Categories
ಶರಣರು / Sharanaru

ಅಮುಗೆ ರಾಯಮ್ಮ

ಅಂಕಿತ: ಅಮುಗೇಶ್ವರಲಿಂಗ

ಈಕೆ ಅಮುಗಿ ದೇವಯ್ಯಗಳ ಪತ್ನಿ. ಇವಳಿಗೆ ‘ವರದಾನಿಯಮ್ಮ’ ಎಂಬ ಬೇರೊಂದು ಹೆಸೆರಿರುವಂತೆ ತಿಳಿದುಬರುತ್ತದೆ. ಮೂಲತಃ ಸೊಲ್ಲಾಪುರದವಳಾದ ಈಕೆ ಪತಿಯೊಂದಿಗೆ ಕಲ್ಯಾಣಕ್ಕೆ, ಬಳಿಕ ಪುಳುಜೆಗೆ ಬಂದು ಅಲ್ಲಿಯೇ ಐಕ್ಯವಾಗುತ್ತಾಳೆ. ಇವಳ ಹೆಸರಿನಲ್ಲಿ ೧೧೫ ವೆಚನಗಳು ಸಿಗುತ್ತವೆ. ಮುದ್ರಿಕೆ ‘ಅಮುಗೇಶ್ವರಲಿಂಗ’ ಈ ವಚನಗಳು ಅಚಾರಪ್ರಧಾನವಾಗಿವೆ. ತೀಕ್ಷ್ಣ ಸಮಾಜ ವಿಮರ್ಶೆ ಎದ್ದು ಕಾಣುತ್ತದೆ.