Loading Events

« All Events

  • This event has passed.

ಶಿವಮೊಗ್ಗ ಸುಬ್ಬಣ್ಣ

December 14, 2023

೧೯೩೮ ಸುಗಮಸಂಗೀತದ ತನ್ಮತೆಯ ಗಾಯಕರೆನಿಸಿರುವ ಸುಬ್ಬಣ್ಣನವರು ಹುಟ್ಟಿದ್ದು ಶಿವಮೊಗ್ಗ. ತಂದೆ ಗಣೇಶರಾವ್, ತಾಯಿ ರಂಗನಾಯಕಮ್ಮ, ಸಂಗೀತಗಾರರ ವಂಶ, ಅಜ್ಜ ಶಾಮಣ್ಣನವರಿಂದಲೇ ಸಂಗೀತದ ಪ್ರಥಮ ಪಾಠ. ಕಾಲೇಜು ದಿನಗಳಲ್ಲಿ ಬರೇ ಹಿಂದಿ ಚಿತ್ರಗೀತೆಗಳನ್ನು ಹಾಡುತ್ತಿದ್ದವರು, ಗಾಯನ ಸ್ಪರ್ಧೆಯಲ್ಲಿ ಅಡಿಗರ ‘ಮೋಹನ ಮುರಳಿ’ ಹಾಡಿಗೆ ಗಿಟ್ಟಿಸಿದ ಬಹುಮಾನದಿಂದ ಭಾವಗೀತೆ ಹಾಡುವ ನಿರ್ಧಾರ. ಆಕಾಶವಾಣಿಯ ‘ಎ’ ಟಾಪ್‌ಗ್ರೇಡ್ ಗಾಯಕರಾಗಿ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರದಿಂದ ಹಲವಾರು ಬಾರಿ ಪ್ರಸಾರವಾದ ಕಾರ್ಯಕ್ರಮಗಳು. ಕುವೆಂಪುರವರ ಭಾವಗೀತೆಗಳ ಹಲವಾರು ಕ್ಯಾಸೆಟ್ಟುಗಳಿಗೆ ನೀಡಿದ ಹಾಡುಗಾರಿಕೆ ಮತ್ತು ಸಂಗೀತ ನಿರ್ದೇಶನ ಕರ್ನಾಟಕದ ಪ್ರತಿ ಹಳ್ಳಿಯ ಮೂಲೆಮೂಲೆಗೂ ಸಂಚರಿಸಿ ನಡೆಸಿಕೊಟ್ಟ ಸುಗಮಸಂಗೀತ ಕಾರ್ಯಕ್ರಮಗಳು. ಹಲವಾರು ಸಿ.ಡಿ. ಕ್ಯಾಸೆಟ್ಟುಗಳ ಬಿಡುಗಡೆ. ಕುವೆಂಪು, ಬೇಂದ್ರೆ, ನಿಸಾರ್ ಅಹಮದ್, ಕೆ.ಎಸ್.ನ., ಶಿವರುದ್ರಪ್ಪ, ಲ.ನ. ಭಟ್ಟರು ಮುಂತಾದ ಪ್ರಮುಖರ ಕವನಗಳಿಗೆ ರಾಗದ ರೂಪಕೊಟ್ಟು ಪಡೆದ ಪ್ರಶಂಸೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ದೆಹಲಿ ಕನ್ನಡಿಗರ ಪತ್ರಿಕೆಯ ಕಾಳಿಂಗರಾವ್ ಪ್ರಶಸ್ತಿ, ಮೈಸೂರಿನ ಅನಂತಸ್ವಾಮಿ ಸ್ಮಾರಕ ಪ್ರಶಸ್ತಿ, ಕರ್ನಾಟಕ ಸರಕಾರದ ಪ್ರತಿಷ್ಠಿತ ಶಿಶುನಾಳ ಷರೀಫ್ ಪ್ರಶಸ್ತಿ ಮತ್ತು ಚಂದ್ರಶೇಖರ ಕಂಬಾರರ ನಿರ್ದೇಶನದ ಕಾಡುಕುದುರೆ ಚಿತ್ರದ ಕಾಡುಕುದುರೆ….ಹಾಡಿಗಾಗಿ ರಜತ ಕಮಲ ರಾಷ್ಟ್ರಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗರೆಂಬ ಹೆಗ್ಗಳಿಕೆ. ಇದೇ ದಿನ ಹುಟ್ಟಿದ ಕಲಾವಿದರು : ವಿ.ಎಸ್. ನಾರಾಯಣ್ – ೧೯೩೯

* * *

Details

Date:
December 14, 2023
Event Category: