Loading Events

« All Events

  • This event has passed.

ಎಚ್.ಟಿ. ಶ್ರೀನಿವಾಸಯ್ಯ

November 21, 2023

೨೧.೧೧.೧೯೧೫ ಕಲೆ ಸಂಸ್ಕೃತಿಗಳ ಬೀಡಾದ, ದೇವಸ್ಥಾನಗಳ ನಾಡಾದ ಹಾಸನದ ಸಂಗೀತಗಾರರ ಮನೆತನದಲ್ಲಿ ಎಚ್.ಟಿ. ಶ್ರೀನಿವಾಸಯ್ಯನವರು ಹುಟ್ಟಿದ್ದು. ತಂದೆ ತಮ್ಮಯ್ಯ, ಸೋದರರಾದ ಎಚ್.ಟಿ. ವೆಂಕಟರಾಮಯ್ಯ, ಎಚ್.ಟಿ. ಪುಟ್ಟಸ್ವಾಮಯ್ಯ ಇಬ್ಬರೂ ಪ್ರಖ್ಯಾತ ಪಿಟೀಲು ವಿದ್ವಾಂಸರು. ತಂದೆಯವರ ಬಳಿ ಗಾಯನ, ಪಿಟೀಲು, ಕೊಳಲು ಮತ್ತು ಹಾರ್ಮೋನಿಯಂ ವಾದನದಲ್ಲಿ ಪಡೆದ ಶಿಕ್ಷಣ. ಓದಿದ್ದು ಸಿವಿಲ್ ಎಂಜನಿಯರಿಂಗ್ ಡಿಪ್ಲೊಮ, ಉದ್ಯೋಗಿಯಾಗಿ ರಾಜ್ಯದ ಹಲವಾರು ಕಡೆ ಸಲ್ಲಿಸಿದ ಸೇವೆ. ಉದ್ಯೋಗಿಯಾಗಿ ಹೋದೆಡೆಯಲ್ಲೆಲ್ಲ ನಡೆಸಿಕೊಟ್ಟ ಹಲವಾರು ಸಂಗೀತ ಕಚೇರಿಗಳು. ಏಕವ್ಯಕ್ತಿಯಾಗಿ ಕೊಳಲು, ಪಿಟೀಲು, ಗಾಯನದಲ್ಲೂ ನೀಡಿದ ಕಾರ್ಯಕ್ರಮ, ಚಿತ್ರದುರ್ಗದ ಮಲ್ಲಾಡಿಹಳ್ಳಿ ಅನಾಥ ವಿಶ್ವ ಸಮಿತಿ, ಮೈಸೂರು ಹನುಮಜ್ಜಯಂತಿ, ರಾಮೋತ್ಸವ, ಗಣೇಶೋತ್ಸವಗಳಲ್ಲಿ ನೀಡಿದ ಸಂಗೀತ ಕಾರ್ಯಕ್ರಮ. ಅನೇಕ ಸಂಘ ಸಂಸ್ಥೆಗಳ ಆಶ್ರಯದಲ್ಲಿ ನಾಡಿನ ಹಿರಿಯ, ಕಿರಿಯ ಗಾಯಕರೆನ್ನದೆ ಎಲ್ಲರಿಗೂ ನೀಡಿದ ಕೊಳಲುವಾದನ, ಪಿಟೀಲು ವಾದನದ ಸಹಕಾರ. ಅರಮನೆಯ ದರ್ಬಾರ್ ಹಾಲ್, ಮೈಸೂರು ಮೆಡಿಕಲ್ ಕಾನ್ಫ್‌ರೆನ್ಸ್, ಕಡೂರು ತಾಲ್ಲೂಕು ಸಾಹಿತ್ಯ ಸಮ್ಮೇಳನ ಮುಂತಾದೆಡೆ ನೀಡಿದ ಕೊಳಲುವಾದನ ಕಚೇರಿ. ಆಕಾಶವಾಣಿ ಮೈಸೂರು, ಬೆಂಗಳೂರು, ಭದ್ರಾವತಿ ಕೇಂದ್ರಗಳಿಂದಲೂ ಕಾರ್ಯಕ್ರಮ ಪ್ರಸಾರ. ಮೈಸೂರು ಹನುಮಜ್ಜಯಂತಿ ಸ್ವರ್ಣಮಹೋತ್ಸವ ಸಂದರ್ಭದಲ್ಲಿ ವಯೊಲಿನ್‌ವಾದನ ಪ್ರವೀಣ, ಸಂಘ ಸಂಸ್ಥೆಗಳಿಂದ ವೇಣುವಾದನ ನಿಪುಣ ಮುಂತಾದ ಗೌರವ ಪುರಸ್ಕಾರಗಳು.   ಇದೇ ದಿನ ಹುಟ್ಟಿದ ಕಲಾವಿದರು ಕೋಮಲಮ್ಮ – ೧೯೪೦ ಚಂದ್ರಶೇಖರ ಟ.ಎನ್. – ೧೯೫೪ ವಿಶ್ವನಾಥ ಗಂಗೂರಾಚಾರ್ – ೧೯೫೬ ಅನಂತ ಭಾಗ್ವತ್ – ೧೯೬೭

Details

Date:
November 21, 2023
Event Category: