Categories
ಶರಣರು / Sharanaru

ಕೂಗಿನ ಮಾರಯ್ಯ

ಅಂಕಿತ: ಮಹಾಮಹಿಮಮಾರೇಶ್ವರ
ಕಾಯಕ: ಕೂಗು ಹಾಕುವುದು (ಕಲ್ಯಾಣದಲ್ಲಿ ಬಿಜ್ಜಳನ ಸೈನ್ಯಬಂದಾಗ ಉಚ್ಚ ಧ್ವನಿಯಲ್ಲಿ ಕೂಗುಹಾಕುತ್ತಿದ್ದನು)

ಎಚ್ಚರಿಸುವ ಕಾಯಕವನ್ನು “ಕೈಕೊಂಡಿದ್ದ ಈತನ ಕಾಲ – ೧೧೬೦. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಈತ ಶರಣರ ರಕ್ಷಣೆಯ ಹೊಣೆಯನ್ನು ಹೊತ್ತು ಬಿಜ್ಜಳನ ಸೈನ್ಯದ ಬರವಿನ ಸೂಚನೆಯನ್ನು ಎತ್ತರದ ಧ್ವನಿಯಲ್ಲಿ ಕೂಗಿ ಹೇಳಿ ಎಚ್ಚರಿಸುತ್ತದ್ದನಂತೆ. ಶರಣರು ಮತ್ತು ಬಿಜ್ಜಳನ ಸೈನ್ಯದ ಮಧ್ಯ ಮುರಗೋಡಿನ ಬಳಿ ನಡೆದ ಹೋರಾಟದಲ್ಲಿ ಮಡಿಯುತ್ತಾನೆ. ‘ಮಹಾಮಹಿಮ ಮಾರೇಶ್ವರ’ ಅಂಕಿತದಲ್ಲಿ ಈತ ರಚಿಸಿದ ೧೧ ವಚನಗಳು ದೊರೆತಿವೆ. ಷಶುಸ್ಥಲಗಳ ಸ್ವರೂಪ, ನಿಜಭಕ್ತನ ನಿಲುವು ಮುಂತಾದ ವಿಷಯಗಳ ಪ್ರತಿಪಾದನೆ ಅವುಗಳಲ್ಲಿದೆ.