Categories
ಶರಣರು / Sharanaru

ಕುಷ್ಟಗಿ ಕರಿಬಸವೇಶ್ವರ

ಅಂಕಿತ: ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಸಾಕ್ಷಿಯಾಗಿ

ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದ ಕಲ್ಮಠದ ಸ್ವಾಮಿಯಾಗಿದ್ದ ಈತ ನಿಡುಮಾಮಿಡಿ ಪೀಠ ಪರಂಪರೆಗೆ ಸೇರಿದವನು. ಪಟ್ಟು ಕಂಥೆಯ ಚೆನ್ನೆಬಸವೇಶ್ವರ ಈತನ ಗುರು; ಕಾಲ – ೧೭೦೦. ಅ೦ಕಿತ- ಅಖ೦ಡ ಪರಿಪೂರ್ಣ ಘನಲಿಂಗ ಗುರು ಚೆನ್ನಬಸವೇಶ್ವರ. ೯೯ ವಚನಗಳು ದೊರೆತಿವೆ. ಅವುಗಳಿಗೆ ‘ಚಿತ್ತ ಸದ್ಗತಿಯ ವಚನ’ ಎ೦ದು ಕರೆದಿದ್ದಾನೆ. ಗುರುಸ್ತುತಿ, ಅಷ್ಟಾವರಣದ ಮಹತಿಯನ್ನು, ಜೊತೆಗೆ ಸ್ಥಾವರಲಿಂಗ ಪೂಜಕರು, ತಿಥಿವಾರ ನೋಡುವವರು, ಡಾಂಭಿಕ ಭಕ್ತರು ಮತ್ತು ದುರಾಚಾರಿಗಳ ಟೀಕೆಯನ್ನು ಮಾಡಲಾಗಿದೆ. ಪ್ರಾದೇಶಿಕ ಭಾಷೆಯ ಬಳಕೆ, ಸಹಜವಾದ ದೃಷ್ಟಾಂತಗಳು, ಬಿಚ್ಚು ಮಾತಿನ ಬೈಗುಳಗಳು, ಸರಳವಾದ ನೀತಿಭೋಧೆ ಈ ವಚನಗಳ ವೈಶಿಷ್ಟ್ಯ ವೆನಿಸಿವೆ.