Categories
ಶರಣರು / Sharanaru

ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ

ಅಂಕಿತ: ಶುದ್ಧ ಸಿದ್ಧ ಪ್ರಸಿದ್ಧ ಕುರಂಗೇಶ್ವರಲಿಂಗ
ಕಾಯಕ: ರಾತ್ರಿ ಪ್ರಹರಿ ಮಾಡುವುದು

ಈತನಿಗೆ ಮುತ್ತಣ್ಣ ಎಂದೂ ಕರೆಯಲಾಗುತ್ತದೆ. ಕಾಯಕ: ರಾತ್ರಿ ಪ್ರಹರಿ ಮಾಡುವುದು. ‘ಶುದ್ಧ ಸಿದ್ಧ ಪ್ರಸಿದ್ಧ ಕುರಂಗೇಶ್ವರಲಿಂಗ” ಎಂಬುದು ಅಂಕಿತ. ಹನ್ನೊಂದು ವಚನಗಳು ದೊರೆತಿವೆ. ಎಲ್ಲವೂ ಎಚ್ಚರಿಕೆ ಕಾಯಕದ ಪರಿಭಾಷೆಯನ್ನು ಒಳಗೊಂಡು ಆಧ್ಯಾತ್ಮವನ್ನು ಬೋಧಿಸುತ್ತವೆ.

ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರನ್ನು ಒಂದು ವಚನದಲ್ಲಿ ನೆನೆದಿರುವನು, ತಪ್ಪು ಮಾಡುವವರನ್ನು ಎಚ್ಚರಿಸುವ ಧೋರಣೆ ಇವನ ವಚನಗಳಲ್ಲಿದೆ.

ಎನ್ನ ತನು ಬಸವಣ್ಣನ ಶುದ್ಧಪ್ರಸಾದವ ಕೊಂಡಿತ್ತು,
ಎನ್ನ ಮನ ಚೆನ್ನಸಬವಣ್ಣನ ಸಿದ್ಧಪ್ರಸಾದವ ಕೊಂಡಿತ್ತು,
ಎನ್ನ ಪ್ರಾಣ ಪ್ರಭುದೇವರ ಪ್ರಸಿದ್ಧಪ್ರಸಾದವ ಕೊಂಡಿತ್ತು.
ಇಂತೀ ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಕುರಂಗೇಶ್ವರಾ,
ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.