Categories
ಶರಣರು / Sharanaru

ಕನ್ನಡಿ ಕಾಯಕದ ರೇವಮ್ಮ

ಅಂಕಿತ: ಸದ್ಗುರುಸಂಗನಿರಂಗಲಿಂಗ
ಕಾಯಕ: ಕ್ಷೌರಿಕ (ಕನ್ನಡಿ ಕಾಯಕ)

ಈಕೆಗೆ ರೇಮಮ್ಮ, ರೆಮ್ಮವ್ವೆ ಎಂಬ ಪರ್ಯಾಯ ನಾಮಗಳೂ ಕಂಡುಬರುತ್ತವೆ. ಹೆಸರಿನ ಹಿಂದೆ ಸೇರಿದ ವಿಶೇಷಣದಿಂದ ಈಕೆ ಕ್ಷೌರಿಕ ಕುಟುಂಬಕ್ಕೆ ಸೇರಿದವಳೆಂದು ತಿಳಿಯುತ್ತದೆ. ‘ಕನ್ನಡಿ ಕಾಯಕದ ಅಮ್ಮಿದೇವಯ್ಯ ಎಂಬ ಒಬ್ಬ ವಚನಕಾರನೂ ಇದ್ದು, ಈಕೆಗೂ ಅವನಿಗೂ ಸಂಬಂಧವಿರಬಹುದು. ಕಾಲ-೧೧೬೦. ‘ಸದ್ಗುರು ಸಂಗ ನಿರಂಗಲಿಂಗ’ ಅಂಕಿತದಲ್ಲಿ ಒಂದು ವಚನ ಮಾತ್ರ ದೊರೆತಿದೆ. ಅದರಲ್ಲಿ ವ್ರತಾಚಾರನಿಷ್ಠೆ, ಪ್ರಸಾದಪ್ರೀತಿ, ಗಣಾಚಾರದ ಗಡುಸು ಕಂಡುಬರುತ್ತದೆ.