Loading Events

« All Events

  • This event has passed.

ಜೆ.ಎಸ್. ಖಂಡೇರಾವ್

November 1, 2023

೧.೧೧.೧೯೪೦ ನಿಸರ್ಗ ಹಾಗೂ ಭೂ ದೃಶ್ಯಗಳ ರಚನೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಪ್ರಖ್ಯಾತ ಚಿತ್ರಕಾರರೆನಿಸಿರುವ ಖಂಡೇರಾವ್‌ರವರು ಹುಟ್ಟಿದ್ದು ಗುಲಬರ್ಗಾ. ತಂದೆ ಶಂಕರಪ್ಪ, ತಾಯಿ ಬಸಮ್ಮ, ಕಲೆಯ ಬಗ್ಗೆ ಬೆಳೆದ ಆಸಕ್ತಿ. ಮುಂಬಯಿ ಜೆ.ಜೆ. ಸ್ಕೂಲಿನಿಂದ ಪಡೆದ ಡಿಪ್ಲೊಮ, ದೆಹಲಿಯ ಸಾಂಸ್ಕೃತಿಕ ಸಂಪನ್ಮೂಲ ಕೇಂದ್ರದಿಂದ ಪಡೆದ ತರಬೇತಿ. ಗುಲಬರ್ಗದ ಐಡಿಯಲ್ ಫೈನ್ ಆರ್ಟ್ಸ್ ಇನ್‌ಸ್ಟಿಟ್ಯೂಟ್‌ನ ಸ್ಥಾಪಕರು ಮತ್ತು ಪ್ರಾಂಶುಪಾಲರಾಗಿ, ಶರಣಬಸವೇಶ್ವರ ಕಲಾ ಕಾಲೇಜಿನ ಉಪನ್ಯಾಸಕರಾಗಿ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ, ಕಲಾ ಪ್ರಗತಿ ಸಂಸ್ಥೆಯ ಅಧ್ಯಕ್ಷರಾಗಿ, ಮುಂಬಯಿ ಆರ್ಟ್ಸ್ ಸೊಸೈಟಿ ಆಜೀವ ಸದಸ್ಯರಾಗಿ, ಕರ್ನಾಟಕ ಲಲಿತಕಲಾ ಅಕಾಡಮಿ ಸದಸ್ಯರಾಗಿ, ಹಲವಾರು ಕಲಾ ಶಿಬಿರಗಳ ನಿರ್ದೇಶಕರಾಗಿ, ಕಲಾ ಕಾಲೇಜುಗಳ ಸಂದರ್ಶಕ ಪ್ರಾಧ್ಯಾಪಕರಾಗಿ, ಹಲವಾರು ಸಂಸ್ಥೆಗಳ ಕಲಾ ಸ್ಪರ್ಧೆಯ ತೀರ್ಪುಗಾರರಾಗಿ ಕರ್ನಾಟಕ ಲಲಿತಕಲಾ ಅಕಾಡಮಿ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ. ಧಾರವಾಡದ ಕರ್ನಾಟಕ ಕಾಲೇಜು, ಮಿಣಜಿಗಿ ಆರ್ಟ್ ಗ್ಯಾಲರಿ, ಬೆಂಗಳೂರು, ನವದೆಹಲಿ, ಕೋಲ್ಕತ್ತದ ಬಿರ‍್ಲಾ ಅಕಾಡಮಿ, ಜಹಂಗೀರ್ ಆರ್ಟ್ ಗ್ಯಾಲರಿ, ಬೆಂಗಳೂರಿನ ಸುವರ್ಣ ಮಹೋತ್ಸವ ಕಲಾಪ್ರದರ್ಶನ ಮುಂತಾದೆಡೆ ಸಾಂಘಿಕ ಪ್ರದರ್ಶನಗಳು. ಗುಲಬರ್ಗದ ವಸ್ತು ಸಂಗ್ರಹಾಲಯ, ಬೆಂಗಳೂರಿನ ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್, ಕರ್ನಾಟಕ ಲಲಿತಕಲಾ ಅಕಾಡಮಿ, ಕಿರ್ಲೊಸ್ಕರ್ ಕಂಪನಿ, ದೆಹಲಿಯ ಲಲಿತಕಲಾ ಅಕಾಡಮಿ, ಮಾಡರ್ನ್ ಆರ್ಟ್‌ ಗ್ಯಾಲರಿ, ತಾಜ್ ಮಹಲ್ ಹೊಟೇಲ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವಿದೇಶಾಂಗ ಮಂತ್ರಾಲಯ ಮತ್ತು ಅಮೆರಿಕದ ಮೆಯ್‌ ಕೆ ಹ್ಯಾಮರಿಕ್ – ಅಲಂಬಾ ಮುಂತಾದೆಡೆ ಸಂಗ್ರಹಿತ. ಕರ್ನಾಟಕ ಲಲಿತಕಲಾ ಅಕಾಡಮಿ, ರಾಜ್ಯೋತ್ಸವ ಪ್ರಶಸ್ತಿ, ಗುಲಬರ್ಗದ ಕಾಯಕ ಸನ್ಮಾನ್ ಪ್ರಶಸ್ತಿ, ಗದಗದ ಟಿ.ಪಿ. ಅಕ್ಕಿ ಸ್ವರ್ಣ ಪದಕ, ದಾವಣಗೆರೆ ಶಂಕರಪಾಟೀಲ ಕಲಾ ಪ್ರತಿಷ್ಠಾನ ಪ್ರಶಸ್ತಿ, ವರ್ಣ ಶಿಲ್ಪಿ ವೆಂಕಟಪ್ಪ ಪ್ರಶಸ್ತಿ, ಸಂಸ್ಕಾರ ಭಾರತಿ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ ಪುರಸ್ಕೃತರು.   ಇದೇ ದಿನ ಹುಟ್ಟಿದ ಕಲಾವಿದರು ಪಾರ್ಥಸಾರಥಿ ಕೆ.ವಿ. – ೧೯೨೦ ಸೇತುಮಾಧವ ರಂಗಾಚಾರ್ಯ – ೧೯೩೧ ಪದ್ಮ ಗುರುದತ್ – ೧೯೫೧ ಎಸ್.ವಿ. ಗಿರಿಧರ – ೧೯೫೭

Details

Date:
November 1, 2023
Event Category: