Categories
ಶರಣರು / Sharanaru

ದಸರಯ್ಯ

ಅಂಕಿತ: ದಸರೇಶ್ವರಲಿಂಗ

ಬಸವಣ್ಣನವರ ಸಮಕಾಲೀನನಾದ ಈತನ ಜನ್ಮಸ್ಥಳ ರಾಮಗೊಂಡೆ ಎಂಬ ಗ್ರಾಮ ವೀರಮ್ಮ ಇವನ ಪತ್ನಿ. ನಿತ್ಯವೂ ತೋಟಕ್ಕೆ ಹೋಗಿ ಹೂಗಳನ್ನು ಹರಿದು ತಂದು ಪೂಜೆ ಮಾಡುವುದು ಈತನ ಕಾಯಕ. ಒಮ್ಮೆ ಹೂ ಹರಿಯುತಿದ್ದಾಗ ‘ಅಯ್ಯೋ ನೊಂದೆನು’ ಎಂಬ ಧ್ವನಿ ಕೇಳಿಸಿತು. ಅಂದಿನಿಂದ ಆತ ಗಿಡದಿಂದ ಹೂಗಳನ್ನು ಹರಿಯದೆ, ಕೆಳಗೆ ಉದುರಿ ಬಿದ್ದುವನ್ನು ಮಾತ್ರ ಆಯ್ದು ತಂದು ಪೂಜಿಸತೊಡಗಿದ. ಇದರಿಂದ ಈತ ಉತ್ಕಟ ಅಹಿಂಸಾವಾದಿಯಾಗಿದ್ದನೆಂತು ವ್ಯಕ್ತವಾಗುತ್ತದೆ. ‘ದಸರೇಶ್ವರಲಿಂಗ’ ಅಂಕಿತದಲ್ಲಿ ಬರೆದ ಈತನ 10 ವಚನಗಳು ದೊರೆತ್ತಿದ್ದು, ಅವುಗಳಲ್ಲಿ ಅಹಿಂಸಾಭಾವ ಪ್ರಮುಖವಾಗಿ ವ್ಯಕ್ತವಾಗಿದೆ. ಭಾಷೆ ಸರಳ, ಭಾವ ಹಗುರ. ಇವು ಆತನ ವ್ಯಕ್ತಿತ್ವದ ಪ್ರತಿಬಿಂಬಗಳೆನಿಸಿವೆ.