Categories
ಶರಣರು / Sharanaru

ಒಕ್ಕಲಿಗ ಮುದ್ದಣ್ಣ

ಅಂಕಿತ: ಕಾಮಭೀಮ ಜೀವಧನದೊಡೆಯ
ಕಾಯಕ: ಬೇಸಾಯ

ಜೋಳದಹಾಳೆಂಬ ಗ್ರಾಮಕ್ಕೆ ಸೇರಿದವನಾದ ಈತ ಬೇಸಾಯ ವೃತ್ತಿಯನ್ನು ಕೈಕೊಂಡು ಬದುಕು ಸಾಗಿಸಿದವನು. ಕಾಲ = ೧೧೬೦. ಜಂಗಮ ದಾಸೋಹ ನಡೆಸುವುದು ಈತನ ನಿತ್ಯವ್ರತ. ರಾಜನು ಕೇಳಿದ ಹೆಚ್ಚಿನ ತೆರಿಗೆಯನ್ನು ಕೊಡದೆ ಆ ಹಣವನ್ನು ದಾಸೋಹಕ್ಕಾಗಿ ವಿನಿಯೋಗಿಸುತ್ತಾನೆ. ‘ಕಾಮಭೀಮ ಜೀವಧನದೊಡೆಯ’ ಅಂಕಿತದಲ್ಲಿ ರಚಿಸಿದ ೧೨ ವಚನಗಳು ದೊರೆತಿವೆ. ಒಕ್ಕಲುತನ ವೃತ್ತಿಯ ಪರಿಭಾಷೆ, ಮುಗ್ಧ ಭಕ್ತಿ, ಸರಳ-ಪ್ರಾಸಾದಿಕ ಶೈಲಿಯಿಂದ ಅವು ಕಳಕಳಿಸುತ್ತವೆ.

ಬೇಸಾಯದ ಪರಿಭಾಷೆಯಲ್ಲಿ ಆಧ್ಯಾತ್ಮಿಕ ವಿಷಯಗಳನ್ನು ಪ್ರಸ್ತಾಪಿಸುವನು. ಚಾತುರ್ವಣ್ರ್ಯಗಳಲ್ಲಿ ಮೊದಲ ಮೂರನ್ನು ಹೇಳಿ, ಕೊನೆಯದಾದ ಶೂದ್ರನನ್ನು ಹೇಳುವಾಗ ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ ಎಂದು ತನ್ನ ಇಷ್ಟದೈವದಲ್ಲಿ ಪ್ರಾರ್ಥಿಸುವನು.