Loading Events

« All Events

  • This event has passed.

ಎಚ್.ಕೆ. ಅನಂತರಾವ್

November 12, 2023

೧೨-೧೧-೧೯೪೫ ಭೂಗತ ಜಗತ್ತಿನ ಚಟುವಟಿಕೆಗಳನ್ನು ಅನಾವರಣಗೊಳಿಸಿದರೂ ಕ್ರಮ ಜರುಗಿಸದ ವ್ಯವಸ್ಥೆಯ ಬಗ್ಗೆ ಭ್ರಮನಿರಸನಗೊಳ್ಳುವ ಸಿಬಿಐ ಅಧಿಕಾರಿಯ ಕಥೆ ‘ಅಂತ’ ಚಲನಚಿತ್ರವಾದ ಕಾದಂಬರಿ ಖ್ಯಾತಿಯ ಎಚ್.ಕೆ. ಅನಂತರಾವ್ ಹುಟ್ಟಿದ್ದು ಹೈದರಾಬಾದಿನಲ್ಲಿ. ತಂದೆ ಎಚ್.ಬಿ. ಕೃಷ್ಣರಾವ್. ಹೈದರಾಬಾದಿನ ಪಶುವೈದ್ಯ ಕಾಲೇಜಿನಲ್ಲಿ ಉಪನ್ಯಾಸಕರು, ತಾಯಿ ರಾಧಾಬಾಯಿ. ಈ ಕಾಲೇಜು ಉಸ್ಮಾನಿಯಾ ವಿಶ್ವವಿದ್ಯಾನಿಲಯಕ್ಕೆ ಸೇರಿದ್ದು ಕೃಷ್ಣರಾವ್ ಹೈದರಾಬಾದಿನಲ್ಲಿ ಕಂಡುಕೊಂಡ ವಾಸ್ತವ್ಯ. ಅನಂತರಾವ್‌ರವರ ಪ್ರಾರಂಭಿಕ ಶಿಕ್ಷಣ ಹೈದರಾಬಾದ್. ಹೈಸ್ಕೂಲು ಓದುತ್ತಿರುವಾಗಲೇ ತಂದೆಯ ಸಾವು. ಹೊತ್ತ ಸಂಸಾರದ ಜವಾಬ್ದಾರಿ. ಉದ್ಯೋಗಕ್ಕೆ ಸೇರಿದ್ದು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ವಿವಿಧ ಭಾಗಗಳಲ್ಲಿ ಸಲ್ಲಿಸಿದ ಸೇವೆ. ಎಳೆವೆಯಿಂದಲೇ ಸಾಹಿತ್ಯದಲ್ಲಿ ಬೆಳೆದ ಆಸಕ್ತಿ. ಮೊದಲ ಕಥೆ ಪ್ರಪಂಚ ಪತ್ರಿಕೆಯಲ್ಲಿ ಪ್ರಕಟ. ಮೊದಲ ಕಾದಂಬರಿ ‘ಜಾಲ’. ಬಾಪ್ಕೊ ಪ್ರಕಾಶನದಿಂದ ಪ್ರಕಟಿತ. ನಂತರ ಬರೆದದ್ದು ವರ್ಷಕ್ಕೊಂದರಂತೆ ಐದು ಕಾದಂಬರಿಗಳು. ನಾಲ್ಕನೆಯ ಕಾದಂಬರಿಯೇ ಅಂತ. ಕನ್ನಡದಲ್ಲಷ್ಟೇ ಅಲ್ಲದೆ ತೆಲುಗಿನಲ್ಲಿ ‘ಅಂತಮ್ ಕಾದಿದಿ ಆರಂಭಂ’, ಹಿಂದಿಯಲ್ಲಿ ‘ಮೇರಿ ಆವಾಜ್ ಸುನೋ’, ತಮಿಳಿನಲ್ಲಿ ‘ತ್ಯಾಗಿ’ ಮತ್ತು ಮಲೆಯಾಳಂನಲ್ಲಿ ‘ಅಂತ’ವಾಗಿ ಹಲವಾರು ಭಾಷೆಗಳಲ್ಲಿ ಗಳಿಸಿದ ಪ್ರಚಂಡ ಯಶಸ್ಸು. ‘ಅಂತ’ ಚಲನಚಿತ್ರದ ಯಶಸ್ಸಿನಿಂದ ಪ್ರಭಾವಿತವಾದ ಚಿತ್ರಜಗತ್ತು ಇವರ ಲೇಖನಿಯಿಂದ ಬರೆಸಿದ ಅಂತ ಭಾಗ-೨ ಕೂಡಾ ಯಶಸ್ಸಿನ ಚಿತ್ರ. ನಂತರ ಬರೆದದ್ದು ಹಲವಾರು ಕಾದಂಬರಿಗಳು. ಶೋಧನೆ, ಸೆಳೆತ, ಓಟ, ಅಂಜಿಕೆ, ಜನಜನಕ, ಶಾಂತಿಶೋಧ, ಅಪೂರ್ವ, ಕಿರಾತಕರು, ಅನಾವರಣ, ಸಾವಿನ ಸೀಳು, ಮನೋಮಯ, ಹುಡುಕಾಟ, ಮಾಯಾದರ್ಪಣ, ದೇವರಗುಡ್ಡ, ಅನಾಮಿಕರು, ಬಿಡುಗಡೆ, ಮುಹೂರ್ತ, ನಿರಂತರ, ಮುಕ್ತಿಯವರೆಗೆ ಬರೆದದ್ದು ಸುಮಾರು ಮೂವತ್ತಕ್ಕೂ ಹೆಚ್ಚು ಕಾದಂಬರಿಗಳು. ಹಲವಾರು ಟೆಲಿಫಿಲಂಗಳಿಗೆ, ದೂರದರ್ಶನ ಧಾರಾವಾಹಿಗಳಿಗೆ ಬರೆದ ಚಿತ್ರಕಥೆ, ಸಂಭಾಷಣೆ. ಆಗಂತುಕ, ದೇವರಗುಡ್ಡ, ಧಾರಾವಾಹಿಗಳಾಗಷ್ಟೆ  ಪ್ರಸಿದ್ಧವಾದುದಲ್ಲದೆ ಪುಸ್ತಕರೂಪದಲ್ಲೂ ಓದುಗರನ್ನು ರಂಜಿಸಿದುವು. ಐದು ಭಾಷೆಗಳಲ್ಲೂ ಚಲನಚಿತ್ರವಾಗಿ ಪ್ರಚಂಡ ಯಶಸ್ಸು ಗಳಿಸಿದ ‘ಅಂತ’ ಚಲನಚಿತ್ರ ಕಥೆಗಾಗಿ ಸಂದ ಗೌರವ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಹೈದರಾಬಾದಿನ ಹಲವಾರು ಸಂಘ ಸಂಸ್ಥೆಗಳಿಂದ ಸಂದ ಗೌರವ.   ಇದೇ ದಿನ ಹುಟ್ಟಿದ ಸಾಹಿತಿಗಳು : ಮೊಹರೆ ಹನುಮಂತರಾಯರು – ೧೮೯೨ ಜೀಶಂಪ – ೧೯೩೩-೧೭.೬.೧೯೯೫ ಗಂಗಾಧರ ಚಿತ್ತಾಲ – ೧೯೨೩-೨೮.೧.೧೯೮೭ ಸದಾನಂದ – ೧೯೫೩ ನಂದಾಪ್ರಸಾದ್ – ೧೯೬೦

Details

Date:
November 12, 2023
Event Category: