Loading Events

« All Events

  • This event has passed.

ತಿರುಮಲೆ ರಾಜಮ್ಮ

November 20, 2023

೨೦-೧೧-೧೯೦೦ ೨೪-೧೦-೧೯೮೪ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದ ದೇಶಭಕ್ತರಿಗೆ ಕನ್ನಡ ದೇಶಭಕ್ತಿಗೀತೆಗಳನ್ನು ರಚಿಸಿಕೊಟ್ಟ ‘ಭಾರತಿ’ ಕಾವ್ಯನಾಮದ ರಾಜಮ್ಮನವರು ಹುಟ್ಟಿದ್ದು ತುಮಕೂರಿನಲ್ಲಿ. ತಂದೆ ರಾಘವಾಚಾರ್ಯರು, ತಾಯಿ ಸೀತಮ್ಮ. ತಂದೆಗೆ ವರ್ಗಾವಣೆಯಾಗುತ್ತಿದ್ದುದರಿಂದ ಹಾಸನ, ಚಿತ್ರದುರ್ಗದಲ್ಲಿ ಪಡೆದ ಪ್ರಾರಂಭಿಕ ಶಿಕ್ಷಣ. ಸಂಗೀತ, ನಾಟಕಗಳಲ್ಲಿ ವಿಶೇಷ ಅಭಿರುಚಿ. ಶಾಲೆಯ ಪರೀಕ್ಷೆಗೆ ಇನ್‌ಸ್ಪೆಕ್ಟರ್ ಬಂದಾಗ ಅವರಿಗಾಗಿ ಏರ್ಪಡಿಸಿದ ಸಮಾರಂಭ. ಸಾವಿತ್ರಿ ನಾಟಕಾಭಿನಯ ಸಾವಿತ್ರಿ ಪಾತ್ರಧಾರಿ ರಾಜಮ್ಮನವರು ರಂಗಕ್ಕೆ ಬರಲು ನಾಚಿಕೆ. ಪ್ರೇಕ್ಷಕರ ಗುಂಪಿನಲ್ಲಿ ಗಂಡ ಕುಳಿತಿದ್ದರಿಂದ. (ತಿ.ತಾ. ಶರ್ಮರೇ ಇವರ ಪತಿ). ಕಡೆಗೆ ನಾಟಕಾಭಿನಯಕ್ಕೆ ಇನ್‌ಸ್ಪೆಕ್ಟರಿಂದ ದೊರೆತ ಪ್ರಶಂಸೆ. ವೀಣಾವಾದನದಲ್ಲಿ ಬೆಳೆದ ಅಭಿರುಚಿ. ಶಾಲೆಯ ಮುಖ್ಯೋಪಾಧ್ಯಾಯಿನಿ ಸುಬ್ಬಮ್ಮ, ಹಾಡಿನ ಮೇಸ್ಟ್ರು ವೆಂಕಟಕೃಷ್ಣಪ್ಪ, ವೈಣಿಕ ವಿದ್ವಾನ್ ಗೋಪಾಲರಾಯರು, ನಂತರ ಮೈಸೂರಿನ ವೀಣೆ ಶೇಷಣ್ಣನವರಲ್ಲಿ ವೀಣಾಪಾಠ. ಕಾಂಗ್ರೆಸ್ ಕಮಿಟಿಯ ಕಾರ್ಯಕರ್ತರಾದ ಸಹೋದರ ಕಂದಾಡೆ ಶಾಮಣ್ಣನ ಮೂಲಕ ಗಣ್ಯ ರಾಜಕೀಯ ಮುಖಂಡರ ಪರಿಚಯ. ೧೯೨೪ರಲ್ಲಿ ಬೆಳಗಾಂನಲ್ಲಿ ನಡೆದ ಕಾಂಗ್ರೆಸ್ ಅವೇಶನದಲ್ಲಿ ಗಾಂಜಿಯವರ ಸಮ್ಮುಖದಲ್ಲಿ ನುಡಿಸಿದ ವೀಣಾವಾದನ. ಗಾಂಜಿಯವರಿಂದ ಬಂದ ಅಪಾರ ಮೆಚ್ಚುಗೆ. ಇವರು ಗಾಂಜಿ ಅಪೇಕ್ಷೆಯ ಮೇರೆಗೆ “ವೈಷ್ಣವ ಜನತೋ…” ಗೀತೆಯನ್ನು “ವೈಷ್ಣವನಿವನೇ ನಿಜವೀ ಜಗದಿ…” ಎಂದು ಕನ್ನಡೀಕರಿಸಿ ಹಾಡಿದ್ದು. ರಾಜಮ್ಮನವರ ಹಾಡುಗಾರಿಕೆ, ವೀಣಾವಾದನಕ್ಕೆ ದೊರೆತ ರಾಷ್ಟ್ರೀಯ ಪುರಸ್ಕಾರ. ಹೆಚ್ಚಿದ ರಾಷ್ಟ್ರಭಕ್ತಿಯಿಂದ ಹಲವಾರು ರಾಷ್ಟ್ರಭಕ್ತಿಗೀತೆಗಳ ರಚನೆ. “ಜೈ ಭಾರತ ಭುವಿಗೇ ಮಾತೆಗೆ ಜೈಪಾವನ ಮೂರ್ತಿಗೆ…” ಎಂದು ಬರೆದ ಹಾಡು ಹಲವಾರು ವರ್ಷ ಬಹಳಷ್ಟು ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿ ಪಡೆದ ಪ್ರಸಿದ್ಧಿ. ಹಲವಾರು ನಾಟಕಗಳ ರಚನೆ. ಕಾವ್ಯ- ನಾಟಕಗಳು-ತಪಸ್ವಿನಿ, ಮಹಾಸತಿ, ವಾತ್ಸಲ್ಯ, ತರಂಗಲೀಲಾ. ಕವನಸಂಕಲನ-ರಾಷ್ಟ್ರಭಕ್ತಿ, ರಾಷ್ಟ್ರಶಕ್ತಿ. ಕಿರುನಾಟಕಗಳು-ಸ್ವರ್ಗ ನಿರಸನ, ಉನ್ಮತ್ತ ಭಾಮಿನಿ, ದುಂದುಭಿ. ವ್ಯಕ್ತಿಪರಿಚಯ-ವೈಣಿಕ ಶಿಖಾಮಣಿ ಶೇಷಣ್ಣ, ಆರ್ಯ ಕೈಲಾಸಂ ಮುಂತಾದ ಕೃತಿಗಳು. ಸಂದ ಹಲವಾರು ಗೌರವಗಳು-೧೯೪೩ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾ ಗೋಷ್ಠಿಯ ಅಧ್ಯಕ್ಷತೆ, ೧೯೬೭ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ೧೯೭೨ರಲ್ಲಿ ಅಮೋಘ ಸನ್ಮಾನ-‘ಭಾರತಿ’ ಅಭಿನಂದನ ಗ್ರಂಥ ಸಮರ್ಪಣೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಇ.ಆರ್. ಸೇತೂರಾಂ – ೧೯೧೮-೩.೧.೨೦೦೩ ವಿ.ಜೆ. ನಾಯಕ – ೧೯೩೧ ದಾಸೇಗೌಡ (ಜಿವಿಡಿ) – ೧೯೪೪ ಕಮಲ ಹೆಮ್ಮಿಗೆ  – ೧೯೫೨ ಟಿ. ಪದ್ಮ – ೧೯೭೦

Details

Date:
November 20, 2023
Event Category: