Loading Events

« All Events

  • This event has passed.

ಎಂ. ವೆಂಕಟೇಶಾಚಾರ್

December 30, 2023

೩೦.೧೨.೧೯೩೩ ಬಳ್ಳಾರಿ ಸಹೋದರರೆಂದೇ ಪ್ರಸಿದ್ಧರಾಗಿದ್ದವರಲ್ಲಿ ಒಬ್ಬರಾದ ಎಂ. ವೆಂಕಟೇಶಾಚಾರ್ಯರು ಹುಟ್ಟಿದ್ದು ಬಳ್ಳಾರಿ. ತಂದೆ ಸಂಗೀತ ವಿದ್ವಾಂಸರಾದ ರಾಘವೇಂದ್ರಾಚಾರ್, ತಾಯಿ ಕಮಲಮ್ಮ, ತಂದೆಯಿಂದಲೇ ಸಂಗೀತ ಶಿಕ್ಷಣ. ಹಾರ್ಮೋನಿಯಂ, ಖಂಜಿರ, ಮೃದಂಗ ವಾದನದಲ್ಲೂ ಪಡೆದ ಪರಿಣತಿ. ತಮ್ಮ ಶೇಷಗಿರಿ ಆಚಾರ್ಯರೊಡನೆ ನಡೆಸಿಕೊಟ್ಟ ಹಲವಾರು ಕಾರ್ಯಕ್ರಮಗಳು. ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು, ಮುಂಬಯಿ ಪ್ರಮುಖ ಸ್ಥಳಗಳು, ಆಕಾಶವಾಣಿಯ ರಾಷ್ಟ್ರೀಯ ಕಾರ್ಯಕ್ರಮಗಳು, ಸಂಗೀತೋತ್ಸವಗಳು, ದೂರದರ್ಶನದ ರಾಷ್ಟ್ರೀಯ ಕಾರ್ಯಕ್ರಮಗಳು ಸೇರಿ ಒಟ್ಟು ೨೦೦೦ಕ್ಕೂ ಹೆಚ್ಚು ಕಚೇರಿ ಮಾಡಿದ ದಾಖಲೆ, ಶಿಷ್ಯರಿಗೆ ನೀಡುತ್ತಿರುವ ಸಂಗೀತ ಶಿಕ್ಷಣ. ವಯೊಲಿನ್, ಮೃದಂಗ ವಾದನದಲ್ಲಿ ಲಾಲ್‌ಗುಡಿ ಜಯರಾಮನ್, ಎಂ.ಎಸ್. ಗೋಪಾಲಕೃಷ್ಣನ್, ಪಾಲ್ಘಾಟ್ ಮಣಿ ಅಯ್ಯರ್ ಮುಂತಾದವರಿಗೆ ನೀಡಿದ ಸಹಕಾರ. ಅಮೆರಿಕದ ವಾಷಿಂಗ್‌ಟನ್‌ನ ಶಿವ-ವಿಷ್ಣು ದೇವಸ್ಥಾನ, ಬಾಸ್ಟನ್‌, ನ್ಯೂಜೆರ್ನಿ, ಬರ್ಲಿನ್ ಹಿಂದೂ ದೇವಾಲಯ ಮುಂತಾದೆಡೆ ನಡೆಸಿಕೊಟ್ಟ ಕಾರ್ಯಕ್ರಮಗಳು, ಸಂಗೀತ ಶಿಕ್ಷಣ, ಪ್ರಾತ್ಯಕ್ಷಿಕೆ. ಮೈಸೂರಿನ ಜೆ.ಎಸ್.ಎಸ್. ಸಂಗೀತ ಸಭಾದಿಂದ ಸಂಗೀತ ವಿದ್ಯಾನಿಧಿ, ಗಣಪತಿ ಸಚ್ಛಿದಾನಂದ ಆಶ್ರಮದ ಅವಧೂತ ಪೀಠದಿಂದ ಆಸ್ಥಾನ ವಿದ್ವಾನ್, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾಶ್ರೀ ಮುಂತಾದ ಗೌರವ ಸನ್ಮಾನಗಳು.   ಇದೇ ದಿನ ಹುಟ್ಟಿದ ಕಲಾವಿದರು : ಸುಧಾ ವಿ. ಮೂರ್ತಿ – ೧೯೪೮

* * *

Details

Date:
December 30, 2023
Event Category: