Categories
ಶರಣರು / Sharanaru

ಜಕ್ಕಣ್ಣಯ್ಯ

ಅಂಕಿತ: ಝೇಂಕಾರ ನಿಜಲಿಂಗ ಪ್ರಭುವೆ

ಅಧಿಕ ಸಂಖ್ಯೆಯಲ್ಲಿ ವಚನಗಳನ್ನು ರಚಿಸಿದ್ದರೂ ಈತನ ಜೀವನದ ಬಗ್ಗೆ ಯಾವ ಸಂಗತಿಗಳೂ ದೊರಿತಿಲ್ಲ. ಕಾಲ ಸು.೧೮೦೦. ‘ಝೇಂಕಾರ ನಿಜಲಿಂಗ ಪ್ರಭುವೆ’ ಅಂಕಿತದಲ್ಲಿ ೭೭೮ ವಚನಗಳು ದೊರೆತಿವೆ. ಇವುಗಳನ್ನು ೧೮ ಸ್ಥಲಗಳ ಅಡಿಯಲ್ಲಿ ಸಂಕಲಿಸಲಾಗಿದ್ದು, ಈ ಕೃತಿಗೆ ‘ನಿರಾಳ ಮಂತ್ರಗೋಪ್ಯ’ ಎಂದು ಕರೆಯಲಾಗಿದೆ. ಯೋಗ ರಹಸ್ಯವನ್ನು ಬೆಡಗಿನ ನುಡಿಗಳಲ್ಲಿ ಹೇಳುವುದು ಈ ವಚನಗಳ ಉದ್ದೇಶವಾಗಿದೆ.

ಲಿಂಗಾಯತದ ತಾತ್ತ್ವಿಕ ಸಿದ್ಧಾಂತದ ಕಡೆಗೆ ಹೆಚ್ಚಿನ ಒಲವು. ವಚನಗಳಲ್ಲಿ ಬೆಡಗಿನ ಬಳಕೆ ಹೆಚ್ಚು. ಇವನ ವಚನಗಳಲ್ಲಿ ವಜೀರ, ತಳವಾರ, ಹವಾಲ್ದಾರ, ಚಾವಡಿ, ಠಾಣೆ ಮೊದಲಾದ ಶಬ್ದಗಳು ಕಂಡುಬಂದಿವೆ.