Categories
ಶರಣರು / Sharanaru

ಘಟ್ಟಿವಾಳಯ್ಯ

ಅಂಕಿತ: ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು
ಕಾಯಕ: ಗಂಧ ತೇಯುವುದು/ನರ್ತನ ಕಾಯಕ

ಈತನ ಮೊದಲ ಹೆಸರು ಮುದ್ದಣ್ಣ. ಗಂಧ ತೇಯುವುದು ಈತನ ಕಾಯಕ. ವಿಷಮ ಸಂಸಾರದಿಂದ ಬೇಸತ್ತು ವಿರಕ್ತನಾದನು. ಈತನ ಘನವ್ಯಕ್ತಿತ್ವವನ್ನು ಕುರಿತು ಅನೇಕ ಶರಣರು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಶೂನ್ಯ ಸಂಪಾದನೆಯಲ್ಲಿ ಈತನಿಗಾಗಿ ಒಂದು ಅಧ್ಯಾಯವನ್ನು ಮೀಸಲಾಗಿಡಲಾಗಿದೆ.

‘ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು’ ಅಂಕಿತದಲ್ಲಿ ಈತನ ೧೫0 ವಚನಗಳು ದೊರಿತಿವೆ. ಅವುಗಳಲ್ಲಿ ತತ್ವನಿಷ್ಠೆ, ಸತ್ಯ ನಿಷ್ಠುರತೆ, ಸಮಕಾಲೀನ ಶರಣರ ಬಗೆಗಿನ ಗೌರವ, ಕೆಲವು ಚಾರಿತ್ರಿಕ ಸಂಗತಿಗಳು ಅಳವಟ್ಟಿವೆ.