Categories
ಶರಣರು / Sharanaru

ಗುಹೇಶ್ವರಯ್ಯ

ಅಂಕಿತ: ಗುಹೇಶ್ವರ ಪ್ರಿಯ ನಿರಾಳಲಿಂಗ

ಈತನ ಬಗೆಗೆ ಏನೊಂದೂ ವಿಷಯವೂ ತಿಳಿದಿಲ್ಲ. ಹಸ್ತ ಪ್ರತಿಗಳಲ್ಲಿ ಉಲ್ಲೇಖವಾದ ‘ಗುಹೇಶ್ವರಯ್ಯನ ವಚನಗಳು’ ಎಂಬ ಶೀರ್ಷಿಕೆ ಕಾರಣಾವಾಗಿ ‘ಗುಹೇಶ್ವರಯ್ಯ’ ಎಂಬುದು ಈ ವಚನಕಾರನ ಹೆಸರಾಗಿರಬೇಕೆಂದು ಊಹಿಸಲಾಗಿದೆ.

ಕಾಲ- ಸು ೧೬೦೦ ‘ಗುಹೇಶ್ವರ ಪ್ರಿಯ ನಿರಾಳಲಿಂಗ’ ಅಂಕಿತದಲ್ಲಿ ೪೩ ವಚನಗಳು ದೊರೆತಿವೆ. ಷಟ್ ಸ್ಥಲ ತತ್ವ ನಿರೂಪಣೆ ವ್ರತಾಚಾರಹೀನರ ಟೀಕೆ ಇವುಗಳ ಮುಖ್ಯ ಗುರಿಯಾಗಿದೆ. ಮಕರ ತರ್ಕ ಪ್ರಸ್ತಾವದ ವಚನ, ಜೋಗಿಯ ತರ್ಕದ ಪ್ರಸ್ತಾವದ ವಚನ, ಕವಿಗಳ ತರ್ಕದ ಪ್ರಸ್ತಾವದ ವಚನ – ಎಂದು ಮೊದಲಾದ ಸ್ಥಲಗಳ ಅಡಿಯಲ್ಲಿ ಅವುಗಳನ್ನು ಜೋಡಿಸಲಾಗಿದೆ.