Categories
ವಚನಗಳು / Vachanagalu

ಕುಷ್ಟಗಿ ಕರಿಬಸವೇಶ್ವರರ ವಚನಗಳು

ಭವಿಜನ್ಮವ ಕಳದು ಭಕ್ತನ ಮಾಡಿದರಯ್ಯ.
ಪಂಚಭೂತದ ಪ್ರಕೃತಿಯ ಕಳದು ಪ್ರಸಾದಕಾಯವ ಮಾಡಿದರಯ್ಯ.
ಅಂಗೇಂದ್ರಿಯಂಗಳ ಕಳದು ಲಿಂಗೇಂದ್ರಿಯಂಗಳ ಮಾಡಿದರಯ್ಯ.
ಅಂಗವಿಷಯಭ್ರಮೆಯಂ ಕಳದು
ಲಿಂಗವಿಷಯಭ್ರಾಂತನ ಮಾಡಿದರಯ್ಯ.
ಅಂಗಕರಣಂಗಳ ಕಳದು
ಲಿಂಗಕರಣಂಗಳ ಬೆಸಸುವಂತೆ ಮಾಡಿದರಯ್ಯ.
ಕುಲಸೂತಕ ಛಲಸೂತಕ ತನುಸೂತಕ ನೆನವುಸೂತಕ ಭಾವಸೂತಕ
ಇಂತೀ ಸೂತಕವೆಂಬ ಭ್ರಾಂತನು ಬಿಡಿಸಿ
ನಿಭ್ರಾಂತನ ಮಾಡಿ ರಕ್ಷಿಸಿದ ಶ್ರೀಗುರುದೇವಂಗೆ
ನಮೋ ನಮೋ ಎಂಬೆನಯ್ಯ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ. /1
ಭವತಿಮಿರಜ್ಞಾನದಿಂದ ಮುಸುಕಿಕೊಂಡು
ಕಣ್ಗಾಣದಿದ್ದವಂಗೆ ಜ್ಞಾನವೆಂಬಂಜನವನೆ ಹಚ್ಚಿ
ಶಿವಪ್ರತಾಪವಿದೆಯೆಂದು ತೋರಿಸಿದ
ಸದ್ಗುರುದೇವಂಗೆ ನಮೋ ನಮೋ ಎಂಬೆನಯ್ಯ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ. /2
ಭವಾರಣ್ಯದಲ್ಲಿ ಪ್ರವೇಶಿಸುತ್ತಿಪ್ಪವಂಗೆ,
ಬೆಂದಜ್ಞಾನದಿಂದ ಸುತ್ತುತ್ತ
ಹಿಂದು ಮುಂದು ಎಡ ಬಲ ಆದಿ ಆಕಾಶ
ನಡುಮಧ್ಯ ಆವುದೆಂದರಿಯದವಂಗೆ,
ಇರುವುದಕ್ಕೆ ಇಂಬುಗಾಣದವಂಗೆ,
ಶಿವತತ್ವವೆ ಆಶ್ರಯ ಇದೆಯೆಂದು ತೋರಿದ
ಸದ್ಗುರುದೇವಂಗೆ ನಮೋ ನಮೋ ಎಂಬೆನಯ್ಯ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./3
ಹಲವು ಜಲ್ಮಂಗಳಲ್ಲಿ ತೊಳಲಿ ಸಂಕಲ್ಪ ಕಟ್ಟಿ
ಪಾಪಗಳೆಂಬ ಕರ್ಮಂಗಳ ಸುಟ್ಟು ಶುದ್ಧಿಸಿ ಪ್ರಕಟಿಸಿ ತೋರಿದ
ಸದ್ಗುರುವಿಂಗೆ ನಮೋ ನಮೋ ಎಂಬೆನಯ್ಯ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./4
ಗುರುವೆ ಪರಮೇಶ್ವರನೆಂದು ಭಾವಿಸಬೇಕು ನೋಡಾ.
ಎರಡೆಂದು ಪ್ರಕೃತಿಯ ತೋರಿದರೆ ಅದು ಅಜ್ಞಾನ ನೋಡಾ.
ಇದು ಕಾರಣ, ಆವನಾನೋರ್ವನು ಎರಡೆಂದು ಭಾವಿಸಿದಡೆ
ಅವನಿಗೆ ಅನೇಕಕಾಲ ನರಕದ ಕುಳಿಯೊಳಗೆಯಿಪ್ಪುದು ತಪ್ಪದು ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./5
ಶಿವಾಶ್ರಯದಲ್ಲಿ ಜನಿಸಿ ಭವಾಶ್ರಯವ ನೆನೆವ
ಭಂಡರ ಮುಖವ ನೋಡೆ ನೋಡೆ.
ಶಿವಾಶ್ರಯವೆ ಶ್ರೀಗುರುನಾಥನ ಕರಕಮಲವೆಂಬ ಪರಿ.
ಭವಾಶ್ರಯವೆ ತನ್ನ ಹಿಂದಣ ಪೂರ್ವದ ಭವಿ
ತಾಯಿ ತಂದೆ ಬಂಧು ಬಳಗವೆಂಬ ಪರಿ.
ಇದು ಕಾರಣ ಗುರುಕರಜಾತನಾಗಿ ನರರ ಹೆಸರ ಹೇಳಿ
ಹಾಡಿ ಹೊಗಳಿಸುವ ನರಕಿ ಭವಿಯ ಎನಗೊಮ್ಮೆ ತೋರದಿರಾ.
ಆ ಕುಲಗೆಟ್ಟ ಹೊಲೆಯರ ಮುಖವ ನೋಡಲಾಗದು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./6
ಗುರೂಪದೇಶವ ಪಡೆದು ಗುರುಪುತ್ರನೆನಿಸಿಕೊಂಡ ಬಳಿಕ
ಹಿಂದಣ ತಾಯಿ ತಂದೆ ಬಂಧು ಬಳಗವ ನೆನೆಯದಿರಿರೋ.
ಕುಲಗೆಟ್ಟ ಹೊಲೆಯರಿರ ನೆನೆದರೆ ನಿಮಗೆ ಶಿವದ್ರೋಹ ತಪ್ಪದು.
ನಿಮಗೆ ತಂದೆ ತಾಯಿ ಬಂಧು ಬಳಗವ ಹೇಳಿಹೆನು ಕೇಳಿರೊ.
‘ಗುರುದೈವಾತ್ ಪರಂ ನಾಸ್ತಿ’ ಎಂದುದಾಗಿ,
ಗುರುವೇ ತಾಯಿ, ಗುರುವೇ ತಂದೆ, ಗುರುವೇ ಬಂಧುಬಳಗವೆಂದು
ನಂಬಬಲ್ಲಡೆ ಆತನೆ ಶಿಷ್ಯನೆಂಬೆ, ಆತನೆ ಭಕ್ತನೆಂಬೆ.
ಅಲ್ಲದಿರ್ದಡೆ ಭವಿಯೆಂಬೆ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./7
ಸುರತರು ತರುಗಳೊಳಗಲ್ಲ.
ಸುರಧೇನುವದು ಪಶುವಿನೊಳಗಲ್ಲ.
ಪರುಷ ಪಾಷಾಣದೊಳಗಲ್ಲ.
ಶಿಷ್ಯನ ಭಾವಕ್ಕೆ ಗುರು ನರನಲ್ಲ.
ನರನೆಂದರೆ ನರಕ ತಪ್ಪದು.
ಗುರುವೆ ಪರಶಿವನೆಂದು ಭಾವಿಸಬಲ್ಲಡೆ ಆತನೆ ಶಿಷ್ಯನೆಂಬೆ,
ಆತನೆ ಭಕ್ತನೆಂಬೆ, ಅಲ್ಲದಿರ್ದಡೆ ಭವಿಯೆಂಬೆ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./8
ಗಂಡನಿಂದ ಹೆಂಡತಿ ಮೊದಲು ಹುಟ್ಟಿದಳು,
ಆ ಗಂಡನಿಂದ ಕಿರಿಯಳಲ್ಲದೆ ಹಿರಿಯಳಲ್ಲವಯ್ಯ.
ಗುರುವಿನಿಂದ ಈ ಶಿಷ್ಯ ಅರಿವುಳ್ಳವನಾದರೆ
ಭೃತ್ಯನಲ್ಲದೆ ಕರ್ತನಲ್ಲವಯ್ಯ.
ಕುದುರೆಯ ಹಿಡಿವಂತ ಡಾಣಕ
ರಾವುತಿಕೆಯ ಮಾಡಿದರೊಪ್ಪುವರೆ ?
ಆಳಾಗಿದ್ದವನು ಅರಸಾಗಿದ್ದರೊಪ್ಪುವರೆ ?
ತಂದೆಗೆ ಮಗ ದೊಡ್ಡವನಾಗಬಲ್ಲನೆ ?
ಇದು ಕಾರಣ ಶಿಷ್ಯರಿಗೆ ಭಯಭಕ್ತಿ ಕಿಂಕುರ್ವಾಣವಿರಬೇಕು.
ಇಲ್ಲದಿರ್ದಡೆ ಅವ ಶಿಷ್ಯನಲ್ಲ, ಶಿವಭಕ್ತನಲ್ಲ.
ಅವ ಭವಿಯೆಂಬೆ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./9
ಆದಿಯ ಪರಮೇಶ್ವರ ತನ್ನ ವಿನೋದಾರ್ಥಕಾರಣಕ್ಕಾಗಿ
ಮರ್ತ್ಯಲೋಕದೊಳು ರೂಪಾಗಿ ಸುಳಿದರೆ
ಭೇದವ ಮಾಡಿ ನುಡಿವ ದರುಶನ ಪರವಾದಿಗಳ ಬಾಯಲ್ಲಿ
ಪಾದರಕ್ಷೆಯನಿಕ್ಕುವೆ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ. /10
ಲಿಂಗದ ನೆಲೆಯನರಿಯದವಂಗೆ,
ಜಂಗಮವ ಜಡನೆಂದವಂಗೆ,
ಗುರುವ ನರನೆಂದವಂಗೆ,
ಪರಮಪ್ರಸಾದ ಎಂಜಲೆಂದವಂಗೆ
ಕುಂಭೀನರಕ ತಪ್ಪದು ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./11
ಗುರುಮುಖದಲ್ಲಿ ಕೊಂಬುದು ಗುರುಪ್ರಸಾದ.
ಲಿಂಗಮುಖದಲ್ಲಿ ಕೊಂಬುದು ನಿತ್ಯಪ್ರಸಾದ.
ಜಂಗಮಮುಖದಲ್ಲಿ ಕೊಂಬುದು ಜ್ಞಾನಪ್ರಸಾದ.
ಜ್ಞಾನಮುಖದಲ್ಲಿ ಕೊಂಬುದು ಸಿದ್ಧಪ್ರಸಾದ.
ಇಂತೀ ಪ್ರಸಾದ ನಾಲ್ಕು ಸ್ಥಿರನಲ್ಲದೆ ಭ್ರಾಂತುಗೊಂಡ
ಬ್ರಹ್ಮರಾಕ್ಷಸನಂತೆ ಉಂಡುಂಡುಳುಹಿಬಿಟ್ಟು ಹೋಗುವ
ಭಂಡರ ಭಕ್ತಿಯ ಯಮಗುಂಡದೊಳಗಿಕ್ಕುವೆ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./12
ತ್ರಿವಿಧ ತೀರ್ಥ, ತ್ರಿವಿಧ ಪ್ರಸಾದ,
ತ್ರಿವಿಧ ಲಿಂಗ, ತ್ರಿವಿಧ ಪೂಜೆ,
ತ್ರಿವಿಧ ಮಾಟ, ತ್ರಿವಿಧ ಕೂಟವಲ್ಲದೆ
ಅನ್ಯರೊಳಾಡುವ ಆಟ ನೋಟ ಮಾಟ ಕಾಳಕೂಟ
ಗಿರಿಯಕ್ಕೆ ನಿಘಾಟ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./13
ಪ್ರಣಮದ ಮಂತ್ರ, ಪ್ರಣಮದ ಯಂತ್ರ,
ಪ್ರಣಮದ ತಂತ್ರ, ಪ್ರಣಮದ ಕಾರ್ಯ,
ಪ್ರಣಮದ ಕರಣ, ಪ್ರಣಮದ ಭಕ್ತಿ,
ಪ್ರಣಮವಲ್ಲದೆ ಅನ್ಯಮಂತ್ರ ತಂತ್ರ ಯಂತ್ರ ನಿಜಕ್ಕೆ ಸ್ವತಂತ್ರವಿಲ್ಲ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./14
ಕಾಲನ ಸುಟ್ಟ ಭಸಿತವಲ್ಲ.
ಕ್ರಮದಿಂದ ಕಾವನ ಸುಟ್ಟ ಭಸಿತವಲ್ಲ.
ತ್ರಿಶೂಲಧರ ತ್ರಿಪುರವ ಸುಟ್ಟ ಭಸಿತವಲ್ಲ.
ತ್ರಿಜಗವ ನಿರ್ಮಿಸಿದ ಭಸಿತವ ತಿಳಿದು
ಲಲಾಟಕ್ಕೆ ಧರಿಸಲು ತ್ರಿಯಂಬಕ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ. /15
ಕ್ಷುದ್ರ ಕುಚೇಷ್ಟೆ ಕುಟಿಲವ ಛಿದ್ರವೀತವಮಾಡುವ
ಭದ್ರಬಲವ ಕೊಡುವ ರುದ್ರಾಕ್ಷಿಯ ಧರಿಸಿದ ಭಕ್ತರ
ನಿದ್ರೆ ಸುಷುಪ್ತಿ ಜಾಗ್ರದಲ್ಲಿ [ಕಂಡರೆ] ಹೊದ್ದೇರಿದ ಪಾಪ
ಹೋಗುವುದು ಕಾಣಾ.
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./16
ಆಜ್ಞೆ ಸಹಿತೆ ಗುರು, ಆಜ್ಞೆ ಸಹಿತೆ ಲಿಂಗ,
ಆಜ್ಞೆ ಸಹಿತೆ ಜಂಗಮ, ಆಜ್ಞೆ ಸಹಿತೆ ಭಕ್ತ,
ಆಜ್ಞೆ ಸಹಿತೆ ದಾಸೋಹಿ,
ಆಜ್ಞೆ ಸಹಿತೆ ಅರುವತ್ತಾರು ಶೀಲ.
ಆಜ್ಞೆ ಸಹಿತೆ ವ್ರತ ನೇಮ ನಿತ್ಯ,
ಆಜ್ಞೆ ಯನತಿಗಳೆದವ ಅನಾಚಾರಿ,
ಅವನ ಮುಖವ ನೋಡಲಾಗದು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./17
ಕುಲವೆಣ್ಣ ಬಿಟ್ಟು ಬೆಲೆವೆಣ್ಣಿಗೆ ಮನವನಿಟ್ಟ
ಆ ಹೊಲೆಯನ ತಲೆಯೆತ್ತಿ ನೋಡದಿರಾ ಮನವೆ.
ಅವ ಗುರುದ್ರೋಹಿ, ಲಿಂಗದ್ರೋಹಿ, ಜಂಗಮದ್ರೋಹಿ,
ಪ್ರಸಾದದ್ರೋಹಿ, ಶಿವದ್ರೋಹಿ.
ಅವ ಪಂಚಮಹಾಪಾತಕಿ ಪಾಷಂಡಿ.
ಅವನ ಮುಖವ ನೋಡಲಾಗದು ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./18
ಮಲಮೂತ್ರದ ಬಿಲದಲ್ಲಿ ಕೆಲಗಯ್ಯನಿಕ್ಕಿ,
ಮಾಂಸದ ಮೊಟ್ಟೆಯ ಬಲಗೈಯೊಳಿಡಿದು,
ಎಲುವಿನ ಮೇಲಣ ಚರ್ಮವ ಅಧರ ಮಧುರವೆಂದು
ನಿತ್ಯ ಕಡಿತಿಂಬ ಹೊಲೆಯರಿಗೆ ಎಲ್ಲಿಯದೊ ಶಿವಾಚಾರ ಕುಲಾಚಾರ ?
ಶೀಲ ವ್ರತ ನೇಮ ನಿತ್ಯ ಶಿವದ್ರೋಹಿಗೆಲ್ಲಿಯದೊ ? ಇಲ್ಲ,
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./19
ಪಾಕುಳದ ಆಗರದ ಮೂತ್ರದ ಕುಳಿಯೊಳು
ಮುಳುಗಾಡುವವಂಗೆ ಸ್ತೋತ್ರ ಮಂತ್ರ ಜಪ ತಪ
ಹೋಮ ನೇಮ ಧ್ಯಾನ ಸಮಾಧಿ ಅಷ್ಟವಿಧಾರ್ಚನೆಯೇಕೊ?
ಭೈತ್ರಕ್ಕೆ ಗುಂಡನಿಕ್ಕಿದಂತಿರಬೇಕು ಬಲ್ಲವರು ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./20
ತಸ್ಮದ ಮೇಲಣ ಕಿಸುಕುಳದ ಕುಳಿಯೊಳು ಬಿದ್ದು
ನಿರ್ಧರವಿಲ್ಲದೆ ದೆಸೆಗಾಣದೆ ಜೀವದಭ್ಯಸಕ್ಕಾಗಿ
ಹುಸಿಯ ನುಡಿವ ಹುಸಿಯ ಹೊಲೆಯಂಗೆ
ಬಸವಭಕ್ತಿಯೆಲ್ಲಿಯದೊ? ಇಲ್ಲ,
ಅಖಂಡ ಪರಿಪೂರ್ಣ ಘನಲಿಂಗ ಗುರುಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./21
ಬಚ್ಚಲಕುಳಿಯೊಳು ನಿಚ್ಚ ಮುಳುಗಾಡುವಂಗೆ
ಉಚ್ಚೆಯಮುಖದೊಳು ಮುಖವಿಟ್ಟು
ಮುಸುಡೆಯ ಕಚ್ಚಿ ಕಡಿವ ಹುಚ್ಚು ಹುಳಿತ
ನಾಯಿಗೆಲ್ಲಿಯದೊ? ಇಲ್ಲ.
ಅಚ್ಚಪ್ರಸಾದ, ನಿಚ್ಚಪ್ರಸಾದ ಆಚಾರ-ವಿಚಾರ
ಅನಾಚಾರಿಗೆಲ್ಲಿಯದೊ? ಇಲ್ಲ.
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./22
ಅಗಸಗಿತ್ತಿ, ನಾಯಿದಗಿತ್ತಿ, ಬಸ್ತಿಯ ಜೈನಗಿತ್ತಿ,
ಬೆಸ್ತ ಬೇಡತಿ ಹೊಸಮಾದಗಿತ್ತಿ,
ಹೊಲತಿ ಡೊಂಬತಿ ಹಸಲಗಿತ್ತಿ
ಹದಿನೆಂಟು ಜಾತಿಯ ಎಂಜಲವ ಭುಂಜಿಸುವ
ತೊಂಬಲಗಳ್ಳರಿಗೆ ಗುರುಲಿಂಗಜಂಗಮದ
ಪಾದೋದಕ ಪ್ರಸಾದವೆಲ್ಲಿಯದೊ? ಇಲ್ಲ.
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./23
ಕುಗ್ಗಿನ ಕುಳಿ, ಸಿಳ್ಳಿನ ಗುಳ್ಳೆ, ಸೀಳ್ವಿನ ಕೋವಿ,
ನಾರು ಹೋಮ ಬುಗ್ಗಿಚ್ಚುಗುಟ್ಟಿ
ತಗ್ಗಿನ ಡೊಗರಿನೊಳು ಬಿದ್ದು
ಸಿಗ್ಗಡಿಯದೆ ಸಿಕ್ಕದ ಶಿಖಂಡಿ ಮುಗ್ಗುಲಮುದಿ
ಮೂಕೊರೆಯನ ಮುಖವ ನೋಡಲಾಗದು ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./24
ಹೇಲುಚ್ಚೆಯ ಕೊಂಡ ಜೋಲುವ ಕಂಡ
ಮೇಲೆ ನಾರುವ ಬಾಯಿ
ಇವು ಮೂರು ಹೇಹವೆಂದರಿಯದೆ
ಹೆಚ್ಚುನುಡಿ ಬಣ್ಣವಿಟ್ಟುಕೊಂಬ
ಉಚ್ಚೆಯ ಕುಡಿವವರ ಬಾಳು
ಕೆಚ್ಚಲ ಕಚ್ಚಿದ ಉಣ್ಣೆಯ ತೆರನಂತೆ.
ನಚ್ಚದಿರು ನಾರಿಯರ ಮೋಹವ.
ಕರ್ಮದ ಕಾಳಕಿಚ್ಚು ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./25
ಮಿಥ್ಯಾದೇವತೆಯ ಸೂಳೆ ಅತ್ತಿಗೆ ನಾದಿನಿ ಅತ್ತೆ
ತೊತ್ತು ಅಕ್ಕ ತಂಗಿ ಹೆತ್ತತಾಯೆಂದರಿಯದೆ
ತಕರ್ೈಸಿಕೊಂಬ ತೊತ್ತಿನ ಮಕ್ಕಳಿಗೆ
ನಿರ್ವಾಣಲಿಂಗದ ಪಾದಸೇವೆಯೆಲ್ಲಿಯದೊ? ಇಲ್ಲ.
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./26
ಅತ್ತ ಬರುವ ಹಾದರಗಿತ್ತಿ, ಕೊಂತದ ಗೊರವಿತಿ,
ಬಟ್ಟೆಯ ಬಸವಿ, ಚಾಮರಗಿತ್ತಿ, ಸಂತೆಯ ಸೂಳೆ,
ಕವುಚವನರಿಯದ ಹಲುಗಿತ್ತಿಯರ ಸಂಗವ ಮಾಡುವ
ಪಂಚಮಹಾಪಾತಕರ ಮುಖವ ನೋಡಲಾಗದು ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./27
ಹದಿರಿನ ಹಗರಣಗಿತ್ತಿ, ಚದುರಿನ ತಿಗುಳತಿ,
ಕುದುರೆ ಗೋವನ ಸತಿಯ ಸಂಗವ ಮಾಡುವ
ಸದರದ ಸೂಳೆಯಮಕ್ಕಳ ಮುಖವ ನೋಡಲಾಗದು ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./28
ಭವಿತನಕ್ಕೆ ಹೇಸಿ ಭಕ್ತನಾಗಿ
ಭವ ಸಲ್ಲದೆ ಮತ್ತೆಯೂ ಭವಿಯ ಮನೆಯ ಹೊಕ್ಕು
ಹೋಗಿ ಉಂಡನಾದರೆ ತಿಂಗಳು ಸತ್ತ ಕತ್ತೆಯ ಮಾಂಸವ
ತುತ್ತು ತುತ್ತಿಂಗೆ ಗದ್ಯಾಣ ತೂಕವ ತೂಗಿ ತಿಂದ ಸಮಾನ.
ಅವನನು ಭಕ್ತನೆನಲಾಗದು ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿನಸಾಕ್ಷಿಯಾಗಿ./29
ಊರೆಲ್ಲ ಹೇತ ಹೇಲ ಹಂದಿ ತಿಂದು ತನ್ನೊಡಲ ಹೊರೆವುದು.
ತಾ ಹೇತ ಹೇಲ ತಾ ಮುಟ್ಟದು.
ಮತ್ತೆ ಆ ಭವಿಯ ತಂದೆ-ತಾಯಿ ಬಂಧು-ಬಳಗವೆಂದು
ಅವರಲ್ಲಿ ಹೊಕ್ಕು ಹೋಗಿ ಉಂಡವರ ಭಕ್ತಿ
ಹಂದಿಗಿಂದ ಕರಕಷ್ಟ.
ಅವನ ಭಕ್ತನೆನಲಾಗದು ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./30
ಚಿತ್ರದಬೊಂಬೆ ರೂಪಾಗಿದ್ದರೇನು?
ಚೈತನ್ಯವಿಲ್ಲದ ಕಾರಣ ಪ್ರಯೋಜನವಾದುದಿಲ್ಲ.
ಹಾವುಮೆಕ್ಕೆಯ ಹಣ್ಣು ನುಣ್ಣಾಗಿದ್ದರೇನು ?
ಕಹಿ ಬಿಡದ ಕಾರಣ ಪ್ರಯೋಜನಕಾರಿಯಾದುದಿಲ್ಲ.
ಹತ್ತಿಯ ಹಣ್ಣು ಕಳಿತಿದ್ದರೇನು ?
ಕ್ರಿಮಿ ಬಿಡದ ಕಾರಣ ಪ್ರಯೋಜನಕಾರಿಯಾದುದಿಲ್ಲ.
ತಿಪ್ಪೆಯಗುಂಡಿಯ ನೀರು ತಿಳಿದಿದ್ದರೇನು?
ಅಮೇಧ್ಯ ಬೆರೆದ ಕಾರಣ ಪ್ರಯೋಜನಕಾರಿಯಾದುದಿಲ್ಲ.
ಭಕ್ತನಾದೆನೆಂಬ ಸಂತವ ತಾಳಿದರೇನು?
ತೊತ್ತಿಗೆ ಸಿರಿಬಂದರೇನು?
ಹಿತ್ತಲಿಗೆ ತಳೆಯ ಹಿಡಿಸುವಂತೆ.
ಕರ್ತೃ ಕ್ರೀಯವಿಲ್ಲದವನ ಭಕ್ತಿ ಕತ್ತೆ ನಾಯಂತೆ.
ಅವನಿಗೆ ಸತ್ಯವಿಲ್ಲ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./31
ಜೇನುತುಪ್ಪದೊಳು ಬಿದ್ದ ನೊಣವಿನಂತೆ,
ಕಾನನದೊಳು ಕಣ್ಣಕಟ್ಟಿ ಬಿಟ್ಟ ಮರುಳನಂತೆ,
ಎಲುವ ಕಡಿವ ಶ್ವಾನನಂತೆ, ಮಲವ ಭುಂಜಿಸುವ ಸೂಕರನಂತೆ,
ಮಾನಿನಿಯರಿಗೆ ಮೆಚ್ಚಿ ಕೆಡದಿರು ಮನವೆ; ಅಭಿಮಾನಹಾನಿ.
ಲಿಂಗ ಅಭಿಮಾನಿಯಾಗಿರು ಕಂಡ್ಯಾ ಮನವೆ
ನಿತ್ಯ ಮುಕ್ತಿ ಬೇಕಾದಡೆ.
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./32
ಪುರಜನಂಗಳ ಮೆಚ್ಚಿಸುವರೆ ಪುರಪತಿಯೆ ಶರಣು ?
ಪರಿಜನಂಗಳ ಮೆಚ್ಚಿಸುವರೆ ಹಾದರಗಿತ್ತಿಯೆ ಶರಣು ?
ಸರ್ವಜನಂಗಳ ಮೆಚ್ಚಿಸುವರೆ ಸಂತೆಯ ಸೂಳೆಯೆ ಶರಣು ?
ತನ್ನ ಲಿಂಗವ ನಚ್ಚಿ ಮೆಚ್ಚೆ ಮುಕ್ತಿಗೆ ಇದೊಂದಚ್ಚು.
ಮುಂದೆ ನಿಂದಕರೆದೆಯ ಸುಡುವ ಕಿಚ್ಚು ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./33
ಕಾಲ ಕಾಮನ ಗೆಲುವುದಕ್ಕೆ
ಉಪಾಯವಿದೇನೆಂದು ಆಲೋಚನೆಯ ಮಾಡುವೆಯ ಮನವೆ ?
ನರಿ ನಾಯ ಜಗಳಕ್ಕೆ ಆನೆಯ ಪವುಜನದಕಿಕ್ಕುವರೆ ಮನವೆ ?
ಸುಜ್ಞಾನವೆಂಬ ಆನೆಯನೇರಿ
ಅಜ್ಞಾನವೆಂಬ ನಾಯಿಗಳಿಗೆ ಅಂಜದಿರು ಮನವೆ,
ಅಳುಕದಿರು ಮನವೆ.
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./34
ಹಂದಿಗೆ ಅಂದಳವನಿಕ್ಕಿದರೆ ಅರಸಾಗಬಲ್ಲುದೆ ಅದು ?
ಕುನ್ನಿಗೆ ರನ್ನದ ಹಲ್ಲಣವ ಹಾಕಿದರೆ
ಕುದುರೆಯಾಗಬಲ್ಲುದೆ ಅದು ?
ಕನ್ನೆವೆಣ್ಣು ಕಲೆಯಸೂಳೆಯಾಗಬಲ್ಲಳೆ ಅವಳು ?
ಹೊನ್ನು ಕಬ್ಬುನವಾಗಬಲ್ಲುದೆ ?
ಬಿನ್ನಣದ ಭಕ್ತಿಯ ಮಾಡಿ ತಪ್ಪುವ
ಅನ್ಯಕಾರಿಗಳ ಮುಖವ ನೋಡಲಾಗದು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./35
ಒಬ್ಬರುತ್ತಮರೆಂಬರು.
ಒಬ್ಬರು ಕನಿಷ್ಠರೆಂಬರು.
ಒಬ್ಬರು ಅಧಮರೆಂಬರು.
ಒಬ್ಬರು ಕಷ್ಟನಿಷ್ಠೂರಿಯೆಂಬರು.
ಅಂದರದಕೇನು ಯೋಗ್ಯ?
ವಿನಯಕಂಪಿತ ಪರಮಾರ್ಥಕ್ಕೂ ಲೌಕಿಕಕ್ಕೂ ವಿರುದ್ಭ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ.
/36
ಗುರುಕೊಟ್ಟ ಕುರುಹ ಬಿಟ್ಟು
ನರರು ನಟ್ಟಕಲ್ಲಿಂಗೆ, ಒಟ್ಟಿದ ಮಣ್ಣಿಂಗೆ
ನಿಷ್ಠೆವೆರದು ನುಡಿವ ಭ್ರಷ್ಠ ಕನಿಷ್ಠ ಕರ್ಮಿಗಳ
ಮುಖವ ನೋಡಲಾಗದು.
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./37
ಉಡಿಯಲಿಂಗವ ಬಿಟ್ಟು, ಗುಡಿಯಲಿಂಗದ ಮುಂದೆ ನಿಂದು
ನುಡಿಗಳ ಗಡಣವ ಮಾಡುವ
ತುಡುಗುಣಿ ಕಳ್ಳುಗುಡಿ ಹೊಲೆಯರ ಮುಖವ ನೋಡಲಾಗದು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./38
ಮಿಂಡಂಗಯಿದರೆಡೆಯ ತೋರುವಳಲ್ಲದೆ ಸೂಳೆ,
ಗಂಡಂಗಯಿದರೆಡೆಯ ತೋರುವಳೆ ಹೆಂಡತಿ ?
ಆ ಕಳ್ಮಂಡ ಷಂಡ ಸವುಂಡ ಅಂಡರಂತೆ
ಕಂಡಕಂಡುದ ಪೂಜಿಸುವ ಭಂಡ ಮುಂಡೆ
ಮೂಕೊರೆಯನ ಮುಖವ ನೋಡಲಾಗದು,
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./39
ಒತ್ತೆಯ ಸೂಳೆ[ಗೆ] ಒತ್ತೆಯ ತೋರುವಂತೆ,
ಹೆತ್ತ ತಾಯಿಗೆ ಮಲತಾಯ ತೋರುವಂತೆ,
ಸತ್ಯಕ್ಕೆ ಅಸತ್ಯವ ತೋರುವ ಭಕ್ತಿಹೀನ
ತೊತ್ತುಗುಲವರಿದು ಸತ್ತಹಾಗೆ ಸುಮ್ಮನಿರಿರೆ.
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ. /40
ಮಾಳಿಗೆಯ ಮಣ್ಣು ಮಂಟಪಕ್ಕೆ ಸರಿಯೆ ?
ಆಳಿಂಗೆ ಅರಸು ಸರಿಯೆ ?
ಸೂಳೆಗೆ ಪತಿವ್ರತೆ ಸರಿಯೆ ?
ನಿವಾಳಿಸಿ ಬಿಟ್ಟ ವಾಳಿಮಾನವರಿಗೆ
ಮೇಳವಾಡಿ ಮುಕರಿದರೆ ಭಕ್ತಿಬೆಳವಿಗೆ ಸರಿಯೆ ?
ಅಗ್ಗ ಕೂಗಳಿಗೂಳರ ಮುಖವ ನೋಡಲಾಗದು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./41
ಅಂದಿನಕಾಲದ ಹನುಮ ಲಂಕೆಯ ಹಾರಿದನೆಂದು
ಇಂದಿನಕಾಲದ ಕಪಿ ಕಟ್ಟೆಯ ಹಾರುವಂತೆ,
ಅರಸುವೆಣ್ಣು ಉಪ್ಪರಿಗೆಯನೇರಿದಳೆಂದು
ತೊತ್ತು ತಿಪ್ಪೆಯನೇರುವಂತೆ,
ಕೊಮಾರ ಕುದುರೆಯನೇರಿದನೆಂದು
ಕೋಡಗ ಕುನ್ನಿಯನೇರುವಂತೆ,
ಆನೆ ಮದಸೊಕ್ಕಿ ಸೋಮಬೀದಿಯ ಸೂರೆಮಾಡಿತೆಂದು
ಆಡು ಮದಸೊಕ್ಕಿ ಬೇಡಗೇರಿಯ ಹೊಕ್ಕು ಕೊರಳ ಮುರಿಸಿಕೊಂಬಂತೆ,
ಉರದಮೇಲಣ ಗಂಡನ ಬಿಟ್ಟು
ಪರವೂರ ಮಿಂಡನ ಕೊಂಡಾಡುವ ಮಿಂಡಿನಾರಿಯಂತೆ
ಕಂಡಕಂಡುದ ಪೂಜಿಸುವ ಭಂಡಮುಂಡೆ
ಮೂಕೊರೆಯರ ಮುಖವ ನೋಡಲಾಗದು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./42
ತೊರೆಯೊಳಗಣ ಶಂಖು ಭೋರು ಭುಗಿಲೆಂದಿತೆಂದು
ಕೆರೆಯೊಳಗಣ ಗುಳ್ಳೆ ಕಿರಿಕಿರಿಯೆಂಬಂತೆ,
ಚಂದನ ಗಂಧ ಕಸ್ತೂರಿ ಕರ್ಪೂರ ಪುನಗು ಜವಾದಿ-
ಗಂಡನುಳ್ಳ ಹೆಂಡತಿಗೆ ಯೋಗ್ಯವಲ್ಲದೆ
ಮುಂಡೆಗೆಲ್ಲಿಯದೊ ? ಇಲ್ಲ,
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./43
ನಾಟ್ಯಸಾಲೆಯೊಳು ನಾಟ್ಯವನಾಡುವ ಹೆಣ್ಣು
ಝಣಝಣ ಕಿಣಿಕಿಣಿಯೆಂದರೆ
ಮುಸುರೆಯ ಮಡಕೆಯನು ತೊಳವುತ್ತ
ಮೂಕೊರೆಯ ತೊತ್ತು ಗುಣುಗುಣುಯೆಂಬಂತೆ,
ನವಿಲಾಡಿತೆಂದು ನಾಯಿ ಬಾಲವ ಬಡಕೊಂಬಂತೆ,
ಕೋಗಿಲೆ ಕೂಗಿತ್ತೆಂದು ಕುಕ್ಕುಟ ಪುಚ್ಚವ ತರಕೊಂಡಂತೆ,
ನಿಶ್ಚಯವಿಲ್ಲದವನ ಭಕ್ತಿ ಬಚ್ಚಲಬಾಲ್ವುಳುವಿನಂತೆ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./44
ಪುರಾತರ ಗೀತವನೋದಿ ಪುರಾತರ ಮಕ್ಕಳಾದಬಳಿಕ-
ಕಿರಾತರ ಮಕ್ಕಳಂತೆ ಹೊತ್ತಿಗೊಂದು ಬಗೆ
ದಿನಕ್ಕೊಂದು ಗುಣವ ನಡೆವುದಲ್ಲ,
ಭಕ್ತನೇನು ಮುಗಿಲಬೊಂಬೆಯೆ ?
[ಮೊಲೆ]ನಾಗರಕಾಟವೆ ? ಸುರಚಾಪವೆ ?
ಗೋಸುಂಬೆಯೆ ?
ನೋಡಿರೈ-ಕಡೆದು ಕಂಡಿಸಿದರೆ
ಕುಂದಣದ ಪುತ್ಥಳಿಯಂತೆ ನಿಜಗುಂದದಿರುವುದೀಗಲೇ ಭಕ್ತಸ್ಥಲ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./45
ಕಾಲದಗಂಡ, ಕರ್ಮದಗಂಡ, ವಿಧಿಯಗಂಡ,
ವಿಶಸನದಗಂಡ, ಇಹದಗಂಡ, ಪರದಗಂಡ,
ಅಂಗದ ಮೇಲೆ ಲಿಂಗವ ಧರಿಸಿ ಸಾವಿಗಂಜುವರೆ ?
ಸಂದೇಹಿಯಗಂಡ, ಸಂದೇಹ ನಿರ್ಲೆಪಕ್ಕೆ ಶರಣೈಕ್ಯ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./46
ಎಲ್ಲರು ಅಹುದೆಂಬ ಪ್ರಮಾಣವ ಕಾಣಿರೊ.
ಎಲ್ಲರು ಅಲ್ಲವೆಂಬ ಪ್ರಣಮ ಕಾಣಿರೊ.
ಇದು ಕಾರಣ ಶಿವಶರಣರ ಹೃದಯದ ಸ್ಥಾನವನರಿಯದ
ಶಿವದ್ರೋಹಿಗಳು ಅರಿಯದರಾಗಿ
ಎನ್ನ ಅಹುದಲ್ಲವೆಂಬುದ ಶ್ರೀ ಗುರುನಾಥನೆ ಬಲ್ಲ.
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./47
ಸಟ್ಟುಗ ಸವಿಯ ಬಲ್ಲುದೆ ?
ಅಟ್ಟ ಮಡಕೆ ಉಣ್ಣಬಲ್ಲುದೆ ?
ಕನಿಷ್ಠ ಹೀನ ಲಿಂಗದ ಕಟ್ಟಳೆಗೆ ಬರಬಲ್ಲನೆ ?
ಕರಕಷ್ಟ ಹೀನರಿರಾ ಸುಮ್ಮನಿರಿರೊ.
ಸೂಳೆಯ ಮಕ್ಕಳಿರ ಕಟ್ಟಳೆಗೆ ಬರದೆ,
ಘನದಲ್ಲಿ ಮನಮುಟ್ಟಿ ಹಿಮ್ಮೆಟ್ಟದೆ
ಆವನಿದ್ದಾತನೆ ಅಚ್ಚ ಭಕ್ತನೆಂಬೆ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./48
ನೀರಮಡಿಯ ಕಟ್ಟಿ ಬಯಲಿಗೆ ಬಲೆಯ ಬೀಸಬಹುದೆ ?
ಏರಿಗೆ ಅರಗ ತೋರಿ ಗಾಳಿಗೆ ಸೊಡರ ಹಿಡಿಯಬಹುದೆ ?
ಮಳಲಗೋಡೆಯನಿಕ್ಕಿ ಮಂಜಿನಮನೆಯ ಕಟ್ಟಿದರೆ
ಅದು ಅಸ್ಥಿರವಾಗುದಲ್ಲದೆ ಸ್ಥಿರವಾಗಬಲ್ಲುದೆ ?
ಹಲವು ಮುಖದಲ್ಲಿ ಜಿನುಗುವ ಭವಭಾರಿ ಮನುಜರಿಗೆ
ಶಿವಾಚಾರ ಅಳವಡದು ನೋಡಾ,
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./49
ಕೊರಡು ಕೊನರಬಲ್ಲುದೆ ?
ಬರಡು ಹಯನಾಗಬಲ್ಲುದೆ ?
ಕುರುಡಗೆ ಕನ್ನಡಿಯ ತೋರಿಸಿದರೆ ನೋಡಬಲ್ಲನೆ ?
ಮೂಕಂಗೆ ರಾಗವು ಹೊಳೆದರೆ ಹಾಡಬಲ್ಲನೆ ?
ಹೆಗ್ಗ ಬುದ್ಧಿಯ ಬಲ್ಲನೆ ?
ಲೋಗರಿಗೆ ಉಪದೇಶವ ಕೊಟ್ಟರೆ ಶಿವಭಕ್ತರಾಗಬಲ್ಲರೆ ?
ಶಿವಸತ್ಪದಸಂಪನ್ನರಾಗಲಲ್ಲದೆ
ಶಿವಾಚಾರ ಆಳವಡದು ನೋಡಾ,
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./50
ಕೆರೆಯನೊಡೆದ ಬಳಿಕ ತೂಬು ತಡೆಯಬಲ್ಲುದೆ ?
ಒಡಕ ಮಡಕೆಗೆ ಒತ್ತಿ ಮಣ್ಣ ಕೊಟ್ಟರೆ ನಿಲ್ಲಬಲ್ಲುದೆ ?
ಮುತ್ತೊಡೆದರೆ ಬೆಚ್ಚಬಲ್ಲುದೆ ?
ಚಿತ್ತ ಒಡೆದರೆ ಭಕ್ತಿ ಬೀಸರವಲ್ಲದೆ ಮುಕ್ತಿಯೆಲ್ಲಿಯದೊ ?
ಕತ್ತೆಯ ಸೂಳೆಯ ಮಕ್ಕಳಿರಾ ಸತ್ತಹಾಗೆ ಸುಮ್ಮನಿರಿರೊ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./51
ಮಲದ ಕುಳಿವೊಂದು ಮುಖ.
ಜಲದ ಕುಳಿವೊಂದು ಮುಖ.
ರಕ್ತದ ಕುಳಿವೊಂದು ಮುಖ.
ಕೀವು ಕ್ರಿಮಿ ಕೀಟಕ ಜಂತು ತುಂಬಿಪ್ಪ ಕುಳಿವೊಂದು ಮುಖ.
ವಾತ ಪಿತ್ತ ಶ್ಲೇಷ್ಮ ಸಂಯೋಗದಲ್ಲಿ
ಸರ್ವದೋಕುಳಿ ಮುಖವಾಗಿದೆ ನೋಡಾ.
ಕಿವಿಯಲ್ಲಿ ಕುಗ್ಗಿ, ಕಣ್ಣಿನಲ್ಲಿ ಜುರಿ,
ಮೂಗಿನಲ್ಲಿ ಸಿಂಬಳ, ಹಲ್ಲಿನಲ್ಲಿ ಕಿಣಿ,
ಉರದಲ್ಲಿ ಮಾಂಸದ ಗ್ರಂಥಿ, ಅಮೇಧ್ಯದ ಹುತ್ತ,
ಒಳಗೆ ಕರುಳ ಚಪ್ಪಳಿಗೆ
ಹೊರಗೆ ಚರ್ಮದ ಹೊದಿಕೆ.
ಈ ಹೆಣ್ಣು ರೂಪಿನ ಬಣ್ಣದ ಕಾಯವ ಕಂಡು
ಕಣ್ಣನಟ್ಟು ಮನಮುಟ್ಟಿ ಮರುಳಾದರಣ್ಣಗಳು.
ಮುಕ್ಕಣ್ಣ ನಿಮ್ಮನರಿಯದೆ ಬಣ್ಣದ ಹಿರಿಯರು
ಭಕ್ತರು ಭ್ರಮೆಗೊಂಡರೆ
ನಾನು ನೋಡಿ ಹೇಸಿ ನಾಚಿ ಕಡೆಗೆ ತೊಲಗಿದೆನಯ್ಯ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./52
ಪಾದರಗಿತ್ತಿ ಪಾದಲುಂಬಿಮರನ
ಪರಪುರುಷನೆಂದು ಪ್ರತಿಜ್ಞೆಯ ಮಾಡಿ ದೃಢವ ನುಡಿವಂತೆ,
ಸಾಧಕ ಸರ್ವಜನರು ಶಿಷ್ಯ ಶಿವಭಕ್ತರೆಂದು
ಗುರುವಿನ ಕೂಡೆ ಭೇದವ ಮಾಡಿ ವಾದಿಸಿ ನುಡಿವ
ಮಾದಿಗ ಹೊಲೆಯರ ಮುಖವ ನೋಡಬಾರದು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./53
ಶೀಲ ಶೀಲವೆಂದೇನೊ ?
ಶೀಲವಂಥಾ ಸೂಲವೆ ?
ಶುದ್ಧ ಹರಿವ ನೀರನು ನೂಲರಿವೆ ಸುತ್ತಿಯದ ಕಟ್ಟಿ
ತಂದದ್ದು ಶೀಲವೆ ? ಅದಲ್ಲ ನಿಲ್ಲು ಮಾಣು.
ಜ್ವಾಲೆಯಂದದಿ ಹರಿವ ಮನವನು
ಖತಿ ಹೋಗದ ಹಾಗೆ ಕಟ್ಟಿ ನಿಲಿಸಿದುದೆ ಶೀಲ.
ಬಾಲೆಯರ ಬಣ್ಣದ ಬಗೆಗೆ ಭ್ರಮೆಗೊಳ್ಳದುದೆ ಶೀಲ.
ಕಾಲಕರ್ಮಂಗಳ ಗೆದ್ದುದೆ ಶೀಲ.
ಇಂತಲ್ಲದೆ ಉಳಿದುವೆಲ್ಲ ದುಶ್ಶೀಲ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./54
ಕೆರೆ ತೊರೆಯ ಮುಳುಗುವ
ಅರೆಮರುಳುಗಳು ನೀವು ಕೇಳಿರೊ.
ತೊರೆಯಿರೊ ಗುರುಲಿಂಗ ಜಂಗಮದ ನಿಂದ್ಯವ.
ತೊರೆಯಿರೊ ಕೊಲೆ ಹುಸಿ ಕಳವು ಪಾರದ್ವಾರ ಅತಿಕಾಂಕ್ಷವ.
ತೊರೆಯಿರೊ ಅಷ್ಟಮದ ಅರಿಷಡ್ವರ್ಗವ.
ಇವ ತೊರೆಯದೆ ಕೆರೆ ತೊರೆಯ ಮುಳುಗುವ
ಬರಿ ಮೂಕೊರೆಯರಿಗೆ ಭಕ್ತಿ ಮುಕ್ತಿಯೆಲ್ಲಿಯದೊ ? ಇಲ್ಲ,
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ. /55
ಉದಯದಲೆದ್ದು ಗಡಗಡನೆ ನಡುಗುತ ಹೋಗಿ
ಹೂ ಗಿಡು ಪತ್ರೆಯ ಕಡಿವ ದೃಢಗೇಡಿಗಳು ನೀವು ಕೇಳಿರೊ.
ಅದು ಕಡುಪಾಪವಲ್ಲವೆ ನಿಮಗೆ ?
ನಡುಗಿರೊ ಪರಧನ ಪರಸ್ತ್ರೀಯರಿಗೆ.
ನಡುಗಿರೊ ಕೊಲೆ ಹುಸಿ ಕಳವು ಪಾರದ್ವಾರ ಅತಿಕಾಂಕ್ಷಕ್ಕೆ.
ನಡುಗಿರೊ ಹರನಿಂದ್ಯ ಗುರುನಿಂದ್ಯ ಅನಾಚಾರಕ್ಕೆ,
ಇದಕ್ಕೆ ನಡುಗದೆ ಮಳಿ ಛಳಿ ಗಾಳಿಗೆ ನಡುಗಿ
ಹೂ ಗಿಡ ಪತ್ರೆಯ ಕಡಿವ ಕಡುಪಾಪಿಗಳಿಗೆ
ನಿಮಗೆ ಮೃಡಪೂಜೆಯೆಲ್ಲಿಯದೊ ? ಇಲ್ಲ,
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./56
ಒರತೆಯಾಯತವೆಂಬ ಮರ್ತ್ಯದ ಶೀಲವಂತರು
ನೀವು ಕೇಳಿರೊ.
ತನುಕರಗಿ ಮನಕರಗಿ ಕಂಗಳವರತು
ಲಿಂಗಕ್ಕೆ ಮಜ್ಜನಕ್ಕೆರದುದೆ ಒರತೆ.
ಇಂತಲ್ಲದೆ ಒರತೆ ತೆರದು ಬಂದ ನೀರ
ಭಾಂಡಕ್ಕೆ ಭರತಿ ಮಾಡಿ, ಬರುವ ಒರತಿಯೊಳಗೆ
ಕಲ್ಲು ಮುಳ್ಳು ಹಾಕಿ ಮುಚ್ಚುವ
ನರಕಿ ನಾಯಿಗಳಿಗೆ ಶೀಲವೆಲ್ಲಿಯದೊ ? ಇಲ್ಲ.
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ. /57
ಉಪ್ಪು ಹುಳಿಯನು ಬಿಟ್ಟು
ಸಪ್ಪೆ ಆಯತವೆಂಬ ಹಿಪ್ಪೆಗಳ್ಳರು ನೀವು ಕೇಳಿರೊ.
ಉಪ್ಪಲ್ಲವೆ ನಿಮ್ಮುದರದಾಸೆ ?
ಹುಳಿಯಲ್ಲವೆ ನಿಮ್ಮುದರದಾಸೆ ?
ತುಪ್ಪವಲ್ಲವೆ ನಿಮ್ಮ ತುದಿನಾಲಿಗೆಯ ಸವಿಯು ?
ಇಂತಪ್ಪ ಉಪ್ಪು ಹುಳಿಯನು ಬಿಟ್ಟು
ತಪ್ಪದು ಸಪ್ಪೆಯ ಶೀಲ
ನೀವಿಪ್ಪುದು ಗುರುಪಾದದಲ್ಲಿ
ಸರ್ಪಭೂಷಣ ನಿಮಗೊಲಿವ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./58
ಉಳ್ಳಿ ಇಂಗು ಬೆಲ್ಲ ಮೆಣಸು
ಇವ ಕೊಳ್ಳಬಾರದುಯೆಂಬ ಒಳ್ಳೆ ವ್ರತಿಗಳು ನೀವು ಕೇಳಿರೊ.
ಸುಳ್ಳು ಸಟೆಯ ಬಿಟ್ಟು ತಳ್ಳಿಬಳ್ಳಿಯ ಬಿಟ್ಟು
ಒಳ್ಳಿತಾಗಿ ನಡೆಯಬಲ್ಲಡೆ ಬಳ್ಳೇಶ್ವರನ ಭಕ್ತರೆಂಬೆ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./59
ಶೀಲ ವ್ರತ ನೇಮ ನಿತ್ಯವ ಹಿಡಿದು ಬಿಡುವ
ಕಳ್ಳುಗುಡಿಗಳಿರಾ ನೀವು ಕೇಳಿರೊ.
ಹಿಡಿದು ಬಿಡಲಿಕ್ಕೆ ವಿಶ್ವಕರ್ಮನ ಕೈಯ ಇಕ್ಕುಳವೆ ವ್ರತ ?
ಬ್ರಹ್ಮಪಿಶಾಚಿಯೆ ಹಿಡಿದು ಬಿಡಲಿಕ್ಕೆ ವ್ರತ ?
ರವಿ ಶಶಿಯ ಗ್ರಹಣವೆ ಹಿಡಿದು ಬಿಡಲಿಕ್ಕೆ ವ್ರತ ?
ಕಲೆವಿದಿಯೆ ಹಿಡಿದುಬಿಡಲಿಕ್ಕೆ ವ್ರತ ?
ಇದಲ್ಲ ನಿಲ್ಲು ನಿಲ್ಲು ಮಾಣು.
ಹಿಡಿಯಬೇಕಾದರೆ ಸರ್ಪ ವೃಶ್ಚಿಕ ಅನಲ
ಅಸಿಯಾದರೆಯು ಹಿಡಿದಹರೆ ಹಿಡಿಯಬೇಕು,
ದೃಢಭಕ್ತಿಯಿದಲ್ಲಾ.
ಕಳ್ಳುಗುಡಿ ಕುಡಿದು ಕುಣಿಕುಣಿದಾಡಿ ಬಿಡುವ ಹಾಗೆ
ಬಿಡುವ ತುಡುಗುಣಿ ಹೊಲೆಯರ ಮುಖವ ನೋಡಬಾರದು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./60
ಪರದೈವ ಪತಿಪೂಜೆಯ ಬಿಟ್ಟು
ಇಷ್ಟವನರಿಯದೆ ಹೊಟ್ಟೆಯ ಹೊರಕೊಂಬ
ಭ್ರಷ್ಟಬಂಟರು ನೀವು ಕೇಳಿರೊ.
ಪಂಚಮಾಪಾತಕವಬಿಟ್ಟಡೆ ಬಿಟ್ಟುದು.
ಪ್ರಪಂಚ ಬಿಟ್ಟಡೆ ಪತಿಪೂಜೆಯ ಬಿಟ್ಟುದು.
ನುಡಿ ಎರಡಿಲ್ಲದೆ ನಡೆಯಬಲ್ಲಡೆ ಒಡೆಯನ ಕಟ್ಟಳೆ.
ನಂಬಿಸಿ ಒಡಲ ಹೊರೆಯದಿರ್ದುದೆ ಒಡೆಯನ ಕಟ್ಟಳೆ.
ಪಾತ್ರ ಸತ್ಪಾತ್ರವರಿತು ಕೊಡಬಲ್ಲಡೆ ಬಿಡುಗಡೆ.
ಇಂತಲ್ಲದೆ ವಾರ್ತೆಕೀರ್ತಿಗೆ ಕೊಂಡಾಡಿಸಿಕೊಂಡು
ಕೊಡುವ ಧೂರ್ತ ಹೊಲೆಯರ ಮುಖವ ನೋಡಲಾಗದು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./61
ಧೂಳಿಪಾವುಡ, ಸರ್ವಾಂಗಪಾವುಡ,
ಸಮಯಾಚಾರ, ಸಹಭೋಜನವೆಂಬ
ಶೀಲವಂತರು ನೀವು ಕೇಳಿರೊ.
ಗಾಳಿಗೂಳಿತನವ ಬಿಟ್ಟುದೆ ಧೂಳಿಪಾವುಡ.
ಸರ್ವ ಗರ್ವವನಳಿದು ನಿಗರ್ವವಾದುದೆ ಸರ್ವಾಂಗಪಾವುಡ.
ಸಮತೆ ಸೈರಣೆ ಉಳ್ಳುದೆ ಸಮಯಾಚಾರ.
ಶರಣಸತಿ ಲಿಂಗಪತಿಯಾದುದೆ ಸಹಭೋಜನ.
ಇಂತಲ್ಲದೆ ಸಂತೆಯ ಸೂಳೆಯಂತೆ
ಬಂದವರ ಸಂತವಿಟ್ಟು ತಾವು ಮುನ್ನಿನಂತೆ ಇರುವ
ಭ್ರಾಂತು ಭ್ರಮಿತ ವ್ರತಿ ಗಿತಿಗಳಿಗೆ ಶೀಲವೆಲ್ಲಿಯದೊ ? ಇಲ್ಲ,
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ. /62
ಹಡಪ ಚಾಮರ ಸುರಗಿ ರಜಬೋವರಿಗೆ
ಧೂಪ ವಚನ ಕನ್ನಡಿ ಗುಂಡಿನಕಾಯಕವೆಂಬ
ಮಂದಚಾರಿಗಳು ನೀವು ಕೇಳಿರೊ.
ಒಡಲಾಸೆಯಳಿದುದೆ ಹಡಪದಕಾಯಕ.
ಚಂಚು ವಂಚನೆಯ ಬಿಟ್ಟುದೆ ಚಾಮರದಕಾಯಕ.
ಪರವನಿತೆಯರ ಆಸೆಯಳಿದುದೆ ಸುರಗಿಯಕಾಯಕ.
ಋಣ ರುಜೆಯಿಲ್ಲದುದೆ ರಜಬೋವರಿಗೆಕಾಯಕ.
ದುಸ್ಸಂಗ ದುಸ್ವಪ್ನ ದುರ್ವಾಸನೆಯಳಿದುದೆ ಧೂಪದಕಾಯಕ.
ರಚ್ಚೆ ರಚನೆಯಳಿದುದೆ ವಚನಕಾಯಕ.
ಪರವಧುವ ನೋಡದಿಪ್ಪುದೆ ಕನ್ನಡಿಯಕಾಯಕ.
ತೊಂಡು ತೊಳಸು ಮುಂಡು ಮುರುಹು ಭಂಡ ಬೂತು
ದಿಂಡೆಯತನ ಕೊಂಡೆಯವಳಿದುದೆ ಗುಂಡಿಗೆಯಕಾಯಕ.
ಇಂತಲ್ಲದೆ ಕಂಡಕಂಡವರ ಕೊಂಡಾಡದೆ ಇದ್ದರೆ
ಬಂಡುಗೆಲವ ಮಂಡ ಮೂಕೊರೆಯ ಭಂಡ ಬಹುಕಳ್ಳರಿಗೆ
ಕಾಯಕ ಸಲ್ಲದು.
ಭಕ್ತಿ ಮುಕ್ತಿಯಿಲ್ಲ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./63
ಹಾಲು ಹಣ್ಣು ಬೇಳೆ ಬೆಲ್ಲದ ನೇಮಸ್ತರು ನೀವು ಕೇಳಿರೊ.
ಬಾಲೆಯರ ಮೇಲಣ ಭ್ರಾಂತು ಬಿಟ್ಟುದೆ ಹಾಲನೇಮ.
ಶಿವಯುಕ್ತವಲ್ಲದ ಪರಹೆಣ್ಣು ಹೊನ್ನು ಮಣ್ಣು ಬಿಟ್ಟುದೆ
ಹಣ್ಣಿನ ನೇಮ.
ತಾರ ತಮ್ಮುಸ ಗರಗಳು ಪಿಶಾಚಿಗಳಿದ್ದುವೆ ಬೇಳೆಯನೇಮ.
ಇಂತಲ್ಲಿ ಸಲ್ಲ, ಇಲ್ಲಿ ಉಂಟುಯೆಂಬ
ತಳ್ಳಿ ಬಳ್ಳಿಯ ಬಿಟ್ಟುದೆ ಬೆಲ್ಲದ ನೇಮ.
ಇಂತಲ್ಲದೆ ಉಳಿದಾದ ಭ್ರಾಂತುನೇಮದವರಿಗೆ
ಭಕ್ತಿ ಯುಕ್ತಿ ಮುಕ್ತಿಯೆಲ್ಲಿಯದೊ ? ಇಲ್ಲ,
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರಚ್
ಶಿವಸಾಕ್ಷಿಯಾಗಿ./64
ತನಗೆ ಹುಟ್ಟಿದ ಮಕ್ಕಳಿಗೆ ತನ್ನ ಗುರುವ ಬಿಟ್ಟು
ತನ್ನ ಮಕ್ಕಳಿಗೆ ತಾನಟ್ಟಣೆಯ ಗುರುವಾಗಿ
ಲಿಂಗವ ಕಟ್ಟುವ ಆ ಕುಲಗೆಟ್ಟ ಹೊಲೆಯರ ಮುಖವ ನೋಡಲಾಗದು.
ಅದೇನು ಕಾರಣವೆಂದರೆ ಅವರಿಗೆ
ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವಿಲ್ಲ.
ಅವರಿಗೆ ಪಾದೋದಕ ಪ್ರಸಾದವಿಲ್ಲ.
ಅವ ಪರವಾದಿ ; ಅವ ಪಂಚಮಹಾಪಾತಕಿ ಪಾಷಂಡಿ.
ಅವನ ಮುಖವ ನೋಡಲಾಗದು.
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./65
ಒಂದೂರೊಳಗೆ ಗುರುವಿದ್ದು ವಂದಿಸಿ
ಬಿನ್ನಹ ಬಿಡುಗಡೆಯ ಮಾಡಿಕೊಳ್ಳದೆ
ಒಡಲ ಹೊರವ ಮಾನವರು ಮುಂದೆ
ಹಂದಿಯ ಜಲ್ಮದಲ್ಲಿ ಅನೇಕಕಾಲ ಬಪ್ಪುದು ತಪ್ಪುದು ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./66
ಇದ್ದೂರೊಳಗೆ ಗುರುವಿದ್ದು ಬುದ್ಧಿಯ ಕೇಳದೆ
ಕದ್ದ ಕಳ್ಳನಂತೆ ಕಂಡಕಡೆಯಲ್ಲಿ ತಿರುಗುವ
ಉದ್ರೇಕ ಹೊಲೆಯರ ಮುಖವ ನೋಡಲಾಗದು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./67
ಇದ್ದೂರಲ್ಲಿ ಗುರುವಿದ್ದು ದರುಶನ ಪರುಷನವಿಲ್ಲದೆ
ದೂರದಲೆ ನೆನದುಕೊಂಡಿದ್ದೇನೆಂಬವಿಚಾರಿ
ಹಾದರಗಿತ್ತಿಯಂತೆ ಹೊಲೆಯರು ನೀವು ಕೇಳಿರೊ.
ಬೇರೂರಿಗೆ ಹೋಗಿ ಸತಿಯರ ನೆನೆದರೆ
ಇರವೆ ಮಾಡಿದ ಹಾಂಗೆ ಆಗುವುದೆ ? ಇಲ್ಲ.
ಅದೇನು ಕಾರಣವೆಂದರೆ,
ಗುರುಲಿಂಗಜಂಗಮದ ಪಾದಸೇವೆಯ ನೆರೆನಂಬಿ
ಹೆರೆಹಿಂಗದೆ ಮಾಡುವುದೆ ಮಾಟಕೂಟ ಭಕ್ತಿಮುಕ್ತಿ.
ಇಂತಲ್ಲದೆ ಉಳಿದಾದ ಮಾಟಕೂಟವೆಲ್ಲ ಬಗುಳಾಟ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./68
ಒಂದು ಮನೆಯೊಳಗೆ ಗಂಡಗೊಬ್ಬ ಗುರು,
ಹೆಂಡತಿಗೊಬ್ಬ ಗುರು, ಮಕ್ಕಳಿಗೊಬ್ಬ ಗುರು,
ತಂದೆಗೊಬ್ಬ ಗುರು, ತಾಯಿಗೊಬ್ಬ ಗುರು.
ಈ ರೀತಿಯಲ್ಲು ಗುರುಭೇದವ ಮಾಡಿಕೊಂಡು
ನಾವು ಭಕ್ತರುಯೆಂದು ಬೆರೆವರು.
ಇಂಥ ನೀಚ ಹೊಲೆಯರಿಗೆ ಭಕ್ತಿಮುಕ್ತಿ ಎಲ್ಲಿಯದೊ ?
ಏಕೋ ಗುರುವೊಬ್ಬನಲ್ಲದೆ ಎರಡುಂಟೆ ?
ಇದಲ್ಲದೆ ಗುರುಭೇದವ ಮಾಡಿದ ಹೊಲೆಯರ ಮುಖವ ನೋಡಲಾಗದು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./69
ಮತವಲ್ಲ, ಹೆಣ್ಣ ಹಿಡಿದು ತನ್ನ ಮುನ್ನಿನ ಗುರುವಂ ಬಿಟ್ಟ
ಕುನ್ನಿಗಳಿರ ನೀವು ಕೇಳಿರೊ.
ನಿಮಗೆ ಗುರುವಿಲ್ಲ.
ಅದೇನು ಕಾರಣವೆಂದರೆ, ಅವಳಿಗೆ ಪಾದೋದಕ ಪ್ರಸಾದವಿಲ್ಲ ;
ಅವಳಿಗೆ ಮತವಿಲ್ಲ ; ಧರ್ಮದ ದಾರಿಯೆಲ್ಲಾ ದುರ್ಧರ.
ಆ ದುರಾಚಾರಿಯನಾಳುವ ಹೊಲೆಯರಿಗೆ
ಗುರುಲಿಂಗಜಂಗಮದ ಪಾದೋದಕ ಪ್ರಸಾದವಿಲ್ಲ.
ಅವನಿಗೆ ಆ ಹೆಂಡತಿಯೆ ತನ್ನ ಗುರುವೆಂದು
ಮುನ್ನಿನ ತನ್ನ ಗುರುವ ಬಿಡುವ ಗನ್ನಘಾತಕ
ಕುನ್ನಿ ಕುಲಹೀನರಿಗೆ ಭಕ್ತಿಮುಕ್ತಿಯೆಲ್ಲಿಯದೊ ? ಇಲ್ಲ,
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./70
ಶಿವಭಕ್ತಿರಿಗೆ ಭವಿ ಸರಿಯೆಂಬ ಭ್ರಷ್ಟ ಭಂಡರು ನೀವು ಕೇಳಿರೊ.
ಅದೇನು ಕಾರಣವೆಂದರೆ ಕತ್ತೆಗೆ ಕುದುರೆ ಸರಿಯೆ ?
ಗರತಿಗೆ ತೊತ್ತು ಸರಿಯೆ ? ಭಿತ್ತಿಗೆ ಕೇರು ಸರಿಯೆ ?
ವಿರಕ್ತಿಗೆ ಪಿರಿತಿ ಸರಿಯೆ ? ಕತ್ತಲೆಗೆ ಬೆಳಗು ಸರಿಯೆ ?
ಕರ್ತಗೆ ಭೃತ್ಯ ಸರಿಯೆಂಬ ದುರುಕ್ತಿಯ ದುರಾಚಾರಿ
ದೂಷಕ ಹೊಲೆಯರಿಗೆ ಭಕ್ತಿ ಮುಕ್ತಿಯೆಲ್ಲಿಯದೊ ?
ವಿರಕ್ತಿ ವೀರಶೈವ ವಿಚಾರ ಅವನಿಗೆಲ್ಲಿಯದೊ ? ಇಲ್ಲ,
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./71
ಗುರುವಿನಲ್ಲಿ ಕುಲ ವಿದ್ಯೆ ಗುಣ ಅವಗುಣವ
ನೋಡುವವ ಒಂದನೆಯ ಪಾತಕ.
ತೀರ್ಥಲಿಂಗದ ನಿಜನಿಲುಕಡೆ ನಿತ್ಯ ಅನಿತ್ಯವ
ನೋಡುವವ ಎರಡನೆಯ ಪಾತಕ.
ತೀರ್ಥದಲ್ಲಿ ತಿಳಿ ಕಲಕ ನೋಡುವವ ಮೂರನೆಯ ಪಾತಕ.
ಪ್ರಸಾದದಲ್ಲಿ ರುಚಿಯರುಚಿಯ ನೋಡುವವ ನಾಲ್ಕನೆಯ ಪಾತಕ.
ಜಂಗಮದಲ್ಲಿ ಜಾತಿ -ಅಜಾತಿಯ ನೋಡುವವ ಪಂಚಮಹಾಪಾತಕರುಗಳು
ಕುಂಭೀಮಯ ನರಕದಲ್ಲಿ ಕುಲಕೋಟಿ ಬೀಳುವರು ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./72
ಪಾದೋದಕ ಪ್ರಸಾದವ ಕೊಂಡು ಪ್ರಪಂಚವ ಮಾಡುವ
ಪರಸತಿಯರ ಸಂಗವ ಮಾಡುವ ಪಂಚಮಹಾಪಾತಕರು
ನೀವು ಕೇಳಿರೊ.
ಪಂಚಮಹಾಪಾತಕವ ಬಿಟ್ಟದ್ದೇ ಪಾದೋದಕ.
ಅಲ್ಲದಿದ್ದಡೆ ಮುಂದೆ ನಿಮ್ಮ ಬಾಧಿಸುವದಕ್ಕೆ ಕಾದಸೀಸ.
ಪ್ರಸಾದವೆ ಮುಂದೆ ನಿಮ್ಮ ಪೊರೆವುದಕ್ಕೆ ಪರುಷ.
ಪ್ರಪಂಚ ಮುಂದೆ ನಿಮ್ಮ ಪಾಕುಳಕ್ಕೆ ಹಾಕುವುದು.
ಪರಸ್ತ್ರೀಯರ ಸಂಗವೆ ಮುಂದೆ ನಿಮಗೆ ಉರಿಗಿಚ್ಚು, ಇರಿವ ಸುರಗಿ.
ಇಂತಿವ ಬಿಟ್ಟು ಭಕ್ತ ವಿರಕ್ತನಾಗಿ
ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ನಂಬಿದರೆ
ಪರಶಿವ ನಮಗೊಲಿವ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./73
ರಂಡೆವೆಂಡಿರ ಮಾತ ಕೇಳಿ, ಕಂಡ ಕಂಡ ದೈವವ ಹಿಡಿದು ಬಿಡುವ
ಭಂಡ ಮುಂಡ ಮೂಕೊರತಿ ಮೂಕೊರೆಯರಿರಾ ನೀವು ಕೇಳಿರೊ.
ಖಂಡೇಂದುಧರನ ನಂಬಿ ಕರ್ಮಂಗಳನೀಡಾಡಿ,
ಮಂಡಲದೊಳು ಪವಾಡವ ಮೆರವನ ಕೊಂಡಾಡಿ
ಬದುಕಿರೊ ಬಲ್ಲವರು.
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./74
ತಿಥಿ ಮತಿ [ಹಾಳ] ಮಹಳವ ಮಾಡುವ
ಮತಿಗೇಡಿ ಮೂಳಿಗಳು ನೀವು ಕೇಳಿರೊ.
ತಿಥಿಯಲ್ಲಿ ತಿಂಬನೆ ನಿಮ್ಮ ದೇವ ?
ಮತಿಯಲ್ಲಿ ಉಂಬನೆ ನಿಮ್ಮ ದೇವ ?
[ಹಾಳ] ಮಹಳವ ಮಾಡ ಹೇಳುವನೆ ನಿಮ್ಮ ದೇವ ?
ಗುರುಲಿಂಗಜಂಗಮದ ಪಾದಸೇವೆಯಮಾಡಿ
ಬದುಕಿರೊ ಬಲ್ಲವರು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./75
ಕಿರುಕುಳ ದೈವದ ಹರಕೆ ಹಲ್ಲಣೆಯ ಮಾಡುವ
ಕಿವಿಹರಕುಮುರಿಕೆಯ ಮನೆಯ ಅನ್ನ
ನರಕದಾಯೆಡೆಗೆಂದು ಅರಿತು ಭುಂಜಿಸದೆ
ನಿರುತ ವೀರಶೈವ ಭಕ್ತರನು ಬೆರೆತು ಬೆರೆತು
ಬಾಳುವರು ದೇವರ್ಕಚಂದ್ರನುಳ್ಳನಕ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ. /76
ಜೆಟ್ಟಿಗ ಬೀರ ಮೈಲಾರನೂ ರೊಟ್ಟಿಯ ಹಬ್ಬ
ನಾಗರಪಂಚಮಿಯ ಮಾಡುವ ಹೊಲತಿ ಹೊಲೆಯನ ಮನೆಯ ಅನ್ನ
ಕೆರನಟ್ಟೆಗೆ ಸರಿಯೆಂದು ಮುಟ್ಟರು
ನಿಷ್ಠೆ ನಿರ್ವಾಣದ ಬಸವಭಕ್ತರು ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./77
ಗುರು ಬಡವನೆಂದು ಶಿರ ಮಣಿಯದು.
ತಲೆವಾಗದ ನೆರೆ ಪರವಾದಿ ಪಾತಕರ ಮನೆಯ ಅನ್ನ
ಸುರೆಯ ಮಾಂಸದ ಸಮಾನವೆಂದು ಜರೆವರು ಗುರುಹಿರಿಯರು.
ಪರಶಿವ ನಿಮಗೊಲಿಯ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./78
ಗುರುವು ಉಂಡು ಉಟ್ಟನು, ಇಟ್ಟು ತೊಟ್ಟನು,
ಕೊಟ್ಟು ಕೊಂಡಾಡುತಾನೆಂದು ಹೊಟ್ಟೆಯ ಹೊಟ್ಟೆಯ ಹೊಸಕೊಂಬ
ಕೆಟ್ಟ ಹೊಲೆಯರ ಮನೆಯ ಅನ್ನ
ಸುಟ್ಟ ಸುಡುಗಾಡೊಳಗಣ ಅರೆವೆಣ ಕೊರೆವೆಣನೆಂದು
ಮುಟ್ಟರು ಗುರುಪಾದನಿಷ್ಠೆವುಳ್ಳವರು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ. /79
ಕುಲಗೇಡಿ ಖೂಳರಿಗೆ ದೀಕ್ಷವ ಕೊಟ್ಟರೆ ಛಲ ವ್ರತವಿಲ್ಲ.
ಬಲುಕುಂಬಳದ ಕಾಯಿಗೆ ಕಟ್ಟ ಹಾಕಿದರೆ
ಕೊಳತಂತಾಯಿತ್ತು ಸಲೆಯವನ ಮನೆಯ ಅನ್ನ.
ಹಲಬರಿಗೆ ಉರುಳುವ ಹದಿನೆಂಟು ಜಾತಿಯ ಸೂಳೆಯಮಗ
ಮಹಳವ ಮಾಡಿದರೆ ಅದು ಗಂಡಗಲ್ಲ ಮಿಂಡಗಲ್ಲ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./80
ಶಿವಭಕ್ತಿರಿಗೆ ಭವಿ ಸರಿಯೆಂಬ ಭ್ರಷ್ಟ ಭಂಡರು ನೀವು ಕೇಳಿರೊ.
ಅದೇನು ಕಾರಣವೆಂದರೆ ಕತ್ತೆಗೆ ಕುದುರೆ ಸರಿಯೆ ?
ಗರತಿಗೆ ತೊತ್ತು ಸರಿಯೆ ? ಭಿತ್ತಿಗೆ ಕೇರು ಸರಿಯೆ ?
ವಿರಕ್ತಿಗೆ ಪಿರಿತಿ ಸರಿಯೆ ? ಕತ್ತಲೆಗೆ ಬೆಳಗು ಸರಿಯೆ ?
ಕರ್ತಗೆ ಭೃತ್ಯ ಸರಿಯೆಂಬ ದುರುಕ್ತಿಯ ದುರಾಚಾರಿ
ದೂಷಕ ಹೊಲೆಯರಿಗೆ ಭಕ್ತಿ ಮುಕ್ತಿಯೆಲ್ಲಿಯದೊ ?
ವಿರಕ್ತಿ ವೀರಶೈವ ವಿಚಾರ ಅವನಿಗೆಲ್ಲಿಯದೊ ? ಇಲ್ಲ,
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./71
ಗುರುವಿನಲ್ಲಿ ಕುಲ ವಿದ್ಯೆ ಗುಣ ಅವಗುಣವ
ನೋಡುವವ ಒಂದನೆಯ ಪಾತಕ.
ತೀರ್ಥಲಿಂಗದ ನಿಜನಿಲುಕಡೆ ನಿತ್ಯ ಅನಿತ್ಯವ
ನೋಡುವವ ಎರಡನೆಯ ಪಾತಕ.
ತೀರ್ಥದಲ್ಲಿ ತಿಳಿ ಕಲಕ ನೋಡುವವ ಮೂರನೆಯ ಪಾತಕ.
ಪ್ರಸಾದದಲ್ಲಿ ರುಚಿಯರುಚಿಯ ನೋಡುವವ ನಾಲ್ಕನೆಯ ಪಾತಕ.
ಜಂಗಮದಲ್ಲಿ ಜಾತಿ -ಅಜಾತಿಯ ನೋಡುವವ ಪಂಚಮಹಾಪಾತಕರುಗಳು
ಕುಂಭೀಮಯ ನರಕದಲ್ಲಿ ಕುಲಕೋಟಿ ಬೀಳುವರು ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./72
ಪಾದೋದಕ ಪ್ರಸಾದವ ಕೊಂಡು ಪ್ರಪಂಚವ ಮಾಡುವ
ಪರಸತಿಯರ ಸಂಗವ ಮಾಡುವ ಪಂಚಮಹಾಪಾತಕರು
ನೀವು ಕೇಳಿರೊ.
ಪಂಚಮಹಾಪಾತಕವ ಬಿಟ್ಟದ್ದೇ ಪಾದೋದಕ.
ಅಲ್ಲದಿದ್ದಡೆ ಮುಂದೆ ನಿಮ್ಮ ಬಾಧಿಸುವದಕ್ಕೆ ಕಾದಸೀಸ.
ಪ್ರಸಾದವೆ ಮುಂದೆ ನಿಮ್ಮ ಪೊರೆವುದಕ್ಕೆ ಪರುಷ.
ಪ್ರಪಂಚ ಮುಂದೆ ನಿಮ್ಮ ಪಾಕುಳಕ್ಕೆ ಹಾಕುವುದು.
ಪರಸ್ತ್ರೀಯರ ಸಂಗವೆ ಮುಂದೆ ನಿಮಗೆ ಉರಿಗಿಚ್ಚು, ಇರಿವ ಸುರಗಿ.
ಇಂತಿವ ಬಿಟ್ಟು ಭಕ್ತ ವಿರಕ್ತನಾಗಿ
ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ನಂಬಿದರೆ
ಪರಶಿವ ನಮಗೊಲಿವ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./73
ರಂಡೆವೆಂಡಿರ ಮಾತ ಕೇಳಿ, ಕಂಡ ಕಂಡ ದೈವವ ಹಿಡಿದು ಬಿಡುವ
ಭಂಡ ಮುಂಡ ಮೂಕೊರತಿ ಮೂಕೊರೆಯರಿರಾ ನೀವು ಕೇಳಿರೊ.
ಖಂಡೇಂದುಧರನ ನಂಬಿ ಕರ್ಮಂಗಳನೀಡಾಡಿ,
ಮಂಡಲದೊಳು ಪವಾಡವ ಮೆರವನ ಕೊಂಡಾಡಿ
ಬದುಕಿರೊ ಬಲ್ಲವರು.
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./74
ತಿಥಿ ಮತಿ [ಹಾಳ] ಮಹಳವ ಮಾಡುವ
ಮತಿಗೇಡಿ ಮೂಳಿಗಳು ನೀವು ಕೇಳಿರೊ.
ತಿಥಿಯಲ್ಲಿ ತಿಂಬನೆ ನಿಮ್ಮ ದೇವ ?
ಮತಿಯಲ್ಲಿ ಉಂಬನೆ ನಿಮ್ಮ ದೇವ ?
[ಹಾಳ] ಮಹಳವ ಮಾಡ ಹೇಳುವನೆ ನಿಮ್ಮ ದೇವ ?
ಗುರುಲಿಂಗಜಂಗಮದ ಪಾದಸೇವೆಯಮಾಡಿ
ಬದುಕಿರೊ ಬಲ್ಲವರು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./75
ಕಿರುಕುಳ ದೈವದ ಹರಕೆ ಹಲ್ಲಣೆಯ ಮಾಡುವ
ಕಿವಿಹರಕುಮುರಿಕೆಯ ಮನೆಯ ಅನ್ನ
ನರಕದಾಯೆಡೆಗೆಂದು ಅರಿತು ಭುಂಜಿಸದೆ
ನಿರುತ ವೀರಶೈವ ಭಕ್ತರನು ಬೆರೆತು ಬೆರೆತು
ಬಾಳುವರು ದೇವರ್ಕಚಂದ್ರನುಳ್ಳನಕ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ. /76
ಜೆಟ್ಟಿಗ ಬೀರ ಮೈಲಾರನೂ ರೊಟ್ಟಿಯ ಹಬ್ಬ
ನಾಗರಪಂಚಮಿಯ ಮಾಡುವ ಹೊಲತಿ ಹೊಲೆಯನ ಮನೆಯ ಅನ್ನ
ಕೆರನಟ್ಟೆಗೆ ಸರಿಯೆಂದು ಮುಟ್ಟರು
ನಿಷ್ಠೆ ನಿರ್ವಾಣದ ಬಸವಭಕ್ತರು ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./77
ಗುರು ಬಡವನೆಂದು ಶಿರ ಮಣಿಯದು.
ತಲೆವಾಗದ ನೆರೆ ಪರವಾದಿ ಪಾತಕರ ಮನೆಯ ಅನ್ನ
ಸುರೆಯ ಮಾಂಸದ ಸಮಾನವೆಂದು ಜರೆವರು ಗುರುಹಿರಿಯರು.
ಪರಶಿವ ನಿಮಗೊಲಿಯ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./78
ಗುರುವು ಉಂಡು ಉಟ್ಟನು, ಇಟ್ಟು ತೊಟ್ಟನು,
ಕೊಟ್ಟು ಕೊಂಡಾಡುತಾನೆಂದು ಹೊಟ್ಟೆಯ ಹೊಟ್ಟೆಯ ಹೊಸಕೊಂಬ
ಕೆಟ್ಟ ಹೊಲೆಯರ ಮನೆಯ ಅನ್ನ
ಸುಟ್ಟ ಸುಡುಗಾಡೊಳಗಣ ಅರೆವೆಣ ಕೊರೆವೆಣನೆಂದು
ಮುಟ್ಟರು ಗುರುಪಾದನಿಷ್ಠೆವುಳ್ಳವರು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ. /79
ಕುಲಗೇಡಿ ಖೂಳರಿಗೆ ದೀಕ್ಷವ ಕೊಟ್ಟರೆ ಛಲ ವ್ರತವಿಲ್ಲ.
ಬಲುಕುಂಬಳದ ಕಾಯಿಗೆ ಕಟ್ಟ ಹಾಕಿದರೆ
ಕೊಳತಂತಾಯಿತ್ತು ಸಲೆಯವನ ಮನೆಯ ಅನ್ನ.
ಹಲಬರಿಗೆ ಉರುಳುವ ಹದಿನೆಂಟು ಜಾತಿಯ ಸೂಳೆಯಮಗ
ಮಹಳವ ಮಾಡಿದರೆ ಅದು ಗಂಡಗಲ್ಲ ಮಿಂಡಗಲ್ಲ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./80
ಕತ್ತಿಯ ಕಟ್ಟಿ ಗದ್ದರ್ಿಸಿ ಕಾಳಗದೊಳು ಕುಳಿಯ ಗೆದ್ದು
ಪ್ರಾಣವ ತುಂಬಿ ಕೈಲಾಸಕಟ್ಟುವ
ಕೂಳಿಯ ಮರುಳಶಂಕರದೇವರಿಗೆ
ಬಿಟ್ಟಮಂಡೆಯ ಗಂಗಾಧರದೇವರಿಗೆ
ಪಟ್ಟವ ತೊರದು ಗಂಡನ ಜರದ ಅಕ್ಕಮಹಾದೇವಿಗೆ
ನಿಷ್ಠೆ ನಿರ್ವಾಣ ಬೋಳೇಶ್ವರದೇವರಿಗೆ
ಶರಣು ಶರಣಾರ್ಥಿ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./91
ಚೆನ್ನಯ್ಯ ನನ್ನಯ್ಯ ಸುಜ್ಞಾನ ಅನ್ನದದೇವರಿಗೆ
ಚೆನ್ನಬಸವಣ್ಣ ಚೇರಮರಾಯ ನಂಬೆಣ್ಣಗೆ
ಅಲ್ಲಮ ಅಜಗಣ್ಣ ಜಗದೇವಯ್ಯ ಮಲುಹಣ ಮಲುಹಣಿಗೆ
ಮಹಾದೇವನೊಲಿದ ಮಹಿಮ ಮಹಾತ್ಮರಿಗೆ
ಶರಣು ಶರಣಾರ್ಥಿ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./92
ದಂಡನಾಯಕ, ದಾಸಿಮಯ್ಯಗೆ
ಶ್ರೀಪಂಡಿತರಿಗೆ ಕೊಂಡಗುಳಿ ಕೇಶಿರಾಜ ಕೊಮಾರದೇವರಿಗೆ
ಕಲಿಗಣನಾಥ ಮಳೆಯರಾಜ
ಹಲಾಯುಧ ಸಾಮವೇದಿ ಶ್ವಪಚಯ್ಯಗಳಿಗೆ
ಶರಣು ಶರಣಾರ್ಥಿ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./93
ಶಂಕರದಾಸಿಮಯ್ಯಗೆ ಸುಂಕದಬಂಕಯ್ಯಗೆ
ಶಿವಲೆಂಕಮಂಚಣ್ಣಗೆ ಶಿವರಾತ್ರಿಯಯ್ಯಗಳಿಗೆ
ಸಿದ್ಧರಾಮಯ್ಯಗಳಿಗೆ ಚಿಮ್ಮುಲಿಗೆಯ ಚಂದಯ್ಯ
ಚಿಕ್ಕಯ್ಯ ಡೋಹರ ಕಕ್ಕಯ್ಯ
ಒಕ್ಕುಮಿಕ್ಕ ಪ್ರಸಾದವಯಿಕ್ಕೆಯ್ಯಲ್ಲಿ ಕೊಂಬ ಅಕ್ಕನಾಗಾಯಿಗೆ
ಹರಳಯ್ಯ ಮಧುವಯ್ಯ ಬಳ್ಳೇಶ್ವರಯ್ಯಗಳಿಗೆ
ಹಾವಿನಾಳ ಕಲ್ಲಯ್ಯಗಳಿಗೆ ಸರವೂರ ಬಂಕಯ್ಯಗೆ
ಸುರಗಿಯ ಚೌಡಯ್ಯಗೆ ಪರಿಪರಿಯ ಶರಣರಿಗೆ
ಶರಣು ಶರಣಾರ್ಥಿ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./94
ಸೆರಗೊಡ್ಡಿ ಬೇಡಿಕೊಂಬೆನು
ಸರಿದಪ್ಪನು ಪೇಳದೆ ನೆರೆಬಲ್ಲ ಗುರುಹಿರಿಯರು
ಭಕ್ತ ವಿರಕ್ತರುವೊಪ್ಪುವುದು.
ಅಮ್ಮವ್ವೆ ರೆಮ್ಮವ್ವೆ ವೈಜವ್ವೆ ನಿಂಬವ್ವೆ
ದುಗ್ಗಳವ್ವೆ ಮಾಂಗಾಯಕ್ಕರಸಿಗಳು
ನೀಲಲೋಚನೆ ಕೋಳೂರ ಕೊಡಗೂಸು
ಹೇರೂರ ಹೆಣ್ಣು ಕದಿರರೆಬ್ಬವ್ವೆ ಪಿಟ್ಟವ್ವೆ ಸತ್ಯಕ್ಕ
ಇಂತೀ ತೆತ್ತೀಸಕೋಟಿ ಸತ್ಯಶರಣರು
ಈ ವಚನದ ಅರ್ಥವ ಮಾಡಿ ಅನುಭವಿಸಿ
ನಿಮ್ಮ ಶಿಶುವೆಂದು ಕರಿಯಬಸವನ ಎತ್ತಿಕೊಂಬುದು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./95
ಅಷ್ಟವಿಧಾರ್ಚನೆ ಷೋಡಶೋಪಚಾರವು
ಮನದೊಳಗೆ ಮಾಡುವ ಲಿಂಗಾಂಗಿಯ ನೋಡಿ.
ಆತನ ಸಮತೆ ಸಜ್ಜನವೆ ಸಮ್ಮಾರ್ಜನೆ,
ಅಂತರಂಗದ ಶುದ್ಧವೆ ರಂಗವಾಲಿ,
ಮನವ ನಿಲಿಸಿದ್ದೆ ಮಜ್ಜನ, ತನುವ ಮರ್ದಿಸಿದ್ದೆ ಗಂಧ,
ಅಹಂಕಾರವಳಿದುದೆ ಅಕ್ಷತೆ, ಪೂರ್ವವಳಿದುದೆ ಪುಷ್ಪ,
ಪ್ರಪಂಚನಳಿದುದೆ ಪತ್ರೆ, ದುರ್ಗುಣವಳಿದುದೆ ಧೂಪ,
ಸುಗುಣವುಳಿದುದೆ ದೀಪ, ಅಷ್ಟಮದವಳಿದುದೆ ಆರೋಗಣೆ,
ಅರಿಷಡುವರ್ಗವನಳಿದುದೆ ಆ ಹಸ್ತಕ್ಕೆ ಅಗ್ಘಣೆ,
ವಿಷಯವಿಕಾರವನಳಿದುದೆ ಕರ್ಪುರ ವೀಳ್ಯ,
ಸಪ್ತವ್ಯಸನವನಳಿದುದೆ ಆ ಸಹಭೋಜನ,
ದಶವಾಯುವ ದೆಸೆಗೆಡಿಸಿದುದೆ ದಾನ -ಧರ್ಮ,
ಹಸಿವು ತೃಷೆ ನಿದ್ರೆ ನೀರಡಿಕೆ ಜಾಡ್ಯ ಸ್ತ್ರೀಸಂಯೋಗ
ಕಳವಳವಿಲ್ಲದಿದ್ದುದೆ ಜಪತಪ.
ಪಂಚೇಂದ್ರಿಯ ಪ್ರಪಂಚು ಹೊದ್ದದಿದ್ದುದೆ ಪಂಚಮಹಾವಾದ್ಯ,
ಪ್ರಕೃತಿ ಪಲ್ಲಟವಾದುದೆ ಪಾತ್ರಭೋಗ,
ಗೀತ ಪ್ರಬಂಧ ಕರಣವೆ ಸಿಂಹಾಸನ ಏರುವ ಸುಖ,
ವ್ಯಸನ ಚಂಚಲತೆಯನಳಿದುದೆ ಛತ್ರಚಾಮರ,
ಶೀರ್ಷಶಿವಾಲ್ಯದೊಳಿಪ್ಪ ಪರಮಗುರು
ಪರಂಜ್ಯೋತಿ ಪರಶಿವ ಪರಕ್ಕೆ ಪರವಾದ
ಶ್ರೀ ಪಟ್ಟುಕಂಥೆಯ ಚೆನ್ನಬಸವೇಶ್ವರದೇವರ
ಶ್ರೀಪಾದಾಂಗುಲಿಗೆ ಈ ವಚನವ,
ಪುಣ್ಯಪುಷ್ಪವಮಾಡಿ ಅರ್ಪಿಸುವ
ಕುಷ್ಟಗಿಯ ನಿರ್ವಾಣ ಕರಿಬಸವರಾಜದೇವರು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./96
ಚಿತ್ತಸದ್ಗತಿಯ ವಚನವ ಬರೆದೋದಿ ಕೇಳಿದವರಿಗೆ
ಮತಿಯ ಕೊಡುವ ಮಹೇಶ ಗುರುಬಸವೇಶ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./97
ಚಿತ್ತಸದ್ಗತಿಯ ವಚನವ
ನೂರೊಂದು ಸಾರಿ ಪೇಳಿದ ವೀರ ವಿಜೇಯ
ಕರಿಬಸವರಾಜದೇವರು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./98
ಪಾದಪೂಜೆಯೆಂಬುವುದು ಅಗಮ್ಯ-ಅಗೋಚರ- ಅಪ್ರಮಾಣ !
ಶ್ರೀಗುರುಬಸವೇಶ್ವರದೇವರು ತಮ್ಮ ಅಂತರಂಗದಲ್ಲಿರ್ದ
ತೀರ್ಥಪ್ರಸಾದಮಂ ಗಣಸಮೂಹಕ್ಕೆ ಸಲ್ಲಲೆಂದು ನಿರ್ಮಿಸಿ
ಭಕ್ತಿ ತೊಟ್ಟು ಮೆರದರು.
ಇಂತಪ್ಪ ತೀರ್ಥಪ್ರಸಾದವ ಸೇವಿಸುವ ಕ್ರಮವೆಂತೆಂದಡೆ-
ಗ್ರಾಮದ ಮಠದಯ್ಯ, ಮಠಪತಿ, ಓದಿಸುವ ಜಂಗಮ,
ಹಾಡುವ ಜಂಗಮ, ಆಡುವ ಜಂಗಮ, ಬಾರಿಸುವ ಜಂಗಮ,
ಅಗಹೀನ, ಅನಾಚಾರಿ, ಕಂಬಿಕಾರ, ಓಲೆಕಾರನಾಗಿಹ,
ವಾದಿಸುವನು, ಗರ್ವಿಸುವವನು, ಅಹಂಕಾರಿ, ದಲ್ಲಾಲ,
ವೈದಿಕ, ಧನಪಾಲ, ಉದ್ಯೋಗಿ, ನಾನಾ ವಿಚಾರವ ಹೊತ್ತು,
ಕಾಣಿಕಿಗೆ ಒಡೆಯರಾಗಿ ಚೆಂಗಿತನದವರು, ಪರಿಹಾಸಕದವರು,
ಮರುಳು ಮಂಕುತನ ಮಾಡುವ[ವರು],
ಪಟ್ಟಾಧಿಪತಿಯೆಂದೆನಿಸಿ, ಚರಮೂರ್ತಿಯೆಂದೆನಿಸಿ, ವಿರಕ್ತರೆಂದೆನಿಸಿ,
ನಾಸಿ, ತೊಂಬಾಕ, ಭಂಗಿ, ಮಾಜೂಮ,
ಗಂಜಿ ಅರವಿ, ಅಪು ಹೊದಿಕೆ[ಯವರು],
ಹಲ್ಲುಮುರುಕ, ಉದ್ದೇಶಹೀನ, ಬೆಚ್ಚಿದವ, ಚುಚ್ಚಿದವ, ಕಚ್ಚಿದವ,
ಬೆಳ್ಳಿಬಂಗಾರ ಹಲ್ಲಣಿಸಿಕೊಂಡ ಭವಿಸಂಗ, ಕರ್ಣಹೀನ, ಮೂಕ, ನಪುಂಸಕ,
ವೀರಣ್ಣ, ಬಸವಣ್ಣ, ಸ್ಥಾವರದೈವಂಗಳಿಗೆ ತೀರ್ಥಕುಡುವ, ಉಡಕಿ, ಸೋಹಿ
ಬಯಲಾದ ಜಂಗಮಕ್ಕೆ ಕಟಕಟೆಯಿಟ್ಟು ಹಾವಿಗೆಯಿಟ್ಟು
ಧೂಳತಿಟ್ಟು ಗೊರವನಂತೆ ಪೂಜೆ ಮಾಡಿಸುವ-
ಇಂತಿಷ್ಟು ಅಜ್ಞಾನಿಜಂಗಮರಲ್ಲಿ ಪಾದೋದಕ ಪ್ರಸಾದವ ಕೊಳಲಾಗದು !
ಅಥವಾ ಕೊಂಡಡೆ ಕೊಟ್ಟಾತಂಗೆ ದೋಷ, ಕೊಂಡಾತಂಗೆ ಪಾಪ !
ತ್ರಿನೇತ್ರವಿರ್ದಡು ಕೊಳಲಾಗದು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ./99