೧೯೪೩ ಸಾಹಿತ್ಯ, ಸಂಗೀತ, ಚಿತ್ರಕಲೆ ಮುಂತಾದುವುಗಳಲ್ಲಿ ಪರಿಣತಿ ಪಡೆದಿರುವ ಅಮೃತೇಶ್ವರರು ಹುಟ್ಟಿದ್ದು ಪಂಪನ ಜನ್ಮಸ್ಥಳವಾದ ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಅಣ್ಣಿಗೇರಿಯಲ್ಲಿ. ತಂದೆ ಉಮ್ಮಣ್ಣ ತಂಡರ, ತಾಯಿ ಬಸವಣ್ಣೆವ್ವ. ಪ್ರಾರಂಭಿಕ ಶಿಕ್ಷಣ ಅಣ್ಣಿಗೇರಿಯಲ್ಲಿ. ಕಾಲೇಜು ಕಲಿತದ್ದು ಗದುಗಿನಲ್ಲಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ. ಎಂ.ಎ. ಪದವಿ, ಬಿ.ಎಡ್. ಪದವಿ. ಜೊತೆಗೆ ಹಿಂದಿ ಭಾಷೆಯಲ್ಲಿ ಎಚ್.ಎಸ್.ಎಸ್. (ಎಂ.ಇಡಿ), ಧಾರವಾಡದ ಮಲ್ಲಸರ್ಜನ ದೈಹಿಕ ಕಾಲೇಜಿನಿಂದ ಸಿಪಿ.ಎಡ್, ವಿಜಯ ಕಲಾಮಂದಿರದಿಂದ ಡಿಟಿಸಿ, ಗುಜರಾತ್ ಕಾಲೇಜಿನಿಂದ ಎನ್.ಎಫ್.ಸಿ, ಹೀಗೆ ಹಲವಾರು ಶೈಕ್ಷಣಿಕ ವಿದ್ಯಾರ್ಹತೆಗಳು. ಉದ್ಯೋಗಕ್ಕಾಗಿ ಸೇರಿದ್ದು ಹುಲಕೋಟಿಯಲ್ಲಿನ ಶ್ರೀರಾಮಕೃಷ್ಣ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ. ೩೬ ವರ್ಷಗಳ ದೀರ್ಘ ಸೇವೆಯ ನಂತರ ನಿವೃತ್ತಿ. ನಿವೃತ್ತಿಯ ನಂತರವೂ ಅತಿಥಿ ಉಪನ್ಯಾಸಕರಾಗಿ ಸ್ವಾಮಿ ವಿವೇಕಾನಂದ ಸೈನ್ಸ್ ಕಾಲೇಜಿನಲ್ಲಿ ಕೆಲಕಾಲ ಕಾರ‍್ಯನಿರ್ವಹಣೆ. ಚಿಕ್ಕಂದಿನಿಂದಲೂ ಕಾವ್ಯದಲ್ಲಿ ಆಸಕ್ತಿ. ಹಲವಾರು ಕವಿತಾ ಸಂಕಲನಗಳು ಪ್ರಕಟಿತ. ನಸುಕುನಕ್ಕಿತು, ಹಾಡು ಬಾ ಕೋಗಿಲೆ, ಎದೆಯಾಳದ ಮುತ್ತುಗಳು, ಹನಿಚೇತನ, ಕಡಲ ಹಕ್ಕಿಯ ಕನಸುಗಳು ಮುಂತಾದುವು ಪ್ರಕಟಿತ. ಇದಲ್ಲದೆ ನಾಡಿನ ಪ್ರಮುಖ ಪತ್ರಿಕೆಗಳಲ್ಲೆಲ್ಲಾ ಲೇಖನ, ಕವಿತೆಗಳು ಪ್ರಕಟಿತ. ಅಣ್ಣಿಗೇರಿಯ ಪಂಪ ಸಾಹಿತ್ಯ ವೇದಿಕೆಯ ಅಧ್ಯಕ್ಷರಾಗಿ ಕೆಲಕಾಲ. ಚಿತ್ರಕಲೆ ರಂಗೋಲಿ, ಛಾಯಾಚಿತ್ರಣ, ಸಂಗೀತ, ಸಾಹಿತ್ಯ ರಚನೆ, ಅಂಚೆ ಚೀಟಿ ಸಂಗ್ರಹ, ಹಸ್ತಾಕ್ಷರ ಸಂಗ್ರಹ ಮುಂತಾದ ಹವ್ಯಾಸಗಳು. ಹಲವಾರು ಕವಿಗೋಷ್ಠಿಗಳಲ್ಲಿ ಭಾಗಿ, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ, ಧಾರವಾಡ ಜಿಲ್ಲಾ ಉತ್ಸವ, ಲಕ್ಕುಂಡಿ ಉತ್ಸವ, ಪಂಪ ಕವಿಗೋಷ್ಠಿ, ಲಕ್ಕುಂಡಿ, ಅತ್ತಿಮಬ್ಬೆ ಸಹಸ್ರಮಾನೋತ್ಸವ, ನವಲಗುಂದ ಸಾಹಿತ್ಯ ಸಮ್ಮೇಳನ, ಸ್ವಾತಂತ್ರ್ಯ ಸುವರ್ಣ ಮಹೋತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ದೂರದರ್ಶನ ಕವಿಗೋಷ್ಠಿ ಮುಂತಾದುವುಗಳಲ್ಲಿ ಕವನ ವಾಚನ. ಸಂದ ಪ್ರಶಸ್ತಿ ಗೌರವಗಳು. ಜಯತೀರ್ಥ ಕನಕಗಿರಿ ಪ್ರಶಸ್ತಿ, ಶ್ರೀರಂಗ ಪ್ರಕಾಶನ ಪ್ರಶಸ್ತಿ, ಬೇಂದ್ರೆ ಪ್ರಶಸ್ತಿ, ಹು.ಧಾ. ಮಹಾನಗರ ಪಾಲಿಕೆ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮುಂಬಯಿ ಕನ್ನಡಿಗರ ಸಂಘ ಪ್ರಶಸ್ತಿ, ಧಾರವಾಡದ ಸುಗಮ ಸಂಗಮ ಸಂಸ್ಥೆಯಿಂದ ಸನ್ಮಾನ ಮುಂತಾದುವು.

Details

Date:
November 9, 2023
Event Category: