Loading Events

« All Events

  • This event has passed.

ಹಂಪ ನಾಗರಾಜಯ್ಯ

October 7, 2023

೭-೧೦-೧೯೩೬ ಭಾಷಾ ವಿಜ್ಞಾನಿ, ಗ್ರಂಥ ಸಂಪಾದಕ, ಶ್ರೇಷ್ಠವಾಗ್ಮಿ, ಜನಪ್ರಿಯ ಅಧ್ಯಾಪಕರಾದ ‘ಹಂಪನಾ’ ಖ್ಯಾತಿಯ ನಾಗರಾಜಯ್ಯನವರು ಹುಟ್ಟಿದ್ದು ಗೌರಿಬಿದನೂರು ತಾಲ್ಲೂಕು ಹಂಪಸಂದ್ರದಲ್ಲಿ. ತಂದೆ ಪದ್ಮನಾಭಯ್ಯ, ತಾಯಿ ಪದ್ಮಾವತಮ್ಮ. ಪ್ರಾರಂಭಿಕ ಶಿಕ್ಷಣ ಗೌರಿಬಿದನೂರು, ಮಧುಗಿರಿ. ತುಮಕೂರಿನಲ್ಲಿ ಇಂಟರ್ ಮೀಡಿಯೆಟ್. ಮೈಸೂರು ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್), ಎಂ.ಎ ಪದವಿ. ವಡ್ಡಾರಾಧನೆಯ ಕುರಿತ ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ. ಮಂಡ್ಯ, ದಾವಣಗೆರೆ, ಶಿವಮೊಗ್ಗ ಸರಕಾರಿ ಕಾಲೇಜುಗಳಲ್ಲಿ ಕಾರ‍್ಯ ನಿರ್ವಹಿಸಿ ಬಂದುದು ಸೆಂಟ್ರಲ್ ಕಾಲೇಜಿಗೆ. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸಲ್ಲಿಸಿದ ಸೇವೆ. ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡನೆ. ೧೯೬೬-೭೪ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ‍್ಯದರ್ಶಿಯಾಗಿ, ೧೯೭೮-೮೬ರವರೆಗೆ ಅಧ್ಯಕ್ಷರಾಗಿ, ೧೯೭೭-೭೯ರವರೆಗೆ ಜೈನ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ಹೊತ್ತ ಜವಾಬ್ದಾರಿ. ಕ.ಸಾ.ಪ. ಅಧ್ಯಕ್ಷರಾಗಿದ್ದಾಗ ಚಟುವಟಿಕೆಗಳ ವಿಕೇಂದ್ರಿಕರಣ, ಎಲ್ಲ ವರ್ಗದವರಿಗೆ ಪರಿಷತ್ತಿನ ನೌಕರಿಯಲ್ಲಿ ಅವಕಾಶ, ಗಡಿನಾಡು-ಹೊರನಾಡುಗಳಲ್ಲಿ ಪರಿಷತ್ತಿನ ಚಟುವಟಿಕೆ, ವಜ್ರ ಮಹೋತ್ಸವ ಕಟ್ಟಡ, ಜಾನಪದ ವೈದ್ಯಕೋಶ, ಜಾನಪದ ವಿಶ್ವಕೋಶ, ಸಮ್ಮೇಳನಾಧ್ಯಕ್ಷರ ಭಾಷಣ, ಬೆಳ್ಳಿ ಬಿಟ್ಟ ಬಳ್ಳಿ ಮಾಲೆ, ಮಕ್ಕಳ ಪುಸ್ತಕಮಾಲೆ ಮುಂತಾದ ಕಾರ‍್ಯಕ್ರಮಗಳು. ಮಾಸ್ತಿಯವರ ‘ಜೀವನ’ ಪತ್ರಿಕೆಯ ಸಂಪಾದಕತ್ವ ಹಲವಾರು ವರುಷ. ರಚಿಸಿದ ಕೃತಿಗಳು ಹಲವಾರು. ಭಾಷಾವಿಜ್ಞಾನ-ದ್ರಾವಿಡ ಭಾಷಾ ವಿಜ್ಞಾನ, ಭಾರತದ ಭಾಷಾ ಸಮಸ್ಯೆ, ಭಾಷಾ ವಿಜ್ಞಾನಿಗಳು. ಸಂಪಾದಿತ-ಪಂಪಭಾರತ ಸಂಗ್ರಹ, ಭರತೇಶ ವೈಭವ, ಧನ್ಯಕುಮಾರ ಚರಿತ್ರೆ, ನೇಮಿನಾಥ ಪುರಾಣ, ಶಾಂತಿ ಪುರಾಣ. ಕಾದಂಬರಿ-ನಾಗಶ್ರೀ, ಸವ್ಯಸಾಚಿ ಪಂಪ. ಜಾನಪದ-ಕರ್ನಾಟಕದ ಜಾತ್ರೆಗಳು, ಜಾನಪದ ಕಲಾವಿದರ ಸೂಚಿ, ಲಂಡನ್ ವಿಶ್ವವಿದ್ಯಾಲಯದಿಂದ ಬಾಹುಬಲಿ ಅಂಡ್ ಬಾದಾಮಿ ಚಾಲುಕ್ಯಾಸ್ ಕೃತಿ ಬಿಡುಗಡೆ. ಭಾಗವಹಿಸಿದ ಸಮ್ಮೇಳನ, ಗೋಷ್ಠಿ, ಪ್ರಶಸ್ತಿಗಳು ಹಲವಾರು. ಕಾಸರಗೋಡು ಕನ್ನಡಿಗರ ಸಮ್ಮೇಳನಾಧ್ಯಕ್ಷತೆ, ಹೈದರಾಬಾದ್ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ. ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಕಾವ್ಯಾನಂದ ಪುರಸ್ಕಾರ, ತಮ್ಮಣರಾವ ಅಮ್ಮಿನಭಾವಿ ಸ್ಮಾರಕ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಶಂಬಾ ಜೋಶಿ ಪ್ರಶಸ್ತಿ, ಆಚಾರ್ಯ ಸುಮತಿ ಸಾಗರ ಶ್ರುತ ಸಂವರ್ಧನ ಪುರಸ್ಕಾರ. ವಿದ್ಯಾರ್ಥಿಗಳು, ಹಿತೈಷಿಗಳು ಅರ್ಪಿಸಿದ ಗೌರವ ಗ್ರಂಥ ಪಚ್ಚೆತೆನೆ, ಸಂಕೃತಿ ಸೇರಿ ಐದು ಗ್ರಂಥಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ಟಿ.ಕೆ. ರಾಮರಾವ್ – ೧೯೩೧-೧೧.೧೧.೮೮ ಬಿ.ವಿ. ವೀರಭದ್ರಪ್ಪ – ೧೯೩೫ ಟಿ.ಆರ್. ರಾಧಾಕೃಷ್ಣ – ೧೯೪೦ ಮೋಹನ ನಾಗಮ್ಮನವರ – ೧೯೬೩

Details

Date:
October 7, 2023
Event Category: