Loading Events

« All Events

  • This event has passed.

ಕದ್ರಿ ಗೋಪಾಲನಾಥ್

December 6, 2023

೧೯೫೦ ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕರಾದ ಗೋಪಾಲನಾಥ್‌ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪಾಣಿ ಮಂಗಳೂರಿನಲ್ಲಿ. ತಂದೆ ತನಿಯಪ್ಪ, ನಾಗಸ್ವರ ವಿದ್ವಾಂಸರು, ತಾಯಿ ಗಂಗಮ್ಮ. ತಂದೆಯ ಬಳಿ ನಾಗಸ್ವರ, ಎನ್. ಗೋಪಾಲ ಕೃಷ್ಣರವರಲ್ಲಿ ಗಾಯನ, ಟ.ವಿ. ಗೋಪಾಲಕೃಷ್ಣನ್ ಮಾರ್ಗದರ್ಶನದಲ್ಲಿ ನಾಗಸ್ವರ ಮತ್ತು ಸ್ಯಾಕ್ಸೊಫೋನ್ ವಾದನದಲ್ಲಿ ಶಿಕ್ಷಣ. ಆಕಾಶವಾಣಿ ‘ಎ’ ಟಾಪ್ ಶ್ರೇಣಿಯ ಕಲಾವಿದ. ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ನಡೆಸಿಕೊಟ್ಟ ಪ್ರಮುಖ ಕಚೇರಿಗಳು. ವಿದೇಶಗಳಲ್ಲೂ ಹಲವಾರು ಕಾರ್ಯಕ್ರಮಗಳು ಬಿಬಿಸಿಯ ಆಹ್ವಾನದ ಮೇರೆಗೆ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಕಚೇರಿ ನಡೆಸಿದ ಮೊಟ್ಟಮೊದಲ ಕರ್ನಾಟಕ ಸಂಗೀತ ಕಲಾವಿದ. ಬರ್ಲಿನ್, ಮೆಕ್ಸಿಕೋ, ಪ್ಯಾರಿಸ್, ಸ್ವಿಜರ್‌ಲ್ಯಾಂಡ್, ಯು.ಕೆ, ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಸಿಂಗಪೂರ್, ಬಹರೇನ್, ಕ್ವೆಟಾರ್, ಮಸ್ಕಟ್, ಮಲೇಷಿಯಾ, ಶ್ರೀಲಂಕಾ ಮುಂತಾದೆಡೆ ಯಶಸ್ವಿ ಕಚೇರಿಗಳು. ಚೆನ್ನೈನ ನಾರದ ಗಾನಸಭಾದಲ್ಲಿ ೪೦೦ ಮಂದಿ ಕಲಾವಿದರೊಡನೆ ನಡೆಸಿಕೊಟ್ಟ ಕಾರ್ಯಕ್ರಮದಿಂದ ಬಂದ ೬-೭ ಲಕ್ಷ ರೂ.ಗಳನ್ನು ಕಾರ್ಗಿಲ್ ಯುದ್ಧ ನಿಧಿಗಾಗಿ ಸಮರ್ಪಣೆ. ಕೇಂದ್ರ ಸಂಗೀತ ನಾಟಕ ಅಕಾಡಮಿ, ತಮಿಳುನಾಡು ಸರಕಾರದ ಕಲೈಮಾಮಣಿ, ಗಾನ ಕಲಾಶ್ರೀ, ಗಾನಕಲಾ ಭೂಷಣ, ನಾದ ಗಂಧರ್ವ, ನಾದೋಪಾಸನ ಬ್ರಹ್ಮ ಸುನಾದ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ, ಶೃಂಗೇರಿ, ಮಂತ್ರಾಲಯ ಕಂಚಿಪೀಠಗಳಿಂದ ಸನ್ಮಾನ, ಕೇಂದ್ರ ಸರಕಾರದ ಪದಶ್ರೀ ಪ್ರಶಸ್ತಿ ಪಡೆದ ಎರಡನೆಯವರು (ಸಂಗೀತ) ಬೆಂಗಳೂರು ವಿ.ವಿ.ದ ಡಾಕ್ಟರೇಟ್ ಮುಂತಾದ ಗೌರವ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಕಲಾವಿದರು : ರಂಗನಾಯಕಮ್ಮ – ೧೯೩೩ ಹೈದರ್ ಬೇಗ್ – ೧೯೩೫ ಸುಧಾಂಶು ರಾಮಚಂದ್ರ ಕುಲಕರ್ಣಿ – ೧೯೫೭ ಸತೀಶ್ ಎಸ್. ಸೊಲ್ಲಾಪುರ್ – ೧೯೬೩

* * *

Details

Date:
December 6, 2023
Event Category: