Loading Events

« All Events

  • This event has passed.

ಬೊಳುವಾರು ಮಹಮದ್ ಕುಂಞಿ

October 22, 2023

೨೨-೧೦-೧೯೫೧ ಮುಸ್ಲಿಂ ಬದುಕನ್ನು ಕನ್ನಡ ಗದ್ಯ ಸಾಹಿತ್ಯಕ್ಕೆ ಪರಿಚಯ ಮಾಡಿಸಿದ ಮೊಟ್ಟ ಮೊದಲ ಕಥೆಗಾರರಾದ ಮಹಮದ್‌ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೊಳುವಾರು. ತಂದೆ ಅಬ್ಬಾಸ್ ಬ್ಯಾರಿ, ತಾಯಿ ಕುಲ್ಸುಂ. ಪ್ರಾರಂಭಿಕ ಶಿಕ್ಷಣ ಬೊಳುವಾರು, ಪುತ್ತೂರು, ಮಂಗಳೂರುಗಳಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಕುವೆಂಪು ಚಿನ್ನದ ಪದಕದೊಡನೆ ಎಂ.ಎ. (ಕನ್ನಡ) ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಸಿಂಡಿಕೇಟ್ ಬ್ಯಾಂಕ್. ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ಪ್ರಚಾರ ವಿಭಾಗದ ಹಿರಿಯ ಪ್ರಬಂಧಕರ ಜವಾಬ್ದಾರಿ. ಚಿಕ್ಕಂದಿನಿಂದಲೇ ಸಾಹಿತ್ಯದತ್ತ ಒಲವು. ಮಕ್ಕಳ ಸಾಹಿತ್ಯಕ್ಕೂ ವಿಶಿಷ್ಟ ರೀತಿಯ ಕೊಡುಗೆ. ಕಥಾಸಂಕಲನ, ನಾಟಕ, ಜೀವನ ಚರಿತ್ರೆ, ಪ್ರವಾಸ ಕಥನ ಮುಂತಾದ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯ ಕೃತಿಗಳ ರಚನೆ. ಕಥಾ ಸಂಕಲನಗಳು-ಅತ್ತ ಇತ್ತಗಳ ಸುತ್ತಮುತ್ತ, ದೇವರುಗಳ ರಾಜ್ಯದಲ್ಲಿ, ಅಂಕ, ಆಕಾಶಕ್ಕೆ ನೀಲಿ ಪರದೆ, ಒಂದು ತುಂಡುಗೋಡೆ-ಆಯ್ದ ಕತೆಗಳು. ರೊಟ್ಟಿ ಪಾತುಮ್ಮ, ರುಖಿಯಾ ಹೆಸರಿನಿಂದ ಮಲಯಾಳಂ ಭಾಷೆಗೆ ಅನುವಾದಗೊಂಡ ಆಯ್ದಕತೆಗಳ ಎರಡು ಸಂಕಲನಗಳು. ಇತಿಹಾಸ-ಪುನ್ನಪ್ರ ವಯಲಾರ ಸಮರ. ಸಂಪಾದಿತ-ಶತಮಾನದ ಸಣ್ಣ ಕಥೆಗಳು, ದೆಹಲಿ ಕನ್ನಡ ಸಾಹಿತ್ಯ. ಮಕ್ಕಳಿಗಾಗಿ ಸಂಪಾದಿಸಿದ/ರಚಿಸಿದ ಕೃತಿಗಳು-ತಟ್ಟು ಚಪ್ಪಾಳೆ ಪುಟ್ಟ ಮಗು, ಸಂತಮ್ಮಣ್ಣ, ಪಾಪು ಗಾಂ, ಗಾಂ ಬಾಪು ಆದ ಕತೆ (ಮಹಾತ್ಮ ಗಾಂಜಿ ಜೀವನ ಚರಿತ್ರೆಯಾಧಾರಿತ ಕಾದಂಬರಿ) ಮಕ್ಕಳ ನಾಟಕಗಳ ಮೂರು ಸಂಪುಟಗಳು (ಪುಸ್ತಕ ಪ್ರಾಕಾರಕ್ಕಾಗಿ). ಹಲವಾರು ಭಾಷೆಗಳಿಗೆ ಇವರ ಕೃತಿ ಅನುವಾದ. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ. ಕರ್ನಾಟಕ ರಾಜ್ಯ ಸಮುದಾಯ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷರಾಗಿ, ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿ, ಚಿತ್ರ ಸಮುದಾಯದ ಅಧ್ಯಕ್ಷರಾಗಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ, ಕನ್ನಡ ಅಭಿವೃದ್ಧಿ ಪ್ರಾಕಾರ, ಕನ್ನಡ ಪುಸ್ತಕ ಪ್ರಾಕಾರ ಮುಂತಾದುವುಗಳಲ್ಲಿ ಹೊತ್ತ ಜವಾಬ್ದಾರಿಯುತ ಕಾರ‍್ಯಗಳು. ಸಂದ ಪ್ರಶಸ್ತಿಗಳು ಹಲವಾರು. ಕರ್ನಾಟಕ ಸಾಹಿತ್ಯ ಅಕಾಡಮಿಯಿಂದ ಮೂರು ಬಾರಿ ಪುರಸ್ಕಾರ, ದೆಹಲಿಯ ಕಥಾ ಪ್ರಶಸ್ತಿ, ಭಾರತೀಯ ಸಂಸ್ಥಾನ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಪರಶುರಾಮ ಪ್ರಶಸ್ತಿ, ಇವರ ಕಥೆಯಾಧಾರಿತ ‘ಮುನ್ನುಡಿ’ ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿ, ಕಥೆಗಾಗಿ ರಾಜ್ಯಪ್ರಶಸ್ತಿ ಸಂದಿದೆ.   ಇದೇ ದಿನ ಹುಟ್ಟಿದ ಸಾಹಿತಿ : ಗೀತಾದೇಸಾಯಿ – ೧೯೪೦

Details

Date:
October 22, 2023
Event Category: