Loading Events

« All Events

  • This event has passed.

ಡಾ. ಕೆ.ವರದರಂಗನ್‌

October 16, 2023

೧೬.೧೦.೧೯೫೮ ಸಂಗೀತ, ಸಾಹಿತ್ಯ ಪರಂಪರೆಯಿಂದ ಬಂದ ಡಾ. ಕೆ.ವರದರಂಗನ್‌ ಹುಟ್ಟಿದ್ದು ಹಾಸನ ಜಿಲ್ಲೆಯ ಗೊರೂರು. ತಂದೆ ಬಿ. ಕೃಷ್ಣ ಅಯ್ಯಂಗಾರ್‌, ತಾಯಿ ಲೇಖಕಿ ಆರ್‌.ಶ್ರೀಮತಿ. ಚಿಕ್ಕಂದಿನಿಂದಲೇ ರಾಗಾಲಾಪನೆ ಮತ್ತು ಕೀರ್ತನೆಗಳನ್ನು ಸಹಜವಾಗಿ ಹಾಡುವ ಕಲೆ ಕರಗತ. ಪ್ರಾರಂಭಿಕ ಶಿಕ್ಷಣ ಎಚ್‌.ವಿ. ವೆಂಕಟೇಶಯ್ಯ ಮತ್ತು ಸಂಗೀತಜ್ಞ ಪ್ರೊ.ರಾ. ವಿಶ್ವೇಶ್ವರನ್‌ರವರಲ್ಲಿ. ೧೨ವಯಸ್ಸಿನಲ್ಲೇ ಕಚೇರಿ ನಡೆಸಿ ಗಳಿಸಿದ ಕೀರ್ತಿ. ಟಿ. ಪುಟ್ಟಸ್ವಾಮಯ್ಯ, ಡಾ. ಎಸ್‌.ರಾಮನಾಥನ್‌, ತಂಜಾವೂರು ವಿ. ಕಲ್ಯಾಣರಾಮನ್‌ ಮುಂತಾದವರಲ್ಲಿ ಪಡೆದ ಪ್ರೌಢಶಿಕ್ಷಣ. ಸೀನಿಯರ್‌ ಸಂಗೀತ ಪರೀಕ್ಷೆಯಲ್ಲಿ ದ್ವಿತೀಯ, ವಿದ್ವತ್‌ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್‌ ವಿದ್ಯಾರ್ಥಿ. ಭೌತಶಾಸ್ತ್ರದಲ್ಲಿ ಎಂ.ಎಸ್ಸಿ. ಪಿಎಚ್‌.ಡಿ ಪದವಿ. ಮಿಲಾಂಜ್‌ ಸಿಸ್ಟಮ್ಸ್‌ ಪ್ರೈ.ಲಿ.ನಲ್ಲಿ ನಿರ್ದೇಶಕರ ಹುದ್ದೆ, ಸಂಗೀತದ ಬಗ್ಗೆ ಶ್ರುತಿ ಲಕ್ಷಣಪ್ರಕಾಶಿಣಿ, ಶ್ರುತಿಸ್ ಅಂಡ್‌ ಶ್ರುತಿಭೇದ ಗ್ರಂಥ ಪ್ರಕಟಿತ. ಬೆಂಗಳೂರು ಆಕಾಶವಾಣಿಯಲ್ಲಿ ಬಿ. ಹೈ ಕಲಾವಿದರಾಗಿ ನಡೆಸಿಕೊಟ್ಟ ಹಲವಾರು ಕಾರ್ಯಕ್ರಮಗಳು. ದೂರದರ್ಶನದಲ್ಲೂ ಕಾರ್ಯಕ್ರಮ ಪ್ರಸಾರ. ಬೆಂಗಳೂರಿನ ಮಲ್ಲೇಶ್ವರ ಸಂಗೀತ ಸಭಾ, ಶ್ರೀ ಸರಸ್ವತಿ ಗಾನಸಭಾ, ಗಾನಕಲಾ ಪರಿಷತ್‌, ಅನನ್ಯ, ಚಾಮರಾಜಪೇಟೆ ರಾಮಸೇವಾ ಮಂಡಲಿ, ಚೆನ್ನೈನ ವಿವೇಕ ಸಾಂಸ್ಕೃತಿಕ ಕೇಂದ್ರ, ಶ್ರೀಕೃಷ್ಣ ಗಾನಸಭಾ, ಕಾರ್ತಿಕ್‌ಲಲಿತಕಲಾ ಸಂಘ, ಅಯನಾವರಂ ಕನ್ನಡ ಸಂಘ, ಮೈಲಾಪುರ ಲಲಿತಕಲಾ ಸಂಘ ಅಲ್ಲದೆ ಕೊಯಮತ್ತೂರು, ವಿಜಯವಾಡ, ತಿರುವನಂತಪುರ, ಎರ್ನಾಕುಲಂ ಮುಂತಾದೆಡೆ ಸಂಗೀತ ಕಚೇರಿಗಳು. ಗಾಯನ ಸಮಾಜದಿಂದ ರಾಗ-ತಾನ-ಪಲ್ಲವಿಯ, ಚೆನ್ನೈನ  ಶ್ರೀ ಕೃಷ್ಣಗಾನ ಸಭಾ, ಆಕಾಶವಾಣಿ, ಶ್ರೀಸರಸ್ವತಿ ಸಭಾ, ಮೈಸೂರು ಅರಮನೆಯ ಯುಗಾದಿ ಸಂಗೀತೋತ್ಸವ, ಬನವಾಸಿಯಲ್ಲಿ ನಡೆದ ಕದಂಬೋತ್ಸವ ಮುಂತಾದವುಗಳಿಂದ ಪ್ರಶಸ್ತಿ ಗೌರವಗಳು.   ಇದೇದಿನಹುಟ್ಟಿದಕಲಾವಿದರು ಮಣಿ ಕೆ.ಎಸ್ – ೧೯೩೩ ಸೋಮಶೇಖರ ಎ – ೧೯೬೩

* * *

Details

Date:
October 16, 2023
Event Category: