Loading Events

« All Events

  • This event has passed.

ಎಚ್.ವಿ. ನಂಜುಂಡಯ್ಯ

October 13, 2023

೧೩-೧೦-೧೮೬೦ ೭-೫-೧೯೨೦ ಕನ್ನಡವನ್ನು, ಕನ್ನಡ ಸಾಹಿತ್ಯ ಪರಿಷತ್ತನ್ನು, ಮೈಸೂರು ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸಿದ ನಂಜುಂಡಯ್ಯನವರು ಹುಟ್ಟಿದ್ದು ಮೈಸೂರಿನಲ್ಲಿ. ಆಂಧ್ರ ಮೂಲದವರು (ಎಚ್-ಹೆಬ್ಬಳಲು, ವಿ-ವೇಲ್ಪನೂರು) ತಂದೆ ಸುಬ್ಬಯ್ಯ, ತಾಯಿ ಅನ್ನಪೂರ್ಣಮ್ಮ. ಬಡತನದ ಜೀವನ. ಮೈಸೂರು ಮಹಾರಾಜರಿಂದ ವಿದ್ಯಾರ್ಥಿ ವೇತನ ಪಡೆದು ವ್ಯಾಸಂಗ. ಮೈಸೂರಿನ ವೆಸ್ಲಿಯನ್ ಪ್ರೌಢಶಾಲೆ ಹಾಗೂ ಮದರಾಸಿನ ಕ್ರಿಶ್ಚಿಯನ್ ಕಾಲೇಜುಗಳಲ್ಲಿ ಓದಿ ೧೮೮೦ರಲ್ಲಿ ಪಡೆದ ಬಿ.ಎ. ಪದವಿ. ನಂತರ ಬಿ.ಎಲ್, ಎಂ.ಎಲ್. (೧೮೯೩) ಪದವಿ. ಉದ್ಯೋಗ ಪ್ರಾರಂಭಿಸಿದ್ದು ನಂಜನಗೂಡಿನಲ್ಲಿ ಮುನ್ಸೀಫರಾಗಿ (೧೮೮೫) ಹಾಸನದ ಅಸಿಸ್ಟೆಂಟ್ ಕಮೀಷನರಾಗಿ, ಬೆಂಗಳೂರಿನ ಸಬ್ ಜಡ್ಜ್, ಮದರಾಸು ವಿಶ್ವವಿದ್ಯಾಲಯದ ಫೆಲೋ, ಮೈಸೂರು ಸರಕಾರದ ಅನ ಕಾರ‍್ಯದರ್ಶಿ ; ಶಿವಮೊಗ್ಗ ಜಿಲ್ಲೆಯ ಜಿಲ್ಲಾಕಾರಿ, ಸರಕಾರದ ಮುಖ್ಯ ಕಾರ‍್ಯದರ್ಶಿ, ಮುಖ್ಯ ನ್ಯಾಯಾಶರಾಗಿ, ವಿದ್ಯಾ ಇಲಾಖೆಯ ಪ್ರಧಾನ ಆಡಳಿತಾಕಾರಿಯಾಗಿ ಕೌನ್ಸಿಲರಾಗಿ ವಿವಿಧ ಹುದ್ದೆಗಳಲ್ಲಿ ದುಡಿದು ೧೯೧೬ರಲ್ಲಿ ನಿವೃತ್ತಿ. ಅಕ್ಕನಿಗಾದ ವೈಧವ್ಯದ ಬಾಳಿನಿಂದ ಪ್ರಚೋದಿತರಾಗಿ WIDOWS HOMEನ್ನು ವಿಧವೆಯರ ಉನ್ನತಿಗಾಗಿ, ಹರಿಜನರ ಉದ್ಧಾರಕ್ಕಾಗಿ ಸೆಂಟ್ರಲ್ ಬೋರ್ಡಿಂಗ್ ಸ್ಕೂಲನ್ನು ಸ್ಥಾಪಿಸಿ, ವಸತಿ ಶಾಲೆ, ಕೈ ಕಸುಬಿನ ಶಾಲೆ, ಸ್ತ್ರೀ ವಿದ್ಯಾಭ್ಯಾಸಕ್ಕೆ ಉತ್ತೇಜನ ಮುಂತಾದ ಸಾಮಾಜಿಕ ಕಾರ‍್ಯಕ್ರಮಗಳಲ್ಲಿ ಭಾಗಿ. ಹಳ್ಳಿ ಹಳ್ಳಿಗೂ ತಿರುಗಿ ವಿದ್ಯಾಭ್ಯಾಸದ ಕುಂದು ಕೊರತೆಗಳನ್ನು ಗುರುತಿಸಿ ರಾಷ್ಟ್ರ ವಿದ್ಯಾಭ್ಯಾಸಕ್ಕೆ ಕೊಟ್ಟ ಕರೆ. ದೆಹಲಿಯ ಚಕ್ರವರ್ತಿಯ ಪಟ್ಟಾಭಿಷೇಕ ಮಹೋತ್ಸವಕ್ಕೆ ಸಿಕ್ಕ ಆಹ್ವಾನ (೧೯೧೧). ೧೯೧೪-೧೫ರಲ್ಲಿ ವಿಶ್ವವಿದ್ಯಾಲಯದ ನಿಯೋಗವೊಂದು ಮದರಾಸಿನಿಂದ ಬಂದಾಗ ಕ್ರಮಬದ್ಧ ಯೋಜನೆಯ ಕರಡುಪ್ರತಿ ರಚನೆ. ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ಸ್ಥಾಪನೆಯೊಂದಿಗೆ ನೇಮಕ, ನಿವೃತ್ತರಾಗುವವರೆವಿಗೂ ಕುಲಪತಿಗಳಾಗಿ ಮುಂದುವರಿಕೆ. ೧೯೧೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯ ಸಾಧನೆ. ರಾಜ್ಯಶಾಸ್ತ್ರ, ನ್ಯಾಯಶಾಸ್ತ್ರ, ಅರ್ಥಶಾಸ್ತ್ರ ಮುಂತಾದ ವಿಷಯಗಳಲ್ಲಿ ವಿದ್ವಾಂಸರಾಗಿದ್ದು ಹಲವಾರು ಗ್ರಂಥಗಳ ರಚನೆ. ಕನ್ನಡಕ್ಕೆ ಮನ್ನಣೆಯೇ ಇಲ್ಲದೆ ಕನ್ನಡವೆಂದರೆ ಮೂಗು ಮುರಿಯುತ್ತಿದ್ದ ಕಾಲದಲ್ಲಿ ರಚಿಸಿದ ಗ್ರಂಥ ವ್ಯವಹಾರ ದೀಪಿಕೆ (೧೮೯೦). ವ್ಯವಹಾರ ಧರ್ಮಶಾಸ್ತ್ರ  (೧೯೧೭). ಅರ್ಥಶಾಸ್ತ್ರ (೧೯೦೧). ಲೇಖ್ಯಬೋನಿ, ರಾತ್ರಿಯಲ್ಲಿ ಕಂಬನಿ ಇಂಗ್ಲಿಷ್‌ನಲ್ಲಿ MYSORE TRIBES AND CASTES, TEARS IN THE NIGHT. ಇವರ ಕಾರ‍್ಯ ವಿಚಕ್ಷಣತೆಗೆ ಮೈಸೂರು ಮಹಾರಾಜರಿಂದ ‘ರಾಜಮಂತ್ರ ಪ್ರವೀಣ’ ಬಿರುದು, ಬ್ರಿಟಿಷ್ ಸರಕಾರದಿಂದ COMPANION OF THE INDIAN EMPIRE ಬಿರುದು. ೧೯೧೫-೨೦ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಷ್ಟೇ ಅಲ್ಲದೆ ಮೂರು ಬಾರಿ ಬೆಂಗಳೂರು, ಮೈಸೂರುಗಳಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆ ಮಾಡಿ ಕನ್ನಡಿಗರು ತೋರಿದ ಗೌರವ.   ಇದೇ ದಿನ ಹುಟ್ಟಿದ ಸಾಹಿತಿಗಳು : ಕೀರ್ತಿನಾಥ ಕುರ್ತಕೋಟಿ – ೧೯೨೮-೩೧.೭.೦೩ ಪಿ.ವಿ. ಶಾಸ್ತ್ರಿ ಕಿಬ್ಬಳ್ಳಿ – ೧೯೩೬ ಎಸ್.ಬಿ. ಉತ್ನಾಳ್ – ೧೯೪೬ ಕೆ.ಬಿ. ಪಾಠಕ್ – ೧೮೫೦-೨.೯.೧೯೩೨

Details

Date:
October 13, 2023
Event Category: